ಪಾರ್ಥಿವ್ ಪಟೇಲ್
ಪಾರ್ಥಿವ್ ಅಜಯ್ ಪಟೇಲ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಎಡಗೈ ಆರಂಭಿಕ ಬ್ಯಾಟ್ಸಮಾನ್ ಹಾಗು ವಿಕೇಟ್ ಕೀಪರ್. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಡುತ್ತಾರೆ.
ವಯಕ್ತಿಕ ಮಾಹಿತಿ | ||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಹುಟ್ಟು | ಅಹಮದಾಬಾದ್, ಗುಜರಾತ್, ಭಾರತ | ೯ ಮಾರ್ಚ್ ೧೯೮೫|||||||||||||||||||||||||||||||||||
ಬ್ಯಾಟಿಂಗ್ | ಎಡಗೈ | |||||||||||||||||||||||||||||||||||
ಅಂತಾರಾಷ್ಟ್ರೀಯ ಮಾಹಿತಿ | ||||||||||||||||||||||||||||||||||||
ರಾಷ್ಟೀಯ ತಂಡ |
| |||||||||||||||||||||||||||||||||||
ಟೆಸ್ಟ್ ಚೊಚ್ಚಲ (ಕ್ಯಾಪ್ ೨೪೪) | ೮ ಆಗಸ್ಟ್ ೨೦೦೨ v ಇಂಗ್ಲೆಂಡ್ | |||||||||||||||||||||||||||||||||||
ಕೊನೆಯ ಟೆಸ್ಟ್ | ೨೪ ಜನವರಿ ೨೦೧೮ v ದಕ್ಷಿಣ ಆಫ್ರಿಕಾ | |||||||||||||||||||||||||||||||||||
ಅಂ. ಏಕದಿನ ಚೊಚ್ಚಲ (ಕ್ಯಾಪ್ ೧೪೮) | ೪ ಜನವರಿ ೨೦೦೨ v ನ್ಯೂಜಿಲೆಂಡ್ | |||||||||||||||||||||||||||||||||||
ಕೊನೆಯ ಅಂ. ಏಕದಿನ | ೨೩ ಅಕ್ತೋಬರ್ ೨೦೧೧ v ಇಂಗ್ಲೆಂಡ್ | |||||||||||||||||||||||||||||||||||
ಅಂ. ಏಕದಿನ ಅಂಗಿ ನಂ. | ೪೨ | |||||||||||||||||||||||||||||||||||
ಟಿ೨೦ಐ ಚೊಚ್ಚಲ (ಕ್ಯಾಪ್ ೨೭) | ೪ ಜೂನ್ ೨೦೧೧ v ವೆಸ್ಟ್ ಇಂಡೀಸ್ | |||||||||||||||||||||||||||||||||||
ಕೊನೆಯ ಟಿ೨೦ಐ | ೨೧ ಫೆಬ್ರವರಿ ೨೦೧೨ v ಶ್ರೀಲಂಕಾ | |||||||||||||||||||||||||||||||||||
ಟಿ೨೦ಐ ಅಂಗಿ ನಂ. | ೪೨ | |||||||||||||||||||||||||||||||||||
ದೇಶೀಯ ತಂಡದ ಮಾಹಿತಿ | ||||||||||||||||||||||||||||||||||||
ವರ್ಷಗಳು | ತಂಡ | |||||||||||||||||||||||||||||||||||
2004/05–present | ಗುಜರಾತ್ | |||||||||||||||||||||||||||||||||||
೨೦೦೮-೨೦೧೦ | ಚೆನ್ನೈ ಸೂಪರ್ ಕಿಂಗ್ಸ್ (squad no. ೯) | |||||||||||||||||||||||||||||||||||
೨೦೧೧ | ಕೊಚ್ಚಿ ಟಸ್ಕರ್ಸ್ ಕೇರಳ (squad no. ೪೨) | |||||||||||||||||||||||||||||||||||
೨೦೧೨ | ಡೆಕ್ಕನ್ ಚಾರ್ಜಸ್ (squad no. ೪೨) | |||||||||||||||||||||||||||||||||||
೨೦೧೩ | ಸನ್ ರೈಸರ್ಸ್ ಹೈದರಾಬಾದ್ (squad no. ೪೨) | |||||||||||||||||||||||||||||||||||
೨೦೧೪, ೨೦೧೮-ಇಂದಿನವರೆಗೆ | ರಾಯಲ್ ಚಾಲೆಂಜರ್ಸ್ ಬೆಂಗಳೂರು (squad no. ೪೨, ೧೩) | |||||||||||||||||||||||||||||||||||
೨೦೧೫-೧೭ | ಮುಂಬೈ ಇಂಡಿಯನ್ಸ್ (squad no. ೭೨) | |||||||||||||||||||||||||||||||||||
ವೃತ್ತಿ ಅಂಕಿಅಂಶಗಳು | ||||||||||||||||||||||||||||||||||||
| ||||||||||||||||||||||||||||||||||||
ಮೂಲ: Cricinfo, ೨೫ ಡಿಸೆಂಬರ್ ೨೦೧೯ |
ಆರಂಭಿಕ ಜೀವನ
ಬದಲಾಯಿಸಿಪಾರ್ಥಿವ್ ಪಟೇಲ್ ರವರು ಮಾರ್ಚ್ ೦೯,೧೯೮೫ರಂದು ಅಹೆಮ್ದಬಾದ್, ಗುಜರಾತ್ನಲ್ಲಿ ಜನಿಸಿದರು. ಇವರು ೨೦೦೨ರಲ್ಲಿ, ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ತಮ್ಮ ೧೭ನೇ ವಯಸ್ಸಿನಲ್ಲಿಯೇ ಪಾದಾರ್ಪಣೆ ಮಾಡಿ ಟೆಸ್ಟ್ ಕ್ರಿಕೆಟ್‍ನ ಇತಿಹಾಸದಲ್ಲಿಯೇ ಅತ್ಯಂತ ಕಿರಿಯ ವಿಕೇಟ್ ಕೀಪರ್ ಎಂದು ಗುರುತಿಸಿಕೊಂಡರು. ನಂತರ ೨೦೦೪ರಲ್ಲಿ ಮತ್ತೆ ಭಾರತ ತಂಡಕ್ಕೆ ಆಯ್ಕೆ ಆಗಿದ್ದರು. ನಂತರ ೨೦೦೮ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಸ್ಥಾನ ಪಡೆದರು.[೧]
ವೃತ್ತಿ ಜೀವನ
ಬದಲಾಯಿಸಿಐಪಿಎಲ್ ಕ್ರಿಕೆಟ್
ಬದಲಾಯಿಸಿಏಪ್ರಿಲ್ ೧೯, ೨೦೦೮ರಂದು ಪಂಜಾಬ್‍ನ ಮೊಹಾಲಿಯಲ್ಲಿ ನಡೆದ ೨ನೇ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಕಿಂಗ್ಸ ಇಲೆವೆನ್ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದರು.ಇಂಡಿಯನ್ ಪ್ರೀಮಿಯರ್ ಲೀಗ್ನ ತಮ್ಮ ಚೊಚ್ಚಲ ಪಂದ್ಯದಲ್ಲಿ ಮೂರು ಬೌಂಡರಿ ಸಹಿತ ೧೫ ರನ್ ಕಲೆ ಹಾಕಿದರು. ಇಲ್ಲಿಯವರೆಗೆ ಐಪಿಎಲ್‍ನಲ್ಲಿ ೨೩೨೨ ರನ್‍ಗಳನ್ನು ಗಳಿಸಿದ್ದಾರೆ. ಪ್ರಸ್ತುತ ಇವರು ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಡುತ್ತಾರೆ.[೨][೩]
ಅಂತರರಾಷ್ಟ್ರೀಯ ಕ್ರಿಕೆಟ್
ಬದಲಾಯಿಸಿಆಗಸ್ಟ್ ೦೮, ೨೦೦೨ರಲ್ಲಿ ಇಂಗ್ಲ್ಯಾಂಡ ವಿರುದ್ದ ನಡೆದ ಎರಡನೇ ಟೆಸ್ಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.ತಮ್ಮ ೧೭ನೇ ವಯಸ್ಸಿನಲ್ಲಿಯೇ ಪಾದಾರ್ಪಣೆ ಮಾಡಿದ ಇವರು, ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯ ಸಂಪಾದಿಸಿದರೂ ಎರಡನೇ ಇನ್ನಿಂಗ್ಸ್‌ನಲ್ಲಿ ೧೯ರನ ಕಲೆಹಾಕಿ ಅಜೇಯರಾಗಿ ಉಳಿದರು. ಜನವರಿ ೪, ೨೦೦೩ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ನಾಲ್ಕನೇ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು. ಜೂನ್ ೦೪, ೨೦೧೧ರಂದು ಟ್ರಿನಿಡ್ಯಾದ್‍ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಏಕೈಕ ಟಿ-೨೦ ಪಂದ್ಯದ ಮುಖಾಂತರ ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದರು. ತಮ್ಮ ಮೊದಲ ಟಿ-೨೦ ಪಂದ್ಯದಲ್ಲಿ ೨ ಬೌಂಡರಿ ಹಾಗು ೧ ಸಿಕ್ಸರ್ ಸಹಿತ ೨೬ರನ್ ಗಳಿಸಿದ್ದರು.[೪][೫][೬]
ಪಂದ್ಯಗಳು
ಬದಲಾಯಿಸಿ- ಟೆಸ್ಟ್ ಕ್ರಿಕೆಟ್ : ೨೫ ಪಂದ್ಯಗಳು[೭][೮]
- ಏಕದಿನ ಕ್ರಿಕೆಟ್ : ೩೮ ಪಂದ್ಯಗಳು
- ಟಿ-೨೦ ಕ್ರಿಕೆಟ್ : ೨ ಪಂದ್ಯಗಳು
- ಐಪಿಎಲ್ ಕ್ರಿಕೆಟ್ : ೧೧೯ ಪಂದ್ಯಗಳು
ಅರ್ಧ ಶತಕಗಳು
ಬದಲಾಯಿಸಿ- ಏಕದಿನ ಪಂದ್ಯಗಳಲ್ಲಿ : ೦೪
- ಟೆಸ್ಟ್ ಪಂದ್ಯಗಳಲ್ಲಿ : ೦೬
- ಐಪಿಎಲ್ ಪಂದ್ಯಗಳಲ್ಲಿ : ೧೦
ಉಲ್ಲೇಖಗಳು
ಬದಲಾಯಿಸಿ- ↑ https://en.wikipedia.org/wiki/Parthiv_Patel
- ↑ http://www.cricbuzz.com/live-cricket-scorecard/10556/kings-xi-punjab-vs-chennai-super-kings-2nd-match-indian-premier-league-2008
- ↑ "ಆರ್ಕೈವ್ ನಕಲು". Archived from the original on 2018-02-06. Retrieved 2018-02-02.
- ↑ http://www.cricbuzz.com/live-cricket-scorecard/5398/england-vs-india-2nd-test-india-in-england-test-series-2002
- ↑ http://www.cricbuzz.com/live-cricket-scorecard/5310/new-zealand-vs-india-4th-odi-india-in-new-zealand-odi-series-2002-03
- ↑ http://www.cricbuzz.com/live-cricket-scorecard/9847/windies-vs-india-only-t20i-india-in-west-indies-2011
- ↑ http://www.cricbuzz.com/profiles/74/parthiv-patel
- ↑ http://www.espncricinfo.com/india/content/player/32242.html