ಪ್ರಕಟಣೆ ಆರ್ಡಿ ೪೨ ಎಲ್ಆರ್ಡಿ ೮೭ ಭಾಗ ೩
ಪ್ರಕಟಣೆ ಆರ್ಡಿ ೪೨ ಎಲ್ಆರ್ಡಿ ೮೭ ಭಾಗ ೩ ಕರ್ನಾಟಕ ಸರ್ಕಾರ ಆಗಸ್ಟ್ ೨ ೧೯೯೭ರಂದು ಬೆಂಗಳೂರಿನಲ್ಲಿ ಹೊರಡಿಸಿದ ಒಂದು ಪ್ರಕಟಣೆಯ ಭಾಗವಾಗಿತ್ತು ಮತ್ತು ಇದು ಕರ್ನಾಟಕದಲ್ಲಿ ಏಳು ಹೊಸ ಜಿಲ್ಲೆಗಳ ರಚನೆಯಾಗುವಲ್ಲಿ ಪರಿಣಮಿಸಿತು. ರಚನೆಯಾದ ಹೊಸ ಜಿಲ್ಲೆಗಳು
- ಚಾಮರಾಜನಗರ ಜಿಲ್ಲೆ ಮೈಸೂರು ಜಿಲ್ಲೆಯಿಂದ
- ದಾವಣಗೆರೆ ಜಿಲ್ಲೆ ಚಿತ್ರದುರ್ಗ, ಬಳ್ಳಾರಿ ಮತ್ತು ಶಿವಮೊಗ್ಗ ಜಿಲ್ಲೆಗಳಿಂದ
- ಬಾಗಲಕೋಟೆ ಜಿಲ್ಲೆ ಬಿಜಾಪುರ ಜಿಲ್ಲೆಯಿಂದ
- ಗದಗ ಜಿಲ್ಲೆ ಮತ್ತು ಹಾವೇರಿ ಜಿಲ್ಲೆಗಳು ಧಾರವಾಡ ಜಿಲ್ಲೆಯಿಂದ
- ಉಡುಪಿ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆಯಿಂದ
- ಕೊಪ್ಪಳ ಜಿಲ್ಲೆ ರಾಯಚೂರು ಜಿಲ್ಲೆಯಿಂದ
ಪ್ರಕಟಣೆಯಿಂದಾಗಿ ಕರ್ನಾಟಕವು ೨೭ ಅಧಿಕೃತ ಜಿಲ್ಲೆಗಳಲ್ಲಿ ರಾಜಕೀಯವಾಗಿ ವಿಭಜಿತವಾಗುವಲ್ಲಿ ಪರಿಣಮಿಸಿತು.