ಧನ್ಗರ್ ( ಅಥವ ದನ್ಕರ್, ದ್ರನ್ಗಕರ್) ಒಂದು ಗ್ರಾಮ ಮತ್ತು ಗೊಂಪ.

ಧನ್ಗರ್ ಹಳ್ಳಿ

ಇದು ಭಾರತಹಿಮಾಚಲ ಪ್ರದೇಶದ ಲಾಹೌಲ್ ಹಾಗು ಸ್ಪಿಟಿ ಜಿಲ್ಲೆಗಳ ಮಧ್ಯೆ ಇದೆ. ಸ್ಪಿಟಿ ಕಣಿವೆಯಿಂದ ೩,೮೯೪ ಮೀಟರ್ (೧೨,೭೭೪ ಅಡಿ) ಎತ್ತರದಲ್ಲಿ, ಕಜ ಹಾಗು ಟಬೊ ಎಂಬ ಪಟ್ಟಣಗಳ ಮಧ್ಯೆ ಇರುವ ಸ್ಥಳವಿದು. ಇಲ್ಲಿರುವ ಧನ್ಗರ್ ಗೊಂಪದಿಂದ ಸ್ಪಿಟಿ ಹಾಗು ಪಿನ್ ನದಿಗಳ ಸಂಗಮ ಕಾಣುತ್ತವೆ. ಈ ದೃಶ್ಯ ನಿಜವಗಲು ಅದ್ಭುತ. ಇದು ಪ್ರಪಂಚದಲ್ಲೇ ಒಂದು ಅಥಿ ರಮಣೀಯ ಸ್ಥಳ. ಭಾರತದ "ಪಂಚಾಯತಿ ರಾಜ್ ಆಕ್ತ್" ಪ್ರಕಾರ ಧನ್ಗರಿನ ಆಡಳಿತ ಸರಪಂಚಿಗೆ ಬಿಟ್ಟಿದ್ದು. ಧನ್ಗರ್ ಗೊಂಪದ ಕೆಳಗಿನ ಶಿಚಿಲಿಂಗ್ ಎಂಬ ಪುಟ್ಟ ಹಳ್ಳಿಯಲ್ಲಿ ಹೊಸಾ ಧನ್ಗರ್ ದೇವಾಲಯವಿದೆ. ಟಿಬೆಟ್ನ ಬೌದ್ಧ ಧರ್ಮದ ಗೆಲುಗ್ ಶಾಲೆಯ ೧೫೦ ಬೌದ್ಧ ಸನ್ಯಾಸಿಗಳು ಇಲ್ಲಿ ವಾಸವಾಗಿದ್ದರೆ.

ಧನ್ಗರ್ ಗಂಪ

ಜನಸಂಖ್ಯೆ:

ಬದಲಾಯಿಸಿ
 
ಸ್ಪಿಟಿ ನದಿಯ ಪಕ್ಕ ಬೌದ್ಧ ಪೂಜೆ ದ್ವಜಗಳು

ಇಲ್ಲಿನ ಜನಸಂಖ್ಯೆ ೩೦೧. ಇದರಲ್ಲಿ ೧೫೨ ಗಂಡಸರು, ೧೪೯ ಮಹಿಳೆಯರು. ಧನ್ಗರ್ ಅಲ್ಲಿ ೦-೬ ವರ್ಶದ ಮಕ್ಕಳು ೪೪ ಇದ್ದರೆ (ಜನಸಂಖ್ಯೆ ಅಲ್ಲಿ ೧೪.೬೨%). ಇಲ್ಲಿಯ ಲಿಂಗ ಅನುಪಾತ ೯೮೦, ಹಿಮಾಛಲ ಪ್ರದೇಶದ ಸರಾಸರಿ ೯೭೮ಕ್ಕಿಂತ ಹೆಚ್ಚು. ಮಕ್ಕಳ ಲಿಂಗ ಅನುಪಾತ ೨೧೪೩. ಇದೂ ಹಿಮಾಛಲ ಪ್ರದೇಶದ ಸರಾಸರಿ ೯೦೯ಕ್ಕಿಂತ ಹೆಚ್ಚು. ಧನ್ಗರ್ ಅಲ್ಲಿ ಸಾಕ್ಷರತೆ ದರ ೭೭.೪೩%, ಹಿಮಾಛಲ ಪ್ರದೇಶದ ೮೨.೮೦% ಕ್ಕಿಂತ ಕಡಿಮೆ.

ಇತಿಹಾಸ:

ಬದಲಾಯಿಸಿ

೧೭ನೇ ಶತಮಾನದಲ್ಲಿ, ಸ್ಪಿಟಿ ಕಣಿವೆಯ ರಾಜ್ಯದ ರಾಜಧಾನಿ ಧನ್ಗರ್. ಬ್ರಿಟಿಷ್ ಆಳವಿಕೆಗಿಂತ ಮೂಂಚೆ, "ನೊನೊ" ಗಳೆಂಬ ಸ್ಪಿಟಿ ರಾಜರು ಈ ಕೋಟೆಯನ್ನು ರಕ್ಷಿಸಿ, ಸುತ್ತಲಿನ ಪ್ರಜೆಗಳಿಗೆ ನ್ಯಾಯ ಹಾಗು ಶಿಕ್ಷೆಯನ್ನ್ ವಧಿಸುತ್ತಿದ್ದರು. ೧೯೭೫ರ ಭೂಕಂಪದಲ್ಲಿ ಧನ್ಗರ್ ಕೋಟೆ ನಾಶವಾಯಿತು.

"ಧಂಗ್ ಎಂದರೆ "ಕ್ಲಿಫ್" ಅಥವ ಬಂಡೆ; "ಕರ್" ಎಂದರೆ ಕೊಟೆ. ಧನ್ಗರ್ ಎಂದರೆ ಬಂಡೆಯ ಮೇಲಿರುವ ಕೋಟೆ.

ಕೀ, ತಂಗ್ ಯುದ್ಧ್, ಟಿಕ್ಸೆ, ಲಿಕಿರ್, ರಂಗದಮ್ ಬೌದ್ಧ ದೇವಾಲಯಗಳಂತೆ, ಧನ್ಗರ್ ಕೇಂದ್ರ ಟಿಬೆಟ್ಟಿನ ಮಾದರಿಯಲ್ಲಿ ಕಟ್ಟಡವಾಗಿದೆ. ೧೮೫೫ ರಲ್ಲಿ ಇಲ್ಲಿ ೯೦ ಸನ್ಯಾಸಿಗಳಿದ್ದರು.

ಪ್ರವಾಸಿಗಳಿಗೆ ಮಾಹಿತಿ:

ಬದಲಾಯಿಸಿ

ಇಲ್ಲಿನ ಕಠಿಣ ಚಂದ್ರನ ಭೂದೃಶ್ಯವಲ್ಲದೆ, ಧನ್ಗರ್ ಗೊಂಪದಲ್ಲಿ ಗಮನಾರ್ಹ ದೃಶ್ಯಗಳು "ವೈರೊಕನ" ಪ್ರಥಿಮೆ ಹಾಗು ಹಲವಾರು ಪಾಳುಬಿದ್ದ "ಥಂಗ್ಕ"ಗಳು. ನಾಲ್ಕು ಆಕೃತಿಗಳು ಕುಳಿತಂತೆ ಕಾಣುವ ಒಂದು ಪ್ರಥಿಮೆ ಇದು. ಇದಲ್ಲದೆ ಧನ್ಗರ್ ಅಲ್ಲಿ ಒಂದು ಚಿಕ್ಕ ವಸ್ತು ಸಂಗ್ರಹಾಲಯ ಇದೆ. ಧನ್ಗರ್ ಹಲ್ಲಿ ಇಂದ ೧.೫ ಕಿಲೋಮೀಟರ್ ದೂರದಲ್ಲಿ ಒಂದು ಕೆರೆ ಇದೆ. ಊರಿನ ಜನರಿಗೆಲ್ಲ ಇದೆ ನೀರಿನ ಮೂಲ. ಸುಂದರ ಹಸಿರು ಪಚ್ಚೆಯ ಮಧ್ಯೆ ಕ್ಯಾಂಪಿಂಗ್ ಗೆ ಒಳ್ಳೆ ಸ್ಥಳ, ಆದರೆ ಇದೆ ಕುಡಿಯುವ ನೀರಿನ ಮೂಲವಾದುದರಿಂದ ಇಲ್ಲಿ ಕ್ಯಾಂಪಿಂಗ್ ಅವಕಾಶವಿಲ್ಲ. ವರ್ಶದಲ್ಲಿ ಎಂಟು ತಿಂಗಳು, ಮೇ ಇಂದ ಸೆಪ್ಟೆಂಬರ್ ವರೆಗೆ, ಕೆರೆ "ಫ್ರೀಜ್" ಆಗಿರುತ್ತದೆ. ಕೆರೆ ಪಕ್ಕ ಪೂಜೆಗೆ ಸಂಭಂದ ಪಟ್ಟ ದ್ವಜಗಳು ಹಾರಡುತ್ತಿರುತ್ತವೆ.

ಹಳ್ಳಿಯಲ್ಲಿ ಬೆಳಗ್ಗೆ ೧೧ರಿಂದ ಮಧ್ಯಾನ ೨ ಗಂಟೆಯವರೆಗೆ ಮಾತ್ರ ವಿದ್ಯುತ್ ಇರುತ್ತದೆ. ಹಳ್ಳಿಯ ಜನ ಔಷದಿಯ ಗಿಡಮೂಲಿಕೆಗಳನ್ನು ಬೆಳೆಸುತ್ತಾರೆ. ಈ ಗಿಡಮೂಲಿಕೆಗಳು ಹೃದಯ ಹಾಗು ಶ್ವಾಸಕೋಚದ ಚಿಕಿತ್ಸೆಗೆ ಬೇಕಾದ ಗುಣಗಳನ್ನು ಹೊಂದಿವೆ ಎಂದು ಊರಿನ ಜನರು ಹೇಳುತ್ತಾರೆ. ಧನ್ಗರ್ ಈಗ ಪ್ರವಾಸಿ ಸ್ಥಳವಾಗಿರುವುದರಿಂದ, ಮುಂಚೆ ಕೇವಲ ಬೌದ್ಧ ಭಿಕ್ಷುಗಳ ನೆಲೆಯಾಗಿದ್ದ ಧನ್ಗರ್ ಇವತ್ತು ಎಲ್ಲಾ ಮೂಲಸೌಕರ್ಯಗಳಿವೆ. ಧನ್ಗರಿಗೆ ಹೋಗಲು ಒಂದು ಮೋಟಾರ್ ರಸ್ತೆ ಇದೆ.

೨೦೦೬ರಲ್ಲಿ "ವರ್ಲ್ದ ಮಾನ್ಯುಮೆಂಟ್ಸ್ ಫಂಡ್" ಧನ್ಗರ್ ಗೊಂಪವನ್ನು ಪ್ರಪಂಚದಲ್ಲಿ ಅಳಿವಿನಂಚಿನಲ್ಲಿರುವ ೧೦೦ ಸ್ಥಳಗಳಲ್ಲಿ ಒಂದಾಗಿ ಗುರುತಿಸಿತು.

"https://kn.wikipedia.org/w/index.php?title=ಧನ್ಗರ್&oldid=757247" ಇಂದ ಪಡೆಯಲ್ಪಟ್ಟಿದೆ