೨೦೦೮ ಒಲಂಪಿಕ್ ಕ್ರೀಡಾಕೂಟ
(೨೦೦೮ರ ಬೀಜಿಂಗ್ ಒಲಂಪಿಕ್ಸ್ ಇಂದ ಪುನರ್ನಿರ್ದೇಶಿತ)
೨೦೦೮ರ ಒಲಂಪಿಕ್ಸ್ ಕ್ರೀಡಾಕೂಟವು ಚೀನಿ ಜನರ ಗಣರಾಜ್ಯದ ರಾಜಧಾನಿ ಬೈಜಿಂಗ್ನಲ್ಲಿ ಆಗಸ್ಟ್ ೮, ೨೦೦೮ರಿಂದ ಆಗಸ್ಟ್ ೨೪, ೨೦೦೮ರವರೆ ನಡೆದ ೨೯ನೇ ಒಲಂಪಿಕ್ ಕ್ರೀಡಾಕೂಟ. ಆತಿಥೇಯ ರಾಷ್ಟ್ರ ಚೀನಾ ಪದಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯಿತು.
ಮುಖ್ಯಾಂಶಗಳು
ಬದಲಾಯಿಸಿ- ೦೮-೦೮-೨೦೦೮ರಂದು ಉದ್ಘಾಟನೆ.
- ಇದು ೨೯ನೇಯ ಒಲಿಂಪಿಕ್ ಕ್ರೀಡಾಕೂಟ.
- ಚೈನಾ ದೇಶದ ಅಧ್ಯಕ್ಷ ಹು ಜಿಂಟಾವೋರಿಂದ ಉದ್ಘಾಟನೆ.
- ಭಾಗವಹಿಸುವ ರಾಷ್ಟ್ರಗಳು : ೨೦೫
- ಕ್ರೀಡಾಕೂಟವನ್ನು ನಡೆಸುತ್ತಿರುವ ನಗರ: ಬೀಜಿಂಗ್, ಚೈನಾ
- ಉದ್ಘಾಟನಾ ಸಮಾರಂಭ ನಡೆಯುವ ಸ್ಥಳ್: ಬೀಜಿಂಗ್ ರಾಷ್ಟ್ರೀಯ ಕ್ರೀಡಾಂಗಣ(ಬರ್ಡ್ಸ್ ನೆಸ್ಟ್)
- ಕ್ರೀಡಾಕೂಟದ ಕೊನೆಯ ದಿನ: ಅಗಸ್ಟ್ ೨೪, ೨೦೦೮
- ಉದ್ಘಾಟನೆಯ ಸಮಯ: ರಾತ್ರಿ ೮ ಘಂಟೆ, ೮ ನಿಮಿಷ, ೮ ಸೆಕೆಂದು (ಚೈನಾ ಸಮಯ)
- ಒಟ್ಟು ಕ್ರೀಡೆಗಳು: ೨೮
- ೨೮ ಕ್ರೀಡೆಗಳಲ್ಲಿ ಒಟ್ಟು ೩೦೨ ವಿವಿಧ ಸ್ಪರ್ಧೆಗಳು.
- ಭಾಗವಹಿಸುವ ಒಟ್ಟು ಕ್ರೀಡಾಳುಗಳು: ೧೧,೦೨೮
- ಕ್ರೀಡಾಕೂಟದ ಧ್ಯೇಯ ವಾಕ್ಯ: ಒಂದೇ ಜಗತ್ತು, ಒಂದು ಕನಸು.
- ಉದ್ಘಾಟನಾ ಸಮರಂಭ ವೀಕ್ಷಿಸಿದ ಗಣ್ಯರು: ಅಮೇರಿಕ ಅಧ್ಯಕ್ಷ ಜಾರ್ಜ್ ಬುಷ್, ರಷಿಯದ ಪ್ರಧಾನಿ ಪುಟಿನ್, ಫ್ರಾನ್ಸನ ಅಧ್ಯಕ್ಷ ಸರ್ಕೊಜಿ, ಬ್ರಾಜಿಲ್ ಅಧ್ಯಕ್ಷ ಲುಲಾ ಡಿ ಸಿಲ್ವಾ.
- ಉದ್ಘಾಟನಾ ಸಮರಂಭದಲ್ಲಿ ಭಾಗವಹಿಸಿದ ನೃತ್ಯಪಟುಗಳು: ೧೦,೦೦೦
- ಸಂಪೂರ್ಣ ಕ್ರೀಡಕೂಟದ ಅಂದಾಜು ವೆಚ್ಚ: ೪೦ ಶತಕೋಟಿ ಡಾಲರಗಳು
- ಚೆಕ್ ಗಣರಾಜ್ಯದ ಕ್ಯಾಟರೀನಾ ಎಮ್ಮೊನ್ಸಗೆ ಮೊದಲ ಚಿನ್ನ.