ಗೇರುಮರ
Ripe cashew fruit
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
A. occidentale
Binomial name
Anacardium occidentale

ದಕ್ಷಿಣ ಕನ್ನಡ ಮಂಗಳೂರು, ಸಿದ್ದಾಪುರ (ಉತ್ತರ ಕನ್ನಡ) ಕೇರಳದ ಕ್ವಿಲಾನ್ ಬೀದಿಗಳಲ್ಲಿ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಗೇರುಬೀಜದ ಕಾರ್ಖಾನೆಗಳಿಗೆ ಹೋಗುವ ಮತ್ತು ಬರುವ ಅಸಂಖ್ಯ ಮಹಿಳೆಯರನ್ನು ಕಾಣಬಹುದು. ಅವರ ಚತುರ ಹಸ್ತಗಳು ಗೇರುಬೀಜದ ಸಿಪ್ಪೆಗಳನ್ನು ಸುಲಿದು,ಬೀಜಗಳನ್ನು ವಿಂಗಡಿಸುವುವು.ಹೀಗೆ ಸಂಸ್ಕರಿಸಲಾದ ಬೀಜಗಳಲ್ಲಿ ಹೆಚ್ಚಿನಂಶವನ್ನು ರಫ಼್ತು ಮಾಡಲಾಗುತ್ತದೆ.

ಕಚ್ಚಾ ಗೇರುಬೀಜವನ್ನು ಹುರಿದು, ಹೊಟ್ಟು ತೆಗೆದು ಸಿಪ್ಪೆ ಸುಲಿದುಹಾಕಿ ವರ್ಗೀಕರಿಸಲಾಗುವುದು.೨೪ ವರ್ಗಗಳ ಬೀಜಗಳಿವೆ.ಸಂಸ್ಕರಿಸಿದ ಬೀಜಗಳನ್ನು ಪ್ಯಾಕ್ ಮಾಡಿ ತಲಾ ೨೫ ಪೌಂಡ್ ಗಳ ಟಿನ್ ಗಳಲ್ಲಿ ತುಂಬಿ ರ ಗೆ ಒದಗಿಸಲಾಗುವುದು.ಪ್ಯಾಕಿಂಗ್ ಅಲ್ಲಿ ಅನುಸರಿಸಲಾಗುತ್ತಿರುವ "ವಿಟಾಪ್ಯಾಕ್"ವಿಧಾನದಿಂದ ಬೀಜಗಳನ್ನು ದೀರ್ಘ ಕಾಲದವರೆಗೆ ಸಂಗ್ರಹಿಸಬಹುದು.

ಗೇರು ದಕ್ಷಿಣ ಅಮೇರಿಕದ ಬ್ರೆಜಿಲ್ ಎಂಬಲ್ಲಿಂದ ಬಂದುದು.ಗೇರು ಮರವು ಮಾವಿನ ಮರದ ಸಂಬಂಧವನ್ನು ಪಡೆದಿರುತ್ತದೆ.ಮೊತ್ತ ಮೊದಲಿಗೆ ಸುಮಾರು ೧೬ನೇ ಶತಮಾನದಲ್ಲಿ ಪೋರ್ಚುಗೀಸರು ನಮ್ಮ ದೇಶದ ಕರಾವಳಿ ಪ್ರದೇಶದಲ್ಲಿ, ಮಳೆಗೆ ಮಣ್ಣು ಕರಗಿ ಹೋಗುವುದನ್ನು ತಡೆಯುವುದಕ್ಕೋಸ್ಕರ ತಂದಿದ್ದ ಗೇರುಮರವು ತನ್ನ ಸ್ವ ಸಾಮರ್ಥ್ಯದಿಂದ ನಮ್ಮ ದೇಶದಲ್ಲಿಯೇ ಬೇರೊರಿ ಜನರ ಮೆಚ್ಚುಗೆಯನ್ನು ಪಡೆದು ಕರಾವಳಿಯಿಂದ ಮೈದಾನ ಮತ್ತು ಪರ್ವತ ಪ್ರದೇಶಗಳಿಗೆ ಹರಡಿ, ಇಂದು ಭಾರತಕ್ಕೆ ಅತಿ ಹೆಚ್ಚಿನ ಡಾಲರ್ ಸಂಪಾದಿಸಿ ಕೊಡುವ ಎರಡನೇ ಬೆಳೆಯಾಗಿದೆ.ಮೊದಲನೆಯದು ಸಣಬು ಕೇವಲ ೪೦ವರ್ಷಗಳೊಳಗೆ ನಮ್ಮ ದೇಶದ ಗೇರುಬೀಜದ ಕಾರ್ಖಾನೆಗಳಲ್ಲಿ ೧ ಲಕ್ಷಕ್ಕೂ ಮಿಕ್ಕಿ ಕೆಲಸಗಾರರು ದುಡಿಯುತ್ತಿದ್ದಾರೆ.ಉತ್ಪತ್ತಿಯು ೫೫ ಸಾವಿರ ಟನ್ನಿನವರಗೆ ಏರಿದೆ.

ಗೇರುಮರದ ಒಂದು ವಿಶೇಷವೆಂದರೆ ಇದರ ಬೀಜಗಳು ಬೇರೆ ಬೀಜಗಳಂತೆ ಬೆಳೆಯದೆ ಪ್ರತಿಯೊಂದು ಬೀಜವೂ ಹಣ್ಣಿನ ಅಡಿಭಾಗದಲ್ಲಿ ಹೊರಗೆ ಇರುತ್ತದೆ. ಈ ಹಣ್ಣು ಕೂಡಾ ತಿನ್ನಲು ರುಚಿಯಾಗಿದ್ದು,ಪ್ರೊಟೀನ್ ಮತ್ತು ಇತರ ಲವಣಾಂಶಗಳೊಡನೆ ಎಸ್ಕೋರ್ಬಿಕ್ ಆಸಿಡ್ ಹೊಂದಿರುತ್ತದೆ.

ಗೇರುವಿನ ವಿವಿಧ ತಳಿಗಳು

ಬದಲಾಯಿಸಿ
  1. ಉಳ್ಳಾಲ-೧
  2. ಉಳ್ಳಾಲ-೨
  3. ಉಳ್ಳಾಲ-೩
  4. ಉಳ್ಳಾಲ-೪

ಗೇರು ಮಾರುಕಟ್ಟೆಯ ದೃಷ್ಟಿಯಿಂದ ಅತೀ ಪ್ರಾಮುಖ್ಯ ಮಾತ್ರವಲ್ಲದೆ ಹಲವು ತರದ ಉಪಯೋಗಗಳುಳ್ಳ ಬೆಳೆ.ಗೇರುಹಣ್ಣು ಬಡವರ ಹಾಗೂ ದನಕರುಗಳ ಆಹಾರ ಪದಾರ್ಥವೂ ಆಗಿರುವುದಲ್ಲದೆ,ಹಲವು ತರದ ಪಾನಗಳಲ್ಲಿಯೊ ಉಪಯೋಗಿಸಲಾಗುತ್ತದೆ.

ನಾಟಿ ಮಾಡುವ ವಿಧಾನ

ಬದಲಾಯಿಸಿ

ಜೂನ್ -ಜುಲಾಯಿ ತಿಂಗಳುಗಳು ಗೇರು ಸಸಿಗಳನ್ನು ನೆಡಲು ಅತ್ಯುತ್ತಮವಾದ ಕಾಲ .ಗೇರು ಬೆಳೆಯಬೇಕೆಂದಿರುವ ಪ್ರದೇಶದಲ್ಲಿ ೨೪'*೨೪'(೭.೫ಮಿ.*೭.೫ಮಿ.)ಅಂತರದಲ್ಲಿ ಎರಡು ಘನ ಅಡಿ ಅಳತೆಯ ಗುಂಡಿಗಳನ್ನು ತೆಗೆದು ಹಸಿರು ಸೊಪ್ಪು ಹಾಗೂ ಮೇಲ್ಮಣ್ಣನ್ನು ಹಾಕಿ ಮುಚ್ಚಬೇಕು ಮತ್ತು ಸಸಿಗಳನ್ನು ಪಾಲಿಥಿನ್ ಚೀಲದಿಂದ ತೆಗೆದು ಭೂಮಿಯಲ್ಲಿ ಸಾಕಷ್ಟು ತೇವಾಂಶವಿದ್ದಾಗ ನಾಟಿ ಮಾಡಬೇಕು.ಗೂಟಕಟ್ಟಿದ ಗಿಡಗಳನ್ನು ನೆಡುವಾಗ ಬೇರುಗಳಿಗೆ ಹೆಚ್ಚು ಹಾನಿ ಉಂಟಾಗದಂತೆ ಬೇರಿನ ಸುತ್ತಲು ಮಣ್ಣನ್ನು ಸಡಿಲವಾಗಿ ತುಂಬಬೇಕು.ಗೇರು ಗಿಡದ ಸುತ್ತಲು೫-೬ ಅಡಿ ಪ್ರದೇಶದಲ್ಲಿ ಬೇರೆ ಯಾವುದೇ ಗಿಡಗಳು ಬೆಳೆಯದಂತೆ ನೋಡಿಕೊಳ್ಳಬೇಕು.[]

ಉಲ್ಲೇಖ

ಬದಲಾಯಿಸಿ
  1. ಕ್ರೃಷಿ ವಿಕಾಸ,ಕಜೆಕಾರು ನೇಮಿರಾಜ ಕೊಂಡೆ,ಪುಟ ಸಂಖ್ಯ ೭


"https://kn.wikipedia.org/w/index.php?title=ಗೇರುಮರ&oldid=1034400" ಇಂದ ಪಡೆಯಲ್ಪಟ್ಟಿದೆ