ಕೊಲ್ಲೂರು

ಭಾರತದಲ್ಲಿ ಹಳ್ಳಿ


ಕೊಲ್ಲೂರು ಉಡುಪಿ ಜಿಲ್ಲೆಯ, ಬೈಂದೂರು ತಾಲೂಕಿನಲ್ಲಿರುವ ಒಂದು ಪುಟ್ಟ ಊರು ಬೈಂದೂರುನಿಂದ ೨೭ ಕಿ.ಮೀ ಹಾಗೂ ಮಂಗಳೂರು ನಗರದಿಂದ ಸುಮಾರು 140 kilometres (87 mi) ದೂರದಲ್ಲಿದೆ. ಈ ಊರು ಪಶ್ಚಿಮ ಘಟ್ಟಗಳ ಅಡಿಯಲ್ಲಿದ್ದು, ಇಲ್ಲಿರುವ ಮೂಕಾಂಬಿಕ ದೇವಾಲಯ ಒಂದು ಪ್ರಸಿದ್ದ ಹಿಂದೂ ಪುಣ್ಯಕ್ಷೇತ್ರವಾಗಿದೆ. ಇದನ್ನು ಕೊಲ್ಲಾಪುರ ಎಂದೂ ಕರೆಯಲಾಗುತ್ತದೆ. ಈ ಪ್ರದೇಶವನ್ನು ದೇವಿಯು ಮೂಕಾಸುರನೆಂಬ ರಾಕ್ಷಸನನ್ನು ಕೊಂದ ಸ್ಥಳವೆಂದು ಹೇಳಲಾಗುತ್ತದೆ.

ಕೊಲ್ಲೂರು
ಕೊಲ್ಲೂರು
village

ತಲಪುವ ಮಾರ್ಗ ಬದಲಾಯಿಸಿ

ಸಾಗರದಿಂದ ಕೊಲ್ಲೂರು ತಲಪುವ ಮಾರ್ಗ ಬದಲಾಯಿಸಿ

 
ಹಸಿರುಮಕ್ಕಿ- ಸಾಗರದಿಂದ ಕೊಲ್ಲೂರಿಗೆ ಹೋಗುವಾಗ ಲಾಂಚಿನ ಮೂಲಕ ದಾಟುವ ಜಾಗ

ಸಾಗರದಿಂದ ಆವಿನಹಳ್ಳಿಯ ಮಾರ್ಗವಾಗಿ ರಸ್ತೆಯಲ್ಲಿ ೨೪.೮ ಕಿ.ಮೀ. ದೂರವಿರುವ ಹಸಿರುಮಕ್ಕಿ ಎಂಬ ಶರಾವತಿ ಹಿನ್ನೀರಿನ ಊರಿಗೆ ತಲುಪಬೇಕು. ಅಲ್ಲಿಂದ ಲಾಂಚಿನ ಮೂಲಕ ದಾಟಿ ಸಾಗಬೇಕು. ಹಸಿರುಮಕ್ಕಿಯಿಂದ ಕೊಲ್ಲೂರಿಗೆ ಇರುವ ದೂರ ರಸ್ತೆಯಲ್ಲಿ ೩೯.೨,ಕಿಮೀ,

 
ಕೊಲ್ಲೂರು ಮೋಕಾಂಬಿಕ ದೇವಾಲಯ