ಎಂ. ಆರ್. ದತ್ತಾತ್ರಿ

(ಎಂ.ಆರ್.ದತ್ತಾತ್ರಿ ಇಂದ ಪುನರ್ನಿರ್ದೇಶಿತ)

ಎಂ.ಆರ್. ದತ್ತಾತ್ರಿ ವೃತ್ತಿಯಿಂದ ಸಾಫ್ಟ್‍ವೇರ್ ಉದ್ಯೋಗಿಯಾಗಿದ್ದರೂ ತಮ್ಮ ಅಂಕಣ ಬರಹಗಳು, ಕವನ ಸಂಕಲನ, ಲಲಿತ ಪ್ರಬಂಧಗಳು ಜೊತೆಗೆ ತಮ್ಮ ಕಾದಂಬರಿ ದ್ವೀಪವ ಬಯಸಿ ಮೂಲಕ ಎಲ್ಲರಿಗೂ ಪರಿಚಯ. ಚಿಕ್ಕಮಗಳೂರಿನವರು. ಹಲವಾರು ವರ್ಷ ಅಮೇರಿಕಾದಲ್ಲಿ ಕೆಲಸ ಮಾಡಿ ಈಗ ಬೆಂಗಳೂರಿಗೆ ವಾಪಾಸಾಗಿದ್ದಾರೆ. ಇವರ ಪ್ರಕಟಿತ ಪುಸ್ತಕಗಳು - ಅಲೆಮಾರಿ ಕನಸುಗಳು (೨೦೦೨) ಮತ್ತು ಪೂರ್ವ ಪಶ್ಚಿಮ (೨೦೦೫). ಪೂರ್ವ ಪಶ್ಚಿಮ ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದಿಂದ ೨೦೦೬ನೇ ಸಾಲಿನ ಡಾ. ಹಾ.ಮಾ. ನಾಯಕ ಪ್ರಶಸ್ತಿ ಬಂದಿದೆ. ಇವರ ಪತ್ನಿ ರೂಪ ಮೈಸೂರಿನವರು. ಪುತ್ರರು ಶಶಾಂಕ ಮತ್ತು ಆದಿತ್ಯ.

ಲೇಖಕರ ಬಗ್ಗೆಸಂಪಾದಿಸಿ

ಮೂಲತಃ ಚಿಕ್ಕಮಗಳೂರಿನವರಾದ ದತ್ತಾತ್ರಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ಪದವಿ ಗಳಿಸಿ, ಬೆಂಗಳೂರು, ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೊ ಮತ್ತು ಲಾಸ್ ಏಂಜಲೀಸ್‌ಗಳಲ್ಲಿ ಕೆಲವು ವರ್ಷ ಕೆಲಸ ಮಾಡಿ ಈಗ ಬೆಂಗಳೂರಿನಲ್ಲಿ ಸ್ವಂತ ಸಾಫ್ಟ್‌ವೇರ್ ಕನ್ಸಲ್ಟಿಂಗ್ ಕಂಪೆನಿ ಹೊಂದಿದ್ದಾರೆ. ಇವರು ‘ಅಲೆಮಾರಿ ಕನಸು ಗಳು’ ಎಂಬ ಕವನ ಸಂಕಲನ, ಶಿವಮೊಗ್ಗ ಕರ್ನಾಟಕ ಸಂಘದ ಹಾಮಾ ನಾಯಕ ಪ್ರಶಸ್ತಿ ಪಡೆದ ‘ಪೂರ್ವ ಪಶ್ಚಿಮ’ ಅಂಕಣ ಬರಹಗಳ ಸಂಗ್ರಹ ಮತ್ತು ‘ಮಥಿಸಿದಷ್ಟೂ ಮಾತು’ ಎಂಬ ಲಲಿತ ಪ್ರಬಂಧಗಳ ಸಂಕಲನವನ್ನು ತ್ರಿವೇಣಿ ಶ್ರೀನಿವಾಸ್ ರಾವ್ ಜತೆ ಸೇರಿ ಸಂಪಾದಿಸಿದ್ದಾರೆ.

ಕವನ ಸಂಕಲನಸಂಪಾದಿಸಿ

  • ಅಲೆಮಾರಿ ಕನಸುಗಳು (೨೦೦೨)

ಅಂಕಣ ಬರಹಗಳ ಸಂಗ್ರಹಸಂಪಾದಿಸಿ

  • ಪೂರ್ವ ಪಶ್ಚಿಮ (೨೦೦೫)

ಲಲಿತ ಪ್ರಬಂಧಗಳ ಸಂಕಲನಸಂಪಾದಿಸಿ

  • ಮಥಿಸಿದಷ್ಟೂ ಮಾತು - ತ್ರಿವೇಣಿ ಶ್ರೀನಿವಾಸ್ ರಾವ್ ಜತೆ ಸೇರಿ ಸಂಪಾದಿಸಿದ ಕೃತಿ

ಕಾದಂಬರಿಸಂಪಾದಿಸಿ

ಪ್ರಶಸ್ತಿಗಳುಸಂಪಾದಿಸಿ

ಬಾಹ್ಯ ಕೊಂಡಿಗಳುಸಂಪಾದಿಸಿ