ವಿಷ್ಣುಪ್ರಯಾಗ
ವಿಷ್ಣುಪ್ರಯಾಗ ಭಾರತದ ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿನ ಒಂದು ಗ್ರಾಮ. ರಿಷಿಕೇಶದಿಂದ ಬದರಿನಾಥಕ್ಕೆ ಹೋಗುವ ಮಾರ್ಗದಲ್ಲಿ ಸುಮಾರು ೨೬೦ ಕಿ.ಮೀ. ದೂರದಲ್ಲಿರುವ ವಿಷ್ಣುಪ್ರಯಾಗವು ಅಲಕನಂದಾ ಮತ್ತು ಧೌಲಿಗಂಗಾ ನದಿಗಳ ಸಂಗಮಸ್ಥಾನವಾಗಿದೆ. ವಿಷ್ಣುಪ್ರಯಾಗವು ಹಿಮಾಲಯದ ಐದು ಪವಿತ್ರ ಸಂಗಮಕ್ಷೇತ್ರಗಳಲ್ಲಿ ಒಂದಾಗಿದ್ದು ಹಿಂದೂ ಧರ್ಮೀಯರಿಗೆ ಇದು ಪುಣ್ಯಕ್ಷೇತ್ರವಾಗಿದೆ. ಇತರ ನಾಲ್ಕು ಪ್ರಯಾಗಗಳೆಂದರೆ ದೇವಪ್ರಯಾಗ, ರುದ್ರಪ್ರಯಾಗ, ಕರ್ಣಪ್ರಯಾಗ ಮತ್ತು ನಂದಪ್ರಯಾಗ. ವಿಷ್ಣುಪ್ರಯಾಗದಲ್ಲಿ ಅಲಕನಂದಾ ನದಿಗೆ ಅಡ್ಡಲಾಗಿ ಸಣ್ಣ ಆಣೆಯನ್ನು ಕಟ್ಟಿ ತನ್ಮೂಲಕ ಜಲವಿದ್ಯುತ್ತನ್ನು ಉತ್ಪಾದಿಸಲಾಗುತ್ತಿದೆ.