ಪೂಮಾ ಎಜಿ ರುಡಾಲ್ಫ್ ಡಸ್ಸ್ಲರ್ ಸ್ಪೋರ್ಟ್ , ಅಧಿಕೃತವಾಗಿ PUMA ಎಂದು ಖ್ಯಾತವಾಗಿದ್ದು, ಇದು ಜರ್ಮನಿಯ ಪ್ರಮುಖ ಬಹುರಾಷ್ಟ್ರೀಯ ಕಂಪನಿಯಾಗಿದ್ದು, ಈ ಕಂಪನಿಯು ಶ್ರೇಷ್ಠವಾದ ಅಥ್ಲೆಟಿಕ್ ಷೂಗಳು, ಜೀವನಶೈಲಿ ನಿರೂಪಿಸುವ ಪಾದರಕ್ಷೆಗಳು ಹಾಗೂ ಇತರ ಕ್ರೀಡಾ ಉಡುಗೆತೊಡುಗೆಗಳನ್ನು ತಯಾರಿಸುತ್ತದೆ. ೧೯೨೪ರಲ್ಲಿ ಗೆಬ್ರೂಡರ್ ಡಸ್ಸ್ಲರ್ ಸ್ಖಹ್ ಫಾಬ್ರಿಕ್ ಎಂಬ ಹೆಸರಿನಲ್ಲಿ ಅಡಾಲ್ಫ್ ಮತ್ತು ರುಡಾಲ್ಫ್ ಡಸ್ಸ್ಲರ್ ಈ ಸಂಸ್ಥೆಯನ್ನು ಸ್ಥಾಪಿಸಿದರು; ಸಹೋದರರಿಬ್ಬರ ಸಂಬಂಧವು ಕೆಡುತ್ತಾ ಸಾಗಿ, ಕಡೆಗೆ ಇಬ್ಬರೂ ೧೯೪೮ರಲ್ಲಿ ಬೇರೆಯಾಗಲು ನಿರ್ಧರಿಸಿ,ಎರಡು ಪ್ರತ್ಯೇಕ ಸಂಸ್ಥೆಗಳಾದ ಅಡೀಡಸ್ ಮತ್ತು ಪೂಮಾ ಗಳನ್ನು ಸ್ಥಾಪಿಸಿದರು. ಪೂಮಾದ ಮೂಲಕಚೇರಿಯು ಈಗ ಜರ್ಮನಿಯ ಹೆರ್ಝೋಗೆನಾರಾಷ್ ನಲ್ಲಿದೆ.

Puma AG Rudolf Dassler Sport
ಸಂಸ್ಥೆಯ ಪ್ರಕಾರAktiengesellschaft (FWB: PUM)
ಸ್ಥಾಪನೆ೧೯೨೪ as Gebrüder Dassler Schuhfabrik
(registered in ೧೯೪೮)[]
ಸಂಸ್ಥಾಪಕ(ರು)Rudolf Dassler
ಮುಖ್ಯ ಕಾರ್ಯಾಲಯHerzogenaurach, ಜರ್ಮನಿ
ವ್ಯಾಪ್ತಿ ಪ್ರದೇಶWorldwide
ಪ್ರಮುಖ ವ್ಯಕ್ತಿ(ಗಳು)Jochen Zeitz (CEO and Chairman of the management board)
Melody Harris-Jensbach (deputy CEO)
Klaus Bauer (COO)
François-Henri Pinault (Chairman of the supervisory board)
ಉದ್ಯಮClothing and consumer goods manufacture
ಉತ್ಪನ್ನFootwear, sportswear, sports goods, fashion accessories
ಆದಾಯ೨.೭೦೬ billion (೨೦೧೦)[]
ಆದಾಯ(ಕರ/ತೆರಿಗೆಗೆ ಮುನ್ನ)€೩೦೬.೮ million (೨೦೧೦)[]
ನಿವ್ವಳ ಆದಾಯ€೨೦೨.೨ million (೨೦೧೦)[]
ಒಟ್ಟು ಆಸ್ತಿ€೨.೩೬೭ billion (end ೨೦೧೦)[]
ಒಟ್ಟು ಪಾಲು ಬಂಡವಾಳ€೧.೩೮೬ billion (end ೨೦೧೦)[]
ಉದ್ಯೋಗಿಗಳು೯,೬೫೦ (end ೨೦೦೯)[]
ಪೋಷಕ ಸಂಸ್ಥೆPPR
ಜಾಲತಾಣwww.puma.com

ಈ ಕಂಪನಿಯು ತಾನು ತಯಾರಿಸುವ ಫುಟ್ ಬಾಲ್ ಷೂಗಳಿಗೆ ಪ್ರಖ್ಯಾತವಾಗಿದೆ ಮತ್ತು ಖ್ಯಾತ ಫುಟ್ ಬಾಲ್ ಆಟಗಾರರನ್ನು ಪ್ರಾಯೋಜಿಸಿದೆ; ಅವರ ಪೈಕಿ ಪೀಲೆ, ಯೂಸೆಬಿಯೋ, ಜೊಹಾನ್ ಕ್ರುಯಿಫ್, ಎಂಝೋ ಫ್ರ್ಯಾನ್ಸೆಸ್ಕೋಲಿ, ಡೀಗೋ ಮರಡೋನ, ಲೋಥರ್ ಮಥಾಯಿಸ್, ಕೆನ್ನಿ ಡಾಲ್ ಗ್ಲಿಷ್, ಡಿಡ್ಲರ್ ಡೆಸ್ ಚಾಂಪ್ಸ್ ಮತ್ತು ಗಿಯಾನ್ ಲೂಯಿಗಿ ಬಫನ್ ಪ್ರಮುಖರು. ಜಮೈಕಾದ ಟ್ರ್ಯಾಕ್ ಅಂಗಸಾಧನೆಗಾರ (ಅಥ್ಲೆಟ್) ಉಸೇಯ್ನ್ ಬೋಲ್ಟ್ ಸಹ ಈ ಕಂಪನಿ ಪ್ರಾಯೋಜಿಸುವ ಆಟಗಾರರಲ್ಲೊಬ್ಬರಾಗಿದ್ದಾರೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ ಈ ಕಂಪನಿಯು ಪ್ರಾಯಶಃ ೧೯೬೮ರಲ್ಲಿ ಪರಿಚಯಿಸಿದ ಸ್ಯೂಡ್ ಬ್ಯಾಸ್ಕೆಟ್ ಬಾಲ್ ನಿಂದ ಖ್ಯಾತಿ ಪಡೆಯಿತು; ನಂತರದ ದಿನಗಳಲ್ಲಿ ಆ ಚೆಂಡು ನ್ಯೂಯಾರ್ಕ್ ನಿಕ್ಸ್ ನ ಬ್ಯಾಸ್ಕೆಟ್ ಬಾಲ್ ತಾರೆ ವಾಲ್ಟ್ "ಕ್ಲೈಡ್ "ಫ್ರೇಝಿಯರ್ ರ ಹೆಸರನ್ನೇ ಪಡೆಯಿತು, ಹಾಗೂ ಜೋ ನಮಾಥ್ ರೊಡನೆ ಮಾಡಿಕೊಂಡ ಪ್ರಚಾರ ಸಹಭಾಗಿತ್ವಕ್ಕಾಗಿ ಈ ಕಂಪನಿಯು ಖ್ಯಾತಿ ಪಡೆದಿದೆ.

ತನ್ನ ಸಹೋದರರಿಂದ ಬೇರಾದ ರುಡಾಲ್ಫ್ ಮೊದಲಿಗೆ ತಮ್ಮ ನೂತನ ಸಂಸ್ಥೆಯನ್ನು ರುಡಾ ಎಂದು ನೋಂದಾಯಿಸಿದರು, ಆದರೆ ನಂತರ ಅದನ್ನು ಪೂಮಾ ಎಂದು ಬದಲಾಯಿಸಿದರು.[]: 31  ಪೂಮಾದ ಮೊಟ್ಟಮೊದಲ ಚಿಹ್ನೆಯು ಒಂದು ಚೌಕಾಕಾರ ಹಾಗೂ ಒಂದು ಪ್ರಾಣಿಯು D ಮೂಲಕ ಹಾರಿಹೋಗುವಂತಹುದು ಇದ್ದಿತು ಹಾಗೂ ಇದನ್ನು ಕಂಪನಿಯ ಹೆಸರಿನ ಜೊತೆಜೊತೆಯೇ ೧೯೪೮ರಲ್ಲಿ ನೋಂದಾಯಿಸಲಾಗಿತ್ತು. ಪೂಮಾದ ಷೂ ವಿನ್ಯಾಸಗಳು ವಿಶಿಷ್ಟವಾದ "ಫಾರ್ಮ್ ಸ್ಟ್ರೈಪ್" (ವಿನ್ಯಾಸಗೊಳಿಸಲ್ಪಟ್ಟ ಗೆರೆಗಳು)ಅನ್ನು ಹೊಂದಿರುತ್ತವೆ []: 33  ಮತ್ತು ವಸ್ತ್ರಗಳು ಹಾಗೂ ಇತರ ಉತ್ಪನ್ನಗಳ ಮೇಲೆ ಚಿಹ್ನೆಯು ಮುದ್ರಿತವಾಗಿರುತ್ತದೆ.

ಈ ಕಂಪನಿಯು ಸರಣಿ ಷೂಗಳನ್ನು ಮತ್ತು ಲಾಮೈನ್ ಕೌಯೇಟ್, ಯೇಮಿ ಗಾರ್ಬರ್ಸ್ ಮತ್ತು ಇತರರು ವಿನ್ಯಾಸಗೊಳಿಸಿದ ಕ್ರೀಡಾ ವಸ್ತ್ರಗಳನ್ನು ಸಹ ಒದಗಿಸುತ್ತದೆ. ೧೯೯೬ರಿಂದ ಪೂಮಾ ಯುನೈಟೆಡ್ ಸ್ಟೇಟ್ಸ್ ನಲ್ಲಿ ತನ್ನ ಚಟುವಟಿಕೆಗಳನ್ನು ತೀವ್ರಗೊಳಿಸಿದೆ. ಅಮೆರಿಕದ ಬ್ರ್ಯಾಂಡ್ ಕ್ರೀಡಾ ವಸ್ತ್ರಗಳನ್ನು ತಯಾರಿಸುವ ಲೋಗೋ ಅಥ್ಲೆಟಿಕ್ನ ೨೫% ಸ್ವಾಮ್ಯ ಪೂಮಾ ಕಂಪನಿಯದಾಗಿದೆ; ಲೋಗೋ ಅಥ್ಲೆಟಿಕ್ ಅಮೆರಿಕನ್ ವೃತ್ತಿಪರ ಬ್ಯಾಸ್ಕೆಟ್ ಬಾಲ್ ಮತ್ತು ಅಸೋಸಿಯೇಷನ್ ಫುಟ್ ಬಾಲ್ ಲೀಗ್ ಗಳಿಂದ ಈ ತಯಾರಿಕೆಗೆ ಪರವಾನಗಿ ಪಡೆದಿದೆ. ೨೦೦೭ರಿಂದ ಪೂಮಾ ಎಜಿ ಫ್ರೆಂಚ್ ಐಷಾರಾಮಿ ತಂಡವಾದ ಪಿಪಿಆರ್ ನ ಅಂಗವಾಗಿದೆ.

ಇತಿಹಾಸ

ಬದಲಾಯಿಸಿ

ಹಿನ್ನೆಲೆ

ಬದಲಾಯಿಸಿ

ಕ್ರಿಸ್ತೋಫ್ ವಾನ್ ವಿಲ್ ಹೆಲ್ಮ್ ಡಸ್ಸ್ಲರ್ ಒಂದು ಷೂ ಕಂಪನಿಯ ನೌಕರರಾಗಿದ್ದರು, ಅವರ ಪತ್ನಿ ನ್ಯೂರೆಂಬರ್ಗ್ ನಗರದಿಂದ20 km (12.4 mi) ದೂರವಿರುವ, ಬವಾರಿಯದ ಪಟ್ಟಣವಾದ ಹೆರ್ಝೋಗೆನಾರಾಷ್ ನಲ್ಲಿ ಒಂದು ಸಣ್ಣ ದೋಭಿಖಾನೆಯನ್ನು (ಲಾಂಡ್ರಿಯನ್ನು) ನಡೆಸುತ್ತಿದ್ದರು. ಅವರ ಮಗ ರುಡಾಲ್ಫ್ ಡಸ್ಸ್ಲರ್, ಶಾಲೆಯನ್ನು ಬಿಟ್ಟ ನಂತರ, ತನ್ನ ತಂದೆಯೊಡನೆ ಷೂ ಕಾರ್ಖಾನೆಯಲ್ಲಿ ದುಡಿಯತೊಡಗಿದರು, ಮತ್ತು ನಂತರ ಅವರನ್ನು ಮೊದಲನೆಯ ಮಹಾಯುದ್ಧದಲ್ಲಿ ಕಾಳಗ ಮಾಡಲು ಕರೆಯಲಾಯಿತು. ಅಲ್ಲಿಂದ ಹಿಂತಿರುಗಿದ ನಂತರ ರುಡಾಲ್ಫ್ ಒಂದು ಪೋರ್ಸ್ ಲೇಯ್ನ್ ಕಾರ್ಖಾನೆಯಲ್ಲಿ ವ್ಯವಸ್ಥಾಪಕ ಹುದ್ದೆ ಪಡೆದರು, ಹಾಗೂ ತದನಂತರ ನ್ಯೂರೆಂಬರ್ಗ್ ನ ಒಂದು ಸಗಟು ತೊಗಲು ವ್ಯಾಪಾರದಲ್ಲಿ ತೊಡಗಿದ್ದರು.

ಇತರರ ಕೈಕೆಳಗೆ, ಮನೆಯಿಂದ ದೂರದ ಸ್ಥಳಗಳಲ್ಲಿ, ಕೆಲಸ ಮಾಡಿ ಬೇಸತ್ತ ರುಡಾಲ್ಫ್ ಹೆರ್ಝೋಗೆನಾರಾಷ್ ಗೆ ೧೯೨೪ರಲ್ಲಿ ಹಿಂತಿರುಗಿ ಬಂದು, ತಮ್ಮ ತಮ್ಮನಾದ ಅಡಾಲ್ಫ್, ಅಡ್ಡಹೆಸರು "ಅಡೀ", ಯೊಡನೆ ತನ್ನದೇ ಆದ ಷೂ ಕಾರ್ಖಾನೆಯೊಂದನ್ನು ಆರಂಭಿಸಿದರು. ಈ ನೂತನ ಸಂಸ್ಥೆಯನ್ನು ಅವರು ಗೆಬ್ರೂಡರ್ ಡಸ್ಸ್ಲರ್ ಸ್ಖಹ್ ಫಾಬ್ರಿಕ್ (ಡಸ್ಸ್ಲರ್ ಸಹೋದರರ ಷೂ ಕಾರ್ಖಾನೆ ) ಎಂದು ಕರೆದರು. ಇಬ್ಬರೂ ಸೇರಿ ಈ ವ್ಯಾಪಾರವನ್ನು ತಮ್ಮ ತಾಯಿಯ ದೋಭಿಖಾನೆ(ಲಾಂಡ್ರಿ)ಯಲ್ಲಿ ಆರಂಭಿಸಿದರು, ಆದರೆ, ಆ ಕಾಲದಲ್ಲಿ ಆ ಪಟ್ಟಣದಲ್ಲಿ ವಿದ್ಯುತ್ ಸರಬರಾಜು ನಂಬಲರ್ಹವಲ್ಲವಾಗಿದ್ದುದರಿಂದ ಈ ಸಹೋದರರು ಕೆಲವೊಮ್ಮೆ ಒಂದು ಸೈಕಲ್ಲನ್ನು ಒಂದೆಡೆ ಸ್ಟ್ಯಾಂಡ್ ಹಾಕಿ ನಿಲ್ಲಿಸಿ, ಜೋರಾಗಿ ಪೆಡಲ್ ಒತ್ತಿ, ಪೆಡಲ್ ಒತ್ತಿದಾಗ ಹೊಮ್ಮುವ ಶಕ್ತಿಯನ್ನು ಬಳಸಿ ತಮ್ಮ ಸಾಧನಗಳನ್ನು ಚಾಲ್ತಿಯಲ್ಲಿಟ್ಟುಕೊಳ್ಳುತ್ತಿದ್ದರು.[]

೧೯೩೬ರ ಬೇಸಿಗೆ ಒಲಿಂಪಿಕ್ಸ್ ವೇಳೆಗೆ, ಅಡೀ ಡಸ್ಸ್ಲರ್ ಬವಾರಿಯಾದಿಂದ ಜಗತ್ತಿನ ಮೊದಮೊದಲ ಹೆದ್ದಾರಿಗಳಲ್ಲಿ ಒಂದರ ಗುಂಟ ಸಾಗಿ ಒಲಿಂಪಿಕ್ಸ್ ವಿಲೇಜ್ ಅನ್ನು ತಲುಪಿದರು;ಅವರು ಅಲ್ಲಿಗೆ ಒಂದು ಸೂಟ್ ಕೇಸ್ ಭರ್ತಿ ಸ್ಪೈಕ್(ಷೂ ಗಳಭಾಗಕ್ಕೆ ಹಾಕುವ ಮೊಳೆ)ಗಳನ್ನು ತೆಗೆದುಕೊಂಡುಹೋಗಿದ್ದರು ಹಾಗೂ ಯು.ಎಸ್.ನ ಓಟಗಾರ ಜೆಸ್ಸೆ ಓವನ್ಸ್ ರನ್ನು ಆ ಸ್ಪೈಕ್ ಗಳನ್ನು ಬಳಸಲು ಒತ್ತಾಯದಿಂದ ಒಪ್ಪಿಸಿದರು; ಇದು ಆಫ್ರಿಕನ್ ಅಮೆರಿಕನ್ ಒಬ್ಬರಿಗೆ ದೊರೆತ ಮೊಟ್ಟಮೊದಲ ಪ್ರಾಯೋಜಕತ್ವವಾಯಿತು. ಓವನ್ಸ್ ಆ ಒಲಿಂಪಿಕ್ಸ್ ನಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದರು, ಆ ಗೆಲುವು ಪ್ರಪಂಚದ ಖ್ಯಾತ ಕ್ರೀಡಾಪಟುಗಳ ಮೆಚ್ಚುಗೆಯನ್ನು ಖಾಯಮ್ಮಾಗಿ ಡಸ್ಸ್ಲರ್ ಷೂಗಳು ಪಡೆಯಲು ಸಹಕಾರಿಯಾಯಿತು. ಈ ಸಹೋದರರ ಟೇಬಲ್ ನ ಮೇಲೆ ಜಗತ್ತಿನ ಮೂಲೆ ಮೂಲೆಗಳಿಂದ ಪತ್ರಗಳು ಬರಲಾರಂಭಿಸಿದವು, ಇತರ ರಾಷ್ಟ್ರೀಯ ತಂಡಗಳ ತರಬೇತಿದಾರರು ಸಹ ಈ ಷೂಗಳ ಬಗ್ಗೆ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಲಾರಣಭಿಸಿದರು. ವ್ಯಾಪಾರ ಭರದಿಂದ ಸಾಗಿತು ಮತ್ತು ಡಸ್ಸ್ಲರ್ಸ್ ಎರಡನೆಯ ಮಹಾಯುದ್ಧದ ಮುಂಚೆಯವರೆಗೆ ಪ್ರತಿ ವರ್ಷ ೨೦೦,೦೦೦ ಜೊತೆ ಷೂಗಳನ್ನು ಮಾರುತ್ತಿದ್ದರು.[]

ಕಂಪನಿಯ ವಿಭಜನೆ ಮತ್ತು PUMA ದ ಸೃಷ್ಟಿ

ಬದಲಾಯಿಸಿ

ಸಹೋದರರಿಬ್ಬರೂ ನಾಝಿ ಪಕ್ಷವನ್ನು ಸೇರಿದರು. ಆದರೆ ರುಡಾಲ್ಫ್ ಪಾರ್ಟಿಗೆ ಅಡೀಗಿಂತಲೂ ಹೆಚ್ಚು ಸನಿಹದವರಾಗಿದ್ದರು. ಯುದ್ಧಕಾಲದಲ್ಲಿ ಈ ಸಹೋದರರ ನಡುವೆ ಇದ್ದ ಭಿನ್ನಾಭಿಪ್ರಾಯಗಳು ಇವರಿಬ್ಬರೂ ದೂರವಾಗುವ ಸನ್ನಿವೇಶವನ್ನು ತಂದೊಡ್ಡಿತು; ೧೯೪೩ರಲ್ಲಿ ಮಿತ್ರಸೇನೆಗಳು ಬಾಂಬ್ ಧಾಳಿಯಿಂದ ತಪ್ಪಿಸಿಕೊಳ್ಳಲು ಅಡೀ ಮತ್ತು ಅವರ ಹೆಂಡತಿ ಬಾಂಬ್ ನಿಂದ ತಪ್ಪಿಸಿಕೊಳ್ಳಲೆಂದೇ ಕಟ್ಟಿದ ಸುರಕ್ಷಾತಾಣವೊಂದರಲ್ಲಿ ನುಸುಳಿದರು,ಅದೇ ತಾಣದಲ್ಲಿ ರುಡಾಲ್ಫ್ ಮತ್ತು ಅವರ ಕುಟುಂಬವೂ ಆಗಲೇ ಸೇರಿತ್ತು."ಮಿತ್ರಸೇನೆಯ ವಿಮಾನಗಳನ್ನು ಕುರಿತೋ ಏನೋ ಅಡೀ "ಈ ಕೊಳಕು ಬೇವಾರಿಸ್ ಗಳು ಮತ್ತೆ ಬಂದರು" ಎಂದರು, ಆದರೆ ಅದನ್ನು ತಮ್ಮನ್ನು ಕುರಿತಾಗಿಯೇ ಅಡೀ ಹೇಳಿದುದು ಎಂದು ರುಡಾಲ್ಫ್ ಬಲವಾಗಿ ನಂಬಿಬಿಟ್ಟರು.[]: 18  ರುಡಾಲ್ಫ್ ರನ್ನು ನಂತರ ಅಮೆರಿಕದ ಸೈನಿಕರು ಬಂಧಿಸಿ ಅವರು ವಾಫೆನ್ SSನ ಸದಸ್ಯರೆಂದು ಆರೋಪ ಹೊರಿಸಿದಾಗ, ರುಡಾಲ್ಫ್ ಗೆ ತಮ್ಮ ಸಹೋದರನೇ ತಮ್ಮನ್ನು ಹಿಡಿದುಕೊಟ್ಟುಬಿಟ್ಟದ್ದೆಂಬ ಅಭಿಪ್ರಾಯ ಬಲವಾಗಿ ಬೇರೂರಿತು.[]

೧೯೪೮ರಲ್ಲಿ ಈ ಸಹೋದರರು ತಮ್ಮ ವ್ಯವಹಾರವನ್ನು ವಿಭಜಿಸಿದರು. ರುಡಾಲ್ಫ್ ಎತ್ತರದ ಬೆಟ್ಟವನ್ನು ತೊರೆದು ಔರಾಷ್ ನದಿಯ ಅತ್ತಣ ಬದಿಗೆ ಸಾಗಿ ತಮ್ಮ ಕಂಪನಿಯನ್ನು ಆರಂಭಿಸಿದರು. ಈ ವಿಭಜನೆಯ ನಂತರ ಅಡಾಲ್ಫ್ ತಮ್ಮದೇ ಆದ ಕ್ರೀಡಾಪೋಷಾಕುಗಳ ಕಂಪನಿಗೆ, ತಮ್ಮ ಅಡ್ಡಹೆಸರಾದ "ಅಡೀ" ಮತ್ತು ತಮ್ಮ ಕೊನೆಯ ಹೆಸರಿನ ಮೂರು ಅಕ್ಷರಗಳಾದ "ಡಸ್" ಗಳನ್ನು ಸೇರಿಸಿ "ಅಡೀಡಸ್ " ಎಂಬ ಹೆಸರನ್ನಿಟ್ಟು, ಆ ಸಂಸ್ಥೆಯನ್ನು ಆರಂಭಿಸಿದರು.

ರುಡಾಲ್ಫ್ ಒಂದು ನೂತನ ಸಂಸ್ಥೆಯನ್ನು ಆರಂಭಿಸಿ ಅದನ್ನು ರುಡಾ ಎಂದು ಕರೆದರು – "ರು" ರುಡಾಲ್ಫ್ ನಿಂದ ಮತ್ತು "ಡಾ" ಡಸ್ಸ್ಲರ್ ನಿಂದ ಪಡೆದ ಅಕ್ಷರಗಳಾಗಿದ್ದವು. ರುಡಾಲ್ಫ್ ರ ಕಂಪನಿಯು ನಂತರದ ದಿನಗಳಲ್ಲಿ ತನ್ನ ಹೆಸರನ್ನು ಪೂಮಾ ಸ್ಖಹ್ ಫಾಬ್ರಿಕ್ ರುಡಾಲ್ಫ್ ಡಸ್ಸ್ಲರ್/೦} ಎಂದು ೧೯೪೮ರಲ್ಲಿ ಬದಲಾಯಿಸಿಕೊಂಡಿತು.[]

ಈ ಸಹೋದರರ ಮೊದಲಿನ ಬೇರ್ಪಡೆಯು ಇಡೀ ಪಟ್ಟಣವನ್ನೇ ಎರಡು ವಿಭಾಗಗಳನ್ನಾಗಿಸಿತು. ೧೯೪೮ರಿಂದ ಈ ಪಟ್ಟಣವು ಒಂದು ಚಿಕ್ಕ-ಬರ್ಲಿನ್ ಅನ್ನು ಹೋಲುವಂತ್ತಿತ್ತು. ಬ್ರ್ಯಾಂಡ್ ನಿಷ್ಠೆಯು ಇಲ್ಲಿನ ನಿವಾಸಿಗಳಿಗೆ ಪರಮೋಚ್ಛ ವಿಷಯವಾಯಿತು; ಹಲವಾರು ಅಂಗಡಿಗಳು, ಬೇಕರಿಗಳು ಮತ್ತು ಬಾರ್ ಗಳು ಅನಧಿಕೃತವಾಗಿ ರುಡಾಲ್ಫ್ ರಾ ಪೂಮಾ, ಅಥವಾ ಅಡಾಲ್ಫ್ ರ ಅಡೀಡಸ್ ಗೆ ನಿಷ್ಠವಾಗಿರುವುವೆಂದು ಹೇಳಲಾಗುತ್ತಿತ್ತು. ಆ ಪಟ್ಟಣದ ಎರಡು ಫುಟ್ ಬಾಲ್ ಕ್ಲಬ್ ಗಳೂ ಈ ವಿಷಯದಲ್ಲಿ ಭಿನ್ನತೆಯನ್ನು ಹೊಂದಿದ್ದವು: ASV ಹೆರ್ಝೋಗೆನಾರಾಷ್ ಕ್ಲಬ್ ಮೂರು ಪಟ್ಟಿಗಳನ್ನು ಬೆಂಬಲಿಸಿತಾದರೆ ೧ FC ಹೆರ್ಝೋಗೆನಾರಾಷ್ ರುಡಾಲ್ಫ್ ರ ಪಾದತೊಡುಗೆಗಳನ್ನು ಬೆಂಬಲಿಸಿತು.[] ರುಡಾಲ್ಫ್ ರ ಮನೆಗೆ ಕೆಲಸಗಾರರು ಬಂದಾಗ ಅವರು ಬೇಕೆಂದೇ ಅಡೀಡಸ್ ಷೂಗಳನ್ನು ಧರಿಸಿಬರುತ್ತಿದ್ದರು; ರುಡಾಲ್ಫ್ ಅವರ ಷೂಗಳನ್ನು ನೋಡಿದಾಗ, ಅವರಿಗೆ ನೆಲಮಾಳಿಗೆಗೆ ಹೋಗಿ ಒಂದು ಜೊತೆ ಪೂಮಾ ಷೂಗಳನ್ನು ಬಿಟ್ಟಿಯಾಗಿ ತೆಗೆದುಕೊಂಡುಹೋಗಲು ಹೇಳುತ್ತಿದ್ದರು.[] ಇಬ್ಬರು ಸಹೋದರರೂ ಕಡೆಯವರೆಗೆ ಹೊಂದಿಕೊಳ್ಳಲೇ ಇಲ್ಲ ಮತ್ತು ಅವರಿಬ್ಬರನ್ನೂ ಒಂದೇ ಸ್ಮಶಾನದಲ್ಲಿಯೇ ಹೂತಿದ್ದರೂ, ಅವರ ನಡುವೆ ಎಷ್ಟು ಸಾಧ್ಯವೋ ಅಷ್ಟು ಅಂತರವನ್ನು ಬಿಟ್ಟು ಹೂಳಲಾಗಿದೆ.

 
ಕಂಪನಿಯ ವಿಶೇಷ "ಫಾರ್ಮ್ ಸ್ಟ್ರೈಪ್" ವಿನ್ಯಾಸವನ್ನು ಹೊಂದಿರುವ ಒಂದು ಜೊತೆ ಪೂಮಾ ಸ್ಪೋರ್ಟ್-ಲೈಫ್ ಸ್ಟೈಲ್ ಷೂಗಳು

ಮೊದಲ ವರ್ಷಗಳು ಮತ್ತು ಅಡೀಡಸ್ ನೊಡನೆ ಪ್ರತಿಸ್ಪರ್ಧೆ

ಬದಲಾಯಿಸಿ

ವಿಭಜನೆಯ ನಂತರ ಪೂಮಾ ಮತ್ತು ಅಡೀಡಸ್ ಪರಸ್ಪರ ತೀವ್ರವಾದ ಹಾಗೂ ಕಹಿಯಾದ ಶತ್ರುತ್ವವನ್ನೇ ಬೆಳೆಸಿಕೊಂಡರು. ಈ ಹಗೆತನವು ಹೆರ್ಝೋಗೆನಾರಾಷ್ ಅನ್ನು ಇಬ್ಭಾಗವಾಗಿಸಿತು, ಈ ಪಟ್ಟಣಕ್ಕೆ "ತಗ್ಗಿದ ಕತ್ತುಗಳ ಪಟ್ಟಣ" ಎಂಬ ಅಡ್ಡಹೆಸರು ಪ್ರಾಪ್ತವಾಯಿತು - ಅಪರಿಚಿತರು ಯಾವ ಕಂಪನಿಯ ಷೂಗಳನ್ನು ಧರಿಸಿದ್ದಾರೆಂದು ಜನರು ಕತ್ತು ಬಗ್ಗಿಸಿ ನೋಡುವುದನ್ನು ಪರಿಪಾಠವಾಗಿಸಿಕೊಂಡಿದ್ದರು.[೧೦]

೧೯೪೮ರಲ್ಲಿ ಎರಡನೆಯ ಮಹಾಯುದ್ಧದ ನಂತರದ ಮೊದಲ ಫುಟ್ ಬಾಲ್ ಪಂದ್ಯದಲ್ಲಿ ಪಶ್ಚಿಮ ಜರ್ಮನಿಯ ರಾಷ್ಟ್ರೀಯ ಫುಟ್ ಬಾಲ್ ತಂಡದ ಹಲವಾರು ಸದಸ್ಯರು ಪೂಮಾ ಬೂಟ್ಸ್ ತೊಟ್ಟಿದ್ದರು, ಯುದ್ಧದ ನಂತರದ ಜರ್ಮನಿಯ ಪರವಾಗಿ ಮೊಟ್ಟಮೊದಲ ಗೋಲ್ ಹೊಡೆದ ಹರ್ಬರ್ಟ್ ಬರ್ಡೆನ್ ಸ್ಕಿ ಸಹ ಪೂಮಾವನ್ನೇ ತೊಟ್ಟಿದ್ದರು. ನಾಲ್ಕು ವರ್ಷಗಳ ನಂತರ,೧೯೫೨ರ ಬೇಸಿಗೆ ಒಲಿಂಪಿಕ್ಸ್ ನಲ್ಲಿ, ೧೫೦೦ ಮೀಟರ್ ಓಟಗಾರರಾದ ಲಕ್ಸೆಂಬರ್ಗ್ ನ ಜೋಸಿ ಬಾರ್ತೆಲ್ಪೂಮಾದ ಮೊಟ್ಟಮೊದಲ ಒಲಿಂಪಿಕ್ ಚಿನ್ನವನ್ನು ಫಿನ್ ಲ್ಯಾಂಡ್ ನ ಹೆಲ್ಸಿಂಕಿಯಲ್ಲಿ ಗಳಿಸಿದರು.

೧೯೬೦ರ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಪೂಮಾ ಜರ್ಮನಿಯ ಓಟಗಾರ ಅರ್ಮಿನ್ ಹ್ಯಾರಿಗೆ ಪೂಮಾಗಳನ್ನು ೧೦೦ ಮೀಟರ್ ಓಟದ ಫೈನಲ್ ನಲ್ಲಿ ಬಳಸಲು ಹಣ ನೀಡಿತು. ಹ್ಯಾರಿ ಇದಕ್ಕೆ ಮುನ್ನ ಅಡೀಡಸ್ ಧರಿಸಿದ್ದರು ಮತ್ತು ಅಡಾಲ್ಫ್ ರನ್ನು ಆ ಷೂ ಧರಿಸುವುದಕ್ಕೆ ಹಣ ನೀಡಬೇಕೆಂದು ಕೇಳಿದರು, ಆದರೆ ಅಡೀಡಸ್ ಆ ಕೋರಿಕೆಯನ್ನು ನಿರಾಕರಿಸಿದರು. ಆ ಜರ್ಮನ್ ಪೂಮಾಗಳನ್ನು ಧರಿಸಿ ಓಡಿ ಚಿನ್ನದ ಪದಕವನ್ನು ಪಡೆದರು, ಆದರೆ ಪದಕವನ್ನು ಪಡೆಯುವ ಕಾರ್ಯಕ್ರಮದ ವೇಳೆಯಲ್ಲಿ ಅಡೀಡಸ್ ಧರಿಸಿದರು - ಇದನ್ನು ಕಂಡ ಡಸ್ಸ್ಲರ್ ಸಹೋದರರಿಬ್ಬರೂ ಚಕಿತರಾದರು. ಈ ರೀತಿ ಸಂಚು ಹೂಡಿ ಇಬ್ಬರಿಂದಲೂ ಹಣ ಪಡೆಯುಬಹುದೆಂದು ಹ್ಯಾರಿ ಆಸೆ ಇರಿಸಿಕೊಂಡಿದ್ದರು, ಆದರೆ ಅಡೀ ಎಷ್ಟು ಕ್ರುದ್ಧರಾದರೆಂದರೆ ಅವರು ಒಲಿಂಪಿಕ್ ಚಾಂಪಿಯನ್ ರನ್ನು ಉಚ್ಛಾಟಿಸಿದರು.[]

ಪೀಲೆ ಒಪ್ಪಂದ ಮತ್ತು ನಂತರದ ಘಟನೆಗಳು

ಬದಲಾಯಿಸಿ

೧೯೭೦ರ FIFA ವಿಶ್ವಕಪ್ನ ಕೆಲವು ತಿಂಗಳುಗಳ ಮುನ್ನ, ಆರ್ಮಿನ್ ಡಸ್ಸ್ಲರ್ ಮತ್ತು ಅವರ ಸಹೋದರ ಸಂಬಂಧಿ ಹೋರ್ಸ್ಟ್ ಡಸ್ಸ್ಲರ್, ಮಾಡಿಕೊಂಡ ಒಂದು ಒಪ್ಪಂದವನ್ನು "ಪೀಲೆ ಒಪ್ಪಂದ" ಎಂದು ಕರೆಯಲಾಯಿತು. ಈ ಒಪ್ಪಂದದ ಪ್ರಕಾರ ಬ್ರೆಝಿಲ್ ನ ಆಕ್ರಾಮಕ ಮಿಡ್ ಫೀಲ್ಡ್ ಆಟಗಾರರಾದ ಪೀಲೆ ಅಡೀಡಸ್ ಮತ್ತು ಪೂಮಾಗಳೆರಡರಿಂದಲೂ ಹೊರತಾಗಿರಬೇಕೆಂಬುದಾಗಿತ್ತು. ಆದರೆ, ಆರ್ಮಿನ್ ಈ ಸೂಪರ್ ಸ್ಟಾರ್ ಅನ್ನು ಪ್ರಾಯೋಜಿಸುವುದರಿಂದ ಪಡೆಯುವ ಆರ್ಥಿಕ ಮತ್ತು ಮಾರುಕಟ್ಟೆಯಲ್ಲಿ ಪ್ರಚಾರದಿಂದ ಪಡೆಯಬಹುದಾದ ಲಾಭಗಳ ಆಮಿಷವನ್ನು ತಡೆಯಲಾಗಲಿಲ್ಲ. ಪೂಮಾದ ಹ್ಯಾನ್ಸ್ ಹೆನಿಂಗ್ಸನ್ ಪೀಲೆಯನ್ನು ಜರ್ಮನಿಯ ಕ್ರೀಡಾ ಷೂ ಕಂಪನಿಯ ಸ್ವರೂಪದ ಬಗ್ಗೆ ಮತ್ತು ಷೂಗಳ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವನ್ನುಂಡುಮಾಡಲು ಕೋರಿ, ಆ ಕಂಪನಿಯ ಷೂಗಳನ್ನು ತೊಡಲು ಪೀಲೆಗೆ $೧೨೦,೦೦೦ ನೀಡಿದಾಗ ಪೀಲೆ ಫಾರ್ಮ್ ಸ್ಟ್ರೈಪ್ಸ್ ಧರಿಸಲು ಒಪ್ಪಿದರು.[] ೧೯೭೦ರ ವಿಶ್ವ ಕಪ್ ಅಂತಿಮಪಂದ್ಯದ ಮೊದಲ ಶಿಳ್ಳೆ ಹೊಡೆದ ಸಂದರ್ಭದಲ್ಲಿ, ಪೀಲೆ ತನ್ನ ಷೂ ಲೇಸ್ ಗಳನ್ನು ಕಟ್ಟಿಕೊಳ್ಳಲು ಕಡೆಯ ಕ್ಷಣದಲ್ಲಿ ರೆಫರಿಯನ್ನು ಬೇಡಿ, ಕೆಳಗೆ ಬಗ್ಗಿ ಲೇಸನ್ನು ಕಟ್ಟಿಕೊಳ್ಳತೊಡಗಿದಾಗ ಟೆಲಿವಿಷನ್ ವೀಕ್ಷಿಸುತ್ತಿದ್ದ ಮಿಲಿಯನ್ ಗಟ್ಟಲೆ ಪ್ರೇಕ್ಷಕರಿಗೆ ಪೂಮಾ ಷೂಗಳ ಹತ್ತಿರದ ನೋಟ ದೊರಕಿತು.[]: 82  ಇದರಿಂದ ಹೋರ್ಸ್ಟ್ ಡಸ್ಸ್ಲರ್ ಬಹಳ ಕ್ರುದ್ಧರಾದರು ಹಾಗೂ ನಂತರದ ದಿನಗಳ ಸೌಹಾರ್ದ ಒಪ್ಪಂದಗಳು ರದ್ದುಗೊಳಿಸಲ್ಪಟ್ಟವು.

ಎರಡು ವರ್ಷಗಳ ನಂತರ,೧೯೭೨ರ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಪೂಮಾ ಉಗಾಂಡಾದ ೪೦೦ ಮೀಟರ್ ಹರ್ಡಲ್ಸ್ ಚಾಂಪಿಯನ್ ಆದ ಜಾನ್-ಅಕೀ-ಬುವಾರಿಗೆ ಓಟದ ಷೂಗಳನ್ನು ಒದಗಿಸಿತು. ಅಕೀ-ಬುವಾರನ್ನು ಉಗಾಂಡಾದ ಮಿಲಿಟರಿ ಸರ್ಕಾರವು ದೇಶದಿಂದ ಉಚ್ಛಾಟಿಸಿದಮೇಲೆ, ಪೂಮಾ ಅಕೀ-ಬುವಾರಿಗೆ ಜರ್ಮನಿಯಲ್ಲಿ ನೌಕರಿ ಒದಗಿಸಿತು ಹಾಗೂ ಅವರು ಮತ್ತು ಅವರ ಕುಟುಂಬ ಜರ್ಮನ್ ಸಮಾಜಕ್ಕೆ ಹೊಂದಿಕೊಳ್ಳಲಾಗುವಂತೆ ಮಾಡಲು ಯತ್ನಿಸಿತು, ಆದರೆ ಕಡೆಗೆ ಅಕೀ-ಬುವಾ ಉರಾಂಡಾಕ್ಕೆ ಮರಳಿದರು.

ಮೇ ೧೯೮೯ರಲ್ಲಿ ರುಡಾಲ್ಫ್ ರ ಪುತ್ರರಾದ ಆರ್ಮಿನ್ ಮತ್ತು ಗೆರ್ಡ್ ಡಸ್ಸ್ಲರ್ ಪೂಮಾದಲ್ಲಿನ ತಮ್ಮ ೭೨ ಪ್ರತಿಶತ ಷೇರುಗಳನ್ನು ಸ್ವಿಸ್ ವ್ಯಾಪಾರಿ ಸಂಸ್ಥೆ ಕೋಸಾ ಲೈಬರ್ ಮಾನ್ ಎಸ್ಎ ಗೆ ಮಾರಲು ಅಂಗೀಕರಿಸಿದರು.[೧೧]

೧೯೮೬ರಲ್ಲಿ ಪೂಮಾ ಸಾರ್ವಜನಿಕ ಕಂಪನಿಯಾಯಿತು ಹಾಗೂ ತದನಂತರ ಬೋರ್ಸ್ ಮುಂಚೆನ್ ಮತ್ತು ಫ್ರಾಂಕ್ ಫರ್ಟ್ ಸ್ಟಾಕ್ ಎಕ್ಸ್ ಚೇಂಜ್ ಗಳ ಪಟ್ಟಿಯಲ್ಲಿ ನೋಂದಾಯಿಸಲ್ಪಟ್ಟಿತು.

 
ವ್ಯಾಪಾರಿ ಸಂಕೀರ್ಣದಲ್ಲಿರುವ ಒಂದು ಪೂಮಾ ಅಂಗಡಿ

ಪೂಮಾ ಎಜಿಯಲ್ಲಿ ಸುಮಾರು ೯,೨೦೪ ಕೆಲಸಗಾರರಿದ್ದಾರೆ ಮತ್ತು ಕಂಪನಿಯು ತನ್ನ ಉತ್ಪಾದನೆಗಳನ್ನು ೮೦ಕ್ಕೂ ಹೆಚ್ಚು ದೇಶಗಳಿಗೆ ವಿತರಿಸುತ್ತದೆ.[when?] ೨೦೦೩ರ ಆರ್ಥಿಕ-ವರ್ಷದಲ್ಲಿ ಈ ಕಂಪನಿಯ ಆದಾಯ, ೧.೨೭೪ ಬಿಲಿಯನ್ ಆಗಿದ್ದಿತು. ಪೂಮಾ ೨೦೦೨ರ ಅನಿಮೆ ಸರಣಿಯ ಆರ್ಥಿಕ ಪ್ರಾಯೋಜಕರಾಗಿದ್ದು Hungry Heart: Wild Striker , ಪೂಮಾ ಬ್ರ್ಯಾಂಡ್ ನ ಕ್ರೀಡಾ ವಸ್ತ್ರಗಳನ್ನು ಮತ್ತು ಜರ್ಸಿಗಳನ್ನು ಒದಗಿಸಿದರು.

೧೯೯೩ರಿಂದ ಈ ಕಂಪನಿಯನ್ನು ಇದರ ಸಿಇಓ ಮತ್ತು ಚೇರ್ಮನ್ ಆದ ಜೋಷೆನ್ ಝೀಟ್ಝ್ ನಡೆಸಿಕೊಂಡುಬರುತ್ತಿದ್ದಾರೆ. ಅವರ ಕಾರ್ಯಾವಧಿಯನ್ನು, ಅವಧಿ ಮುಗಿಯುವ ಮುನ್ನವೇ, ನಾಲ್ಕು ವರ್ಷಗಳ ಕಾಲ ವಿಸ್ತರಿಸಲಾಗಿದ್ದು ಅವರು ಅದೇ ಹುದ್ದೆಯಲ್ಲಿ ೨೦೧೨ರವರೆಗೆ ಮುಂದುವರಿಯುವುದೆಂದು ಅಕ್ಟೋಬರ್ ೨೦೦೭ರಲ್ಲಿ ತೀರ್ಮಾನ ಕೈಗೊಳ್ಳಲಾಯಿತು.[೧೨]

ಜಪಾನಿ ಫ್ಯಾಷನ್ ಗುರು ಮಿಹಾರಾ ಯಾಷುರಿಯೋ ಪೂಮಾದ ಜೊತೆ ಸೇರಿ ಶ್ರೇಷ್ಠಮಟ್ಟದ ಹಾಗೂ ಬೆಲೆಬಾಳುವ ಸ್ನೀಕರ್ (ಚರ್ಮದಿಂದ ತಯಾರಿಸಿದ್ದಲ್ಲದ ಷೂಗಳು)ಗಳನ್ನು ತಯಾರಿಸಿದರು.[೧೩]

ಪೂಮಾ ಉತ್ಸಾಹಿ ಚಾಲನಾ ಷೂಗಳು (ಡ್ರೈವಿಂಗ್ ಷೂಗಳು) ಮತ್ತು ರೇಸ್ ಸೂಟ್ ಗಳನ್ನು ಉತ್ಪಾದಿಸುವ ಪ್ರಮುಖ ಕಂಪನಿಯಾಗಿದೆ. ಫಾರ್ಮಲಾ ಒನ್ ಮತ್ತು ನಾಸ್ಕಾರ್ ಗೆ ವಿಶೇಷತಃ, ಪೂಮಾ ಪ್ರಮುಖ ಉತ್ಪಾದನಾ ಸಂಸ್ಥೆಯಾಗಿದೆ. ಪೂಮಾ ಕಂಪನಿಯವರು ೨೦೦೬ರ FIFA ವಿಶ್ವಕಪ್ ಚಾಂಪಿಯನ್ ರಾದ ಇಟಾಲಿಯನ್ ನ್ಯಾಷನಲ್ ಫುಟ್ ಬಾಲ್ ತಂಡದವರು ತೊಡುವಂತಹ ಪೋಷಾಕುಗಳನ್ನು ತಯಾರಿಸುವ ಮತ್ತು ಪ್ರಾಯೋಜಿಸುವ ಹಕ್ಕನ್ನು ಪಡೆಯಲು ಯಶಸ್ವಿಯಾದರು. ಫೆರಾರಿ ಮತ್ತು BMWಗಳೊಡನೆ ಈ ಕಂಪನಿಯು ಸಹಭಾಗಿತ್ವದಲ್ಲಿ ಪೂಮಾ-ಫೆರಾರಿ ಮತ್ತು ಪೂಮಾ-BMW ಷೂಗಳನ್ನು ತಯಾರಿಸಿದುದೂ ಅದರ ಯಶಸ್ಸಿಗೆ ಕಾರಣವಾಗಿದೆ. ೧೫ ಮಾರ್ಚ್ ೨೦೦೭ರಂದು ಪೂಮಾ ತನ್ನ ಮೊದಲ ನೂತನ ೨೦೦೭/೨೦೦೮ರ ಸರಣಿಯ ಸಮವಸ್ತ್ರಗಳನ್ನು ಒಂದು ಕ್ಲಬ್ ಗಾಗಿ ಉತ್ಪಾದಿಸಿತು ಹಾಗೂ ಬ್ರೆಝಿಲ್ ನ ಫುಟ್ ಬಾಲ್ ಕ್ಲಬ್ ಆದ ಗ್ರೆಮಿಯೋ ಲೇಸರ್ ಹೊಲಿಗೆಯ ತಂತ್ರಜ್ಞಾನವನ್ನು ಬಳಸಿದ ಮೊದಲ ಕ್ಲಬ್ ಆಗುತ್ತದೆ; ಇದು ೨೦೦೬ರ ವಿಶ್ವಕಪ್ ನಲ್ಲಿ ಇಟಲಿ ತೊಟ್ಟ ತೊಡುಗೆಗಳನ್ನು ಹೋಲುತ್ತದೆ. ಗ್ರೆಮಿಯೋ ಮತ್ತು ಬ್ರೆಝಿಲ್ ನ ಇತರ ಕ್ಲಬ್ ಗಳು ಈ ತಂತ್ರಜ್ಞಾನವನ್ನು ಬಳಸುವ ಮೊದಲ ಕ್ಲಬ್ ಗಳಾಗುತ್ತದೆ, ಏಕೆಂದರೆ ಈ ಕ್ಲಬ್ ಗಳ ಕ್ರೀಡಾಕಾಲವು ಯೂರೋಪಿಯನ್ ಕ್ಲಬ್ ಗಳ ಕ್ರೀಡಾಕಾಲಕ್ಕಿಂತ ಆರು ತಿಂಗಳು ಮುಂಚಿತವಾಗಿಯೇ ಆರಂಭವಾಗುತ್ತದೆ. ಪೂಮಾ ಬೇಸ್ ಬಾಲ್ ಬೆಣೆಗಳನ್ನೂ ಮಾಡುತ್ತದೆ ಮತ್ತು ಜಾನಿ ಡಮಾನ್ ಎಂಬ ಡೆಟ್ರಾಯ್ಟ್ ಟೈಗರ್ಸ್ ನ ಹೊರಾಂಗಣಕ್ಷೇತ್ರಪಾಲಕ ಅವರ ಬಾತ್ಮೀದಾರರಾಗಿದ್ದಾರೆ. ಅವರು ತಮ್ಮದೇ ಆದ "DFR ಮೆಟಲ್ಸ್" ಎಂಬ ಬೆಣೆಯನ್ನು ಹೊಂದಿದ್ದಾರೆ.

ದಂತಕಥೆಯಾದ KING

ಬದಲಾಯಿಸಿ

೨೦೦೮ರಲ್ಲಿ ಪೂಮಾ KING ನ ನಲವತ್ತನೆಯ ವಾರ್ಷಿಕೋತ್ಸವವನ್ನು ಒಂದು ವಿಶೇಷ ಆವೃತ್ತಿಯೊಂದಿಗೆ ಆಚರಿಸಿತು;[೧೪] ಆ ಆವೃತ್ತಿಯೇ KING XL (XL ಎಂದರೆ ೪೦, ರೋಮನ್ ಸಂಖ್ಯೆಗಳಲ್ಲಿ), ಇದು ಪೋರ್ಚುಗೀಸ್ ಫುಟ್ ಬಾಲ್ ಆಟಗಾರರಾದ ಯೂಸೆಬಿಯೋರ ಸ್ಮರಣೆಗಾಗಿ ತಂದ ಆವೃತ್ತಿಯಾಗಿತ್ತು; ಅವರು ವದಂತಿಯೇ ಆಗಿರುವ KING ಧರಿಸಿ ೧೯೬೮ರಲ್ಲಿ ೪೨ ಗೋಲ್ ಗಳನ್ನು ಹೊಡೆದು, ಯೂರೋಪ್ ನ ಅಗ್ರಗಣ್ಯ ಸ್ಕೋರರ್ ಗೆ ನೀಡುವ ಗೋಲ್ಡನ್ ಬೂಟ್ ಅವಾರ್ಡ್ ಅನ್ನು ತಮ್ಮದಾಗಿಸಿಕೊಂಡಿದ್ದರು. KING ಶ್ರೇಷ್ಠ ಆಟಗಾರರಾದ ಪೀಲೆ, ಮಾರಿಯೋ ಕೆಂಪೆಸ್, ರೂಡೀ ವಾಲರ್, ಲೋಥರ್ ಮಥಾಯಿಸ್, ಮಾಸ್ಸಿಮೋ ಒಡ್ಡೋ ಮತ್ತು ಡೀಗೋ ಮರಡೋನಾರ ನೆಚ್ಚಿನ ಷೂ ಆಗಿತ್ತು. ಪೂಮಾ ಕಿಂಗ್ ಸರಣಿಯ ಹೊಸ ಆವೃತ್ತಿಗಳನ್ನು ಬಿಡುಗಡೆ ಮಾಡುವುದನ್ನು ಮುಂದುವರಿಸಿದೆ ಮತ್ತು ೨೦೦೯ರಲ್ಲಿ ಇಟಲಿಯ ಸಾಕರ್ ಇತಿಹಾಸವನ್ನು ಆಚರಿಸುವ ಸಲುವಾಗಿ, ಹಾಗೂ ಮತ್ತೂ ನಿರ್ದಿಷ್ಟವಾಗಿ, ಎರಡು ವಿಶ್ವಕಪ್ ಗಳನ್ನು ಗೆಲ್ಲಲು ಕಾರಣರಾದ ತರಬೇತಿದಾರ ವಿಟ್ಟೋರಿಯೋ ಪೋಝೋರ ಯಶದ ಆಚರಣೆಗಾಗಿ, ಪೂಮಾ ಕಿಂಗ್ XL ಇಟಾಲಿಯಾವನ್ಉ ಬಿಡುಗಡೆ ಮಾಡಿತು[೧೫]

೨೦೧೦ರಲ್ಲಿ ಪೂಮಾ ಕಿಂಗ್ ಮತ್ತೊಬ್ಬ ಫುಟ್ ಬಾಲ್ ದಂತಕಥೆಯನ್ನು ಉದ್ಘೋಷಿಸಿತು. ಈ ಬಾರಿ ಡೀಗೋ ಮರಡೋನಾ ರಿಗೆ ಗೌರವ ಸಲ್ಲಿಸಿತು. . ಈ ಅರ್ಜೆಂಟೀನಾದ ದಂತಕಥೆಯ ೫೦ನೆಯ ಜನ್ಮದಿನವನ್ನು ಆಚರಿಸಲು ಪೂಮಾ ಕಿಂಗ್ ಡೀಗೋ ಫಿನಾಲೆ ಬೂಟ್ ಅನ್ನು ಪೂಮಾ ಬಿಡುಗಡೆ ಮಾಡಿತು. ಈ ಆವೃತ್ತಿಯನ್ನು ಅರ್ಜೆಂಟಿಆನಾ ರಾಷ್ಟ್ರೀಯ ಫುಟ್ ಬಾಲ್ ತಂಡದ ವರ್ಣಗಳಾದ ಲಾ ಆಲ್ಬಿಸೆಲೆಸ್ಟೆಯಲ್ಲಿ ಸೃಷ್ಟಿಸಲಾಯಿತು.

ಪಿಪಿಆರ್ನ ಕೈಗೆ ಹಸ್ತಾಂತರ

ಬದಲಾಯಿಸಿ

ಫೆಬ್ರವರಿ ೨೦೦೭ರಲ್ಲಿ ಪೂಮಾ ೨೦೦೬ರ ಕಡೆಯ ಮೂರು ತಿಂಗಳಲ್ಲಿ ತನ್ನ ಲಾಭಾಂಶವು ೨೬% ನಷ್ಟು ತಗ್ಗಿ €೩೨.೮ ಮಿಲಿಯನ್ ($೪೩ ಮಿಲಿಯನ್; £೨೨ ಮಿಲಿಯನ್)ಗೆ ಇಳಿದಿದೆಯೆಂದು ಘೋಷಿಸಿತು. ಈ ಲಾಭಾಂಶವು ತಗ್ಗಲು ಬಹುತೇಕ ಕಂಪನಿಯ ವಿಸ್ತರಣೆಗಾಗಿ ಮಾಡಿದ ದುಬಾರಿ ವೆಚ್ಚವೇ ಕಾರಣವಾಗಿತ್ತು; ವಾಸ್ತವವಾಗಿ ಮಾರಾಟವು ಮೂರನೆಯ ಒಂದು ಭಾಗಕ್ಕಿಂತಲೂ ಹೆಚ್ಚಿ €೪೮೦.೬ ಮಿಲಿಯನ್ ಆಗಿತ್ತು.[೧೬]

ಏಪ್ರಿಲ್ ೨೦೦೭ರ ಆದಿಯಲ್ಲಿ ಪೂಮಾದ ಷೇರುಗಳು ಷೇರಿಗೆ €೨೯.೨೫ಗೆ ಏರಿದವು; ಅಂದರೆ ಸುಮಾರು ೧೦.೨%ರಷ್ಟು ಏರಿಕೆ ಹಾಗೂ ಪ್ರತಿ ಷೇರಿನ ಮೌಲ್ಯ €೩೧೫.೨೪ ತಲುಪಿತು.[೧೭] April ೧೦, ೨೦೦೭ರಂದು ಫ್ರೆಂಚ್ ಚಿಲ್ಲರೆ ಮಾರಾಟಗಾರ ಸಂಸ್ಥೆ ಮತ್ತು ಗಕ್ಸಿ ಬ್ರ್ಯಾಂಡ್ ನ ಮಾಲಿಕತ್ವ ಹೊಂದಿರುವ Pಪಿನಾಲ್ಟ್-ಪ್ರಿಂಟೆಂಪ್ಸ್-ರಿಡೌಟ್ (ಪಿಪಿಆರ್) ಪೂಮಾದಲ್ಲಿ ತನ್ನದು ೨೭% ಭಾಗದಷ್ಟು ಷೇರುಗಳಿದೆಯೆಂದು ಘೋಷಿಸಿ ಸಂಪೂರ್ಣ ಹಸ್ತಾಂತರಕ್ಕೆ ನಾಂದಿ ಹಾಡಿತು. ಆ ವ್ಯವಹಾರದ ರೀತ್ಯಾ ಪೂಮಾದ ಮೌಲ್ಯ €೫.೩ ಬಿಲಿಯನ್. ಪಿಪಿಆರ್ ತಾನು ಹಸ್ತಾಂತರಕ್ಕೆ ಬೇಕಾದ ಚಿಕ್ಕ ಭಾಗಾಂಶದ ಷೇರುಗಳನ್ನು ತನ್ನದಾಗಿಸಿಕೊಂಡ ಬಳಿಕ, "ಸ್ನೇಹಯುತ"ವಾಗಿ ಪ್ರತಿ ಷೇರಿಗೆ €೩೩೦ ಮೌಲ್ಯವರುವ ಪೂಮಾವನ್ನು ತನ್ನ ಕೈಗೆ ತೆಗೆದುಕೊಳ್ಳುವುದಾಗಿ ಹೇಳಿತು. ಪೂಮಾದ ಮಂಡಳಿಯು ಇದನ್ನು ಸ್ವಾಗತಿಸುತ್ತಾ, ಅದು ಸೂಕ್ತವೂ, ಕಂಪನಿಯ ಹಿತಾಸಕ್ತಿಗಳಿಂದ ಕೂಡಿರುವುದಾಗಿಯೂ ಇದೆಯೆಂದು ಸಾರಿತು.[೧೮] ೧೭ ಜುಲೈ ೨೦೦೭ರಂದು ಪಿಪಿಆರ್ ಪೂಮಾದ ೬೨.೧ % ಷೇರುಗಳನ್ನು ಹೊಂದಿತ್ತು.

ಪಿಪಿಆರ್ ಪೂಮಾದ ಪ್ರಮುಖಾಂಶ ಷೇರುಗಳನ್ನು ಹೊಂದಿದ್ದರೂ, ಪೂಮಾ ಒಂದು ಸ್ವತಂತ್ರ ಕಂಪನಿಯಾಗಿಯೇ ಇದೆ.

ನ್ಯಾಯವಾದ ವ್ಯಾಪಾರ ಮತ್ತು ನೌಕರರ ಹಕ್ಕುಗಳನ್ನು ಪ್ರತಿಪಾದಿಸುವ ಸಂಸ್ಥೆಗಳು ಪೂಮಾ ತನ್ನ ಅಭಿವೃದ್ಧಿಶೀಲ ಜಗದ ಕಾರ್ಖಾನೆಗಳಲ್ಲಿ ನೌಕರಿಯ ಸಂಬಂಧವಾಗಿ ಹೊಂದಿರುವ ಆಚರಣೆಗಳನ್ನು ಟೀಕಿಸುತ್ತವೆ - ಅದರಲ್ಲೂ ಪ್ರಮುಖವಾರಿ ಚೀನಾ, ಟರ್ಕಿ, ಎಲ್ ಸಾಲ್ವೆಡಾರ್, ಮತ್ತು ಇಂಡೋನೇಷಿಯಾದ ನೌಕರ/ರಿಗೆ ಸಂಬಂಧಿಸಿದ ವಿಷಯವಾಗಿ.[೧೯][೨೦][೨೧]

ಕಾಲಾನುಕ್ರಮಣಿಕೆ

ಬದಲಾಯಿಸಿ
  • ೧೯೨೦: ರುಡಾಲ್ಫ್ ಡಸ್ಸ್ಲರ್ ಮತ್ತು ಅವರ ಸಹೋದರ ಅಡಾಲ್ಫ್ ಕ್ರೀಡಾ ಷೂಗಳನ್ನು ತಯಾರಿಸಲು ಆರಂಭಿಸಿದರು.
  • ೧೯೨೪: ಜರ್ಮನಿಯ ಹೆರ್ಝೋಗೆನಾರಾಷ್ ನಲ್ಲಿ ಗೆಬ್ರೂಡರ್ ಡಸ್ಸ್ಲರ್ ಸ್ಖಹ್ ಫಾಬ್ರಿಕ್ ನ ಬುನಾದಿ.
  • ೧೯೪೮: ಪೂಮಾ ಸ್ಖಹ್ ಫಾಬ್ರಿಕ್ ರುಡಾಲ್ಫ್ ಡಸ್ಸ್ಲರ್ ತಳಹದಿ (ಅಕ್ಟೋಬರ್ ೧), ATOM , ಪೂಮಾದ ಮೊದಲ ಪುಟ್ ಬಾಲ್ ಷೂವನ್ನು ಪರಿಚಯಿಸುವಿಕೆ.
  • ೧೯೪೯: ತೆಗೆದುಹಾಕಬಹುದಾದ ಸ್ಟಡ್ ಗಳುಳ್ಳ ಫುಟ್ ಬಾಲ್ ಷೂಗಳ ಆಲೋಚನೆಯಲ್ಲಿ ರುಡಾಲ್ಫ್ ಡಸ್ಸ್ಲರ್. ಅವರು ಆ ಷೂಗಳ ಅಭಿವೃದ್ಧಿ ಮತ್ತು ತಯಾರಿಕೆಯಲ್ಲಿ ತೊಡಗುತ್ತಾರೆ.

ಸೆಪ್ಪ್ ಹರ್ಬರ್ಗರ್ ರಂತಹ ಹಲವಾರು ಪರಿಣಿತ ಫುಟ್ ಬಾಲ್ ಪಟುಗಳು ಇದರಲ್ಲಿ ಭಾಗವಹಿಸಿದರು.

  • ೧೯೫೨: ಸೂಪರ್ ಆಟಮ್ ಪರಿಚಯಿಸುವಿಕೆ.
  • ೧೯೫೩: ATOMನ ಮುಂದಿನ ಪೀಳಿಗೆ: ದ ಬ್ರೆಸಿಲ್ನ ಅಭಿವೃದ್ಧಿಗೊಳಿಸುವಿಕೆ.
  • ೧೯೫೮:ಸ್ವೀಡನ್ ನಲ್ಲಿ ನಡೆದ FIFA ವಿಶ್ವ ಕಪ್ ನಲ್ಲಿ ಪೂಮಾದ ಲಾಂಛನವೇ ಆದಂತಹ "ಫಾರ್ಮ್ ಸ್ಟ್ರೈಪ್" ಪರಿಚಯಿಸುವಿಕೆ
  • ೧೯೫೯: ಕಂಪನಿಯು ನಿಯಮಿತ ಸಹಭಾಗಿತ್ವದ ರೀತಿಗೆ ಬದಲಾಯಿತು ಮತ್ತು ಪೂಮಾ-ಸ್ಪೋರ್ಟ್ ಸ್ಖಹ್ ಫಾಬ್ರಿಕೆನ್ ರುಡಾಲ್ಫ್ ಡಸ್ಸ್ಲರ್ KG ಎಂದು ಹೆಸರಿಸಲಾಯಿತು.
  • ೧೯೬೦: ತಾಂತ್ರಿಕವಾಗಿ ಮುಂದುವರಿದ ಶಾಖ ಬಳಕೆಯಿಂದ ರಬ್ಬರನ್ನು ಬಳಸಿಕೊಳ್ಳುವ(ವಲ್ಕನೈಸ್ ಮಾಡಿ ಕಾರ್ಯಗತಗೊಳಿಸುವ) ಉತ್ಪಾದನಾ ಕೌಶಲದ ಪರಿಚಯ.
  • ೧೯೬೬: WEMBLEY ಮಾರುಕಟ್ಟೆಗೆ ಬಿಡುಗಡೆ, ಇದು ಪೂಮಾ ಕಿಂಗ್ ನ ಮುಂಚಿನ ವಿನ್ಯಾಸ.
  • ೧೯೬೮: ದಂತಕಥೆಯೇ ಆಗಿರುವ KING ಮಾರುಕಟ್ಟೆಗೆ ಬಿಡುಗಡೆ. ಪೂಮಾ ವೆಲ್ಕ್ರೋ ಬಂಧಕಗಳನ್ನು ಬಳಸಿ ತೊಡುವಂತಹ ಕ್ರೀಡಾ ಷೂಗಳನ್ನು ಉತ್ಪಾದಿಸಿದ ಮೊದಲ ಕಂಪನಿಯಾಗಿದೆ.
  • ೧೯೭೪: ರುಡಾಲ್ಫ್ ಡಸ್ಸ್ಲರ್ ಮರಣ. ಅವರ ಪುತ್ರರಾದ ಆರ್ಮಿನ್ ಮತ್ತು ಗೆರ್ಡ್ ಕಂಪನಿಯ ಚುಕ್ಕಾಣಿಯನ್ನು ತಮ್ಮ ಕೈಗೆತ್ತಿಕೊಂಡರು.
  • ೧೯೭೬: ಒಂದು ಕ್ರಾಂತಿಯನ್ನೇ ಉಂಡುಮಾಡಿದಂತಹ S.P.A.-ತಂತ್ರಜ್ಞಾನದ ಪರಿಚಯಿಸುವಿಕೆ.
  • ೧೯೮೬: ಸ್ಟಾಕ್ ಕಾರ್ಪೊರೇಷನ್ ಆಗಿ ಮಾರ್ಪಾಡು.
  • ೧೯೮೯: TRINOMIC ಕ್ರೀಡಾ ಷೂಗಳ ಬಿಡುಗಡೆ.
  • ೧೯೯೦: INSPECTOR ಎಂಬ ಚಿಕ್ಕ ಮಕ್ಕಳ, ಷೂಗಳಲ್ಲಿ ಬೆಳವಣಿಗೆಯನ್ನು ನಿಯಂತ್ರಿಸುವ, ವ್ಯವಸ್ಥೆಯ ಅಳವಡಿಕೆ.
  • ೧೯೯೧: DISC SYSTEM ಕ್ರೀಡಾ ಷೂ ಬಿಡುಗಡೆ.
  • ೧೯೯೨: DM ೨೦ ಮಿಲಿಯನ್ ಗಳಷ್ಟು ಬಂಡವಾಳದ ಹೆಚ್ಚಳ, ಷೇರು ಬಂಡವಾಳ DM ೭೦ ಮಿಲಿಯನ್ ತಲುಪಿತು.
  • ೧೯೯೩: ಜೋಷೆನ್ ಝೀಟ್ಝ್ ಚೇರ್ಮನ್ ಮತ್ತು ಸಿಇಓ ಆಗಿ ನೇಮಕ, ಪ್ರೋವೆಂಟಸ್/ಅರಿಟ್ಮಾಸ್ ಬಿ.ವಿ. ಪ್ರಮುಖ ಷೇರುಗಳುಳ್ಳ ಸಂಘವಾಯಿತು.
  • ೧೯೯೪:೧೯೮೬ರಲ್ಲಿ ಕಂಪನಿಯ IPO ನೋಂದಾಯಿತವಾದಾಗಿನಿಂದಲೂ ಕಂಪನಿ ಕಂಡ ಮೊದಲ ಲಾಭ.
  • ೧೯೯೬: ಪೂಮಾ ಜರ್ಮನಿಯ M-DAX ಸೂಚ್ಯಂಕದಲ್ಲಿ ದಾಖಲಿಸಲಾಯಿತು; CELL ತಂತ್ರಜ್ಞಾನದ ಅಳವಡಿಕೆ, ಮೊದಲ ಫೋಮ್ ರಹಿತ ಮಧ್ಯದ ಅಟ್ಟೆ.
  • ೧೯೯೭: CELLERATOR ಬಿಡುಗಡೆ.
  • ೧೯೯೮: ಕ್ರೀಡಾ ಮತ್ತು ಫ್ಯಾಷನ್ ಎರಡನ್ನೂ ಪೂಮಾ ಒಂದುಗೂಡಿಸಿತು. ಕಂಪನಿಯು ವಿನ್ಯಾಸಕಾರರಾದ ಜಿಲ್ ಸ್ಯಾಂಡರ್ ರೊಡನೆ ಸಹಕರಿಸಲಾರಂಭಿಸಿತು.
  • ೧೯೯೯:ಪೂಮಾ ಯು.ಎಸ್. ನ್ಯಾಷನಲ್ ಫುಟ್ ಬಾಲ್ ಲೀಗ್ (NFL)ನ ಅಧಿಕೃತ ಕ್ರೀಡಾಂಗಣಕ್ಕೇ ಸರಬರಾಜು ಮಾಡುವ ಸಂಸ್ಥೆಯಾಯಿತು.
  • ೨೦೦೦: ಪೋರ್ಷ್ ಮತ್ತು ಸ್ಪಾರ್ಕೋದೊಡನೆ ಸಹಭಾಗಿತ್ವದಲ್ಲಿ ಅಗ್ನಿನಿರೋಧಕ ಪಾಡತೊಡುಗೆಗಳ ಉತ್ಪಾದನೆ.
  • ೨೦೦೧: ಸ್ಕ್ಯಾಂಡಿನೇವಿಯಾದ ಟ್ರೆಟಾರ್ನ್ ತಂಡ ಈ ಕಂಪನಿಯ ತೆಕ್ಕೆಗೆ.
  • ೨೦೦೨: SHUDOH ಬಿಡುಗಡೆ.
  • ೨೦೦೩:ಪ್ರಮುಖ ಷೇರು ಹೂಡಿಕೆದಾರರಾದ ಮಾನಾರ್ಕಿ/ರಿಜೆನ್ಸಿ ತಮ್ಮ ಷೇರುಗಳನ್ನು ವಿಸ್ತಾರವಾದ ತಳಹದಿಯ ಸಾಂಫಿಕ ಹೂಡಿಕೆದಾರರಿಗೆ ಮಾರಿದರು.
  • ೨೦೦೪:ಫಿಲಿಪೆ ಸ್ಟಾರ್ಕ್ಎಂಬ ವಿಶ್ವವಿಖ್ಯಾರ ವಿನ್ಯಾಸಕಾರರೊಡನೆ ಸಹಕಾರಿ ಸಹಭಾಗಿತ್ವ.
  • ೨೦೦೫: ಮೇಫೇಯ್ರ್ ವೆರ್ಮೋಜೆನ್ ವೆರ್ವಾಲ್ಟಂಗ್ಸ್ ಜೆಸೆಲ್ಸ್ ಷಾಫ್ಟ್ ಎಂಬಿಹೆಚ್ ಒಟ್ಟಾರೆ ೧೬.೯೧% ಷೇರುಗಳನ್ನು ತನ್ನದಾಗಿಸಿಕೊಂಡಿತು.
  • ೨೦೦೬: ಕಂಪನಿಯು ಡೌ ಜೋನ್ಸ್ ತಾಳಿಕೆಯ ಸೂಚ್ಯಂಕದಲ್ಲಿ ದಾಖಲಿಸಲ್ಪಟ್ಟಿತು; S.A.F.E. ಯೋಜನೆಯ ಆರಂಭ, ಸಾಮಾಜಿಕ ಮತ್ತು ಪರಿಸರದ ಮಟ್ಟವನ್ನು ನಿರಂತರವಾಗಿ ವೃದ್ಧಿಗೊಳಿಸಲು ಒಂದು ನಿರ್ದಿಷ್ಟವಾದ ಸಾಧನದ ರಚನೆ. ಅಲೆಕ್ಸಾಂಡರ್ ಮೆಕ್ವೀನ್ ರೊಡಗೂಡಿ ಷೂ ಸಂಗ್ರಹ. ಪೂಮಾ ಪ್ರಾಯೋಜಿತ ಇಟಲಿಯು ವಿಶ್ವಕಪ್ ಗೆದ್ದಿತು; ಸಾಕರ್ (ಫುಟ್ ಬಾಲ್)ತಂಡದ ಹಲವಾರು ಆಟಗಾರರು ಪೂಮಾ ಬೆಣೆಗಳನ್ನು ಧರಿಸಿ ಪಂದ್ಯದಲ್ಲಿ ಭಾಗವಹಿಸಿದರು.
  • ೨೦೦೭: ಪಿನಾಲ್ಟ್-ಪ್ರಿಂಟೆಂಪ್ಸ್ ರಿಡೌಟ್ ನಿಂದ ಐಚ್ಛಿಕ ಸಾರ್ವಜನಿಕ ಅಧಿಕಾರಸ್ವೀಕಾರ; ಜೋಷೆನ್ ಝೀಟ್ಝ್ ರೊಡನೆಯ ಒಪ್ಪಂದ ಮತ್ತೆ ಐದು ವರ್ಷಗಳ ಕಾಲ ವಿಸ್ತರಿತ.
  • ೨೦೦೮: ಮೆಲೋಡಿ ಹ್ಯಾರಿಸ್-ಜೆನ್ಸ್ ಬಾಷ್ ಉಪ ಸಿಇಓ ಆಗಿ ನೇಮಕ; ವಿನ್ಯಾಸಕಾರ ಮತ್ತು ಕಲಾವಿದ {೧)ಹುಸೇನ್ ಚಲಯನ್{/1} ಕ್ರಿಯಾತ್ಮಕ ನಿರ್ದೇಶಕರಾಗಿ ಆಯ್ಕೆ, ಚಲಯನ್ ನ ವ್ಯವಹಾರದಲ್ಲಿ ಮತ್ತು ಹುಸೇನ್ ಚಲಯನ್ ನಲ್ಲಿನ ಪ್ರಮುಖಾಂಶ ಷೇರುಗಳು ಈ ಕಂಪನಿಯ ವಶಕ್ಕೆ.
  • ೨೦೧೦: ನ್ಯೂಕ್ಯಾಸಲ್ ಯುನೈಟೆಡ್, ಮದರ್ ವೆಲ್, ಹೈಬರ್ನಿಯನ್, ಬರ್ನ್ಲೇ & ಪ್ರೆಸ್ಟನ್ ಕಂಪನಿಗಳಿಗೆ ೨೦೧೦–೧೧ರ ಋತುವಿನಿಂದ ಎರಡು ವರ್ಷಗಳ ಕಾಲ ಕಿಟ್ ತಯಾರಿಸಿ ಒದಗಿಸಲು ಒಪ್ಪಂದಕ್ಕೆ ಸಹಿ.

ಪ್ರಾಯೋಜಕತ್ವ

ಬದಲಾಯಿಸಿ

ಪೂಮಾ ಕ್ರೀಡಾ ಘಟನೆಗಳು, ಪಂದ್ಯಗಳು ಮತ್ತು ವ್ಯಕ್ತಿಗಳ ಪ್ರಾಯೋಜಕ ಸಂಸ್ಥೆಯಾಗಿದೆ - ಸ್ಥಳೀಯವಾಗಿ ಹಾಗೂ ಜಾಗತಿಕವಾಗಿ. ಫುಟ್ ಬಾಲ್ ನಲ್ಲೇ ತನ್ನ ಮೂಲವನ್ನು ಹೊಂದಿದ ಈ ಕಂಪನಿಯು ಅನೇಕ ಫುಟ್ ಬಾಲ್ ಆಟಗಾರರು ಮತ್ತು ರಾಷ್ಟ್ರೀಯ ಫುಟ್ ಬಾಲ್ ತಂಡಗಳನ್ನು ಪ್ರಾಯೋಜಿಸಿದೆ; ಆಫ್ರಿಕಾದಲ್ಲಂತೂ ಇದರ "ಫಾರ್ಮ್ ಸ್ಟ್ರೈಪ್" ಎಲ್ಲೆಡೆ ದಟ್ಟವಾಗಿ ಹರಡಿದೆ. ಪೂಮಾ ಹಲವಾರು ಪ್ರೀಮಿಯರ್ ಲೀಗ್ ತಂಡಗಳ ಪ್ರಾಯೋಜಕವೂ ಆಗಿದೆ; ವಿಶೇಷತಃ ನ್ಯೂಕ್ಯಾಸಲ್ ಯುನೈಟೆಡ್ ಮತ್ತು ಟೋಟೆನ್ ಹ್ಯಾಂ ಹಾಟ್ಸ್ ಪುರ್ (೨೦೧೦/೧೧ರ ಕ್ರೀಡಾಋತುವಿನವರೆಗೆ ಈ ಎರಡೂ ತಂಡಗಳಿಗೆ ಪ್ರಾಯೋಜಕತ್ವ ಮುಂದುವರಿಯುತ್ತದೆ).

ಆಸ್ಟ್ರೇಲಿಯನ್ ರೂಲ್ಸ್ ಫುಟ್ ಬಾಲ್ ನಲ್ಲಿ ಪೂಮಾ ಹಾಥಾರ್ನ್ ಫುಟ್ ಬಾಲ್ ಕ್ಲಬ್ ಮತ್ತು ವೆಸ್ಟ್ ಕೋಸ್ಟ್ ಈಗಲ್ಸ್, ಹಾಗೂ ಬ್ರಿಸ್ಬೇನ್ ಲಯನ್ಸ್ ತಂಡಗಳೊಡನೆ ದೀರ್ಘಕಾಲಿಕ ವ್ಯಾವಹಾರಿಕ ಸಂಬಂಧಗಳನ್ನು ಹೊಂದಿದೆ. ವಿಶೇಷವಾಗಿ, ಆ ಕ್ಲಬ್ ಯಶಸ್ಸಿನ ಉತ್ತುಂಗವನ್ನೇ ತಲುಪಿದ್ದಂತಹ ವರ್ಷವಾದ ೧೯೮೦ರಿಂದಲೂ ಪೂಮಾ ಹಾಥಾರ್ನ್ ನ ಕ್ಲಬ್ ಗೆ ಉಡುಗೊತೊಡುಗೆಗಳನ್ನು ಪ್ರಾಯೋಜಿಸುತ್ತಾ ಬಂದಿದೆ.

 
ಪೂಮಾ ಫಾರ್ಮಲಾ ಒನ್ ರೇಸಿಂಗ್ ತಂಡವಾದ ರೆಡ್ ಬುಲ್ ರೇಸಿಂಗ್ ನ ಪ್ರಾಯೋಜಕ ಸಂಸ್ಥೆಯಾಗಿದೆ. ಆ ತಂಡವು 2010ರ ಕೆನಡಿಯನ್ ಗ್ರ್ಯಾಂಡ್ ಫ್ರೀಯಲ್ಲಿ ಭಾಗವಹಿಸುತ್ತಿರುವುದನ್ನು ಈ ಚಿತ್ರದಲ್ಲಿ ಕಾಣಬಹುದು

ಮಾರ್ಚ್ ೧೦, ೨೦೧೦ರಂದು ಕ್ಯಾಲಿಫೋರ್ನಿಯಾದ ಕಾರ್ಲ್ಸ್ ಬಾಡ್ ನಲ್ಲಿರುವ ಕೋಬ್ರಾ ಗಾಲ್ಫ್ ಸಂಸ್ಥೆಯ ೧೦೦ ಪ್ರತಿಶತ ಭಾಗವನ್ನು, ಫಾರ್ಚ್ಯೂನ್ ಬ್ರ್ಯಾಂಡ್ಸ್ ಇಂಕ್. ಮೂಲಕ ವಶಪಡಿಸಿಕೊಳ್ಳುವುದಾಗಿ ಘೋಷಿಸಿತು, ಆದರೆ ಯಾವುದೇ ಆರ್ಥಿಕ ವಿವರಗಳನ್ನು ಬಹಿರಂಗಗೊಳಿಸಲಿಲ್ಲ. ಕಾನೂನುಬದ್ಧವಾದ ಸಮ್ಮತಿಯನ್ನು ಕಾದಿರುವ ಈ ವ್ಯವಹಾರವು ಎರಡನೆಯ ಪಾದದಲ್ಲಿ ಸಂಪೂರ್ಣಗೊಳ್ಳುವ ನಿರೀಕ್ಷೆಯಿದೆ.[೨೨]

ಅಡಿ ಟಿಪ್ಪಣಿಗಳು

ಬದಲಾಯಿಸಿ
ಉಲ್ಲೇಖಗಳು
  1. "Adidas Group History". Archived from the original on 2011-07-07. Retrieved 2011-03-02.
  2. ೨.೦ ೨.೧ ೨.೨ ೨.೩ ೨.೪ "Annual Results 2010" (PDF). Puma AG. Archived from the original (PDF) on 15 ಜುಲೈ 2011. Retrieved 16 February 2011.
  3. "Annual Report 2009" (PDF). Puma AG. Retrieved 31 July 2010.
  4. ೪.೦ ೪.೧ ೪.೨ ೪.೩ Smit, Barbara (2009). Sneaker Wars. New York: Harper Perennial. ISBN 978-0-06-124658-6.
  5. "The Town that Sibling Rivalry Built, and Divided". Deutsche Welle – dw-world.de. 3/7/06. Archived from the original on 22 ಅಕ್ಟೋಬರ್ 2008. Retrieved 6 November 2010. {{cite web}}: Check date values in: |date= (help)
  6. ೬.೦ ೬.೧ ೬.೨ ಅಡೀಡಸ್ ಮತ್ತು ಪೂಮಾ ಜನಿಸಿದ ಬಗೆ
  7. ೭.೦ ೭.೧ ಉಲ್ಲೇಖ ದೋಷ: Invalid <ref> tag; no text was provided for refs named DW
  8. "Puma AG Rudolf Dassler Sport". Fundinguniverse.com. Retrieved 6 november 2010. {{cite web}}: Check date values in: |accessdate= (help)
  9. "The Town that Sibling Rivalry Built, and Divided". dw-world.de. 3/7/06. Retrieved 8 November 2010. {{cite web}}: Check date values in: |date= (help)
  10. Ramachandran, Arjun (18/9/09). "Town divided by tale of two shoes". The Sydney Morning Herald. Retrieved 6 November 2010. {{cite web}}: Check date values in: |date= (help)
  11. "Dasslers sell Puma to Cosa. (Armin and Gerd Dassler, Puma AG, Cosa Liebermann Ltd., sports clothing trade)". Archived from the original on 2008-12-10. Retrieved 2011-03-02. {{cite news}}: Text "Daily News Record" ignored (help); Text "Find Articles at BNET.com" ignored (help)
  12. "PUMAದ ವಾರ್ತಾ ಸಂಚಯದ ಉಗ್ರಾಣ (9ನೆಯ ಅಕ್ಟೋಬರ್ 2007)". Archived from the original on 2008-12-07. Retrieved 2021-08-10.
  13. "ಪೂಮಾ ಸ್ನೀಕರ್ ಪೀಡಿಯಾ". Archived from the original on 2009-04-09. Retrieved 2011-03-02.
  14. ಪೂಮಾ ಕಿಂಗ್ XL 40ನೆಯ ವಾರ್ಷಿಕೋತ್ಸವದ ಆವೃತ್ತಿ Archived 2010-07-04 ವೇಬ್ಯಾಕ್ ಮೆಷಿನ್ ನಲ್ಲಿ. ಸಾಕರ್ ಕ್ಲೀಟ್ ತಾರೆಗಳು | ಸಾಕರ್
  15. ಪೂಮಾ ಕಿಂಗ್ XL ಇಟಾಲಿಯಾ ರಿವ್ಯೂ ಸಾಕರ್ ಕ್ಲೀಟ್ ೧೦೧ | ಸಾಕರ್
  16. "Puma sees sharp fall in profit". BBC News. 19 February 2007. Retrieved 22 May 2010.
  17. "Puma's shares surge on bid rumour". BBC News. 5 April 2007. Retrieved 22 May 2010.
  18. "Gucci-firm PPR buys stake in Puma". BBC News. 10 April 2007. Retrieved 22 May 2010.
  19. "ಆರ್ಕೈವ್ ನಕಲು". Archived from the original on 2020-09-27. Retrieved 2021-08-10.
  20. "Fair Trade". change.org. Archived from the original on 8 ಅಕ್ಟೋಬರ್ 2010. Retrieved 12 November 2010.
  21. "Eliminating Child Labour from the Sialkot Soccer Ball Industry" (PDF). greenleaf-publishing.com. Archived from the original (PDF) on 26 ಡಿಸೆಂಬರ್ 2010. Retrieved 12 November 2010. {{cite web}}: Unknown parameter |formate= ignored (help)
  22. "Puma acquires Cobra Golf". 10 March 2010. Retrieved 11 March 2010.
ಗ್ರಂಥ ವಿವರಣೆ

ಬಾಹ್ಯ ಕೊಂಡಿಗಳು

ಬದಲಾಯಿಸಿ

ಟೆಂಪ್ಲೇಟು:Portal