ಪುನುಗು ಬೆಕ್ಕು
Civet.JPG
ಪುನುಗು ಬೆಕ್ಕು
Scientific classification
Kingdom:
Class:
Order:
Family:
in part

ಪುನುಗು ಬೆಕ್ಕು ಕಾರ್ನಿವೊರ ಗಣದ ಮಾಂಸಾಹಾರಿ ಸ್ತನಿ. ಇದು ವೈವರಿಡೀ ಕುಟುಂಬಕ್ಕೆ ಸೇರಿದೆ. ಇವುಗಳ ಪ್ರಜನನಾಂಗಗಳ ಬಳಿ ಸುಗಂಧ ವಸ್ತು ಸ್ರವಿಸುವ ಗ್ರಂಥಿಗಳಿವೆ. ಈ ವಸ್ತು ಪುನುಗು ಅಥವಾ ಗುದದ್ವಾರದ ಬಳಿ ಇರುವ ಸಂಚಿಯೊಂದಕ್ಕೆ ಸುರಿದು ಸಂಗ್ರಹಗೊಳ್ಳುತ್ತದೆ. ಈ ಸುಗಂಧ ವಸ್ತುವಿನೊಂದಿಗೆ ಸಮಪ್ರಮಾಣದಲ್ಲಿ ನೀರು ಬೆರೆಸಿ ಇತರ ಸುಗಂಧಗಳೊಡನೆ ಸೇರಿಸಿದಾಗ ಸುವಾಸನೆಯನ್ನು ಕೊಡುತ್ತದೆ.[೧][೨]

ಆವಾಸಸ್ಥಾನಸಂಪಾದಿಸಿ

 
ಆಫ್ರಿಕಾದ ಪುನುಗು ಬೆಕ್ಕು

ಆಫ್ರಿಕ, ಬರ್ಮ, ಶ್ರೀಲಂಕಾ, ಮಲೇಷಿಯಾಗಳಲ್ಲಿ ಇವು ಹೆಚ್ಚಾಗಿ ಕಂಡು ಬರುತ್ತವೆ. ಭಾರತದಲ್ಲಿ ಕಾಣ ಸಿಗುವ ಪುನುಗು ಬೆಕ್ಕಿಗೆ ವೈವರಿಕ್ಯುಲ ಇಂಡಿಕ ಎಂದು ಕರೆಯುತ್ತಾರೆ. ಇವುಗಳಿಗೆ ದೇಹದ ಎರಡೂ ಕಡೆ ಉದ್ದುದ್ದನೆಯ ಪಟ್ಟೆಗಳಿವೆ. ಇದು ಹೆಚ್ಚು ಕಡಿಮೆ ಭಾರತಾದ್ಯಂತ ಕಾಣದೊರೆಯುತ್ತದೆ. ಪಶ್ಚಿಮ ಘಟ್ಟಗಳಲ್ಲೂ ಪುನುಗು ಬೆಕ್ಕು ಕಾಣ ಸಿಗುತ್ತದೆ. ಆಫ್ರಿಕದ ಪುನುಗು ಬೆಕ್ಕು ಸಿವೆಟಿಕ್ಟಸ್ ಸಿಬೆಟ್ ಎಂಬುದು ೬೭-೮೦ ಸೆಂ.ಮೀ. ಉದ್ದವಿರುತ್ತವೆ. ಇದರ ಮೈ ಬಣ್ಣ ಕಪ್ಪು. ಇದಕ್ಕೆ ಅಲ್ಲಲ್ಲಿ ಹಳದಿ ಬಿಳಿ ಬಣ್ಣದ ಮಚ್ಚೆಗಳು ಇರುತ್ತವೆ.[೩]

ಗುಣಲಕ್ಷಣಸಂಪಾದಿಸಿ

ಭಾರತದ ಪುನುಗು ಬೆಕ್ಕು ವೈವರ ಜಿಬೆತ ಸುಮಾರು ೮೦ ಸೆಂ.ಮೀ. ಉದ್ದವಿರುತ್ತದೆ. ಸುಮಾರು ೭-೧೧ಕೆಜಿ ತೂಕವಿರುತ್ತವೆ. ಉದ್ದ ಮೂತಿ, ಮೋಟು ಕಾಲುಗಳು, ಕಪ್ಪು ಮಿಶ್ರಿತ ಬೂದು ಬಣ್ಣ, ಬೆನ್ನಿನ ಉದ್ದಕ್ಕೂ ಕತ್ತಿನಿಂದ ಬಾಲದವರೆಗೂ ಹಬ್ಬಿರುವ ಕಪ್ಪು ಕೂದಲಿನ ಏಣು, ಎದೆ ಹಾಗೂ ಭುಜಗಳ ಮೇಲಿನ ಕಪ್ಪು ಪಟ್ಟೆಗಳನ್ನು ಹೊಂದಿರುತ್ತವೆ. ಇದರ ಬಾಲ ಸುಮಾರು ೪೫ ಸೆಂ.ಮೀ. ಉದ್ದವಿರುತ್ತವೆ. ಬಾಲದ ಮೇಲೆ ಅಡ್ಡ ಪಟ್ಟೆಗಳನ್ನು ಹೊಂದಿರುತ್ತವೆ. ಇದು ಸಾಧಾರಣವಾಗಿ ಒಂಟಿ ಜೀವಿ ಮತ್ತು ನಿಶಾಚಾರಿ. ಹಗಲಿನಲ್ಲಿ ಪೊದೆಗಳಲ್ಲಿ ಅಡಗಿ ಕೂತು ರಾತ್ರಿಯ ವೇಳೆ ಆಹಾರಾನ್ವೇಷಣೆಯಲ್ಲಿ ತೊಡಗುತ್ತದೆ. ಸಣ್ಣಪುಟ್ಟ ಸ್ತನಿಗಳು, ಹಕ್ಕಿಗಳು, ಕಪ್ಪೆಗಳು, ಹಾವು, ಕೀಟಗಳು, ಹಣ್ಣು ಬೇರುಗಳು, ಮೀನು, ಏಡಿಗಳನ್ನು ಇವು ತಿನ್ನುತ್ತವೆ.[೪]

ಸಂತಾನೋತ್ಪತ್ತಿಸಂಪಾದಿಸಿ

ಪುನುಗು ಬೆಕ್ಕಿನ ಸಂತಾನೋತ್ಪತ್ತಿಯ ಕಾಲ ಮೇ-ಜೂನ್ ತಿಂಗಳು. ಇವು ಒಂದು ಸಲಕ್ಕೆ ೩-೪ ಮರಿಗಳನ್ನಿಡುತ್ತವೆ. ದಟ್ಟ ಪೊದೆಗಳಲ್ಲಿ ಅಥವಾ ಬಿಲಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ.

ಉಪಯೋಗಸಂಪಾದಿಸಿ

ಎಲ್ಲ ಪ್ರಭೇದಗಳ ಪುನುಗು ಬೆಕ್ಕನ್ನು ಸಾಕಬಹುದಾಗಿದ್ದು ಅವುಗಳಿಂದ ತಿಂಗಳಿಗೊಮ್ಮೆ ಇಲ್ಲವೇ ವಾರಕ್ಕೊಮ್ಮೆ ಪುನುಗನ್ನು ಪಡೆಯುತ್ತಾರೆ. ಪುನುಗು ಬೆಕ್ಕನ್ನು ಸಣ್ಣ ಪಂಜರಗಳಲ್ಲಿಟ್ಟು ಕೊಂಬಿನ ಚಮಚೆಗಳಿಂದ ಪುನುಗನ್ನು ಬಗೆದು ತೆಗೆಯುತ್ತಾರೆ. ಇವನ್ನು ಪೀಡಿಸಿ ರೊಚ್ಚಿಗೆಬ್ಬಿಸಿದರೆ ಹೆಚ್ಚು ಪುನುಗು ಒಸರುತ್ತದೆ. ಒಂದು ಬೆಕ್ಕಿನಿಂದ ವಾರಕ್ಕೆ ೩೦ ಗ್ರಾಮ್ ಪುನುಗನ್ನು ಪಡೆಯಬಹುದು. ಬೆಕ್ಕಿನಿಂದ ಪಡೆದ ಪುನುಗನ್ನು ಸುವಾಸನೆ ಭರಿಸುವ ವಸ್ತುವಾಗಿ ಸುಗಂಧ ದ್ರವ್ಯಗಳಲ್ಲಿ ಬಳಸುತ್ತಾರೆ.ಪುನುಗನ್ನು ಕಾಫಿ ತಯಾರಿಕೆಯಲ್ಲಿ ಬಳಸುತ್ತಾರೆ.[೫][೬]

ಉಲ್ಲೇಖಸಂಪಾದಿಸಿ

  1. https://books.google.co.in/books?id=JgAMbNSt8ikC&pg=PA548-559&redir_esc=y#v=onepage&q&f=false
  2. http://uahost.uantwerpen.be/funmorph/raoul/fylsyst/gaubert2006.pdf
  3. https://www.nparks.gov.sg/gardens-parks-and-nature/dos-and-donts/animal-advisories/civets
  4. https://www.britannica.com/animal/civet-mammal-Viverridae-family
  5. https://www.prajavani.net/news/article/2017/09/12/519460.html
  6. https://www.worldanimalprotection.org/our-work/animals-wild/civet-coffee-campaigning-cage-free