ದೇಶ-ವಿದೇಶಗಳ ಪರಿಚಯ (ಪುಸ್ತಕ)
ದೇಶ-ವಿದೇಶಗಳ ಪರಿಚಯ ಪುಸ್ತಕವನ್ನು ಪಾಂಡುರಂಗ ಶಾಸ್ತ್ರೀ ಮತ್ತು ಸಿ ಆರ್ ಕೃಷ್ಣರಾವ್ ಪರಿಚಯಿಸಿದವರು ಇಂದು ನಮ್ಮ ಭೂಮಂಡಲದಲ್ಲಿ ನೂರಾರು ಸ್ವತಂತ್ರ ದೇಶಗಳು,ಹಲವು ಸಣ್ಣ ಪುಟ್ಟ ದ್ವೀಪಗಳೂ ಇವೆ.ಈ ಪುಸ್ತಕದಲ್ಲಿ ಅವೆಲ್ಲವನ್ನೂ ಪರಿಚಯಿಸಲಾಗಿದೆ. ನಮ್ಮ ಈ ಭೂಮಂಡಲ ರೂಪುಗೊಂಡು ಕೋಟ್ಯಂತರ ವರ್ಷಗಳಾದ ಮೇಲೆ ಸಹಸ್ರ ಸಹಸ್ರ ಜೀವಿ ಜಂತುಗಳು ಉಗಮಿಸಿದ ನಂತರ ಮನುಷ್ಯ ಜೀವಿ ಕಾಣಿಸಿಕೊಂಡ.ಆದಿಮ ಮಾನವ ಇತರ ಎಲ್ಲ ಪ್ರಾಣಿವರ್ಗಗಳಂತೆಯೇ ಸಮಷ್ಟಿ ಜೀವಿ.ಬೇಟೆಯಾಡಿ ದೊರೆತದ್ದನ್ನು ತನ್ನ ಗುಂಪಿನವರೊಂದಿಗೆ ಹಂಚಿಕೊಂಡು ಮುಕ್ತವಾದ ಅಲೆಮಾರಿ ಜೀವನ ನೆಡೆಸುತಿದ್ದ.ಯಾವ ಬಗೆಯ ನಿರ್ಬಂಧವೂ ಇಲ್ಲದ ಸ್ವತಂತ್ರ ಜೀವಿಯಾಗಿದ್ದ.ಕ್ರಮೇಣ ಮುಂದುವರಿದು ಪಶುಸಂಗೋಪನೆಯಲ್ಲಿ,ಬೇಸಾಯದಲ್ಲಿ ತೊಡಗಿಕೊಂಡ.ಬೇಸಾಯ ಅಭಿವೃದ್ಧಿಗೊಂಡ ಹಾಗೆ ಒಂದೆಡೆ ನೆಲೆಯೂರಲಾರಂಭಿಸಿದ.ತಾನೂ ಬೆಳೆದದ್ದನ್ನು ತನಗೆ ಉಪಯೋಗಕ್ಕಿರಿಸಿಕೊಂಡು ಉಳಿದದ್ದನ್ನು ದಾಸ್ತಾನು ಮಾಡುವುದನ್ನು ಕಲಿತ.ಇದರೊಂದಿಗೆ ಸ್ವಂತಿಕೆ ಪ್ರಾರಂಭವಾಗಿ ಸಮಷ್ಟಿ ಜೀವನ ಶಿಥಿಲಗೊಂಡಿತು.ತಾನು ಬೇಸಾಯ ಮಾಡುತ್ತಿದ್ದ ಪ್ರದೇಶವನ್ನು ತನ್ನದಾಗಿಸಿಕೊಂಡ.ಇದು ಸ್ವಂತ ಆಸ್ತಿಗೆ ಮೂಲವಾಯಿತು.ತನಗೆ ಅವಶ್ಯಕವಾಗಿರುವುದಕ್ಕಿಂತ ಹೆಚ್ಚು ಭೂಮಿಯನ್ನು ಆಕ್ರಮಿಸಿಕೊಂಡು ಹೆಚ್ಚು ಆಹಾರ ಪದಾರ್ಥಗಳನ್ನು ಬೆಳೆದ.ಹೆಚ್ಚುವರಿ ಬೆಳೆಯನ್ನು ಬೇರೆ ವಸ್ತುಗಳಿಗೆ ವಿನಿಮಯ ಮಾಡಿಕೊಳ್ಳತೊಡಗಿದ.ಸ್ವಂತ ಆಸ್ತಿ ಮೇಲುಗೈ ಪಡೆದುಕೊಂಡ ಹಾಗೆ ಹಿಂದಿನ ಆದಿಮ ಸಮಾಜದ ಸಮಷ್ಟಿ ಜೀವನ ವ್ಯವಸ್ಥೆ ಅದೃಶ್ಯಗೊಂಡಿತು. ಸ್ವಂತ ಆಸ್ತಿ ಜಮೀನು ಬಲಗೊಂಡ ಹಾಗೆಸೀಮಾರೇಖೆಗಳು ಬಂದುವಲ್ಲದೆ,ಅದರ ರಕ್ಷಣೆಗೆ ಬೇಕಾದ ಸಮಾಜ ವ್ಯವಸ್ಥೆಯೂ ಅಸ್ತಿತ್ವಕ್ಕೆ ಬಂದಿತು.ಹೆಚ್ಚು ಬಲಶಾಲಿಯಾದವನು ಹೆಚ್ಚು ಭೂಮಿಯನ್ನು ಆಕ್ರಮಿಸಿಕೊಂಡು ಶ್ರೀಮಂತನಾದ.ದುರ್ಬಲರ ಶೋಷಣೆಯಲ್ಲಿ ತೊಡಗಿದ.ಒಂದರ ಹಿಂದೆ ಒಂದು ಎಂಬಂತೆ ಭೂಮಾಲಿಕತ್ವ,ಗುಲಾಮಗಿರಿ,ಹಣ ವಿನಿಮಯ ಇವುಗಳೆಲ್ಲ ಸೃಷ್ಟಿಯಾದವು.ಉಳ್ಳವರು-ಇಲ್ಲದವರು ಎನ್ನುವ ನಾಗರಿಕತೆ ಬಂದು ಈ ವ್ಯವಸ್ಥೆ ಬಲಗೊಂಡು ಬೇರೂರಿದ ಹಾಗೆ ಶೋಷಕರು-ಶೋಷಿತರು ಎನಿಸಿಕೊಂಡ ವರ್ಗಗಳು ಅಸ್ತಿತ್ವಕ್ಕೆ ಬಂದವು.ಹೆಚ್ಚು ಶ್ರೀಮಂತನಾದವನು,ಬಲಶಾಲಿಯಾದವನು ಮುಂದೆ ನಾಯಕನಾದ,ರಾಜನಾದ.ಈ ಬಗೆಯಲ್ಲಿ ರಾಜ್ಯಗಳು,ಸಾಮ್ರಾಜ್ಯಗಳು ಹುಟ್ಟಿಕೊಂಡವು.ರಾಜ್ಯಗಳಿಗೆ ಗಡಿಗಳು ಬಂದವು. ಸೌರವ್ಯೂಹದ ಪ್ರಮುಖ ಗ್ರಹಗಳ ಪೈಕಿ ಭೂಮಿಯೂ ಒಂದು,ವಿಜ್ಞಾನಿಗಳ ಪ್ರಕಾರ ಅದು ರೂಪುಗೊಂಡಿದ್ದು ಸುಮಾರು ೪೬೦೦ ಮಿಲಿಯ ವರ್ಷಗಳ ಹಿಂದೆ.ಜೀವಿಗಳು ಮತ್ತು ಸಸ್ಯಗಳು ರೂಪುಗೊಂಡಿದ್ದು ೪೦೦ ಮಿಲಿಯ ವರ್ಷಗಳ ಹಿಂದೆ.ಇಂದು ನಮ್ಮ ಭೂಮಂಡಲ ೫೦೦೦ ಮಿಲಿಯ ಮನುಷ್ಯ ಜೀವಿಗಳಿಗೆ,ಲಕ್ಷೋಪಲಕ್ಷ ಇತರ ಜೀವಿಗಳಿಗೆ,ವೈವಿಧ್ಯಪೂರ್ಣ ಗಿಡಮರಗಳಿಗೆ ಆಸರೆ.ಯಾವ ಎಲ್ಲೆ ಗಡಿಗಳ,ಆಸ್ತಿಪಾಸ್ತಿಗಳ ಗೋಜೂ ಇಲ್ಲದೆ ದೊರೆತ ಆಹಾರವನ್ನು ತನ್ನ ಪರಿವಾರದೊಂದಿಗೆ ಹಂಚಿಕೊಂಡು ಮನುಷ್ಯ ಸಮಷ್ಟಿ ಜೀವನ ನಡೆಸುತ್ತಿದ್ದ ಕಾಲವೊಂದಿತ್ತು.ನೂರಾರು ಸಹಸ್ರವರ್ಷಗಳ ಇತಿಹಾಸದ ಕಾಲಗತಿಯಲ್ಲಿ ಮಾನವ ಸಮುದಾಯ ಅನೇಕ ಸ್ಥಿತ್ಯಂತರಗಳನ್ನು ಕಂಡಿದೆ.ರಾಜ ಪ್ರಭುತ್ವಗಳು,ಪಾಳೇಯ ಪಟ್ಟುಗಳು,ವಸಾಹಾತುಗಳು ಎಲ್ಲವೂ ಕಾಲಗರ್ಭದಲ್ಲಿ ಅಡಗಿಹೋಗಿ ಇಂದು ಸ್ವತಂತ್ರ ರಾಷ್ಟ್ರಗಳು ಉದಯಿಸಿವೆ.ಹಲವಾರು ಯುದ್ಧಗಳು,ಮಹಾಯುದ್ಧಗಳು,ಪ್ರಕೃತಿ ವಿಕೋಪಗಳು ಎಲ್ಲವನ್ನೂ ನುಂಗಿಕೊಂಡು ಜನಜೀವನ ನಿರಂತರವಾಗಿ ಸಾಗಿದೆ.ಇಂದು ನಮ್ಮ ಭೂಮಂಡಲದಲ್ಲಿ ನೂರಾರು ಸ್ವತಂತ್ರ ದೇಶಗಳು,ಹಲವು ಸಣ್ಣ ಪುಟ್ಟ ದ್ವೀಪಗಳು ಇವೆ. ಈ ಪುಸ್ತಕದಲ್ಲಿ ಅವೆಲ್ಲವನ್ನೂ ಪರಿಚಯಿಸಲಾಗಿದೆ.ಇದು ಭೂಗೋಳವೂ ಹೌದು,ಚರಿತ್ರೆಯೂ ಹೌದು.ಕನ್ನಡದಲ್ಲಿ ಮೊದಲ ಬಾರಿಗೆ ಪ್ರಪಂಚದ ಎಲ್ಲ ದೇಶಗಳ,ಖಂಡಗಳ ಮತ್ತು ಸಾಗರಗಳ ಕಿರುಪರಿಚಯ ಹಾಗೂ ವರ್ಣದಲ್ಲಿ ರಾಷ್ಟ್ರಧ್ವಜಗಳನ್ನೂ ಇದರಲ್ಲಿ ಕೊಡಲಾಗಿದೆ.ಪ್ರತಿಯೊಂದು ದೇಶದ ಭೂಪಟ,ಭೌಗೋಳಿಕ ನೆಲೆ,ಅಗತ್ಯವಾದ ಅಂಕಿ ಅಂಶಗಳು,ಇತಿಹಾಸ,ಅಲ್ಲದೆ ಇತರ ಉಪಯುಕ್ತ ಮಾಹಿತಿಗಳು ಈ ಪುಸ್ತಕದಲ್ಲಿವೆ.
ಲೇಖಕರು | ಪಾಂಡುರಂಗ ಶಾಸ್ತ್ರೀ,ಸಿ ಆರ್ ಕೃಷ್ಣರಾವ್ |
---|---|
ದೇಶ | ಭಾರತ |
ಭಾಷೆ | ಕನ್ನಡ |
ವಿಷಯ | ಮಾಹಿತಿ ಕೋಶ |
ಪ್ರಕಾರ | ದೇಶ ವಿದೇಶಗಳ ಮಾಹಿತಿ |
ಪ್ರಕಾಶಕರು | ನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್ |
ಪ್ರಕಟವಾದ ದಿನಾಂಕ | ೨೦೧೧, ೬ನೆ ಮುದ್ರಣ |
ಪುಟಗಳು | ೧೮೦ |
ಐಎಸ್‍ಬಿಎನ್ | 978-81-8467-416-೦ false |