ದಮಯಂತಿ ಜೋಶಿ
ದಮಯಂತಿ ಜೋಶಿ ( ೫ ಸೆಪ್ಟೆಂಬರ್ ೧೯೨೮ - ೧೯ ಸೆಪ್ಟೆಂಬರ್ ೨೦೦೪) [೧] ಅವರು ಕಥಕ್ ನೃತ್ಯ ಪ್ರಕಾರದ ಹೆಸರಾಂತ ನೃತ್ಯಗಾರ್ತಿಯಾಗಿದ್ದರು. [೨] ಕಥಕ್ ಎಂಬುದು ಕಥೆ ಹೇಳುವ ಕಲೆ ಎಂದು ಅವರು ನಂಬಿದ್ದರು. [೩] ಅವರು ೧೯೩೦ ರ ದಶಕದಲ್ಲಿ ಅವರು ಮೇಡಮ್ ಮೇನಕಾ ಅವರ ತಂಡದಲ್ಲಿ ನೃತ್ಯ ಮಾಡಲು ಪ್ರಾರಂಭಿಸಿದರು. ಇದು ಪ್ರಪಂಚದ ಅನೇಕ ಭಾಗಗಳಿಗೆ ಅವರನ್ನು ಕೊಂಡೊಯ್ಯಿತು. ಅವರು ಜೈಪುರ ಘರಾನಾದ ಸೀತಾರಾಮ್ ಪ್ರಸಾದ್ ಅವರಿಂದ ಕಥಕ್ ನೃತ್ಯ ಕಲಿತರು ಮತ್ತು ಚಿಕ್ಕ ವಯಸ್ಸಿನಲ್ಲೇ ಪ್ರವೀಣ ನರ್ತಕಿಯಾದರು. ನಂತರ ಲಕ್ನೋ ಘರಾನಾದ ಅಚ್ಚನ್ ಮಹಾರಾಜ್, ಲಚ್ಚು ಮಹಾರಾಜ್ ಮತ್ತು ಶಂಭು ಮಹಾರಾಜ್ ಅವರಿಂದ ತರಬೇತಿ ಪಡೆದರು. ಹೀಗೆ ಎರಡೂ ಸಂಪ್ರದಾಯಗಳಿಂದ ಸೂಕ್ಷ್ಮ ವ್ಯತ್ಯಾಸಗಳನ್ನು ಅಳವಡಿಸಿಕೊಂಡರು. ಅವರು ೧೯೫೦ ರ ದಶಕದಲ್ಲಿ ಸ್ವತಂತ್ರ ನೃತ್ಯಗಾರ್ತಿಯಾದರು ಮತ್ತು ೧೯೬೦ ರ ದಶಕದಲ್ಲಿ ಪ್ರಾಮುಖ್ಯತೆಯನ್ನು ಗಳಿಸಿದರು. ಮೊದಲು ಮುಂಬೈನಲ್ಲಿ ಅವರು ನೃತ್ಯ ಶಾಲೆಯಲ್ಲಿ ಗುರುವಾಗಿದ್ದರು. [೪] [೫] [೬]
ದಮಯಂತಿ ಜೋಶಿ | |
---|---|
ಜನನ | ಮುಂಬೈ, ಭಾರತ | ೫ ಸೆಪ್ಟೆಂಬರ್ ೧೯೨೮
ಮರಣ | 19 September 2004 ಮುಂಬೈ, ಭಾರತ | (aged 76)
ವೃತ್ತಿ(ಗಳು) | ನೃತ್ಯಗಾರ್ತಿ, ನೃತ್ಯ ಸಂಯೋಜಕ, ನೃತ್ಯ ಬೋಧಕಿ |
Dances | ಕಥಕ್ |
ಅವರು ೧೯೭೦ ರಲ್ಲಿ ಪದ್ಮಶ್ರೀ, ೧೯೬೮ ರಲ್ಲಿ ನೃತ್ಯಕ್ಕಾಗಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು ಮತ್ತು ಲಕ್ನೋದ ಯುಪಿ ಕಥಕ್ ಕೇಂದ್ರದ ನಿರ್ದೇಶಕರಾಗಿ ಉಳಿದಿದ್ದರು. [೭]
ಆರಂಭಿಕ ಜೀವನ ಮತ್ತು ತರಬೇತಿ
ಬದಲಾಯಿಸಿಇವರು ೧೯೨೮ ರಲ್ಲಿ ಮುಂಬೈನಲ್ಲಿ ಹಿಂದೂ ಕುಟುಂಬದಲ್ಲಿ ಜನಿಸಿದರು. [೮] ಅವರು ಜನರಲ್ ಡಾ ಸಾಹಿಬ್ ಸಿಂಗ್ ಸೋಖೆ ಮತ್ತು ಮೇಡಮ್ ಮೇನಕಾ ಎಂದು ಪ್ರಸಿದ್ಧರಾದ, ಅವರ ಪತ್ನಿ ಲೀಲಾ ಸೋಖೆ (ಜನನ ರಾಯ್) ಅವರ ಮನೆಯಲ್ಲಿ ಬೆಳೆದರು.[೯] ಮೇನಕಾ ತಮ್ಮ ಸ್ವಂತ ಮಗುವನ್ನು ಕಳೆದುಕೊಂಡಿದ್ದರು ಮತ್ತು ಅವರು ಜೋಶಿಯವರನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದ್ದರು. ಜೋಶಿಯವರ ತಾಯಿ ವತ್ಸಲಾ ಜೋಶಿಯವರು ತಮ್ಮ ಮಗಳನ್ನು ಬಿಟ್ಟುಕೊಡಲಿಲ್ಲ. ನಂತರ ಅವರು ಜಂಟಿ ಪೋಷಕರಾಗಲು ಒಪ್ಪಿಕೊಂಡರು. [೧೦] ಆರಂಭದಲ್ಲಿ ದೇವಾಲಯಗಳಲ್ಲಿ ಪ್ರದರ್ಶನ ನೀಡಲಾಯಿತು. [೩] ಮೇನಕಾ ಅವರ ತಂಡದಲ್ಲಿ ಅವರು ಪಂಡಿತ್ ಸೀತಾರಾಮ್ ಪ್ರಸಾದ್ ಅವರಿಂದ ಕಥಕ್ ಬಗ್ಗೆ ಕಲಿತರು. ಅವರು ಮೇನಕಾ ಅವರ ತಂಡದಲ್ಲಿ ಪ್ರವಾಸ ಮಾಡಿದರು. ಹತ್ತು ವರ್ಷಗಳ ನಂತರ, ಅವರು ೧೫ ವರ್ಷದವರಿದ್ದಾಗ ಅವರು ಯುರೋಪಿಯನ್ ಪ್ರಮುಖ ನಗರಗಳಲ್ಲಿ ಪ್ರದರ್ಶನ ನೀಡಿದರು. ಸೋಖೇಯರು ದಮಯಂತಿಯ ತಾಯಿಯನ್ನು ನೇಮಿಸಿಕೊಂಡರು ಮತ್ತು ಜೋಶಿಯವರು ಶಿಕ್ಷಣವನ್ನು ಪಡೆದರು. [೧೧] [೧೨] [೧೦][೧೩]
ಅವರು ಮುಂಬೈನ ಶ್ರೀ ರಾಜರಾಜೇಶ್ವರಿ ಭರತ ನಾಟ್ಯ ಕಲಾ ಮಂದಿರದಲ್ಲಿ ಮೊದಲ ವಿದ್ಯಾರ್ಥಿಯಾಗಿದ್ದರು. ಅಲ್ಲಿ ಅವರು ಗುರು ಟಿಕೆ ಮಹಾಲಿಂಗಂ ಪಿಳ್ಳೈ ಅವರಿಂದ ಭರತ ನಾಟ್ಯವನ್ನು ಕಲಿತರು. [೧೪]
ವೃತ್ತಿ
ಬದಲಾಯಿಸಿ೧೯೫೦ ರ ದಶಕದ ಮಧ್ಯಭಾಗದ ನಂತರ ದಮಯಂತಿ ಲಕ್ನೋ ಘರಾನಾದ ಪಂಡಿತರು, ಅಚ್ಚನ್ ಮಹಾರಾಜ್, ಲಚ್ಚು ಮಹಾರಾಜ್ ಮತ್ತು ಶಂಭು ಮಹಾರಾಜ್ ಮತ್ತು ಜೈಪುರ ಘರಾನಾದ ಗುರು ಹೀರಾಲಾಲ್ ಅವರಿಂದ ತರಬೇತಿ ಪಡೆದು ಯಶಸ್ವಿಯಾದ ಏಕ್ಕೆಕ ವ್ಯಕ್ತಿಯಾಗಿದ್ದರು. ಕಥಕ್ ನೃತ್ಯಗಾರ್ತಿಯಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡರು. ವಿಶೇಷವಾಗಿ ಕಥಕ್ ನೃತ್ಯದಲ್ಲಿ " ಸೀರೆ " ಅನ್ನು ವೇಷಭೂಷಣವಾಗಿ ಪರಿಚಯಿಸಿದ ಮೊದಲ ವ್ಯಕ್ತಿಯಾದ ದೆಹಲಿಯ ಕಥಕ್ ಕೇಂದ್ರದ ಶಂಭು ಮಹಾರಾಜರ ಬಳಿ ತರಬೇತಿ ಪಡೆದರು. [೧೫] ಅವರು ಇಂದಿರಾ ಕಲಾ ವಿಶ್ವವಿದ್ಯಾಲಯ, ಖೈರಾಘರ್ ಮತ್ತು ಲಕ್ನೋದ ಕಥಕ್ ಕೇಂದ್ರದಲ್ಲಿ ಕಥಕ್ ಕಲಿಸಿದರು. ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (೧೯೬೮) ಮತ್ತು ಪದ್ಮಶ್ರೀ (೧೯೭೦) ನೀಡಿ ಗೌರವಿಸಲಾಗಿದೆ. [೧೬] ಅವರು ಬೀರೇಶ್ವರ ಗೌತಮನಿಗೆ ಗುರುವೂ ಆಗಿದ್ದರು.
೧೯೭೧ ರಲ್ಲಿ ಭಾರತ ಸರ್ಕಾರದ ಚಲನಚಿತ್ರ ವಿಭಾಗದಿಂದ ಕಥಕ್‌ನ ಸಾಕ್ಷ್ಯಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಹುಕುಮತ್ ಸರಿನ್ ನಿರ್ದೇಶಿಸಿದ "ದಮಯಂತಿ ಜೋಶಿ" ಎಂಬ ಇನ್ನೊಂದು ಚಲನಚಿತ್ರವನ್ನು ೧೯೭೩ ರಲ್ಲಿ ನಿರ್ಮಿಸಲಾಯಿತು.
ದಮಯಂತಿ ಜೋಶಿ ಅವರು ಮುಂಬೈನಲ್ಲಿ ಸೆಪ್ಟೆಂಬರ್ ೧೯, ೨೦೦೪ ರಂದು ಭಾನುವಾರದಂದು ತಮ್ಮ ಮನೆಯಲ್ಲಿ ನಿಧನರಾದರು. ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಪಾರ್ಶ್ವವಾಯು ದಾಳಿಗೆ ಒಳಗಾದ ನಂತರ ಸುಮಾರು ಒಂದು ವರ್ಷದಿಂದ ಹಾಸಿಗೆ ಹಿಡಿದಿದ್ದರು.[೧೭]
ಕೃತಿಗಳು
ಬದಲಾಯಿಸಿ- ಮೇನಕಾ ಮೇನಕಾ, ದಮಯಂತಿ ಜೋಶಿ ಅವರಿಂದ ಸಂಗೀತ ನಾಟಕ ಅಕಾಡೆಮಿ ೧೯೮೯.
- ರಿಡಿಸ್ಕವರಿಂಗ್ ಇಂಡಿಯಾ, ಇಂಡಿಯನ್ ಫಿಲಾಸಫಿ ಲೈಬ್ರರಿ: ಪ್ರಜೆಶ್ ಬ್ಯಾನರ್ಜಿ, ದಮಯಂತಿ ಜೋಶಿ ಅವರಿಂದ ಕಥಕ್ ನೃತ್ಯ. ಕಾಸ್ಮೊ ಪ್ರಕಟಣೆಗಳು ೧೯೯೦.
ಸಹ ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "Kathak FAQ: Short notes on the popular Kathak dancers". Nupur Nritya – Sangeet Academy. Archived from the original on 14 April 2010.
- ↑ "Damayanti Joshi | Films Division". filmsdivision.org. Archived from the original on 2021-10-07. Retrieved 2021-10-07.
- ↑ ೩.೦ ೩.೧ "Damayanti Joshi | Films Division". filmsdivision.org. Archived from the original on 2021-10-07. Retrieved 2021-10-07."Damayanti Joshi | Films Division" Archived 2021-10-07 ವೇಬ್ಯಾಕ್ ಮೆಷಿನ್ ನಲ್ಲಿ.. filmsdivision.org. Retrieved 7 October 2021.
- ↑ Kothari, Sunil (1989). Kathak, Indian classical dance art. Abhinav Publications. p. 188.
- ↑ Massey, p. 64
- ↑ Banerji, Projesh (1983). Kathak dance through ages. Humanities Press. p. 45.
- ↑ "TRIBUTE: A life of intricate rhythms". The Hindu. 18 September 2005. Archived from the original on 11 November 2012.
{{cite news}}
: CS1 maint: unfit URL (link) - ↑ Menon, Rekha (1961). Cultural profiles, (Volume 2). Inter-National Cultural Centre. p. 17.
- ↑ Giants Who Reawakened Indian Dance, Kusam Joshi, 2011, Hinduism Today, Retrieved 5 September 2016
- ↑ ೧೦.೦ ೧೦.೧ Lakshmi, C.S. (7 November 2004). "A life dedicated to dance". The Hindu. Archived from the original on 25 March 2005.
- ↑ "TRIBUTE: A life of intricate rhythms". The Hindu. 18 September 2005. Archived from the original on 11 November 2012.
{{cite news}}
: CS1 maint: unfit URL (link)"TRIBUTE: A life of intricate rhythms". The Hindu. 18 September 2005. Archived from the original on 11 November 2012.{{cite news}}
: CS1 maint: unfit URL (link) - ↑ Lakshmi, C. S.; Roshan G. Shahani (1998). Damayanti, Menaka's daughter: a biographical note based on the Visual History Workshop, February 15, 1998 Issue 8 of Publication (SPARROW). SPARROW. p. 11.
- ↑ Kothari, Sunil (3 October 2017). "Remembering Shirin Vajifdar – Pioneer in All Schools of Dance". The Wire. Retrieved 4 October 2017.
- ↑ "Life dedicated to dance". The Hindu. 3 January 2003. Archived from the original on 2 December 2008. Retrieved 13 October 2010.
{{cite news}}
: CS1 maint: unfit URL (link) - ↑ Massey, Reginald (1999). India's kathak dance, past present, future. Abhinav Publications. p. 29. ISBN 81-7017-374-4.
- ↑ "Padma Awards". Ministry of Communications and Information Technology. Archived from the original on 10 July 2011.
- ↑ "Obit / Profile - Damayanti Joshi passes away". narthaki.com. Retrieved 2021-10-07.