ಜೋಸಯಾ ವಿಲಾರ್ಡ್ ಗಿಬ್ಸ್

ಗಣಿತಜ್ಞ

ಜೋಸಯಾ ವಿಲಾರ್ಡ್ ಗಿಬ್ಸ್ ( 1839-1903) ಅಮೆರಿಕದ ಭೌತವಿಜ್ಞಾನಿ.

ಜೋಸಯಾ ವಿಲಾರ್ಡ್ ಗಿಬ್ಸ್
Portrait of Josiah Willard Gibbs
ಜೋಸಿಯಾ ವಿಲಾರ್ಡ್ ಗಿಬ್ಸ್
ಜನನ(೧೮೩೯-೦೨-೧೧)೧೧ ಫೆಬ್ರವರಿ ೧೮೩೯
ನ್ಯೂ ಹೇವೆನ್, ಕನೆಕ್ವಿಕಟ್ ಪ್ರಾಂತ್ಯ, ಅಮೆರಿಕ
ಮರಣApril 28, 1903(1903-04-28) (aged 64)
ನ್ಯೂ ಹೇವೆನ್,ಕನೆಕ್ವಿಕಟ್ ಪ್ರಾಂತ್ಯ, ಅಮೆರಿಕ
ರಾಷ್ಟ್ರೀಯತೆಅಮೆರಿಕನ್
ಕಾರ್ಯಕ್ಷೇತ್ರಭೌತಶಾಸ್ತ್ರ, ರಾಸಾಯನಶಾಸ್ತ್ರ, ಗಣಿತಶಾಸ್ತ್ರ
ಸಂಸ್ಥೆಗಳುಯೇಲ್ ವಿಶ್ವವಿದ್ಯಾನಿಲಯ
ಅಭ್ಯಸಿಸಿದ ವಿದ್ಯಾಪೀಠಯೇಲ್ ವಿಶ್ವವಿದ್ಯಾನಿಲಯ
ಮಹಾಪ್ರಬಂಧOn the form of the teeth of wheels in spur gearing (1863)
ಡಾಕ್ಟರೇಟ್ ಸಲಹೆಗಾರರುಹ್ಯೂಬರ್ಟ್ ನ್ಯೂಟನ್
ಡಾಕ್ಟರೇಟ್ ವಿದ್ಯಾರ್ಥಿಗಳುಎಡ್ವಿನ್ ವಿಲ್ಸನ್, ಲೀ ಡಿ ಫಾರೆಸ್ಟ್, ಲಿನ್ಡ್ ವ್ಹೀಲರ್
ಪ್ರಸಿದ್ಧಿಗೆ ಕಾರಣ
  • ಉಷ್ಣಗತಿವಿಜ್ಞಾನ
  • ರಾಸಾಯನಿಕ ವಿಭವ
  • ಸಂಖ್ಯಾಕಲನಶಾಸ್ತ್ರ
  • ಗಿಬ್ಸ್ ಎಂಟ್ರೋಪಿ
  • ಫೇಸ್ ಸ್ಪೇಸ್
  • ಪ್ರಾವಸ್ಥಾ ಸೂತ್ರವಿಧಿ
  • ಗಿಬ್ಸ್ ಮುಕ್ತಶಕ್ತಿ
  • ಸದಿಶವಿಶ್ಲೇಷಣೆ
  • ಗಿಬ್ಸ್ ವಿದ್ಯಾಮಾನ
  • ಗಿಬ್ಸ್ ಕ್ರಿಯಾವಳಿಗಳು
  • ಗಿಬ್ಸ್-ಥಾಂಸನ್ನನ ಪರಿಣಾಮ
  • ಗಿಬ್ಸ್ ಲೆಮ್ಮಾ
  • ಗಿಬ್ಸ್ ಅಸಮಾನತೆ
  • ಗಿಬ್ಸ್-ಡೂಹೆಮ್ ಸಮೀಕರಣ
  • ಗಿಬ್ಸ್-ಹೆಲ್ಮಹಾಲ್ಟ್ಸ್ ಸಮೀಕರಣ
  • -ಇತ್ಯಾದಿ
ಪ್ರಭಾವಗಳುಕ್ಲಾಸಿಯಸ್, ಹರ್ಮನ್ ಗ್ರಾಸ್ಮನ್, ಜೇಮ್ಸ್ ಕ್ಲರ್ಕ್ ಮ್ಯಾಕ್ಸ್ ವೆಲ್ಲ್, ಲುಡ್ವಿಗ್ ಬೋಲ್ಟ್ಸ್ ಮನ್
ಗಮನಾರ್ಹ ಪ್ರಶಸ್ತಿಗಳು
  • ರುಮ್ ಫೋರ್ಡ್ ಪದಕ (1880)
  • ಫೆಲ್ಲೊ ಆಫ್ ರಾಯಲ್ ಸೊಸೈಟಿ (1897)
  • ಕಾಪ್ಲೇ ಪದಕ (1901)
ಹಸ್ತಾಕ್ಷರ
Gibbs's signature

ಅಮೆರಿಕದ ಕನೆಕ್ಟಿಕಟ್ ಪ್ರಾಂತದ ನ್ಯೂ ಹೇವನ್ ಎಂಬಲ್ಲಿ 11 ಫೆಬ್ರವರಿ 1839ರಂದು ಜನಿಸಿದ. 1858ರಲ್ಲಿ ಯೇಲ್ ವಿಶ್ವವಿದ್ಯಾಲಯದಿಂದ ಬಿ.ಎಸ್. ಪದವಿಯನ್ನೂ 1863ರಲ್ಲಿ ಅದೇ ವಿಶ್ವವಿದ್ಯಾಲಯದ ಪಿಎಚ್.ಡಿ.ಪದವಿಯನ್ನೂ ಪಡೆದು 1869ರ ವರೆಗೆ ಸ್ನಾತಕೋತ್ತರ ಅಭ್ಯಾಸಗಳನ್ನು ಯುರೋಪಿನಲ್ಲಿ ಮಾಡಿದ. ಯುರೋಪಿನಿಂದ ಹಿಂತಿರುಗಿದ ಬಳಿಕ 1871ರಿಂದ ತನ್ನ ಕೊನೆಯ ದಿನದ ವರೆಗೂ ಯೇಲ್ ವಿಶ್ವವಿದ್ಯಾಲಯದಲ್ಲಿ ಗಣಿತೀಯ ಭೌತವಿಜ್ಞಾನದ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದ.

ಗಿಬ್ಸ್ ನ ಮರಣಾನಂತರ ಯೇಲ್ ವಿಶ್ವವಿದ್ಯಾಲಯ ಆತನ ಬರಹಗಳನ್ನು ಸಂಕಲಿಸಿ 1928ರಲ್ಲಿ ಎರಡು ಸಂಪುಟಗಳಾಗಿ ಪ್ರಕಟಿಸಿತು. ಈ ಸಂಪುಟ ಅನೇಕ ಪ್ರಸಿದ್ಧ ವಿಜ್ಞಾನಿಗಳ ಲೇಖನಗಳಿಂದ ಕೂಡಿದೆ. ಜೆ. ವಿಲಾರ್ಡ್ ಗಿಬ್ಸ್ ನ ವೈಜ್ಞಾನಿಕ ಬರೆಹಗಳನ್ನು ಕುರಿತು ವ್ಯಾಖ್ಯಾನ ಎಂಬ ಸನ್ಮಾನ ವಿಶ್ಲೇಷಣ ಗ್ರಂಥ 1936ರಲ್ಲಿ ಎರಡು ಸಂಪುಟಗಳಾಗಿ ಪ್ರಕಟವಾಯಿತು. ಗಿಬ್ಸ್ ನ ಶಿಷ್ಯರಲ್ಲೊಬ್ಬನಾದ ಎಲ್. ಪಿ. ವ್ಹೀಲರ್ ಎಂಬಾತ ಬರೆದ ಜೋಸಯಾ ವಿಲಾರ್ಡ್ ಗಿಬ್ಸ್-ಮಹಾಪ್ರಜ್ಞೆಯೊಂದರ ಚರಿತ್ರೆ ಎಂಬ ಪುಸ್ತಕ 1852ರಲ್ಲಿ ಪ್ರಕಟವಾಯಿತು.

1873-78ರ ಅವಧಿಯಲ್ಲಿ ರಸಾಯನವಿಜ್ಞಾನದ ಅಧ್ಯಯನದಲ್ಲಿ ಉಷ್ಣಗತಿವಿಜ್ಞಾನದ (ಥರ್ಮೋಡೈನಮಿಕ್ಸ್) ಉಪಯೋಗದ ಬಗ್ಗೆ ಮೂರು ಲೇಖನಗಳನ್ನು ಪ್ರಕಟಿಸಿದ. ಈ ಸಂಶೋಧನರಂಗದಲ್ಲಿ ಅವನ ಮೊದಲ ಲೇಖನವಾದ ದ್ರವಾನಿಲಗಳ ಉಷ್ಣಗತಿಶಾಸ್ತ್ರದಲ್ಲಿ ರೇಖಾಪದ್ಧತಿಗಳು 1873ರಲ್ಲಿ ಪ್ರಕಟವಾಗಿ ಉಷ್ಣಗತಿಶಾಸ್ತ್ರ ಮತ್ತು ಭೌತರಸಾಯನವಿಜ್ಞಾನಗಳ ಅಧ್ಯಯನದಲ್ಲಿ ಪ್ರಾವಸ್ಥಾ ಸೂತ್ರವಿಧಿ(ಫೇಸ್ ರೂಲ್) ಎಂಬ ಹೊಸ ಅಧ್ಯಾಯಕ್ಕೆ ಆರಂಭವಾಯಿತು. ಈ ಲೇಖನಮಾಲಿಕೆಯಲ್ಲಿ ಅತಿ ಮುಖ್ಯವಾದ ಮತ್ತು ಅವನಿಗೆ ಬಹು ಕೀರ್ತಿ ತಂದ ಲೇಖನವೆಂದರೆ ವಿಷಮ ವಸ್ತುಗಳ ನಡುವಣ ಸಮತೋಲ. ಇದು 1876-78ರ ಅವಧಿಯಲ್ಲಿ ಹಲವು ಭಾಗಗಳಾಗಿ ಪ್ರಕಟವಾಯಿತು. ಅಮೆರಿಕನ್ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಸೈನ್ಸ್ ಸಂಸ್ಥೆಯು 1880ರಲ್ಲಿ ರುಮ್ ಫೋರ್ಡ್ ಪದಕವನ್ನಿತ್ತು ಸನ್ಮಾನಿಸಿತು[].


ಗಣಿತ ಮತ್ತು ಭೌತವಿಜ್ಞಾನಗಳಲ್ಲಿ ಈಗ ಒಂದು ಅತ್ಯವಶ್ಯ ಭಾಗವೆನಿಸಿರುವ ಸದಿಶವಿಶ್ಲೇಷಣೆಯ (ವೆಕ್ಟರ್ ಅನಾಲಿಸಿಸ್) ಅಭ್ಯಾಸಕ್ಕೆ 1881ರಲ್ಲಿ ಅಡಿಗಲ್ಲು ಹಾಕಿ ಅದನ್ನು ಗ್ರಹ, ಧೂಮಕೇತುಗಳ ಕಕ್ಷೆಗಳನ್ನು ಕಂಡುಹಿಡಿಯುವುದಕ್ಕೂ ಹರಳುಗಳ ರಚನೆಗಳನ್ನು ತಿಳಿಯುವುದಕ್ಕೂ ಗಿಬ್ಸ್ ಉಪಯೋಗಿಸಿದ[]. 1902ರಲ್ಲಿ ಪ್ರಕಟವಾದ ಅವನ ಕೊನೆ ಲೇಖನದ ಹೆಸರು ಸಂಖ್ಯಾಕಲನಶಾಸ್ತ್ರದ (ಸ್ಟ್ಯಾಟಿಸ್ಟಿಕ್ಸ್) ಮೂಲ ನಿಯಮಗಳು. ಇದು ಸಂಖ್ಯಾಕಲನಶಾಸ್ತ್ರದ ಬೆಳೆವಣಿಗೆಗೆ ಬಹು ನೆರವು ನೀಡಿತು. ಭೌತರಸಾಯನವಿಜ್ಞಾನದ ಆರಂಭಕ್ಕೆ ಕಾರಣನಾದ ಮಹಾವಿಜ್ಞಾನಿಯೆಂದೂ ಉಷ್ಣಗತಿಶಾಸ್ತ್ರದ ಎರಡನೆಯ ನಿಯಮವನ್ನು ರಾಸಾಯನಿಕ, ವಿದ್ಯುತ್ ಮತ್ತು ಉಷ್ಣಶಕ್ತಿಗಳಿಗೆ ಅಳವಡಿಸಿ ಅವುಗಳಿಂದ ಪಡೆಯಬಲ್ಲ ಉಪಯುಕ್ತ ಕ್ರಿಯಾಶಕ್ತಿಗಳ ಬಗ್ಗೆ ಸಂಶೋಧನೆ ನಡೆಸಿದ ಮೊದಲಿಗನೆಂದೂ ಗಿಬ್ಸ್ ನನ್ನು ಗೌರವಿಸಿ ರಾಯಲ್ ಸೊಸೈಟಿ 1901ರಲ್ಲಿ ಕಾಪ್ಲೇ ಪದಕವನ್ನಿತ್ತು ಸನ್ಮಾನಿಸಿತು[]. ಗಿಬ್ಸ್ ನ ಸಂಶೋಧನೆಗಳು ಉಷ್ಣಗತಿಶಾಸ್ತ್ರದ ಅಧ್ಯಯನದಲ್ಲಿ ಅವನ ಹೆಸರು ಸ್ಥಿರವಾಗಿ ನಿಲ್ಲುವಂತೆ ಮಾಡಿವೆ. ಅವನ ಹೆಸರು ಪಡೆದಿರುವ ಗಿಬ್ಸ್-ಡೂಹೆಮ್ ಮತ್ತು ಗಿಬ್ಸ್-ಹೆಲ್ಮಹಾಲ್ಟ್ಸ್ ಸಮೀಕರಣಗಳು ಅವನ ಸಂಶೋಧನೆಗಳ ಮೌಲ್ಯಕ್ಕೆ ಸಾಕ್ಷಿಯಾಗಿವೆ.

ಉಲ್ಲೇಖ

ಬದಲಾಯಿಸಿ
  1. https://docs.google.com/spreadsheets/d/1dsunM9ukGLgaW3HdG9cvJ_QKd7pWjGI0qi_fCb1ROD4/pubhtml?gid=534642132&single=true
  2. "ಆರ್ಕೈವ್ ನಕಲು". Archived from the original on 2021-06-14. Retrieved 2017-01-29.
  3. https://docs.google.com/spreadsheets/d/1dsunM9ukGLgaW3HdG9cvJ_QKd7pWjGI0qi_fCb1ROD4/pubhtml?gid=1336391689&single=true

ಬಾಹ್ಯ ಸಂಪರ್ಕ

ಬದಲಾಯಿಸಿ