ನೀರದ್ ಸಿ. ಚೌಧರಿ (ಬಾಂಗ್ಲಾ: নীরদ চন্দ্র চৌধুরী ನಿರೊದ್ ಚೊಂದ್ರೊ ಚೌಧರಿ ) (23 ನವೆಂಬರ್ 1897 – 1 ಆಗಸ್ಟ್ 1999)ಯವರು ಒಬ್ಬ ಬೆಂಗಾಲಿ ಹಾಗೂ ಆಂಗ್ಲ ಬರಹಗಾರ ಮತ್ತು ಒಬ್ಬ ಸಾಂಸ್ಕೃತಿಕ ವೀಕ್ಷಕ ವಿವರಣೆಗಾರರಾಗಿದ್ದರು. ಅವರು ಈಗಿನ ಬಾಂಗ್ಲಾದೇಶದ ಕಿಶೋರ್‌ಗಂಜ್‌ನಲ್ಲಿ ಜನಿಸಿದರು, ಇದು ಬ್ರಿಟೀಷರ ಕಾಲದಲ್ಲಿ ಬಂಗಾಳದ ಒಂದು ಪ್ರಾಂತವಾಗಿತ್ತು.

Nirad C. Chaudhuri
ಜನನ(೧೮೯೭-೧೧-೨೩)೨೩ ನವೆಂಬರ್ ೧೮೯೭
Kishoregunge, Mymensingh, British India (now Bangladesh)
ಮರಣAugust 1, 1999(1999-08-01) (aged 101)
Lathbury Road, Oxfordshire, United Kingdom
ಕಾವ್ಯನಾಮBalahak Nandi, Sonibarer Cithi
ವೃತ್ತಿwriter and commentator on culture
ರಾಷ್ಟ್ರೀಯತೆIndian
ಕಾಲ1930s-1999
ಪ್ರಕಾರ/ಶೈಲಿliterature, culture, politics

1975ರಲ್ಲಿ ಇವರಿಗೆ ಮಾಕ್ಸ್ ಮುಲ್ಲರ್ ರವರ ಜೀವನ ಚರಿತ್ರೆಯಾದ ಸ್ಕಾಲರ್ ಎಕ್ಸ್‌ಟ್ರಾ ಆರ್ಡಿನರಿ , ಎಂಬ ಪುಸ್ತಕಕ್ಕೆ ಭಾರತದ ರಾಷ್ಟ್ರೀಯ ಅಕಾಡೆಮಿಯಾದ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತು.[]

ಅವರ ಜೀವನ

ಬದಲಾಯಿಸಿ

ಅವರ ವಿದ್ಯಾಭ್ಯಾಸ ಕಿಶೋರ್‌ಗಂಜ್ ಮತ್ತು ಕೋಲ್ಕತ್ತಾ ( ನಂತರ ಕಲ್ಕತ್ತಾ ಎಂದು ಹೆಸರಿಸಲಾಯಿತು) ದಲ್ಲಿ ನಡೆಯಿತು. ಅವರು ತಮ್ಮ ಎಫ್‌ಎ(ಪ್ರೌಢ ಶಿಕ್ಷಣ) ಕ್ಕಾಗಿ ಪ್ರಖ್ಯಾತ ಬೆಂಗಾಲಿ ಬರಹಗಾರರಾದ ಬಿಭೂತಿ ಭೂಷಣ್ ಬಂಡೋಪಾದ್ಯಾಯ ಅವರೊಂದಿಗೆ ರಿಪ್ಪನ್ ಕಾಲೇಜಿನಲ್ಲಿ ಸೇರಿದರು. ಇದರ ನಂತರ, ಅವರು ಪ್ರತಿಷ್ಟಿತ ಕಲ್ಕತ್ತಾದ ಸ್ಕಾಟಿಷ್ ಚರ್ಚ್ ಕಾಲೇಜ್‌ನಲ್ಲಿ ಪ್ರವೇಶ ಪಡೆದು, ಅಲ್ಲಿ ಇತಿಹಾಸವನ್ನು ಪದವಿಯ ಪ್ರಮುಖ ವಿಷಯವನ್ನಾಗಿ ಅಭ್ಯಾಸ ಮಾಡಿದರು. ಇತಿಹಾಸ ವಿಷಯದಲ್ಲಿ ಆನರ್ಸ್ ಪದವಿಯನ್ನು ಪಡೆದು ಕಲ್ಕತ್ತಾ ವಿಶ್ವವಿದ್ಯಾನಿಲಯ ದಲ್ಲೇ ಪ್ರಥಮ ಸ್ಥಾನವನ್ನು ಪಡೆದು ಉತ್ತೀರ್ಣರ‍ಾದರು ಸ್ಕಾಟಿಷ್ ಚರ್ಚ್ ಕಾಲೇಜ್‌ ನಲ್ಲಿ, ಅವರು ಚರಿತ್ರೆಯ ಹೆಸರಾದಂತಹ ಪ್ರೊಫೆಸರ್ ಆದ ಕಾಳಿದಾಸ್ ನಾಗ್‌ರವರ ಸೆಮಿನಾರ್ ಗಳಿಗೆ ಹಾಜರ‍ಾದರು. ಪದವಿಯ ನಂತರ ಅವರು ಎಂ.ಎ ತತ್ಸಮಾನದ ಪದವಿಗಾಗಿ ಕಲ್ಕತ್ತಾದ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಹೆಸರನ್ನು ನೊಂದಾಯಿಸಿದರು. ಆದರೆ, ಅಂತಿಮ ಎಂ.ಎ ಪರೀಕ್ಷೆಯ ಎಲ್ಲಾ ಪತ್ರಿಕೆಗಳಿಗೆ ಹಾಜರಾಗದೇ ಇದ್ದದರಿಂದ ಅವರಿಗೆ ಎಂ.ಎ. ಪದವಿಯನ್ನು ಪಡೆಯಲು ಸಾಧ್ಯವಾಗಲಿಲ್ಲ.

ನಂತರ ಅವರು ಭಾರತದ ಸೇನಾಪಡೆಯ ಲೆಕ್ಕ ಪತ್ರದ ಇಲಾಖೆಯಲ್ಲಿ ಒಬ್ಬ ಗುಮಾಸ್ತನಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಇದೇ ಸಂದರ್ಭದಲ್ಲಿ, ಅವರು ಜನಪ್ರಿಯ ಪತ್ರಿಕೆಗಳಿಗೆ ತಮ್ಮ ಲೇಖನಗಳನ್ನು ಬರೆಯುತ್ತಿದರು. ಅವರ ಮೊದಲನೇ ಲೇಖನವಾದ ಭರತ್ ಚಂದ್ರ (18ನೇ ಶತಮಾನದ ಪ್ರಸಿದ್ದ ಬೆಂಗಾಲಿ ಕವಿ) ಆಗಿನ ಪ್ರತಿಷ್ಟಿತ ಆಂಗ್ಲ ಪತ್ರಿಕೆಯಾದ ಮಾಡರ್ನ್ ರಿವೀವ್‌ ನಲ್ಲಿ ಪ್ರಕಟವಾಯಿತು.

ಇದರ ನಂತರ ಶೀಘ್ರದಲ್ಲೇ ಲೆಕ್ಕ ಪತ್ರ ಇಲಾಖೆಯ ಹುದ್ದೆಯನ್ನು ತೊರೆದು, ಒಬ್ಬ ಪತ್ರ ಕರ್ತ ಹಾಗೂ ಸಂಪಾದಕರಾಗಿ ತಮ್ಮ ಹೊಸ ವೃತ್ತಿಯನ್ನು ಪ್ರಾರಂಭಿಸಿದರು. ಈ ಅವಧಿಯಲ್ಲಿ ಅವರು ಲೇಖಕರಾದ ಬಿಭೂತಿ ಭೂಷಣ್ ಬಾನರ್ಜಿ ಮತ್ತು ದಕ್ಷಿಣ ರಂಜನ್ ಮಿತ್ರಾ ಮಜುಮ್ದಾರ್ ರವರೊಂದಿಗೆ ವಾಸಮಾಡುತ್ತಿದ್ದು, ಕಲ್ಕತ್ತಾದ ಮಿರ್ಜಾಪುರ್ ಬೀದಿಯ ಹತ್ತಿರವಿರುವ ಕಾಲೇಜ್ ಆವರಣದಲ್ಲಿ ಹಣಕೊಟ್ಟು ಊಟಮಾಡುತ್ತಿದ್ದರು. ನಂತರ ಅವರು ಆಂಗ್ಲ ಮತ್ತು ಬೆಂಗಾಲಿ ಪತ್ರಿಕೆಗಳಾದ ಮಾಡರ್ನ್ ರಿವೀವ್ , ಪ್ರಬಾಸಿ ಮತ್ತು ಸೋನಿಬರೇರ್ ಚಿತಿ ಪತ್ರಿಕೆಗಳ ಸಂಪಾದನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇದರೊಂದಿಗೆ ಬೆಂಗಾಲಿಯ ಅತ್ಯುನ್ನತ ಪತ್ರಿಕೆಗಳಾದ ಸಮಾಸಮಾಯಿಕ್ ಮತ್ತು ನೋತುನ್ ಪತ್ರಿಕೆ ಗಳನ್ನೂ ಸಹ ಪ್ರಾರಂಭಿಸಿದರು. 1932ರಲ್ಲಿ ಅವರು ಅಮಿಯಾ ಧರ್ ಎಂಬ ಜನಪ್ರಿಯ ಲೇಖಕರನ್ನು ವಿವಾಹವಾದರು. ನಂತರ ಅವರಿಗೆ ಮೂವರು ಗಂಡು ಮಕ್ಕಳು ಜನಿಸಿದರು.

1938ರಲ್ಲಿ ಭಾರತದ ಸ್ವಾತಂತ್ರ ಚಳುವಳಿಯ ಮುಖಂಡರಾದ ಶರತ್ ಚಂದ್ರಬೋಸ್, ಅವರ ಕಾರ್ಯದರ್ಶಿಯಾಗಿ ಕೆಲಸಕ್ಕೆ ಸೇರಿಕೊಂಡರು ಇದರಿಂದಾಗಿ ಭಾರತದ ರಾಜಕೀಯ ಮುತ್ಸದಿಗಳಾದ ಮಹಾತ್ಮ ಗಾಂಧಿ, ಜವಹಾರ ಲಾಲ್ ನೆಹರೂ ಮತ್ತು ಶರತ್ ಚಂದ್ರಬೋಸ್ ರವರ ಸಹೋದರರಾದ ನೇತಾಜಿ ಸುಭಾಸ್ ಚಂದ್ರ ಬೋಸ್‌ರವರಂತಹ ನಾಯಕರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಳ್ಳಲು ಸಾಧ್ಯವಾಯಿತು. ಭಾರತೀಯ ರಾಜಕಾರಣದಲ್ಲಿ ನಡೆಸಲಾಗುತ್ತಿದ್ದ ಒಳ ಕಾರ್ಯಕಲಾಪಗಳ ಈ ಜನಪ್ರಿಯತೆಯು ಅವರನ್ನು ಈ ಒಂದು ಕ್ಷೇತ್ರದಲ್ಲಿ ಕಾಲಕ್ರಮೇಣ ಬೆಳೆಯುವಂತೆ ಮಾಡಿತು. ಕಾಲಾಂತರದಲ್ಲಿ ಭಾರತದ ರಾಜಕೀಯ ನಾಯಕತ್ವ ಅವರನ್ನು ಭ್ರಮ ನಿರಸನಗೊಳಿಸಿತು.

ತಮ್ಮ ಕಾರ್ಯದರ್ಶಿ ಹುದ್ದೆಯೊಂದಿಗೆ, ಬೆಂಗಾಲಿ ಮತ್ತು ಆಂಗ್ಲ ದಿನಪತ್ರಿಕೆಗಳ ಮತ್ತು ಮಾಸ ಪತ್ರಿಕೆಗಳಲ್ಲಿ ತಮ್ಮ ಲೇಖನಗಳನ್ನು ಪ್ರಕಟಿಸುತ್ತಿದ್ದರು. ಇಷ್ಟೇ ಅಲ್ಲದೆ ಅವರು ಆಲ್ ಇಂಡಿಯಾ ರೇಡಿಯೋದ ಕಲ್ಕತ್ತಾ ಶಾಖೆಯಲ್ಲಿ ಒಬ್ಬ ರಾಜಕೀಯ ವೀಕ್ಷಕ ವಿವರಣೆಗಾರರಾಗಿ ನೇಮಕಗೊಂಡರು. 1941ರಲ್ಲಿ, ಅವರು ಆಲ್ ಇಂಡಿಯಾ ರೇಡಿಯೋ ನ ದೆಹಲಿ ಶಾಖೆಯಲ್ಲಿ ಕೆಲಸ ಮಾಡಲು ಆರಂಭಿಸಿದರು.

ತಮ್ಮ 99ನೇ ವಯಸ್ಸಿನಲ್ಲೂ ಕಡೆಯ ಬರಹವನ್ನು ಪ್ರಕಟಿಸುವುದರ ಮೂಲಕ ,ತಮ್ಮ ಕೊನೆಯುಸಿರಿನವರೆಗೂ ಒಬ್ಬ ಉಪಯುಕ್ತ ಹಾಗೂ ಫಲಪ್ರದ ಬರಹಗಾರರಾಗಿ ಜೀವಿಸಿದರು. 1994ರಲ್ಲಿ ಅವರ ಪತ್ನಿಯಾದ ಆಮಿಯಾ ಚೌಧರಿಯವರು ಆಕ್ಸ್‌ಫರ್ಡ್‌ನಲ್ಲಿ ನಿಧನ ಹೊಂದಿದರು. 1999ರಲ್ಲಿ ತಮ್ಮ 102ನೇ ಹುಟ್ಟುಹಬ್ಬದ ಆಚರಣೆ ಸಮೀಪವಿರುವಾಗ ಇಂಗ್ಲೆಂಡ್ ನ ಆಕ್ಸ್ ಫರ್ಡ್ನಲ್ಲಿ ನಿಧನ ಹೊಂದಿದರು.

ಅವರ ಪ್ರಮುಖ ಕಾರ್ಯಗಳು

ಬದಲಾಯಿಸಿ

1951ರಲ್ಲಿ ಪ್ರಕಟಗೊಂಡ ಅವರ ಮೇರು ಕೃತಿಯಾದ ದಿ ಆಟೋಬಯೋಗ್ರಾಫಿ ಆಫ್ ಆನ್ ಅನೌನ್ ಇಂಡಿಯನ್ (ಐಎಸ್‌ಬಿಎನ್ 0-201-15576-1) ಅವರ ಹೆಸರು ಭಾರತದ ಅತ್ಯುನ್ನತ ಆಂಗ್ಲ ಲೇಖಕರ ಪಟ್ಟಿಯಲ್ಲಿ ಸೇರುವಂತೆ ಮಾಡಿತು. ಸ್ವಾತಂತ್ರ್ಯ ನವ ಭಾರತದ ವಿವಾದವನ್ನು ತಮ್ಮ ಸಮರ್ಪಣಾ ಪುಸ್ತಕದಲ್ಲಿ ಈ ರೀತಿಯಾಗಿ ವಿವರಿಸಿದರು.

To the memory of the British Empire in India,

Which conferred subjecthood upon us,
But withheld citizenship.
To which yet every one of us threw out the challenge:
"Civis Britannicus sum"
Because all that was good and living within us
Was made, shaped and quickened
By the same British rule.

ಈ ಸಮರ್ಪಣೆ, ವಾಸ್ತವವಾಗಿ ಒಂದು ಹಾಸ್ಯಾಸ್ಪದ ಸಾಹಿತ್ಯವಾಗಿದ್ದು , ಹಲವಾರು ಭಾರತೀಯರನ್ನು ವಿಶೇಷವಾಗಿ ರಾಜಕೀಯ ಮತ್ತು ಅಧಿಕಾರಶಾಹಿ ವರ್ಗದವರನ್ನು ರೊಚ್ಚಿಗೆಬ್ಬಿಸಿತು. ಚೌಧರಿಯವರ ಸ್ನೇಹಿತ ಹಾಗೂ ಇತಿಹಾಸಕಾರ ಮತ್ತು ಕಾದಂಬರಿಕಾರರಾದ ಕುಶ್ವಂತ್ ಸಿಂಗ್ ರವರು," ಸಮರ್ಪಣಾ ಲೇಖನವನ್ನು ಓದಿದ ನಂತರ ಪ್ರತಿಭಟನೆಯ ತೋಳಗಳನ್ನು ಕಳುಹಿಸಿ ಆಮಿಷ ತೋರಿಸಲಾಯಿತು " ಎಂದು ವಾಖ್ಯಾನಿಸಿದರು. ಚೌಧರಿಯವರು ಸರ್ಕಾರಿ ಸೇವೆಯಿಂದ ತೊಂದರೆಗೆ ಒಳಗಾದರು, ಭಾರತದ ಒಬ್ಬ ಬರಹಗಾರರಾಗಿ ತಮ್ಮ ಪಿಂಚಣಿಯಿಂದ ವಂಚಿತರಾದ ಅವರಿಗೆ ದಾರಿದ್ರ್ಯದ ಬದುಕನ್ನು ನಡೆಸುವುದು ಅನಿವಾರ್ಯವಾಯಿತು. ಇಷ್ಟೇ ಅಲ್ಲದೆ , ಭಾರತ ಸರ್ಕಾರವು ನೌಕರರು ಆತ್ಮ ಚರಿತ್ರೆಗಳನ್ನು ಪ್ರಕಟಿಸುವುದನ್ನು ನಿಷೇಧಿಸುವ ಕಾನೂನನ್ನು ಜಾರಿಗೊಳಿಸಿದ್ದರಿಂದ ಅವರು ಆಲ್ ಇಂಡಿಯಾ ರೇಡಿಯೋ ದಲ್ಲಿ ತಮ್ಮ ರಾಜಕೀಯ ವೀಕ್ಷಕ ವಿವರೆಗಾರ ಹುದ್ದೆಯನ್ನು ತ್ಯಜಿಸಬೇಕಾಯಿತು. ನಂತರ ಚೌಧರಿ ತಮ್ಮ ಬಗ್ಗೆ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಅಭಿಪ್ರಾಯ ಪಟ್ಟರು. ಅವರು ಗ್ರಂಥ ಲೇಖನದಲ್ಲಿ ಬರೆದಿರುವಂತೆ " ಈ ಸಮರ್ಪಣೆ ಖಂಡಿತವಾಗಿಯೂ ನಮ್ಮನ್ನು ಸಮಾನತೆಯಿಂದ ಕಾಣದ ಬ್ರಿಟೀಷರ ವಿರುದ್ಧದ ಒಂದು ಹೋರಾಟವಾಗಿದೆ". ಅವರು ಖಚಿತವಾಗಿ ಏನನ್ನು ಹೇಳ ಬೇಕೆಂದು ಪ್ರಯತ್ನಿಸಿದರೆಂದರೆ , ಇದಕ್ಕೆ ಸಮಾನವಾದ ಪ್ರಾಚೀನ ರೋಮ್‌ನ ಕಡೆಗೆ ಗಮನವನ್ನು ಸೆಳೆಯ ಬೇಕೆಂದಿದ್ದರು. ಅವರ ಪುಸ್ತಕದಲ್ಲಿ ಬರೆದಿರುವಂತೆ ,"ರೋಮ್ ಸಾಮ್ರಾಜ್ಯದ ಸಿಸಿಲಿಯ ಪ್ರೊಕೊನ್ಸಲ್ ಆಗಿದ್ದ ಸಿಸಿರೋ ತಾನುವೆರ್ರಿಸ್, ನೊಂದಿಗೆ ನಡೆದುಕೊಂಡ ರೀತಿಯನ್ನು ಅನುಕರಿಸುವಂತಿತ್ತು, ಇದರಿಂದಾಗಿ ರೋಮ್ ನ ನಾಗರೀಕರು ಹತಾಶೆಗೊಂಡು "ಸಿವಿಸ್ ರೋಮನಸ್ ಸಮ್ ". ಎಂದು ಉದ್ಗರಿಸಿದರು.

1955ರಲ್ಲಿ ಬ್ರಿಟೀಷ್ ಕೌನ್ಸಿಲ್ ಮತ್ತು ಬಿಬಿಸಿ ಜಂಟಿಯಾಗಿ ಎಂಟು ವಾರಗಳವರೆಗೆ ಅವರನ್ನು ಇಂಗ್ಲೆಂಡ್ ಗೆ ಕರೆದುಕೊಳ್ಳಲು ಒಪ್ಪಂದ ಮಾಡಿಕೊಂಡವು. ಬಿಬಿಸಿಯಲ್ಲಿ ಕೆಲವು ಉಪನ್ಯಾಸಗಳನ್ನು ಕೊಡುವಂತೆ ಅವರನ್ನು ಕೇಳಿಕೊಳ್ಳಲಾಯಿತು. ಅವರು ಬ್ರಿಟೀಷ್ ಜೀವನಕ್ಕೆ ಸಂಬಂಧಿಸಿದಂತೆ ಎಂಟು ಉಪನ್ಯಾಸಗಳನ್ನು ನೀಡಿದರು. ನಂತರ ಈ ಉಪನ್ಯಾಸಗಳನ್ನು ಪ್ಯಾಸೇಜ್ ಟು ಇಂಗ್ಲೆಂಡ್‌ ನಲ್ಲಿ ಸಂಗ್ರಹಿಸಿ ರೂಪಾಂತರಗೊಳಿಸಿ ಪರಿಷ್ಕರಿಸಲಾಯಿತು. ಇ.ಎಂ.ಫಾರ್ಸ್ಟರ್ ಇದನ್ನು ದಿ ಟೈಮ್ಸ್ ಲಿಟರರಿ ಸಪ್ಲಿಮೆಂಟ್ಸ್ ನಲ್ಲಿ ಪುನರ್ ಪರಿಶಿಲಿಸಿದರು.

1965ರಲ್ಲಿ ಅವರ ಕೃತಿಯಾದ ದಿ ಕಾಂಟಿನೆಂಟ್ ಆಫ್ ಸರ್ಕಲ್ ಅವರಿಗೆ ಡಫ್ ಕೂಪರ್ ಮೆಮೋರಿಯಲ್ ಪ್ರಶಸ್ತಿಯನ್ನು ತಂದು ಕೊಟ್ಟಿತು. ಇದರಿಂದ ಈ ಪ್ರಶಸ್ತಿಯನ್ನು ಪಡೆದ ಮೊದಲ ಹಾಗೂ ಏಕೈಕ ಭಾರತೀಯರಾದರು. 1972ರಲ್ಲಿ ಅವರು ಮರ್ಚಂಟ್ ಐವರಿ ಯ ಸಾಕ್ಷ ಚಿತ್ರವಾದ , ಅಡ್ವೆಂಚರ್ಸ್ ಆಫ್ ಬ್ರೌನ್ ಮ್ಯಾನ್ ಇನ್ ಸರ್ಚ್ ಆಫ್ ಸಿವಿಲೈಜೇಶನ್ ಎಂಬುದರ ಕಥಾವಸ್ತುವಾದರು.

1988ರಲ್ಲಿ ತಮ್ಮ ಆತ್ಮ ಚರಿತ್ರೆಯ ಮುಂದುವರೆದ ಭಾಗವಾಗಿ ದೈ ಹ್ಯಾಂಡ್, ದಿ ಗ್ರೇಟ್ ಅನಾರ್ಕ್! ಎಂಬ ಶಿರೋನಾಮೆಯುಳ್ಳ ಲೇಖನವನ್ನು ಪ್ರಕಟಿಸಿದರು.

1992ರಲ್ಲಿ ಯುನೈಟೆಡ್ ಸಾಮ್ರಾಜ್ಯದ ಮಹಾರಾಣಿ ಎಲಿಜಬೆತ್ II ಇವರಿಂದ ಕಮಾಂಡಾರ್ ಆಫ್ ದಿ ಆರ್ಡರ್ ಆಫ್ ಬ್ರಿಟೀಷ್ ಎಂಪೈರ್ (ಸಿಬಿಇ). ಎಂಬ ಬಿರುದನ್ನು ಪಡೆದರು

1997ರಲ್ಲಿ ತಮ್ಮ ನೂರನೇ ವಯಸ್ಸಿನಲ್ಲಿ ತಮ್ಮ ಕಡೇಯ ಪುಸ್ತಕವಾದ ತ್ರಿ ಹಾರ್ಸ್ ಮೆನ್ ಆಫ್ ದಿ ನ್ಯೂ ಅಪೋಕ್ಯಾಲಿಪ್ಸ್ ಎಂಬ ಪುಸ್ತಕವನ್ನು ಪ್ರಕಟಿಸಿದರು.

ಸಾಮಾಜಿಕ ದೃಷ್ಟಿಕೋನ ಹಾಗೂ ಬರವಣಿಗೆಯ ಶೈಲಿ

ಬದಲಾಯಿಸಿ
  • ಸ್ವಾತಂತ್ರ ನಂತರದಲ್ಲಿ ಕಾಂಗ್ರೇಸ್ ಪಕ್ಷದ ಸ್ಥಾಪನೆಯ ಕಾರ್ಯದಲ್ಲಿ ಅತ್ಯಂತ ಹೆಚ್ಚು ಕಾರ್ಯ ನಿರತರಾಗಿದ್ದರೂ ಭಾರತದಲ್ಲಿ ಹಿಂದೂ ರಾಷ್ಟ್ರೀಯ ಚಳುವಳಿಯ ಬಗ್ಗೆ ಹೆಚ್ಚಿನ ಅನುಕಂಪ ಉಳ್ಳವರಾಗಿದ್ದರು.

ಅವರು ಮಸೀದಿಗಳ ವಿನಾಶದ ಕುರಿತು ವಿಮರ್ಶಿಸಲು ಇಷ್ಟಪಡಲಿಲ್ಲ: "ಅಯೋದ್ಯೆಯಲ್ಲಿ ನಾಶಗೊಂಡ ಯಾವುದೇ ಒಂದು ಮಸೀದಿಯ ಬಗ್ಗೆ ದೂರನ್ನು ನೀಡಲೂ ಮುಸ್ಲಿಮರಿಗೆ ಅಲ್ಪವಾದ ನೈತಿಕ ಹಕ್ಕೂ ಇಲ್ಲ". 1000 AD ಯಿಂದಲೂ ಕಾತಿಯಾವಾರದಿಂದ ಬಿಹಾರಿನವರೆಗೂ , ಹಿಮಾಲಯದಿಂದ ವಿಂದ್ಯ ಪರ್ವತಗಳವರೆಗೂ ಪ್ರತಿಯೊಂದು ದೇವಾಲಯವನ್ನೂ ಲೂಟಿ ಮಾಡಿ ನಾಶಪಡಿಸಲಾಗಿದೆ. ಉತ್ತರ ಭಾರತದಲ್ಲಿ ಒಂದೇ ಒಂದು ದೇವಸ್ಥಾನವನ್ನೂ ಉಳಿಸಿಲ್ಲ ದಟ್ಟ ಅರಣ್ಯದಂತಹ ಕಾರಣಗಳಿಂದಾಗಿ ಮುಸ್ಲಿಮರ ಅಧಿಕಾರಕ್ಕೆ ಒಳಗಾಗದ ಪ್ರದೇಶಗಳು ಮಾತ್ರ ದಾಳಿಯಿಂದ ತಪ್ಪಿಸಿಕೊಂಡಿವೆ. ಇಲ್ಲದೆ ಹೋದಲ್ಲಿ, ಈ ಹಾಳುಗೆಡಹುವ ಪ್ರವೃತ್ತಿ ಮುಂದುವರೆಯುತ್ತಲೇ ಇತ್ತು.ಸ್ವಾಭಿಮಾನ ವನ್ನು ಹೊಂದಿರುವ ಯಾವುದೇ ರಾಷ್ಟ್ರ ಇದನ್ನು ಕ್ಷಮಿಸುವುದಿಲ್ಲ. ಮುಸ್ಲಿಮರು ಚರಿತ್ರೆಯಲ್ಲಿ ಒಂದು ಸಲವಾದರೂ ಇಂತಹ ದುಷ್ಕೃತ್ಯವನ್ನು ನಡೆಸದೇ ಇದ್ದಿದ್ದರೆ ಅಯೋಧ್ಯೆಯಲ್ಲಿ ನಡೆದ ಘಟನೆ ಎಂದೂ ಉಂಟಾಗುತ್ತಿರಲಿಲ್ಲ.”[] []

  • ಬೆಂಗಾಲದ ಸಾಮಾಜಿಕ ಜೀವನದಲ್ಲಿ ಕಂಡು ಬಂದ ಆಳವಾದ ಕಪಟತನ ಅವರ ಮನಸ್ಸಿನ ಮೇಲೆ ಆಳವಾದ ಪರಿಣಾಮವನ್ನು ಬೀರಿತು.ಇವು ವಿಶೇಷವಾಗಿ ವರ್ಗ ಹಾಗೂ ಜಾತಿ ಬೇಧಗಳಿಗೆ ಸಂಬಂಧಿಸಿತ್ತು.

ಅವರ ಚಾರಿತ್ರಿಕ ಸಂಶೋಧನೆಯ ಪ್ರಕಾರ ಬೆಂಗಾಲಿ ಮಧ್ಯಮ ವರ್ಗದ ಮಹಿಳೆಯರ ಕಠೋರವಾದ ನೈತಿಕತೆಯು ಒಂದು ಬಲವಂತದ ಸಾಮಾಜಿಕ ಸಂರಚನೆಯಾಗಿದ್ದು ಧರ್ಮ, ಆಯ್ಕೆ ಮತ್ತು ನ್ಯಾಯದ ಕನಿಷ್ಠತೆಯನ್ನು ಬಿಂಬಿಸುತ್ತದೆ. ಆದರೆ ಇದು ಹೆಚ್ಚಾಗಿ ಅವರನ್ನು ಮೇಲೆತ್ತುವ ಹಾಗೂ ಸಾಮಾಜಿಕವಾಗಿ ಸಮಾನತೆಯನ್ನು ಒದಗಿಸುವ ಮತ್ತು ಮೌಲ್ಯಗಳ ವರ್ಗಾವಣೆಯಾಗುವ ಕಾರ್ಯ ಅತ್ಯಗತ್ಯವಿದೆ.

  • ಅವರ ಗದ್ಯ ಭಾಗ ಸಂಸ್ಕೃತ ಭಾಷೆಯಿಂದ ಹೆಚ್ಚು ಪ್ರಭಾವಿತಗೊಂಡಿತು ಮತ್ತು ಬೆಂಗಾಲಿ ಭಾಷೆಯ ಹಳೇಯ ಭಾಷಾಂತರವಾದ , ಶಾಧುಭಾಷ (সাধুভাষা) ಇವರ ಮೇಲೆ ಪ್ರಭಾವ ಬೀರಿತು ಅವರ ಪ್ರಕಾರ ಸಾಧಾರಣವಾದ ಅಭಿರುಚಿ ಹಾಗೂ ಪ್ರಾಮುಖ್ಯತೆಯನ್ನು ಹೊಂದಿರುವ ಕೆಳ ವರ್ಗ ದ ಭಾಷೆಗಳಾದ ಚೋಲ್ತಿ ಭಾಷಾ (চলতিভাষা ) ಅಥವಾ ಚೋಲಿತೊ ಭಾಷಾ (চলিতভাষা) ಇವುಗಳಿಗೆ ಅಲ್ಪ ಗೌರವವನ್ನು ತೋರಿಸುತ್ತಿದ್ದರು.

ಅವರು ಆಧುನಿಕ ಬೆಂಗಾಲಿ ಭಾಷೆಯಲ್ಲಿ ಸರ್ವೇ ಸಾಮಾನ್ಯವಾಗಿ ಬಳಕೆಯಲ್ಲಿರುವ ಅರೇಬಿಕ್, ಉರ್ದು ಮತ್ತು ಪರ್ಷಿಯನ್ ಮೂಲದ ಪದಗಳನ್ನು ಬಳಸುವುದನ್ನು ವಿರೋಧಿಸಿದರು.

ಪ್ರಶಸ್ತಿಗಳು

ಬದಲಾಯಿಸಿ
  • 1975ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
  • 1990ರಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ದ್ಲಿಟ್.[]

ಪುಸ್ತಕಗಳು

ಬದಲಾಯಿಸಿ

ಅವರು ಬರೆದಂತಹ ಇಂಗ್ಲಿಷ್ ಪುಸ್ತಕಗಳು:

  • ದಿ ಆಟೋಬಯಾಗ್ರಫಿ ಆಫ್ ಅನ್‌ನೋನ್ ಇಂಡಿಯನ್ (1951)
  • ಎ ಪ್ಯಾಸೇಜ್ ಟು ಇಂಗ್ಲೆಂಡ್ (1959)
  • ದಿ ಕಾಂಟಿನೆಂಟ್ ಆಫ್ ಸಿರ್ಸೆ (1965)
  • ದಿ ಇಂಟಲೆಕ್ಚುಯಲ್ ಇನ್ ಇಂಡಿಯಾ (1967)
  • ಟು ಲೀವ್ ಆರ್ ನಾಟ್ ಟು ಲೀವ್ (1971)
  • ಸ್ಕಾಲರ್ ಎಕ್ಸ್ಟ್ರಾರ್ಡಿನರಿ, ದಿ ಲೈಫ್ ಆಫ್ ಪ್ರೊಫೆಸರ್ ದಿ ರೈಟ್ ಆನರಬಲ್ ಫ್ರೀಡ್ರಿಚ್ ಮ್ಯಾಕ್ಸ್ ಮುಲ್ಲರ್, ಪಿ.ಸಿ. (1974)
  • ಕಲ್ಚರ್ ಇನ್ ದಿ ವ್ಯಾನಿಟಿ ಬ್ಯಾಗ್ (1976)
  • ಕ್ಲೈವ್ ಆಫ್ ಇಂಡಿಯಾ (1975)
  • ಹಿಂದೂಯಿಸಂ: ಎ ರಿಲಿಜನ್ ಟು ಲೀವ್ ಬೈ (1979)
  • ಥೈ ಹ್ಯಾಂಡ್, ಗ್ರೇಟ್ ಅನಾರ್ಚ್! (1987)
  • ಥ್ರೀ ಹಾರ್ಸ್ಮೆನ್ ಆಫ್ ದಿ ನ್ಯೂ ಅಪೋಕ್ಯಾಲಿಪ್ಸ್ (1997)
  • ದಿ ಈಸ್ಟ್ ಈಸ್ ಈಸ್ಟ್ ಅಂಡ್ ವೆಸ್ಟ್ ಈಸ್ ವೆಸ್ಟ್ (ಪ್ರಕಟಣೆಗಿಂತ ಮೊದಲಿನ ಪ್ರಬಂಧಗಳ ಸಂಗ್ರಹ)
  • ಫ್ರಂ ದಿ ಆರ್ಕೈವ್ಸ್ ಆಫ್ ಎ ಸೆಂಟೆನೇರಿಯನ್ (ಪ್ರಕಟಣೆಗಿಂತ ಮೊದಲಿನ ಪ್ರಬಂಧಗಳ ಸಂಗ್ರಹ)
  • ವೈ ಐ ಮೌರ್ನ್ ಫಾರ್ ಇಂಗ್ಲೆಂಡ್ (ಪ್ರಕಟಣೆಗಿಂತ ಮೊದಲಿನ ಪ್ರಬಂಧಗಳ ಸಂಗ್ರಹ)

ಅವರು ಅಮೂಲ್ಯವಾದ ಬೆಂಗಾಳಿ ಪುಸ್ತಕಗಳನ್ನು ಕೂಡಾ ಬರೆದಿದ್ದಾರೆ

  • ಬಂಗಾಳಿ ಜಿಬಾನೆ ರಮಣಿ (ಬೆಂಗಾಳಿ ಜೀವನದಲ್ಲಿ ಮಹಿಳೆಯ ಪಾತ್ರ)
  • ಆತ್ಮಘಟಿ ಬಂಗಾಳಿ (ಆತ್ಮಹತ್ಯೆಯ ಬೆಂಗಾಳಿ)
  • ಆತ್ಮಘಟಿ ರವೀಂದ್ರನಾಥ್ (ಆತ್ಮಹತ್ಯೆಯ ರವೀಂದ್ರನಾಥ್)
  • ಅಮರ್ ದೆಬೋತ್ತರ್ ಸಂಪತ್ತಿ (ನನ್ನ ಮೃತ್ಯುಪತ್ರ ಮೂಲಕ ಸ್ವಂತ ಆಸ್ತಿ ಕೊಡುವುದು)
  • ನಿರ್ಬಾಚಿತ ಪ್ರಬಂಧ (ಆಯ್ಕೆ ಮಾಡಿದ ಪ್ರಬಂಧಗಳು)
  • ಅಜಿ ಹೋತೆ ಸತಬರ್ಷ ಏಜ್ (ನೂರು ವರ್ಷಕ್ಕು ಮೊದಲೆ) (ನೂರು ವರ್ಷಗಳ ಹಿಂದೆ)

ಉಲ್ಲೇಖಗಳು

ಬದಲಾಯಿಸಿ
  1. "Sahitya Akademi Award - English (Official listings)". Sahitya Akademi. Archived from the original on 2009-03-31. Retrieved 2011-01-07.
  2. ೨.೦ ೨.೧ ರಾಮ್ ಕಿ ನಗ್ರಿ, ಒನ್ಸ್ ಅಗೈನ್ ಡೈಲಿ ಪಯೋನೀರ್ - ಅಕ್ಟೋಬರ್ 3, 2010
  3. http://www-stat.stanford.edu/~naras/ncc/


ಬಾಹ್ಯ ಕೊಂಡಿಗಳು

ಬದಲಾಯಿಸಿ