ಪ್ಯಾರಡೈಸ್ ಟೇನೇಜೆರ್
ಪ್ಯಾರಡೈಸ್ ಟೇನೇಜೆರ್ | |
---|---|
ಡೆನ್ವರ್ ಮೃಗಾಲಯದಲ್ಲಿ | |
Conservation status | |
Scientific classification | |
Unrecognized taxon (fix): | Tangara |
ಪ್ರಜಾತಿ: | T. chilensis
|
Binomial name | |
Tangara chilensis Vigors, 1832
|
ಪ್ಯಾರಡೈಸ್ ಟೇನೇಜೆರ್ ವಿವಿಧ ಬಣ್ಣಗಳನ್ನೊಳಗೊಂಡ ಮಧ್ಯಮ ಗಾತ್ರದ ಒಂದು ಹಾಡುವ ಪಕ್ಷಿ.
ವಿವರಣೆ
ಬದಲಾಯಿಸಿಇದರ ಉದ್ದವು 13.5 cm ಮತ್ತು 15 cm ಗಳ ನಡುವೆ ಇರುತ್ತದೆ. ಇದರ ತಲೆಯು ತಿಳಿ ಹಸಿರಾಗಿರುತ್ತದೆ, ಅಡಿ ಭಾಗ ಮತ್ತು ಬೆನ್ನಿನ ಭಾಗದ ಗರಿಗಳು ಆಕಾಶ ನೀಲಿಯಾಗಿರುತ್ತವೆ. ಉಪಪ್ರಬೇದವನ್ನು ಅವಲಂಭಿಸಿ, ಇದರ ಕಿರುಬೆನ್ನು ಹಳದಿ ಮತ್ತು ಕೆಂಪು ಅಥವಾ ಪೂರ್ತಿ ಕೆಂಪಾಗಿರುತ್ತದೆ. ಕೊಕ್ಕು ಕಪ್ಪಾಗಿರುತ್ತದೆ ಮತ್ತು ಇದರ ಕಾಲು ಬೂದು ಬಣ್ಣದಲ್ಲಿರುತ್ತದೆ.
ಆವಾಸ
ಬದಲಾಯಿಸಿಇದನ್ನು ತೇವವಿರು ಉಷ್ಣ ವಲಯ, ಉಪಉಷ್ಣ ವಲಯ, ಉತ್ತರ ಅಮೇರಿಕದ ಅಮೆಜಾನ್ ತೀರದ ಪಶ್ಚಿಮ ಮತ್ತು ಉತ್ತರ ಕಾಡುಗಲ್ಲಿ ನೋಡಬಹುದು. ಇದು ವೆನೆಜುವೆಲಾ, ಪೆರು, ಕೊಲೊಂಬಿಯ, ಎಕ್ವಡಾರ್, ಬೊಲಿವಿಯ, ಬ್ರೆಜಿಲ್ ಮತ್ತು ಗಾನದಲ್ಲಿ ಕಂಡುಬರುತ್ತದೆ. ಇದರ ವೈಜ್ಞಾನಿಕ ಹೆಸರು ಟೇನೇಜರ್ ಚಿಲಿಯೇನ್ಸ್ಸಿಸ್ ಎಂದಿದ್ದರೂ (ಹೆಸರಿನಲ್ಲಿ ಚಿಲಿ ಎಂಬ ಪದ ವಿದ್ದರೂ) ಇದು ಚಿಲಿ ದೇಶದಲ್ಲಿ ಕಂಡುಬರುವುದಿಲ್ಲ.
ಆಹಾರ ಮತ್ತು ವರ್ತನೆ
ಬದಲಾಯಿಸಿಇವು ೪ ರಿಂದ ೨೦ ಪಕ್ಷಿಗಳ ಗುಂಪಿನಲ್ಲಿ ಕಂಡುಬರುತ್ತವೆ. ಎತ್ತರದ ವೃಕ್ಷಗಳ ಕಮಾನುಗಳಲ್ಲಿ ಮತ್ತು ಮರದ ತುದಿಗಳಲ್ಲಿ ಕೆಲವೇ ಕಾಲ ಕೂತು, ಆಹಾರ ಸೇವಿಸಿ ಮತ್ತೆ ಸನಿಹದ ಇನ್ನೊಂದು ಮರದ ತುದಿಗೆ ಹಾರುತ್ತವೆ. ಹಗಲಲ್ಲಿ ಇವು ಒಂದೆಡೆ ಹೆಚ್ಚು ಸಮಯ ಕಳೆಯುವುದಿಲ್ಲ. ಕೆಲವೊಮ್ಮೆ ಇನ್ನಿತರ ಬಗೆಯ ಪಕ್ಷಿಗಳೊಂದಿಗೆ ಕಂಡು ಬರಬಹುದು. ಇವು ಹಣ್ಣುಗಳು ಮತ್ತು ಕೀಟಗಳನ್ನು ಆಹಾರವಾಗಿ ಸೇವಿಸುತ್ತವೆ .[೨]
ಪ್ಯಾರಡೈಸ್ ಟೇನೇಜೆರ್ ಈ ಪ್ರದೇಶದಲ್ಲಿ ಸಾಮಾನ್ಯವಾಗಿವೆ. IUCN ಕೆಂಪು ಪಟ್ಟಿಯಲ್ಲಿ ಇದನ್ನು ಅಳಿವಿನ ಅಂಚಿನಲ್ಲಿರುವ ಪ್ರಬೇಧವೆಂದು ಪರಿಗಣಿಸಿದೆ.
ಹೊರ ಕೊಂಡಿಗಳು
ಬದಲಾಯಿಸಿ- Paradise Tanager videos on the Internet Bird Collection
- BirdLife Species Factsheet Archived 2007-09-29 ವೇಬ್ಯಾಕ್ ಮೆಷಿನ್ ನಲ್ಲಿ.
- Photo-Medium Res; Article borderland-tours
- ಅಂಚೆ-ಚಿಟಿ (for ವೆನೆಜುವೆಲಾ, ಪೆರು, ಕೊಲೊಂಬಿಯ, ಎಕ್ವಡಾರ್, ಬೊಲಿವಿಯ, ಬ್ರೆಜಿಲ್ ಮತ್ತು ಗಾನ)
- Paradise Tanager photo gallery VIREO
ಮೂಲಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "Tangara chilensis". IUCN Red List of Threatened Species. Version 2013.2. International Union for Conservation of Nature. 2012. Retrieved 26 November 2013.
{{cite web}}
: Invalid|ref=harv
(help) - ↑ Hilty, Steven L. Birds of Venezuela: 774. Princeton University Press.