ದ್ವೀಪವ ಬಯಸಿ' ಕಾದಂಬರಿಯನ್ನು ಚಿಕ್ಕಮಗಳೂರಿನ ಲೇಖಕ ಎಂ.ಆರ್.ದತ್ತಾತ್ರಿಯವರು ಬರೆದಿದ್ದಾರೆ. ಚಿಕ್ಕಮಗಳೂರು ಸೀಮೆಯ ಗೊಲ್ಲರಹಳ್ಳಿಯಲ್ಲಿ ಹುಟ್ಟಿ ಬೆಳೆದು ದೊಡ್ಡವನಾಗಿ ಬೆಂಗಳೂರು, ನಂತರ ಅಮೆರಿಕ ಸೇರಿ ಬದುಕು ಕಂಡುಕೊಳ್ಳಲು ಹೆಣಗುವ ’ಜೋಯಿಸರ ಹುಡುಗ’ ಶ್ರೀಕಾಂತ್ ರಾವ್ ಕತೆಯನ್ನು ಈ ಕಾದಂಬರಿಯಲ್ಲಿ ಹೆಣೆಯಲಾಗಿದೆ. ಸಾಫ್ಟ್‌ವೇರ್ ಉದ್ಯೋಗಿಯೊಬ್ಬನ ಬದುಕಿನ ಹೆಣಗಾಟದ ಚಿತ್ರಣ ಇದರಲ್ಲಿ ಕಾಣಸಿಗುತ್ತದೆ. ದಿ.ಸೂರ್ಯ ನಾರಾಯಣ ಚಡಗ ಸ್ಮಾರಕ ಪ್ರಶಸ್ತಿ ಹಾಗೂ ಅಮ್ಮ ಪ್ರಶಸ್ತಿ ಗಳನ್ನು ಈ ಕಾದಂಬರಿ ತನ್ನ ಮುಡಿಲಿಗೇರಿಸಿಕೊಂಡಿದೆ.

ದ್ವೀಪವ ಬಯಸಿ
cover
ಲೇಖಕರುಎಂ.ಆರ್.ದತ್ತಾತ್ರಿ
ದೇಶಭಾರತ
ಭಾಷೆಕನ್ನಡ
ಪ್ರಕಾರಕಾದಂಬರಿ
ಪ್ರಕಾಶಕರುಛಂದ ಪುಸ್ತಕ

ಈ ಪುಸ್ತಕಕ್ಕೆ ಬೆನ್ನುಡಿಯನ್ನು ಎಚ್.ಎಸ್.ವೆಂಕಟೇಶಮೂರ್ತಿ ಬರೆದಿದ್ದಾರೆ.

ಪ್ರಶಸ್ತಿಗಳುಸಂಪಾದಿಸಿ

ಬಾಹ್ಯ ಕೊಂಡಿಗಳುಸಂಪಾದಿಸಿ