ಭೂದೃಶ್ಯ
ಭೂದೃಶ್ಯ ವು ಭೂಮಿಯ ಪ್ರದೇಶವೊಂದರ ಗೋಚರ ಲಕ್ಷಣಗಳನ್ನು ಒಳಗೊಳ್ಳುತ್ತದೆ. ಭೂಮಿಯ ಮೇಲ್ಮೈಯ ಸಹಜ ಲಕ್ಷಣಗಳ ಭೌತಿಕ ಘಟಕಗಳು, ನದಿಗಳು, ಸರೋವರಗಳು ಮತ್ತು ಸಮುದ್ರದಂಥ ಜಲರಾಶಿಗಳು, ಸ್ಥಳೀಯ ಸಸ್ಯವರ್ಗವೂ ಸೇರಿದಂತೆ ಭೂಮಿಯ ಹೊದಿಕೆಯ ಜೀವಂತ ಘಟಕಗಳು, ಭೂಮಿ ಬಳಕೆಗಳು, ಕಟ್ಟಡಗಳು ಮತ್ತು ರಚನೆಗಳನ್ನು ಒಳಗೊಂಡಿರುವ ಮಾನವ ಘಟಕಗಳು, ಮತ್ತು ದೀಪದ ವ್ಯವಸ್ಥೆ ಹಾಗೂ ಹವಾಮಾನದ ಸ್ಥಿತಿಗತಿಗಳಂಥ ಶಾಶ್ವತವಲ್ಲದ ಘಟಕಗಳು ಭೂದೃಶ್ಯದಲ್ಲಿ ಮಿಳಿತವಾಗಿರುತ್ತದೆ.
ತಮ್ಮ ಭೌತಿಕ ಮೂಲಗಳು ಹಾಗೂ ಸಹಸ್ರಾರು ವರ್ಷಗಳಿಂದಲೂ ಅನೇಕವೇಳೆ ಸೃಷ್ಟಿಸಲ್ಪಟ್ಟಿರುವ ಮಾನವ ಇರುವಿಕೆಯ ಸಾಂಸ್ಕೃತಿಕ ಹೊದಿಕೆಗಳೆರಡನ್ನೂ ಸಂಯೋಜಿಸುವ ಮೂಲಕ, ಸ್ಥಳೀಯ ಮತ್ತು ರಾಷ್ಟ್ರೀಯ ಗುರುತಿಗೆ ಸಂಬಂಧಿಸಿದಂತೆ ಅತಿಮುಖ್ಯವಾಗಿರುವ ಜನರ ಹಾಗೂ ಸ್ಥಳದ ಜೀವಂತ ಸಂಶ್ಲೇಷಣೆಯನ್ನು ಭೂದೃಶ್ಯಗಳು ಪ್ರತಿಫಲಿಸುತ್ತವೆ. ಭೂದೃಶ್ಯಗಳು, ಅವುಗಳ ಲಕ್ಷಣ ಹಾಗೂ ಗುಣಮಟ್ಟಗಳು, ಪ್ರದೇಶವೊಂದರ ಸ್ವಯಂ ಬಿಂಬವನ್ನು, ಸದರಿ ಪ್ರದೇಶವನ್ನು ಇತರ ಪ್ರದೇಶಗಳಿಂದ ಭಿನ್ನವಾಗಿಸುವ ಸ್ಥಳದ ಪ್ರಜ್ಞೆಯನ್ನು ವ್ಯಾಖ್ಯಾನಿಸುತ್ತವೆ ಅಥವಾ ವಿಶದೀಕರಿಸುತ್ತವೆ. ಇದು ಜನರ ಜೀವಗಳ ಅಥವಾ ಜೀವಂತಿಕೆಗಳ ಕ್ರಿಯಾತ್ಮಕ ಹಿನ್ನೆಲೆಯಾಗಿದೆ.
ಭೂಮಿಯು ಭೂದೃಶ್ಯಗಳ ಒಂದು ವಿಶಾಲ ವ್ಯಾಪ್ತಿಯನ್ನು ಹೊಂದಿದೆ; ಧ್ರುವ ಪ್ರದೇಶಗಳ ಹಿಮದ ಭೂದೃಶ್ಯಗಳು, ಪರ್ವತಮಯ ಭೂದೃಶ್ಯಗಳು, ವಿಶಾಲವಾದ ಶುಷ್ಕ ಮರುಭೂಮಿಯ ಭೂದೃಶ್ಯಗಳು, ದ್ವೀಪಗಳು ಮತ್ತು ಕಡಲತೀರದ ಪ್ರದೇಶಗಳ ಭೂದೃಶ್ಯಗಳು, ದಟ್ಟವಾದ ಅರಣ್ಯದಿಂದ ಕೂಡಿದ ಅಥವಾ ಕಳೆದುಹೋದ ಉತ್ತರ ದಿಕ್ಕಿನ ಅರಣ್ಯಗಳು ಮತ್ತು ಉಷ್ಣವಲಯದ ಮಳೆಕಾಡುಗಳನ್ನು ಒಳಗೊಂಡಿರುವ ಮರಗಳಿಂದ ತುಂಬಿದ ಭೂದೃಶ್ಯಗಳು, ಮತ್ತು ಸಮಶೀತೋಷ್ಣದ ಹಾಗೂ ಉಷ್ಣವಲಯದ ಪ್ರದೇಶಗಳ ವ್ಯಾವಸಾಯಿಕ ಭೂದೃಶ್ಯಗಳು ಇವೆಲ್ಲವೂ ಭೂಮಿಯ ಭೂದೃಶ್ಯಗಳ ವಿಶಾಲವ್ಯಾಪ್ತಿಯಲ್ಲಿ ಬರುತ್ತವೆ.
ಸಾಂಸ್ಕೃತಿಕ ಭೂದೃಶ್ಯ, ಭೂದೃಶ್ಯದ ಪರಿಸರ ವಿಜ್ಞಾನ, ಭೂದೃಶ್ಯದ ಯೋಜಿಸುವಿಕೆ, ಭೂದೃಶ್ಯದ ನಿರ್ಧಾರಣೆ ಹಾಗೂ ಭೂದೃಶ್ಯದ ವಿನ್ಯಾಸ ಇವೇ ಮೊದಲಾದವುಗಳ ಅಡಿಯಲ್ಲಿ ಭೂದೃಶ್ಯವನ್ನು ಮತ್ತಷ್ಟು ಅವಲೋಕಿಸಲು ಸಾಧ್ಯವಿದೆ.
ಪದವ್ಯುತ್ಪತ್ತಿ
ಬದಲಾಯಿಸಿಲ್ಯಾಂಡ್ಸ್ಕಿಫ್ಟ್ , ಲ್ಯಾಂಡ್‌ಸ್ಕೈಪ್ ಅಥವಾ ಲ್ಯಾಂಡ್‌ಸ್ಕೇಫ್ ಎಂಬ ಶಬ್ದಗಳು 5ನೇ ಶತಮಾನದ[೧] ಕೆಲಕಾಲದ ನಂತರ ಬ್ರಿಟನ್‌ನ್ನು ಪ್ರವೇಶಿಸಿದವು ಎಂದು ನಂಬಲಾಗಿದೆ. ಭೂಮಿಯಲ್ಲಿನ ಮಾನವ-ನಿರ್ಮಿತ ಸ್ಥಳಾವಕಾಶಗಳ ಒಂದು ವ್ಯವಸ್ಥೆಗೆ ಈ ಶಬ್ದಗಳು ಉಲ್ಲೇಖಿಸಲ್ಪಡುತ್ತಿದ್ದವು. ಅಂದರೆ, ಬೇಲಿಗಳು ಅಥವಾ ಗೋಡೆಗಳಿಂದ ಅವಶ್ಯವಾಗಿ ವಿಶದೀಕರಿಸಲ್ಪಡದಿದ್ದರೂ, ಎಲ್ಲೆಗೆರೆಗಳೊಂದಿಗಿನ ಹೊಲಗಳಂಥ ಸ್ಥಳಾವಕಾಶಗಳಿಗೆ ಇವು ಉಲ್ಲೇಖಿಸಲ್ಪಡುತ್ತಿದ್ದವು. ಒಂದು ಬುಡಕಟ್ಟಿನಿಂದ ಆಕ್ರಮಿಸಿಕೊಳ್ಳಲ್ಪಟ್ಟಂಥ ಅಥವಾ ನಂತರದಲ್ಲಿ, ಓರ್ವ ಊಳಿಗಮಾನ್ಯ ಧಣಿಯಿಂದ ಆಳಲ್ಪಟ್ಟಂಥ ಒಂದು ಸ್ವಾಭಾವಿಕ ಘಟಕ, ಒಂದು ನದಿಯ ಕಣಿವೆ ಅಥವಾ ಬೆಟ್ಟಗಳ ಶ್ರೇಣಿಯಂಥ, ಭೂಮಿಯ ಒಂದು ಪ್ರದೇಶ ಅಥವಾ ಬಯಲಿಗೂ ಇದು ಉಲ್ಲೇಖಿಸಲ್ಪಟ್ಟಿದೆ. ಒಂದು ಸಣ್ಣ ಆಡಳಿತಾತ್ಮಕ ಘಟಕ ಅಥವಾ ಪ್ರದೇಶಕ್ಕೆ ಉಲ್ಲೇಖಿಸಲ್ಪಡುವ ಲ್ಯಾಂಡ್‌ಷಾಫ್ಟ್ ಎಂಬ ಜರ್ಮನ್ ಶಬ್ದದ ಅರ್ಥವನ್ನೇ ಹೋಲುವ ಅರ್ಥವನ್ನು ಈ ಶಬ್ದವು ಹೊಂದಿದೆ. ಈ ಶಬ್ದದ ಬಳಕೆ ತಪ್ಪಿಹೋಗಿತ್ತು ಮತ್ತು 11ನೇ ಶತಮಾನದಲ್ಲಿ ಬಂದ ಡೂಮ್ಸ್‌ಡೇ ಬುಕ್ ವೇಳೆಗೆ, ಲ್ಯಾಟಿನ್ ಭಾಷೆಯಿಂದ ನಡೆದ ಯಾವುದೇ ಅನುವಾದದಲ್ಲೂ ಈ ಪದವು ಕಾಣಿಸಿಕೊಳ್ಳಲಿಲ್ಲ.
ಪದದ ಆಧುನಿಕ ಸ್ವರೂಪವು ಅದರ ನೈಸರ್ಗಿಕ ದೃಶ್ಯಾವಳಿಯ ಅಧಿಕಾರ್ಥತೆಗಳೊಂದಿಗೆ 16ನೇ ಶತಮಾನದ ಅಂತ್ಯದ ವೇಳೆಗೆ ಕಾಣಿಸಿಕೊಂಡಿತು; ಈ ಅವಧಿಯಲ್ಲಿ, ಒಳನಾಡಿನ ನೈಸರ್ಗಿಕ ಅಥವಾ ಗ್ರಾಮೀಣ ನೈಸರ್ಗಿಕ ದೃಶ್ಯಾವಳಿಯ ವರ್ಣಚಿತ್ರ ಕಲೆಗಳನ್ನು ಉಲ್ಲೇಖಿಸುವಾಗ ಡಚ್ ಚಿತ್ರಕಾರರು ಲ್ಯಾಂಡ್‌ಸ್ಕ್ಯಾಪ್ ಎಂಬ ಶಬ್ದವನ್ನು ಪರಿಚಯಿಸಿದರು. 1598ರಲ್ಲಿ ಮೊದಲ ಬಾರಿಗೆ ದಾಖಲಿಸಲ್ಪಟ್ಟ ಲ್ಯಾಂಡ್‌ಸ್ಕೇಪ್ (ಭೂದೃಶ್ಯ) ಎಂಬ ಪದವನ್ನು, 16ನೇ ಶತಮಾನದ ಅವಧಿಯಲ್ಲಿ ಚಿತ್ರಕಾರರ ಒಂದು ಶಬ್ದವಾಗಿ ಡಚ್ಚರಿಂದ ಎರವಲು ಪಡೆಯಲಾಯಿತು; ಈ ಅವಧಿಯಲ್ಲಿ ಡಚ್ ಕಲಾವಿದರು ಭೂದೃಶ್ಯ ಕಲೆಯ ಪ್ರಕಾರದ ಶ್ರೇಷ್ಠ ಕಲೆಗಾರರಾಗುವ ಅಂಚಿನ ಮೇಲಿದ್ದರು. ಅದಕ್ಕೂ ಮುಂಚಿತವಾಗಿ ಲ್ಯಾಂಡ್‌ಸ್ಕ್ಯಾಪ್ ಎಂಬ ಡಚ್ ಪದವು ಕೇವಲ 'ಭೂಮಿಯ ಪ್ರದೇಶ, ಬಯಲು' ಎಂಬ ಅರ್ಥವನ್ನು ನೀಡುತ್ತಿತ್ತಾದರೂ ಕಲಾತ್ಮಕ ಅರ್ಥವನ್ನೂ ಅದು ವಶಮಾಡಿಕೊಂಡಿತ್ತು; ಇದನ್ನೇ ಇಂಗ್ಲಿಷ್‌ಗೂ ಅದು ಹೊತ್ತು ತಂದು, ಲ್ಯಾಂಡ್‌ಸ್ಕ್ಯಾಪ್ ಎಂದರೆ 'ಭೂಮಿಯ ಮೇಲಿನ ನೈಸರ್ಗಿಕ ದೃಶ್ಯಾವಳಿಯನ್ನು ಚಿತ್ರಿಸುವ ಒಂದು ಚಿತ್ರ' ಎಂಬ ಅರ್ಥವನ್ನು ಅದು ಹೊಮ್ಮಿಸುವಂತಾಯಿತು.
ಜಾಕ್‌ಸನ್ ಪ್ರಕಾರ: "ಹ್ಯಾರಿಸನ್‌ನ ಡಿಸ್ಕ್ರಿಪ್ಷನ್ ಆಫ್ ಬ್ರಿಟನ್ ಕೃತಿಯ ಪ್ರಕಟಗೊಂಡ ನಂತರದಲ್ಲಿ 1577ರಿಂದ, ಭೂದೃಶ್ಯದ ಸೌಂದರ್ಯ ಮೀಮಾಂಸೆಯ ಸ್ವರೂಪದ ಒಂದು ಹೊಸ ಅರಿವು ಪ್ರವರ್ಧಮಾನಗೊಂಡ ಸ್ಥಳಾಕೃತಿಯ ಬರಹಗಾರಿಕೆಯ ಒಂದು ಹೊಸ ಬಗೆಯಾಗಿ ಹೊರಹೊಮ್ಮಿತು..."[೨]. ಈ ಶಬ್ದವು ಮೂಲತಃ ಲ್ಯಾಂಡ್‌ಸ್ಕಿಪ್ ಎಂದು ಅನುವಾದಿಸಲ್ಪಟ್ಟಿತ್ತು ಹಾಗೂ ಇದನ್ನು ಆಕ್ಸ್‌ಫರ್ಡ್ ಇಂಗ್ಲಿಷ್ ಶಬ್ದಕೋಶವು ಪದದ ವಿರೂಪಗೊಂಡ ಸ್ವರೂಪವಾಗಿ ಉಲ್ಲೇಖಿಸಿತು ಹಾಗೂ ಕ್ರಮೇಣವಾಗಿ ಅದು ಲ್ಯಾಂಡ್‌ಸ್ಕೇಪ್ (ಭೂದೃಶ್ಯ) ಎಂಬ ಶಬ್ದದಿಂದ ಪಲ್ಲಟಗೊಳಿಸಲ್ಪಟ್ಟಿತು. 1725ಕ್ಕೂ[೩] ಮುಂಚಿತವಾಗಿ ಅಸ್ತಿತ್ವದಲ್ಲಿದ್ದ ಭೌತಿಕ ಭೂದೃಶ್ಯಗಳಿಗೆ ಸಂಬಂಧಿಸಿ ಬಳಸಲ್ಪಟ್ಟಿರುವಂತೆ ಈ ಇಂಗ್ಲಿಷ್ ಪದವು ದಾಖಲಿಸಲ್ಪಟ್ಟಿಲ್ಲ.
ಲ್ಯಾಂಡ್‌ಷಾಫ್ಟ್ ಎಂಬ ಜರ್ಮನ್ ಶಬ್ದದ ಮೇಲೆ ಕೇಂದ್ರೀಕರಿಸಲ್ಪಟ್ಟಿರುವ ಒಂದು ಸುದೀರ್ಘವಾದ ವಿಶ್ಲೇಷಣೆಯನ್ನು ಅನುಸರಿಸಿ, ರಿಚರ್ಡ್ ಹಾರ್ಟ್ಸ್‌ಹಾರ್ನೆ[೪] ಎಂಬಾತ ಲ್ಯಾಂಡ್‌ಸ್ಕೇಪ್ ನ್ನು (ಭೂದೃಶ್ಯವನ್ನು) ಹೀಗೆ ಉಲ್ಲೇಖಿತವಾಗಿರುವಂತೆ ವ್ಯಾಖ್ಯಾನಿಸಿದ: "ಭೂದೃಶ್ಯ ಎಂಬುದು ಭೂಮಿಯ ಬಾಹ್ಯ, ಗೋಚರ, (ಅಥವಾ ಸ್ಪರ್ಶಿಸಬಲ್ಲ) ಮೇಲ್ಮೈ ಆಗಿದೆ. ಈ ಮೇಲ್ಮೈಯು ಹೊರ ಮೇಲ್ಮೈಗಳಿಂದ ರೂಪುಗೊಂಡಿದ್ದು, ಅವು ಸಸ್ಯವರ್ಗ, ಮರಗಿಡಗಳಿಲ್ಲದ ಭೂಮಿ, ಹಿಮ, ಮಂಜು, ಅಥವಾ ಜಲರಾಶಿಗಳು ಅಥವಾ ಮನುಷ್ಯನಿಂದ ರೂಪುಗೊಂಡಿರುವ ಲಕ್ಷಣಗಳ ವಾತಾವರಣದೊಂದಿಗೆ ಹತ್ತಿರದ ಸಂಪರ್ಕವನ್ನು ಹೊಂದಿವೆ."
ದೊಡ್ಡದಾಗಿರುವಂಥದು ಹಾಗೂ ಗಾತ್ರದಲ್ಲಿ ಹೆಚ್ಚು ಹೊಂದಿಕೊಳ್ಳುವಂಥದು ಎಂದು ತಾನು ಪರಿಗಣಿಸಿದ್ದ ಪ್ರದೇಶ ಎಂಬುದರಿಂದ ಈ ಶಬ್ದವನ್ನು ಹಾರ್ಟ್ಸ್‌ಹಾರ್ನೆ ಪ್ರತ್ಯೇಕಿಸಿದ. ವಾತಾವರಣವು ಕೇವಲ ಮಾಧ್ಯಮವಾಗಿದ್ದು ಅದರ ಮೂಲಕ ಭೂಮಿಯ ಮೇಲ್ಮೈಯನ್ನು ವೀಕ್ಷಿಸಲಾಗುತ್ತದೆ ಎಂಬುದರ ಆಧಾರದ ಮೇಲೆ ಅವನು ಆಕಾಶವನ್ನು ಪಟ್ಟಿಯಿಂದ ತೆಗೆದುಹಾಕಿದ; ಮತ್ತು ಇದೇ ರೀತಿಯಲ್ಲಿ ಭೂಗತ ಗಣಿಗಾರಿಕೆಗಳು, ಸಸ್ಯವರ್ಗದ ಅಡಿಯಲ್ಲಿರುವ ಮಣ್ಣು ಹಾಗೂ ಮಳೆಯ ಸುರಿತವನ್ನೂ ಸಹ ಅವನು ಹೊರಗಿಡುತ್ತಾನೆ. ಆದಾಗ್ಯೂ, ಸಂಚಾರರಹಿತವಾದ ಸ್ಥಿತಿಯಲ್ಲಿ ಬ್ರಾಡ್‌ವೇ (ನ್ಯೂಯಾರ್ಕ್ ನಗರ)ಯ ಒಂದು ನೋಟವು ಅಪೂರ್ಣವಾಗಿರುತ್ತದೆ ಎಂಬುದನ್ನು ಸೂಚಿಸುವುದರೊಂದಿಗೆ ಆತ ಚಲಿಸಬಲ್ಲ ವಸ್ತುಗಳನ್ನು ಈ ಪಟ್ಟಿಯಲ್ಲಿ ಸೇರಿಸಿದ. ಭೂದೃಶ್ಯದಲ್ಲಿ ಸಾಗರಗಳ ಸೇರಿಸುವಿಕೆಯನ್ನು ಅವನು ಉಪೇಕ್ಷಿಸಿದ. ಧ್ವನಿಗಳು ಮತ್ತು ವಾಸನೆಗಳಂಥ, ದೃಶ್ಯವನ್ನು ಹೊರತುಪಡಿಸಿದ ಭೂದೃಶ್ಯಗಳ ಇತರ ಗ್ರಹಿಕೆಯನ್ನು ಅವನು ವಿರೋಧಿಸಿದ; ಇವು ಒಂದು ಏಕೀಕೃತ ಪರಿಕಲ್ಪನೆಗೆ ಯಾವುದೇ ಕೊಡುಗೆ ನೀಡುವುದಿಲ್ಲ ಎಂಬುದು ತನ್ನ ವಿರೋಧಕ್ಕೆ ಅವನು ನೀಡಿದ ಸಮರ್ಥನೆಯಾಗಿತ್ತು. ಉಳಿದವರ ಪೈಕಿ ಕಾಲ್ ಸೌವೆರ್ ಎಂಬಾತನಿಂದ ಪ್ರತ್ಯೇಕಿಸಲ್ಪಟ್ಟ ನೈಸರ್ಗಿಕ ಮತ್ತು ಸಾಂಸ್ಕೃತಿಕ ಭೂದೃಶ್ಯಗಳ ಪರಿಕಲ್ಪನೆಗೆ ಸಂಬಂಧಿಸಿದಂತೆ, ಅವನು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, "ಮನುಷ್ಯನು ದೃಶ್ಯದಲ್ಲಿ ಕಾಣಿಸಿಕೊಂಡಾಗ ನೈಸರ್ಗಿಕ ಭೂದೃಶ್ಯದ ಅಸ್ತಿತ್ವವು ಕೊನೆಗಾಣುತ್ತದೆ" ಎಂದು ತಿಳಿಸಿದ. ಆದಿಯುಗದ ಭೂದೃಶ್ಯ ಎಂಬ ಶಬ್ದವು ಮಾನವ-ಪೂರ್ವ ಭೂದೃಶ್ಯಗಳನ್ನು ಉಲ್ಲೇಖಿಸಬಲ್ಲದು ಎಂಬುದನ್ನು ಒಪ್ಪಿಕೊಳ್ಳುತ್ತಲೇ, ಪ್ರಸಕ್ತ ನೈಸರ್ಗಿಕ ಭೂದೃಶ್ಯ ವು "ಎಂದಿಗೂ ಅಸ್ತಿತ್ವದಲ್ಲಿರದಿದ್ದ ಒಂದು ಸೈದ್ಧಾಂತಿಕ ಪರಿಕಲ್ಪನೆಯಾಗಿದೆ" ಎಂದು ಅವನು ಪರಿಗಣಿಸಿದ.
1920ರ ದಶಕ ಮತ್ತು 1930ರ ದಶಕಗಳ ಅವಧಿಯಲ್ಲಿ, ಒಂದು ವೇಳೆ ಭೂಗೋಳದ[೫] ಏಕಮಾತ್ರ ವಿಷಯವಾಗಿ ಅಲ್ಲದಿದ್ದರೂ, ಭೂದೃಶ್ಯವನ್ನು ಅವಶ್ಯಕವಾಗಿಸಿದ ವಿಧಿ ವಿಧಾನಗಳನ್ನು ರೂಪಿಸುವ ಪ್ರಯತ್ನಗಳು ಕಂಡುಬಂದವು. "ಭೂದೃಶ್ಯದ ದೃಶ್ಯವರ್ಗೀಕರಣ"ವನ್ನು ವ್ಯವಸ್ಥಿತವಾಗಿ ಅವಲೋಕಿಸುವುದು ಭೂಗೋಳದ ಪಾತ್ರವಾಗಿತ್ತು ಎಂಬ ಸೌವೆರ್‌ನ ದೃಷ್ಟಿಕೋನದಿಂದ ಇದು ಉದ್ಭವಿಸಿತು. ಭೌತಿಕ ಮತ್ತು ನೈಸರ್ಗಿಕ ಸ್ವರೂಪಗಳೆರಡರ ವಿಭಿನ್ನವಾದ ಒಕ್ಕೂಟಗಳನ್ನು ಒಳಗೊಂಡಿರುವ ಪ್ರದೇಶಗಳಾಗಿ ಭೂದೃಶ್ಯಗಳನ್ನು ಸೌವೆರ್ ವಿಶಾಲವಾದ ಅರ್ಥದಲ್ಲಿ ಕಂಡ, ಮತ್ತು ನೈಸರ್ಗಿಕ ಭೂದೃಶ್ಯಗಳು ಸಾಂಸ್ಕೃತಿಕ ಭೂದೃಶ್ಯಗಳಾಗುವುದರ ಬೆಳವಣಿಗೆಯ ಜಾಡುಹಿಡಿಯುವ ಸ್ವರೂಪದಲ್ಲಿ ಭೂದೃಶ್ಯದ ಅಧ್ಯಯನವನ್ನು ಅವನು ಪರಿಗಣಿಸಿದ.
1940ರ ದಶಕದ ವೇಳೆಗೆ, ಈ ಒತ್ತುನೀಡುವಿಕೆಯು ದಾಟಿಕೊಂಡು ಹೋಗಿತ್ತು. ಏಕೆಂದರೆ, ಗತದ ಮರುರೂಪಿಸುವಿಕೆಯೊಂದಿಗೆ ಇರುವ ತೊಡಕುಗಳು ಅನಾಕರ್ಷಕವಾಗಿದ್ದವು ಎಂಬುದನ್ನು ಭೂಗೋಳ ಶಾಸ್ತ್ರಜ್ಞರು ಕಂಡುಕೊಂಡಿದ್ದರು ಮತ್ತು ವರ್ತಮಾನದ ಪ್ರಪಂಚದೊಂದಿಗಿನ ಅವುಗಳ ಪ್ರಧಾನ ಕಾಳಜಿಯೊಂದಿಗೆ ಅವು ಅಸಮಂಜಸವಾಗಿ ತೋರುತ್ತಿದ್ದವು. ಪರಿಸರದ ಮೇಲಿನ ಮಾನವ ಪ್ರಭಾವದ ಜ್ಞಾನದೊಂದಿಗೆ ಒಂದು ನೈಸರ್ಗಿಕ ಭೂದೃಶ್ಯದ ಪರಿಕಲ್ಪನೆಯು ಹೆಚ್ಚಿನ ರೀತಿಯಲ್ಲಿ ಪ್ರಶ್ನೆಗೊಳಗಾಯಿತು. ತೀರಾ ಇತ್ತೀಚಿನ ಭೂಗೋಳ ಶಾಸ್ತ್ರಜ್ಞರು ಸ್ಥಳವೊಂದರ ವ್ಯಕ್ತಿನಿಷ್ಠ ಗುರುತುಗಳನ್ನು ಮಾನವಿಕ ಭೂಗೋಳದ ವ್ಯಾಪ್ತಿಯೊಳಗೆ ತಿಳಿಸುವ ಮೂಲಕ, ಪ್ರದೇಶವೊಂದರ[೬] ವಸ್ತುನಿಷ್ಠ ಹಾಗೂ ವ್ಯಕ್ತಿನಿಷ್ಠ ನಿರ್ಧಾರಣೆಗಳ ನಡುವಿನ ಸೇತುವೆಯನ್ನು ದಾಟಿದರು.
ಶಬ್ದಕೋಶಗಳಲ್ಲಿ ಪ್ರತಿಬಿಂಬಿತವಾಗಿರುವ ಭೂದೃಶ್ಯ ದ ಕುರಿತಾದ ಜನಪ್ರಿಯ ಕಲ್ಪನಾಶೀಲತೆಯು, ಒಂದು ನಿರ್ದಿಷ್ಟ ಮತ್ತು ಒಂದು ಸಾರ್ವತ್ರಿಕ ಅರ್ಥವನ್ನು ಕೊಡುತ್ತದೆ; ಭೂಮಿಯ ಮೇಲ್ಮೈನ ಒಂದು ಪ್ರದೇಶಕ್ಕೆ ನಿರ್ದಿಷ್ಟ ಅರ್ಥವು ಉಲ್ಲೇಖಿಸಿದರೆ, ಓರ್ವ ವೀಕ್ಷಕನಿಂದ ಕಾಣಲ್ಪಡಬಲ್ಲದಕ್ಕೆ ಸಾರ್ವತ್ರಿಕ ಅರ್ಥವು ಉಲ್ಲೇಖಿಸಲ್ಪಡುತ್ತದೆ.
ಇತ್ತೀಚಿನ ದಶಕಗಳಲ್ಲಿ ಪರಿಸರೀಯ ಗ್ರಹಿಕೆಗೆ ಮನೋವಿಜ್ಞಾನಿಗಳು ನೀಡಿರುವ ಮಹತ್ತರವಾದ ಗಮನದಿಂದಾಗಿ, ಭೂದೃಶ್ಯ ಎಂಬುದು ಒಂದು ಕಚ್ಚಾ ಸಾಮಗ್ರಿಯಾಗಿ ಪರಿಗಣಿಸಲ್ಪಟ್ಟಿದ್ದು, ಇದರ ನೆರವಿನಿಂದ ಮಾನವ ಗ್ರಹಿಕೆಗಳು ಹಾಗೂ ಮಾನವ ಮಾಹಿತಿ ಸಂಸ್ಕರಣೆಯ ಅಧ್ಯಯನವು ನಡೆದುಬಂದಿದೆ. ಈ ರೀತಿಯಾಗಿ ಡೇನಿಯೆಲ್ಸ್ ಮತ್ತು ಕಾಸ್ಗ್ರೋವ್[೭], ಭೂದೃಶ್ಯ ವನ್ನು ಭೌತಿಕ ಪರಿಭಾಷೆಯ ಬದಲಿಗೆ ಮಾನವ ಗ್ರಹಿಕೆಯ ಒಂದು ಹೊರಗಣ ಅಭಿವ್ಯಕ್ತಿಯಾಗಿ ಹೀಗೆ ವ್ಯಾಖ್ಯಾನಿಸಿದರು: "ಒಂದು ಭೂದೃಶ್ಯವು, ಸುತ್ತಮುತ್ತಲ ಪರಿಸರವನ್ನು ಪ್ರತಿನಿಧಿಸುವ, ರೂಪಿಸುವ ಅಥವಾ ಸಂಕೇತಿಸುವ ಒಂದು ಚಿತ್ರಾತ್ಮಕ ವಿಧಾನವಾಗಿದೆ, ಒಂದು ಸಾಂಸ್ಕೃತಿಕ ಬಿಂಬವಾಗಿದೆ." ಭೌತಿಕ ಮತ್ತು ಮಾನಸಿಕ ಅಂಶಗಳನ್ನು ಮೆನಿಗ್ ಸಂಯೋಜಿಸಿ ವ್ಯಾಖ್ಯಾನಿಸಿದ: "ಯಾವುದೇ ಭೂದೃಶ್ಯವು, ನಮ್ಮ ಕಣ್ಣುಗಳ ಮುಂದೆ ಏನು ವ್ಯಾಪಿಸಿಕೊಂಡಿದೆಯೋ ಅದನ್ನಷ್ಟೇ ಅಲ್ಲದೇ, ನಮ್ಮ ಆಲೋಚನೆಗಳಲ್ಲಿ ಏನೆಲ್ಲಾ ವ್ಯಾಪಿಸಿಕೊಂಡಿದೆಯೋ ಅದರಿಂದ ಸಂಯೋಜಿಸಲ್ಪಟ್ಟಿದೆ" ಎಂಬುದು ಅವನ ವ್ಯಾಖ್ಯಾನವಾಗಿತ್ತು[೮]..
ಇತ್ತೀಚಿನ ದಶಕಗಳಲ್ಲಿ ಪರಿಸರ ಎಂಬ ಶಬ್ದವು ವ್ಯಾಪಕ ಬಳಕೆಯನ್ನು ಪಡೆದುಕೊಂಡಿದೆ. ಜೇ ಅಪ್ಲೆಟನ್ (ನೊಡಿ: ಪರಿಸರೀಯ ಮನಶ್ಯಾಸ್ತ್ರ) ಎಂಬಾತ ಪರಿಸರ ವನ್ನು ಭೂದೃಶ್ಯ ದಿಂದ ಪ್ರತ್ಯೇಕಿಸಿದ; ಭೂದೃಶ್ಯವು "ಪರಿಸರ ಗ್ರಹಿಸಲ್ಪಟ್ಟ" ಅಂಶವಾಗಿದೆ ಎಂಬುದು ಇದಕ್ಕೆ ಸಂಬಂಧಿಸಿದ ಅವನ ಉಲ್ಲೇಖವಾಗಿತ್ತು. ಬೌರಾಸ್ಸಾ ಸೂಚಿಸಿರುವಂತೆ[೯] ಭೂದೃಶ್ಯ ಎಂಬ ಶಬ್ದಕ್ಕೆ ಹೋಲಿಸಿದಾಗ ಪರಿಸರ ಎಂಬ ಶಬ್ದವು ಹೊಂದಿರುವ ಒಂದು ಅನುಕೂಲದ ಸ್ಥಿತಿಯೆಂದರೆ, ನಗರದ ಭೂದೃಶ್ಯ ಎಂಬ ಶಬ್ದವೂ ಸಹ ಸಾಮಾನ್ಯ ಬಳಕೆಯಲ್ಲಿದ್ದರೂ, ನಗರದ ದೃಶ್ಯಗಳಿಗೆ ಪರಿಸರ ಎಂಬ ಶಬ್ದವನ್ನು ಹೆಚ್ಚು ಅನಾಯಾಸವಾಗಿ ಅನ್ವಯಿಸಬಹುದು. ಪರಿಸರ ಎಂಬ ಶಬ್ದವು ಪ್ರದೇಶವೊಂದರ ಒಟ್ಟಾರೆ ಭೌತಿಕ, ಜೀವಿವಿಜ್ಞಾನದ, ಸಾಂಸ್ಕೃತಿಕ ಮತ್ತು ಭಾವಾಂಶಗಳನ್ನು ಒಳಗೊಳ್ಳುತ್ತದೆಯಾದ್ದರಿಂದ, ಭೂದೃಶ್ಯಕ್ಕೆ ಸಂಬಂಧಿಸಿದ ತುಂಬಾ ವಿಶಾಲವಾದ ಮತ್ತು ಒಳಗೊಳ್ಳುವಿಕೆಯ ಶಬ್ದವಾಗುತ್ತದೆ ಎಂದು ಸಾಮಾನ್ಯವಾಗಿ ಪರಿಗಣಿಸಲ್ಪಟ್ಟಿದೆ.
ದೃಶ್ಯ , ದೃಶ್ಯಾತ್ಮಕ ಮತ್ತು ನೈಸರ್ಗಿಕ ದೃಶ್ಯಾವಳಿ ಎಂಬ ಶಬ್ದಗಳು ಭೂದೃಶ್ಯದ ಸಾಕಷ್ಟಿಲ್ಲದ ವಿವರಣೆಗಳಾಗಿವೆ. ಒಂದು ದೃಶ್ಯವು ನಾಟಕದ ಒಂದು ಭಾಗವನ್ನು ವಿವರಿಸುವುದು ಕಂಡುಬರುವ ರಂಗಭೂಮಿಯಲ್ಲಿ ಇದರ ಬೇರುಗಳು ಇರುವುದರಿಂದ, ಒಂದು ದೃಶ್ಯವು ಭೂದೃಶ್ಯವೊಂದರ ಒಂದು ಭಾಗವನ್ನು ವಿವರಿಸಬಲ್ಲದಾಗಿರುತ್ತದೆ. ಒಂದು ವೇದಿಕೆಯ ಮೇಲೆ ಬಳಸಲಾಗಿರುವ ಅಲಂಕಾರಿಕ ಹಿನ್ನೆಲೆಗಳನ್ನು ವರ್ಣಿಸುವ ರಂಗ ದೃಶ್ಯಾವಳಿ ಯೂ ಸಹ ಸ್ಥಳವೊಂದರ, ಅದರಲ್ಲೂ ನಿರ್ದಿಷ್ಟವಾಗಿ ಒಂದು ಚಿತ್ರಸದೃಶ ನೋಟದ ಸಾರ್ವತ್ರಿಕ ಗೋಚರಿಸುವಿಕೆಯನ್ನು ಉಲ್ಲೇಖಿಸುತ್ತದೆ. ವಿನಿಮಯ ಮಾಡಬಹುದಾದ ರೀತಿಯಲ್ಲಿ ಇದನ್ನು ಭೂದೃಶ್ಯ ದೊಂದಿಗೆ ಬಳಸಲು ಸಾಧ್ಯವಿರುವ ಸಮಯದಲ್ಲೇ, ಇದು ಅರ್ಥದ ಅದೇ ಆಳವನ್ನು ನೀಡುವುದಿಲ್ಲ ಎಂಬುದನ್ನು ಗಮನಿಸಬೇಕು.
ಭೂದೃಶ್ಯದ ಸೌಂದರ್ಯ ಮೀಮಾಂಸೆ ಅಥವಾ ಕೇವಲ ಸೌಂದರ್ಯ ಮೀಮಾಂಸೆ ಎಂಬ ಶಬ್ದವು ಸಾಹಿತ್ಯದಲ್ಲಿ ಆಗಿಂದಾಗ್ಗೆ ಬಳಸಲ್ಪಡುತ್ತದೆ. ಸೌಂದರ್ಯ ಮೀಮಾಂಸೆಯು ಭೂದೃಶ್ಯಕ್ಕಿಂತ ಒಂದು ಹೆಚ್ಚು ವಿವಾದಾತ್ಮಕವಾದ ಮೂಲವನ್ನು ಹೊಂದಿದೆ. ಇದು ಗ್ರೀಕ್‌ನ ಏಸ್ಥೆಸಿಸ್ ಎಂಬ ಶಬ್ದದಿಂದ ಜನ್ಯವಾಗಿದ್ದು, ಅದು "ಪ್ರಜ್ಞೆಯ ಗ್ರಹಿಕೆ" ಎಂಬ ಅರ್ಥವನ್ನು ನೀಡುತ್ತದೆ. ಈ ಶಬ್ದವನ್ನು ಅಲೆಕ್ಸಾಂಡರ್ ಬೌಮ್‌ಗಾರ್ಟನ್ [1714 - 62] ಎಂಬ ಓರ್ವ ಚಿಕ್ಕ, ಜರ್ಮನ್ ದಾರ್ಶನಿಕನು ಏಸ್ಥೆಟಿಕಾ [1750-58] ಎಂಬ ಪುಸ್ತಕದ ಶೀರ್ಷಿಕೆಯಾಗಿ ಬಳಸಿದ; ಸೌಂದರ್ಯದ ಅಥವಾ ಅಭಿರುಚಿ (ಸಮಾಜಶಾಸ್ತ್ರ)ಯ ಸಿದ್ಧಾಂತದ ಒಂದು ವಿಮರ್ಶಾತ್ಮಕ ವಿಶ್ಲೇಷಣೆಗೆ ಸದರಿ ಗ್ರೀಕ್ ಶಬ್ದವನ್ನು ಅಲೆಕ್ಸಾಂಡರ್ ಬೌಮ್‌ಗಾರ್ಟನ್ ತಪ್ಪಾಗಿ ಅನ್ವಯಿಸಿದ. ಈ ರೀತಿಯಾಗಿ, ಪ್ರಜ್ಞೆಯ ಗ್ರಹಿಕೆಯ ವಿಶಾಲ ಕ್ಷೇತ್ರಕ್ಕೆ ಮೂಲತಃ ಅನ್ವಯಿಸಲ್ಪಡುತ್ತಿದ್ದ ಶಬ್ದವು, ಅಭಿರುಚಿಯ ಪ್ರದೇಶಕ್ಕೆ ನಿರ್ಬಂಧಿಸಲ್ಪಡುವಂತಾಯಿತು. ಇಮ್ಯಾನ್ಯುಯೆಲ್ ಕ್ಯಾಂಟ್ ಎಂಬಾತ 1781ರಲ್ಲಿ ಈ ಬಳಕೆಯನ್ನು ಟೀಕಿಸಿದ ಮತ್ತು "ಇಂದ್ರಿಯಗಳ ಗ್ರಹಿಕೆಯ ತತ್ತ್ವ"[೧೦] ಎಂಬ ಅದರ ಶಿಷ್ಟ ಅರ್ಥದ ಅನುಸಾರವಾಗಿಯೇ ಅದನ್ನು ಅನ್ವಯಿಸಿದ. ಆದಾಗ್ಯೂ, ಸೌಂದರ್ಯ ಮೀಮಾಂಸೆ ಎಂಬ ವಿರೂಪಗೊಳಿಸಲ್ಪಟ್ಟ ಶಬ್ದವು 1830ರ ನಂತರ ಇಂಗ್ಲಂಡ್‌ನ್ನು ಪ್ರವೇಶಿಸುವ ಮೂಲಕ ಜನಪ್ರಿಯ ಮಾನ್ಯತೆಯನ್ನು ಗಳಿಸಿಕೊಂಡಿತು ಮತ್ತು, ಆಕ್ಸ್‌ಫರ್ಡ್ ಇಂಗ್ಲಿಷ್ ಶಬ್ದಕೋಶದ ಅನುಸಾರ, ಬೌಮ್‌ಗಾರ್ಟನ್‌ನಿಂದ ಅರ್ಥವು ರೂಪಿಸಲ್ಪಟ್ಟ ಒಂದು ಶತಮಾನದೊಳಗಾಗಿ ಅದು ಯುರೋಪ್‌ನ ಉದ್ದಗಲಕ್ಕೂ ವ್ಯಾಪಕವಾಗಿ ಬಳಕೆಯಲ್ಲಿತ್ತು.
ಸೌಂದರ್ಯ ಮೀಮಾಂಸೆ ಎಂಬುದರ ಶಬ್ದಕೋಶ ವ್ಯಾಖ್ಯಾನವು ಬೌಮ್‌ಗಾರ್ಟನ್‌ನ ತಪ್ಪನ್ನು ಶಾಶ್ವತಗೊಳಿಸುತ್ತದೆ ಮತ್ತು ಅದನ್ನು ಈ ರೀತಿ ವ್ಯಾಖ್ಯಾನಿಸುತ್ತದೆ: "ವಿಚಾರಸಾಧ್ಯ ಅಥವಾ ಅಮೂರ್ತ"[೧೧] ವಿಷಯಗಳಿಗೆ ಪ್ರತಿಯಾಗಿ ಇಂದ್ರಿಯಗಳಿಂದ ಗ್ರಹಿಸಲ್ಪಡುವ ವಿಷಯಗಳು", "1981ರ ಮ್ಯಾಕ್‌ಕ್ವಾರೀ ಶಬ್ದಕೋಶದಲ್ಲಿರುವ ಸೌಂದರ್ಯದ ಪ್ರಜ್ಞೆ ಅಥವಾ ಸೌಂದರ್ಯ ಮೀಮಾಂಸೆಯ ವಿಜ್ಞಾನಕ್ಕೆ ಸಂಬಂಧಿಸಿರುವ", ಅಥವಾ "ಸೌಂದರ್ಯ ಮೀಮಾಂಸೆ ಅಥವಾ ಸೌಂದರ್ಯದೊಂದಿಗೆ[೧೨] ವ್ಯವಹರಿಸುವ ಅಥವಾ ಅದಕ್ಕೆ ಸಂಬಂಧಪಟ್ಟಿರುವ ವಿಷಯಗಳು. ಸೌಂದರ್ಯ ಮೀಮಾಂಸೆ ಎಂಬುದು ತತ್ತ್ವಶಾಸ್ತ್ರದ ಒಂದು ಶಾಖೆ ಎಂದು ಪರಿಗಣಿಸಲ್ಪಟ್ಟಿದ್ದು, ಅದು ಸ್ವರೂಪ ಮತ್ತು ಅಭಿರುಚಿಯಿಂದ ಕಲೆಯ ನಿಯಮಗಳು ಮತ್ತು ತತ್ತ್ವಗಳನ್ನು ಹಾಗೂ ಲಲಿತ ಕಲೆಗಳ ಸಿದ್ಧಾಂತವನ್ನು ನಿರೂಪಿಸುತ್ತದೆ; ಸೌಂದರ್ಯದ[೧೦] ವಿಜ್ಞಾನವನ್ನು ನಿರೂಪಿಸುತ್ತದೆ... ಅಥವಾ ಅದು ಸೌಂದರ್ಯದ ಸ್ವರೂಪ ಹಾಗೂ ಸೌಂದರ್ಯಕ್ಕೆ[೧೩] ಸಂಬಂಧಪಟ್ಟ ತೀರ್ಮಾನಗಳೊಂದಿಗೆ ವ್ಯವಹರಿಸುತ್ತದೆ.
ಈ ರೀತಿಯಾಗಿ, ಸೌಂದರ್ಯದ ಒಂದು ಅರ್ಥೈಸುವಿಕೆ ಅಥವಾ ಗ್ರಹಿಕೆಗೆ ಸಂಬಂಧಿಸಿದಂತಿರುವ ಅನ್ವೇಷಣೆಯಲ್ಲಿನ ಸೌಂದರ್ಯ ಮೀಮಾಂಸೆಯ ವಿಶಾಲ ಚೌಕಟ್ಟಿನೊಳಗೆ, ಭೂದೃಶ್ಯಗಳು ವಿಚಾರಣೆಯ ವಿಷಯವಾಗಿ ಅನೇಕವೇಳೆ ಪಾತ್ರವಹಿಸಿವೆ.
ಇವನ್ನೂ ನೋಡಿ
ಬದಲಾಯಿಸಿಆಕರಗಳು
ಬದಲಾಯಿಸಿ- ↑ ಕಾಲ್ಡರ್, W.,1981, ಬಿಯಾಂಡ್ ದಿ ವ್ಯೂ - ಅವರ್ ಚೇಂಜಿಂಗ್ ಲ್ಯಾಂಡ್‌ಸ್ಕೇಪ್ಸ್. ಇಂಕಟಾ ಪ್ರೆಸ್, ಮೆಲ್ಬೋರ್ನ್. ಜಾಕ್‌ಸನ್, J.B., 1986, ದಿ ವರ್ನಾಕ್ಯುಲರ್ ಲ್ಯಾಂಡ್‌ಸ್ಕೇಪ್ ಪೆನ್ನಿಂಗ್-ರೌಸೆಲ್, E.C. & D. ಲೋವೆಂಥಲ್‌ರವರ, ಲ್ಯಾಂಡ್‌ಸ್ಕೇಪ್ ಮೀನಿಂಗ್ಸ್ ಅಂಡ್ ವ್ಯಾಲ್ಯೂಸ್‌ನಲ್ಲಿ ಇರುವಂಥದು, ಅಲೆನ್ & ಅನ್ವಿನ್, ಲಂಡನ್, ಪುಟ 65 - 79. ಜೇಮ್ಸ್, P.E., 1934. ದಿ ಟರ್ಮಿನಾಲಜಿ ಆಫ್ ರೀಜನಲ್ ಡಿಸ್ಕ್ರಿಪ್ಷನ್. ಆನಲ್ಸ್ ಆಫ್ ಅಸೋಕ್ ಆಫ್ ಆಮ್ ಜಿಯೋಗ್, 2, 78 - 79.
- ↑ ಜಾಕ್‌ಸನ್, J.B., 1986, ದಿ ವರ್ನಾಕ್ಯುಲರ್ ಲ್ಯಾಂಡ್‌ಸ್ಕೇಪ್, ಪೆನ್ನಿಂಗ್-ರೌಸೆಲ್, E.C. & D. ಲೋವೆಂಥಲ್‌ರವರ, ಲ್ಯಾಂಡ್‌ಸ್ಕೇಪ್ ಮೀನಿಂಗ್ಸ್ ಅಂಡ್ ವ್ಯಾಲ್ಯೂಸ್‌ನಲ್ಲಿ ಇರುವಂಥದು, ಅಲೆನ್ & ಅನ್ವಿನ್, ಲಂಡನ್, ಪುಟ 65 - 79.
- ↑ ಆಕ್ಸ್‌ಫರ್ಡ್ ಇಂಗ್ಲಿಷ್ ಡಿಕ್ಷ್‌ನರಿ
- ↑ ಹಾರ್ಟ್ಸ್‌ಹಾರ್ನೆ, R. 1939. ದಿ ನೇಚರ್ ಆಫ್ ಜಿಯಾಗ್ರಫಿ, ಎ ಕ್ರಿಟಿಕಲ್ ಸರ್ವೆ ಆಫ್ ಕರೆಂಟ್ ಥಾಟ್ ಇನ್ ದಿ ಲೈಟ್ ಆಫ್ ದಿ ಪಾಸ್ಟ್ [ತಿದ್ದುಪಡಿಗಳೊಂದಿಗೆ 1961ರಲ್ಲಿ ಮರುಮುದ್ರಣಗೊಂಡಿತು, ಆನಲ್ಸ್ ಆಫ್ ಅಸೋಕ್ ಆಫ್ ಆಮ್ ಜಿಯೋಗ್. 29:3-4.]
- ↑ ಮೈಕ್‌ಸೆಲ್, M.W., 1968, ಲ್ಯಾಂಡ್‌ಸ್ಕೇಪ್. ಇಂಟರ್‌ನ್ಯಾಷನಲ್ ಎನ್‌ಸೈಕ್ಲೋಪೀಡಿಯಾ ಆಫ್ ದಿ ಸೋಷಿಯಲ್ ಸೈನ್ಸ್‌ನಲ್ಲಿ ಇರುವಂಥದು.
- ↑ ಟುವಾನ್, Y.F., 1976. “ದಿ ಎಕ್ಸ್‌ಪೀರಿಯೆನ್ಸ್ ಆಫ್ ಲ್ಯಾಂಡ್‌ಸ್ಕೇಪ್”ನ ವಿಮರ್ಶೆ. ಪ್ರೊಫೆಷನಲ್ ಜಿಯೋಗ್ರಾಫರ್, 28:1, 104 - 5.
- ↑ ಡೇನಿಯೆಲ್ಸ್ S. & D. ಕಾಸ್ಗ್ರೋವ್, ಇಂಟ್ರಡಕ್ಷನ್: ಐಕನೋಗ್ರಫಿ ಅಂಡ್ ಲ್ಯಾಂಡ್‌ಸ್ಕೇಪ್, ಇನ್ ಕಾಸ್ಗ್ರೋವ್, D. & S. ಡೇನಿಯೆಲ್ಸ್, 1988. ದಿ ಐಕನೋಗ್ರಫಿ ಆಫ್ ಲ್ಯಾಂಡ್‌ಸ್ಕೇಪ್: ಎಸ್ಸೇಸ್ ಆನ್ ದಿ ಸಿಂಬಾಲಿಕ್ ರೆಪ್ರೆಸೆಂಟೇಷನ್, ಡಿಸೈನ್, ಅಂಡ್ ಯೂಸ್ ಆಫ್ ಪಾಸ್ಟ್ ಎನ್ವಿರಾನ್ಮೆಂಟ್ಸ್. ಕೇಂಬ್ರಿಜ್ ಸ್ಟಡೀಸ್ ಇನ್ ಹಿಸ್ಟಾರಿಕಲ್ ಜಿಯಾಗ್ರಫಿ, ಕೇಂಬ್ರಿಜ್ ಯೂನಿವರ್ಸಿಟಿ ಪ್ರೆಸ್, ಕೇಂಬ್ರಿಜ್.
- ↑ ಮೆನಿಗ್, D.W., 1976. ದಿ ಬಿಹೋಲ್ಡಿಂಗ್ ಐ, ಟೆನ್ ವಿಷನ್ಸ್ ಆಫ್ ದಿ ಸೇಮ್ ಸೀನ್. ಲ್ಯಾಂಡ್‌ಸ್ಕೇಪ್ ಆರ್ಕಿಟೆಕ್ಚರ್, 66, 47 - 54.
- ↑ ಬೌರಾಸ್ಸಾ, S.C., 1991. ದಿ ಏಸ್ತೆಟಿಕ್ಸ್ ಆಫ್ ಲ್ಯಾಂಡ್‌ಸ್ಕೇಪ್, ಬೆಲ್‌ಹ್ಯಾವನ್ ಪ್ರೆಸ್, ಲಂಡನ್.
- ↑ ೧೦.೦ ೧೦.೧ ಆಕ್ಸ್‌ಫರ್ಡ್ ಡಿಕ್ಷ್‌ನರಿ ಆಫ್ ಇಂಗ್ಲಿಷ್ ಎಟಿಮಾಲಜಿ, 1966. C.T. ಓನಿಯನ್ಸ್ [ಸಂಪಾದಿತ], ಮ್ಯಾಕ್‌ಮಿಲನ್, ನ್ಯೂಯಾರ್ಕ್.
- ↑ ಷಾರ್ಟರ್ ಆಕ್ಸ್‌ಫರ್ಡ್ ಡಿಕ್ಷ್‌ನರಿ, 1973
- ↑ ವೆಬ್‌ಸ್ಟರ್ಸ್ ಡಿಕ್ಷ್‌ನರಿ, 1973.
- ↑ ಆಕ್ಸ್‌ಫರ್ಡ್ ಇಂಗ್ಲಿಷ್ ಡಿಕ್ಷ್‌ನರಿ