ನಸುನಗೆಯು ಬಾಯಿಯ ಎರಡೂ ಬದಿಯ ಹತ್ತಿರದ ಸ್ನಾಯುಗಳನ್ನು ಬಾಗಿಸಿ ಮತ್ತು ಬಾಯಿಯ ಎಲ್ಲ ಕಡೆಗೂ ಸ್ನಾಯುಗಳನ್ನು ವಿಕಸನಗೊಳಿಸಿ ರೂಪಗೊಂಡ ಒಂದು ಮುಖಭಾವ. ಕೆಲವು ನಸುನಗೆಗಳು ಕಣ್ಣುಗಳ ಮೂಲೆಯಲ್ಲಿರುವ ಸ್ನಾಯುಗಳ ಸಂಕೋಚನವನ್ನು ಒಳಗೊಳ್ಳುತ್ತವೆ. ಮಾನವರಲ್ಲಿ, ಅದು ನಲಿವು, ಹೊಂದಿಕೊಳ್ಳುವಿಕೆ, ಸಂತೋಷ, ಅಥವಾ ವಿನೋದವನ್ನು ಸೂಚಿಸುವ ಒಂದು ಅಭಿವ್ಯಕ್ತಿ. ನವರಸದಲ್ಲಿ ನಗೆಗೂ ವಿಶಿಷ್ಟ ಸ್ಥಾನವಿದೆ. ನಗೆಯಲ್ಲಿ ಹಲವು ವಿಧಗಳಿವೆ. ಹೂನಗೆ, ಮಂದಹಾಸ, ಮುಗ್ಧನಗೆ, ಅಟ್ಟಹಾಸ ನಗೆ, ಪರಿಹಾಸ ನಗೆ, ಕುಹಕ ನಗೆ, ವ್ಯಂಗ್ಯನಗೆ, ನಿಷ್ಕಳಂಕನಗೆ, ಕಣ್ಣಂಚಿನ ನಗೆ, ಮೊಗದಗಲ ನಗೆ, ಸಂಕೋಚದ ನಗೆ, ನಾಚಿಕೆಯ ನಗೆ, ರಸಿಕ ನಗೆ, ವಿರಹದ ಹಾಸ, ಒಲವಿನಾಸ ಮುಂತಾದುವು.

ಕೆನ್ನೆಯಲ್ಲಿ ಗುಳಿಬಿದ್ದ ಯುವಕನ ಮುಗುಳುನಗು- smiling.

ನಗುವುದು ಸಹಜ ಧರ್ಮ ;ನಗಿಸುವುದು ಪರಧರ್ಮ
ನಗುವ ಕೇಳುತ ನಗುವುದತಿಶಯದ ಧರ್ಮ
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ-ಮಂಕುತಿಮ್ಮ


ಬಾಹ್ಯ ಸಂಪರ್ಕಗಳು

ಬದಲಾಯಿಸಿ


ನಗುವಿನ ಪ್ರಕಾರಗಳಲ್ಲಿ ಪರಿಹಾಸ್ಯ ನಗೆ ಒಂದು ವಿಶಿಷ್ಟ ನಗೆಯಾಗಿದ್ದು,ಇದರಲ್ಲಿ ಅನೇಕ ಭಾವನೆಗಳನ್ನು ಒಳಗೊಂಡಿದೆ.

"https://kn.wikipedia.org/w/index.php?title=ನಸುನಗೆ&oldid=1197399" ಇಂದ ಪಡೆಯಲ್ಪಟ್ಟಿದೆ