ದೇವಪ್ರಯಾಗ
ದೇವಪ್ರಯಾಗ ಭಾರತದ ಉತ್ತರಾಖಂಡ ರಾಜ್ಯದ ಟಿಹ್ರಿ ಗಢ್‌ವಾಲ್ ಜಿಲ್ಲೆಯಲ್ಲಿನ ಒಂದು ಪಟ್ಟಣ. ರಿಷಿಕೇಶದಿಂದ ಸುಮಾರು ೭೦ ಕಿ.ಮೀ. ದೂರದಲ್ಲಿರುವ ದೇವಪ್ರಯಾಗವು ಭಾಗೀರಥಿ ಮತ್ತು ಅಲಕನಂದಾ ನದಿಗಳ ಸಂಗಮಸ್ಥಾನವಾಗಿದೆ. ಈ ಸ್ಥಳದಿಂದ ಮುಂದೆ ನದಿಯು ಗಂಗಾನದಿ ಎಂಬ ಹೆಸರು ಪಡೆದಿದೆ. ದೇವಪ್ರಯಾಗವು ಹಿಮಾಲಯದ ಐದು ಪವಿತ್ರ ಸಂಗಮಕ್ಷೇತ್ರಗಳಲ್ಲಿ ಒಂದಾಗಿದ್ದು ಹಿಂದೂ ಧರ್ಮೀಯರು ಇದನ್ನು ಪಾವನಕ್ಷೇತ್ರವೆಂದು ಪರಿಗಣಿಸುತ್ತಾರೆ. ಇತರ ನಾಲ್ಕು ಪ್ರಯಾಗಗಳೆಂದರೆ ರುದ್ರಪ್ರಯಾಗ, ಕರ್ಣಪ್ರಯಾಗ, ನಂದಪ್ರಯಾಗ ಮತ್ತು ವಿಷ್ಣುಪ್ರಯಾಗ.
ದೇವಪ್ರಯಾಗ | |
---|---|
ಭೂಗೋಳ | |
ಕಕ್ಷೆಗಳು | 30°08′47″N 78°35′54″E / 30.146315°N 78.598251°E |
ದೇಶ | ಭಾರತ |
ರಾಜ್ಯ | ಉತ್ತರಾಖಂಡ |
ಜಿಲ್ಲೆ | ತೇಹ್ರಿ ಗರ್ವಾಲ್ |
ಸ್ಥಳ | ಉತ್ತರಾಖಂಡ, ಭಾರತ |
ವಾಸ್ತುಶಿಲ್ಪ | |
ವಾಸ್ತುಶಿಲ್ಪ ಶೈಲಿ | ನಗರ ವಾಸ್ತುಶಿಲ್ಪಿ |

ಬಾಹ್ಯ ಸಂಪರ್ಕಗಳು
ಬದಲಾಯಿಸಿ- Devprayag, Official website Archived 2007-12-10 ವೇಬ್ಯಾಕ್ ಮೆಷಿನ್ ನಲ್ಲಿ.
- Devprayag photo gallery
- Devprayag on wikimapia