ತೊಂಬಟ್ಟು

ಭಾರತ ದೇಶದ ಗ್ರಾಮಗಳು


ತೊಂಬಟ್ಟು, ಇದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಒಂದು ಗ್ರಾಮ. ಇದು ಉಡುಪಿ ಜಿಲ್ಲೆಯ ಉತ್ತರ ದಿಕ್ಕಿನಿಂದ ೪೫ ಕಿಲೋಮೀಟರ್, ಕುಂದಾಪುದಿಂದ ೨೬ ಕಿಲೋಮೀಟರ್ ಹಾಗೂ ಬೆಂಗಳೂರುನಿಂದ ೪೧೦ ಕಿಲೋಮೀಟರ್ ದೂರದಲ್ಲಿದೆ. ಕೋಟ, ಉಡುಪಿ, ಕಾರ್ಕಳ, ಸಾಗರ ಇವು ಈ ಸ್ಥಳಕ್ಕೆ ಹತ್ತಿರವಿರುವ ಪ್ರದೇಶವಾಗಿದೆ. ತೊಂಬಟ್ಟು ಜಲಪಾತವು ಅರಬ್ಬೀ ಸಮುದ್ರದ ಪಶ್ಚಿಮ ದಿಕ್ಕಿನಲ್ಲಿದೆ. ಇದರ ಪೂರ್ವ ದಿಕ್ಕಿನಲ್ಲಿ ಪಶ್ಚಿಮ ಘಟ್ಟಗಳಿವೆ. ತೊಂಬಟ್ಟು ಜಲಪಾತವು ಭತ್ತದ ಗದ್ದೆ ಮತ್ತು ತೆಂಗಿನ ತೋಟಗಳಿಂದ ಹಾಗೂ ದಟ್ಟವಾದ ಅರಣ್ಯ ಭೂಮಿ, ಗುಡ್ಡಗಾಡು ಪ್ರದೇಶಗಳಿಂದ ಕೂಡಿದೆ. ಪ್ರತಿ ವರ್ಷ ಈ ಸ್ಥಳದಲ್ಲಿ ಜೂನ್ ತಿಂಗಳಿನಿಂದ ಅಕ್ಟೋಬರ್ ತಿಂಗಳವರೆಗೆ ಅಧಿಕ ಮಳೆಯಾಗುತ್ತದೆ.

ತೊಂಬಟ್ಟು
ಹಳ್ಳಿ
ತೊಂಬಟ್ಟು is located in Karnataka
ತೊಂಬಟ್ಟು
ತೊಂಬಟ್ಟು
Location in Karnataka, India
Coordinates: 13°39′51.4″N 74°59′10.3″E / 13.664278°N 74.986194°E / 13.664278; 74.986194
Country ಭಾರತ
Stateಕರ್ನಾಟಕ
Districtಉಡುಪಿ ಜಿಲ್ಲೆ
Nearest cityಕುಂದಾಪುರ
Languages
 • Officialಕನ್ನಡ, ತುಳು
Time zoneUTC+5:30 (IST)
Telephone code08259
Vehicle registrationKA-20
Nearest cityUdupi
ClimateTropical (Köppen)
ತೊಂಬಟ್ಟು ಜಲಪಾತ

ಆರ್ಥಿಕತೆ

ಬದಲಾಯಿಸಿ

ಕೃಷಿ ತೊಂಬಟ್ಟು ಗ್ರಾಮದ ಜನರ ಪ್ರಮುಖ ಆರ್ಥಿಕತೆಯಾಗಿದೆ. ಅಕ್ಕಿ, ತೆಂಗಿನಕಾಯಿ, ಅಡಿಕೆ ಮತ್ತು ಗೇರುಬೀಜಗಳನ್ನು ಇಲ್ಲಿ ಬೆಳೆಸಲಾಗುತ್ತದೆ. ರಬ್ಬರ್ ಕೂಡ ಇಲ್ಲಿನ ಪ್ರಮುಖ ಬೆಳೆಯಾಗಿದೆ.

 
ತೊಂಬಟ್ಟು ನದಿ

ವಾರಾಹಿ ನದಿ

ಬದಲಾಯಿಸಿ

ವಾರಾಹಿ ನದಿಯನ್ನು ಸ್ಥಳೀಯ ಜನರು ಬಾಗಿಮನೆ ನದಿ ಅಥವಾ ಮಚಟ್ಟು ನದಿ [] ಅಥವಾ ಹಾಲಾಡಿ ನದಿ [] ಎಂದು ಕರೆಯುತ್ತಾರೆ. ಈ ನದಿಯು ಗ್ರಾಮದ ಉತ್ತರ ದಿಕ್ಕಿನಲ್ಲಿ ಹರಿದು, ನದಿದಡದ ಅಡಿಕೆ ತೋಟಗಳಿಗೆ ನೀರಾವರಿಯ ಮೂಲವಾಗಿದೆ. ಬಸ್ರೂರು ಗ್ರಾಮವನ್ನು ಹಾದು ನಂತರ ಕುಂದಾಪುರದ ಬಳಿ ವಾರಾಹೀ ನದಿಯು ಅರಬ್ಬೀ ಸಮುದ್ರವನ್ನು ಸೇರುತ್ತದೆ. ಮಾಸ್ತಿಕಟ್ಟೆಯ [] ಬಳಿ ವಾರಾಹಿ ನದಿಗೆ ಅಡ್ಡಲಾಗಿ ಮಣಿ ಅಣೆಕಟ್ಟನ್ನು ನಿರ್ಮಿಸಿದ ನಂತರ ಈ ನದಿಯ ಹರಿವು ಬಹಳ ಕಡಿಮೆಯಾಗಿದೆ. ಈ ಅಣೆಕಟ್ಟು ತೊಂಬಟ್ಟು ಗ್ರಾಮಕ್ಕೆ ಸಮೀಪದಲ್ಲಿದೆ.

ಸಸ್ಯ ಮತ್ತು ಪ್ರಾಣಿ

ಬದಲಾಯಿಸಿ

ತೊಂಬಟ್ಟು ಜಲಪಾತವು ಪಶ್ಚಿಮ ಘಟ್ಟಗಳಿಂದ ಕೂಡಿದ್ದು ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿದೆ. ಈ ಸ್ಥಳದಲ್ಲಿ ವಿವಿಧ ರೀತಿಯ ಸಸ್ಯ ಮತ್ತು ಪ್ರಾಣಿ ಪಕ್ಷಿಗಳು ಕಂಡು ಬರುತ್ತದೆ. ಕೊಲ್ಲೂರು, ಅಮಾಸೆಬೈಲು ಇವು ಸುತ್ತಮುತ್ತಲಿನ ಪ್ರದೇಶಗಳಾಗಿವೆ. ಚಿರತೆ, ಹುಲಿ, ಕಾಡೆಮ್ಮೆ ಮತ್ತು ನಾಗರ ಹಾವುಗಳು ಈ ಕಾಡಿನಲ್ಲಿ ಕಂಡುಬರುತ್ತವೆ. ಅಪರೂಪದ ಬೀಟೆಮರ ಇಲ್ಲಿ ನೋಡಲು ಸಿಗುತ್ತದೆ. ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯವು ಜಲಪಾತದ ಪೂರ್ವದಿಕ್ಕಿನಲ್ಲಿದೆ.

ಕಲೆ ಮತ್ತು ಸಂಸ್ಕೃತಿ

ಬದಲಾಯಿಸಿ

ಯಕ್ಷಗಾನ ಇಲ್ಲಿನ ಮುಖ್ಯ ಕಲೆಯಾಗಿದೆ. ಇದು ನೃತ್ಯ-ನಾಟಕಗಳಿಂದ ಕೂಡಿದ್ದು ೬-೮ ಗಂಟೆಗಳ ಕಾಲ ನಡೆಯುತ್ತದೆ. ಪ್ರತಿವರ್ಷ ನವಂಬರ್ ನಿಂದ ಮೇ ತಿಂಗಳವರೆಗೆ ಉಡುಪಿಯ ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ಯಕ್ಷಗಾನ ನಡೆಯುತ್ತದೆ. ಇಲ್ಲಿ ಶ್ರೀ ಮಹಾಗಣಪತಿ ಭಜನಾ ಮಂಡಳಿ, ತೊಂಬಟ್ಟು ಎಂಬ ಭಜನಾ ಮಂದಿರವಿದ್ದು, ಅನೇಕ ಕಾರ್ಯಕ್ರಮಗಳು ನಡೆಯುತ್ತವೆ.

ಶಿಕ್ಷಣ ಸಂಸ್ಥೆ

ಬದಲಾಯಿಸಿ
  • ವರಸಿದ್ದಿವಿನಾಯಕ ಪದವಿಪರ್ವೂ ಕಾಲೇಜು, ಕೇರಾಡಿ
  • ಕೆನರಾ ಕಾಲೇಜ್ ಅ‌ಫ್ ನರ್ಸಿಂಗ್
  • ಮೂಡಲಾಕಟ್ಟೆ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ
  • ಮದರ್ ತೆರೆಸಾ ಸ್ಕೂಲ್ ಮತ್ತು ಶಂಕರನಾರಾಯಣ ಕಾಲೇಜು
  • ಸರ್ಕಾರಿ ಪ್ರೌಢಶಾಲೆ, ಅಮಾವಾಸೆಬೈಲು

ಉಲ್ಲೇಖಗಳು

ಬದಲಾಯಿಸಿ
  1. https://books.google.com/books?id=C8h2lSmvyMUC&printsec=frontcover&dq=halady+kundapura&source=bl&ots=CnmapQTeS1&sig=pELrBSMZ0NbkHiGqYYWFjPhpFEA&hl=en&sa=X&ei=hncWUP34H4-srAeHvYD4Cg&redir_esc=y#v=onepage&q=haladi&f=false
  2. Geology of K<arnataka by B. P. Radhakrishna, R. Vaidyanadhan.Pub:Geological Survey of India (1994) 2nd print. Page 325.[೧]
  3. Forest biodiversity, Volume 1 by Sadasivam Kannaiyan.Associated Pub.Co. (2008) Page.127. [೨]