ಕರ್ಣಪ್ರಯಾಗ
ಕರ್ಣಪ್ರಯಾಗ ಭಾರತದ ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿನ ಒಂದು ಪಟ್ಟಣ. ರಿಷಿಕೇಶದಿಂದ ಬದರಿನಾಥಕ್ಕೆ ಹೋಗುವ ಮಾರ್ಗದಲ್ಲಿ ಸುಮಾರು ೧೭೦ ಕಿ.ಮೀ. ದೂರದಲ್ಲಿರುವ ಕರ್ಣಪ್ರಯಾಗವು ಅಲಕನಂದಾ ಮತ್ತು ಪಿಂಡಾರ್ ನದಿಗಳ ಸಂಗಮಸ್ಥಾನವಾಗಿದೆ. ಕರ್ಣಪ್ರಯಾಗವು ಹಿಮಾಲಯದ ಐದು ಪವಿತ್ರ ಸಂಗಮಕ್ಷೇತ್ರಗಳಲ್ಲಿ ಒಂದಾಗಿದ್ದು ಹಿಂದೂ ಧರ್ಮೀಯರಿಗೆ ಇದು ಪುಣ್ಯಕ್ಷೇತ್ರವಾಗಿದೆ. ಇತರ ನಾಲ್ಕು ಪ್ರಯಾಗಗಳೆಂದರೆ ದೇವಪ್ರಯಾಗ, ರುದ್ರಪ್ರಯಾಗ, ನಂದಪ್ರಯಾಗ ಮತ್ತು ವಿಷ್ಣುಪ್ರಯಾಗ. ಕರ್ಣಪ್ರಯಾಗವು ಉತ್ತರಾಖಂಡದ ಎರಡು ಪ್ರಾಂತ್ಯಗಳಾದ ಗಢ್‌ವಾಲ್ ಮತ್ತು ಕುಮಾವ್ ಗಳ ಸಂಧಿಸ್ಥಾನದಲ್ಲಿದೆ.
ಕರ್ಣಪ್ರಯಾಗ
कर्ण प्रयाग Karnprayag, Karna Prayag | |
---|---|
ನಗರ | |
ದೇಶ | ಭಾರತ |
ರಾಜ್ಯ | ಉತ್ತರಾಖಂಡ |
ಚಿಲ್ಲೆ | ಚಮೋಲಿ |
Elevation | ೧,೪೫೧ m (೪,೭೬೦ ft) |
Population (2001) | |
• Total | ೬,೯೭೬ |
ಭಾಷೆಗಳು | |
• ಅಧಿಕೃತ | ಹಿಂದಿ |
Time zone | UTC+5:30 (IST) |