ದಂಡಕ ಸಾಮ್ರಾಜ್ಯ
ದಂಡಕವು ಹಿಂದೂ ಪುರಾಣಗಳಲ್ಲಿ ಆಗ್ಗಾಗ್ಗೆ ಕಾಣಿಸಿಕೊಂಡಿರುವ ಪ್ರದೇಶವಾಗಿದೆ. ದಂಡಕ ಹೆಸರಿನ ಒಂದು ರಾಜ್ಯ ಮತ್ತು ಒಂದು ಅರಣ್ಯವಿದೆ. ಇದು ರಾವಣನ ಆಳ್ವಿಕೆಯ ಕಾಲದಲ್ಲಿ ಲಂಕಾದ ವಸಾಹತುಶಾಹಿ ರಾಜ್ಯವಾಗಿತ್ತು. ರಾವಣನ ಸೇನಾಧಿಪತಿ ಖರ ಈ ಪ್ರಾಂತ್ಯವನ್ನು ಆಳುತ್ತಿದ್ದನು. ದಂಡಕವು ಅರಣ್ಯದಲ್ಲಿ ವಾಸಿಸುತ್ತಿದ್ದ ಎಲ್ಲಾ ರಾಕ್ಷಸ ಬುಡಕಟ್ಟುಗಳ ಭದ್ರಕೋಟೆಯಾಗಿತ್ತು. ಇದು ಮಹಾರಾಷ್ಟ್ರದ ಜನಸ್ಥಾನ(ನಾಸಿಕ್ ನಗರ)ದ ರಾಜಧಾನಿಯಾಗಿದೆ. ದೂರದ ಪಂಚವಟಿಯಲ್ಲಿ ತನ್ನ ಹೆಂಡತಿ ಮತ್ತು ತಮ್ಮನೊಂದಿಗೆ ವಾಸಿಸುತ್ತಿದ್ದ ಶ್ರೀ ರಾಮನ ಮೇಲೆ ರಾಕ್ಷಸ ಖರನು ಆಕ್ರಮಣ ಮಾಡಿದ್ದು ಇಲ್ಲಿಂದಲೇ.
ಮಹಾಭಾರತದಲ್ಲಿ ಉಲ್ಲೇಖಗಳು
ಬದಲಾಯಿಸಿರಾಮಾಯಣ ಮಹಾಕಾವ್ಯದಲ್ಲಿ ದಂಡಕವನ್ನು ಉಲ್ಲೇಖಿಸಲಾಗಿದೆಯಾದರೂ, ಹೆಚ್ಚಿನ ವಿವರಗಳೊಂದಿಗೆ ಮಹಾಕಾವ್ಯವಾದ ಮಹಾಭಾರತದಲ್ಲಿ ಈ ಸಾಮ್ರಾಜ್ಯದ ಕೆಲವು ಉಲ್ಲೇಖಗಳು ಕಂಡುಬರುತ್ತವೆ.
ಸಹದೇವನ ವಿಜಯಗಳು
ಬದಲಾಯಿಸಿಪಾಂಡವ ರಾಜ ಯುಧಿಷ್ಟಿರನ ಕೊನೆಯ ಸಹೋದರ ಮತ್ತು ಪಾಂಡವರ ಸೇನಾಧಿಪತಿಯಾಗಿದ್ದ ಸಹದೇವನು ರಾಜನ ರಾಜಸೂಯ ಯಾಗಕ್ಕಾಗಿ ಕಪ್ಪವನ್ನು ಸಂಗ್ರಹಿಸಲು ದಕ್ಷಿಣ ಪ್ರದೇಶಗಳಿಗೆ ಬಂದನು. ರಾಜ ರುಕ್ಮಿಣನಿಂದ (ಭೋಜಕಟ ಎಂಬ ವಿದರ್ಭದ ಎರಡನೆಯ ರಾಜಧಾನಿಯಲ್ಲಿ ಆಳ್ವಿಕೆ ನಡೆಸುತ್ತಿದ್ದ) ಆಭರಣಗಳನ್ನು ಮತ್ತು ಸಪತ್ತನ್ನು ಗಳಿಸಿದ ನಂತರ ಮತ್ತಷ್ಟು ದಕ್ಷಿಣದ ಸುರಪಾರಕ, ತಲಕಟಾ ಮತ್ತು ದಂಡಕಕ್ಕೆ ದಂಡೆತ್ತಿ ಹೋದನು. ನಂತರ ಕುರು ಯೋಧನು ಸಮುದ್ರ ತೀರದ್ದಲ್ಲಿ ವಾಸಿಸುತ್ತಿದ್ದ ಮ್ಲೇಚ್ಛ ಬುಡಕಟ್ಟಿನ ಅಸಂಖ್ಯಾತ ರಾಜರುಗಳನ್ನು ಸೋಲಿಸಿ ಅವರನ್ನು ವಶಪಡಿಸಿಕೊಂಡನು.
ದಂಡಕ ಅರಣ್ಯ
ಬದಲಾಯಿಸಿದಂಡಕ ಅರಣ್ಯವು ಪ್ರಾಚೀನ ಭಾರತದಲ್ಲಿ ದಂಡಕಾರಣ್ಯ ಎಂಬ ಅತಿ ದೊಡ್ಡ ಅರಣ್ಯವಾಗಿತ್ತು. ಇದು ಮಧ್ಯಭಾರತದ ವಿಂಧ್ಯಾ ಶ್ರೇಣಿಗಳಿಂದ ಕೃಷ್ಣವೇಣಿ ನದಿಯ ದಡದವರೆಗೆ (ಈಗ ಕೃಷ್ಣಾ ನದಿ ಎಂದೂ ಕರೆಯಲ್ಪಡುತ್ತದೆ) ಮತ್ತು ದಕ್ಷಿಣದಲ್ಲಿ ತುಂಗಾಭದ್ರ ನದಿಯ ದಡದವರೆಗೆ ವ್ಯಾಪಿಸಿದೆ. ಈ ಕಾಡಿನ ಉಲ್ಲೇಖವು ಮಹಾಭಾರತದಲ್ಲಿ(೩-೮೫) ಕಂಡುಬರುತ್ತದೆ. ದಂಡಕದ ಪವಿತ್ರ ಅರಣ್ಯವನ್ನು ಅದರ ಸಂಭವನೀಯ ಗಡಿಗಳು ಮತ್ತು ಅದರೊಳಗೆ ಹರಿಯುವ ನದಿಗಳ ಜೊತೆಗೆ ಇಲ್ಲಿ ಉಲ್ಲೇಖಿಸಲಾಗಿದೆ. ಸುರಪಾರಕ (ಉತ್ತರ ಕೊಂಕಣ) ಅರಣ್ಯದ ಪಶ್ಚಿಮ ಗಡಿಯನ್ನು ರಚಿಸಿದೆ. ಒರಿಸ್ಸಾದ ಮಹೇಂದ್ರ ಪರ್ವತಗಳು ಅದರ ಪೂರ್ವದ ಗಡಿಯನ್ನು ರೂಪಿಸಿದವು. ಗೋದಾವರಿ ಮತ್ತು ಕೃಷ್ಣವೇಣಿ ನದಿಗಳು ಈ ಕಾಡಿನ ಮೂಲಕ ಹರಿಯುತ್ತದೆ.ಈ ಕಾಡಿನ ಉತ್ತರ ದ್ವಾರದಲ್ಲಿ ಪಯೋಷ್ನಿ ನದಿ ಅಥವಾ ಸರೋವರವನ್ನು ಉಲ್ಲೇಖಿಸಲಾಗಿದೆ. ಮಹಾಕಾವ್ಯ ರಾಮಾಯಣದಲ್ಲಿ ದಂಡಕ ರಾಜ್ಯ ಮತ್ತು ಕಿಷ್ಕಿಂಧಾ ರಾಜ್ಯವನ್ನು ಹೊರತುಪಡಿಸಿ ಯಾವುದೇ ರಾಜ್ಯವು ಈ ಕಾಡಿನೊಳಗೆ ಇದೆ ಎಂದು ಉಲ್ಲೇಖಿಸಲಾಗಿಲ್ಲ. ಮಹಾಕಾವ್ಯ ಮಹಾಭಾರತದ ಸಮಯದಲ್ಲಿ ಹಿಂದೆ ದಂಡಕ ಅರಣ್ಯವಾಗಿದ್ದ ಅನೇಕ ಪ್ರದೇಶಗಳು ವಾಸಯೋಗ್ಯ ರಾಜ್ಯಗಳಾಗಿ ಕಂಡುಬಂದವು. ದಂಡಕ ರಾಜ್ಯವು ದಂಡಕ ಅರಣ್ಯಗಳ ಮಧ್ಯದಲ್ಲಿ ರಾಕ್ಷಸರ ರಾಜ್ಯವಾಗಿತ್ತು.
ರಾಘವ ರಾಮನು ರಾಕ್ಷಸರನ್ನು ಸಂಹರಿಸುವ ಸಲುವಾಗಿ ದಂಡಕ ವನದಲ್ಲಿ ಕೆಲಕಾಲ ವಾಸವಾಗಿದ್ದನು. ಜನಸ್ಥಾನದಲ್ಲಿ (ದಂಡಕ ಸಾಮ್ರಾಜ್ಯದ ರಾಜಧಾನಿ) ಅವನು ದುಷ್ಟ-ಆತ್ಮದ ರಾಕ್ಷಸನ ತಲೆಯನ್ನು (ರಾಮಾಯಣ ಮಹಾಕಾವ್ಯದ ಪ್ರಕಾರ, ಅವನ ಹೆಸರು ಖರ) ತನ್ನ ದಂಡದಿಂದ ಕತ್ತರಿಸಿದನು (೯,೩೯). ಬಿಲ್ಲುಗಾರರಲ್ಲಿ ಅಗ್ರಗಣ್ಯನಾದ ರಾಘವ ರಾಮನು ತನ್ನ ಬಿಲ್ಲನ್ನು ತೆಗೆದುಕೊಂಡು ತನ್ನ ರಾಣಿ (ಸೀತೆ) ಮತ್ತು ಸಹೋದರ (ಲಕ್ಷ್ಮಣ) ಜೊತೆಯಲ್ಲಿ ತನ್ನ ತಂದೆಯ ಕಲ್ಯಾಣವನ್ನು ದಿಕ್ಸೂಚಿ ಮಾಡುವ ದೃಷ್ಟಿಯಿಂದ ದಂಡಕ ವನದಲ್ಲಿ ವಾಸಿಸಲು ಪ್ರಾರಂಭಿಸಿದನು. ಜನಸ್ಥಾನದಿಂದ (ದಂಡಕ ಸಾಮ್ರಾಜ್ಯದ ರಾಜಧಾನಿ) ಆ ಪ್ರಬಲ ರಾಕ್ಷಸ ರಾಜನಾದ ದುಷ್ಟ ರಾವಣನು ರಾಮನ ಪತ್ನಿ ಸೀತೆಯನ್ನು ಒಯ್ದನು. (೩,೧೪೬) ರಾಘವ ರಾಮನ ಕಾಲದಲ್ಲಿ ದಂಡಕ ಕಾಡಿನ ಮೂಲಕ ದಕ್ಷಿಣದ ಮಾರ್ಗವಿತ್ತು. ರಾವಣನಿಂದ ಅಪಹರಣಕ್ಕೊಳಗಾದ ತನ್ನ ಹೆಂಡತಿಯನ್ನು ಹುಡುಕಲು ಅವನು ಈ ಮಾರ್ಗದಲ್ಲಿ ಪ್ರಯಾಣಿಸಿದನು. ಆ ಸಮಯದಲ್ಲಿ ಅರಣ್ಯವು ತಪಸ್ವಿಗಳ ಅನೇಕ ಜನವಸತಿಯಿಲ್ಲದ ಆಶ್ರಯಗಳು, ಅಲ್ಲಲ್ಲಿ ಕೂಸಾ ಹುಲ್ಲಿನ ಆಸನಗಳು ಮತ್ತು ಎಲೆಗಳ ಛತ್ರಿಗಳು ಮತ್ತು ಒಡೆದ ನೀರಿನ ಮಡಕೆಗಳು ಮತ್ತು ನೂರಾರು ನರಿಗಳಿಂದ ಸಮೃದ್ಧವಾಗಿತ್ತು. (೩,೨೭೭).
ಸಹ ನೋಡಿ
ಬದಲಾಯಿಸಿ- ದಂಡಕಾರಣ್ಯ
- ಪ್ರಾಚೀನ ಭಾರತದ ಸಾಮ್ರಾಜ್ಯಗಳು
ಉಲ್ಲೇಖಗಳು
ಬದಲಾಯಿಸಿ- ವ್ಯಾಸರ ಕೃಷ್ಣ ದ್ವೈಪಾಯನ ಮಹಾಭಾರತ, ಕಿಸರಿ ಮೋಹನ್ ಗಂಗೂಲಿ ಅವರಿಂದ ಇಂಗ್ಲಿಷ್ಗೆ ಅನುವಾದಿಸಲಾಗಿದೆ
- ವಾಲ್ಮೀಕಿಯ ರಾಮಾಯಣ