ಉಸೈನ್ ಬೋಲ್ಟ್
(ಹುಟ್ಟು: ಆಗಸ್ಟ್ ೨೧, ೧೯೮೬)
ವೈಯುಕ್ತಿಕ ಮಾಹಿತಿ | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಅಡ್ಡ ಹೆಸರು(ಗಳು) | Lightning Bolt | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
ರಾಷ್ರೀಯತೆ | ಜಮೈಕ | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
ಜನನ | Trelawny, ಜಮೈಕ | ೨೧ ಆಗಸ್ಟ್ ೧೯೮೬|||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
ನಿವಾಸ | Kingston, Jamaica | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
ಎತ್ತರ | 1.95 m (6 ft 5 in)[೧] | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
ತೂಕ | 94 kg (207 lb)[೧] | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
Sport | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
ಕ್ರೀಡೆ | Track and field | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
ಸ್ಪರ್ಧೆಗಳು(ಗಳು) | Sprints | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
ಕ್ಲಬ್ | Racers Track Club | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
Achievements and titles | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
ವೈಯಕ್ತಿಕ ಪರಮಶ್ರೇಷ್ಠ | 100 m: 9.58 WR (Berlin 2009)[೨] 150 m: 14.35 WB (Manchester 2009)[೩] | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
ಪದಕ ದಾಖಲೆ
|
ಉಸೈನ್ ಬೋಲ್ಟ್' ಜಮೈಕ ದೇಶದ ಒಬ್ಬ ಓಟಗಾರ. ೧೦೦ ಮೀಟರ್ ಓಟ ಹಾಗು ೨೦೦ ಮೀಟರ್ ಓಟ ಸ್ಪರ್ಧೆಗಳಲ್ಲಿ ವಿಶ್ವ ಹಾಗು ಒಲಂಪಿಕ್ ದಾಖಲೆಗಳನ್ನು ಹೊಂದಿರುವಾತ. ೨೦೦೮ರ ಬೀಜಿಂಗ್ ಒಲಂಪಿಕ್ಸ್ ಅಲ್ಲಿ ಈ ಎರಡು ಸ್ಪರ್ಧೆಗಳನ್ನಲ್ಲದೆ, ಜಮೈಕದ ಇತರ ತಂಡಗಾರರೊಂದಿಗೆ ೪ x ೧೦೦ ಮೀಟರ್ ರಿಲೇ ಸ್ಪರ್ಧೆಯಲ್ಲೂ ವಿಶ್ವದಾಖಲೆ ಸೃಷ್ಟಿಸಿ, ಇತಿಹಾಸದಲ್ಲಿ ಒಂದೇ ಒಲಂಪಿಕ್ಸ್ ನಲ್ಲಿ 'ಯುಸೈನ್ ಬೋಲ್ಟ್', ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಈ ಮೂರರಲ್ಲೂ ವಿಶ್ವದಾಖಲೆಗಳನ್ನು ಮುರಿದ ಮೊದಲಿಗರಾದರು. ಮತ್ತೊಬ್ಬ 'ಅಮೆರಿಕನ್ ಸ್ಪ್ರಿಂಟ್ ಓಟಗಾರ', 'ಕಾರ್ಲ್ ಲ್ಯೂಯಿಸ್,' ರವರು, ೧೯೮೪ ರಲ್ಲಿ, ಒಂದೇ ಒಲಿಂಪಿಕ್ಸ್ ನಲ್ಲಿ,'ಸ್ಪ್ರಿಂಟ್ ಓಟ,' ದಲ್ಲಿ ೩ ವಿಶ್ವದಾಖಲೆಗಳನ್ನು ಸ್ಥಾಪಿಸಿದ್ದರು. 'ಬೋಲ್ಟ್,' ತಮ್ಮ, '೨೩ ನೇ ಜನ್ಮದಿನದ ಮುನ್ನಾದಿನ,' , 'ಒಲಿಂಪಿಕ್ ಕ್ರೀಡಾಂಗಣ,' ದಲ್ಲಿ ನಡೆದ, 'ವಿಶ್ವ ಅಥ್ಲೆಟಿಕ್ ಛಾಂಪಿಯನ್ ಶಿಪ್,' ನ ೧೦೦ ಮೀ. ಓಟದ ಸ್ಪರ್ಧೆಯಲ್ಲಿ '೯.೫೮ ಸೆಕೆಂಡ್,' ಗಳಲ್ಲಿ ಓಟ ಪೂರೈಸಿ, ತಮ್ಮದೇ 'ವಿಶ್ವದಾಖಲೆ,' ಯನ್ನು ಸುಧಾರಿಸಿಕೊಂಡಿದ್ದರು. (ರಿಯಾಕ್ಷನ್ ಟೈಮ್ ೦.೧೪೬ ಸೆಕೆಂಡ್ ಗಳು).
ಬಾಲ್ಯದ ದಿನಗಳು
ಬದಲಾಯಿಸಿ'ಬೋಲ್ಟ್,' ೨೧, ಆಗಸ್ಟ್ ೧೯೮೬ ರಲ್ಲಿ, ಜಮೈಕ ದ, 'ಶೆರ್ ವುಡ್ ಕಂಟೆಂಟ್,' ಚಿಕ್ಕ ಪಟ್ಟಣ, 'ಟ್ರೆಲೌನಿ,' ಯಲ್ಲಿ ಜನಿಸಿದರು. ತಂದೆ, 'ವೆಲ್ಲೆಸ್ಲೆ ಬೋಲ್ಟ್', ತಾಯಿ 'ಜೆನೆಫರ್' , ಗಳ ಜೊತೆಯಲ್ಲಿ ಬೆಳೆದರು. ಅವರ ಸೋದರ, 'ಸಿದ್ದೀಕಿ,' ಮತ್ತು ತಂಗಿ, 'ಶೆರೀನ್,' ತಂದೆ, 'ವೆಲ್ಲೆಸ್ಲೆ ಬೋಲ್ಟ್', ಅಲ್ಲಿನ ಸ್ಥಾನೀಯ " ದಿನಬಳಕೆ ಸಾಮಾನಿನ ದಿನಸಿ-ಅಂಗಡಿ," ನಡೆಸುತ್ತಿದ್ದರು.
ಸ್ಪ್ರಿಂಟ್ ಓಟದಲ್ಲಿ ಮೊದಲಿನಿಂದಲೂ ತೀವ್ರ ಆಸಕ್ತಿಯಿತ್ತು
ಬದಲಾಯಿಸಿ'ಉಸೈನ್ ಬೋಲ್ಟ್,' ಚಿಕ್ಕ ವಯಸ್ಸಿನಲ್ಲಿ, ಅವರ ಸೋದರನ ಜೊತೆ, ಬೀದಿಗಳಲ್ಲಿ ಕ್ರಿಕೆಟ್, ಫುಟ್ಬಾಲ್ [ಸಾಕರ, ಬೇರೆಯೇನೂ ತಲೆಯಲ್ಲಿ ಹೊಳೆಯುತ್ತಿರಲಿಲ್ಲ ವೆಂದು, ನೆನೆಸಿಕೊಳ್ಳುತ್ತಿದ್ದರು.
'ಉಸೈನ್ ಬೋಲ್ಟ್', 'ವಾಲ್ಡೆನ್ಸಿಯ ಶಾಲೆ, ಯಲ್ಲಿ
ಬದಲಾಯಿಸಿ'ಉಸೈನ್ ಬೋಲ್ಟ್', 'ವಾಲ್ಡೆನ್ಸಿಯ ಶಾಲೆ,' ಗೆ, ಎಲ್ಲಾ ವಯಸ್ಸಿನ ಹುಡುಗರ ಪ್ರಾಥಮಿಕ-ಶಾಲೆಗೆಸೇರಿದರು. ಇಲ್ಲಿ ಅವರ ವೇಗದ ಓಟದ ಸಾಮರ್ಥ್ಯದ ಅರಿವಾಯಿತು. ವಾರ್ಷಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದಾಗ, ೧೨ ನೆ ವಯಸ್ಸಿಗೇ ಸ್ಕೂನಿನಲ್ಲೇ ಅತಿವೇಗಿ ಓಟಗಾರನೆಂದು ಗುರುತಿಸಲ್ಪಟ್ಟರು.' ವಾರ್ಷಿಕ ನ್ಯಾಷನಲ್ ಓಟ', ಪ್ರೈಮರಿಸ್ಕೂಲ್ ನ ಪ್ಯಾರಿಶ್ ಸಭೆಯಲ್ಲಿ ೧೨ ನೇ ವಯಸ್ಸಿಗೇ ಬೋಲ್ಟ್, ಅವರ ಶಾಲೆಯ '೧೦೦ ಮೀ ಸ್ಪ್ರಿಂಟ್,,' ಓಡುಗರಲ್ಲಿ ಪ್ರಥಮರಾಗಿದ್ದರು. 'ವಿಲಿಯಮ್ ನಿಬ್ ಮೆಮೋರಿಯಲ್ ಹೈಸ್ಕೂಲ್,' ಸೇರಿದಾಗ, ಬೋಲ್ಟ್ ರವರ ಧ್ಯಾನ, ಬೇರೆ-ಬೇರೆ ಆಟಗಳಕಡೆ ವಾಲಿತು. ಅವರ ಕ್ರಿಕೆಟ್ ಕೋಚ್, ಗಮನಿಸಿದಂತೆ, ಬೋಲ್ಟ್ ರ ವೇಗದ ಓಟ, 'ಟ್ರ್ಯಾಕ್ ಮತ್ತು ಫೀಲ್ಡ್ ಇವೆಂಟ್ಸ್', ಗಳನ್ನು ಹೆಚ್ಚು-ಹೆಚ್ಚು ಅಭ್ಯಾಸಮಾಡಲು ಆಗ್ರಹ ಅವರ ಪ್ರಯತ್ನದ ಮೇಲಿತ್ತು. ಕೋಚ್ 'ಪ್ಯಾಬ್ಲೊ ಮ್ಯಾಕ್ ನೆಲ್', ಹಿಂದಿನ ೧೦೦ ಮೀ ಒಲಂಪಿಕ್ ಖಿಲಾಡಿ ಹಾಗೂ 'ಡ್ವಾಯ್ನ್ ಬ್ಯಾರೆಟ್ ಬೋಲ್ಟ್,' ಗೆ, ಕೋಚ್ ಮಾಡಿದರು. ಸ್ಕೂಲಿನ ಇತಿಹಾಸದಲ್ಲಿ ಅನೇಕ ಅಥ್ಲೆಟ್ ಗಳಿದ್ದರು. ಹಳೆಯ ಹುಡುಗರ ಪೈಕೆ, ಮಿಂಚಿನ ಓಟಗಾರ, ಮೈಖೇಲ್ ಗ್ರೀರನ್ನೂ ಸೇರಿದಂತೆ, ಬೋಲ್ಟ್ ಪ್ರಥಮ ವಾರ್ಷಿಕ ಹೈಸ್ಕೂಲ್ ಛಾಂಪಿಯನ್-ಶಿಪ್ ಮೆಡಲ್ ೨೦೦೧ ರಲ್ಲಿ, ಬೆಳ್ಳಿಯ ಪದಕ ಪಡೆದು, ೨೦೦ ಮೀ ೨೨.೦೪ ಸೆಕೆಂಡ್ ಗಳಲ್ಲಿ 'ಮ್ಯಾಕ್ನೆಲ್,' ತಕ್ಷಣ ಅವರ ಪ್ರೈಮರಿ ಶಾಲೆಯ ಕೋಚ್ ಆದರು. ಇಬ್ಬರೂ ಅರ್ಥಮಾಡಿಕೊಂಡು ಸಂತೋಷದಿಂದ ಮುಂದುವರೆದರು. ಬೋಲ್ಟ್ ರ ಮನಸ್ಸಿಟ್ಟು ಆಡದ ವಜೆಯಿಂದಾಗಿ, ಕೆಲವು ವೇಳೆ, ಮ್ಯಾಕ್ನೆಲ್ ರಿಗೆ ಅವರು ಕೊಟ್ಟ ಪರಿಣಿತಿ ಪೋಲಾಯಿತಲ್ಲ ಎಂದು ,ಬೇಸರವಾಗುತ್ತಿತ್ತು.
ಮೊದಲ ಸ್ಪರ್ಧೆಗಳು
ಬದಲಾಯಿಸಿ"ಕೆರೇಬಿಯನ್ ರೀಜನಲ್ ಪ್ರತಿಯೋಗಿತೆ", ಸಮಯದಲ್ಲಿ, 'ಉಸೈನ್ ಬೋಲ್ಟ್' ಜಮೈಕಾಕ್ಕೆ ಸ್ಪರ್ದಿಸಿದರು. ೪೦೦ ಮೀ. ಓಟದಲ್ಲಿ ಬೋಲ್ಟ್ ತೆಗೆದುಕೊಂಡ ಸಮಯ, [ಅದು ಅವರ ವೈಕ್ತಿಕ ಹೆಚ್ಚು]. ೪೮.೨೮ ಸೆಕೆಂಡ್. ೨೦೦೧ ರ 'CARIFTA,' ೨೦೦ ಮೀ. ಗೇಮ್ಸ್ ಸ್ಪರ್ಧೆಯ, ಓಟದಲ್ಲೂ ೨೧.೮೧ ಸೆಕೆಂಡ್ ನಲ್ಲಿ ಮುಗಿಸಿ, ಅವರು ರಜತ ಪದಕ ಗೆದ್ದರು. ೧೬, ಆಗಸ್ಟ್, ೨೦೦೯ ರಂದು, ಬರ್ಲಿನ್ ನಗರದಲ್ಲಿ ಆಯೋಜಿಸಲಾಗಿದ್ದ, ೧೨ ನೇ '(IAAAF),' 'ವಾರ್ಷಿಕ ಅಥ್ಲೆಟಿಕ್ ಪ್ರತಿಯೋಗಿತೆ,' ಯಲ್ಲಿ 'ಯುಸೈನ್ ಬೋಲ್ಟ್,' ರವರು, 'ಸ್ಪ್ರಿಂಟ್,' ನ ಮತ್ತೊಂದು, ಹೊಸ ಇತಿಹಾಸಕ್ಕೆ ಮುನ್ನುಡಿಯಾಗಿದ್ದಾರೆ. '೧೦೦ ಮೀ 'ಸ್ಪ್ರಿಂಟ್ ಓಟದ ಇತಿಹಾಸ,' ದಲ್ಲೇ ಜಮೈಕಾ ಮೂಲದ ಈ ಅಥ್ಲೆಟ್, ಮತ್ತೊಮ್ಮೆ 'ವಿಶ್ವದ- ಪರಮ-ವೇಗಿ-ಸ್ಪ್ರಿಂಟರ್,' ಎಂದು, ಹೊರಹೊಮ್ಮಿದ್ದಾರೆ.
ನಂಬಲಾಗದಂತಹ ದಾಖಲೆಗಳ ರಾಜ-'ಉಸೈನ್ ಬೋಲ್ಟ್'
ಬದಲಾಯಿಸಿ'ಬರ್ಲಿನ್ ನಗರ,' ದಲ್ಲಿ ನಡೆದ, 'ವಿಶ್ವ ಅಥ್ಲೆಟಿಕ್ಸ್ ಛಾಂಪಿಯನ್ ಶಿಪ್,' ನಲ್ಲಿ, ಒಂದಾದರೊಂದರಂತೆ,ನಂಬಲಾರದಷ್ಟು ದಾಖಲೆಗಳನ್ನು ಸೃಷ್ಟಿಸುತ್ತಿರುವ ಯುಸೈನ್ ಬೋಲ್ಟ್ ರ ಸಾಧನೆಗಳನ್ನು ಕಂಡ ವಿಶ್ವದ ಜನರೆಲ್ಲಾ ಮೂಗಿನ ಮೇಲೆ ಕೈಯಾಡಿಸುತ್ತಿದ್ದಾರೆ. " ನಾನು ನಿಷೇಧಿತ ಉದ್ದೀಪನಾ ಔಷಧಿಗಳ ಸೇವನೆಮಾಡದೆ ನನ್ನ ನಿರ್ಮಲತೆಯನ್ನು ಕಾಪಾಡಿಕೊಂಡು ಈ ಸಾಧನೆಗಳನ್ನು ಮಾಡಿದ್ದೇನೆ. ಇದರಿಂದ ನನಗೆ ಅತೀವ ಆನಂದವಾಗಿದೆ " ಎಂದು ಹೆಮ್ಮೆಯಿಂದ ನುಡಿದ 'ಉಸೈನ್ ಬೋಲ್ಟ್,' ರವರು ತೃಪ್ತಿಯಿಂದ ಬೀಗುತ್ತಿದ್ದರು. ಸುಮಾರು ೧ ವರ್ಷದ ಹಿಂದೆ,'ಬೀಜಿಂಗ್ ಒಲಂಪಿಕ್ಸ್,' ನಲ್ಲಿ, ಪುರುಷರ ೨೦೦ ಮೀ. ಸ್ಪರ್ಧೆಯಲ್ಲಿ ಗುರಿಯನ್ನು ಕೇವಲ '೧೯.೧೯ ಸೆ,' ನಲ್ಲಿ ಕ್ರಮಿಸಿ, ತಮ್ಮ ಹೆಸರಿನಲ್ಲಿದ್ದ 'ವಿಶ್ವದಾಖಲೆ,' ಯನ್ನು ಮತ್ತಷ್ಟು ಉತ್ತಮಪಡಿಸಿದರು. ಇದಕ್ಕೆ ಮೊದಲು ೧೯.೩೦ ಸೆ. ಗುರಿಯನ್ನು ಕ್ರಮಿಸಿದ್ದ ಬೋಲ್ಟ್ ರವರು, ಆಗಲೇ ವಿಶ್ವದಾಖಲೆಗೆ ಸೇರ್ಪಡೆಯಾಗಿದ್ದರು. ಅಂದರೆ, ಸುಮಾರು '೦.೧೧೩,' 'ರಿಯಾಕ್ಷನ್ ಟೈಮ್', ಸೆಕೆಂಡ್, ನಷ್ಟು ಹೆಚ್ಚಿನ ಸಾಧನೆಮಾಡಿದಂತಾಗಿದೆ. ಈಗ ಅವರು ಒಲಂಪಿಕ್ ಮತ್ತು ವಿಶ್ವ-ಛಾಂಪಿಯನ್ ಶಿಪ್ ನಲ್ಲಿ ೧೦೦ ಮತ್ತು ೨೦೦ ಮೀ. ಓಟದಸ್ಪರ್ಧೆಯಲ್ಲಿ ಒಂದೇಬಾರಿ ವಿಶ್ವದಾಖಲೆಸಹಿತ ಸ್ವರ್ಣ ಪದಕ ಗೆದ್ದುಕೊಂಡ ಏಕೈಕ ಓಟಗಾರರಾಗಿದ್ದಾರೆ.
ಉಸೈನ್ ಬೋಲ್ಟ್, ರಿಗೆ, ’ಆರ್ಡರ್ ಆಫ್ ಜಮೈಕಾ’,ಪ್ರಶಸ್ತಿ
ಬದಲಾಯಿಸಿವಿಶ್ವದ ’ಸ್ಪ್ರಿಂಟ್ ಬಿರುಸಿನ ಓಟ’ ದಲ್ಲಿ, ಈಗಾಗಲೇ ಮೇರುಮಟ್ಟದಲ್ಲಿ ಶೋಭಿಸುತ್ತಿರುವ ಮಿಂಚಿನ ಓಟಗಾರ 'ಯುಸೈನ್ ಬೋಲ್ಟ್', ’ಆರ್ಡರ್ ಆಫ್ ಜಮೈಕಕಾ’, ಪದಕದಿಂದ ಅಲಂಕೃತರಾಗಿದ್ದಾರೆ. ೨೨ ವರ್ಷದ ಹರೆಯದ, 'ಯುಸೈನ್ ಬೋಲ್ಟ್', ಈ ಗೌರವ ಪಡೆದ ಅತ್ಯಂತ ಕಿರಿಯರೆನ್ನಿಸಿದ್ದಾರೆ. ’ಜಮೈಕ ದೇಶ’ದ ಅತ್ಯುನ್ನತ ಗೌರವವಾದ ಈ ಪ್ರಶಸ್ತಿಯನ್ನು ೨೧, ಅಕ್ಟೋಬರ್, ೨೦೦೯ ರಂದು ಪ್ರದಾನಮಾಡಲಾಯಿತು. ಇದೇ ಗೌರವವನ್ನು ಪಡೆದ ಹಿರಿಯರು, 'ಅಂತಾರಾಷ್ಟ್ರೀಯ ಖ್ಯಾತಟ್ರಿಬ್ಯುನಲ್ ನ್ಯಾಯಾಧೀಶ', ’ಡಾ. ಪ್ಯಾಟ್ರಿಕ್ ರಾಬಿನ್ಸನ್’, ಮತ್ತು ವೆಸ್ಟ್ ಇಂಡೀಸ್ ನ, ’ವಿವಿಯ ಪ್ರೊ. ಗಾರ್ಡನ್ ಶಿರ್ಲಿ, ’ಯವರು.
'ಅಮೆರಿಕದ ಅಪ್ರತಿಮ ವೇಗಿ-ಓಟಗಾರ ಕಾರ್ಲ್ ಲೂಯಿಸ್ ದಾಖಲೆಗಳನ್ನು ಸೃಷ್ಟಿಸಿದ್ದರು'
ಬದಲಾಯಿಸಿಅಮೆರಿಕದ ನೂರು ಮೀಟರ್ ಓಟದ ವೇಗಿ, 'ಕಾರ್ಲ್ ಲೂಯಿಸ್,' (೧೯೮೪-೮೮ ರ ಸಾಲಿನ) ಒಲಂಪಿಕ್ಸ್ ಸ್ಪರ್ಧೆಯಲ್ಲಿ ಈ ದಾಖಲೆಯನ್ನು ಸ್ಥಾಪಿಸಿದ್ದರು.’೧೯೯೮ ರ ಸಿಯೊಲ್ ಒಲಂಪಿಕ್ಸ್’ ನಲ್ಲಿ ’ಬೆನ್ ಜಾನ್ಸನ್,’ ನಂತರ ಅಮೆರಿಕದ ’ಕಾರ್ಲ್ ಲೂಯಿಸ್’, ಎರಡನೆಯವರಾಗಿ ಓಟದಲ್ಲಿ ಬಂದರೂ, ಆ ’ಕೆನೆಡಿಯನ್’ ’ಡೂಪ್ ಟೆಸ್ಟ್ ನಲ್ಲಿ ಪಾಸಿಟೀವ್’ ಆಗಿ ಸಿಕ್ಕಿಹಾಕಿಕೊಂಡು ಪ್ರತಿಯೋಗಿತೆಯಿಂದ ಹೊರಹಾಕಲ್ಪಟ್ಟ ಬಳಿಕವೂ, ’ಕಾರ್ಲ್ ಲೂಯಿಸ್’, ಒಬ್ಬ ಏಕಮಾತ್ರ ನೂರು ಮೀಟರ್ ಸ್ಪ್ರಿಂಟ್ ಓಟದ ಪ್ರತಿಯೋಗಿತೆಯಲ್ಲಿ ಮೊದಲಸ್ಥಾನವನ್ನು ಖಾಯಂ ಆಗಿ ಉಳಿಸಿಕೊಂಡ ’ಶ್ರೇಷ್ಠಖಿಲಾಡಿ’ ಯೆಂದು ಹೆಸರುಮಾಡಿದ್ದರು.
'೨೦೧೨ ರ ಲಂಡನ್ ಒಲಂಪಿಕ್ಸ್ ನ, ೧೦೦ ಮೀ. ೨೦೦ ಮೀ.ನಲ್ಲಿ ಅಪ್ರತಿಮ ದಾಖಲೆ'
ಬದಲಾಯಿಸಿ೨೫ ವರ್ಷ ಪ್ರಾಯದ, ಜಮೈಕ ದೇಶದ 'ಉಸೈನ್ ಬೋಲ್ಟ್', ೨೦೧೨ ರ ಲಂಡನ್ ಒಲಂಪಿಕ್ಸ್ ನ ೧೦೦ ಮೀ ಓಟದ ಸ್ಪರ್ಧೆಯಲ್ಲಿ ೯.೬೩ ಸೆಕೆಂಡ್ ಗಳಲ್ಲಿ ಮುಗಿಸಿ, ಮೊದಲನೆಯವರಾಗಿ ವಿಜೃಂಭಿಸಿದರು. ಜಮೈಕಾದ ಅವರ ಜೊತೆಯ ಕಂಪ್ಯಾಟ್ರಿಯೆಟ್ ಗಳಾದ 'ಯೊಹಾನ್ ಬ್ಲೇಕ್',(೯.೭೫ ಸೆಕೆಂಡ್ಸ್) ಮತ್ತು ಅಮೆರಿಕಾದ, ಕಂಚಿನ ಪದಕ ವಿಜೇತ, ಜಸ್ಟಿನ್ ಗೆಟಿನ್(೯.೭೯ ಸೆಕೆಂಡ್ಸ್) ಕ್ರಮವಾಗಿ ಎರಡನೆ ಹಾಗೂ ಮೂರನೆಯ ಸ್ಥಾನವನ್ನು ಗಳಿಸಿದರು. ೬.೫ ಅಡಿ ಎತ್ತರದ ಯುಸೈನ್ ಓಟ ಪ್ರಾರಂಭಿಸಿದಾಗ ಶುರುವಿನಲ್ಲಿ ಸ್ವಲ್ಪ ತಡವಾಗಿ ಹಿಂದಿದ್ದರೂ ಮಧ್ಯ ದಾರಿಗೆ ಬರುವ ವೇಳೆಗೆ ಚೇತರಿಸಿಕೊಂಡು, ಕೊನೆಯ ೨೫ ಮೀ ದೂರವನ್ನು ಮಿಂಚಿನ ವೇಗದಿಂದ ಓಡಿ, 'ವಿಶ್ವದ ನೂರು ಮೀಟರ್ ಓಟದ ಇತಿಹಾಸದಲ್ಲಿ ವಿಕ್ರಮ'ವನ್ನು ಸಾಧಿಸಿದರು. ಇದು ಅವರ ವೈಕ್ತಿಕ ಜೀವನದ ಎರಡನೆಯ ಅತಿ-ವೇಗದ ಓಟವಾಗಿತ್ತು. ೪ ನೆಯ ಚಿನ್ನದ ಪದಕಗಳ ಸ್ಥಾನವನ್ನು ಗಳಿಸಿದರು. ೨೦೧೨ ರ ಲಂಡನ್ ಒಲಂಪಿಕ್ಸ್ ನ ನೂರುಮೀಟರ್ ಸ್ಪ್ರಿಂಟ್ ನ ೪ ನೆಯ ಸ್ಥಾನವನ್ನು(೯.೮ ಸೆಕೆಂಡ್ಸ್) ಒಲಂಪಿಕ್ಸ್ ಮೈದಾನದಲ್ಲಿ, ಅಮೆರಿಕದ ಟೈಸನ್ ಗೇ ಗಳಿಸಿದರು. ಜಮೈಕಾದ ಮತ್ತೋರ್ವ ಸ್ಪರ್ಧಾಳು, ಅಸಫಾ ಪೊವೆಲ್ ರವರ, ಓಟದ ವೇಗ ೧೧.೯೯ ಸೆಕೆಂಡ್ಸ್ ಆಗಿತ್ತು. ನೂರುಮೀಟರ್ ಸ್ಪ್ರಿಂಟ್ ನಲ್ಲಿ ಜೊತೆಯಲ್ಲಿ ಓಡಿದ ಇತರ ಓಟಗಾರರ ವೇಗ, ಅಮೆರಿಕಾದ ರ್ಯಾನ್ ಬೇಲಿ, ೯.೮೮ ಸೆಕೆಂಡ್ಸ್, ನೆದರ್ಲಾಂಡ್ ನ ಚುರಂಡಿ ಮಾರ್ಟಿನಾ ೯.೯೪ ಸೆಕೆಂಡ್ಸ್, ಟ್ರಿನಿಡಾಡ್ ನ ರಿಚರ್ಡ್ ಥಾಂಪ್ಸನ್,೯.೯೮ ಸೆಕೆಂಡ್ಸ್, ನಷ್ಟಿತ್ತು. 'ಯುಸೈನ್ ಬೋಲ್ಟ್' ಆಗಸ್ಟ್, ೯ ರಂದು, '೨೦೧೨ ರ ಲಂಡನ್ ಒಲಂಪಿಕ್ಸ್,' ನಲ್ಲಿ ಪುರುಷರ ೨೦೦ ಮೀ. ಓಟವನ್ನು ೧೯.೩೨ ಸೆಕೆಂಡ್ಸ್ ಸಮಯದಲ್ಲಿ ಮುಗಿಸಿ, ಹೊಸ ದಾಖಲೆಗಳನ್ನು ಸೃಷ್ಟಿಸಿದರು. 'ಎರಡನೆಯ ರಜತ ಪದಕ'ವನ್ನು ಜಮೈಕದವರೇ ಆದ ಅವರ ಗೆಳೆಯ, ಯೊಹಾನ್ ಬ್ಲೇಕ್, ೧೯.೪೪ ಸೆಕೆಂಡ್ ಗಳಲ್ಲಿ ಓಡಿ ಗಳಿಸಿದರು. 'ಮೂರನೆಯವರಾಗಿ ಕಂಚಿನ ಪದಕ'ವನ್ನು ಜಮೈಕಾದವರಾದ, ವಾರೆನ್ ವೇರ್ ೧೯.೮೪ ಸೆಕೆಂಡ್ ಗಳಲ್ಲಿ ಓಡಿ ತಮ್ಮದಾಗಿಸಿಕೊಂಡರು. ಸ್ಟೇಡಿಯಮ್ ನಲ್ಲಿ ಪ್ರಚಂಡ ಜನಸ್ತೋಮ ಕರತಾಡನಮಾಡಿ ತಮ್ಮ ಹರ್ಷವನ್ನು ಪ್ರಸ್ತುತಪಡಿಸಿದರು. ಅವರಲ್ಲಿ ಸಾಕಷ್ಟು ಕ್ರೀಡಾ-ಪ್ರೇಮಿಗಳು ಜಮೈಕಾದೇಶದವರು.
೪x೪೦೦ ಮೀ.ರಿಲೇ ಸ್ಪರ್ಧೆಯಲ್ಲಿ ಅಪ್ರತಿಮ ದಾಖಲೆ
ಬದಲಾಯಿಸಿ' ಉ ಸೈನ್ ಬೋಲ್ಟ್', ರವರು, ೪x೪೦೦ ಮೀ.ರಿಲೇ ಸ್ಪರ್ಧೆಯಲ್ಲಿ ಪ್ರಥಮರಾಗಿ ತಮ್ಮ ಟೀಮ್ ನ ಬ್ಯಾಟನ್ ೩೬.೮೪ ಸೆಕೆಂಡ್ ಗಳಲ್ಲಿ ರವಾನಿಸಿದರು. ’ ಉಸೈನ್ ಬೋಲ್ಟ್’, ಸತತವಾಗಿ ೨ ಒಲಂಪಿಕ್ಸ್ ನಲ್ಲಿ ೩ ಚಿನ್ನದ ಪದಕಗಳ ಹ್ಯಾಟ್ರಿಕ್ ಸಾಧಿಸಿದ ಐತಿಹಾಸಿಕ ಪುರುಷನೆಂದು ಹೆಸರುಗಳಿಸಿದರು. ೪x೪೦೦ ಮೀ. ರಿಲೆ ತಂಡದಲ್ಲಿ ಅಸಫಾ ಪೊವೆಲ್ ಗಾಯಗೊಂಡಿದ್ದರಿಂದ ಅವರ ಸ್ಥಾನಕ್ಕೆ ಕಾರ್ಟರ್ ರಿಲೆಯವರನ್ನು ಸೇರಿಸಿಕೊಳ್ಳಲಾಯಿತು. ಅಗ್ರಮಾನ್ಯ ಬೋಲ್ಟ್,ಯೊಹಾನ್ ಬ್ಲೇಕ್, ಮೈಕೆಲ್ ಫ್ರಾಟರ್, ನೆಸ್ಟಾ; ಈ ಕ್ರೀಡಾಳುಗಳು ಜಮೈಕಾದದೇಶದ ಪರವಾಗಿ ತಮ್ಮ ವೈಕತಿಕ ಸಾಧನೆಗಿಂತಾ ತಮ್ಮ ನೆಚ್ಚಿನ ಗೆಳೆಯ ಬೋಲ್ಟ್ ಗಾಗಿ, ಅವರ ನಿರೀಕ್ಷೆ ಸುಳ್ಳಾಗದಂತೆ ಅತಿ ಎಚ್ಚರವಹಿಸಿದರು. ಪಂದ್ಯ ಮುಗಿದಬಳಿಕ ಬೋಲ್ಟ್ ತಮ್ಮ ಜೊತೆಓಟಗಾರರ ಹಸ್ತಾಕ್ಷರಗಳನ್ನು ಬೇಟನ್ ಮೇಲೆ ಪಡೆದರು. ರಜತ ಪದಕವನ್ನು ಅಮೆರಿಕದ 'ರ್ಯಾನ್ ಬೇಲಿ' ೩೭.೦೪ ಸೆಕೆಂಡ್ ಗಳಲ್ಲಿ ಕ್ರಮಿಸಿ ಗಳಿಸಿದರು. ಕಂಚಿನ ಪದಕ ಕೆನಡಾದ ತಂಡಕ್ಕೆ ಬರಬೇಕಿತ್ತು. ಆದರೆ ಅವರು ಪಂದ್ಯದಿಂದ ಹೊರಗೆ ಹಾಕಲ್ಪಟ್ಟಿದ್ದರಿಂದ 'ಟ್ರಿನಿಡಾಡ್ ಅಂಡ್ ಟೊಬಾಗೋ ದೇಶ', ಅವರ ೩೮.೧೨ ಸೆಕೆಂಡ್ ಸಮಯವನ್ನೇ ಪರಿಗಣಿಸಿ ಪ್ರದಾನಮಾಡಲಾಯಿತು. ಕಾರ್ಟರ್, ೨೦೧೧ ರಲ್ಲಿ ಜರುಗಿದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಜಮೈಕಾ ಸಾಧಿಸಿದ್ದ ೩೭.೦೪ ಸೆಕೆಂಡ್ ದಾಖಲೆ ಸ್ವತಃ ಅವರೇ ಮುರಿದರು. ರಜತ ಪದಕವನ್ನು ಅಮೆರಿಕದ 'ರ್ಯಾನ್ ಬೇಲಿ' ೩೭.೦೪ ಸೆಕೆಂಡ್ ಗಳಲ್ಲಿ ಕ್ರಮಿಸಿ ಗಳಿಸಿದರು. ಕಂಚಿನ ಪದಕ ಕೆನಡಾದ ತಂಡಕ್ಕೆ ಬರಬೇಕಿತ್ತು. ಆದರೆ ಅವರು ಪಂದ್ಯದಿಂದ ಹೊರಗೆ ಹಾಕಲ್ಪಟ್ಟಿದ್ದರಿಂದ 'ಟ್ರಿನಿಡಾಡ್ ಅಂಡ್ ಟೊಬಾಗೋ ದೇಶ',ದವರ ೩೮.೧೨ ಸೆಕೆಂಡ್ ಸಮಯವನ್ನೇ ಪರಿಗಣಿಸಿ, ಪ್ರದಾನಮಾಡಲಾಯಿತು.
ಮಾಸ್ಕೊ ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ೨೦೧೩
ಬದಲಾಯಿಸಿಉಸೈನ್ ಬೋಲ್ಟ್,, ಮಾಸ್ಕೊದ ಬಹು ನಿರೀಕ್ಷಿತ ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ನ, ೧೦೦ ಮೀ. ಓಟದಲ್ಲೂ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಕಳೆದ ಬಾರಿಯ ವಿಶ್ವ ಚಾಂಪಿಯನ್ ಶಿಪ್ ನಲ್ಲಿ 'ಫೌಲ್' ಆಗಿ ಪದಕ ವಂಚಿತ ರಾಗಿದ್ದ ಬೋಲ್ಟ್ , ಆಗಸ್ಟ್, ೧೧, ರವಿವಾರ ನಡೆದ ಫೈನಲ್ಸ್ ನಲ್ಲಿ ೯.೭೭ ಸೆಕೆಂಡ್ಸ್ ಗಳಲ್ಲಿ ಮೊದಲಿಗರಾಗಿ ಗುರಿ ಮುಟ್ಟಿದರು.
ಪುರುಷರ ೪ x ೪೦೦ ರಿಲೇ ಪಂದ್ಯ
ಬದಲಾಯಿಸಿಆಗಸ್ಟ್ ೧೮ ನಡೆದ ೪ x ೪೦೦ ಪುರುಷರ ರಿಲೇ ರೆಸ್ ನಲ್ಲೂ ಸ್ವರ್ಣ ಪದಕ ಗಳಿಸಿ ಸಾಧನೆ ಮಾಡಿ ತಮ್ಮ ಟ್ರ್ಯಾಕ್ ಅಂಡ್ ಫೀಲ್ಡ್ ನಲ್ಲಿ ತಮ್ಮ ಆಧಿಪತ್ಯವನ್ನು ಕಾಯ್ದುಕೊಂಡಿದ್ದಾರೆ. ಬೋಲ್ಟ್ ಸ್ಪರ್ಧಿಸಿದ ೩ ವಿಭಾಗಗಳಲ್ಲೂ ಚಿನ್ನದ ಪದಕ ಗೆದ್ದ ಹೆಗ್ಗಳಿಕೆ ಅವರದು. ಯುಸೈನ್ ಬೋಲ್ಟ್, ನೆಸ್ಟಾ ಕಾರ್ಟರ್, ಕೇ ಮಾರ್ ಬೈಲಿ ಕೋಲ್, ನಿಕೆಲ್ ಆಶ್ ಮೆಡ್ ರವರನ್ನೂಳ ಗೊಂಡ ತಂಡ ೩೭.೩೬ ಸೆಕೆಂಡ್ ಸಮಯದಲ್ಲಿ ಗುರಿ ಮುಟ್ಟಿ ಸ್ವರ್ಣ ಪದಕವನ್ನು ಹಾಸಿಲ್ ಮಾಡಿಕೊಂಡಿತು. ಅಮೇರಿಕನ್ ಟೀಮ್ ೨ ಯದಾಗಿ ರಜತ ಪದಕ ಗಳಿಸಿತು. ಬ್ರಿಟನ್ ತಂಡ ೩ ನೆಯದಾಗಿ ಕಂಚಿನ ಪದಕ ಗಳಿಸಿತು.
೨೦೧೫ ಬೀಜಿಂಗ್ ವಿಶ್ವ ಚಾಂಪಿಯನ್ ಶಿಪ್, ಪ್ರತಿಯೋಗಿತೆಯಲ್ಲಿ
ಬದಲಾಯಿಸಿಬೀಜಿಂಗ್ ನಲ್ಲಿ, ೨೩ ಆಗಸ್ಟ್ ೨೦೧೫, ರಂದು ಆಯೋಜಿಸಲಾಗಿದ್ದ ವಿಶ್ವ ಛಾಂಪಿಯನ್ ಶಿಪ್ ಪ್ರತಿಯೋಗಿತೆಯಲ್ಲಿ [೫] ಉಸೈನ್ ಬೋಲ್ಟ್, ೧೦೦ ಮೀಟರ್ ಓಟವನ್ನು ೯.೭೯ ಸಮಯದಲ್ಲಿ ಮುಗಿಸಿ ಜಯಶಾಲಿಯಾದರು. ೨೭ ಆಗಸ್ಟ್ ೨೦೧೫, ರಂದು ಅವರು ೨೦೦ ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ೧೯.೫೫ ಸಮಯದಲ್ಲಿ ಮುಗಿಸಿ ಜಯಭೇರಿ ಬಾರಿಸಿದರು.[೬]
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ UsainBolt.com Archived 2011-09-02 ವೇಬ್ಯಾಕ್ ಮೆಷಿನ್ ನಲ್ಲಿ., profile page. Retrieved 6 September 2011
- ↑ Usain Bolt beats Gay and sets new Record – from Universal Sports on YouTube
- ↑ New World Best over 150m for Usain Bolt from Universal Sports on YouTube
- ↑ New World Record over 200m for Usain Bolt – from Universal Sports on YouTube
- ↑ "15TH IAAF WORLD CHAMPIONSHIPS, 100 METRES MEN, BEIJING (NATIONAL STADIUM), PR OF CHINA 22 AUG 2015-30 AUG 2015". Archived from the original on 23 ಆಗಸ್ಟ್ 2015. Retrieved 28 ಆಗಸ್ಟ್ 2015.
- ↑ "Usain Bolt beats Justin Gatlin by one hundredth of a second in 100m World Championship final The Telegraph, Friday 28 August 2015". Archived from the original on 23 ಆಗಸ್ಟ್ 2015. Retrieved 28 ಆಗಸ್ಟ್ 2015.