ಏಷ್ಯಾದಲ್ಲಿ ಸಂಘಟಿತ ಹಾಕಿ ಚಟುವಟಿಕೆ 50ರ ದಶಕದಲ್ಲಿ ಆರಂಭವಾಯಿತು. 1958ರಷ್ಟು ಹಿಂದೆಯೇ ಏಷ್ಯಾ ಹಾಕಿ ಫೆಡರೇಷನ್ ಹುಟ ಪಡೆಯಿತು. ಆಗ ಭಾರತ, ಪಾಕಿಸ್ತಾನ, ಮಲೇಷ್ಯಾ, ಜಪಾನ್ ಮತ್ತು ಕೊರಿಯಾ ತಂಡಗಳು ಸದಸ್ಯ ರಾಷ್ಟ್ರಗಳಾಗಿದ್ದವು. ಏಷ್ಯನ್ ಕ್ರೀಡಾಕೂಟದಲ್ಲಿ ಹಾಕಿ ಹೆಚ್ಚು ಗಮನ ಸೆಳೆಯಿತು. 1971ರಲ್ಲಿ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿಯೂ ಹಾಕಿ ಸೇರ್ಪಡೆಗೊಂಡಿತು. ಇದೀಗ ಏಷ್ಯಾ ಹಾಕಿ ಫೆಡರೇಷನ್‌ನಲ್ಲಿ 31 ಸದಸ್ಯ ದೇಶಗಳಿವೆ. ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಣಾಹಣಿ 2011ರಲ್ಲಿ ಶುರುವಾಯಿತು. ಮೊದಲ ಸಲ ಭಾರತ ತಂಡ ಪಾಕಿಸ್ತಾನ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದರೆ, ನಂತರದ ಎರಡು ವರ್ಷ ಪಾಕಿಸ್ತಾನ ತಂಡವೇ ಗೆದ್ದಿತ್ತು. ಇದೀಗ ಭಾರತ ಮತ್ತೆ ಪಾಕ್ ತಂಡವನ್ನೇ ಮಣಿಸಿ ಪ್ರಶಸ್ತಿ ಎತ್ತಿಕೊಳ್ಳುವ ಮೂಲಕ ಏಷ್ಯಾ ಹಾಕಿಯಲ್ಲಿ ಪ್ರಬಲ ಶಕ್ತಿ ಎಂಬುದನ್ನು ಸಾಬೀತುಪಡಿಸಿದೆ.
2012ರ ಒಲಿಂಪಿಕ್ಸ್‌ನಲ್ಲಿ 12ನೇ ಸ್ಥಾನಕ್ಕೆ ಇಳಿದಿದ್ದ ಭಾರತ ಅದರ ಮರುವರ್ಷ ಏಷ್ಯಾ ಚಾಂಪಿಯನ್ಸ್ ಟ್ರೋಫಿ ಕೂಟದಲ್ಲಿ 5ನೇ ಸ್ಥಾನಕ್ಕಿಳಿದಿತ್ತು. ಈ ಆಘಾತದಿಂದ ಚೇತರಿಸಿಕೊಳ್ಳುವ ದಿಸೆಯಲ್ಲಿ ಭಾರತ ತಂಡಕ್ಕೆ ಕೋಚ್ ರೋಲಂಟ್ ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ನೀಡಿದ್ದಾರೆ. ಹಿಂದೆ ನೆದರ್‌ಲೆಂಡ್ಸ್ ತಂಡ ಒಲಿಂಪಿಕ್ಸ್ ಮತ್ತು ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ನಿಟ್ಟಿನಲ್ಲಿ ತರಬೇತಿ ನೀಡಿದ್ದ ರೋಲಂಟ್ ಒಬ್ಬ ಯಶಸ್ವಿ ಕೋಚ್. ಇವರು ಭಾರತ ಹಾಕಿ ತಂಡಕ್ಕೆ ಕೋಚ್ ಆಗಿ ಬಂದ ಮೇಲೆ ಪ್ರತಿಯೊಬ್ಬ ಆಟಗಾರನ ಶಕ್ತಿ ಮತ್ತು ದೌರ್ಬಲ್ಯಗಳನ್ನು ಕಂಡುಕೊಂಡರು. ಅವರೆಲ್ಲರಿಗೂ ತಮ್ಮದೇ ಶೈಲಿಯಲ್ಲಿ ತರಬೇತಿ ನೀಡಿದರು.
ಆಕ್ರಮಣಕಾರಿ ತಂತ್ರ, ಅತಿ ಚುರುಕಿನ ಪ್ರತಿದಾಳಿ ನಡೆಸುವ ವಿಭಿನ್ನ ತಂತ್ರಗಾರಿಕೆ, ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಚೆಂಡನ್ನು ಗುರಿ ಮುಟ್ಟಿಸುವಲ್ಲಿ ನಿರ್ದಿಷ್ಟ ಆಟಗಾರರಿಗೆ ವಿಶೇಷ ತರಬೇತಿ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಇವು ಯಶಸ್ವಿಯಾಗಿವೆ. ಈ ತಂಡದಲ್ಲಿ ರೂಪಿಂದರ್ ಸಿಂಗ್, ಕರ್ನಾಟಕದ ನಿಕಿನ್ ತಿಮ್ಮಯ್ಯ ಅವರಂತಹ ಆಟಗಾರರು ಗಮನ ಸೆಳೆದಿದ್ದಾರೆ. ಕೆಲವು ಟೂರ್ನಿಗಳಲ್ಲಿ ಹೊಸ ಪ್ರತಿಭೆಗಳನ್ನು ಕಣಕ್ಕಿಳಿಸುವ ರೋಲಂಟ್ ಪ್ರಯೋಗ ಯಶಸ್ವಿ ಎನಿಸಿದೆ.[೧]
ಬರದಿಂದ ತತ್ತರಿಸಿರುವ ಮಹಾರಾಷ್ಟ್ರಕ್ಕೆ ಹಾಕಿ ಇಂಡಿಯಾ ರೂ.10 ಲಕ್ಷ ನೆರವು ನೀಡಿದೆ. ‘ಮಹಾರಾಷ್ಟ್ರದ ಜನ ಸಂಕಷ್ಟ ದಲ್ಲಿದ್ದಾರೆ. ಅವರಿಗೆ ನೆರವಾಗಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ. ಆದ್ದರಿಂದ ಅಲ್ಲಿನ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹ 10 ಲಕ್ಷ ನೀಡಲಾಗಿದೆ.[೨]
ಮಲೇಷ್ಯಾದ ಇಪೊದಲ್ಲಿ ನಡೆದ 25ನೇ ವರ್ಷದ ಅಜ್ಲಾನ್ ಷಾ ಕಪ್ ಹಾಕಿ ಟೂರ್ನಿಯಲ್ಲಿ ಮಂಗಳವಾರ ಪಾಕಿಸ್ತಾನ ತಂಡವನ್ನು 5–1 ಗೋಲುಗಳಿಂದ ಮಣಿಸಿದೆ.ಈ ಗೆಲುವಿನಲ್ಲಿ ಕರ್ನಾಟಕದ ಎಸ್.ವಿ. ಸುನಿಲ್ ಪ್ರಮುಖಪಾತ್ರ ವಹಿಸಿದರು.ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಭಾರತ ತಂಡ ಪಡೆದ ಮೂರನೇ ಗೆಲುವು ಇದಾಗಿದೆ. ಹಿಂದಿನ ಪಂದ್ಯಗಳಲ್ಲಿ ಜಪಾನ್ ಮತ್ತು ಕೆನಡಾ ಎದುರು ಗೆಲುವು ಸಾಧಿಸಿದ್ದ ಸರ್ದಾರ್ ಸಿಂಗ್ ನಾಯಕತ್ವದ ತಂಡ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ಈ ಪಂದ್ಯಕ್ಕೂ ಮೊದಲು ಭಾರತ ಒಟ್ಟು ಆರು ಪಾಯಿಂಟ್ಸ್‌ನಿಂದ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನ ಹೊಂದಿತ್ತು. ಈಗ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದೆಯಲ್ಲದೇ, ಪದಕದ ಪಡೆಯುವ ಅವಕಾಶವಿದೆ.ಭಾರತ ತಂಡ ಇನ್ನುಳಿದ ಎರಡು ಲೀಗ್ ಪಂದ್ಯಗಳಲ್ಲಿ ಹಾಲಿ ಚಾಂಪಿಯನ್ ನ್ಯೂಜಿಲೆಂಡ್ ಮತ್ತು ಮಲೇಷ್ಯಾ ಎದುರು ಪೈಪೋಟಿ ನಡೆಸಲಿದೆ. ಭಾರತದ ಬಳಿ ಈಗ ಒಟ್ಟು ಒಂಬತ್ತು ಪಾಯಿಂಟ್ಸ್ ಇವೆ.
ಮನಪ್ರೀತ್ ನೀಡಿದ ಪಾಸ್‌ನ ನೆರವು ಪಡೆದ ಕರ್ನಾಟಕದ ಆಟಗಾರ 25 ಯಾರ್ಡ್ಸ್ ದೂರದಿಂದ ಹತ್ತನೇ ನಿಮಿಷದಲ್ಲಿ ಗೋಲು ಗಳಿಸಿದರು. ಇದು ಪಾಕಿಸ್ತಾನ ತಂಡದ ಎದುರು ಭಾರತ ಪಡೆದ ಹೆಚ್ಚು ಗೋಲುಗಳ ಅಂತರದ ಜಯ ಇದಾಗಿದೆ. 2010ರಲ್ಲಿ ನವದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ 7–4ಗೋಲುಗಳಿಂದ ಜಯ ಸಾಧಿಸಿದ್ದು ಹಿಂದಿನ ಉತ್ತಮ ಸಾಧನೆಯಾಗಿತ್ತು. ದಿನದ ಇನ್ನೊಂದು ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 1–0 ಗೋಲಿನಿಂದ ಮಣಿಸಿದ ಆಸ್ಟ್ರೇಲಿಯಾ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು.[೩]
16-4-2016:ಇಫೊ-ಮಲೇಷ್ಯಾದಲ್ಲಿ ಲೀಗ್ ಹಂತದಲ್ಲಿ ಅಪೂರ್ವ ಪ್ರದರ್ಶನ ನೀಡಿದ್ದ ಭಾರತ ತಂಡ 25ನೇ ವರ್ಷದ ಅಜ್ಲಾನ್ ಷಾ ಕಪ್ ಹಾಕಿ ಟೂರ್ನಿಯ ಫೈನಲ್‌ನಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಎದುರು ಸೋಲು ಅನುಭವಿಸಿತು. 2010ರ ಟೂರ್ನಿಯಲ್ಲಿ ಕೊನೆಯ ಬಾರಿಗೆ ಪ್ರಶಸ್ತಿ ಜಯಿಸಿದ್ದ ಸರ್ದಾರ್ ಸಿಂಗ್ ನಾಯಕತ್ವದ ಭಾರತ ಮಹತ್ವದ ಪಂದ್ಯದಲ್ಲಿ 0–4 ಗೋಲುಗಳಿಂದಾಗಿ ಸೋಲು ಕಂಡಿತು.
ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿನ ತಂಡದ ಕೋಚ್ ರೋಲಂಟ್ ಓಲ್ಟಮಸ್ ‘ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ಉದ್ದೇಶದಿಂದಾಗಿ ನಾಯಕತ್ವ ದಲ್ಲಿ ಬದಲಾವಣೆ ಮಾಡಲಾಗಿದೆ. ಇದರಿಂದ ಹೊಸಬರಿಗೂ ಅವಕಾಶ ಸಿಕ್ಕಂತಾಗುತ್ತದೆ' ಎಂದರು.
ಒಲಿಂಪಿಕ್ಸ್ ವೇಳೆಗೆ ತಂಡದ ಯುವಶಕ್ತಿಯನ್ನು ಬಲಿಷ್ಠ ಗೊಳಿಸುವ ಗುರಿ. ನಾಯಕ ಸರ್ದಾರ್ ಸಿಂಗ್‌ಗೆ ವಿಶ್ರಾಂತಿ ನೀಡುವ ಬಗ್ಗೆ ಹಾಕಿ ಇಂಡಿಯಾ ಆಯ್ಕೆ ಸಮಿತಿ ನಿರ್ಧಾರ.ರಿಯೊ ಒಲಿಂಪಿಕ್ಸ್‌ಗೆ ಸಜ್ಜಾಗುವ ನಿಟ್ಟಿನಲ್ಲಿ ಮಹತ್ವದೆನಿಸಿರುವ ಎಫ್‌ಐಎಚ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಹಾಕಿ ಇಂಡಿಯಾ ಕೆಲ ಅನು ಭವಿ ಆಟಗಾರರಿಗೆ ವಿಶ್ರಾಂತಿ ಕೊಟ್ಟಿದೆ. ರಾಜ್ಯದ ನಾಲ್ವರು ಸ್ಥಾನ ಪಡೆದಿದ್ದಾರೆ.
ಸರ್ದಾರ್ ಸಿಂಗ್ ಬದಲಾಗಿ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ತಂಡವನ್ನು ಮುನ್ನಡೆಸಲಿದ್ದಾರೆ. ರಾಜ್ಯದ ಎಸ್.ವಿ. ಸುನಿಲ್ ಉಪನಾಯಕ ರಾಗಿದ್ದಾರೆ.ಡ್ರ್ಯಾಗ್‌ಫ್ಲಿಕ್ಕರ್ ಪರಿಣತ ವಿ.ಆರ್. ರಘುನಾಥ್ ಮತ್ತು ನಿಕಿನ್ ತಿಮ್ಮಯ್ಯ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಜೂನ್ 10ರಿಂದ 17ರ ವರೆಗೆ ಲಂಡನ್‌ನಲ್ಲಿ ನಡೆಯಲಿದೆ.
ಕನ್ನಡಿಗ ಎಸ್.ವಿ ಸುನೀಲ್ ಅವರಿಗೆ ತಂಡದ ಉಪನಾಯಕನ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದು ಭಾರತ ಹಾಕಿ ತಂಡದ ಅಧ್ಯಕ್ಷ ನರೇಂದ್ರ ಬಾತ್ರಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಭಾರತ ಜೂನಿಯರ್ ಹಾಕಿ ತಂಡದ ಆಟಗಾರರಾದ ಹರ್ಜಿತ್ ಸಿಂಗ್, ಗೋಲ್ ಕೀಪರ್ ವಿಕಾಸ್ ದಾಹಿಯಾ ಅವರಿಗೆ ತಂಡದಲ್ಲಿ ಆಡಲು ಅವಕಾಶ ನೀಡಲಾಗಿದೆ. ಕನ್ನಡಿಗ ವಿ ಆರ್ ರಘುನಾಥ್, ಕೋಥಾಜಿ ಸಿಂಗ್, ಕನ್ನಡಿಗ ಎಸ್.ಕೆ ಉತ್ತಪ್ಪ, ಆಕಾಶ್ ದೀಪ್ ಸಿಂಗ್, ತಂಡದಲ್ಲಿ ಸ್ಥಾನ ಪಡೆದುಕೊಂಡ ಹೊಸ ಮುಖಗಳಾಗಿವೆ[೪]
ಲಂಡನ್`ನಲ್ಲಿ ನೆಡೆಯುತ್ತಿರವ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ, ಆಸ್ಟ್ರೇಲಿಯಾ ತಂಡದ ವಿರುದ್ಧ 2- 4 ಅಂತರದಲ್ಲಿ ಸೋಲು ಅನುಭವಿಸಿದ್ದರೂ, ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆದಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ 36 ವರ್ಷಗಳ ಬಳಿಕ ಫೈನಲ್‍ಗೇರುವ ಅವಕಾಶ ಗಿಟ್ಟಿಸಿಕೊಂಡಿದೆ. 5 ಅಂಕಗಳನ್ನು ಗಳಿಸಿದ್ದ ಬ್ರಿಟನ್ಗ್ರೇಟ್ ಬ್ರಿಟನ್, ಬೆಲ್ಜಿಯಂ ವಿರುದ್ಧ 3 -3 ಡ್ರಾ ಸಾಧಿಸಿದ್ದರಿಂದ ಭಾರತಕ್ಕೆ ಫೈನಲ್ ಪ್ರವೇಶಿಸುವ ಅರ್ಹತೆ ಒಲಿದುಬಂತು. 7 ಅಂಕಗಳನ್ನು ಗಳಿಸಿರುವ ಭಾರತ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ.
[೬]
ರಿಯೊ ಒಲಿಂಪಿಕ್ಸ್ ಸಿದ್ಧತೆಗೆ ವೇದಿಕೆ ಎನಿಸಿದ್ದ ಸ್ಪೇನ್ ಪ್ರವಾಸದ ಎರಡನೇ ಅಭ್ಯಾಸ ಪಂದ್ಯದಲ್ಲೂ ಭಾರತ ತಂಡ 28-7-2016 ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಪಿ.ಆರ್. ಶ್ರೀಜೇಶ್ ಬಳಗ 2–3 ಗೋಲುಗಳಿಂದ ಆತಿಥೇಯ ಸ್ಪೇನ್ ತಂಡದ ಎದುರು ಸೋಲು ಅನುಭವಿಸಿದೆ. ವಿಶ್ವ ಕ್ರಮಾಂಕಪಟ್ಟಿಯಲ್ಲಿ ಐದನೇ ಸ್ಥಾನ ಹೊಂದಿರುವ ಪ್ರವಾಸಿ(ಭಾರತ) ಬಳಗ ಆರಂಭಿಕ ಪಂದ್ಯದಲ್ಲಿ 1–4 ಗೋಲುಗಳಿಂದ ವಿಶ್ವ ರ್‍ಯಾಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿರುವ ಸ್ಪೇನ್‌ಗೆ ಸೋತಿತ್ತು.
ನಾಲ್ಕನೇ ವರ್ಷದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ 2016
20-10-2016 ಗುರುವಾರ ನಡೆದ ಪಂದ್ಯದಲ್ಲಿ ಭಾರತ ತಂಡ 10–2 ಗೋಲುಗಳಿಂದ ಜಪಾನ್ ತಂಡವನ್ನು ಸೋಲಿಸಿದೆ.ಮಲೇಷ್ಯಾ 4–2 ಗೋಲುಗಳಿಂದ ಪಾಕಿ ಸ್ತಾನವನ್ನು ಮಣಿಸಿ ಮೂರು ಪಾಯಿಂಟ್‌ಗಳನ್ನು ಪಡೆಯಿತು. ಭಾರ ತದ ಖಾತೆಯಲ್ಲಿಯೂ ಇಷ್ಟೇ ಪಾಯಿಂಟ್ಸ್ ಇವೆ. ಆದರೆ ಗೋಲು ಗಳಿಕೆಯ ಆಧಾರದ ಮೇಲೆ ಭಾರತ ಮೊದಲ ಸ್ಥಾನದಲ್ಲಿದೆ. ಈ ಟೂರ್ನಿಯಲ್ಲಿ ಭಾರತ, ಪಾಕಿ ಸ್ತಾನ, ಚೀನಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ಮಲೇಷ್ಯಾ ತಂಡಗಳು ಪಾಲ್ಗೊಂಡಿವೆ. ಇದೇ ತಿಂಗಳು 30 ರಂದು ಫೈನಲ್ ಆಯೋಜನೆಯಾಗಿದೆ.
ಭಾರತ ತಂಡದ ಪರವಾಗಿ ಪರ್ದೀಪ್ ಮೋರ್, ರೂಪಿಂದರ್ ಪಾಲ್ ಸಿಂಗ್ ಮತ್ತು ರಮಣ್ ದೀಪ್ ಸಿಂಗ್ ಗೋಲು ದಾಖಲಿಸಿದ್ದು, ಪಾಕಿಸ್ತಾನ ತಂಡದಲ್ಲಿ ಮುಹಮ್ಮದ್ ರಿಜ್ವಾನ್, ಮುಹಮ್ಮದ್ ಇರ್ಫಾನ್ ಜ್ಯೂನಿಯರ್ ಗೋಲು ಹೊಡೆದಿದ್ದಾರೆ.ಒಂದು ಹಂತದಲ್ಲಿ ಪಾಕಿಸ್ತಾನ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದ್ದರೂ, ನಂತರದ ಎರಡೇ ನಿಮಿಷಗಳಲ್ಲಿ 2 ಗೋಲುಗಳನ್ನು ಬಾರಿಸಿ ಭಾರತ ತಂಡ ಗೆಲುವು ತನ್ನದಾಗಿಸಿಕೊಂಡಿತು.[೭]
ಟೀಮು: 7 ಎಂಎಫ್ ಮನ್ಪ್ರೀತ್ ಸಿಂಗ್; 8 ಎಂಎಫ್ ಸರ್ದಾರ್ ಸಿಂಗ್; 15 ಎಂಎಫ್ ಎಸ್ ಕೆ ಉತ್ತಪ್ಪ; 17 ಎಂಎಫ್ ಡ್ಯಾನಿಶ್ Mujtaba; 22 ಎಂಎಫ್ ದೇವಿಂದರ್ ವಾಲ್ಮೀಕಿ; 24 FW ಎಸ್ ವಿ ಸುನಿಲ್ (ವಿಸಿ); 27 FW ಆಕಾಶ್ ದೀಪ್ ಸಿಂಗ್; 29 FW ಚಿಂಗ್ಲೆನ್ಸನ (Chinglensana) ಸಿಂಗ್; 31 FW ರಾಮದೀಪ್ ಸಿಂಗ್; 32 FW ನಿಕಿನ್ ತಿಮ್ಮಯ್ಯ.
2016 ರ ನಾಲ್ಕನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ:
ಪಂದ್ಯಾವಳಿಯಲ್ಲಿ ಆಡುವ ತಂಡಗಳು:
ಭಾರತ; ಜಪಾನ್; ದಕ್ಷಿಣ ಕೊರಿಯ; ಮಲೇಷ್ಯಾ; ಪಾಕಿಸ್ತಾನ; ಚೀನಾ.20 October 2016 ರಿಂದ 27 October 2016 ವರೆಗೆ;
ಮಲೇಷ್ಯಾದ ಕೌಂಟಾನ್,ನಲ್ಲಿ 23 ಅಕ್ಟೋ.2016 -ಭಾನುವಾರ ನಡೆದ ನಾಲ್ಕನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 3-2 ಅಂತರದಲ್ಲಿ ಗೆಲುವು ಸಾಧಿಸಿದೆ. ಈಗಾಗಲೆ ಜಪಾನ್ ವಿರುದ್ಧ 10–2ರ ಜಯ ಗಳೀಸಿದ್ದು, ದಕ್ಷಿಣ ಕೊರಿಯಾಜೊತೆ 1–1 ರ ಸಮ ಮಾಡಿಕೊಂಡು, 7 ಶ್ರೇಯಾಂಕ ಪಡೆದು ಎರಡನೇ ಸ್ಥಾನದಲ್ಲಿದೆ. ಮಲೇಶಿಯಾ 9 ಅಂಕ ಗಳಿಸಿ ಪ್ರಥಮ ಸ್ಥಾದಲ್ಲಿದೆ. ಪಾಕಿಸ್ತಾನ,ಜಪಾನ್,ಚೀನಾಗಳನ್ನು ಜಯಿಸಿದೆ.[೮]
ಕೌಂಟಾನ್ ನಲ್ಲಿ ನಡೆಯುತ್ತಿರುವ ಪುರುಷರ ನಾಲ್ಕನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ಚೀನಾ ವಿರುದ್ಧ 9–0 ಗೋಲುಗಳಿಂದ ಗೆಲುವು ಸಾಧಿಸಿ ಸೆಮಿಫೈನಲ್ ಗೆ ಪ್ರವೇಶಿಸಿದೆ.[೯]
ಭಾರತ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಫೈನಲ್ ತಲುಪಲು ಶೂಟೌಟ್ನಲ್ಲಿ ಕೊರಿಯಾವನ್ನು 5-4 ಗೋಲುಗಳಿಂದ ಸೋಲಿಸಿತು.ಕ್ಯಾಪ್ಟನ್ ಮತ್ತು ಗೋಲ್ಕೀಪರ್ ಪಿಆರ್ ಶ್ರೀಜೇಶ್ ಒಂದು ಅದ್ಭುತ ಡಾಯಿಇಯೊಲ್ (Daeyeol) ಲೀ ವಿರುದ್ಧ ಐದನೇ ಪ್ರಯತ್ನದಲ್ಲಿ ಭಾರತವನ್ನು ಉಳಿಸಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಫೈನಲ್ ತಲುಪಲು ಶೂಟೌಟ್ನಲ್ಲಿ ದಕ್ಷಿಣ ಕೊರಿಯಾ 5-4 ಸೋಲುವಂತೆ ಮಾಡಿದರು.[೧೦]
ಮಲೇಷ್ಯಾದ ಕೌಂಟಾನ್‍ನಲ್ಲಿ ಭಾರತ ಹಾಕಿ ತಂಡವು ಭಾನುವಾರ ನಡೆದ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡ 3–2 ಗೋಲುಗಳಿಂದ ಪಾಕಿಸ್ತಾನ ವಿರುದ್ಧ ಗೆದ್ದಿತು.
ವಿವರ:
ರೂಪಿಂದರ್ ಪಾಲ್ ಸಿಂಗ್ (18ನೇ ನಿಮಿಷ), ಯೂಸುಫ್ ಅಫ್ಫಾನ್ (23ನಿ) ಮತ್ತು ನಿಕಿನ್ ತಿಮ್ಮಯ್ಯ (51ನೇ ನಿ) ಗೋಲು ಗಳಿಸಿದರು. ಪಾಕ್ ತಂಡದ ಮಹಮ್ಮದ್ ಅಲಿ ಬಿಲಾಲ್ (26ನೇ ನಿ) ಮತ್ತು ಅಲಿ ಶಾನ್ (38ನೇ ನಿ) ಗೋಲು ಹೊಡೆದರು.
2014ರಲ್ಲಿ ಇಂಚನ್‌ನಲ್ಲಿ ನಡೆದಿದ್ದ ಟೂರ್ನಿಯ ಫೈನಲ್‌ನಲ್ಲಿಯೂ ಭಾರತ ತಂಡವು ಪಾಕ್ ವಿರುದ್ಧ ಗೆದ್ದಿತ್ತು. 2011ರಲ್ಲಿ ಮೊದಲ ಬಾರಿಗೆ ನಡೆದಿದ್ದ ಏಷ್ಯಾ ಕಪ್ ಟೂರ್ನಿಯ ಫೈನಲ್‌ನಲ್ಲಿಯೂ ಭಾರತ ತಂಡವು ಪಾಕ್ ವಿರುದ್ಧ ಗೆದ್ದಿತ್ತು. 2013ರ ಟೂರ್ನಿಯ ಫೈನಲ್‌ನಲ್ಲಿ ಜಪಾನ್ ವಿರುದ್ಧ ಗೆದ್ದಿದ್ದ ಪಾಕಿಸ್ತಾನವೂ ಪ್ರಶಸ್ತಿ ಪಡೆದಿತ್ತು. ಪಿ.ಆರ್. ಶ್ರೀಜೇಶ್ ನೇತೃತ್ವದ ಬಳಗವು ಆರಂಭದಿಂದಲೂ ಪಾಕ್ ತಂಡದ ಮೇಲೆ ಒತ್ತಡ ಹೇರಿತ್ತು.
18ನೇ ನಿಮಿಷದಲ್ಲಿ ಸಿಕ್ಕ ಎರಡನೇ ಪೆನಾಲ್ಟಿ ಅವಕಾಶವನ್ನು ಭಾರತ ಹಾಳು ಮಾಡಿಕೊಳ್ಳಲಿಲ್ಲ. ಡ್ರ್ಯಾಗ್ ಫ್ಲಿಕರ್ ರೂಪಿಂದರ್ ಪಾಲ್ ಸಿಂಗ್ ಅವರು ಗೋಲು ಹೊಡೆದರು. ಬರೋಬ್ಬರಿ ಐದು ನಿಮಿಷಗಳ ನಂತರ ರಮಣದೀಪ್ ಸಿಂಗ್ ಅವರು ಡಿಫ್ಲೆಕ್ಟ್ ಮಾಡಿದ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸಿದ ಯೂಸುಫ್ ಅಫ್ಪಾನ್ ಸಂಭ್ರಮಿಸಿದರು. ಇದರಿಂದ ಭಾರತವು 2–0 ಮುನ್ನಡೆ ಗಳಿಸಿತು.
ಆದರೆ, ಪಾಕ್ ತಂಡದ ಮಹಮ್ಮದ್ ಬಿಲಾಲ್ ತಿರುಗೇಟು ನೀಡಿದರು. 26ನೇ ನಿಮಿಷದಲ್ಲಿ ಭಾರತದ ರಕ್ಷಣಾ ಪಡೆಯ ಕಣ್ಣು ತಪ್ಪಿಸಿ ಗೋಲು ಹೊಡೆದರು. 38ನೇ ನಿಮಿಷದಲ್ಲಿ ಅಲಿ ಶಾನ್ ಮತ್ತೊಂದು ಗೋಲು ಗಳಿಸಿ ಗೋಲು ಸಂಖ್ಯೆಯನ್ನು ಸಮಗೊಳಿಸಿದರು.
ನಂತರ ಎರಡೂ ತಂಡಗಳ ಆಟಗಾರರ ನಡುವಣ ತೀವ್ರ ಹಣಾಹಣಿ ನಡೆಯಿತು. ಆದರೆ, ಕೊನೆಗೂ ನಿಕ್ಕಿನ್ ತಿಮ್ಮಯ್ಯ ಅವರ ಛಲ ಗೆದ್ದಿತು. 51ನೇ ನಿಮಿಷದಲ್ಲಿ ಅವರು ಪಾಕ್ ಗೋಲ್‌ಕೀಪರ್ ಫರೀದ್ ಅಹಮದ್ ಕಣ್ತಪ್ಪಿಸಿದರು. ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು. ಭಾರತ 3–2 ಗೋಲುಗಳಿಂದ ಪಾಕಿಸ್ತಾನ ವಿರುದ್ಧ ಗೆದ್ದಿತು.[೧೧]
ಮೆಲ್ಬರ್ನ್‌ನಲ್ಲಿ ನೆಡೆದ ಛಲದ ಹೋರಾಟದ ಹೊರತಾಗಿಯೂ ಭಾರತ ತಂಡ ಇಲ್ಲಿ ನಡೆಯುತ್ತಿರುವ ನಾಲ್ಕು ರಾಷ್ಟ್ರಗಳ ಹಾಕಿ ಸರಣಿಯಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಶರಣಾಗಿದೆ. ಶನಿವಾರ ನಡೆದ ತನ್ನ ಮೂರನೇ ಪಂದ್ಯದಲ್ಲಿ ಭಾರತ 2–3 ಗೋಲುಗಳಿಂದ ಕಿವೀಸ್ ನಾಡಿನ ತಂಡದ ವಿರುದ್ಧ ಸೋತಿತು. ಮೊದಲ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದ ರಘುನಾಥ್ ಪಡೆ ನಂತರದ ಹಣಾಹಣಿಯಲ್ಲಿ ಮಲೇಷ್ಯಾ ವಿರುದ್ಧ ಗೆದ್ದು ಕಳೆದುಕೊಂಡಿದ್ದ ವಿಶ್ವಾಸ ಮರಳಿ ಪಡೆದಿತ್ತು.ಭಾರತ ಮಲೇಷ್ಯಾವನ್ನು 4-1 ಸೋಲಿಸಿದ್ದರಿಂದ ನಾಲ್ಕು ರಾಷ್ಟ್ರಗಳ ಹಾಕಿ ಪಂದ್ಯಾವಳಿಯಲ್ಲಿ ಕಂಚಿನ ಪದಕ ಗೆಲ್ಲಲುಸಾಧ್ಯವಾಗಿದೆ.[೧೨]
30 Nov, 2016
ಆಸ್ಟ್ರೇಲಿಯಾ ವಿರುದ್ಧದ ಎರಡು ಪಂದ್ಯಗಳ ಸರಣಿಯಲ್ಲಿ ಭಾರತ ತಂಡ ಮೊದಲ ಪಂದ್ಯವನ್ನು 3–2 ಗೋಲುಗಳಲ್ಲಿ ಗೆದ್ದುಕೊಂಡಿದೆ.ಮೆಲ್ಬರ್ನ್ : ಯುವ ಆಟಗಾರ ಅಫನ್ ಯೂಸುಫ್ ಅವರ ಎರಡು ಗೋಲುಗಳ ನೆರವಿನಿಂದ ಭಾರತ ಪುರುಷರ ಹಾಕಿ ತಂಡ ಮಂಗಳವಾರ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಮಣಿಸಿದೆ.[೧೩]
ಭಾರತದ ಹರ್ಜೀತ್ ಸಿಂಗ್ ಬಳಗ 5–3 ಗೋಲುಗಳಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದೆ.ಕ್ವಾರ್ಟರ್‌ಫೈನಲ್ ಪ್ರವೇಶಕ್ಕೆ ಅವಕಾಶ.
‘ಡಿ’ ಗುಂಪಿನ ಮೊದಲ ಪಂದ್ಯದಲ್ಲಿ ಭಾರತ 4–0 ಗೋಲುಗಳಲ್ಲಿ ಕೆನಡಾ ಎದುರು ಜಯಗಳಿಸಿತ್ತು.
‘ಡಿ’ ಗುಂಪಿನಲ್ಲಿ ಭಾರತ ತಂಡ ಆರು ಪಾಯಿಂಟ್ಸ್‌ಗಳಿಂದ ಅಗ್ರಸ್ಥಾನದಲ್ಲಿದೆ. ಡಿಸೆಂಬರ್ 12ರಂದು ದಕ್ಷಿಣ ಆಫ್ರಿಕಾ ಎದುರು ಆಡಲಿದೆ.
ಇಂಗ್ಲೆಂಡ್ ತಂಡ ಮೂರು ಪಾಯಿಂಟ್ಸ್‌ಗಳಿಂದ ಎರಡನೇ ಸ್ಥಾನದಲ್ಲಿದೆ.
ಭಾರತ ಡಿಸೆಂಬರ್ 12ರಂದು ದಕ್ಷಿಣ ಆಫ್ರಿಕಾ ಎದುರು ಆಡಲಿದೆ.[೧೪]
ಲಖನೌನಲ್ಲಿ 18 Dec, 2016 ಭಾನುವಾರ ನಡೆದ ಜೂನಿಯರ್ ವಿಶ್ವಕಪ್ ಹಾಕಿ ಫೈನಲ್‌ನ ರೋಚಕ ಪಂದ್ಯದಲ್ಲಿ ಭಾರತ ತಂಡ 2–1 ಗೋಲುಗಳಿಂದ ಬೆಲ್ಜಿಯಂ ತಂಡವನ್ನು ಪೈನಲ್‌ನ ಹಣಾಹಣಿಯಲ್ಲಿ ಸೋಲಿಸಿತು. 15 ವರ್ಷಗಳ ಬಳಿಕ ಭಾರತ ತಂಡ ಟ್ರೋಫಿಯನ್ನು ಎತ್ತಿ ಹಿಡಿದು ಸಾಧನೆ ತೋರಿತು. ಭಾರತ ತಂಡ ಬೆಲ್ಜಿಯಂ ವಿರುದ್ಧ ಗೆಲುವು ಸಾಧಿಸಿ, ಟ್ರೋಫಿಯನ್ನು ಎತ್ತಿ ಹಿಡಿಯಿತು. ಭಾರತ ಜೂನಿಯರ್ ವಿಶ್ವಕಪ್ ಜಯಿಸಿದ್ದು ಇದು ಎರಡನೇ ಬಾರಿ. ಭಾರತ ತಂಡವು 2001ರಲ್ಲಿ ಹೋಬರ್ಟ್‌ನಲ್ಲಿ ವಿಶ್ವ ಚಾಂಪಿಯನ್ ಆಗಿತ್ತು.
ಗುರ್ಜಂತ್ ಸಿಂಗ್ ಮತ್ತು ಸಿಮ್ರನ್‌ಜೀತ್ ಅವರು ಹೊಡೆದ ಗೋಲುಗಳ ಬಲದಿಂದ ಭಾರತ ತಂಡವು 2–1 ಗೋಲುಗಳಿಂದ ಬೆಲ್ಜಿಯಂ ವಿರುದ್ಧ ಗೆದ್ದು ಐತಿಹಾಸಿಕ ಸಾಧನೆ ಮಾಡಿತು.
ಜರ್ಮನಿಗೆ ಕಂಚು: ಆರು ಬಾರಿಯ ಚಾಂಪಿಯನ್ ಜರ್ಮನಿ ತಂಡವು ಇಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಜರ್ಮನಿ ತಂಡವು 3–0 ಗೋಲುಗಳಿಂದ ಆಸ್ಟ್ರೇಲಿಯಾ ವಿರುದ್ಧ ಜಯಿಸಿತು.
ಭಾರತ ಜೂನಿಯರ್ ಹಾಕಿ ತಂಡದ ನಾಯಕ ಹರ್ಜೀತ್ ಸಿಂಗ್; ತಂಡದ ಕೋಚ್ ಹರೇಂದರ್ ಸಿಂಗ್.
ಟೂರ್ನಿಯು ಏಪ್ರಿಲ್ 29ರಂದು ಆರಂಭವಾಗಲಿದೆ. ಮನಪ್ರೀತ್ ಸಿಂಗ್ ಅವರಿಗೆ ಉಪನಾಯಕ ಸ್ಥಾನದ ಜವಾಬ್ದಾರಿ ಲಭಿಸಿದೆ. ಪಿ.ಆರ್. ಶ್ರೀಜೇಶ್ (ನಾಯಕ). ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಚಾಂಪಿ ಯನ್ ಆದ ಭಾರತ ತಂಡದಲ್ಲಿದ್ದ ಡಿಫೆಂಡರ್ ಗುರಿಂದರ್ ಸಿಂಗ್, ಮಿಡ್‌ಫೀಲ್ಡರ್‌ಗಳಾದ ಸುಮಿತ್ ಮತ್ತು ಮನಪ್ರೀತ್ ಅವರಿಗೂ ತಂಡದಲ್ಲಿ ಸ್ಥಾನ ಸಿಕ್ಕಿದೆ.
‘ವಿಶ್ವ ಹಾಕಿ ಲೀಗ್ ಸೆಮಿಫೈನಲ್, ಏಷ್ಯಾ ಕಪ್ ಮತ್ತು ಹಾಕಿ ಲೀಗ್ ಫೈನಲ್ ಟೂರ್ನಿಗಳು ಇದೇ ವರ್ಷ ನಡೆಯಲಿವೆ. ಈ ಟೂರ್ನಿಗಳಿಗೂ ಮೊದಲು ನಮ್ಮ(ಭಾರತ) ತಂಡ ಬೆಲ್ಜಿಯಂ ಮತ್ತು ಜರ್ಮನಿ ಎದುರು ಆಡಲಿದೆ.
ಮಲೇಷ್ಯಾದ ಇಪೊ,ದಲ್ಲಿ ಭಾರತ ತಂಡದಲ್ಲಿ ಸ್ಟ್ರೈಕರ್ ಮನದೀಪ್ ಸಿಂಗ್ ಬುಧವಾರ ಹಾಕಿ ಪ್ರಿಯರ ಮನ ಗೆದ್ದರು. ಭಾರತ ತಂಡ ಇಲ್ಲಿ ಜಯ ಪಡೆಯಿತು. ಭಾರತ 4–3 ಗೋಲುಗಳಿಂದ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ತನಗಿಂತಲೂ ಕೆಳಗಿನ ಸ್ಥಾನ ಹೊಂದಿರುವ ಜಪಾನ್ ತಂಡವನ್ನು ಸೋಲಿಸಿತು.[೧೭]
ಮಲೇಷ್ಯಾದ ಇಪೊದಲ್ಲಿ ಅಜ್ಲಾನ್ ಷಾ ಕಪ್ ಹಾಕಿ ಟೂರ್ನಿಯ ಫೈನಲ್ ಪ್ರವೇಶಿಸುವಲ್ಲಿ ವಿಫಲವಾದ ಭಾರತ ಹಾಕಿ ತಂಡ ಕಂಚಿನ ಪದಕ ಪಡೆಯಿತು. ಮೂರನೇ ಸ್ಥಾನಕ್ಕಾಗಿ ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು 4-0 ಗೋಲುಗಳಿಂದ ಭಾರತ ಸೋಲಿಸಿತು. ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಗೋಲಾಗಿ ಪರಿವರ್ತಿಸಿದ ರೂಪಿಂದರ್‌ಪಾಲ್ ಸಿಂಗ್ ಭಾರತದ ಜಯದ ರೂವಾರಿ.[೧೮]
ಗುರುವಾರ ನಡೆದ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ 4–1 ಗೋಲುಗಳಿಂದ ಜಯ ಸಾಧಿಸಿದೆ.
ವಿಶ್ವ ಹಾಕಿ ಲೀಗ್ ಸೆಮಿಫೈನಲ್ಸ್‌ನ ಎರಡನೇ ಪಂದ್ಯದಲ್ಲಿ ಭಾರತ ತಂಡ ಶನಿವಾರ ಕೆನಡಾವನ್ನು ಎದುರಿಸಲಿದೆ.[೧೯]
ಭಾರತವು ಅಜೇಯ ಓಟವನ್ನು ಕಾಯ್ದುಕೊಂಡು ಕೆನಡಾವನ್ನು 3-0 ಅಂತರದಲ್ಲಿ ಹಾಕಿ ವಿಶ್ವ ಲೀಗ್ ಸೆಮಿ ಫೈನಲ್ನಲ್ಲಿ ಸೋಲಿಸಿತು. ಗೆಲುವು ವಾಸ್ತವವಾಗಿ ಪಂದ್ಯಾವಳಿಯ ಕ್ವಾರ್ಟರ್ ಭಾರತದ ಸ್ಥಾನ ಪಡೆದುಕೊಂಡರು. ಆರನೇ ಸ್ಥಾನದಲ್ಲಿರುವ ಭಾರತೀಯರು ತಮ್ಮ ಮುಂದಿನ ಪೂಲ್ ಪಂದ್ಯದಲ್ಲಿ ನಾಳೆ ಪಾಕಿಸ್ತಾನದೊಡನೆ ಆಡಲಿದ್ದಾರೆ.[೨೦]
18 Jun, 2017ಹಾಕಿ ವಿಶ್ವ ಲೀಗ್ ಸೆಮಿಫೈನಲ್‌ನ ಪೂಲ್ ಬಿ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು 7- 1 ಅಂತರದಲ್ಲಿ ಪರಾಭವಗೊಳಿಸಿದೆ.[೨೧]
23 Jun, 2017 ಗುರುವಾರ ಭಾರತ ಹಾಕಿ ತಂಡವು ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲಿನ ಆಘಾತ ಅನುಭವಿಸಿತು.ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಳ್ಳಲಾರದೆ ಭಾರತ ತಂಡವು 2–3 ಗೋಲುಗಳಿಂದ ಮಲೇಷ್ಯಾ ಎದುರು ಪರಾಭವಗೊಂಡಿತು. ಈ ಗೆಲುವಿನ ಬಲದಿಂದ ಮಲೇಷ್ಯಾ ತಂಡವು ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ವಿಶ್ವ ಕಪ್ ಹಾಕಿ ಟೂರ್ನಿಗೆ ಅರ್ಹತೆ ಗಿಟ್ಟಿಸಿತು.[೨೨]
ವಿಶ್ವ ಹಾಕಿ ಲೀಗ್ ಸೆಮಿಫೈನಲ್‌ನ ಐದರಿಂದ ಎಂಟರವರೆಗಿನ ಸ್ಥಾನಕ್ಕಾಗಿ ತಂಡಗಳನ್ನು ವಿಂಗಡಿಸುವ ಪಂದ್ಯದಲ್ಲಿ ಶನಿವಾರ ಭಾರತ ತಂಡ ಪಾಕಿಸ್ತಾನವನ್ನು 6-1 ಗೋಲುಗಳ ಅಂತರದಿಂದ ಪರಾಭವಗೊಳಿಸಿದೆ.[೨೩]
25 Jun, 2017; ವಿಶ್ವ ಹಾಕಿ ಲೀಗ್ ಸೆಮಿಫೈನಲ್‌ನಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಮತ್ತೊಮ್ಮೆ ಗೆಲವು ಸಾಧಿಸಿದೆ. 5 ಮತ್ತು 8ನೇ ಸ್ಥಾನಕ್ಕಾಗಿ ಸೆಣಸುವ ತಂಡಗಳ ವಿಂಗಡಣೆಗಾಗಿ ಶನಿವಾರ ನಡೆದ ಪಂದ್ಯದಲ್ಲಿ ಭಾರತ 6–1 ಗೋಲು ಗಳಿಂದ ಜಯ ಗಳಿಸಿದೆ.[೨೪]
980ರಲ್ಲಿ ಕರಾಚಿಯಲ್ಲಿ ನಡೆದ ಚಾಂಪಿಯನ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಅತ್ಯುತ್ತಮ ಫಾರ್ವರ್ಡ್ ಆಟಗಾರ ಗೌರವ ಪಡೆದಿದ್ದರು. ಅಂತರರಾಷ್ಟ್ರೀಯ ಹಾಕಿಯಿಂದ ನಿವೃತ್ತಿಯಾದ ಬಳಿಕ ಇಂಡಿಯನ್ ರೈಲ್ವೆ ನಲ್ಲಿ ಕ್ರೀಡಾ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಇವರಿಗೆ 1981ರಲ್ಲಿ ಅರ್ಜುನ ಮತ್ತು 1986ರಲ್ಲಿ ಪದ್ಮಶ್ರೀ ಪ್ರಶಸ್ತಿಗಳು ಲಭಿಸಿವೆ.
ಅನಾರೋಗ್ಯದಿಂದ ಬಳಲುತ್ತಿದ್ದ ಭಾರತದ ಹಾಕಿ ದಿಗ್ಗಜ ಮತ್ತು ಡ್ರಿಬ್ಲಿಂಗ್ ಪರಿಣತ ಮಹಮ್ಮದ್ ಶಾಹಿದ್ (56) ಅವರು ಬುಧವಾರ ಗುಡಗಾಂವ್‌ನಲ್ಲಿ ನಿಧನ ಹೊಂದಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಒಂದು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಚಿನ್ನ ಜಯಿಸಿತ್ತು. ಆಗ ಶಾಹಿದ್ ಅವರು ತಂಡದಲ್ಲಿದ್ದರು. ಭಾರತ 1982ರ ದೆಹಲಿ ಮತ್ತು 1986ರ ಸೋಲ್ ಏಷ್ಯನ್ ಕ್ರೀಡಾಕೂಟಗಳಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆದ್ದುಕೊಂಡಿತ್ತು. ಆಗೂ ಶಾಹಿದ್ ಅವರು ತಂಡದ ಸದಸ್ಯರಾಗಿದ್ದರು. ಫಾರ್ವರ್ಡ್ ಆಟಗಾರನಾಗಿದ್ದ ಶಾಹಿದ್ ಅವರು 1979ರಲ್ಲಿ ರಾಷ್ಟ್ರೀಯ ಜೂನಿಯರ್ ತಂಡಕ್ಕೆ ಪದಾರ್ಪಣೆ ಮಾಡಿದ್ದರು.[೨೫]