ನಗೆ ಮಾನವರು ಮತ್ತು ಪ್ರೈಮೇಟ್‍ನ ಕೆಲವು ಇತರ ಪ್ರಜಾತಿಗಳಲ್ಲಿ, ಸಾಮಾನ್ಯವಾಗಿ ಎದೆಗೂಡಿನ ಪೊರೆ ಮತ್ತು ಉಸಿರಾಟದ ವ್ಯವಸ್ಥೆಯ ಇತರ ಭಾಗಗಳ ಲಯಬದ್ಧವಾದ, ಹಲವುವೇಳೆ ಶ್ರವ್ಯ ಸಂಕೋಚನಗಳನ್ನು ಒಳಗೊಂಡ ಒಂದು ಶಾರೀರಿಕ ಪ್ರತಿಕ್ರಿಯೆ. ಅದು ಕೆಲವು ಬಾಹ್ಯ ಅಥವಾ ಆಂತರಿಕ ಉದ್ದೀಪಕಗಳಿಗೆ ಒಂದು ಪ್ರತಿಕ್ರಿಯೆ. ನಗೆ ಕಚಗುಳಿ ಅಥವಾ ಹಾಸ್ಯಮಯ ಕಥೆಗಳು ಅಥವಾ ಯೋಚನೆಗಳಂತಹ ಚಟುವಟಿಕೆಗಳಿಂದ ಹುಟ್ಟಿಕೊಳ್ಳಬಹುದು.[೧][೨] ಅತ್ಯಂತ ಸಾಮಾನ್ಯವಾಗಿ, ಅದನ್ನು ಹಿಗ್ಗು, ಉಲ್ಲಾಸ, ಸಂತೋಷ, ನೆಮ್ಮದಿ, ಇತ್ಯಾದಿಗಳಂತಹ ಅನೇಕ ಸಕಾರಾತ್ಮಕ ಭಾವನಾತ್ಮಕ ಸ್ಥಿತಿಗಳ ದೃಶ್ಯ ಅಭಿವ್ಯಕ್ತಿಯೆಂದು ಪರಿಗಣಿಸಲಾಗುತ್ತದೆ. ಆದರೆ, ಕೆಲವು ಸಂದರ್ಭಗಳಲ್ಲಿ, ಅದು ಮುಜುಗರ, ಕ್ಷಮಾಯಾಚನೆ, ಅಥವಾ ಗಲಿಬಿಲಿಯಂತಹ ವಿರುದ್ಧ ಭಾವನಾತ್ಮಕ ಸ್ಥಿತಿಗಳಿಂದ ಉಂಟಾಗಬಹುದು. ಒಬ್ಬ ವ್ಯಕ್ತಿಯು ಒಂದು ನಿರ್ದಿಷ್ಟ ಸಂದರ್ಭದಲ್ಲಿ ನಗುತ್ತಾನೊ ಅಥವಾ ಇಲ್ಲವೊ ಎಂಬುದಕ್ಕೆ ವಯಸ್ಸು, ಲಿಂಗ, ವಿದ್ಯೆ, ಭಾಷೆ, ಮತ್ತು ಸಂಸ್ಕೃತಿ ಎಲ್ಲವೂ ಅಂಶಗಳಾಗಿವೆ.

ಬಟ್ಟೆ ಕಾರ್ಖಾನೆಯಲ್ಲಿ ಕಾರ್ಮಿಕರು ನಗುತ್ತಿರುವುದು.

ನಗೆಯು ಮಿದುಳಿನಿಂದ ನಿಯಂತ್ರಿತವಾದ ಮಾನವ ವರ್ತನೆಯ ಭಾಗವಾಗಿದೆ, ಮತ್ತು ಸಾಮಾಜಿಕ ಸೇರಿಕೆಯಲ್ಲಿ ಮಾನವರಿಗೆ ತಮ್ಮ ಉದ್ದೇಶಗಳನ್ನು ಸ್ಪಷ್ಟಪಡಿಸಲು ಸಹಾಯ ಮಾಡುತ್ತದೆ ಹಾಗೂ ಸಂಭಾಷಣೆಗಳಿಗೆ ಒಂದು ಭಾವನಾತ್ಮಕ ಸಂದರ್ಭ ಒದಗಿಸುತ್ತದೆ. ನಗೆಯನ್ನು ಒಂದು ಗುಂಪಿನ ಭಾಗವಾಗಿರುವುದಕ್ಕೆ ಸಂಜ್ಞೆಯಾಗಿ ಬಳಸಲಾಗುತ್ತದೆ—ಅದು ಸಮ್ಮತಿ ಮತ್ತು ಇತರರೊಂದಿಗೆ ಸಕಾರಾತ್ಮಕ ಸೇರಿಕೆಯನ್ನು ಸೂಚಿಸುತ್ತದೆ. ನಗೆಯನ್ನು ಕೆಲವೊಮ್ಮೆ ಸಾಂಕ್ರಾಮಿಕವೆಂದು ಕಾಣಲಾಗುತ್ತದೆ, ಮತ್ತು ಒಬ್ಬ ವ್ಯಕ್ತಿಯ ನಗುವೇ ಧನಾತ್ಮಕ ಪ್ರತಿಕ್ರಿಯೆಯಾಗಿ ಇತರರಲ್ಲಿ ನಗುವನ್ನು ಪ್ರಚೋದಿಸಬಹುದು. ಇದು ಸಂದರ್ಭ ಹಾಸ್ಯ ದೂರದರ್ಶನ ಕಾರ್ಯಕ್ರಮಗಳಲ್ಲಿನ ನಗು ಶಬ್ದಗಳ ಜನಪ್ರಿಯತೆಗೆ ಭಾಗಶಃ ಕಾರಣ ನೀಡಬಹುದು.

ಉಲ್ಲೇಖಗಳು ಬದಲಾಯಿಸಿ

  1. Stearns, Frederic Rudolph (1972). Laughing: Physiology, Pathology, Psychology, Pathopsychology and Development. pp. 59–65. ISBN 0398024200.
  2. Shultz, T. R.; Horibe, F. (1974). "Development of the appreciation of verbal jokes". Developmental Psychology. 10: 13–20. doi:10.1037/h0035549.
"https://kn.wikipedia.org/w/index.php?title=ನಗೆ&oldid=753031" ಇಂದ ಪಡೆಯಲ್ಪಟ್ಟಿದೆ