ವಿನೋದವು ಹಾಸ್ಯಭರಿತ ಮತ್ತು ಸಾಮಾನ್ಯವಾಗಿ ಸಂತೋಷಗೊಳಿಸುವ ಘಟನೆಗಳು ಅಥವಾ ಸಂದರ್ಭಗಳನ್ನು ಅನುಭವಿಸುವ ಸ್ಥಿತಿ, ಮತ್ತು ಇದನ್ನು ಆನಂದ, ಸುಖ, ನಗೆ ಹಾಗೂ ಆಹ್ಲಾದಗಳೊಂದಿಗೆ ಸಂಬಂಧಿಸಲಾಗುತ್ತದೆ. ಹಿಂದೆ ವಿನೋದವನ್ನುಂಟುಮಾಡಿದ ಘಟನೆಗಳ ಸಂಸ್ಮರಣದ ಮೂಲಕ ಕೂಡ ವಿನೋದವನ್ನು ಅನುಭವಿಸಬಹುದು.