ನೀತಿಮತಿ
ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
ಸಂಗೀತ ರಚನೆಗಳು | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣೆ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಕಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ನೀತಿಮತಿ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ 60ನೆಯ ರಾಗ.ಈ ರಾಗವನ್ನು ಮುತ್ತುಸ್ವಾಮಿ ದೀಕ್ಷಿತರು ಸಂಪಾದಿಸಿದ ಸಂಗೀತ ಗ್ರಂಥದಲ್ಲಿ ನಿಶಾಧಮ್ ಎಂದು ಹೆಸರಿಸಿದ್ದಾರೆ.[೧][೨].
ರಾಗ ಸ್ವರೂಪ ಮತ್ತು ಲಕ್ಷಣ
ಬದಲಾಯಿಸಿಇದು ಹತ್ತನೆಯ ದಿಸಿ ಚಕ್ರದ ಆರನೆಯ ರಾಗ.ಇದರ ನೆನೆಪಿನ ಹೆಸರು ದಿಸಿ-ಶಾ ನೆನಪಿನ ನುಡಿಕಟ್ಟು:ಸ ರಿ ಗಿ ಮಿ ಪ ಧು ನು [೧] ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ.
ಆರೋಹಣ ಸ ರಿ೨ ಗ೨ ಮ೨ ಪ ದ೩ ನಿ೩ ಸ
ಅವರೋಹಣ ಸ ನಿ೩ ದ೩ ಪ ಮ೨ ಗ೨ ರಿ೨ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.ಇದರ ಸ್ವರಶ್ರೇಣಿ. 'ಷಡ್ಜ, ಚತುಶ್ರುತಿ ರಿಷಭ,ಸಾಧಾರಣ ಗಾಂಧಾರ,ಪ್ರತಿಮಧ್ಯಮ,ಪಂಚಮ,ಷಟ್‍ಶೃತಿ ಧೈವತಮತ್ತು ಕಾಕಲಿ ನಿಷಾಧ.ಇದು ೨೪ನೆಯ ಮೇಳಕರ್ತ ರಾಗವಾದ ವರುಣಪ್ರಿಯಗೆ ಸಮಾನವಾದ ಪ್ರತಿಮಧ್ಯಮವನ್ನು ಹೊಂದಿದೆ.
ಜನ್ಯ ರಾಗಗಳು
ಬದಲಾಯಿಸಿಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ.ಇವುಗಳಲ್ಲಿ ಹಂಸನಾದ ಹೆಚ್ಚು ಬಳಕೆಯಲ್ಲಿವೆ.
ಜನಪ್ರಿಯ ರಚನೆಗಳು
ಬದಲಾಯಿಸಿನೀತಿಮತಿ ರಾಗದಲ್ಲಿ ಹೆಚ್ಚು ಪ್ರಚಲಿತವಿರುವ ಕೆಲವು ಕೃತಿಗಳು
- ಅರವಿಂದ ಲೋಚನೆ- ಅಂಬುಜಮ್ ಕೃಷ್ಣ
- ವಾಚಾಮಗೋಚರ- ತ್ಯಾಗರಾಜ
- ಮೋಹನಕಾರ ಮುತ್ತು- ಕೋಟೀಶ್ವರ ಅಯ್ಯರ್
- ಸ್ಮರಣಮ್- ಎಂ. ಬಾಲಮುರಳಿ ಕೃಷ್ಣ
- ಶ್ರೀ ತುಳಸಿ ನೀತಿಮತಿ- ಕಲ್ಯಾಣಿ ವರದರಾಜನ್
ಸಂಬಂಧಿತ ರಾಗಗಳು
ಬದಲಾಯಿಸಿಗ್ರಹಭೇದಮ್ ಸೂತ್ರವನ್ನು ನೀತಿಮತಿ ರಾಗಕ್ಕೆ ಅನ್ವಯಿಸಿದಾಗ ಗಾಂಗೇಯಭೂಷಿಣಿ ಎಂಬ ಒಂದು ರಾಗ ದೊರೆಯುತ್ತದೆ.
ಉಲ್ಲೇಖಗಳು
ಬದಲಾಯಿಸಿ