ಸಂತೋಷ

(ಆಹ್ಲಾದ ಇಂದ ಪುನರ್ನಿರ್ದೇಶಿತ)
ಸುಖ ಲೇಖನಕ್ಕಾಗಿ ಇಲ್ಲಿ ನೋಡಿ.

ಸಂತೋಷ ಶಬ್ದದ ಅರ್ಥ ಅಕ್ಷರಶಃ "ತೃಪ್ತಿ, ಸಮಾಧಾನ".[] ಇದು ಭಾರತೀಯ ತತ್ವಶಾಸ್ತ್ರದಲ್ಲಿ ಒಂದು ನೈತಿಕ ಪರಿಕಲ್ಪನೆಯೂ ಆಗಿದೆ, ವಿಶೇಷವಾಗಿ ಯೋಗದಲ್ಲಿ. ಪತಂಜಲಿಯು ಯೋಗದಲ್ಲಿ ಸಂತೋಷವನ್ನು ನಿಯಮಗಳಲ್ಲಿ ಒಂದಾಗಿ ಸೇರಿಸಿದ್ದಾನೆ.

ಸಂತೋಷ ಸಂಸ್ಕೃತದಲ್ಲಿ ಒಂದು ಸಂಧಿಪದವಾಗಿದೆ, ಮತ್ತು ಸಂ ಹಾಗೂ ತೋಷಗಳಿಂದ ವ್ಯುತ್ಪನ್ನವಾಗಿದೆ. ಸಂ ಅಂದರೆ "ಸಂಪೂರ್ಣವಾಗಿ" ಮತ್ತು ತೋಷ ಅಂದರೆ "ತೃಪ್ತಿ", "ಸಮಾಧಾನ", "ಸ್ವೀಕೃತಿ", "ಆರಾಮದಾಯಕವಾಗಿರು" ಎಂದು. ಎರಡನ್ನೂ ಸೇರಿಸಿದಾಗ ಸಂತೋಷ ಶಬ್ದದ ಅರ್ಥ "ಸಂಪೂರ್ಣವಾಗಿ ತೃಪ್ತವಾಗಿರುವುದು, ಸಮಾಧಾನವಾಗಿರುವುದು". ತುಷ್ಟ ಬೇರುಪದವನ್ನು ಆಧರಿಸಿದ ಇತರ ಶಬ್ದಗಳು, ಉದಾ. ಸಂತುಷ್ಟ ಸಂತೋಷದೊಂದಿಗೆ ಸಮಾನಾರ್ಥಕವಾಗಿವೆ ಮತ್ತು ಪ್ರಾಚೀನ ಹಾಗೂ ಮಧ್ಯಯುಗದ ಭಾರತೀಯ ಪಠ್ಯಗಳಲ್ಲಿ ಕಾಣಬರುತ್ತವೆ.

ಯೋಗ ದರ್ಶನವು ತೃಪ್ತಿಯನ್ನು ಒಂದು ಆಂತರಿಕ ಸ್ಥಿತಿಯೆಂದು ವ್ಯಾಖ್ಯಾನಿಸುತ್ತದೆ. ಈ ಸ್ಥಿತಿಯಲ್ಲಿ ಹರ್ಷಯುಕ್ತ ಹಾಗೂ ತೃಪ್ತ ಮನಸ್ಸು ಇರುತ್ತದೆ, ಒಬ್ಬರ ಪರಿಸರವನ್ನು ಲೆಕ್ಕಿಸದೆ. ಒಬ್ಬರು ಆನಂದ ಅಥವಾ ನೋವು, ಲಾಭ ಅಥವಾ ಹಾನಿ, ಪ್ರಸಿದ್ಧಿ ಅಥವಾ ತಿರಸ್ಕಾರ, ಯಶಸ್ಸು ಅಥವಾ ವೈಫಲ್ಯ, ಸಹಾನುಭೂತಿ ಅಥವಾ ದ್ವೇಷವನ್ನು ಭೇಟಿಮಾಡಿದರೂ ಕೂಡ ತೃಪ್ತಿಯೇ ಇರುತ್ತದೆ.

ಒಂದು ನಿಯಮವಾಗಿ ಸಂತೋಷವನ್ನು ವಿವಿಧ ಮಟ್ಟಗಳಲ್ಲಿ ಭಾರತೀಯ ಪಠ್ಯಗಳಲ್ಲಿ ಚರ್ಚಿಸಲಾಗಿದೆ - ಉದ್ದೇಶ, ಆಂತರಿಕ ಸ್ಥಿತಿ ಮತ್ತು ಅದರ ಅಭಿವ್ಯಕ್ತಿ. ಉದ್ದೇಶವಾಗಿ, ಸಂತೋಷವೆಂದರೆ ತಮ್ಮ ಅತ್ಯುತ್ತಮ ಪ್ರಯತ್ನ ಮಾಡುವುದು ಮತ್ತು ಅದರ ಫಲಿತಾಂಶಗಳನ್ನು ಸ್ವೀಕರಿಸುವುದು. ಆಂತರಿಕ ಸ್ಥಿತಿಯಾಗಿ, ಇದು ಆಸ್ತೇಯ (ಅಪೇಕ್ಷಿಸದಿರುವುದು, ಕದಿಯದಿರುವುದು), ಅಪರಿಗ್ರಹ (ಸಂಗ್ರಹಿಸದಿರುವುದು, ಅಸ್ವಾಮ್ಯತೆ) ಮತ್ತು ದಯೆಯಂತಹ ಇತರ ಸದ್ಗುಣಗಳೊಂದಿಗೆ ಸಂಯೋಜಿತವಾಗುವ ಮತ್ತು ಕಾರ್ಯಮಾಡುವ ತೃಪ್ತಿ. ಬಾಹ್ಯ ಅಭಿವ್ಯಕ್ತಿಯಾಗಿ, ಸಂತೋಷವೆಂದರೆ ಗಮನಿಸಲಾದ ಪ್ರಶಾಂತತೆ, ಸಂಪೂರ್ಣವಾಗಿ ಸಮಾಧಾನವಾಗಿರುವುದು, ಮೂಲಭೂತವಾಗಿರುವುದನ್ನು ಬಿಟ್ಟು ಬೇರೆ ಏನನ್ನೂ ಬಯಸದಿರುವುದು.

ಸಂತೋಷವು ಸ್ವಂತಕ್ಕೆ, ಇತರರಿಗೆ, ಎಲ್ಲ ಜೀವಿಗಳಿಗೆ ಮತ್ತು ಪ್ರಕೃತಿಗೆ ನಕಾರಾತ್ಮಕವಾದ ಏನನ್ನಾದರೂ ತಪ್ಪಿಸುವ ಬಯಕೆಯಲ್ಲಿ ಬೇರೂರಿದೆ. ಇದು ಪರಿತ್ಯಾಗದ ಸ್ಥಿತಿಯಲ್ಲ ಅಥವಾ ಯಾವುದೇ ಅಗತ್ಯಗಳಿಲ್ಲದೆ ಇರುವುದಲ್ಲ, ಬದಲಾಗಿ ಒಬ್ಬರಿಗೆ ಬೇಕಾದ್ದಕ್ಕಿಂತ ಹೆಚ್ಚು ಮಾತನಾಡದಿರುವುದು ಮತ್ತು ಕಡಿಮೆ ಮಾತನಾಡದಿರುವ ಸ್ಥಿತಿ, ದೃಢ ಆಶಾವಾದದ ಸ್ಥಿತಿ. ಇದು ತಾವು ಸಿಲುಕಿಕೊಂಡಿರುವ ಪರಿಸ್ಥಿತಿಗಳನ್ನು ನಿರಾಸೆಗೊಳ್ಳದೆ ಸ್ವೀಕರಿಸುವ, ತಮ್ಮ ಸ್ವಂತ ಅಗತ್ಯಗಳನ್ನು ಸಮತೋಲನ ಮಾಡುತ್ತಿರುವ ಇತರರೊಂದಿಗೆ ಸಮಚಿತ್ತತೆಯನ್ನು ಸ್ವೀಕರಿಸುವ ಅಭ್ಯಾಸ.

ಸಂತೋಷ ಎಂಬುದು ಒಂದು ವರ್ತನೆಯನ್ನು ಬದಲಾವಣೆ ಮಾಡುವಂತ ಕ್ರಿಯೆಯಾಗಿದೆ.

ಉಲ್ಲೇಖಗಳು

ಬದಲಾಯಿಸಿ
  1. Peter H Van Ness, Yoga as Spiritual but not Religious: A Pragmatic Perspective, American Journal of Theology & Philosophy, Vol. 20, No. 1 (January 1999), pages 15-30


"https://kn.wikipedia.org/w/index.php?title=ಸಂತೋಷ&oldid=1164075" ಇಂದ ಪಡೆಯಲ್ಪಟ್ಟಿದೆ