ತುಕ್ಕು
ತುಕ್ಕು ಕಬ್ಬಿಣದ ಹಲವು ಆಕ್ಸೈಡ್‌ಗಳಿಗೆ ಬಳಸಲಾಗುವ ಒಂದು ಸಾಮಾನ್ಯ ಪದ. ಕಬ್ಬಿಣವು ನೀರು ಅಥವಾ ತೇವಾಂಶವಿರುವ ಪರಿಸರಗಳಲ್ಲಿ ಆಮ್ಲಜನಕದೊಂದಿಗೆ ರಾಸಾಯನಿಕ ಕ್ರಿಯೆ ನಡೆಸುವುದರ ಫಲಸ್ವರೂಪವೇ ತುಕ್ಕು. ರಸಾಯನಶಾಸ್ತ್ರದ ಪರಿಭಾಷೆಯಲ್ಲಿ ಹೇಳುವುದಾದರೆ ತುಕ್ಕು Fe2O3·nH2O ಮತ್ತು (FeO(OH), Fe(OH)3. ಕಬ್ಬಿಣ ಮತ್ತು ಅದರ ಮಿಶ್ರಲೋಹಗಳು ( ಉದಾ. ಉಕ್ಕು) ಈ ರಾಸಾಯನಿಕೆ ಕ್ರಿಯೆಗೆ ಒಳಪಟ್ಟು ನಶಿಸಿಹೋಗುತ್ತವೆ. ಇತರ ಕೆಲ ಲೋಹಗಳು ಸಹ ಇಂತಹ ಕ್ರಿಯೆಯ ಪರಿಣಾಮವನ್ನು ಅನುಭವಿಸಿದರೂ ಅದನ್ನು ತುಕ್ಕು ಎಂದು ಕರೆಯಲಾಗುವುದಿಲ್ಲ. ತೇವಾಂಶ ಮತ್ತು ಆಮ್ಲಜನಕವಿರುವ ಪರಿಸರದಲ್ಲಿ ಕಬ್ಬಿಣದ ಯಾವ ರಾಶಿಯಾದರೂ ತುಕ್ಕು ಹಿಡಿಯಲ್ಪಟ್ಟು ಪೂರ್ಣವಾಗಿ ನಾಶವಾಗುತ್ತದೆ. ನೀರಿನಲ್ಲಿ ಉಪ್ಪಿನ ಅಂಶವಿದ್ದರೆ (ಉದಾ. ಸಮುದ್ರದ ನೀರು) ತುಕ್ಕು ಹಿಡಿಯುವಿಕೆಯ ಕ್ರಿಯೆ ಇನ್ನಷ್ಟು ತೀವ್ರವಾಗಿರುತ್ತದೆ. ತುಕ್ಕು ಹಿಡಿತಯುವಿಕೆಯನ್ನು ತಡೆಯಲು ಹಲವು ವಿಧಾನಗಳಿವೆ. ಉಕ್ಕನ್ನು ಸ್ಟೈನ್‌ಲೆಸ್ ಸ್ಟೀಲ್ ಆಗಿ ಪರಿವರ್ತಿಸುವುದು ಒಂದು ಉಪಾಯ. ಉಳಿದಂತೆ ಸತುವಿನ ಲೇಪನ ( ಗ್ಯಾಲ್ವನೈಸೇಷನ್ ) ಕೂಡ ಕಬ್ಬಿಣವನ್ನು ತುಕ್ಕು ಹಿಡಿಯದಂತೆ ಕಾಪಾಡಿಕೊಳ್ಳುವ ಒಂದು ಮಾರ್ಗೋಪಾಯವಾಗಿದೆ.
ಬಾಹ್ಯ ಸಂಪರ್ಕಕೊಂಡಿಗಳು
ಬದಲಾಯಿಸಿ- Corrosion Cost ತುಕ್ಕಿನ ಬಗ್ಗೆ ಅಧ್ಯಯನ
- corrosion case studies ತುಕ್ಕಿನ ವಿಶ್ಲೇಷಣೆ
- Corrosion Doctors ತುಕ್ಕು
- Metal Corrosion Rust Archived 2009-08-15 ವೇಬ್ಯಾಕ್ ಮೆಷಿನ್ ನಲ್ಲಿ. ತುಕ್ಕು ಎಂದರೇನು?