ನೀಲಮಣಿ (Greek: [σάπφειρος; sappheiros] Error: {{Lang}}: text has italic markup (help)

Sapphire
The Hall Sapphire Necklace, the Bismarck Sapphire, and the Logan Sapphire on display at the Smithsonian Institution.
General
ವರ್ಗOxide mineral
ರಾಸಾಯನಿಕ ಸೂತ್ರaluminium oxide, Al2O3
Identification
ಬಣ್ಣEvery color except for red - which is called a ruby - or pinkish-orange (the padparadscha)
ಸ್ಫಟಿಕ ಗುಣಲಕ್ಷಣmassive and granular
ಸ್ಫಟಿಕ ಪದ್ಧತಿTrigonal
Symbol (32/m)
Space Group: R3c
ಸೀಳುnone
ಬಿರಿತconchoidal, splintery
ಮೋಸ್ ಮಾಪಕ ಗಡಸುತನ9.0
ಹೊಳಪುvitreous
ಪುಡಿಗೆರೆwhite
ವಿಶಿಷ್ಟ ಗುರುತ್ವ3.95–4.03
ದ್ಯುತಿ ಗುಣಗಳುAbbe number 72.2
ವಕ್ರೀಕರಣ ಸೂಚಿnω=1.768–1.772
nε=1.760–1.763,
Birefringence 0.008
ಬಹುವರ್ಣಕತೆStrong
ಕರಗುವ ಬಿಂದು2030–2050 °C
ಕರಗು ಗುಣinfusible
ಕರಗುವಿಕೆInsoluble
ಇತರ ಗುಣಲಕ್ಷಣಗಳುcoefficient of thermal expansion (5.0–6.6)×10−6/K
"ನೀಲಿ ಕಲ್ಲು"[]) ಎಂಬುದು ಒಂದು ಅಲ್ಯುಮಿನಿಯಂ ಆಕ್ಸೈಡ್‌ (α-Al2O3) ಆಗಿರುವ ಕುರಂಗದ ಕಲ್ಲು ಖನಿಜದ ಒಂದು ಬಗೆಯ ರತ್ನದಕಲ್ಲು ಆಗಿದ್ದು, ಇದು ಕೆಂಪು ಅಥವಾ ಗಾಡ ಪಾಟಲವರ್ಣಕ್ಕಿಂತ ಹೊರತಾದ ಒಂದು ಬಣ್ಣವನ್ನು ಹೊಂದಿದ್ದಾಗ ನೀಲಮಣಿ ಎಂದು ಕರೆಸಿಕೊಳ್ಳುತ್ತದೆ. ಕೆಂಪು ಅಥವಾ ಗಾಡ ಪಾಟಲವರ್ಣವನ್ನು ಹೊಂದಿರುವ ಸಂದರ್ಭಗಳಲ್ಲಿ, ಈ ರತ್ನವು ಅದರ ಬದಲಿಗೆ ಒಂದು ಮಾಣಿಕ್ಯ ಎಂದು ಕರೆಯಲ್ಪಡುತ್ತದೆ. ಮಾಣಿಕ್ಯವು ಒಂದು ವಿಭಿನ್ನ ರತ್ನದಕಲ್ಲು ಎಂದು ಪರಿಗಣಿಸಲ್ಪಟ್ಟಿದೆ. ಕಬ್ಬಿಣ, ಟೈಟಾನಿಯಂ, ಅಥವಾ ಕ್ರೋಮಿಯಂನಂಥ ಇತರ ಧಾತುಗಳ ಅಲ್ಪ ಪ್ರಮಾಣಗಳು, ಕುರಂಗದ ಕಲ್ಲಿಗೆ ನೀಲಿ, ಹಳದಿ, ಪಾಟಲವರ್ಣ, ಕೆನ್ನೀಲಿ, ಕಿತ್ತಳೆ, ಅಥವಾ ಹಸಿರುಛಾಯೆಯ ಬಣ್ಣಗಳನ್ನು ನೀಡಬಲ್ಲವು. ಪಾಟಲವರ್ಣ-ಕಿತ್ತಳೆ ವರ್ಣದ ನೀಲಮಣಿಗಳನ್ನು  ಪದಪಾರದಶ್ಚ  ಎಂದೂ ಸಹ ಕರೆಯಲಾಗುತ್ತದೆ. ಪರಿಶುದ್ಧ ಕ್ರೋಮಿಯಂ ಎಂಬುದು ಮಾಣಿಕ್ಯಗಳ ಸ್ಪಷ್ಟ ಬೆರಕೆಯಾಗಿರುತ್ತದೆ. ಆದಾಗ್ಯೂ, ಉದಾಹರಣೆಗೆ ಕ್ರೋಮಿಯಂ ಹಾಗೂ ಟೈಟಾನಿಯಂನಂಥ ಒಂದು ಸಂಯೋಜನೆಯು ನೀಲಮಣಿಗೆ ಕೆಂಪು ಬಣ್ಣಕ್ಕಿಂತ ಭಿನ್ನವಾಗಿರುವ ಒಂದು ಬಣ್ಣವನ್ನು ನೀಡಬಲ್ಲದು.ನೀಲಮಣಿಗಳನ್ನು ಸಾಮಾನ್ಯವಾಗಿ ರತ್ನಾಭರಣಗಳ ರೀತಿಯಲ್ಲಿ ಧರಿಸಲಾಗುತ್ತದೆ. ನಿರ್ದಿಷ್ಟ ನಿಕ್ಷೇಪಗಳು ಅಥವಾ ಬಂಡೆಯ ಶಿಲಾಸ್ತರದ ಸಮೂಹಗಳ ಮೂಲಕ ಶೋಧನೆಯನ್ನು ನಡೆಸುವ ಮೂಲಕ ನೀಲಮಣಿಗಳನ್ನು ಸ್ವಾಭಾವಿಕವಾಗಿ ಪತ್ತೆಹಚ್ಚಬಹುದು, ಅಥವಾ ಕೈಗಾರಿಕಾ ಅಥವಾ ಅಲಂಕಾರಿಕ ಉದ್ದೇಶಗಳಿಗಾಗಿ ಅವುಗಳನ್ನು ಹರಳಿನ ರೂಪದ ಬೃಹತ್‌‌ ಬೋಗುಣಿಗಳಲ್ಲಿ ತಯಾರಿಸಲೂಬಹುದು. ನೀಲಮಣಿಗಳ (ಮತ್ತು ಸಾಧಾರಣವಾಗಿ ಅಲ್ಯುಮೀನಿಯಂ ಆಕ್ಸೈಡ್‌ನ) ಗಮನಾರ್ಹ ಕಠೋರತೆಯ ಕಾರಣದಿಂದಾಗಿ, ಅವರೋಹಿತ ದೃಗ್ವೈಜ್ಞಾನಿಕ ಭಾಗಗಳೂ ಸೇರಿದಂತೆ ಅಲಂಕಾರಕ್ಕೆ-ಸಂಬಂಧಪಡದ ಕೆಲವೊಂದು ಬಳಕೆಗಳಲ್ಲಿ ನೀಲಮಣಿಗಳನ್ನು ಬಳಸಲಾಗುತ್ತದೆ; ವೈಜ್ಞಾನಿಕ ಉಪಕರಣಗಳು; ಸಣ್ಣ, ಹೆಚ್ಚು-ಬಾಳಿಕೆಯ ಕಿಟಕಿಗಳು (ವೈಜ್ಞಾನಿಕ ಉಪಕರಣಗಳಲ್ಲೂ ಬಳಸಲಾಗುತ್ತದೆ); ಕೈಗಡಿಯಾರ ಹರಳುಗಳು; ಮತ್ತು ಅತ್ಯಂತ ವಿಶೇಷ-ಉದ್ದೇಶದ ಘನ-ಸ್ಥಿತಿಯ ವಿದ್ಯುನ್ಮಾನಗಳ (ಇವುಗಳ ಪೈಕಿ ಅನೇಕವು ಅನುಕಲಿತ ಮಂಡಲಗಳಾಗಿರುತ್ತವೆ) ನಿರೋಧಕ ತಲಾಧಾರಗಳಾಗಿ ಬಳಸಲ್ಪಡುವ ಅತ್ಯಂತ ತೆಳುವಾದ ವಿದ್ಯುನ್ಮಾನ ಅರೆವಾಹಕ ಸ್ಫಟಿಕಗಳು ಅಲಂಕಾರಕ್ಕೆ-ಸಂಬಂಧಪಡದ ನೀಲಮಣಿಗಳ ಬಳಕೆಗಳಲ್ಲಿ ಸೇರಿವೆ.

ಸ್ವಾಭಾವಿಕ ನೀಲಮಣಿಗಳು

ಬದಲಾಯಿಸಿ

ನೀಲಮಣಿಯು ಕುರಂಗದ ಕಲ್ಲಿನ ಎರಡು ಅಥವಾ ಮೂರು ರತ್ನ-ಬಗೆಗಳಲ್ಲಿ ಒಂದಾಗಿದ್ದು, ಮತ್ತೊಂದು ಬಗೆಯು ಕೆಂಪು ಅಥವಾ ಗಾಢ ಪಾಟಲವರ್ಣದ ಮಾಣಿಕ್ಯವಾಗಿದೆ. ನೀಲಿ ಬಣ್ಣವು ಅವುಗಳ ಅತ್ಯಂತ ಸುಪರಿಚಿತ ವರ್ಣಾಂಶವಾಗಿದ್ದರೂ ಸಹ, ಕೆಂಪು ಬಣ್ಣಕ್ಕೆ ಸಂಬಂಧಿಸಿದ್ದನ್ನು ಹೊರತುಪಡಿಸಿದ ಕುರಂಗದ ಕಲ್ಲಿನ ಯಾವುದೇ ಬಣ್ಣದಿಂದ ನೀಲಮಣಿಗಳು ರೂಪುಗೊಂಡಿರುತ್ತವೆ (ಕೆಂಪು ಬಣ್ಣದವುಗಳನ್ನು ಮಾಣಿಕ್ಯಗಳು ಎಂದು ಕರೆಯಲಾಗುತ್ತದೆ). ನೀಲಮಣಿಗಳು ವರ್ಣರಹಿತ ಬಗೆಗಳಲ್ಲಿಯೂ ಇರಲು ಸಾಧ್ಯವಿದೆ, ಮತ್ತು ಅವು ಬೂದು ಮತ್ತು ಕಪ್ಪುಬಣ್ಣದ ಛಾಯೆಗಳಲ್ಲೂ ಸಹ ಕಂಡುಬರುತ್ತವೆ. ಸ್ವಾಭಾವಿಕ ನೀಲಮಣಿಗಳ ಬೆಲೆಯು ಅವುಗಳ ಬಣ್ಣ, ಸ್ಪಷ್ಟತೆ, ಗಾತ್ರ, ಕತ್ತರಿಸಿರುವ ರೀತಿ, ಹಾಗೂ ಒಟ್ಟಾರೆ ಗುಣಮಟ್ಟವನ್ನು ಅವಲಂಬಿಸಿ ಬದಲಾಗುತ್ತಾ ಹೋಗುತ್ತದೆ. ಅಷ್ಟೇ ಅಲ್ಲ, ಅವುಗಳ ಭೌಗೋಳಿಕ ಮೂಲವೂ ಸಹ ಬೆಲೆಯ ಬದಲಾವಣೆಯಲ್ಲಿ ವಿಚಿತ್ರವೆನ್ನುವಷ್ಟು ಪಾತ್ರವಹಿಸುತ್ತದೆ. ನೀಲಮಣಿಯ ಗಣನೀಯ ನಿಕ್ಷೇಪಗಳು ಪೂರ್ವದ ಆಸ್ಟ್ರೇಲಿಯಾ, ಥೈಲೆಂಡ್‌, ಶ್ರೀಲಂಕಾ, ಮಡಗಾಸ್ಕರ್‌, ಪೂರ್ವ ಆಫ್ರಿಕಾಗಳಲ್ಲಿ, ಮತ್ತು "ಜೆಮ್‌ ಮೌಂಟೇನ್‌‌‌"ನಂಥ (ರತ್ನ ಪರ್ವತ) ಉತ್ತರ ಅಮೆರಿಕಾದ ಕೆಲವೊಂದು ತಾಣಗಳಲ್ಲಿ, ಮತ್ತು ಮೊಂಟಾನದ ಹೆಲೆನಾದ ಸುತ್ತಮುತ್ತಲಿರುವ ಮಿಸ್ಸೌರಿ ನದಿಯ ಪ್ರದೇಶ ಅಥವಾ ಅದರ ಹತ್ತಿರದಲ್ಲಿ ಕಂಡುಬರುತ್ತವೆ.[] ನೀಲಮಣಿ ಮತ್ತು ಮಾಣಿಕ್ಯಗಳು ಅನೇಕಬಾರಿ ಒಂದೇ ಪ್ರದೇಶದಲ್ಲಿ ಒಟ್ಟಿಗೆ ಕಂಡುಬರುತ್ತವೆಯಾದರೂ, ಒಂದು ರತ್ನವು ಸಾಮಾನ್ಯವಾಗಿ ಹೆಚ್ಚು ಹೇರಳವಾಗಿ ಕಂಡುಬರುತ್ತದೆ.[]

ನೀಲಿ ನೀಲಮಣಿ

ಬದಲಾಯಿಸಿ
 
..[7] ನೀಲಿ ಮಾಸಲು ಕೆಂಪು ಬಣ್ಣದ ನೀಲಮಣಿ

ಈ ಕೆಳಗೆ ನಮೂದಿಸಿರುವ ಮೂರು ಅಂಶಗಳನ್ನು ಬಳಸಿಕೊಂಡು ರತ್ನದಕಲ್ಲುಗಳ ಬಣ್ಣವನ್ನು ವಿವರಿಸಬಹುದು. ಅವುಗಳೆಂದರೆ: ವರ್ಣಾಂಶ ಛಾಯೆ, ಶುದ್ಧತ್ವ, ಮತ್ತು ಉಜ್ಜ್ವಲತೆ. ವರ್ಣಾಂಶವು ಅತಿ ಸಾಮಾನ್ಯವಾಗಿ ರತ್ನದಕಲ್ಲಿನ "ಬಣ್ಣ" ಎಂಬುದಾಗಿ ಅರ್ಥೈಸಲ್ಪಡುತ್ತದೆ. ಶುದ್ಧತ್ವವು (ಇದನ್ನು "ವರ್ಣರಂಜಿತತೆ" ಎಂದೂ ಕರೆಯಲಾಗುತ್ತದೆ) ಬಣ್ಣದ ಸ್ಫುಟತೆಗೆ ಸಂಬಂಧಿಸಿದ್ದರೆ, ಉಜ್ಜ್ವಲತೆಯು ವರ್ಣಾಂಶದ ನಸುಛಾಯೆ ಅಥವಾ ಗಾಢತೆಯಾಗಿರುತ್ತದೆ.[] ನೀಲಿ ನೀಲಮಣಿಗಳು ಅವುಗಳ ಪ್ರಾಥಮಿಕ (ನೀಲಿ) ಮತ್ತು ದ್ವಿತೀಯಕ ವರ್ಣಾಂಶಗಳ ಹಲವಾರು ಮಿಶ್ರಣಗಳು, ಹಲವಾರು ವರ್ಣಸಾಂದ್ರತೆಯ ಮಟ್ಟಗಳು (ಛಾಯೆಗಳು), ಮತ್ತು ಶುದ್ಧತ್ವದ (ಉಜ್ಜ್ವಲತೆಯ) ಹಲವಾರು ಮಟ್ಟಗಳಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಂಡಿವೆ.ನೀಲಿ ನೀಲಮಣಿಗಳನ್ನು ಅವುಗಳ ಪ್ರಾಥಮಿಕ ವರ್ಣಾಂಶದ ಪರಿಶುದ್ಧತೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. ಕೆನ್ನೀಲಿ, ನೇರಳೆ, ಮತ್ತು ಹಸಿರು ಇವೇ ಮೊದಲಾದವು ನೀಲಿ ನೀಲಮಣಿಗಳಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯವಾದ ದ್ವಿತೀಯಕ ವರ್ಣಾಂಶಗಳಾಗಿವೆ.[] ನೇರಳೆ ಮತ್ತು ಕೆನ್ನೀಲಿಗಳು ಬಣ್ಣದ ಒಟ್ಟಾರೆ ಸೌಂದರ್ಯಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದರೆ, ಹಸಿರು ನಕಾರಾತ್ಮಕ ಎಂದು ಸ್ಪಷ್ಟವಾಗಿ ಪರಿಗಣಿಸಲ್ಪಟ್ಟಿದೆ. 15%ನಷ್ಟು ಪ್ರಮಾಣದವರೆಗಿನ ನೇರಳೆ ಅಥವಾ ಕೆನ್ನೀಲಿಯೊಂದಿಗಿನ ನೀಲಿ ನೀಲಮಣಿಗಳು ಉತ್ತಮ ಗುಣಮಟ್ಟವು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಎಷ್ಟೇ ಪ್ರಮಾಣದ ಹಸಿರನ್ನು ಒಂದು ದ್ವಿತೀಯಕ ವರ್ಣಾಂಶವಾಗಿ ಹೊಂದಿರುವ ನೀಲಿ ನೀಲಮಣಿಗಳನ್ನು ಉತ್ತಮ ಗುಣಮಟ್ಟದವು ಎಂದು ಪರಿಗಣಿಸಲಾಗುವುದಿಲ್ಲ. ಬೂದು ವರ್ಣಾಂಶವು ನೀಲಿ ನೀಲಮಣಿಗಳಲ್ಲಿ ಕಂಡುಬರುವ ಸಾಮಾನ್ಯವಾದ ಶುದ್ಧತ್ವ ಪರಿವರ್ತಕ ಅಥವಾ ಮುಸುಕು ಆಗಿದೆ. ವರ್ಣಾಂಶದ ಶುದ್ಧತ್ವ ಅಥವಾ ಉಜ್ಜ್ವಲತೆಯನ್ನು ಬೂದು ತಗ್ಗಿಸುತ್ತದೆ; ಇದರಿಂದಾಗಿ ಅದು ಒಂದು ಸ್ಪಷ್ಟವಾಗಿ ನಕಾರಾತ್ಮಕವಾಗಿರುವ ಪರಿಣಾಮವನ್ನು ಹೊಂದಿದೆ.[] ಉತ್ತಮವಾದ ನೀಲಿ ನೀಲಮಣಿಗಳ ಬಣ್ಣವು ಒಂದು ಎದ್ದುಕಾಣುವ ಮಧ್ಯಮ ಗಾಢ ನೇರಳೆಯಿಂದ ತುಸು ಕೆನ್ನೀಲಿಯ ನೀಲಿಯವರೆಗೆ ಇರುತ್ತದೆ ಎಂದು ವಿವರಿಸಲಾಗುತ್ತದೆ. ಇಲ್ಲಿ ಪ್ರಾಥಮಿಕ ನೀಲಿ ವರ್ಣಾಂಶವು ಕನಿಷ್ಟಪಕ್ಷ 85%ನಷ್ಟಿದ್ದರೆ, ದ್ವಿತೀಯಕ ವರ್ಣಾಂಶವು ಒಂದು ಹಸಿರು ದ್ವಿತೀಯಕ ವರ್ಣಾಂಶ ಅಥವಾ ಒಂದು ಬೂದು ಮುಸುಕಿನ ಕಡಿಮೆ ಮಟ್ಟದ ಕಲಬೆರಕೆಯಿಲ್ಲದೆಯೇ, 15%ಗಿಂತ ಹೆಚ್ಚಿರುವುದಿಲ್ಲ.[]423 carats (84.6 g) ವಾಷಿಂಗ್ಟನ್‌, D.C.ಯಲ್ಲಿನ ನ್ಯಾಷನಲ್‌ ಮ್ಯೂಸಿಯಂ ಆಫ್‌ ನ್ಯಾಚುರಲ್‌ ಹಿಸ್ಟರಿಯಲ್ಲಿರುವ ಮಾಸಲು ಕೆಂಪು ಬಣ್ಣದ ನೀಲಮಣಿಯು, ಸದ್ಯಕ್ಕೆ ಅಸ್ತಿತ್ವದಲ್ಲಿರುವ ಬೃಹತ್ತಾದ ಮುಖವನ್ನು ಹೊಂದಿರುವ ರತ್ನದ-ಗುಣಮಟ್ಟದ ನೀಲಿ ನೀಲಮಣಿಗಳಲ್ಲಿ ಒಂದೆನಿಸಿಕೊಂಡಿದೆ.

ಅಲಂಕಾರಿಕ ಬಣ್ಣದ ನೀಲಮಣಿ

ಬದಲಾಯಿಸಿ
 
ಪಾಟಲವರ್ಣದ ನೀಲಮಣಿ

ಹಳದಿ ಮತ್ತು ಹಸಿರು ನೀಲಮಣಿಗಳೂ ಸಹ ಸಾಮಾನ್ಯವಾಗಿ ಕಂಡುಬರುತ್ತವೆ. ಕ್ರೋಮಿಯಂನ ಪರಿಮಾಣವು ಹೆಚ್ಚಾದಂತೆ ಪಾಟಲವರ್ಣದ ನೀಲಮಣಿಗಳು ಬಣ್ಣದಲ್ಲಿ ಗಾಢವಾಗುತ್ತವೆ. ಪಾಟಲವರ್ಣ ಬಣ್ಣವು ಗಾಢವಾಗಿದ್ದಷ್ಟೂ ಅವುಗಳ ಹಣದ ಮೌಲ್ಯವು ಹೆಚ್ಚಿರುತ್ತದೆ; ಸದರಿ ಬಣ್ಣವು ಮಾಣಿಕ್ಯಗಳ ಕೆಂಪು ಬಣ್ಣದ ಕಡೆಗೆ ತಿರುಗುತ್ತಿರುವವರೆಗೂ ಈ ಹೆಚ್ಚಿನ ಹಣದ ಮೌಲ್ಯವಿರುತ್ತದೆ. ಕಿತ್ತಳೆ ಹಾಗೂ ಕಂದು ಬಣ್ಣದ ಛಾಯೆಗಳಲ್ಲೂ ನೀಲಮಣಿಗಳು ಕಂಡುಬರುತ್ತವೆ, ಮತ್ತು ವರ್ಣರಹಿತ ನೀಲಮಣಿಗಳನ್ನು ಕೆಲವೊಮ್ಮೆ ರತ್ನಾಭರಣಗಳಲ್ಲಿ ವಜ್ರದ ಬದಲಿ ಬಳಕೆಗಳಾಗಿ ಉಪಯೋಗಿಸಲಾಗುತ್ತದೆ. ಪದಪಾರದಶ್ಚ ನೀಲಮಣಿಗಳು ಅನೇಕವೇಳೆ ಅತ್ಯುತ್ತಮವಾದ ಅನೇಕ ನೀಲಿ ನೀಲಮಣಿಗಳಿಗಿಂತಲೂ ಹೆಚ್ಚಿನ ಬೆಲೆಗಳನ್ನು ಹೊಂದಿರುತ್ತವೆ. "ಜಾಲರಿ ವಿಸರಣ" ಎಂದು ಕರೆಯಲ್ಪಡುವ ಒಂದು ಹೊಸ ಕೃತಕ ಸಂಸ್ಕರಣಾ ವಿಧಾನದ ಒಂದು ಪರಿಣಾಮವಾಗಿ, ಇತ್ತೀಚೆಗೆ ಈ ಬಣ್ಣದ ಹೆಚ್ಚು ನೀಲಮಣಿಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿವೆ.[][]

ಪದಪಾರದಶ್ಚ

ಬದಲಾಯಿಸಿ
 
ಮುಖವುಳ್ಳ ಪದಪಾರದಶ್ಚ

ಪದಪಾರದಶ್ಚ ಎಂಬುದು ಒಂದು ಪಾಟಲವರ್ಣ-ಕಿತ್ತಳೆ ವರ್ಣದ ಕುರಂಗದ ಕಲ್ಲು ಆಗಿದ್ದು, ಒಂದು ಕಡಿಮೆ ಮಟ್ಟದಿಂದ ಮಧ್ಯಮ ಮಟ್ಟದವರೆಗಿನ ಶುದ್ಧತ್ವ ಹಾಗೂ ಲಘುವಾದ ಬಣ್ಣದ ರಂಗನ್ನು ಅದು ಹೊಂದಿದೆ. ಮೂಲತಃ ಇದನ್ನು ಗಣಿಗಾರಿಕೆಯ ಮೂಲಕ ಶ್ರೀಲಂಕಾದಲ್ಲಿ ತೆಗೆಯಲಾಗುತ್ತದೆಯಾದರೂ, ವಿಯೆಟ್ನಾಂ ಹಾಗೂ ಆಫ್ರಿಕಾದಲ್ಲಿರುವ ನಿಕ್ಷೇಪಗಳಲ್ಲಿಯೂ ಇದು ಕಂಡುಬರುತ್ತದೆ; ಪದಪಾರದಶ್ಚ ನೀಲಮಣಿಗಳು ಅತ್ಯಂತ ಅಪರೂಪದ್ದಾಗಿದ್ದು, ಹೆಚ್ಚಿನ ಮೌಲ್ಯವನ್ನು ಹೊಂದಿವೆ. ಕಮಲದ ಅರಳಿಕೆಗೆ ಸಂಬಂಧಪಟ್ಟ ಸಿಂಹಳೀ ಭಾಷೆಯ ಪದದಿಂದ ಇದರ ಹೆಸರು ಜನ್ಯವಾಗಿದೆ.[] ಒಂದು ನಿರ್ದಿಷ್ಟ ಬಣ್ಣದ ನೀಲಮಣಿ ಎಂದು ಕರೆಯಲ್ಪಡುವುದಕ್ಕೆ ಬದಲಾಗಿ, ಅವು ಮಾಣಿಕ್ಯಗಳ ಜೊತೆಯಲ್ಲಿ ತಮ್ಮದೇ ಆದ ಹೆಸರನ್ನು ಹೊಂದಿರುವ ಕುರಂಗದ ಕಲ್ಲಿನ ಏಕೈಕ ಬಗೆಯಾಗಿವೆ. ಎಲ್ಲಾ ಕಲ್ಲುಗಳ ಪೈಕಿ ಅತ್ಯಂತ ಅಪರೂಪದ್ದಾಗಿರುವ ಪದಪಾರದಶ್ಚಗಳು ಸಂಪೂರ್ಣವಾಗಿ ಸ್ವಾಭಾವಿಕವಾಗಿರುವ ಬಗೆಯಾಗಿದ್ದು, ಸಂಸ್ಕರಣೆಯ ಯಾವುದೇ ಸೂಚನೆಯನ್ನು ಇವು ಹೊಂದಿರುವುದಿಲ್ಲ.

ನಕ್ಷತ್ರ ನೀಲಮಣಿ

ಬದಲಾಯಿಸಿ
 
[18] ಸ್ಟಾರ್‌ ಆಫ್‌ ಬಾಂಬೆ ನಕ್ಷತ್ರ ನೀಲಮಣಿ

ಒಂದು ನಕ್ಷತ್ರ ನೀಲಮಣಿ ಯು ನೀಲಮಣಿಯ ಒಂದು ಬಗೆಯಾಗಿದ್ದು, ನಕ್ಷತ್ರಪುಂಜ ಎಂದು ಕರೆಯಲ್ಪಡುವ ಒಂದು ನಕ್ಷತ್ರದ-ರೀತಿಯ ದೃಶ್ಯ-ಸಂಗತಿಯನ್ನು ಅದು ಪ್ರದರ್ಶಿಸುತ್ತದೆ. ನಕ್ಷತ್ರ ನೀಲಮಣಿಗಳು ಪರಸ್ಪರ ಛೇದಿಸುವ ಸೂಜಿಯಂಥ ಒಳಗೂಡಿಸುವಿಕೆಗಳನ್ನು (ಅನೇಕವೇಳೆ ಇದು ರೂಟೈಲ್‌ ಖನಿಜವಾಗಿದ್ದು, ಇದು ಪ್ರಧಾನವಾಗಿ ಟೈಟಾನಿಯಂ ಡೈಯಾಕ್ಸೈಡ್‌‌‌‌‌ನಿಂದ[] ಮಾಡಲ್ಪಟ್ಟಿರುವ ಒಂದು ಖನಿಜವಾಗಿದೆ) ಹೊಂದಿದ್ದು, ನೆತ್ತಿಯಮೇಲಿನ ಒಂದು ಬೆಳಕಿನ ಮೂಲದ ಮೂಲಕ ವೀಕ್ಷಿಸಿದಾಗ ಆರು-ಕಿರಣ ಅಥವಾ ರೇಖೆಯನ್ನು ಒಳಗೊಂಡ "ನಕ್ಷತ್ರ"ದ-ಆಕಾರದಲ್ಲಿರುವ ಮಾದರಿಯ ನೋಟವನ್ನು ಅದು ಉಂಟುಮಾಡುತ್ತದೆ.ಬ್ಲ್ಯಾಕ್‌ ಸ್ಟಾರ್‌‌ ಆಫ್‌ ಕ್ವೀನ್ಸ್‌ಲೆಂಡ್‌ ಎಂಬುದು ಇದುವರೆಗೂ ಗಣಿಯಿಂದ ತೆಗೆಯಲ್ಪಟ್ಟಿರುವುದರ ಪೈಕಿಯ ಬೃಹತ್ತಾದ ನಕ್ಷತ್ರ ನೀಲಮಣಿ ಎಂದು ನಂಬಲಾಗಿದ್ದು, ಅದು 733 ಕ್ಯಾರಟ್‌‌‌ಗಳಷ್ಟು ತೂಗುತ್ತದೆ.[೧೦] ಸ್ಟಾರ್‌ ಆಫ್‌ ಇಂಡಿಯಾ ಎಂಬುದು (ಇದು 563.4 ಕ್ಯಾರಟ್‌ಗಳಷ್ಟು ತೂಗುತ್ತದೆ) ಎರಡನೇ-ಅತಿದೊಡ್ಡ ನಕ್ಷತ್ರ ನೀಲಮಣಿ ಎಂದು ನಂಬಲಾಗಿದೆ, ಮತ್ತು ಅದು ಪ್ರಸಕ್ತವಾಗಿ ನ್ಯೂಯಾರ್ಕ್‌ ನಗರದಲ್ಲಿನ ಅಮೆರಿಕನ್‌ ಮ್ಯೂಸಿಯಂ ಆಫ್‌ ನ್ಯಾಚುರಲ್‌ ಹಿಸ್ಟರಿಯಲ್ಲಿ ಪ್ರದರ್ಶಿಸಲ್ಪಡುತ್ತಿದೆ. ವಾಷಿಂಗ್ಟನ್‌, D.C.ಯಲ್ಲಿನ ನ್ಯಾಷನಲ್‌ ಮ್ಯೂಸಿಯಂ ಆಫ್‌ ನ್ಯಾಚುರಲ್‌ ಹಿಸ್ಟರಿಯಲ್ಲಿ ನೆಲೆಗೊಂಡಿರುವ, 182-ಕ್ಯಾರಟ್‌ನಷ್ಟಿರುವ ಸ್ಟಾರ್‌ ಆಫ್‌ ಬಾಂಬೆಯು ಒಂದು ನೀಲಿ ನಕ್ಷತ್ರ ನೀಲಮಣಿಯ ಒಂದು ಉದಾಹರಣೆಯಾಗಿದೆ. ಆದಾಗ್ಯೂ, ನಕ್ಷತ್ರ ನೀಲಮಣಿಯೊಂದರ ಮೌಲ್ಯವು ಕೇವಲ ಕಲ್ಲಿನ ತೂಕದ ಮೇಲೆ ಮಾತ್ರವಲ್ಲದೇ, ಕಾಯದ ಬಣ್ಣ, ಗೋಚರತ್ವ ಹಾಗೂ ಅದರಲ್ಲಿನ ನಕ್ಷತ್ರಪುಂಜದ ತೀವ್ರತೆಯ ಮೇಲೂ ಅವಲಂಬಿತವಾಗಿರುತ್ತದೆ.

ಬಣ್ಣ ಬದಲಾವಣೆಯ ನೀಲಮಣಿ

ಬದಲಾಯಿಸಿ

ಬಣ್ಣ ಬದಲಾವಣೆಯ ನೀಲಮಣಿ ಎಂದು ಪರಿಚಿತವಾಗಿರುವ ನೀಲಮಣಿಯ ಒಂದು ಬಗೆಯು ವಿಭಿನ್ನ ಬೆಳಕಿನಲ್ಲಿ ವಿಭಿನ್ನ ಬಣ್ಣಗಳನ್ನು ಪ್ರದರ್ಶಿಸುತ್ತದೆ. ಬಣ್ಣ ಬದಲಾವಣೆಯ ನೀಲಮಣಿಗಳು ಹೊರಾಂಗಣದ ಬೆಳಕಿನಲ್ಲಿ ನೀಲಿಯಾಗಿ ಕಂಡರೆ, ತಾಪಜ್ವಲನದ ಒಳಾಂಗಣ ಬೆಳಕಿನ ಅಡಿಯಲ್ಲಿ ಕೆನ್ನೀಲಿಯಾಗಿ ಕಾಣಿಸುತ್ತವೆ; ಅವು ದಿನದಬೆಳಕಿನಲ್ಲಿ ಪಾಟಲವರ್ಣದಲ್ಲಿಯೂ, ಪ್ರತಿದೀಪ್ತಿ ದೀಪದ ಅಡಿಯಲ್ಲಿ ಹಸಿರುಛಾಯೆಯಲ್ಲಿಯೂ ಕಾಣಿಸಬಹುದು. ಕೆಲವೊಂದು ಕಲ್ಲುಗಳು ಬಣ್ಣವನ್ನು ಚೆನ್ನಾಗಿ ರೂಪಾಂತರಿಸುತ್ತವೆ ಮತ್ತು ಇನ್ನು ಕೆಲವು ಕೇವಲ ಆಂಶಿಕವಾಗಿ ರೂಪಾಂತರಿಸುತ್ತವೆ. ಆಂಶಿಕ ರೂಪಾಂತರದ ಸಂದರ್ಭದಲ್ಲಿ, ಕೆಲವೊಂದು ಕಲ್ಲುಗಳು ನೀಲಿಯಿಂದ ನೀಲಿಛಾಯೆಯ ಕೆನ್ನೀಲಿಗೆ ರೂಪಾಂತರಿಸುತ್ತವೆ. ಬಣ್ಣ ಬದಲಾವಣೆಯ ನೀಲಮಣಿಗಳು ವೈವಿಧ್ಯಮಯ ತಾಣಗಳಿಂದ ಬಂದರೆ, ಟಾಂಜಾನಿಯಾದ ರತ್ನ ಜಲ್ಲಿಸ್ತರಗಳು ಪ್ರಮುಖ ಮೂಲವಾಗಿದೆ. ನಿರ್ದಿಷ್ಟವಾದ ಬಣ್ಣ-ಬದಲಾವಣೆಯ ಸಂಶ್ಲೇಷಿತ ನೀಲಮಣಿಗಳನ್ನು “ಪ್ರಯೋಗಾಲಯದ” ಅಥವಾ ಅಲೆಕ್ಸಾಂಡ್ರೈಟ್‌ ಅನುಕರಣಕಾರಕ ಎಂದು ಕರಾರುವಾಕ್ಕಾಗಿ ಕರೆಯಲ್ಪಡುವ (ಅಲೆಕ್ಸಾಂಡ್ರಿಯಂ ಎಂದೂ ಕರೆಯಲಾಗುವ) “ಸಂಶ್ಲೇಷಿತ” ಅಲೆಕ್ಸಾಂಡ್ರೈಟ್‌ಗಳಾಗಿ ಮಾರಾಟಮಾಡಲಾಗುತ್ತದೆ. ಏಕೆಂದರೆ, ಅಲೆಕ್ಸಾಂಡ್ರೈಟ್‌ ಎಂಬುದು ವಾಸ್ತವವಾಗಿ ಕ್ರಿಸೋಬೆರಿಲ್‌‌‌‌‌ನ ಒಂದು ಬಗೆಯಾಗಿದ್ದು, ಇದು ಒಂದು ಸಂಪೂರ್ಣವಾಗಿ ವಿಭಿನ್ನವಾಗಿರುವ ವಸ್ತುವಾಗಿದೆ. ಇದರ ಬಹುವರ್ಣಕತೆಯು ವಿಭಿನ್ನವಾಗಿದ್ದು, ಅದು ಬಣ್ಣ-ಬದಲಾವಣೆಯ ಕುರಂಗದ ಕಲ್ಲಿನದಕ್ಕಿಂತ (ನೀಲಮಣಿ) ಸಾಕಷ್ಟು ಹೆಚ್ಚು ಎದ್ದುಕಾಣುವಂತಿರುತ್ತದೆ.

ಬಣ್ಣದ ಮೂಲ

ಬದಲಾಯಿಸಿ
 
ನೀಲಮಣಿಯ ಹರಳಿನ ರೂಪದ ರಚನೆ

ಕೆಂಪು ಮಾಣಿಕ್ಯಗಳು ಕುರಂಗದ ಕಲ್ಲುಗಳಾಗಿದ್ದು, ಹಳದಿ-ಹಸಿರು ಬೆಳಕನ್ನು ಹೀರಿಕೊಳ್ಳುವ ಕ್ರೋಮಿಯಂ ಅಶುದ್ಧತೆಗಳನ್ನು ಅವು ಒಳಗೊಂಡಿರುತ್ತವೆ. ಕ್ರೋಮಿಯಂ ಅಶುದ್ಧತೆಗಳ ಅಂಶವು ಹೆಚ್ಚುತ್ತಾ ಹೊಂದಂತೆ, ಅದರ ಪರಿಣಾಮವಾಗಿ ಗಾಢವಾದ ಮಾಣಿಕ್ಯದ ಕೆಂಪು ಬಣ್ಣವು ಹೊರಹೊಮ್ಮುತ್ತದೆ.[೧೧] ಕೆನ್ನೀಲಿ ನೀಲಮಣಿಗಳು ಕೊಂಚ ಪ್ರಮಾಣಗಳಲ್ಲಿ ವೆನಡಿಯಂನ್ನು ಒಳಗೊಂಡಿರುತ್ತವೆ ಮತ್ತು ಒಂದು ವೈವಿಧ್ಯಮಯ ಛಾಯೆಗಳಲ್ಲಿ ಬರುತ್ತವೆ. ~0.01%ನಷ್ಟು ಟೈಟಾನಿಯಂನ್ನು ಒಳಗೊಂಡಿರುವ ಕುರಂಗದ ಕಲ್ಲು ವರ್ಣರಹಿತವಾಗಿರುತ್ತದೆ. ಒಂದು ವೇಳೆ ಕಬ್ಬಿಣದ ಹಾಜರಿಯು ಅಲ್ಪ ಪ್ರಮಾಣಗಳಲ್ಲಿದ್ದರೆ, ಒಂದು ಅತ್ಯಂತ ನಸು ಹಳದಿಯಿಂದ ಹಸಿರಿನವರೆಗಿನ ಬಣ್ಣವು ಕಂಡುಬರಬಹುದು. ಆದಾಗ್ಯೂ, ಒಂದು ವೇಳೆ ಟೈಟಾನಿಯಂ ಹಾಗೂ ಕಬ್ಬಿಣದ ಅಶುದ್ಧತೆಗಳೆರಡೂ ಒಟ್ಟಾಗಿ ಹಾಜರಿದ್ದಲ್ಲಿ, ಒಂದು ಭವ್ಯವಾದ ಗಾಢ-ನೀಲಿ ಬಣ್ಣವು ಫಲಿತವಾಗಿ ಹೊರಹೊಮ್ಮುತ್ತದೆ.[೧೨] ಕ್ರೋಮಿಯಂ ಹಾಗೂ ವೆನಡಿಯಂ ಅಶುದ್ಧತೆಗಳಿಗೆ ಸಂಬಂಧಿಸಿದಂತೆ ಬಣ್ಣವನ್ನು ಉಂಟುಮಾಡುವ ಬೆಳಕಿನ ಸೀಮಿತಗೊಳಿಸಲ್ಪಟ್ಟ ಅಥವಾ ಸ್ಥಳೀಕರಿಸಲ್ಪಟ್ಟ ("ಪರಮಾಣುಗಳ ನಡುವಿನ") ಹೀರಿಕೆಗಿಂತ ಭಿನ್ನವಾಗಿ, ನೀಲಮಣಿಗಳಲ್ಲಿನ ನೀಲಿ ಬಣ್ಣವು ಅಂತರ-ಸಂಯೋಗ ಸಾಮರ್ಥ್ಯದ ವಿದ್ಯುದಾವೇಶ ವರ್ಗಾವಣೆಯಿಂದ ಬರುತ್ತದೆ. ಇದು ಒಂದು ಸಂಕ್ರಮಣ-ಲೋಹದ ಅಯಾನಿನಿಂದ ಮತ್ತೊಂದಕ್ಕೆ, ವಹನ ಅಥವಾ ಸಂಯೋಗ ಸಾಮರ್ಥ್ಯ ಪಟ್ಟೆಯ ಮೂಲಕ ನಡೆಯುವ ಒಂದು ಇಲೆಕ್ಟ್ರಾನ್‌ನ ವರ್ಗಾವಣೆಯಾಗಿದೆ. ಕಬ್ಬಿಣವು Fe2+ ಅಥವಾ Fe3+ ಸ್ವರೂಪವನ್ನು ಪಡೆಯಬಲ್ಲದಾಗಿದ್ದರೆ, ಟೈಟಾನಿಯಂ Ti4+ ಸ್ವರೂಪವನ್ನು ಸಾಮಾನ್ಯವಾಗಿ ಪಡೆಯುತ್ತದೆ. ಒಂದು ವೇಳೆ Fe2+ ಹಾಗೂ Ti4+ ಅಯಾನುಗಳು Al3+ಗೆ ಬದಲಿಯಾಗಿ ಬಳಸಲ್ಪಟ್ಟರೆ, ವಿದ್ಯುದಾವೇಶದ ಅಸಮತೋಲನದ ಸೀಮಿತಗೊಳಿಸಲ್ಪಟ್ಟ ಪ್ರದೇಶಗಳು ಸೃಷ್ಟಿಯಾಗುತ್ತವೆ. Fe2+ ಮತ್ತು Ti4+ನಿಂದ ನಡೆಯುವ ಒಂದು ಇಲೆಕ್ಟ್ರಾನ್‌ ವರ್ಗಾವಣೆಯು, ಎರಡರದ್ದೂ ಸಂಯೋಗ ಸಾಮರ್ಥ್ಯ ಸ್ಥಿತಿಯಲ್ಲಿ ಒಂದು ಬದಲಾವಣೆಯನ್ನು ಉಂಟುಮಾಡಬಲ್ಲದ್ದಾಗಿರುತ್ತದೆ. ಸಂಯೋಗ ಸಾಮರ್ಥ್ಯದ ಬದಲಾವಣೆಯ ಕಾರಣದಿಂದಾಗಿ, ಇಲೆಕ್ಟ್ರಾನ್‌ಗೆ ಸಂಬಂಧಿಸಿರುವ ಶಕ್ತಿಯಲ್ಲಿ ಒಂದು ನಿರ್ದಿಷ್ಟ ಬದಲಾವಣೆಯು ಕಂಡುಬರುತ್ತದೆ, ಮತ್ತು ವಿದ್ಯುತ್ಕಾಂತೀಯ ಶಕ್ತಿಯು ಹೀರಲ್ಪಡುತ್ತದೆ. ಹೀರಿಕೊಳ್ಳಲ್ಪಟ್ಟ ಶಕ್ತಿಯ ತರಂಗಾಂತರವು ಹಳದಿ ಬೆಳಕಿಗೆ ಸಂಬಂಧಪಟ್ಟಿರುತ್ತದೆ. ಬೀಳುವ ಬಿಳಿಯ ಬೆಳಕಿನಿಂದ ಈ ಬೆಳಕನ್ನು ಕಳೆದಾಗ, ಪೂರಕವಾಗಿರುವ ಬಣ್ಣವಾದ ನೀಲಿಯು ಫಲಿತವಾಗಿ ಹೊರಹೊಮ್ಮುತ್ತದೆ. ಕೆಲವೊಮ್ಮೆ, ಪರಮಾಣುವಿನ ಅಂತರ ಬಿಡುವಿಕೆಯು ವಿಭಿನ್ನ ದಿಕ್ಕುಗಳಲ್ಲಿ ವಿಭಿನ್ನವಾಗಿದ್ದಾಗ, ನೀಲಿ-ಹಸಿರು ದ್ವಿವರ್ಣತ್ವವು ಫಲಿತವಾಗಿ ಹೊರಹೊಮ್ಮುತ್ತದೆ.ಅಂತರ-ಸಂಯೋಗ ಸಾಮರ್ಥ್ಯದ ವಿದ್ಯುದಾವೇಶದ ವರ್ಗಾವಣೆಯು ಒಂದು ಪ್ರಕ್ರಿಯೆಯಾಗಿದ್ದು, ಬೆರಕೆಯ ಒಂದು ಕಡಿಮೆ ಶೇಖಡಾವಾರು ಪ್ರಮಾಣದಲ್ಲಿ ಒಂದು ಪ್ರಬಲವಾದ ವರ್ಣರಂಜಿತ ನೋಟವನ್ನು ಅದು ಉಂಟುಮಾಡುತ್ತದೆ. ಗಾಢ ಕೆಂಪು ಮಾಣಿಕ್ಯದ ಬಣ್ಣವು ಕಾಣಿಸಿಕೊಳ್ಳುವುದಕ್ಕೆ ಮುಂಚಿತವಾಗಿ ಕನಿಷ್ಟಪಕ್ಷ 1%ನಷ್ಟು ಕ್ರೋಮಿಯಂ ಇರುವುದು ಅಗತ್ಯವಾಗಿದ್ದರೆ, ಕೇವಲ 0.01% ನಷ್ಟು ಟೈಟಾನಿಯಂ ಹಾಗೂ ಕಬ್ಬಿಣದ ಹಾಜರಿಯೊಂದಿಗೆ ನೀಲಮಣಿಯ ನೀಲಿಯು ಸ್ಪಷ್ಟವಾಗಿರುತ್ತದೆ.

ಸಂಸ್ಕರಣೆಗಳು

ಬದಲಾಯಿಸಿ

ನೀಲಮಣಿಗಳ ಸ್ಪಷ್ಟತೆ ಹಾಗೂ ಬಣ್ಣವನ್ನು ವರ್ಧಿಸಲು ಮತ್ತು ಸುಧಾರಿಸಲು, ನೀಲಮಣಿಗಳನ್ನು ಹಲವಾರು ವಿಧಾನಗಳ ಮೂಲಕ ಸಂಸ್ಕರಿಸಬಹುದಾಗಿರುತ್ತದೆ.[೧೩] ಬಣ್ಣವನ್ನು ಸುಧಾರಿಸಲು ಅಥವಾ ವರ್ಧಿಸಲು ಸ್ವಾಭಾವಿಕ ನೀಲಮಣಿಗಳನ್ನು ಬಿಸಿಮಾಡುವುದು ಸಾಮಾನ್ಯ ಪರಿಪಾಠವಾಗಿದೆ. 500 ಮತ್ತು 1800 °C ನಡುವಿನ ತಾಪಮಾನಗಳವರೆಗೆ ನೀಲಮಣಿಗಳನ್ನು ಹಲವಾರು ಗಂಟೆಗಳವರೆಗೆ ಗಾಳಿಯಲ್ಲಿ ಬಿಸಿಮಾಡುವುದರ ಮೂಲಕ, ಅಥವಾ ಸಾರಜನಕ-ಕೊರತೆಯಿರುವ ವಾತಾವರಣದ ಒಂದು ಒಲೆಯಲ್ಲಿ ಏಳು ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ ಬಿಸಿಮಾಡುವ ಮೂಲಕ ಈ ಪರಿಪಾಠವನ್ನು ಕೈಗೊಳ್ಳಲಾಗುತ್ತದೆ. ಬಿಸಿ ಮಾಡಿದ ನಂತರ, ಕಲ್ಲಿನ ಬಣ್ಣವು ಹೆಚ್ಚು ನೀಲಿಯಾಗುತ್ತದೆಯಾದರೂ, ಒಂದಷ್ಟು ರೂಟೈಲ್‌ ಒಳಗೂಡಿಸುವಿಕೆಗಳನ್ನು (ರೇಷ್ಮೆ ಎಳೆ) ಅದು ಕಳೆದುಕೊಳ್ಳುತ್ತದೆ. ಹೆಚ್ಚು ಬಿಸಿಯಾಗಿರುವ ತಾಪಮಾನಗಳನ್ನು ಬಳಸಿದಾಗ, ಸದರಿ ಕಲ್ಲು ತನ್ನೆಲ್ಲಾ ರೇಷ್ಮೆ ಎಳೆಯನ್ನು ಕಳೆದುಕೊಳ್ಳುತ್ತದೆ ಮತ್ತು ವರ್ಧನದ ಅಡಿಯಲ್ಲಿ ನಿಚ್ಚಳವಾಗಿ ಮಾರ್ಪಡುತ್ತದೆ ಅಥವಾ ಕಾಣಿಸಿಕೊಳ್ಳುತ್ತದೆ.[೧೪] ಬಿಸಿಮಾಡುವಿಕೆಗೆ ಈಡುಮಾಡಲ್ಪಟ್ಟ ನೀಲಮಣಿ ಹಾಗೂ ಇತರ ರತ್ನದಕಲ್ಲುಗಳ ಪುರಾವೆಯು, ಕನಿಷ್ಟಪಕ್ಷ ರೋಮನ್ನರ ಕಾಲಗಳಷ್ಟು ಹಿಂದೆ ತನ್ನ ಇತಿಹಾಸವನ್ನು ಹೊಂದಿದೆ.[೧೫] ಬಿಸಿಮಾಡುವಿಕೆಗೆ ಈಡಾಗದ ಕಲ್ಲುಗಳು ಅತ್ಯಂತ ಅಪರೂಪವಾಗಿದ್ದು, "ಬಿಸಿಯ ಸಂಸ್ಕರಣೆಯ ಯಾವುದೇ ಪುರಾವೆಯಿಲ್ಲ" ಎಂಬ ಷರಾವನ್ನು ಬರೆಯಲ್ಪಟ್ಟಿರುವ, ಸ್ವತಂತ್ರ ರತ್ನಶಾಸ್ತ್ರೀಯ ಪ್ರಯೋಗಾಲಯವೊಂದರಿಂದ ನೀಡಲ್ಪಟ್ಟ ಒಂದು ಪ್ರಮಾಣಪತ್ರದ ಜೊತೆಯಲ್ಲಿ ಅವು ಅನೇಕವೇಳೆ ಮಾರಲ್ಪಡುತ್ತವೆ. ಬಣ್ಣಗಳನ್ನು ಸುಧಾರಿಸುವ ಉದ್ದೇಶಕ್ಕೆ ಸಂಬಂಧಿಸಿದಂತೆ ನೀಲಮಣಿಗೆ ಧಾತುಗಳನ್ನು ಸೇರ್ಪಡೆಮಾಡಲು ವಿಸರಣ ಸಂಸ್ಕರಣೆಗಳನ್ನು ಬಳಸಲಾಗುತ್ತದೆಯಾದ್ದರಿಂದ, ಅವು ಒಂದು ರೀತಿಯಲ್ಲಿ ಹೆಚ್ಚು ವಿವಾದಾತ್ಮಕವಾಗಿವೆ. ವಿಶಿಷ್ಟವೆನಿಸುವಂತೆ, ನೀಲಮಣಿಯ ದ್ರವೀಭವನ ಬಿಂದುವಿಗಿಂತ ಸ್ವಲ್ಪವೇ ಕಡಿಮೆಯಿರುವ, ಅತ್ಯಂತ ಹೆಚ್ಚಿನ ಬಿಸಿಯೊಂದಿಗೆ ಬೆರಿಲಿಯಂ ಒಂದು ನೀಲಮಣಿಯೊಳಗೆ ಪ್ರಸರಣಗೊಳ್ಳಲ್ಪಡುತ್ತದೆ, ಅಂದರೆ, ಅದರಲ್ಲಿ ಬೆರೆತುಹೋಗುತ್ತದೆ. ಆರಂಭಿಕವಾಗಿ (ಸುಮಾರು 2000ರಲ್ಲಿ) ಕಿತ್ತಳೆ ಬಣ್ಣದ ನೀಲಮಣಿಗಳು ಈ ಪ್ರಕ್ರಿಯೆಯೊಂದಿಗೆ ಸೃಷ್ಟಿಸಲ್ಪಟ್ಟವಾದರೂ, ಈಗ ಸದರಿ ಪ್ರಕ್ರಿಯೆಯು ಪ್ರಗತಿ ಕಂಡಿದೆ ಮತ್ತು ನೀಲಮಣಿಯ ಅನೇಕ ಬಣ್ಣಗಳನ್ನು ಬೆರಿಲಿಯಂನೊಂದಿಗೆ ಅನೇಕವೇಳೆ ಸಂಸ್ಕರಿಸಲಾಗುತ್ತಿದೆ. ವಿಷಯದ ಪ್ರಕಟಿಸುವಿಕೆ ಅಥವಾ ಬಹಿರಂಗಪಡಿಸುವಿಕೆಯಿಲ್ಲದೆಯೇ ಬೆರಿಲಿಯಂ-ಸಂಸ್ಕರಿತ ನೀಲಮಣಿಗಳನ್ನು ಮಾರಾಟಮಾಡುವುದು ಅನೈತಿಕವಾಗಿದೆ, ಮತ್ತು ಒಂದು ಸ್ವಾಭಾವಿಕ ರತ್ನಕ್ಕಿಂತ ಅಥವಾ ಕೇವಲ ಬಿಸಿಮಾಡುವಿಕೆ ಮಾತ್ರದಿಂದಲೇ ವರ್ಧಿಸಲ್ಪಟ್ಟ ಒಂದು ರತ್ನಕ್ಕಿಂತ ಇದರ ಬೆಲೆಯು ಸಾಕಷ್ಟು ಕಡಿಮೆಯಿರುವುದು ಅಗತ್ಯವಾಗಿರುತ್ತದೆ.ಮೇಲ್ಮೈ ವಿಸರಣದೊಂದಿಗೆ ಕಲ್ಲುಗಳನ್ನು ಸಂಸ್ಕರಿಸುವಿಕೆಗೆ ಸಾಮಾನ್ಯವಾಗಿ ಅಸಮ್ಮತಿಯನ್ನು ಸೂಚಿಸಲಾಗುತ್ತದೆ. ಏಕೆಂದರೆ, ಕಲ್ಲುಗಳು ಚಕ್ಕೆಯೆದ್ದಾಗ ಅಥವಾ ಅವಕ್ಕೆ ಮರುಹೊಳಪು ನೀಡಿದಾಗ/ಮುಖವನ್ನು ಮರುರೂಪಿಸಿದಾಗ, 'ಪದಪಾರದಶ್ಚ' ಬಣ್ಣವನ್ನು ಹೊಂದಿರುವ ಪದರವು ತೊಡೆದುಹಾಕಲ್ಪಡಬಹುದು. (ಆದಾಗ್ಯೂ, ಕೆಲವೊಂದು ವಿಸರಣ ಸಂಸ್ಕರಿತ ಕಲ್ಲುಗಳಿದ್ದು, ಅವುಗಳಲ್ಲಿ ಮೇಲ್ಮೈಗಿಂತ ಹೆಚ್ಚು ಆಳಕ್ಕೆ ಬಣ್ಣವು ಹೋಗುತ್ತದೆ.) ಇಲ್ಲಿರುವ ಒಂದು ಸಮಸ್ಯೆಯೆಂದರೆ, ಸಂಸ್ಕರಿಸಲ್ಪಟ್ಟ ಪದಪಾರದಶ್ಚಗಳನ್ನು ಪತ್ತೆಹಚ್ಚುವುದು ಕೆಲವೊಮ್ಮೆ ಅತ್ಯಂತ ಕಷ್ಟಕರವಾಗಿರುತ್ತದೆ, ಹಾಗೂ ಅವುಗಳಲ್ಲಿ ಹಣಹೂಡುವುದಕ್ಕೆ ಅಂದರೆ ಅವುಗಳನ್ನು ಖರೀದಿಸುವುದಕ್ಕೆ ಮುಂಚಿತವಾಗಿ ಒಂದು ಪ್ರತಿಷ್ಠಿತ ರತ್ನಶಾಸ್ತ್ರೀಯ ಪ್ರಯೋಗಾಲಯದಿಂದ (ಉದಾಹರಣೆಗೆ, ಗ್ಯುಬೆಲಿನ್‌, SSEF, AGTA, ಇತ್ಯಾದಿ.) ನೀಡಲ್ಪಟ್ಟ ಒಂದು ಪ್ರಮಾಣಪತ್ರವನ್ನು ಪಡೆದುಕೊಳ್ಳುವಂತೆ ಶಿಫಾರಸುಮಾಡಲಾಗುತ್ತದೆ ಎಂಬುದಕ್ಕೆ ಅವು ಕಾರಣವಾಗಿವೆ. ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಫೆಡರಲ್‌ ಟ್ರೇಡ್‌ ಕಮಿಷನ್‌‌ ಮಾರ್ಗದರ್ಶಿ ಸೂತ್ರಗಳ ಅನುಸಾರ, ರತ್ನದ ಮೌಲ್ಯದ ಮೇಲೆ ಒಂದು ಗಣನೀಯ ಪರಿಣಾಮವನ್ನು ಹೊಂದಿರುವ ವರ್ಧಿಸುವಿಕೆಯ ಯಾವುದೇ ವಿಧಾನದ ಕುರಿತಾದ ವಿಷಯವನ್ನು ಪ್ರಕಟಿಸುವುದು ಅಥವಾ ಹೊರಗೆಡಹುವುದು ಅವಶ್ಯಕವಾಗಿದೆ.[೧೬]

ಗಣಿಗಾರಿಕೆ

ಬದಲಾಯಿಸಿ
 
ಮಡಗಾಸ್ಕರ್‌ಗೆ ಸೇರಿದ ನೀಲಮಣಿ

ಮೆಕ್ಕಲು ಮಣ್ಣಿನ ನಿಕ್ಷೇಪಗಳಿಂದ ಅಥವಾ ನೆಲದಡಿಯ ಪ್ರಾಥಮಿಕ ಗಣಿಗಳಿಂದ ಗಣಿಗಾರಿಕೆಯ ಮೂಲಕ ನೀಲಮಣಿಗಳನ್ನು ಹೊರತೆಗೆಯಲಾಗುತ್ತದೆ. ಗಣಿಗಾರಿಕೆಯ ತಾಣಗಳಲ್ಲಿ ಮೈನ್‌ಮಾರ್‌, ಮಡಗಾಸ್ಕರ್‌, ಶ್ರೀಲಂಕಾ, ಆಸ್ಟ್ರೇಲಿಯಾ, ಥೈಲೆಂಡ್‌, ಭಾರತ, ಪಾಕಿಸ್ತಾನ, ಆಫ್ಘಾನಿಸ್ತಾನ, ಟಾಂಜಾನಿಯಾ, ಕೀನ್ಯಾ, ಮತ್ತು ಚೀನಾ ಮೊದಲಾದವು ಸೇರಿವೆ. ಮಾಸಲು ಕೆಂಪು ಬಣ್ಣದ ನೀಲಮಣಿ, ಸ್ಟಾರ್‌ ಆಫ್‌ ಇಂಡಿಯಾ, ಮತ್ತು ಸ್ಟಾರ್‌ ಆಫ್‌ ಬಾಂಬೆ ಇವು ಶ್ರೀಲಂಕಾದ ಗಣಿಗಳಿಂದ ಉತ್ಪಾದಿಸಲ್ಪಡುತ್ತವೆ. ಮಡಗಾಸ್ಕರ್‌ ದೇಶವು (2007ರ ವೇಳೆಗೆ ಇದ್ದಂತೆ) ನೀಲಮಣಿ ಉತ್ಪಾದನೆಯಲ್ಲಿ ವಿಶ್ವದಲ್ಲೇ ಅಗ್ರಗಣ್ಯನಾಗಿದ್ದು, ಅದರ ನಿಕ್ಷೇಪಗಳು ನಿರ್ದಿಷ್ಟವಾಗಿ ಇಲಕಾಕಾ ನಗರದಲ್ಲಿ ಹಾಗೂ ಅದರ ಸುತ್ತಮುತ್ತ ಇವೆ.[೧೭] ಇಲಕಾಕಾ ಗಣಿಗಳು ಪ್ರಾರಂಭವಾಗುವುದಕ್ಕೆ ಮುಂಚಿತವಾಗಿ, ಆಸ್ಟ್ರೇಲಿಯಾವು (1987ರ ವೇಳೆಗೆ ಇದ್ದಂತೆ) ನೀಲಮಣಿಗಳ ಅತ್ಯಂತ ದೊಡ್ಡ ತಯಾರಕನಾಗಿತ್ತು.[೧೮] 1991ರಲ್ಲಿ, ನೀಲಮಣಿಗಳ ಒಂದು ಹೊಸ ಮೂಲವು ದಕ್ಷಿಣದ ಮಡಗಾಸ್ಕರ್‌‌ನ ಆಂಡ್ರಾನೋನ್‌ಡಂಬೊ ಎಂಬಲ್ಲಿ ಪತ್ತೆಹಚ್ಚಲ್ಪಟ್ಟಿತು. ಆ ಪ್ರದೇಶವು ಅದು ಒಳಗೊಂಡಿರುವ ನೀಲಮಣಿಗಳಿಗೆ ಸಂಬಂಧಿಸಿದಂತೆ 1993ರಿಂದಲೂ ಬಳಸಿಕೊಳ್ಳಲ್ಪಟ್ಟಿತಾದರೂ, ಕೆಲವೇ ವರ್ಷಗಳ ನಂತರ ಅದನ್ನು ಕಾರ್ಯತಃ ಬಿಟ್ಟುಬಿಡಲಾಯಿತು - ಏಕೆಂದರೆ, ನೀಲಮಣಿಗಳನ್ನು ಅವುಗಳ ತಳಬಂಡೆಯಲ್ಲಿ ಪುನಃ ವಶಪಡಿಸಿಕೊಳ್ಳುವಲ್ಲಿ ತೊಡಕುಗಳು ಕಂಡುಬಂದವು.[೧೯] ಈ ವಿಧದ ನೀಲಮಣಿಯು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ "ಕಾಶ್ಮೀರ ನೀಲಮಣಿ" ಎಂಬ ಹೆಸರಿನಲ್ಲಿ ಮಾರಲ್ಪಟ್ಟಿದೆ. ಉತ್ತರ ಅಮೆರಿಕಾದಲ್ಲಿ, ಬಹುಪಾಲು ಮೊಂಟಾನದ ಹೆಲೆನಾದ ಸುತ್ತಮುತ್ತವಿರುವ ನಿಕ್ಷೇಪಗಳಿಂದ ಗಣಿಗಾರಿಕೆಯ ಮೂಲಕ ನೀಲಮಣಿಗಳು ಹೊರತೆಗೆಯಲ್ಪಟ್ಟಿವೆ. N.C.ಯ ಫ್ರಾಂಕ್ಲಿನ್ ಪ್ರದೇಶದಲ್ಲಿ ಕೆಲವು ರತ್ನದ-ದರ್ಜೆಯ ನೀಲಮಣಿಗಳು ಹಾಗೂ ಮಾಣಿಕ್ಯಗಳು ಕೂಡಾ ಕಂಡುಬಂದಿವೆ.

ಸಂಶ್ಲೇಷಿತ ನೀಲಮಣಿ

ಬದಲಾಯಿಸಿ
ಚಿತ್ರ:Labstarsapphirering.JPG
ಸಂಶ್ಲೇಷಿತ ನಕ್ಷತ್ರ ನೀಲಮಣಿ
 
ಸಂಶ್ಲೇಷಿತ ನೀಲಮಣಿ

1902ರಲ್ಲಿ, ಅಗಸ್ಟೆ ವೆರ್ನ್ಯೂಲಿ ಎಂಬ ಫ್ರೆಂಚ್‌ ರಸಾಯನ ಶಾಸ್ತ್ರಜ್ಞನು ಸಂಶ್ಲೇಷಿತ ನೀಲಮಣಿಯ ಹರಳುಗಳನ್ನು ತಯಾರಿಸುವುದಕ್ಕೆ ಸಂಬಂಧಿಸಿದ ಪ್ರಕ್ರಿಯೆಯೊಂದನ್ನು ಅಭಿವೃದ್ಧಿಪಡಿಸಿದ.[೨೦] ಅವನ ಹೆಸರನ್ನೇ ಇರಿಸಲಾದ ವೆರ್ನ್ಯೂಲಿ ಪ್ರಕ್ರಿಯೆಯಲ್ಲಿ, ಸೂಕ್ಷ್ಮವಾದ ಅಲ್ಯುಮಿನಾ ಪುಡಿಯನ್ನು ಒಂದು ಆಕ್ಸಿಹೈಡ್ರೋಜೆನ್‌ ಜ್ವಾಲೆಗೆ (ಅಂದರೆ, ಆಮ್ಲಜನಕ ಮತ್ತು ಜಲಜನಕಗಳ ಸೂಕ್ತಮಿಶ್ರಣವನ್ನು ಉರಿಸಿ ಪಡೆಯುವ ಅಧಿಕ ತಾಪದ ಜ್ವಾಲೆಗೆ) ಸೇರಿಸಲಾಗುತ್ತದೆ, ಮತ್ತು ಇದನ್ನು ಒಂದು ಬಲೆನಾಳಕ್ಕೆ (ಮ್ಯಾಂಟ್ಲ್‌‌) ಪ್ರತಿಯಾಗಿ ಕೆಳಮುಖವಾಗಿ ತಿರುಗಿಸಲಾಗುತ್ತದೆ.[೨೧] ಜ್ವಾಲೆಯಲ್ಲಿರುವ ಅಲ್ಯುಮಿನಾವು ನಿಧಾನವಾಗಿ ಸಂಚಯನಗೊಂಡು, ತನ್ಮೂಲಕ ನೀಲಮಣಿ ದ್ರವ್ಯದ ಕಣ್ಣೀರ ಹನಿಯಾಕಾರದ "ಬೋಗುಣಿ"ಯೊಂದನ್ನು ಸೃಷ್ಟಿಸುತ್ತದೆ. ಮಾಣಿಕ್ಯದ ಕೃತಕ ರೂಪಾಂತರಗಳನ್ನು, ಮತ್ತು ನೀಲಮಣಿಯ ಇತರ ಎಲ್ಲಾ ಸ್ವಾಭಾವಿಕ ಬಣ್ಣಗಳನ್ನು, ಮತ್ತು ಇದರ ಜೊತೆಗೆ, ಭೂವಿಜ್ಞಾನದಲ್ಲಿ ಎಂದಿಗೂ ಕಂಡುಬರದ ಇತರ ಬಣ್ಣಗಳನ್ನು ಸೃಷ್ಟಿಸಲು ರಾಸಾಯನಿಕ ಡೋಪಂಟ್‌‌‌ಗಳನ್ನು ಸೇರಿಸಬಹುದು. ಸ್ವಾಭಾವಿಕ ಕಲ್ಲುಗಳಲ್ಲಿ ಕಂಡುಬರುವ ನ್ಯೂನತೆಗಳಿಲ್ಲದೆಯೇ ಕೃತಕ ನೀಲಮಣಿ ದ್ರವ್ಯವನ್ನು ತಯಾರಿಸಬಹುದು ಎಂಬುದನ್ನು ಹೊರತುಪಡಿಸಿದರೆ, ಕೃತಕ ನೀಲಮಣಿ ದ್ರವ್ಯವು ಸ್ವಾಭಾವಿಕ ನೀಲಮಣಿಯನ್ನು ಹೋಲುವಂತಿರುತ್ತದೆ. ವೆರ್ನ್ಯೂಲಿ ಪ್ರಕ್ರಿಯೆಯ ಅನನುಕೂಲತೆಯೆಂದರೆ, ಬೆಳೆದಿರುವ ಹರಳುಗಳು ಉನ್ನತವಾದ ಆಂತರಿಕ ಎಳೆತಗಳನ್ನು ಹೊಂದಿರುತ್ತವೆ. ನೀಲಮಣಿಯನ್ನು ತಯಾರಿಸುವ ಇಂದಿನ ಅನೇಕ ವಿಧಾನಗಳು ಝೊಕ್ರಾಲ್ಸ್ಕಿ ಪ್ರಕ್ರಿಯೆಯ ಮಾರ್ಪಾಡುಗಳಾಗಿದ್ದು, ಈ ಪ್ರಕ್ರಿಯೆಯು 1916ರಲ್ಲಿ ಆವಿಷ್ಕರಿಸಲ್ಪಟ್ಟಿತು.[೨೨] ಈ ಪ್ರಕ್ರಿಯೆಯಲ್ಲಿ, ಒಂದು ಪುಟ್ಟದಾದ ನೀಲಮಣಿಯ ಬೀಜದ ಹರಳನ್ನು ರೋಡಿಯಂ[೨೩] ಎಂಬ ಬೆಲೆಬಾಳುವ ಲೋಹದಿಂದ ಮಾಡಲ್ಪಟ್ಟ ಒಂದು ಮೂಸೆಯೊಳಗಿನ ಕರಗಿಸಿದ ಅಲ್ಯುಮಿನಾದಲ್ಲಿ ಮುಳುಗಿಸಲಾಗುತ್ತದೆ. ಆಮೇಲೆ, ಪ್ರತಿ ಗಂಟೆಗೆ ಒಂದರಿಂದ 100 ಮಿ.ಮೀ.ವರೆಗಿನ ಒಂದು ದರ ಅಥವಾ ಪ್ರಮಾಣದಲ್ಲಿ ಅದನ್ನು ಮೇಲುಗಡೆಗೆ ನಿಧಾನವಾಗಿ ಹಿಂದೆಳೆದುಕೊಳ್ಳಲಾಗುತ್ತದೆ. ಅಲ್ಯುಮಿನಾವು ತುದಿಯಲ್ಲಿ ಹರಳುಗಳಾಗಿ ರೂಪುಗೊಳ್ಳುವುದರೊಂದಿಗೆ, ದೊಡ್ಡ ಗಾತ್ರದ ಉದ್ದನೆಯ ಕ್ಯಾರಟ್‌-ಆಕಾರದ ಬೋಗುಣಿಗಳನ್ನು ಸೃಷ್ಟಿಸುತ್ತದೆ. ಈ ಬೋಗುಣಿಗಳು 400 ಮಿ.ಮೀ.ಯವರೆಗಿನ ವ್ಯಾಸವನ್ನು ಹೊಂದಿದ್ದು, ಹೆಚ್ಚೂಕಮ್ಮಿ 500 ಕೆ.ಜಿ.ಯಷ್ಟು ತೂಗುತ್ತವೆ.[೨೪] 2003ರಲ್ಲಿ, ಸಂಶ್ಲೇಷಿತ ನೀಲಮಣಿಯ ಜಾಗತಿಕ ಮಟ್ಟದಲ್ಲಿನ ಉತ್ಪಾದನೆಯು 250 ಟನ್ನುಗಳಷ್ಟಿದ್ದು (1.25 × 109 ಕ್ಯಾರಟ್‌ಗಳು), ಇದರಲ್ಲಿನ ಬಹುಪಾಲು ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಹಾಗೂ ರಷ್ಯಾದಿಂದ ಉತ್ಪಾದಿಸಲ್ಪಟ್ಟಿತ್ತು.[೨೪][೨೫] ಅಗ್ಗದ ಸಂಶ್ಲೇಷಿತ ನೀಲಮಣಿಯ ಲಭ್ಯತೆಯು, ಈ ಅನನ್ಯ ದ್ರವ್ಯಕ್ಕೆ ಸಂಬಂಧಿಸಿದ ಅನೇಕ ಕೈಗಾರಿಕಾ ಬಳಕೆಗಳನ್ನು ಬಹಿರಂಗಪಡಿಸಿತು: ಮೊದಲ ಲೇಸರ್‌‌ನ್ನು ಸಂಶ್ಲೇಷಿತ ಮಾಣಿಕ್ಯದ ಸಲಾಕೆಯೊಂದರಿಂದ ರೂಪಿಸಲಾಯಿತು. ಟೈಟಾನಿಯಂ-ನೀಲಮಣಿ ಲೇಸರ್‌‌ಗಳು ಅತ್ಯಂತ ಜನಪ್ರಿಯವಾಗಿವೆ. ವಿದ್ಯುತ್ಕಾಂತೀಯ ರೋಹಿತದ ಕೆಂಪು ಹಾಗೂ ಅವರೋಹಿತ-ಸಮೀಪದ ವಲಯದಲ್ಲಿ ಹಲವಾರು ತರಂಗಾಂತರಗಳಿಗೆ ಹೊಂದಿಸಲ್ಪಡುವಲ್ಲಿನ, ತುಲನಾತ್ಮಕವಾಗಿ ಅಪರೂಪವಾಗಿರುವ ಅವುಗಳ ಸಾಮರ್ಥ್ಯವೇ ಟೈಟಾನಿಯಂ-ನೀಲಮಣಿ ಲೇಸರ್‌ಗಳ ಜನಪ್ರಿಯತೆಗೆ ಕಾರಣವಾಗಿದೆ. ಅವುಗಳನ್ನು ಸುಲಭವಾಗಿ ಕಂಪನದ ವಿಧಾನವಾಗಿ-ಬಂಧಿಸಿಡಬಹುದಾಗಿದೆ. ಈ ಲೇಸರ್‌‌ಗಳಲ್ಲಿ, ಸಂಶ್ಲೇಷಣದಿಂದ-ತಯಾರಿಸಲ್ಪಟ್ಟ, ಕ್ರೋಮಿಯಂ ಅಥವಾ ಟೈಟಾನಿಯಂ ಅಶುದ್ಧತೆಗಳೊಂದಿಗಿನ ನೀಲಮಣಿಯ ಒಂದು ಹರಳನ್ನು ಒಂದು ವಿಶೇಷ ದೀಪದಿಂದ ಅಥವಾ ಮತ್ತೊಂದು ಲೇಸರ್‌ನಿಂದ ಬರುವ ತೀಕ್ಷ್ಣ ಬೆಳಕಿನಿಂದ ವಿಕಿರಣದ ಪ್ರಭಾವಕ್ಕೆ ಈಡುಮಾಡಿ, ಉತ್ತೇಜಿಸಲ್ಪಟ್ಟ ಹೊರಸೂಸುವಿಕೆಯನ್ನು ಸೃಷ್ಟಿಲಾಗುತ್ತದೆ. ನೀಲಮಣಿಯ ಗಾಜು ಸಂಶ್ಲೇಷಿತ ನೀಲಮಣಿಯ ಒಂದು ಬಳಕೆಯಾಗಿದೆ. ಇಲ್ಲಿ ಗಾಜು ಎಂಬುದು ಒಂದು ಅಪರಿಣತ ಶಬ್ದವಾಗಿದ್ದು, ಅದು ಪಾರದರ್ಶಕತೆಗೆ ಉಲ್ಲೇಖಿಸಲ್ಪಡುತ್ತದೆಯೇ ಹೊರತು ಅಸ್ಫಟಿಕೀಯ ಸ್ಥಿತಿಗಲ್ಲ. ನೀಲಮಣಿಯು 170 nmನಿಂದ 5.3 μmವರೆಗಿನ (ಮಾನವ ಕಣ್ಣುಗಳು ಸುಮಾರು 380 nmನಿಂದ 750 nmವರೆಗಿನ[೨೬] ತರಂಗಾಂತರಗಳ ವ್ಯತ್ಯಾಸ ತಿಳಿಯಬಲ್ಲವು) ನಡುವಿರುವ ಬೆಳಕಿನ ತರಂಗಾಂತರಗಳಿಗೆ ಉನ್ನತವಾಗಿ ಪಾರದರ್ಶಕವಾಗಿರುವುದಷ್ಟೇ ಅಲ್ಲದೇ, ಇದು ಗಾಜಿಗಿಂತ ಐದುಪಟ್ಟು ಬಲವಾಗಿಯೂ ಇದೆ ಹಾಗೂ ಮೋಹ್ಸ್‌ ಅಳತೆಗೋಲಿನ ಮೇಲೆ ಒಂದು 9ರ ಶ್ರೇಯಾಂಕವನ್ನು ಇದು ಪಡೆದಿದೆ. ಹದಗೊಳಿಸಲ್ಪಟ್ಟ ಗಾಜಿಗಿಂತ ನೀಲಮಣಿಯು ಹೆಚ್ಚು ಗಡುಸಾಗಿದೆಯಾದರೂ, ಗಡಸುತನವು ಸಂಶ್ಲೇಷಿತ ಸ್ಥಿರಗೊಳಿಸಲ್ಪಟ್ಟ ಜಿರ್ಕೋನಿಯಂ ಆಕ್ಸೈಡ್‌ನಷ್ಟು (ಯಟ್ರಿಯಾ-ಸ್ಥಿರಗೊಳಿಸಲ್ಪಟ್ಟ ಜಿರ್ಕೋನಿಯಾದಂಥದು) ಇಲ್ಲ. ರಕ್ಷಾಕವಚವಿರುವ ವಾಹನಗಳಲ್ಲಿನ ಒಡೆಯುವಿಕೆಯ ನಿರೋಧಕ ಕಿಟಕಿಗಳಿಗೆ ಸಂಬಂಧಿಸಿದಂತೆ ಜಿರ್ಕೋನಿಯಾ ಹಾಗೂ ಅಲ್ಯುಮಿನಿಯಂ ಆಕ್ಸಿನೈಟ್ರೈಡ್‌ ಜೊತೆಯಲ್ಲಿ ಹಾಗೂ ಶರೀರ ರಕ್ಷಣೆಯ ಹಲವಾರು ಸೇನಾ ದಿರಿಸುಗಳಲ್ಲಿ ಸಂಯೋಜಿತ ವಸ್ತುಗಳೊಂದಿಗೆ ಸಂಶ್ಲೇಷಿತ ನೀಲಮಣಿಯು ಬಳಸಲ್ಪಡುತ್ತದೆ. ತೆಳುವಾದ ಬಿಲ್ಲೆಗಳನ್ನು ಕತ್ತರಿಸಿ ತೆಗೆಯುವ ಮತ್ತು ಹೊಳಪು ನೀಡುವ ಮೂಲಕ ಪರಿಶುದ್ಧ ನೀಲಮಣಿ ಬೋಗುಣಿಗಳಿಂದ ನೀಲಮಣಿಯ "ಗಾಜು" (ಸ್ಫಟಿಕೀಯವಾಗಿದ್ದರೂ ಸಹ) ತಯಾರಿಸಲ್ಪಡುತ್ತದೆ. ನೀಲಮಣಿಯ ಗಾಜು ಕಿಟಕಿಗಳನ್ನು ರೋಹಿತ ದರ್ಶನಕ್ಕೆ ಸಂಬಂಧಿಸಿದ ಉನ್ನತವಾದ ಒತ್ತಡ ಕೋಣೆಗಳಲ್ಲಿ, ಉನ್ನತ ಗುಣಮಟ್ಟ ಗಡಿಯಾರಗಳಲ್ಲಿನ ಹರಳುಗಳಲ್ಲಿ, ಮತ್ತು ಕಿರಾಣಿ ಅಂಗಡಿಯಲ್ಲಿ ಬಳಸುವ ಬಾರ್‌ಕೋಡ್‌ ಸ್ಕ್ಯಾನರ್‌‌ಗಳಲ್ಲಿ ಬಳಸಲಾಗುತ್ತದೆ. ಏಕೆಂದರೆ ನೀಲಮಣಿ ದ್ರವ್ಯದ ಅಸಾಧಾರಣ ಕಠೋರತೆ ಹಾಗೂ ಗಡಸುತನವು, ಅದನ್ನು ಗೀರುವಿಕೆಗೆ ಅತ್ಯಂತ ನಿರೋಧಕವನ್ನಾಗಿಸುತ್ತದೆ.[೨೪]

 
ಸಂಶ್ಲೇಷಿತ ನೀಲಮಣಿ ಉತ್ಪನ್ನದ ಕಿಟಕಿಯೊಂದಿಗಿನ ಸೆರ್ಮ್ಯಾಕ್ಸ್‌ ಕ್ಸೆನಾನ್‌ ಚಾಪ ದೀಪ

ಒಂದು ನಿಷ್ಕ್ರಿಯ ವಾತಾವರಣದಲ್ಲಿ (ಉದಾಹರಣೆಗೆ ಬಿಸಿ ಸಮಸ್ಥಿತಿಯ ಸಂಪೀಡನದಲ್ಲಿ) ಕೊಂಚ ರಂಧ್ರಗಳಿಂದ ತುಂಬಿದ ಒಂದು ಪಾರದರ್ಶಕ ಬಹುಸ್ಫಟಿಕೀಯ ಉತ್ಪನ್ನವನ್ನು ನೀಡುವ, ಹೆಪ್ಪುಗಟ್ಟಿಸಲ್ಪಟ್ಟ ಮತ್ತು ಬೆಸುಗೆ ಹಾಕಲ್ಪಟ್ಟ, ಒಟ್ಟುಗೂಡಿಸಲಾದ ಅಲ್ಯುಮೀನಿಯಂ ಆಕ್ಸೈಡ್‌ನಿಂದ ಸಂಶ್ಲೇಷಿತ ನೀಲಮಣಿಯು ಕೈಗಾರಿಕೆಗಳಲ್ಲಿ ತಯಾರಿಸಲ್ಪಡುತ್ತದೆ, ಅಥವಾ ರಂಧ್ರಗಳಿಂದ ತುಂಬಿರದ ಮತ್ತು ಅದರ ಆಂತರಿಕ ಒತ್ತಡದಿಂದ ಮುಕ್ತವಾಗಿಸಬಾರದ ಅಥವಾ ಕಡಿಮೆಮಾಡಬಾರದ ಒಂದು ಏಕ ಹರಳಿನ ರೂಪದ ನೀಲಮಣಿ ದ್ರವ್ಯವನ್ನು ಉತ್ಪನ್ನವಾಗಿ ನೀಡುವ ವೆರ್ನ್ಯೂಲಿ, ಝೊಕ್ರಾಲ್ಸ್ಕಿ, ಫ್ಲಕ್ಸ್‌ ವಿಧಾನ, ಇತ್ಯಾದಿಗಳಂಥ ಹೆಚ್ಚು ಸಾಂಪ್ರದಾಯಿಕ ವಿಧಾನಗಳಿಂದ ಸಂಶ್ಲೇಷಿತ ನೀಲಮಣಿಯನ್ನು ತಯಾರಿಸಲಾಗುತ್ತದೆ. ಈಗ ಸಾರ್ವತ್ರಿಕವಾಗಿ "ಪಿಂಗಾಣಿಯ ಕಾಯದ ಕ್ಸೆನಾನ್‌ ದೀಪ" ಎಂದು ಪರಿಚಿತವಾಗಿರುವ ಕ್ಸೆನಾನ್‌ ಚಾಪ ದೀಪದ ಒಂದು ಬಗೆಯು (ಮೂಲತಃ ಇದು ಅದರ ಮೊದಲ ಬ್ರಾಂಡ್‌ ಹೆಸರಾದ "ಸೆರ್ಮ್ಯಾಕ್ಸ್‌" ಎಂಬುದರಿಂದ ಕರೆಯಲ್ಪಡುತ್ತಿತ್ತು), ಉನ್ನತವಾದ ಉಷ್ಣದ ಹೊರೆಗಳನ್ನು ಸಹಿಸಿಕೊಳ್ಳುವ ನೀಲಮಣಿಯ ಹರಳಿನ ಉತ್ಪನ್ನದ ಕಿಟಕಿಗಳನ್ನು ಬಳಸಿಕೊಳ್ಳುತ್ತದೆ - ಮತ್ತು ತನ್ಮೂಲಕ ಪರಿಶುದ್ಧ ಸಿಲಿಕ ಕಿಟಕಿಗಳೊಂದಿಗಿನ ಸಾಂಪ್ರದಾಯಿಕ Xe ದೀಪಗಳೊಂದಿಗೆ ಹೋಲಿಸಿದಾಗ ಉನ್ನತವಾದ ಉತ್ಪನ್ನದ ಶಕ್ತಿಗಳನ್ನು ನೀಡುತ್ತದೆ.[೨೭] ಉನ್ನತ-ಶಕ್ತಿಯ, ಉನ್ನತ-ಕಂಪನಾಂಕದ CMOS ಅನುಕಲಿತ ಮಂಡಲಗಳಲ್ಲಿ ಒಂದು ನಿರೋಧಕ ತಲಾಧಾರವಾಗಿಯೂ ಸಹ ತೆಳುವಾದ ನೀಲಮಣಿ ಬಿಲ್ಲೆಗಳನ್ನು ಬಳಸಿಕೊಳ್ಳಲಾಗುತ್ತದೆ. ಈ ಬಗೆಯ ICಯನ್ನು ಒಂದು ಸಿಲಿಕಾನ್‌ ಆನ್‌ ಸಫೈರ್‌ (ನೀಲಮಣಿಯ ಮೇಲಿನ ಸಿಲಿಕಾನ್‌) ಅಥವಾ "SOS" ಚಿಪ್‌ (ಅತ್ಯಂತ ಚಿಕ್ಕ ಅರೆವಾಹಕದ ಚದರ ಬಿಲ್ಲೆ) ಎಂದು ಕರೆಯಲಾಗುತ್ತದೆ. ಸೆಲ್ಯುಲರ್‌ ದೂರವಾಣಿಗಳು, ಆರಕ್ಷಕ ಕಾರು ಮತ್ತು ಅಗ್ನಿಶಾಮಕ ಟ್ರಕ್‌ ರೇಡಿಯೋಗಳು, ಹಾಗೂ ಉಪಗ್ರಹ ಸಂವಹನೆ ವ್ಯವಸ್ಥೆಗಳಲ್ಲಿ ಕಂಡುಬರುವಂಥ ಉನ್ನತ-ಶಕ್ತಿಯ ರೇಡಿಯೋ-ಕಂಪನಾಂಕದ (ರೇಡಿಯೋ ಫ್ರೀಕ್ವೆನ್ಸಿ-RF) ಬಳಕೆಗಳಿಗೆ ಸಂಬಂಧಿಸಿದಂತೆ ಇವುಗಳು ವಿಶೇಷವಾಗಿ ಪ್ರಯೋಜನಕಾರಿಯಾಗಿವೆ. ಏಕ IC ಚದರ ಬಿಲ್ಲೆಯ ಮೇಲೆ ಡಿಜಿಟಲ್‌ ಮತ್ತು ಅನಲಾಗ್‌ ಎಂಬ ಎರಡೂ ಸ್ವರೂಪಗಳ ವಿದ್ಯುನ್ಮಂಡಲ ಜಾಲವೆಲ್ಲದರ ಏಕಶಿಲೆಯ ಅನುಕಲನವಾಗುವುದಕ್ಕೆ ಸಂಬಂಧಿಸಿದಂತೆ "SOS" ಅನುವುಮಾಡಿಕೊಡುತ್ತದೆ. ಈ ತಲಾಧಾರಗಳಿಗಾಗಿ ಇತರ ಬೇರಾವುದೋ ವಸ್ತುವಿನ ಬಿಲ್ಲೆಗಳಿಗಿಂತ ಬದಲಾಗಿ ಕೃತಕ ನೀಲಮಣಿಯ ಬಿಲ್ಲೆಗಳನ್ನು ಆರಿಸುವುದಕ್ಕಾಗಿರುವ ಕಾರಣವೇನೆಂದರೆ, ವಿದ್ಯುಚ್ಛಕ್ತಿಗೆ ಸಂಬಂಧಿಸಿದಂತೆ ನೀಲಮಣಿಯು ಒಂದು ಅತ್ಯಂತ ಕಡಿಮೆ ಮಟ್ಟದ ವಾಹಕತೆಯನ್ನು ಹೊಂದಿದೆ, ಆದರೆ ಶಾಖಕ್ಕೆ ಸಂಬಂಧಿಸಿದಂತೆ ಒಂದು ಹೆಚ್ಚು-ಉನ್ನತವಾಗಿರುವ ವಾಹಕತೆಯನ್ನು ಹೊಂದಿದೆ. ಈ ರೀತಿಯಾಗಿ, ನೀಲಮಣಿಯು ಉತ್ತಮವಾದ ವಿದ್ಯುತ್ತಿನ ನಿರೋಧನವನ್ನು ಒದಗಿಸಿದರೆ, ಅದೇ ವೇಳೆಗೆ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ಎಲ್ಲಾ ಅನುಕಲಿತ ಮಂಡಲಗಳಲ್ಲಿ ಉತ್ಪತ್ತಿಯಾಗುವ ಗಣನೀಯ ಪ್ರಮಾಣದ ಶಾಖವನ್ನು ಹೊರಗಡೆಗೆ ವಹಿಸುವಲ್ಲಿ ಅದು ನೆರವಾಗುತ್ತದೆ. ಹೀಗಾಗಿ, ಈ ತಲಾಧಾರಗಳಿಗೆ ಸಂಬಂಧಿಸಿದಂತೆ ನೀಲಮಣಿ ದ್ರವ್ಯವನ್ನು ಆರಿಸಿರುವುದು ಒಂದು ಅನಿಯಂತ್ರಿತವಾದುದಾಗಿರಲಿಲ್ಲ, ಆದರೆ ಅದಕ್ಕೆ ಬದಲಿಗೆ, ಇದು ಗಂಭೀರ ಸ್ವರೂಪದ ವಿದ್ಯುನ್ಮಾನ ಎಂಜಿನಿಯರಿಂಗ್‌ ಉದ್ದೇಶಗಳಿಗೆ ಸಂಬಂಧಿಸಿದಂತೆ ಮಾಡಲಾದ ಒಂದು ಆಯ್ಕೆಯಾಗಿದೆ. ಗ್ಯಾಲಿಯಂ ನೈಟ್ರೈಡ್‌‌‌‌ನ್ನು (GaN) ಆಧರಿಸಿದ ಉಪಕರಣಗಳ ಬೆಳವಣಿಗೆಗೆ ಸಂಬಂಧಿಸಿದಂತೆ, ಅರೆವಾಹಕ ಉದ್ಯಮದಲ್ಲಿ ಒಂದು ಅವಾಹಕ ತಲಾಧಾರಯೂ ಸಹ ಏಕ-ಹರಳಿನ ನೀಲಮಣಿ ದ್ರವ್ಯದ ಬಿಲ್ಲೆಗಳು ಬಳಸಲ್ಪಡುತ್ತವೆ. ನೀಲಮಣಿ ದ್ರವ್ಯದ ವೆಚ್ಚವು ಜೆರ್ಮೇನಿಯಂ ವೆಚ್ಚದ ಸುಮಾರು ಏಳನೇ ಒಂದರಷ್ಟು ಇರುವುದರಿಂದಾಗಿ, ನೀಲಮಣಿ ದ್ರವ್ಯದ ಬಳಕೆಯು ವೆಚ್ಚವನ್ನು ಗಣನೀಯವಾಗಿ ತಗ್ಗಿಸುತ್ತದೆ. ನೀಲಮಣಿಯನ್ನು ಆಧರಿಸಿದ ಗ್ಯಾಲಿಯಂ ನೈಟ್ರೈಡ್‌ನ್ನು ನೀಲಿ ಬೆಳಕು-ಹೊರಸೂಸುವ ಡಯೋಡುಗಳಲ್ಲಿ (LEDಗಳಲ್ಲಿ) ಸಾಮಾನ್ಯವಾಗಿ ಬಳಸಲಾಗುತ್ತದೆ.[೨೮]

ಐತಿಹಾಸಿಕ ಮತ್ತು ಸಾಂಸ್ಕೃತಿಕ ಉಲ್ಲೇಖಗಳು

ಬದಲಾಯಿಸಿ
  • ಕೆಲವೊಂದು ವ್ಯುತ್ಪತ್ತಿಶಾಸ್ತ್ರಜ್ಞರು ಹಿಬ್ರೂ ಪದವಾದ "ಸಪ್ಪಿರ್‌" ಎಂಬುದಕ್ಕೆ ಒಂದು ಹಳೆಯ ಸಂಸ್ಕೃತ ಮೂಲವನ್ನು ಪ್ರಸ್ತಾವಿಸುತ್ತಾರೆ: "ಶನಿಪ್ರಿಯ" (शनिप्रिय) ಎಂದು ಕರೆಯಲಾಗುವ ಒಂದು ಗಾಢವರ್ಣದ ಬೆಲೆಬಾಳುವ ಕಲ್ಲು ಇದಾಗಿದ್ದು, "ಶನಿ" (शनि) ಎಂದರೆ "ಶನಿಗ್ರಹ" ಮತ್ತು "ಪ್ರಿಯ" (प्रिय) ಎಂದರೆ ಪ್ರಿಯವಾದ, ಅಂದರೆ "ಶನಿಗ್ರಹಕ್ಕೆ ಪ್ರಿಯವಾದ" ಕಲ್ಲು ಎಂಬ ಅರ್ಥವನ್ನು ನೀಡುವ ಈ ಪದವು 'ಸಪ್ಪಿರ್' ಎಂಬ ಪದಕ್ಕೆ ಮೂಲ ಎಂಬುದು ಅವರ ವ್ಯಾಖ್ಯಾನ.[೨೯]
  • ರೆಬ್ಬೆನು ಬಚ್ಯಾ ಅನುಸಾರ, ಮತ್ತು ಇಂಗ್ಲಿಷ್‌ನ

ಅನೇಕ ಬೈಬಲ್‌ ಅನುವಾದಗಳಲ್ಲಿ, ಎಕ್ಸಡಸ್‌‌‌‌ನ 28:18 ಶ್ಲೋಕದಲ್ಲಿರುವ "ಸಪಿರ್‌" ಎಂಬ ಪದವು "ಸ್ಯಾಫೈರ್‌‌" ("ನೀಲಮಣಿ") ಎಂಬ ಅರ್ಥವನ್ನು ಕೊಡುತ್ತದೆ ಮತ್ತು ಇದು ಇಸ್ಸಾಚರ್‌‌‌ನ ಬುಡಕಟ್ಟನ್ನು ಪ್ರತಿನಿಧಿಸುವ ವಿಧ್ಯುಕ್ತ ವಸ್ತ್ರವನ್ನು ಕುರಿತಾದ ಕಲ್ಲಾಗಿತ್ತು.[ಸೂಕ್ತ ಉಲ್ಲೇಖನ ಬೇಕು] ಆದಾಗ್ಯೂ, ಈಗಾಗಲೇ ಸೂಚಿಸಲ್ಪಟ್ಟಿರುವ ಪ್ರಕಾರ, "ಸ್ಯಾಫೈರ್‌" ಎಂಬ ಇಂಗ್ಲಿಷ್‌ ಪದವು "ಸಪಿರ್‌" (ספיר) ಎಂಬ ಹಿಬ್ರೂ ಪದದಿಂದ ("ಸಫಿರೋಸ್‌"; σάπφειρος ಎಂಬ ಗ್ರೀಕ್‌ ಪದದ ಮೂಲಕ) ಉದ್ಭವವಾಗಿದೆ.[ಸೂಕ್ತ ಉಲ್ಲೇಖನ ಬೇಕು] ರೋಮನ್‌ ಸಾಮ್ರಾಜ್ಯದ ಕಾಲಕ್ಕೆ ಮುಂಚಿತವಾಗಿ ನೀಲಮಣಿಗಳು ವಾಸ್ತವವಾಗಿ ಒಂದು ಸ್ಪಷ್ಟ ಕಲ್ಲಿನ ರೂಪದಲ್ಲಿ ಪರಿಚಿತವಾಗಿರಲಿಲ್ಲ. ತಮ್ಮದೇ ಆದ ಪದವೊಂದನ್ನು ಬಯಸುವುದಕ್ಕಿಂತ ಹೆಚ್ಚಾಗಿ, ಹಿಂದೆ ಅವು ಜೇಸಿಂತ್‌ ಖನಿಜ ಸ್ವರೂಪಗಳಾಗಿರುವಂತೆ ಪರಿಗಣಿಸಲ್ಪಟ್ಟಿದ್ದವು. ರೋಮನ್‌ ಸಾಮ್ರಾಜ್ಯದ ಕಾಲಕ್ಕೂ ಮುಂಚಿತವಾಗಿ, "ಸಫಿರೋಸ್‌" ಎಂಬ ಪದವನ್ನು ಸಾಧಾರಣವಾಗಿ ಯಾವುದೇ ನೀಲಿ ರತ್ನಕ್ಕೆ ಉಲ್ಲೇಖಿಸಲಾಗುತ್ತಿತ್ತು.[ಸೂಕ್ತ ಉಲ್ಲೇಖನ ಬೇಕು]

ಇವನ್ನೂ ನೋಡಿ

ಬದಲಾಯಿಸಿ

ಆಕರಗಳು

ಬದಲಾಯಿಸಿ
  1. http://www.etymonline.com/index.php?term=sapphire
  2. ‌ವೈಸ್, ಪುಟಗಳು 164–166
  3. Wenk, Hans-Rudolf; Bulakh, A. G. (2004). Minerals: their constitution and origin. Cambridge, U.K.: Cambridge University Press. pp. 539–541. ISBN 0-521-52958-1.{{cite book}}: CS1 maint: multiple names: authors list (link)
  4. ೪.೦ ೪.೧ ವೈಸ್‌, ಪುಟಗಳು 18–22
  5. ೫.೦ ೫.೧ ವೈಸ್‌, ಅಧ್ಯಾಯ 22
  6. Arthur Thomas (2008). Gemstones: properties, identification and use. New Holland Publishers. p. 226. ISBN 1845376021. Archived from the original on 2015-04-19. Retrieved 2021-07-17.
  7. ದಿ ಸ್ಕಿನ್‌ ಗೇಮ್‌
  8. Hughes, Richard W. (9 February 2010). "Walking the line in ruby & sapphire". .palagems.com. Retrieved 26 March 2010.
  9. Emsley, John (2001). Nature's Building Blocks: An A-Z Guide to the Elements. Oxford: Oxford University Press. pp. 451–53. ISBN 0-19-850341-5.
  10. "For some, a sapphire has not been their best friend". Retrieved 5 jan 2010. {{cite web}}: Check date values in: |accessdate= (help)
  11. "Ruby: causes of color". Retrieved 15 may 2009. {{cite web}}: Check date values in: |accessdate= (help)
  12. "Blue Saphire". Retrieved 21 march 2010. {{cite web}}: Check date values in: |accessdate= (help)
  13. ವೈಸ್‌, ಪುಟ 169
  14. "Identification of heated / unheated status on ruby and sapphire". Archived from the original on 9 ಮಾರ್ಚ್ 2010. Retrieved 21 March 2010.
  15. Nassau, Kurt (1984). Gemstone Enhancement. Butterworths. p. 95. ISBN 0408014474.
  16. ಚಾಪ್ಟರ್‌‌ I ಆಫ್‌ ಟೈಟ್ಲ್‌ 16 ಆಫ್‌ ದಿ ಕೋಡ್‌ ಆಫ್‌ ಫೆಡರಲ್‌ ರೆಗ್ಯುಲೇಷನ್ಸ್‌ ಪಾರ್ಟ್‌ 23, ಗೈಡ್ಸ್‌ ಫಾರ್‌ ಜ್ಯುವೆಲ್ರಿ ಅಂಡ್‌ ಪ್ರೆಷಸ್‌ ಮೆಟಲ್ಸ್‌ ಅಂಡ್‌ ಪ್ಯೂಟರ್‌ ಇಂಡಸ್ಟ್ರೀಸ್‌
  17. ಲಕಾಕಾ ರತ್ನ ಸಂಚಯನ‌, ಇಲಕಾಕಾ ಬೀಡು‌, ರೊನೊಹಿರಾ ಜಿಲ್ಲೆ, ಹೊರೊಂಬೆ ಪ್ರದೇಶ, ಫಿಯಾನಾರಾಂಟ್ಸೊವಾ ಪ್ರಾಂತ, ಮಡಗಾಸ್ಕರ್‌
  18. Doug Cocks (1992). Use with care: managing Australia's natural resources in the twenty-first century. UNSW Press. p. 102. ISBN 0868403083.
  19. "ಆಂಡ್ರಾನೋನ್‌ಡಂಬೊ". Archived from the original on 2004-04-16. Retrieved 2010-06-21.
  20. M.A. ವೆರ್ನ್ಯೂಲಿ (ಸೆಪ್ಟೆಂಬರ್‌‌ 1904) ಮೆಮ್‌ವಾರ್‌ ಸುರ್‌ ಲಾ ರೀಪ್ರೊಡಕ್ಷನ್‌ ಆರ್ಟಿಫಿಷಿಯೆಲ್ಲೆ ಡು ರೂಬಿಸ್‌ ಪರ್‌ ಫ್ಯೂಷನ್‌, ಅನ್ನೇಲ್ಸ್‌ ಡಿ ಚಿಮೀ ಎಟ್‌ ಡಿ ಫಿಸಿಕ್‌
  21. ಹೀಟನ್‌, ನೀಲ್‌; ದಿ ಪ್ರೊಡಕ್ಷನ್‌ ಅಂಡ್‌ ಐಡೆಂಟಿಫಿಕೇಷನ್‌ ಆಫ್‌ ಆರ್ಟಿಫಿಷಿಯಲ್‌ ಪ್ರೆಷಸ್‌ ಸ್ಟೋನ್ಸ್‌ ಇನ್‌ Annual Report of the Board of Regents of the Smithsonian Institution, 1911. USA: Government Printing Office. 1912. p. 217.
  22. Ramdeva, Ardamun (2004). "Synthetic Sapphires". Gemstones. JewelInfo4You. Archived from the original on 2008-05-09. Retrieved 2008-07-04.
  23. Nassau, K.; Broyer, A. M. (1962). "Application of Czochralski Crystal-Pulling Technique to High-Melting Oxides". Journal of the American Ceramic Society. 45: 474. doi:10.1111/j.1151-2916.1962.tb11037.x.
  24. ೨೪.೦ ೨೪.೧ ೨೪.೨ Scheel, Hans Jr̲g; Fukuda, Tsuguo (2003). Crystal growth technology (PDF). Chichester, West Sussex: J. Wiley. ISBN 0-471-49059-8. {{cite book}}: Cite has empty unknown parameter: |coauthors= (help)CS1 maint: multiple names: authors list (link)
  25. Elena R. Dobrovinskaya, Leonid A. Lytvynov, Valerian Pishchik (2009). Sapphire: Materials, Manufacturing, Applications. Springer. p. 3. ISBN 0387856943.{{cite book}}: CS1 maint: multiple names: authors list (link)
  26. Cecie Starr (2005). Biology: Concepts and Applications. Thomson Brooks/Cole. p. 94. ISBN 053446226X.
  27. "Cermax lamp engineering guide" (PDF).
  28. "ಗ್ಯಾಲಿಯಂ ನೈಟ್ರೈಡ್‌ ಕಲೆಕ್ಟರ್‌ ಗ್ರಿಡ್‌ ಸೋಲಾರ್‌ ಸೆಲ್‌" (2002) ಯು.ಎಸ್ ಪೇಟೆಂಟ್ ೬೪,೪೭,೯೩೮
  29. Etymonline.com


  • Wise, R. W. (2004). Secrets Of The Gem Trade, The Connoisseur's Guide To Precious Gemstones. Brunswick House Press. ISBN 097282238-0.

ಬಾಹ್ಯ ಕೊಂಡಿಗಳು

ಬದಲಾಯಿಸಿ
  • Webmineral.com, ವೆಬ್‌ಖನಿಜ ಕುರಂಗದ ಕಲ್ಲಿನ ಪುಟ, ಕುರಂಗದ ಕಲ್ಲಿನ ಕುರಿತಾದ ವ್ಯಾಪಕ ಸ್ಫಟಿಕೀಯ ಮತ್ತು ಖನಿಜಶಾಸ್ತ್ರೀಯ ಮಾಹಿತಿಯೊಂದಿಗಿನ ವೆಬ್‌ಖನಿಜ
  • ಓರ್ಲಾಂಗ್‌ ಸ್ಯಾಫೈರ್‌ ರೆಫರೆನ್ಸಸ್‌ Archived 2008-05-11 ವೇಬ್ಯಾಕ್ ಮೆಷಿನ್ ನಲ್ಲಿ.
  • Mindat.org, ಮೈಂಡ್ಯಾಟ್‌ ನೀಲಮಣಿ ಪುಟ, ವ್ಯಾಪಕ ತಾಣದ ಮಾಹಿತಿಯೊಂದಿಗಿನ ಮೈಂಡ್ಯಾಟ್‌
  • Gemstone.org, ICAಯ ನೀಲಮಣಿ ಪುಟ; ಇಂಟರ್‌‌ನ್ಯಾಷನಲ್‌ ಕಲರ್ಡ್‌ ಸ್ಟೋನ್‌ (ICA) ನೀಲಮಣಿಯ ಪುಟ
  • Sciencemag.org, ಮ್ಯಾಕ್ರೋಸ್ಕೋಪಿಕ್‌ 10-ಟೆರಾಬಿಟ್‌-ಪರ್‌-ಸ್ಕ್ವೇರ್‌-ಇಂಚ್‌ ಅರೇಸ್‌ ಫ್ರಂ ಬ್ಲಾಕ್‌ ಕೊಪೊಲಿಮರ್ಸ್‌ ವಿತ್‌ ಲ್ಯಾಟರಲ್‌ ಆರ್ಡರ್‌ ಸೈನ್ಸ್‌ ಮ್ಯಾಗಜೀನ್‌ ಆರ್ಟಿಕಲ್‌ ಎಬೌಟ್‌ ಪರರಸ್ಪೆಕ್ಟಿವ್‌ ಯೂಸೇಜ್‌ ಆಫ್‌ ಸ್ಯಾಫೈರ್‌ ಇನ್‌ ಡಿಜಿಟಲ್‌ ಸ್ಟೋರೇಜ್‌ ಮೀಡಿಯಾ ಟೆಕ್ನಾಲಜಿ
  • ಟಾಪ್‌ ಬ್ಲ್ಯೂ ಸ್ಯಾಫೈರ್‌ ಡಿಸ್ಕವರಿ
"https://kn.wikipedia.org/w/index.php?title=ನೀಲಮಣಿ&oldid=1168603" ಇಂದ ಪಡೆಯಲ್ಪಟ್ಟಿದೆ