ಕಂಪ್ಯೂಟರ್ ಗೇಮ್‌ಗಾಗಿ, ಡೆಲ್ಟಾ ಫೋರ್ಸ್‌ (ವೀಡಿಯೊ ಗೇಮ್)ಅನ್ನು ಗಮನಿಸಿ. ಚಲನಚಿತ್ರಕ್ಕಾಗಿ, ದ ಡೆಲ್ಟಾ ಫೋರ್ಸ್‌ (ಚಲನಚಿತ್ರ)ಅನ್ನು ಗಮನಿಸಿ. ವಿಯೆಟ್ನಾಂ ವಾರ್ ಎರಾ ಸ್ಪೆಶಲ್ ಫೋರ್ಸಸ್ ಯೂನಿಟ್ ಪ್ರಾಜೆಕ್ಟ್ ಡೆಲ್ಟಾಅನ್ನು ಗಮನಿಸಿ.

1ನೇ ಸ್ಪೆಶಲ್ ಫೋರ್ಸಸ್ ಆಪರೇಶನಲ್ ಡಿಟ್ಯಾಚ್ಮೆಂಟ್-ಡೆಲ್ಟಾ (1ನೇ SFOD-D ) ಒಂದು ಪ್ರಮುಖ ಸ್ಪೆಶಲ್ ಆಪರೇಶನ್ಸ್ ಫೋರ್ಸ್‌ (SOF) ಆಗಿದೆ ಹಾಗೂ ಜಾಯಿಂಟ್ ಸ್ಪೆಶಲ್ ಆಪರೇಶನ್ಸ್ ಕಮಾಂಡ್‌ (JSOC)ನ ಒಂದು ಅವಿಭಾಜ್ಯ ಅಂಗವಾಗಿದೆ. ಇದು ಸಾಮಾನ್ಯವಾಗಿ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಡಿಫೆನ್ಸ್‌‌ನಿಂದ ಡೆಲ್ಟಾ , ಡೆಲ್ಟಾ ಫೋರ್ಸ್‌ ಅಥವಾ ಕೊಂಬ್ಯಾಟ್ ಅಪ್ಲಿಕೇಶನ್ಸ್ ಗ್ರೂಪ್‌ (CAG) ಎಂದು ಕರೆಯಲ್ಪಡುತ್ತದೆ. ಇದು ಅಮೆರಿಕ ಸಂಯುಕ್ತ ಸಂಸ್ಥಾನದ ಮೊದಲ ಭಯೋತ್ಪಾದನಾ-ನಿಗ್ರಹ ಘಟಕವಾಗಿದೆ.

1st Special Forces Operational Detachment-Delta (Airborne)
U.S. Army Special Operations Command SSI (1989-2015).svg
US Army Special Operations Command patch worn by Delta
ಸಕ್ರಿಯ November 21, 1977 - present
ದೇಶ  United States
ಶಾಖೆ Emblem of the United States Department of the Army.svg US Army
Type United States Special Operations Forces
ಪಾತ್ರ Versatile Special Operations Force, mainly trained for Counter-Terrorism
ಗಾತ್ರ Unknown
Part of United States Special Operations Command Insignia.svg United States Special Operations Command
United States Army Special Operations Command
20px Joint Special Operations Command
Garrison/HQ Fort Bragg, North Carolina (35.12047,-79.363775)
Nickname Delta Force, Delta
ಕದನಗಳು Operation Eagle Claw
Operation Urgent Fury
Operation Just Cause
Operation Acid Gambit
Operation Desert Storm
Operation Restore Hope
Operation Gothic Serpent
Operation Enduring Freedom
Operation Iraqi Freedom

ಡೆಲ್ಟಾ ಫೋರ್ಸ್‌ನ ಪ್ರಾಥಮಿಕ ಕಾರ್ಯಗಳೆಂದರೆ - ಭಯೋತ್ಪಾದನಾ-ನಿಗ್ರಹ ಕಾರ್ಯ, ಬಂಡುಕೋರ ನಿಗ್ರಹ ಕಾರ್ಯ ಮತ್ತು ರಾಷ್ಟ್ರೀಯ ಮಧ್ಯಪ್ರವೇಶ ಕಾರ್ಯಾಚರಣೆಗಳು. ಆದರೂ ಇದು ಒತ್ತೆಯಾಳುಗಳನ್ನು ಬಿಡಿಸುವ ಮತ್ತು ದಾಳಿಗಳನ್ನು ನಡೆಸುವುದು ಸೇರಿದಂತೆ ಅಥವಾ ಅದಕ್ಕೆ ಸೀಮಿತವಾಗಿಲ್ಲದೇ, ಅನೇಕ ಗೋಪ್ಯ ಕಾರ್ಯಾಚರಣೆಗಳನ್ನು ನಿರ್ವಹಿಸುವ, ಬಹುಮುಖ ಸಾಮರ್ಥ್ಯವುಳ್ಳ ತಂಡವಾಗಿದೆ. [೧]

ಪರಿವಿಡಿ

ಇತಿಹಾಸಸಂಪಾದಿಸಿ

1970ರ ದಶಕದಲ್ಲಿನ ಅಸಂಖ್ಯಾತ, ಹೆಚ್ಚು-ಪ್ರಚಾರ ಪಡೆದಭಯೋತ್ಪಾದನಾ ಘಟನೆಗಳು U.S. ಸರ್ಕಾರಕ್ಕೆ ಭಯೋತ್ಪಾದನಾ-ನಿಗ್ರಹ ಘಟಕವನ್ನು ರಚಿಸಲು ಆಸ್ಪದ ಕಲ್ಪಿಸಿತು.

ಪ್ರಮುಖ ಮಿಲಿಟರಿ ಮತ್ತು ಸರ್ಕಾರಿ ಅಧಿಕಾರಿಗಳು ಈ ಮಾದರಿಯ ಘಟಕವನ್ನು ರಚಿಸಬೇಕೆಂದು 60ರ ದಶಕದ ಆರಂಭದಲ್ಲೇ ಸೂಚಿಸಿದ್ದರು. US ಆರ್ಮಿ ಸ್ಪೆಶಲ್ ಫೋರ್ಸಸ್‌‌ನ ಸದಸ್ಯ ಚಾರ್ಲ್ಸ್ ಬೆಕ್ವಿತ್‌[[]] ಬ್ರಿಟಿಷ್ ಸ್ಪೆಶಲ್ ಏರ್ ಸರ್ವಿಸ್‌ (22 SAS ತುಕಡಿ‌)ಯೊಂದಿಗೆ ವಿನಿಮಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಹಿಂದಿರುಗಿದ ನಂತರ ಬೆಕ್ವಿತ್, SAS-ರೀತಿಯ ಘಟಕವನ್ನು ಹೊಂದಿಲ್ಲವೆಂಬುದರ ಬಗ್ಗೆ ಗಮನಸೆಳೆಯುವ ಸೈನ್ಯದ ಶಸ್ತ್ರಭೇದ್ಯತೆಯ ಬಗ್ಗೆ ಸವಿವರ ವರದಿಯೊಂದನ್ನು ಪ್ರಸ್ತುತಪಡಿಸಿದರು. U.S. ಆರ್ಮಿ ಸ್ಪೆಶಲ್ ಫೋರ್ಸಸ್‌ ಆ ಸಂದರ್ಭದಲ್ಲಿ ಅಸಂಪ್ರದಾಯಿಕ ಯುದ್ಧದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿತು. ಆದರೆ ಬೆಕ್ವಿತ್‌ ನೇರ ಕ್ರಮ ಮತ್ತು ಭಯೋತ್ಪಾದನಾ-ನಿಗ್ರಹ ಕಾರ್ಯದಲ್ಲಿ ಪರಿಣಿತವಾದ ಸ್ವಯಮಾಧಿಕಾರದ ತಂಡಗಳ ಅವಶ್ಯಕತೆ ಇದೆಯೆಂದು ಮನಗಂಡರು. ಅವರು ಮಿಲಟರಿ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು. ಅವರು ಆರಂಭದಲ್ಲಿ ಸ್ಪೆಶಲ್ ಫೋರ್ಸಸ್ ಶ್ರೇಣಿವ್ಯವಸ್ಥೆಯಿಂದ ಹೊರಗೆ ಘಟಕವೊಂದನ್ನು ರಚಿಸಲು ವಿರೋಧವನ್ನು ವ್ಯಕ್ತಪಡಿಸಿದರು. ಅಂತಿಮವಾಗಿ 70ರ ದಶಕದ ಮಧ್ಯದಲ್ಲಿ ಭಯೋತ್ಪಾದನೆಯು ಹೆಚ್ಚಿದ್ದರಿಂದ ಪೆಂಟಗಾನ್ ಅಧಿಕಾರಿಗಳು ಬೆಕ್ವಿತ್‌ಗೆ ಘಟಕವನ್ನು ರಚಿಸುವಂತೆ ಕೇಳಿಕೊಂಡರು.[೨]

ಬೆಕ್ವಿತ್‌ ಅವರ ಹೊಸ ಘಟಕ ಕಾರ್ಯಾಚರಣೆ ಸಿದ್ಧವಾಗಲು ಸುಮಾರು 24 ತಿಂಗಳು ಬೇಕಾಗಬಹುದೆಂದು ಅಂದಾಜಿಸಿದರು. ಅದೇ ಸಂದರ್ಭದಲ್ಲಿ 5ನೇ ಸ್ಪೆಶಲ್ ಫೋರ್ಸಸ್ ಗ್ರೂಪ್‌ ಬ್ಲೂ ಲೈಟ್‌ಅನ್ನು ರಚಿಸಿತು. ಇದೊಂದು ಸಣ್ಣ ಭಯೋತ್ಪಾದನಾ ನಿಗ್ರಹ ಪಡೆಯಾಗಿದ್ದು, ಡೆಲ್ಟಾ 1980ರ ದಶಕದ ಆರಂಭದಲ್ಲಿ ಸಂಪೂರ್ಣವಾಗಿ ಕಾರ್ಯನಿರತವಾಗುವವರೆಗೆ ಚಟುವಟಿಕೆಯಿಂದಿತ್ತು.

ಡೆಲ್ಟಾ ರೂಪುಗೊಂಡ ಸ್ವಲ್ಪದರಲ್ಲಿ 1979ರ ನವೆಂಬರ್ 4ರಂದು 53 ಅಮೆರಿಕನ್ನರನ್ನು ಸೆರೆ ಹಿಡಿದು, ಇರಾನ್‌ನ ಟೆಹ್ರಾನ್‌ನಲ್ಲಿ U.S. ರಾಯಭಾರಿ ಕಛೇರಿ(ಎಂಬೆಸಿ)ಯಲ್ಲಿ ಬಂಧಿಸಿಡಲಾಯಿತು. ಡೆಲ್ಟಾವನ್ನು ಆಪರೇಶನ್ ಈಗಲ್ ಕ್ಲಾ ಕಾರ್ಯಾಚರಣೆಗೆ ಗೊತ್ತುಪಡಿಸಲಾಯಿತು ಹಾಗೂ ರಾಷ್ಟ್ರವನ್ನು ಗೋಪ್ಯವಾಗಿ ಪ್ರವೇಶಿಸಿ, 1980ರ ಎಪ್ರಿಲ್‌ನ 24-25ರ ಮತ್ತು 25-26ರ ರಾತ್ರಿಯಲ್ಲಿ ರಾಯಭಾರಿ ಕಛೇರಿಯಿಂದ ಒತ್ತೆಯಾಳುಗಳನ್ನು ಒತ್ತಾಯಪೂರ್ವಕವಾಗಿ ಬಿಡಿಸಿಕೊಂಡು ಬರುವಂತೆ ಆದೇಶಿಸಲಾಯಿತು. ಈ ಕಾರ್ಯಾಚರಣೆಯು ಹಾರಾಟ ಸಮಸ್ಯೆ ಮತ್ತು ಅವಘಡಗಳನ್ನು ಎದುರಿಸಿದರಿಂದ ವಿಫಲಗೊಂಡಿತು. ಈ ವಿಫಲತೆಯನ್ನು ಪರೀಕ್ಷಿಸಿದ ಪುನರ್ಪರಿಶೀಲನಾ ನಿಯೋಗವು ಈ ಕಾರ್ಯಾಚರಣೆಯಲ್ಲಿ 23 ಸಮಸ್ಯೆಗಳಿದ್ದವೆಂದು ಕಂಡುಹಿಡಿಯಿತು. ಅವುಗಳಲ್ಲಿ ಮುಖ್ಯವಾದವು - ವಿಮಾನ ಎದುರಿಸಿದ ಪ್ರತಿಕೂಲ ಹವಾಮಾನ, ಬಹು-ಸೇವಾ ಘಟಕಗಳ ಕಮಾಂಡರುಗಳ ನಡುವಿನ ಆದೇಶ ಮತ್ತು ನಿಯಂತ್ರಣದ ತೊಂದರೆಗಳು, ಹೆಲಿಕಾಪ್ಟರ್ ಮತ್ತು ನೆಲದಲ್ಲಿ ಇಂಧನ ತುಂಬಿಸುವ ಟ್ಯಾಂಕರ್ ವಿಮಾನದ ಮಧ್ಯೆ ಸಂಭವಿಸಿದ ಢಿಕ್ಕಿ, ಕಾರ್ಯಾಚರಣೆ ತಂಡವು ಇಂಧನ ತುಂಬಿಸುವ ಸ್ಥಳ ಬಿಡುವುದಕ್ಕಿಂತ ಮೊದಲು ಸಂಭವಿಸಿದ ಯಾಂತ್ರಿಕ ಸಮಸ್ಯೆಗಳು ಲಭ್ಯವಿರುವ ಹೆಲಿಕಾಪ್ಟರ್‌ಗಳ ಸಂಖ್ಯೆಯನ್ನು ಎಂಟರಿಂದ ಐದಕ್ಕೆ (ಕನಿಷ್ಠ ಅವಶ್ಯಕ ಪ್ರಮಾಣಕ್ಕಿಂತ ಒಂದು ಕಡಿಮೆ) ಇಳಿಸಿದವು.[೩]

ಈ ಕಾರ್ಯಾಚರಣೆಯು ವಿಫಲವಾದ ನಂತರ, U.S. ಸರ್ಕಾರವು ಅನೇಕ ಹೊಸ ಭಯೋತ್ಪಾದನಾ ನಿಗ್ರಹ ಘಟಕಗಳನ್ನು ರಚಿಸಿತು. ನೈಟ್‌ಸ್ಟಾಕರ್ಸ್‌ ಎಂದೂ ಕರೆಯುವ 160ನೇ ಸ್ಪೆಶಲ್ ಆಪರೇಶನ್ಸ್ ಏವಿಯೇಶನ್ ರೆಜಿಮೆಂಟ್‌ (ವಾಯುಗಾಮಿ)ಅನ್ನು ವಿಶೇಷವಾಗಿ ಆಪರೇಶನ್ ಈಗಲ್ ಕ್ಲಾದಂತಹ ಕಾರ್ಯಾಚರಣೆಗಳಿಗೆ ಡೆಲ್ಟಾ ಒಳನುಸುಳುವಿಕೆಗೆ/ಹೊರನುಸುಳುವಿಕೆಗೆ ರೂಪಿಸಲಾಯಿತು. ನೌಕಾದಳದ SEAL ಟೀಮ್ ಸಿಕ್ಸ್‌ಅನ್ನು ಸಮುದ್ರದ ಕಾರ್ಯಾಚರಣೆಗಳಿಗಾಗಿ ರಚಿಸಲಾಯಿತು. ಜಾಯಿಂಟ್ ಸ್ಪೆಶಲ್ ಆಪರೇಶನ್ಸ್ ಕಮಾಂಡ್‌ಅನ್ನು U.S. ಮಿಲಿಟರಿಯ ವಿವಿಧ ವಿಭಾಗಗಳ ಭಯೋತ್ಪಾದನಾ ನಿಗ್ರಹ ಘಟಕಗಳ ಮಧ್ಯೆ ಜಂಟಿ ತರಬೇತಿಯನ್ನು ನಿಯಂತ್ರಿಸಲು ಮತ್ತು ಮೇಲ್ವಿಚಾರಣೆ ನಡೆಸಲು ರೂಪಿಸಲಾಯಿತು.

ಸಂಘಟನೆ ಮತ್ತು ರಚನೆಸಂಪಾದಿಸಿ

ಈ ಘಟಕವು US ಆರ್ಮಿ ಸ್ಪೆಶಲ್ ಆಪರೇಶನ್ಸ್ ಕಮಾಂಡ್‌ (USASOC)ನ ಸಂಘಟನೆಯಡಿಯಲ್ಲಿದೆ. ಆದರೆ ಇದು ಜಾಯಿಂಟ್ ಸ್ಪೆಶಲ್ ಆಪರೇಶನ್ಸ್ ಕಮಾಂಡ್‌ (JSOC)ನಿಂದ ನಿಯಂತ್ರಿಸಲ್ಪಡುತ್ತದೆ. ವಸ್ತುಶಃ ಘಟಕದ ಎಲ್ಲಾ ಮಾಹಿತಿಯನ್ನು ವಿಶೇಷವಾಗಿ ವರ್ಗೀಕರಿಸಲಾಗುತ್ತದೆ ಹಾಗೂ ನಿರ್ದಿಷ್ಟ ಕಾರ್ಯಾಚರಣೆಗಳ ಬಗೆಗಿನ ವಿವರಗಳು ಸಾಮಾನ್ಯವಾಗಿ ಸಾರ್ವಜನಿಕವಾಗಿ ಲಭ್ಯವಿರುವುದಿಲ್ಲ. ಕಮಾಂಡ್ ಸಾರ್ಜಂಟ್ ಮೇಜರ್ ಎರಿಕ್ L. ಹ್ಯಾನೆಯ (ನಿವೃತ್ತನಾಗಿದ್ದಾನೆ) ಪುಸ್ತಕ ಇನ್‌ಸೈಡ್ ಡೆಲ್ಟಾ ಫೋರ್ಸ್‌ಅನ್ನೂ ಒಳಗೊಂಡಂತೆ ಅನೇಕ ಮೂಲಗಳು, ಈ ಘಟಕದ ಬಲವು 800ರಿಂದ 1000 ಸಿಬ್ಬಂದಿಯನ್ನು ಹಾಗೂ ಈ ಕೆಳಗಿನ ಕಾರ್ಯಾಚರಣೆ ತಂಡಗಳನ್ನು ಒಳಗೊಂಡಿದೆ ಎಂದು ಸೂಚಿಸುತ್ತದೆ:

ವಿಶೇಷ ದಳದ ಹೆಸರುಗಳುಸಂಪಾದಿಸಿ

 • D - ಕಮಾಂಡ್ ಅಂಡ್ ಕಂಟ್ರೋಲ್(ಪ್ರಧಾನ ಕಾರ್ಯಾಲಯ)
 • E - ಕಮ್ಯನಿಕೇಶನ್ಸ್, ಇಂಟೆಲಿಜೆನ್ಸ್ ಆಂಡ್ ಅಡ್ಮಿನಿಸ್ಟ್ರೇಟಿವ್ ಸಪೋರ್ಟ್ (ಇದು ಹಣಕಾಸು, ಸೈನ್ಯ ವ್ಯವಸ್ಥಾಪನಾ ತಂತ್ರ, ವೈದ್ಯಕೀಯ ವಿಶೇಷ ದಳ,ಸಂಶೋಧನೆ ಮತ್ತು ಅಭಿವೃದ್ಧಿ, ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಇತ್ಯಾದಿಯನ್ನು ಒಳಗೊಳ್ಳುತ್ತದೆ.)
 • F - ಆಪರೇಶನಲ್ ಆರ್ಮ್ (ಕಾರ್ಯಕರ್ತರ ತಂಡಗಳು)
 • ಮೆಡಿಕಲ್ ಡಿಟ್ಯಾಚ್ಮೆಂಟ್ - ಇದು ಅಗತ್ಯ ವೈದ್ಯಕೀಯ ನೆರವನ್ನು ಒದಗಿಸಲು ಗೋಪ್ಯವಾಗಿ ಫೋರ್ಟ್ ಬ್ರ್ಯಾಗ್‌ನಲ್ಲಿ ಮತ್ತು ರಾಷ್ಟ್ರದಾದ್ಯಂತ ಇತರ ಅನೇಕ ನೆಲೆಗಳಲ್ಲಿ ವಿಶೇಷ ವೈದ್ಯರನ್ನು ಹೊಂದಿರುತ್ತದೆ.
 • ಆಪರೇಶನಲ್ ಸಪೋರ್ಟ್ ಟ್ರೂಪ್ ಅಥವಾ "ದ ಫನ್ನಿ ಪ್ಲೇಟೂನ್" - ಡೆಲ್ಟಾದ ಆಂತರಿಕ ಬೇಹುಗಾರಿಕೆ ಅಂಗವಾಗಿದೆ. ಇದು ಇಂಟೆಲಿಜೆನ್ಸ್ ಸಪೋರ್ಟ್ ಆಕ್ಟಿವಿಟಿ(ಬೇಹುಗಾರಿಕೆ ಬೆಂಬಲಿಸುವ ಚಟುವಟಿಕೆ)ಯೊಂದಿಗೆ ದೀರ್ಘ-ಕಾಲದ ವಿವಾದ/ಪೈಪೋಟಿಯನ್ನು ಹೊಂದಿತ್ತು. ಇದು ಬೇಹುಗಾರಿಕೆ ಮಾಹಿತಿ ಸಂಗ್ರಹಿಸಲು ಡೆಲ್ಟಾ ಮಧ್ಯಪ್ರವೇಶಕ್ಕೆ ಮುನ್ನವೇ ದೇಶದೊಳಕ್ಕೆ ನುಸುಳುತ್ತವೆ.
 • ಏವಿಯೇಶನ್ ಸ್ಕ್ವಾಡ್ರನ್ - ಡೆಲ್ಟಾವು ಹೆಚ್ಚಾಗಿ ಕಾರ್ಯಾಚರಣೆ ನಿಯೋಜನೆಗಳು ಮತ್ತು ತರಬೇತಿ ಕವಾಯತಿಗೆ ಸಾಗಿಸಲು ಮತ್ತು ಅಲ್ಲಿಂದ ಒಯ್ಯಲು 160ನೇ ಸ್ಪೆಶಲ್ ಆಪರೇಶನ್ಸ್ ಏವಿಯೇಶನ್ ರೆಜಿಮೆಂಟ್‌ ಮತ್ತು US ಏರ್ ಫೋರ್ಸ್(ವಾಯುದಳ)ನ್ನು ಅವಲಂಬಿಸಿದ್ದರೂ, ಈ ಘಟಕದೊಳಗೆ ಸೀಮಿತ ಆಂತರಿಕ ವಿಮಾನ ಸಾಗಣೆ ವ್ಯವಸ್ಥೆಗಾಗಿ ಒಂದು ಸಣ್ಣ ವಾಯುಯಾನ ಘಟಕವಿದೆ. ಈ ವಾಯುಯಾನ ಘಟಕವು ಹನ್ನೆರಡು AH-6 ಅಟ್ಯಾಕ್ ಮತ್ತು MH-6 ಟ್ರಾನ್ಸ್‌ಪೋರ್ಟ್ ಹೆಲಿಕಾಪ್ಟರ್‌ಗಳನ್ನು ಹೊಂದಿದೆ (ಕೆಲವೊಮ್ಮೆ ಈ ಸಂಖ್ಯೆಯು ಹೆಚ್ಚಾಗುತ್ತದೆ). ಇದರ ಪೈಲಟ್‌ಗಳನ್ನು 160ನೇ SOAR ಏರ್ ಫೋರ್ಸ್ ನೇಮಕ ಮಾಡುತ್ತದೆಯೇ ಅಥವಾ ಡೆಲ್ಟಾ ಕಾರ್ಯಕರ್ತರನ್ನು ಹೆಲಿಕಾಪ್ಟರ್ ಪೈಲಟ್‌ಗಳಾಗಿ ತರಬೇತಿ ನೀಡಲಾಗುತ್ತದೆಯೇ ಎಂಬುದು ನಿಖರವಾಗಿ ತಿಳಿದಿಲ್ಲ.
 • ಆಪರೇಶನಲ್ ರಿಸರ್ಚ್ ಸೆಕ್ಷನ್
 • ತರಬೇತಿ ದಳ

ಡೆಲ್ಟಾ ಫೋರ್ಸ್‌ನ ರಚನೆಯು ಡೆಲ್ಟಾದ ನಿರ್ಮಾತೃ ಚಾರ್ಲ್ಸ್ ಬೆಕ್ವಿತ್‌ಗೆ ಪ್ರೇರಣೆಯನ್ನು ನೀಡಿದ ಬ್ರಿಟಿಷ್ 22 ಸ್ಪೆಶಲ್ ಏರ್ ಸರ್ವಿಸ್‌ ರೆಜಿಮೆಂಟ್‌ ರೀತಿಯಲ್ಲೇ ಇದೆ. ನಾಟ್ ಎ ಗುಡ್ ಡೇ ಟು ಡೈ: ದ ಅನ್‌ಟೋಲ್ಡ್ ಸ್ಟೋರಿ ಆಫ್ ಆಪರೇಶನ್ ಅನಕೊಂಡಾ ದಲ್ಲಿ ಆರ್ಮಿ ಟೈಮ್ಸ್‌ ನ ಲೇಖಕ ಸಿಯಾನ್ ನೇಲರ್, ಡೆಲ್ಟಾ ಸುಮಾರು 1,000 ಕಾರ್ಯಕರ್ತರನ್ನು ಹೊಂದಿದೆಯೆಂದು ವಿವರಿಸುತ್ತಾನೆ.[೪] ಅವರಲ್ಲಿ ಸರಿಸುಮಾರು 250 ಮಂದಿ ಕಾರ್ಯಕರ್ತರಿಗೆ ನೇರ ಕ್ರಮ ಮತ್ತು ಸ್ಥಳಾನ್ವೇಷಣೆ ಕಾರ್ಯಾಚರಣೆಗಳನ್ನು ನಿರ್ವಹಿಸಲು ತರಬೇತಿ ನೀಡಲಾಗುತ್ತದೆ ಎಂದು ನೇಲರ್ ಬರೆದಿದ್ದಾನೆ.[೪] ಮೂರು ಮುಖ್ಯ ಕಾರ್ಯಾಚರಣೆ ಘಟಕಗಳಿವೆ:

 • A ವಾಯುದಳ ಘಟಕ
 • B ವಾಯುದಳ ಘಟಕ
 • C ವಾಯುದಳ ಘಟಕ

ಈ ವಾಯುದಳ ಘಟಕಗಳು SAS "ಸೇಬರ್ ಘಟಕದ"ದ ಸಂಘಟನೆಯನ್ನು ಆಧರಿಸಿರುತ್ತವೆ ಹಾಗೂ ಪ್ರತಿಯೊಂದು 75ರಿಂದ 85 ಕಾರ್ಯಕರ್ತರನ್ನು ಒಳಗೊಂಡಿರುತ್ತವೆ[೫]. ಪ್ರತಿ ಸೇಬರ್ ವಾಯುದಳ ಘಟಕವು ಮೂರು ಪಡೆಗಳಾಗಿ ವಿಂಗಡಿಸಲ್ಪಡುತ್ತವೆ - ಒಂದು ನೆಲೆಗಳ ಪತ್ತೆ ಮಾಡುವ/ಸ್ನೈಪರ್‌ ಸೈನ್ಯ ಹಾಗೂ ಎರಡು ನೇರ ಕ್ರಮ/ಮೇಲೆರಗುವ ಸೈನ್ಯಗಳು. ಅವು ತಂಡಗಳಲ್ಲಿ ಅಥವಾ ನಾಲ್ಕರಿಂದ ಆರು ಮಂದಿಯಷ್ಟು ಸಣ್ಣ ಗುಂಪುಗಳಲ್ಲಿ ಕಾರ್ಯನಿರ್ವಹಿಸುತ್ತವೆ.

ನೇಮಕಾತಿ ಮತ್ತು ತರಬೇತಿಸಂಪಾದಿಸಿ

ನೇಮಕಾತಿಸಂಪಾದಿಸಿ

ಹೆಚ್ಚಿನ ಹೊಸ ಯೋಧರನ್ನು ಅಮೆರಿಕ ಸಂಯುಕ್ತ ಸಂಸ್ಥಾನ ಆರ್ಮಿ ಸ್ಪೆಶಲ್ ಫೋರ್ಸಸ್‌ ಮತ್ತು 75ನೇ ರೇಂಜರ್ ರೆಜಿಮೆಂಟ್‌‌ನಿಂದ ನೇಮಕ ಮಾಡಲಾಗುತ್ತದೆ. ಕೆಲವು ಯೋಧರನ್ನು ಸೈನ್ಯದ(ಆರ್ಮಿಯ) ಇತರ ಘಟಕಗಳಿಂದ ಕರೆತರಲಾಗುತ್ತದೆ.[೬] 1990ರಲ್ಲಿ ಸೈನ್ಯವು 1ನೇ SFOD-D[೭]ಗಾಗಿ ನೇಮಕಾತಿ ಸೂಚನೆಗಳನ್ನು ಪ್ರಕಟಿಸಿತು. ಇದು ಡೆಲ್ಟಾ ಫೋರ್ಸ್‌ಅನ್ನು ಉಲ್ಲೇಖಿಸುತ್ತದೆಂದು ಹೆಚ್ಚಿನವರು ನಂಬುತ್ತಾರೆ. ಆದರೆ ಸೈನ್ಯವು ಸೇನೆಗಾಗಿ ಒಂದು ಅಧಿಕೃತ ವಿಷಯ ಹಾಳೆಯನ್ನು ಪ್ರಕಟಿಸಲಿಲ್ಲ. ಫೋರ್ಟ್ ಬ್ರ್ಯಾಗ್‌ನ ವೃತ್ತಪತ್ರಿಕೆ ಪ್ಯಾರಾಗ್ಲೈಡ್ ನಲ್ಲಿ ಪ್ರಕಟವಾದ ನೇಮಕಾತಿ ಸೂಚನೆಗಳು ಡೆಲ್ಟಾ ಫೋರ್ಸ್‌ನ ಹೆಸರನ್ನು ಸೂಚಿಸುತ್ತವೆ ಹಾಗೂ ಇದನ್ನು "U.S. ಸೈನ್ಯದ ವಿಶೇಷ ಕಾರ್ಯಾಚರಣೆಗಳ ಘಟಕವಾಗಿದ್ದು, ಹೆಚ್ಚು ವೈವಿಧ್ಯದ ವಿಶಿಷ್ಟ ವಿಶೇಷ ಕಾರ್ಯಾಚರಣೆಗಳ-ಕೌಶಲಗಳನ್ನು ಪರಿಣಾಮಕಾರಿಯಾಗಿ ಬಳಸಲು, ಶೀಘ್ರ ಪ್ರತಿಕ್ರಿಯೆ ಅಗತ್ಯವಾದ ಕಾರ್ಯಗಳನ್ನು ನಿರ್ವಹಿಸಲು ಆಯೋಜಿಸಲಾಗಿದೆ".[೮] ಎಲ್ಲ ಅರ್ಜಿದಾರರುಪುರುಷರಾಗಿರಬೇಕು, E-4ನಿಂದ E-8 ಶ್ರೇಣಿಯಲ್ಲಿರಬೇಕು, ಕನಿಷ್ಠ ಎರಡೂವರೆ ವರ್ಷಗಳ ಸೇವಾ ಅನುಭವವನ್ನು ಹೊಂದಿರಬೇಕು, 21 ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನವರಾಗಿರಬೇಕು ಹಾಗೂ ಆರ್ಮ್ಡ್ ಸರ್ವಿಸಸ್ ವೊಕೇಶನಲ್ ಆಪ್ಟಿಟ್ಯೂಡ್ ಬ್ಯಾಟರಿ ಪರೀಕ್ಷೆಯಲ್ಲಿ ಸಾಕಷ್ಟು ಹೆಚ್ಚು ಅಂಕಗಳನ್ನು ಗಳಿಸಿ,ಪ್ರವೇಶಕ್ಕೆ ಪರಿಗಣಿಸುವ ಸೂಚನಾ ಸಭೆಗೆ ಹಾಜರಿಯಾಗಬೇಕು.

ಐತಿಹಾಸಿಕ ಆಯ್ಕೆ ಪ್ರಕ್ರಿಯೆಸಂಪಾದಿಸಿ

ಎರಿಕ್ ಹ್ಯಾನೆಯ ಪುಸ್ತಕ ಇನ್‌ಸೈಡ್ ಡೆಲ್ಟಾ ಫೋರ್ಸ್‌ ಅದರ ಆರಂಭದಲ್ಲಿ ಆಯ್ಕೆಯ ಪ್ರಕ್ರಿಯೆಯನ್ನು ಸವಿವರವಾಗಿ ವರ್ಣಿಸಿದೆ. ಆಯ್ಕೆಯ ಕ್ರಮವು ಪ್ರಮಾಣಿತ ಪರೀಕ್ಷೆಗಳಿಂದ ಆರಂಭವಾಗುತ್ತಿದ್ದವು ಎಂದು ಹ್ಯಾನೆ ಬರೆದಿದ್ದಾನೆ, ಅವುಗಳೆಂದರೆ - ಪುಶ್-ಅಪ್ಸ್(ಭುಜ ಮತ್ತು ತೋಳುಗಳ ದೃಢತೆಯನ್ನು ಪರಿಶೀಲಿಸುವುದು), ಸಿಟ್-ಅಪ್ಸ್(ಉದರದ ಸ್ನಾಯುಗಳ ದೃಢತೆಯನ್ನು ಪರಿಶೀಲಿಸುವುದು) ಮತ್ತು 3-mile (4.8 km) ಓಟ. ನಂತರ ಆಯ್ಕೆಯ ಅಭ್ಯರ್ಥಿಗಳಿಗೆ ಅನೇಕ ಲ್ಯಾಂಡ್-ನ್ಯಾವಿಗೇಶನ್ ಕೋರ್ಸ್‌ಗಳನ್ನು ನಡೆಸಲಾಗುತ್ತದೆ. ಇದರಲ್ಲಿ ಅವರು 18-mile (29 km)ನಷ್ಟು ದೂರಕ್ಕೆ, ರಾತ್ರಿಯಿಡೀ, 40-pound (18 kg) ಭಾರದ ಬೆನ್ನು-ಚೀಲಗಳನ್ನು ಹೊತ್ತುಕೊಂಡು ನಡೆದುಕೊಂಡು ಸಂಚರಿಸಬೇಕಾಗಿರುತ್ತದೆ. ಪ್ರತಿ ಸಂಚಾರದಲ್ಲಿ ಬೆನ್ನು-ಚೀಲಗಳ ಭಾರವನ್ನು ಮತ್ತು ಸಂಚರಿಸಬೇಕಾದ ದೂರವನ್ನು ಹೆಚ್ಚು ಮಾಡಲಾಗುತ್ತದೆ ಹಾಗೂ ಅಷ್ಟು ದೂರವನ್ನು ಕ್ರಮಿಸಲು ತೆಗೆದುಕೊಳ್ಳುವ ಸಮಯದ ಪ್ರಮಾಣವನ್ನು ಕಡಿಮೆಗೊಳಿಸಲಾಗುತ್ತದೆ. ಕಡಿದಾದ ಭೂಪ್ರದೇಶದಲ್ಲಿ ಒಂದು ಗೊತ್ತಿರದ ಸಮಯದಲ್ಲಿ 75-pound (34 kg) ಭಾರದ ಬೆನ್ನು-ಚೀಲಗಳನ್ನು ಹೊತ್ತುಕೊಂಡು 40-mile (64 km)ನಷ್ಟು ದೂರ ನಡೆಯುವ ಮೂಲಕ ದೈಹಿಕ ಪರೀಕ್ಷೆ ಮುಗಿಯುತ್ತದೆ. ಆಯ್ಕೆಯ ಮೇಲ್ವಿಚಾರಣೆವಹಿಸಿದ ಹಿರಿಯ ಅಧಿಕಾರಿ ಮತ್ತು NCO ಮಾತ್ರ ಗೊತ್ತುಪಡಿಸಿದ ಸಮಯದ ಮಿತಿಗಳನ್ನು ನೋಡಲು ಅವಕಾಶವನ್ನು ಹೊಂದಿರುತ್ತಾರೆ. ಆದರೆ ಎಲ್ಲಾ ನಿರ್ಧರಿಸುವಿಕೆ ಮತ್ತು ಆಯ್ಕೆಯ ಕ್ರಮಗಳು ಮತ್ತು ನಿಯಮಗಳನ್ನು ಡೆಲ್ಟಾ ತರಬೇತಿ ಕೇಡರ್ ವ್ಯವಸ್ಥೆಗೊಳಿಸುತ್ತದೆ ಎಂದು ಹ್ಯಾನೆ ಬರೆದಿದ್ದಾನೆ.[೯][೧೦] ಪರೀಕ್ಷೆಯ ಮಾನಸಿಕ ಭಾಗವು ಅನೇಕ ಮನೋವೈಜ್ಞಾನಿಕ ಪರೀಕ್ಷೆಗಳಿಂದ ಆರಂಭವಾಗುತ್ತದೆ. ಅಭ್ಯರ್ಥಿಯು ನಂತರ ಡೆಲ್ಟಾ ಬೋಧಕರು, ಘಟಕದ ಮನಶ್ಶಾಸ್ತ್ರಜ್ಞರು ಮತ್ತು ಡೆಲ್ಟಾ ಕಮಾಂಡರ್‌ಗಳ ಮುಂದೆ ಪರೀಕ್ಷೆಗಾಗಿ ಹೋಗಬೇಕಾಗುತ್ತದೆ.ಅಭ್ಯರ್ಥಿಯನ್ನು ಮಾನಸಿಕವಾಗಿ ಬಳಲಿಸಬೇಕೆಂಬ ಉದ್ದೇಶದಿಂದ ಪ್ರತಿಯೊಬ್ಬರೂ ಅಭ್ಯರ್ಥಿಗೆ ಒಂದರ ಮೇಲೊಂದು ಪ್ರಶ್ನೆಗಳನ್ನು ಕೇಳುತ್ತಾರೆ ಹಾಗೂ ಆತನ ಪ್ರತಿಯೊಂದು ಪ್ರತಿಕ್ರಿಯೆ ಮತ್ತು ನಡವಳಿಕೆಯನ್ನು ಪರೀಕ್ಷಿಸುತ್ತಾರೆ. ಅಭ್ಯರ್ಥಿ ಆಯ್ಕೆಯಾಗಿದ್ದರೆ ಘಟಕದ ಕಮಾಂಡರ್ ಅವನನ್ನು ಸಂಪರ್ಕಿಸಿ ಆ ಬಗ್ಗೆ ತಿಳಿಸುತ್ತಾನೆ. ಅಭ್ಯರ್ಥಿಯು ಡೆಲ್ಟಾಕ್ಕೆ ಆಯ್ಕೆಯಾಗಿದ್ದರೆ, ಅವನು 6 ತಿಂಗಳ ತೀಕ್ಷ್ಣ ಆಪರೇಟರ್ ಟ್ರೈನಿಂಗ್ ಕೋರ್ಸ್ (OTC)ಗೆ ಒಳಪಡುತ್ತಾನೆ. ಅಲ್ಲಿ ಆತನಿಗೆ ಭಯೋತ್ಪಾದನಾ ನಿಗ್ರಹ ಮತ್ತು ಬೇಹುಗಾರಿಕೆ-ನಿಗ್ರಹ ತಂತ್ರಗಳನ್ನು ಕಲಿಸಿಕೊಡಲಾಗುತ್ತದೆ. ಇದು ಫಿರಂಗಿ, ಬಂದೂಕು ಮೊದಲಾದವುಗಳ ನಿಖರತೆ ಮತ್ತು ಇತರ ಅನೇಕ ಯುದ್ಧ ಸಾಮಗ್ರಿಗಳ ತರಬೇತಿಗಳನ್ನು ಒಳಗೊಂಡಿರುತ್ತದೆ.[೧೦]ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿಯ ಹೆಚ್ಚು ಗೋಪ್ಯವಾದ ಸ್ಪೆಶಲ್ ಆಕ್ಟಿವಿಟೀಸ್ ಡಿವಿಜನ್‌ (SAD) ಹಾಗೂ ವಿಶೇಷವಾಗಿ ಅದರ ಪ್ರಮುಖ ಸ್ಪೆಶಲ್ ಆಪರೇಶನ್ಸ್ ಗ್ರೂಪ್‌ (SOG), ಹೆಚ್ಚಾಗಿ ಕಾರ್ಯಕರ್ತರನ್ನು ಡೆಲ್ಟಾ ಫೋರ್ಸ್‌ನಿಂದ ‌ನೇಮಕ ಮಾಡುತ್ತದೆ.[೧೧]

ತರಬೇತಿಸಂಪಾದಿಸಿ

ಡೆಲ್ಟಾ ಫೋರ್ಸ್‌‌ಗೆ ಆಗಾಗ್ಗೆ ಆಸ್ಟ್ರೇಲಿಯನ್ ಸ್ಪೆಶಲ್ ಏರ್ ಸರ್ವಿಸ್‌ ರೆಜಿಮೆಂಟ್‌, ಬ್ರಿಟಿಷ್ ಸ್ಪೆಶಲ್ ಏರ್ ಸರ್ವಿಸ್‌ ಮತ್ತು ಸ್ಪೆಶಲ್ ಬೋಟ್ ಸರ್ವಿಸ್‌, ಕೆನಡಿಯನ್ ಜಾಯಿಂಟ್ ಟಾಸ್ಕ್ ಫೋರ್ಸ್‌ 2, ಪ್ರೆಂಚ್ GIGN, ಜರ್ಮನ್ GSG 9 ಹಾಗೂ ಇಸ್ರೇಲಿ ಸೇಯರೆಟ್ ಮಟ್ಕಲ್‌ ಮೊದಲಾದ ಮಿತ್ರರಾಷ್ಟ್ರಗಳ ಅಂತಹುದೇ ಘಟಕಗಳೊಂದಿಗೆ ವಿವಿಧ ಕೆಲಸಗಳಲ್ಲಿ ತರಬೇತಿ ನೀಡಲಾಗುತ್ತದೆ.[೧೨] ಈ ಘಟಕದ ಯೋಧರು FBIಯ ಹೋಸ್ಟೇಜ್ ರಿಸ್ಕ್ ಟೀಮ್ ಮತ್ತು ನೇವಿಯ DEVGRUನಂತಹ ಇತರ U.S. ಭಯೋತ್ಪಾದನಾ ನಿಗ್ರಹ ಘಟಕಗಳೊಂದಿಗೂ ತರಬೇತಿ ಮತ್ತು ವಿವಿಧ ಕೆಲಸಗಳಲ್ಲಿ ತರಬೇತಿ ಪಡೆಯಲು ಸಹಾಯ ಮಾಡಲಾಗುತ್ತದೆ.

ಸಮವಸ್ತ್ರಸಂಪಾದಿಸಿ

ಪೆಂಟಗಾನ್ ಡೆಲ್ಟಾ ಫೋರ್ಸ್‌ನ ಬಗೆಗಿನ ಮಾಹಿತಿಯನ್ನು ಬಿಗಿಯಾಗಿ ನಿಯಂತ್ರಿಸುತ್ತದೆ ಹಾಗೂ ಹೆಚ್ಚು ರಹಸ್ಯವಾದ ಘಟಕ ಮತ್ತು ಅದರ ಕಾರ್ಯಚಟುವಟಿಕೆಗಳ ಬಗ್ಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಲು ನಿರಾಕರಿಸುತ್ತದೆ. ಡೆಲ್ಟಾ ಕಾರ್ಯಕರ್ತರಿಗೆ ಹೆಚ್ಚಿನ ನಮ್ಯತೆ ಮತ್ತು ಸ್ವಾಯತ್ತೆಯನ್ನು ನೀಡಲಾಗಿರುತ್ತದೆ. ಗುರುತನ್ನು ಗೋಪ್ಯವಾಗಿಡುವುಕ್ಕಾಗಿ ಅವರು ಸಮವಸ್ತ್ರವನ್ನು ಅಪರೂಪವಾಗಿ ಧರಿಸುತ್ತಾರೆ ಹಾಗೂ ಸಾಮಾನ್ಯವಾಗಿ ಕರ್ತವ್ಯದಲ್ಲಿರುವಾಗ ಅಥವಾ ಇಲ್ಲದಿರುವಾಗಲೂ ಸಾಮಾನ್ಯ ಉಡುಪನ್ನು ಧರಿಸುತ್ತಾರೆ.[೧೦] ಅವರು ಮಿಲಿಟರಿ ಸಮವಸ್ತ್ರವನ್ನು ಧರಿಸಿರುವಾಗ ಗುರುತುಗಳನ್ನು, ಕುಲನಾಮಗಳನ್ನು ಅಥವಾ ವಿಭಾಗದ ಹೆಸರುಗಳನ್ನು ಹೊಂದಿರುವುದಿಲ್ಲ.[೧೦] ಮಿಲಿಟರಿ ಸಿಬ್ಬಂದಿಯೆಂದು ಗುರುತಿಸುವುದನ್ನು ತಪ್ಪಿಸುವುದಕ್ಕಾಗಿ ಕಾರ್ಯಕರ್ತರಿಗೆ ಸಾಮಾನ್ಯ ನಾಗರಿಕರ ಶೈಲಿಯಲ್ಲಿ ಕೂದಲು ಮತ್ತು ಗಡ್ಡವನ್ನು ಬೆಳೆಸಲು ಅವಕಾಶವಿರುತ್ತದೆ.[೧೦][೧೩]

ಕಾರ್ಯಾಚರಣೆಗಳು ಮತ್ತು ರಹಸ್ಯ ಕಾರ್ಯಗಳುಸಂಪಾದಿಸಿ

ಡೆಲ್ಟಾಗೆ ನಿಯೋಜಿಸಿದ ಹೆಚ್ಚಿನ ಕಾರ್ಯಾಚರಣೆಗಳನ್ನು ಬಹಳ ರಹಸ್ಯವಾಗಿ ವರ್ಗೀಕರಿಸಲಾಗುತ್ತದೆ ಹಾಗೂ ಅವು ಸಾರ್ವಜನಿಕರ ಗಮನಕ್ಕೆ ಬರುವುದಿಲ್ಲ. ಆದರೆ ಕೆಲವು ಕಾರ್ಯಾಚರಣೆಗಳ ವಿವರಗಳು ಸಾರ್ವಜನಿಕರಿಗೆ ತಿಳಿಯುತ್ತದೆ. ಡೆಲ್ಟಾವನ್ನು ಸಿದ್ಥತೆಯಲ್ಲಿಟ್ಟು ಕಾರ್ಯಾಚರಣೆ ಯೋಜನೆಗಳನ್ನು ಅಭಿವೃದ್ಧಿಪಡಿಸಿದ ಅನೇಕ ಸಂದರ್ಭಗಳಿವೆ. ಆದರೆ ಘಟಕವನ್ನು ವಿವಿಧ ಕಾರಣಗಳಿಗಾಗಿ ತಾತ್ಕಾಲಿಕ ಸ್ಥಗಿತಗೊಳಿಸಲಾಯಿತು. ತಿಳಿದ ಕಾರ್ಯಾಚರಣೆ ಮತ್ತು ನಿಯೋಜನೆಗಳು ಸೇರಿವೆ:

ಕೇಂದ್ರ ಅಮೆರಿಕ ಕಾರ್ಯಾಚರಣೆಗಳುಸಂಪಾದಿಸಿ

ಡೆಲ್ಟಾ ಸ್ಯಾಲ್ವಡೊರಾನ್‌ ಕ್ರಾಂತಿಕಾರಿ ಗುಂಪು ಫ್ಯಾರಬುಂದೊ ಮಾರ್ಟಿ ನ್ಯಾಷನಲ್ ಲಿಬರೇಷನ್ ಫ್ರಂಟ್‌ ಒಂದಿಗೆ ಹೋರಾಡುವುದರೊಂದಿಗೆ ಹಾಗೂ ನಿಕಾರಗುವದಲ್ಲಿ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿಆರ್ಥಿಕ ನೆರವು ನೀಡಿದ ಕಾಂಟ್ರಾಸ್‌ಗೆ ಸಹಾಯ ಮಾಡುವುದರೊಂದಿಗೆ ಕೇಂದ್ರ ಅಮೆರಿಕದಲ್ಲಿ ವ್ಯಾಪಕವಾಗಿ ಕಾರ್ಯಾಚರಣೆ ನಡೆಸಿತು.[೧೦]

ಆಪರೇಶನ್ ಅರ್ಜೆಂಟ್ ಫರಿಸಂಪಾದಿಸಿ

ಎರಡನೇ ಡೆಲ್ಟಾ ಕಾರ್ಯಾಚರಣೆಯು ಗ್ರೆನಡಾದಲ್ಲಿ ಆಪರೇಶನ್ ಅರ್ಜೆಂಟ್ ಫರಿಯ ಮೊದಲ ದಿನದ ನಸುಕಿನ ಗಂಟೆಗಳಲ್ಲಿ ಆರಂಭವಾಯಿತು. ಈ ಕಾರ್ಯಾಚರಣೆಯಲ್ಲಿ ರಿಚ್ಮಂಡ್ ಹಿಲ್ ಪ್ರಿಸನ್‌ ಮೇಲೆ ದಾಳಿ ಮಾಡಿ ಅಲ್ಲಿ ಬಂಧಿಗಳಾಗಿದ್ದ ರಾಜಕೀಯ ಕೈದಿಗಳನ್ನು ರಕ್ಷಿಸುವ ಉದ್ದೇಶ ಹೊಂದಲಾಗಿತ್ತು. ಹಳೆಯ ಹದಿನೆಂಟನೇ ಶತಮಾನದ ಕೋಟೆಯ ಅವಶೇಷದ ಮೇಲೆ ರಚಿಸಲಾದ ಈ ಜೈಲನ್ನು ಪರ್ವತದ ಇಳಿಜಾರು ಪ್ರದೇಶದಲ್ಲಿ ದಟ್ಟವಾಗಿ ಬೆಳೆದ ಕಾಡುಗಳ ಮೂಲಕ ತಲುಪಬೇಕೇ ಹೊರತು ಮೂರು ಬದಿಗಳಿಂದ ಕಾಲ್ನಡಿಗೆಯಿಂದ ತಲುಪುವುದು ಅಸಾಧ್ಯ. ನಾಲ್ಕನೇ ಬದಿಯಲ್ಲಿ ಸುತ್ತಲೂ ದೊಡ್ಡ ದೊಡ್ಡ ಮರಗಳಿರುವ ಕಿರಿದಾದ ರಸ್ತೆಯೊಂದಿದೆ. ಈ ಜೈಲಿನ ಸುತ್ತಮುತ್ತ ಹೆಲಿಕಾಪ್ಟರ್‌ ದಾಳಿ ಪಡೆಗೆ ಇಳಿದಾಣಕ್ಕೆ ಸೂಕ್ತವಾದ ಸ್ಥಳವಿಲ್ಲ. ರಿಚ್ಮಂಡ್ ಹಿಲ್ ಒಂದು ಬದಿಯಲ್ಲಿ ಕಡಿದಾದ ಕಣಿವೆಯನ್ನು ಹೊಂದಿದೆ. ಕಣಿವೆಯ ಆಚೆ ಅದರ ಮೇಲ್ಭಾಗದಲ್ಲಿ, ಎತ್ತರದ ಪ್ರದೇಶದಲ್ಲಿ ಮತ್ತೊಂದು ಹಳೆಯ ಕೋಟೆ ಫೋರ್ಟ್ ಫ್ರೆಡರಿಕ್ ಇದೆ. ಇದು ಗ್ರೆನಡಿಯನ್ ರಕ್ಷಕ-ಸೈನ್ಯವೊಂದಕ್ಕೆ ನೆಲೆಯಾಗಿದೆ. ಫೋರ್ಟ್ ಪ್ರೆಡರಿಕ್‌ನ ಈ ರಕ್ಷಕ-ಸೈನ್ಯವು ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಮೆಷಿನ್ ಗನ್‌ ಗುಂಡುಗಳನ್ನು ಹಾರಿಸುವುದರೊಂದಿಗೆ ಇಳಿಜಾರು ಪ್ರದೇಶಗಳು ಮತ್ತು ಕಂದರ ನೆಲಪ್ರದೇಶದ ಮೇಲೆ ಸುಲಭವಾದ ಹಿಡಿತವನ್ನು ಹೊಂದಿತ್ತು. ಈ ಕಣಿವೆಯಲ್ಲಿ, ಗ್ರೆನಡಿಯನ್ ರಕ್ಷಕ-ಪಡೆಯ ಬಂದೂಕುಗಳ ಕೆಳಗೆ ಡೆಲ್ಟಾ ಫೋರ್ಸ್‌‌ನ ಹೆಲಿಕಾಪ್ಟರ್‌ಗಳು ಆ ದಿನದ ಬೆಳಿಗ್ಗೆ 6:30ಕ್ಕೆ ಹಾರಾಟವನ್ನು ಆರಂಭಿಸಿದವು.[ಸೂಕ್ತ ಉಲ್ಲೇಖನ ಬೇಕು]

ಟಾಸ್ಕ್ ಫೋರ್ಸ್‌ 160ರ ಹೆಲಿಕಾಪ್ಟರ್‌ಗಳು ಕಣಿವೆಗೆ ಹಾರಿ ಜೈಲಿನತ್ತ ಅದರ ಮುಖಭಾಗವನ್ನು ತಿರುಗಿಸಿದವು. ಹೆಲಿಕಾಪ್ಟರ್‌ಗೆ ಇಳಿಯಲು ಸಾಧ್ಯವಾಗದೇ, ಡೆಲ್ಟಾ ಯೋಧರು ಹೆಲಿಕಾಪ್ಟರ್ ಬಾಗಿಲುಗಳಿಂದ ಹಗ್ಗಗಳನ್ನು ಇಳಿಬಿಟ್ಟ ಹಗ್ಗಗಳ ಮೂಲಕ ಕೆಳಗೆ ಜಾರಲು ಆರಂಭಿಸಿದರು. ಯೋಧರು ಹಗ್ಗದಿಂದ ಜಾರುತ್ತಿರುವಾಗ, ಜೈಲಿನ ಪಡೆಗಳು ಗುಂಡು ಹಾರಿಸಲು ಆರಂಭಿಸಿದ್ದರಿಂದ ಹೆಲಿಕಾಪ್ಟರ್‌ಗಳು ಮುಂಭಾಗದಿಂದ ಮಾರಕ ಪ್ರತಿ ದಾಳಿಗೆ ಸಿಲುಕಿತು; ಹಾಗೂ ಇನ್ನಷ್ಟು ವಿನಾಶಕಾರಿಯಾಗಿ ಹಿಂಭಾಗದಿಂದ ಫೋರ್ಟ್ ಫ್ರೆಡರಿಕ್‌ನ ಶತ್ರು ಸೈನ್ಯವು ಸಣ್ಣ-ಶಸ್ತ್ರಾಸ್ತ್ರ ಮತ್ತು ಮೆಷಿನ್ ಗನ್‌ಗಳಿಂದ ಮೇಲಿನಿಂದ ಕೆಳಕ್ಕೆ ಗುಂಡಿನ ದಾಳಿ ನಡೆಸಿತು. ಕೆಲವು ಗ್ರೆನಡಿಯನ್‌ ನಾಗರಿಕರ ಪ್ರಕಾರ, ಬಹಳಷ್ಟು ಹೆಲಿಕಾಪ್ಟರ್‌ಗಳು ಕಣಿವೆಯಿಂದ ಪಲಾಯನಗೈದವು. ಕನಿಷ್ಠ ಒಂದು ಉದಾಹರಣೆಯಲ್ಲಿ, ಒಬ್ಬ ಹೆಲಿಕಾಪ್ಟರ್ ಪೈಲಟ್ ಯಾವುದೇ ಆದೇಶಗಳಿಲ್ಲದೇ ಹಿಂದಕ್ಕೆ ತಿರುಗಿ, ದಾಳಿ ನಡೆಸಲು ನಿರಾಕರಿಸಿದ. ಡೆಲ್ಟಾದ ಸದಸ್ಯರು ಈ ನೈಟ್‌ಸ್ಟಾಕರ್ ಪೈಲಟನ್‌ನ ವಿರುದ್ಧ ಹೇಡಿತನದ ಆರೋಪಗಳ ದೂರು ನೀಡಿದರು. ಈ ದೂರನ್ನು ನಂತರ ಕೈಬಿಡಲಾಯಿತು.[೧೪]

ಏರೊಪೋಸ್ಟಲ್ ಫ್ಲೈಟ್ 252ಸಂಪಾದಿಸಿ

ಕ್ಯಾರಕಾಸ್‌‌ನಿಂದ ಕುರಕಾವೊ ದ್ವೀಪಕ್ಕೆ ಪ್ರಯಾಣಿಸುತ್ತಿದ್ದ ಏರೊಪೋಸ್ಟಲ್ ಫ್ಲೈಟ್ 252ಅನ್ನು 1984ರ ಜುಲೈ 29ರಂದು ಅಪಹರಿಸಲಾಯಿತು. ಎರಡು ದಿನಗಳ ನಂತರ ವೆನೆಜ್ಯುಯೆಲನ್ ಕಮಾಂಡೊಗಳು DC-9ಗೆ ಮುತ್ತಿಗೆ ಹಾಕಿ ಅಪಹರಣಕಾರರನ್ನು ಕೊಂದರು.[೧೫] ಡೆಲ್ಟಾ ಫೋರ್ಸ್‌ ಈ ವಿಷಮಪರೀಕ್ಷೆಯ ಸಂದರ್ಭದಲ್ಲಿ ಸಲಹೆ-ಸೂಚನೆಗಳನ್ನು ಒದಗಿಸಿತು.[೧೬]

ಅಚಿಲ್ಲೆ ಲಾರೊ ಅಪಹರಣಸಂಪಾದಿಸಿ

ಸಿಪ್ರಸ್‌ಗೆ ಅಚಿಲ್ಲೆ ಲಾರೊ ಅಪಹರಣವಾದದ ಸಂದರ್ಭದಲ್ಲಿ ಆ ನೌಕೆಯನ್ನು ಅಪಹರಣಕಾರರಿಂದ ರಕ್ಷಿಸಲು ಅಧ್ಯಕ್ಷ ರೊನಾಲ್ಡ್ ರೇಗನ್‌ ನೇವಿಯ SEAL ಟೀಮ್ ಸಿಕ್ಸ್‌ ಮತ್ತು ಡೆಲ್ಟಾ ಫೋರ್ಸ್‌ಅನ್ನು ಸಂಭವನೀಯ ರಕ್ಷಣಾ ಪ್ರಯತ್ನದ ಸಿದ್ಧತೆಗಾಗಿ ನಿಯೋಜಿಸಿದರು.

ಆಪರೇಶನ್ ರೌಂಡ್ ಬಾಟಲ್ಸಂಪಾದಿಸಿ

ಹೆಜ್ಬೊಲ್ಲಾಹ್ ಹಿಡಿದಿಟ್ಟುಕೊಂಡಿದ್ದ ಪಾಶ್ಚಾತ್ಯರನ್ನು ರಕ್ಷಿಸಲು ಡೆಲ್ಟಾ ಲೆಬನನ್‌ನ ಬೈರೂತ್‌ಗೆ ಹೋಗಲು ಮೂರು ತಂಡಗಳ ಕಾರ್ಯಾಚರಣೆಯೊಂದನ್ನು ಯೋಜಿಸಿತು. ಆದರೆ ಶಸ್ತ್ರಾಸ್ತ್ರಗಳಿಗೆ ಬದಲಿಯಾಗಿ ಒತ್ತೆಯಾಳುಗಳ ಬಿಡುಗಡೆಯ ಭರವಸೆಯೊಂದಿಗೆ ಕಾರ್ಯಾಚರಣೆ ಸ್ಥಗಿತಗೊಂಡಿತು. ಈ ಕಾರ್ಯಾಚರಣೆಯು ಅಂತಿಮವಾಗಿ ಇರಾನ್-ಕಾಂಟ್ರ ಸಂಗತಿ(ಇರಾನ್‌ಗೆ ಶಸ್ತ್ರಾಸ್ತ್ರ ಪೂರೈಕೆ)ಯನ್ನು ಬಹಿರಂಗ ಪಡಿಸಿದ ಲಾಸ್ ಏಂಜಲೀಸ್ ಟೈಮ್ಸ್‌ನಿಂದ ತನ್ನ ಪ್ರಭಾವವನ್ನು ಕಳೆದುಕೊಂಡಿತು.[೧೭]

ಆಪರೇಶನ್ ಹೆವಿ ಶ್ಯಾಡೊಸಂಪಾದಿಸಿ

ಮಾರ್ಕ್ ಬೌಡನ್ ತನ್ನ ಪುಸ್ತಕ ಕಿಲ್ಲಿಂಗ್ ಪಾಬ್ಲೊ ‌ದಲ್ಲಿ, ಡೆಲ್ಟಾ ಫೋರ್ಸ್‌ನ ಸ್ನೈಪ್ಪರ್(ಮರೆಯಿಂದ ಗುಂಡು ಹಾರಿಸುವವನು) ಕೊಲಂಬಿಯಾದ ಮಾದಕ ದ್ರವ್ಯಗಳ ದೊರೆ ಪಾಬ್ಲೊ ಎಸ್ಕೊಬಾರ್‌ನನ್ನು ನಿವಾರಿಸಿರಬಹುದೆಂದು ಸೂಚಿಸುತ್ತದೆ. ಇದಕ್ಕೆ ಯಾವುದೇ ಪ್ರಬಲ ಸಾಕ್ಷ್ಯಾಧಾರಗಳಿಲ್ಲ. ಈ ಕಾರ್ಯವನ್ನು ಮಾಡಿದ ಖ್ಯಾತಿಯು ಸಾಮಾನ್ಯವಾಗಿ ಕೊಲಂಬಿಯಾದ ಭದ್ರತಾ ಪಡೆಗಳಿಗೆ ಸೇರುತ್ತದೆ.

ಆಪರೇಶನ್ ಜಸ್ಟ್ ಕಾಸ್ಸಂಪಾದಿಸಿ

US ಸೈನ್ಯವು ಆಪರೇಶನ್ ಜಸ್ಟ್ ಕಾಸ್ಅನ್ನು ನಿರ್ವಹಿಸುವುಕ್ಕಿಂತ ಮೊದಲು, ಸ್ಪೆಶಲ್ ಆಪರೇಶನ್ಸ್ ಫೋರ್ಸ್‌ಗಳಿಗೆ ಅನೇಕ ಪ್ರಮುಖ ಕಾರ್ಯಾಚರಣೆಗಳನ್ನು ವಹಿಸಲಾಯಿತು. ಆಪರೇಶನ್ ಆಸಿಡ್ ಗ್ಯಾಂಬಿಟ್, ಪನಾಮ ಸಿಟಿಯಲ್ಲಿನ ಒಂದು ಜೈಲು ಕಾರ್ಸೆಲ್ ಮೊಡೆಲೊದಲ್ಲಿ ಬಂಧಿಯಾಗಿದ್ದ ಕರ್ಟ್ ಮ್ಯೂಸ್‌ನನ್ನು ರಕ್ಷಿಸಿ ಕರೆತರಲು ಡೆಲ್ಟಾಗೆ ವಹಿಸಿದ ಒಂದು ಕಾರ್ಯಾಚರಣೆಯಾಗಿದೆ. ಡೆಲ್ಟಾ ನಿರ್ವಹಿಸಿದ ಮತ್ತೊಂದು ಅತಿಮುಖ್ಯ ಕಾರ್ಯಾಚರಣೆಯೆಂದರೆ ಆಪರೇಶನ್ ನಿಫ್ಟಿ ಪ್ಯಾಕೇಜ್, ಇದು ಜನರಲ್ ಮ್ಯಾನ್ಯುಯೆಲ್ ಆಂಟೋನಿಯೊ ನೊರೆಗಾ ಬಂಧನಕ್ಕಾಗಿ ನಡೆಸಿದ ಕಾರ್ಯಾಚರಣೆಯಾಗಿದೆ.

ಆಪರೇಶನ್ ಡೆಸರ್ಟ್ ಶೀಲ್ಡ್/ಡೆಸರ್ಟ್ ಸ್ಟೋರ್ಮ್ಸಂಪಾದಿಸಿ

ಡೆಸರ್ಟ್ ಸ್ಟೋರ್ಮ್‌ನ ಸಂದರ್ಭದಲ್ಲಿ ಡೆಲ್ಟಾವನ್ನು ಆ ಪ್ರದೇಶದಲ್ಲಿ ನಿಯೋಜಿಸಿ ಅನೇಕ ಜವಾಬ್ದಾರಿಗಳನ್ನು ವಹಿಸಲಾಯಿತು. ಇದು ಸೌದಿ ಅರೇಬಿಯಾದಲ್ಲಿ ಜನರಲ್ ನಾರ್ಮನ್ ಸ್ಕ್ವಾರ್ಜ್‌ಕಾಫ್‌ಗೆ ನಿಕಟ ರಕ್ಷಣೆಯನ್ನು ಒದಗಿಸುತ್ತಿದ್ದ ನಿಯಮಿತ ಸೈನ್ಯ ಘಟಕಗಳಿಗೆ ಬೆಂಬಲ ನೀಡುವುದು ಸೇರಿದೆ. ಸೈನ್ಯ ವ್ಯವಹಾರಗಳ ಅಧಿಕಾರಿಗಳು ಸ್ಕ್ವಾರ್ಜ್‌ಕಾಫ್‌ನ ಅಂಗರಕ್ಷಕರ ಬೆಳೆಯುತ್ತಿರುವ ಸಂಖ್ಯೆಯನ್ನು ತಗ್ಗಿಸಲು ಪ್ರಯತ್ನಿಸಿದರು. ಬ್ರಿಟಿಷ್ ಸ್ಪೆಶಲ್ ಏರ್ ಸರ್ವಿಸ್‌ ಮತ್ತು ಇತರ ಸ್ಪೆಶಲ್ ಫೋರ್ಸ್‌ಗಳ ಒಕ್ಕೂಟದೊಂದಿಗೆ ಡೆಲ್ಟಾ ಸಹ SCUD ಕ್ಷಿಪಣಿಗಳನ್ನು ಹುಡುಕುವ ಕಾರ್ಯದಲ್ಲಿ ತೊಡಗಿತು.

ಆಪರೇಶನ್ ಗಾತಿಕ್ ಸರ್ಪೆಂಟ್ಸಂಪಾದಿಸಿ

1993ರ ಅಕ್ಟೋಬರ್ 3ರಂದು ಡೆಲ್ಟಾ ಫೋರ್ಸ್‌‌ನ ಯೋಧರನ್ನು U.S. ಆರ್ಮಿ ರೇಂಜರ್ಸ್ ಒಂದಿಗೆ ಸೊಮಾಲಿಯಾಮೊಗದಿಶುದಲ್ಲಿನ ಸಂಘರ್ಷಕ್ಕಾಗಿ ಕಳುಹಿಸಲಾಯಿತು, ಈ ಕಾರ್ಯಾಚರಣೆಗೆ ಆಪರೇಶನ್ ಗಾತಿಕ್ ಸರ್ಪೆಂಟ್ ಎಂದು ಸಂಕೇತನಾಮ ನೀಡಲಾಗಿದೆ.

ಅವರಿಗೆ ಮೊಹಮ್ಮದ್ ಫರಾಹ್ ಐದಿದ್‌ನ ಹಲವಾರು ಮುಖ್ಯ ಲೆಫ್ಟಿನೆಂಟ್‌ಗಳಿಗೆ ಹಾಗೂ ಅನೇಕ ಇತರ ಉನ್ನತ ಹುದ್ದೆಯ ಅಧಿಕಾರಿಗಳಿಗೆ ಭದ್ರತೆ ಒದಗಿಸುವ ಕಾರ್ಯವನ್ನು ವಹಿಸಲಾಯಿತು. ಎರಡು MH-60L ಬ್ಲ್ಯಾಕಾವ್ಕ್ ಹೆಲಿಕಾಪ್ಟರ್‌ಗಳನ್ನು RPGಗಳು ಧ್ವಂಸ ಮಾಡಿದ ನಂತರ ಈ ಕಾರ್ಯಾಚರಣೆಯು ಅಪಾಯಕ್ಕೆ ಸಿಕ್ಕಿತು. ಇದು ಯುದ್ಧಕ್ಕೆ ದಾರಿ ಕಲ್ಪಿಸಿ, ಐದು ಮಂದಿ ಡೆಲ್ಟಾ ಯೋಧರು(ಆರನೆಯವನು ಕೆಲವು ದಿನಗಳ ನಂತರ ಸಿಡಿಗುಂಡಿಗೆ ಬಲಿಯಾದ), ಆರು ರೇಂಜರ್‌ಗಳು, ವಾಯುಪಡೆಯ ಐವರು ಸಿಬ್ಬಂದಿ ಮತ್ತು 10ನೇ ಪರ್ವತ ವಿಭಾಗದ ಇಬ್ಬರು ಸೈನಿಕರು ಸಾವಪ್ಪಿದರು. 133 ಮಂದಿ ಸೊಮಾಲಿಯನ್ನರು ಸತ್ತಿದ್ದಾರೆಂದು ಐದಿದ್ ವಿಭಾಗದ ಕಮಾಂಡರ್‌ನ[೧೮] ಅಂದಾಜಿನಿಂದ ಹಿಡಿದು ಸೊಮಾಲಿಯಾಗೆ US ರಾಯಭಾರಿಯಿಂದ 1500ರಿಂದ 2000ರಷ್ಟು ಮಂದಿ ಸೋಮಾಲಿಯನ್ನರು ಸಾವನ್ನಪ್ಪಿದರೆಂದು ಅಂದಾಜಿಸಲಾಗಿದೆ.[೧೯] 1999ರಲ್ಲಿ ಲೇಖಕ ಮಾರ್ಕ್ ಬೌಡೆನ್ Black Hawk Down: A Story of Modern War ಪುಸ್ತಕವನ್ನು ಪ್ರಕಟಿಸಿದನು. ಅದು 1993ರ ಅಕ್ಟೋಬರ್ 3ರಂದು ನಡೆದ ಮೊಗದಿಶು ಯುದ್ಧವನ್ನು ಸುತ್ತುವರಿದ ಘಟನಾವಳಿಗಳನ್ನು ನಿರೂಪಿಸುತ್ತದೆ.[೧೩] ಪುಸ್ತಕವು ಸಂಕ್ಷಿಪ್ತವಾಗಿ,ಯುದ್ಧಕ್ಕೆ ದಾರಿಕಲ್ಪಿಸುವ ವಿದ್ಯಮಾನಗಳಿಗೆ ಮುಂಚಿತವಾಗಿ ನಡೆದ ಡೆಲ್ಟಾ ಪಡೆ ಒಳಗೊಂಡ ಕಾರ್ಯಾಚರಣೆಗಳಿಗೆ ಸಂಬಂಧಿಸಿದೆ.[೧೩] ಈ ಪುಸ್ತಕವನ್ನು 2001ರಲ್ಲಿ ನಿರ್ದೇಶಕ ರಿಡ್ಲೆ ಸ್ಕಾಟ್ ಚಲನಚಿತ್ರವಾಗಿ ನಿರ್ಮಿಸಿದ.

ಭಯೋತ್ಪಾದನಾ ನಿಗ್ರಹ ತರಬೇತಿಸಂಪಾದಿಸಿ

1997ರ ಜನವರಿಯಲ್ಲಿ,ಜಪಾನಿನರಾಯಭಾರಿಯ ನಿವಾಸವನ್ನು ವಶಕ್ಕೆ ತೆಗೆದುಕೊಂಡ ಕೂಡಲೇ ಡೆಲ್ಟಾದ ಮುಂದುವರಿದ ತಂಡವೊಂದನ್ನು ಮತ್ತು ಬ್ರಿಟಿಷ್ SASನ ಆರು ಸದಸ್ಯರನ್ನು ಪೆರುವಿನ ಲಿಮಕ್ಕೆ ಕಳುಹಿಸಲಾಯಿತು.[೨೦]

ಸಿಯಾಟಲ್ WTOಸಂಪಾದಿಸಿ

ಡೆಲ್ಟಾ ಫೋರ್ಸ್‌ನ ಯೋಧರು 1999 ಸಿಯಾಟಲ್ WTO ಅಧಿವೇಶನಕ್ಕೆ ಭದ್ರತೆಯನ್ನು ನೀಡುವಲ್ಲಿ ಒಳಗೊಂಡಿದ್ದರು.ವಿಶೇಷವಾಗಿ ರಾಸಾಯನಿಕ ಅಸ್ತ್ರಗಳ ದಾಳಿಯ ವಿರುದ್ಧ ಭದ್ರತೆ ನೀಡುವುದಾಗಿತ್ತು.[೨೧]

ಆಪರೇಶನ್ ಎಂಡ್ಯೂರಿಂಗ್ ಫ್ರೀಡಮ್ಸಂಪಾದಿಸಿ

 
ಟೋರ ಬೋರದಲ್ಲಿ ಡೆಲ್ಟಾ ಫೋರ್ಸ್‌ ಮತ್ತು ಬ್ರಿಟಿಷ್ ಸ್ಪೆಶಲ್ ಬೋಟ್ ಸರ್ವಿಸ್‌ ಕಮಾಂಡೊಗಳು

ಡೆಲ್ಟಾ ಫೋರ್ಸ್‌ 2001ರಲ್ಲಿ ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ ವಿರುದ್ಧದ ಕಾರ್ಯಾಚರಣೆಯಲ್ಲಿಯೂ ಒಳಗೊಂಡಿದೆ.[೨೨] ಒಸಾಮ ಬಿನ್ ಲಾಡೆನ್‌ನಂತಹ ಅಧಿಕ ಮೌಲ್ಯದ ಗುರಿಯ(HVT) ವ್ಯಕ್ತಿಗಳನ್ನು ಹಾಗೂ ಇತರ ಪ್ರಮುಖ ಅಲ್-ಖೈದ ಮತ್ತು ತಾಲಿಬಾನ್ ಮುಖಂಡರನ್ನು, ಆಪರೇಷನ್ ಎಂಡ್ಯೂರಿಂಗ್ ಫ್ರೀಡಂನ ಆರಂಭವಾದ ಅಕ್ಟೋಬರ್ 2001ರಿಂದೀಚೆಗೆ ಹುಡುಕುತ್ತಿದ್ದ ವಿಶೇಷ ದಾಳಿಯ ಘಟಕದ ತಿರುಳು ಡೆಲ್ಟಾ ಫೋರ್ಸ್ ಆಗಿತ್ತು. ಅಂತಹ ಒಂದು ಕಾರ್ಯಾಚರಣೆಯೆಂದರೆ 75ನೇ ರೇಂಜರ್ ರೆಜಿಮೆಂಟ್‌ ಬೆಂಬಲದೊಂದಿಗೆ ಕಂದಾಹಾರ್‌ನ ವೈಮಾನಿಕ ನೆಲೆಯಲ್ಲಿ ಮುಲ್ಲಾಹ್ ಮೊಹಮ್ಮದ್ ಓಮರ್‌ನ ಪ್ರಧಾನ ಕಾರ್ಯಾಲಯದ ಮೇಲೆ ನಡೆಸಿದ ವೈಮಾನಿಕ ದಾಳಿ. ಡೆಲ್ಟಾ ಫೋರ್ಸ್‌ನ ಕಾರ್ಯಾಚರಣೆಯಲ್ಲಿ ಮೊಹಮ್ಮದ್ ಓಮರ್‌ನನ್ನು ಸೆರೆಹಿಡಿಯಲು ವಿಫಲವಾದರೂ, ರೇಂಜರ್‌ಗಳು ಪ್ರಮುಖ ವ್ಯೂಹಾತ್ಮಕ ವೈಮಾನಿಕ ನೆಲೆಯನ್ನು ವಶಪಡಿಸಿಕೊಂಡರು. [೨೩]. ಈ ದಾಳಿಯ ಪಡೆಗೆ ವಿವಿಧ ಹೆಸರುಗಳನ್ನು ನೀಡಲಾಗಿತ್ತು - ಟಾಸ್ಕ್ ಫೋರ್ಸ್ 11, ಟಾಸ್ಕ್ ಫೋರ್ಸ್ 20, ಟಾಸ್ಕ್ ಫೋರ್ಸ್ 121, ಟಾಸ್ಕ್ ಫೋರ್ಸ್ 145 ಮತ್ತು ಟಾಸ್ಕ್ ಫೋರ್ಸ್ 6-26. ಡೆಲ್ಟಾ ಫೋರ್ಸ್‌ 2009ರಲ್ಲಿ ಪೂರ್ವ ಆಫ್ಘಾನಿಸ್ತಾನದಲ್ಲೂ ಅದರ ಕಾರ್ಯಾಚರಣೆಗಳನ್ನು ಹೆಚ್ಚಿಸಿತು. DEVGRU ಒಂದಿಗೆ SFOD-ದ, ತಾಲಿಬಾನ್‍‌ನ ಒಂದು ಪ್ರಬಲ ಬಣ ಹಕ್ಕಾನಿ ಜಾಲದ ವಿರುದ್ಧ ಅನೇಕ ಬಾರಿ ಜಯಗಳಿಸಿತು. ಇದು ಅವಶ್ಯವಿದ್ದಾಗ ಪಾಕಿಸ್ತಾನದ ಗಡಿಪ್ರದೇಶದುದ್ದಕ್ಕೂ ಸಂಚರಿಸಿತು. [೨೪]

ಆಪರೇಶನ್ ಇರಾಕಿ ಫ್ರೀಡಮ್ಸಂಪಾದಿಸಿ

 
ಮೊಸುಲ್‌ನಲ್ಲಿ ಉದಯ್ ಮತ್ತು ಕ್ಯುಸೆಯ ಕೊನೆಗಳಿಗೆಯಲ್ಲಿ ತೆಗೆಯಲಾದ ಫೋಟೊ.ಡೆಲ್ಟಾ ಫೋರ್ಸ್‌ ಕಾರ್ಯಕರ್ತರನ್ನು MICH ಹೆಲ್ಮೆಟ್‌ಗಳನ್ನು ಧರಿಸಿರುವ ಸೈನಿಕರ ಮುಂಭಾಗದಲ್ಲಿ ಕಾಣಬಹುದು.

ಡೆಲ್ಟಾ ಫೋರ್ಸ್‌ ಯೋಧರು ಪ್ರಮುಖ ಪಾತ್ರವಹಿಸಿದ್ದಾರೆಂದು ನಂಬಲಾದ ಅನೇಕ ಕಾರ್ಯಾಚರಣೆಗಳಲ್ಲಿ ಒಂದು 2003ರ ಇರಾಕ್ ಮೇಲಿನ ದಾಳಿ.[೨೫] ಅವರು ಬಾಗ್ದಾದ್ಅನ್ನು ರಹಸ್ಯವಾಗಿ ಮುಂಚಿತವಾಗಿ ಪ್ರವೇಶಿಸಿದರು. ಅವರ ಕಾರ್ಯಾಚರಣೆಗಳೆಂದರೆ ವಿಮಾನದ ದಾಳಿಗೆ ಮಾರ್ಗದರ್ಶನ ನೀಡುವುದು ಹಾಗೂ ಕದ್ದಾಲಿಸುವ ಸಂದರ್ಭದಲ್ಲಿ ಮಾಹಿತಿದಾರರ ಜಾಲವನ್ನು ನಿರ್ಮಿಸುವುದು ಮತ್ತು ಇರಾಕ್‌ನ ಸಂವಹನ ವ್ಯವಸ್ಥೆಯನ್ನು ನಾಶಮಾಡುವುದು. ಅವರು 2004ರ ಎಪ್ರಿಲ್‌ನ ಆಪರೇಶನ್ ಫಾಂಟಮ್ ಫರಿಯಲ್ಲಿಯೂ ಪ್ರಮುಖ ಪಾತ್ರವಹಿಸಿದ್ದಾರೆ. ಆ ಸಂದರ್ಭದಲ್ಲಿ ಅವರು ಸಾಮಾನ್ಯವಾಗಿ USMC ಕಂಪೆನಿಗಳೊಂದಿಗೆ ಸ್ನೈಪರ್‌ಗಳಾಗಿ(ಮರೆಯಿಂದ ಗುಂಡುಹಾರಿಸುವವರು) ಸೇರಿಕೊಂಡಿದ್ದರು. ಇದರ ಕಾರಣವು ಇದುವರೆಗೂ ತಿಳಿದುಬಂದಿಲ್ಲ.[೨೬]

ಡೆಲ್ಟಾ ಯೋಧರು ಉದಯ್ ಮತ್ತು ಕ್ಯುಸೆ ಹುಸೇನ್‌ ಹತರಾದಮೋಸಲ್‌ನ ದಾಳಿಯಲ್ಲೂ ಭಾಗವಹಿಸಿದ್ದಾರೆ. ಅಲ್ಲದೆ ಇವರು ಸದ್ದಾಂ ಹುಸೇನ್‌ನ ಬೇಟೆಯಲ್ಲಿ ಮತ್ತು ಅಂತಿಮವಾಗಿ ಅವನನ್ನು ಸೆರೆಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಡೆಲ್ಟಾ 2006ರ ಜೂನ್ 7ರಂದು ಬಾಕ್ಯುಬಾದ ಉತ್ತರದಲ್ಲಿ ಅಲ್-ಜಾರ್ಕ್ವಾವಿ ಉಳಿದುಕೊಂಡಿದ್ದ ನಿವಾಸದ ಆವರಣದಲ್ಲಿ ಕಣ್ಗಾವಲು ಇರಿಸಿದ್ದರು ಎಂದು ಕೂಡ ವರದಿಯಾಗಿತ್ತು. ದೀರ್ಘಕಾಲದ ಹುಡುಕಾಟದ ನಂತರ ಡೆಲ್ಟ ಜಾರ್ಕ್ವಾವಿಯನ್ನು ಪತ್ತೆಹಚ್ಚಿ, ವಿಮಾನದಾಳಿ ನಡೆಸಿತು.[೨೭]

ಇವನ್ನೂ ಗಮನಿಸಿಸಂಪಾದಿಸಿ

ಗ್ರಂಥಸೂಚಿಸಂಪಾದಿಸಿ

 • ಬೆಕ್ವಿತ್‌, ಚಾರ್ಲ್ಸ್‌ (ಡೊನಾಲ್ಡ್ ನಾಕ್ಸ್ ಒಂದಿಗೆ) (1983). ಡೆಲ್ಟಾ ಫೋರ್ಸ್‌
 • ಹ್ಯಾನೆ, ಎರಿಕ್ L. (2002). ಇನ್‌ಸೈಡ್ ಡೆಲ್ಟಾ ಫೋರ್ಸ್‌. ನ್ಯೂಯಾರ್ಕ್‌: ಡೆಲಕೋರ್ಟೆ ಪ್ರೆಸ್, 325. ISBN 978-0-385-33603-1.
 • ಬೌಡೆನ್, ಮಾರ್ಕ್ (1999). ಬ್ಲ್ಯಾಕ್ ಹಾವ್ಕ್ ಡೌವ್ನ್: ಎ ಸ್ಟೋರಿ ಆಫ್ ಮಾಡರ್ನ್ ವಾರ್ . ಅಟ್ಲಾಂಟಿಕ್ ಮಂತ್ಲಿ ಪ್ರೆಸ್. ಬರ್ಕೆಲಿ, ಕ್ಯಾಲಿಫೋರ್ನಿಯಾ (USA). ISBN 0-87113-738-0 ಆಪರೇಶನ್ ಗಾತಿಕ್ ಸರ್ಪೆಂಟ್ ಬಗ್ಗೆ
 • ಬೌಡೆನ್, ಮಾರ್ಕ್ (2001). ಕಿಲ್ಲಿಂಗ್ ಪ್ಯಾಬ್ಲೊ: ದ ಹಂಟ್ ಫಾರ್ ದ ವರ್ಲ್ಡ್ಸ್ ಗ್ರೇಟೆಸ್ಟ್ ಔಟ್‌ಲಾ . ISBN 0-87113-783-6 ಪ್ಯಾಬ್ಲೊ ಎಸ್ಕೋಬರ್‌ನ ಹುಡುಕಾಟದ ಬಗ್ಗೆ
 • Bowden, Mark (2006). Guests Of The Ayatollah: The First Battle In America's War With Militant Islam. Atlantic Monthly Press. ISBN 0-87113-925-1.
 • Bowden, Mark (2006). "The Desert One Debacle". The Atlantic Monthly. Unknown parameter |month= ignored (help); Italic or bold markup not allowed in: |publisher= (help)
 • ನೇಲರ್, ಸೀನ್ (2005). "ನಾಟ್ ಎ ಗುಡ್ ಡೇ ಟು ಡೈ: ದ ಅನ್‌ಟೋಲ್ಡ್ ಸ್ಟೋರಿ ಆಫ್ ಆಪರೇಶನ್ ಅನಕೊಂಡಾ ", ಪೆಂಗ್ವಿನ್ ಗ್ರೂಪ್, ನ್ಯೂಯಾರ್ಕ್‌, ಆಪರೇಶನ್ ಅನಕೊಂಡಾದ ಬಗ್ಗೆ
 • ಗ್ರಿಸ್ವಲ್ಡ್, ಟೆರ್ರಿ. "ಡೆಲ್ಟಾ, ಅಮೆರಿಕಾಸ್ ಎಲೈಟ್ ಕೌಂಟರ್‌ಟೆರರಿಸ್ಟ್ ಫೋರ್ಸ್", ISBN 0-87938-615-0
 • ರಾಬಿನ್ಸನ್, ಲಿಂಡ, ಮಾಸ್ಟರ್ಸ್ ಆಫ್ ಚಾವೋಸ್: ಸ ಸೀಕ್ರೆಟ್ ಹಿಸ್ಟರಿ ಆಫ್ ದ ಸ್ಪೆಶಲ್ ಫೋರ್ಸಸ್
 • ನ್ಯಾಷನಲ್ ಜಿಯೋಗ್ರಫಿಕ್ ಡಾಕ್ಯುಮೆಂಟರಿ: ರೋಡ್ ಟು ಬಾಗ್ದಾದ್
 • ಪುಶೀಸ್, ಪ್ರೆಡ್ J. ಮತ್ತು ಇತರರು. (2002). U. S. ಕೌಂಟರ್-ಟೆರರಿಸ್ಟ್ ಫೋರ್ಸಸ್. ಅನ್‌ನೋನ್: ಕ್ರೆಸ್ಟ್‌ಲೈನ್ ಇಂಪ್ರಿಂಟ್ಸ್, 201. ISBN 0-7603-1363-6.
 • ಹ್ಯಾರ್ಟ್ಮಟ್ ಸ್ಕಾವರ್: ಡೆಲ್ಟಾ ಫೋರ್ಸ್‌ . ಮೋಟಾರ್ಬಚ್ ವರ್ಲ್ಯಾಗ್, ಸ್ಟಟ್ಗರ್ಟ್ 2008. ISBN 978-3-613-02958-3

ಆಕರಗಳುಸಂಪಾದಿಸಿ

 1. http://www.military.com/Recruiting/Content/0,13898,rec_step02_special_forces,,00.html
 2. ಬೆಕ್ವಿತ್‌, ಚಾರ್ಲ್ಸ್‌. "ಡೆಲ್ಟಾ ಫೋರ್ಸ್‌", ಏವನ್ ಬುಕ್ಸ್, 2000. (ಮಾಸ್ ಮಾರ್ಕೆಟ್ ಪೇಪರ್‌ಬ್ಯಾಕ್; ಮೂಲ ಕೃತಿಯು 1983ರಲ್ಲಿ ಪ್ರಕಟವಾಗಿದೆ.) ISBN 0-380-80939-7
 3. ಗೇಬ್ರಿಯಲ್, ರಿಚಾರ್ಡ್ A. (1985). ಮಿಲಿಟರಿ ಇನ್‌ಕಾಂಪಿಟೆನ್ಸ್: ವೈ ದ ಅಮೆರಿಕನ್ ಮಿಲಿಟರಿ ಡಸ್‌ನಾಟ್ ವಿನ್ , ಹಿಲ್ ಮತ್ತು ವ್ಯಾಂಗ್, ISBN 0-374-52137-9, ಪುಟಗಳು 106-116. ಕಾರ್ಯ-ಪಡೆಯ ತತ್‌ಪೂರ್ತ ಗುಣಲಕ್ಷಣ ಮತ್ತು ವಿಪರೀತ ಪ್ರಮಾಣದ ಭದ್ರತೆ ಇವೆರಡೂ ಆದೇಶ ಮತ್ತು ನಿಯಂತ್ರಣ ಸಮಸ್ಯೆಗಳನ್ನು ತೀವ್ರಗೊಳಿಸಿವೆ ಎಂದು ಒಟ್ಟಾರೆಯಾಗಿ ಹೋಲೊವೇ ಕಮೀಷನ್ ಆರೋಪಿಸಿತು.
 4. ೪.೦ ೪.೧ Naylor, Sean (2006). Not a Good Day to Die: The Untold Story of Operation Anaconda. Berkeley: Berkley Books. ISBN 0425196097. |access-date= requires |url= (help)
 5. ಸಿಯಾನ್ ನೇಲರ್, ಎಕ್ಸ್‌ಪಾನ್ಶನ್ ಪ್ಲ್ಯಾನ್ಸ್ ಲೀವ್ ಮೆನಿ ಇನ್ ಆರ್ಮಿ ಸ್ಪೆಶಲ್ ಫೋರ್ಸಸ್‌ ಅನ್‌ಈಸ್ , ಆರ್ಮ್ಡ್ ಫೋರ್ಸಸ್ ಜರ್ನಲ್, ನವೆಂಬರ್, 2006.
 6. http://www.globalsecurity.org/military/agency/army/sfod-d.htm
 7. ಮೌಂಟೇನರ್. SFOD-D ಸೀಕಿಂಗ್ ನ್ಯೂ ಮೆಂಬರ್ಸ್. ಫೋರ್ಟ್ ಕ್ಯಾರ್ಸನ್, ಕೊಲೊರಾಡೊ: ಮೌಂಟೇನರ್ (ಪ್ರಕಟಣೆ). ಜನವರಿ 16, 2003.
 8. "Fort Bragg's newspaper Paraglide, recruitment notice for Delta Force". Retrieved November 17, 2009. Text "To find the cited document, use the 11/12/2009 edition of Paraglide, page A6" ignored (help)
 9. Beckwith, Charlie A (1983). Delta Force. Harcourt.
 10. ೧೦.೦ ೧೦.೧ ೧೦.೨ ೧೦.೩ ೧೦.೪ ೧೦.೫ Haney, Eric L. (2002). Inside Delta Force. New York: Delacorte Press. p. 325. ISBN 9780385336031.
 11. ವಾಲರ್, ಡೌಗ್ಲಸ್ (2003-02-03). "ದ CIA ಸೀಕ್ರೆಟ್ ಆರ್ಮಿ". TIME (ಟೈಮ್ ಇಂಕ್). http://web.archive.org/web/20030201095351/http://www.time.com/time/covers/1101030203/
 12. "Unit Profile: 1st Special Forces Operational Detachment - Delta (SFOD-D)". Retrieved 3-10-2010. Check date values in: |accessdate= (help)
 13. ೧೩.೦ ೧೩.೧ ೧೩.೨ Bowden, Mark (1999). Black Hawk Down: A Story of Modern War. Berkeley: Atlantic Monthly Press. ISBN 0-87113-738-0. |access-date= requires |url= (help)
 14. [ರೊನಾಲ್ಡ್ H. ಕೋಲೆ, 1997, ಆಪರೇಶನ್ ಅರ್ಜೆಂಟ್ ಫರಿ: ದ ಪ್ಲಾನಿಂಗ್ ಆಂಡ್ ಎಕ್ಸಿ‌ಕ್ಯೂಶನ್ ಆಫ್ ಜಾಯಿಂಟ್ ಆಪರೇಶನ್ಸ್ ಇನ್ ಗ್ರೆನಡಾ 12 ಅಕ್ಟೋಬರ್ - 2 ನವೆಂಬರ್ 1983 ಜಾಯಿಂಟ್ ಹಿಸ್ಟರಿ ಆಫೀಸ್ ಆಫ್ ದ ಚೇರ್‌ಮ್ಯಾನ್ ಆಫ್ ದಿ ಜಾಯಿಂಟ್ ಚೀಫ್ಸ್ ಆಫ್ ಸ್ಟಾಫ್ ವಾಷಿಂಗ್ಟನ್, DC], ಪುಟ 62.]
 15. Castro, Janice (1984-08-13). "Terrorism: Failed Security". TIME. Unknown parameter |coauthors= ignored (|author= suggested) (help)
 16. Offley, Edward (2002). "Chapter 13 - Going to War I: Realtime". Pen & Sword: A Journalist's Guide to Covering the Military. Marion Street Press, Inc. p. 220. ISBN 9780966517644.
 17. Smith, Mark (March 6, 2007). Killer Elite. St. Martin's Press. ISBN 0312362722.
 18. [೧]
 19. [೨]
 20. ಸ್ಪೆಶಲ್ ಫೋರ್ಸಸ್ ಆಪರೇಶನಲ್ ಡಿಟ್ಯಾಚ್ಮೆಂಟ್ - ಡೆಲ್ಟಾ
 21. ನ್ಯೂಸ್: ಡೆಲ್ಟಾಸ್ ಡೌವ್ನ್ ವಿದ್ ಇಟ್ (ಸಿಯಾಟಲ್ ವೀಕ್ಲಿ)
 22. ಸೆಪ್ಟೆಂಬರ್ 2003 ಇಂಜಿನಿಯರ್ ಅಪ್‌ಡೇಟ್
 23. [೩]
 24. ಸ್ಯಾನ್ ಜೋಸ್ ಮರ್ಕ್ಯುರಿ ನ್ಯೂಸ್
 25. W:\pmtr\ventura\#article\noonan.vp
 26. [೪]]
 27. [೫]]

ಬಾಹ್ಯ ಕೊಂಡಿಗಳುಸಂಪಾದಿಸಿ

ನಿರ್ದೇಶಾಂಕಗಳು: 35°07′14″N 79°21′50″W / 35.12047°N 79.363775°W / 35.12047; -79.363775 (Delta Force (1st SFOD-D))