ಜಸ್ಪಾಲ್ ರಾಣಾ
ಜಸ್ಪಾಲ್ ರಾಣಾ (ಜನನ ಜೂನ್ ೨೮, ೧೯೭೬) ಒಬ್ಬ ಭಾರತೀಯ ಗುರಿಕಾರ. ಇವರು ಪ್ರಧಾನವಾಗಿ ೨೫ ಮೀ ಸೆಂಟರ್ ಫೈರ್ ಪಿಸ್ತೋಲ್ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಇವರು ೧೯೯೪ರ ಏಶಿಯನ್ ಕ್ರೀಡೆಗಳು, ೨೦೦೬ರ ಕಾಮನ್ವೆಲ್ತ್ ಕ್ರೀಡೆಗಳು, ಹಾಗು ೨೦೦೬ರ ಏಶಿಯನ್ ಕ್ರೀಡೆಗಳಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಪ್ರಸಕ್ತದಲ್ಲಿ, ರಾಣಾ ಡೆಹ್ರಾಡೂನ್ ನಲ್ಲಿರುವ ಜಸ್ಪಾಲ್ ರಾಣಾ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ಅಂಡ್ ಟೆಕ್ನಾಲಜಿಯಲ್ಲಿ ತರಬೇತಿ ನೀಡುತ್ತಾರೆ.
Jaspal Rana | |
---|---|
ಜನನ | Uttarkhand, India | ೨೮ ಜೂನ್ ೧೯೭೬
ವೃತ್ತಿ | Sportsman (Shooter) |
ವೃತ್ತಿಜೀವನ
ಬದಲಾಯಿಸಿಆರಂಭದ ದಿನಗಳು
ಬದಲಾಯಿಸಿರಾಣಾ ಉತ್ತರಾಖಂಡದ ರಜಪೂತ್ ಕುಟುಂಬದಲ್ಲಿ ಜನಿಸಿದರು. ಅವರು ಮುಸ್ಸೋರಿ, ಡೆಹ್ರಾಡೂನ್ ನೈನ್ ಭಾಗ್ ಹಾಗು ನಂತರದಲ್ಲಿ ಡೆಲ್ಲಿಯಲ್ಲಿ ತಮ್ಮ ಆರಂಭಿಕ ಜೀವನವನ್ನು ಕಳೆದರು. ಅಲ್ಲದೇ K.V. ಏರ್ ಫೋರ್ಸ್ ಸ್ಟೇಷನ್ ತುಘಲಕಬಾದ್, ಹಾಗು ಸ್ತ. ಸ್ಟೀಫನ್ಸ್ ಹಾಗು ಶ್ರೀ ಅರಬಿಂದೋ ಕಾಲೇಜುಗಳಲ್ಲಿ ತಮ್ಮ ಶಿಕ್ಷಣ ಪೂರೈಸಿದರು. ಅವರ ತಂದೆ ನಾರಾಯಣ್ ಸಿಂಗ್ ರಾಣಾ, ಅವರ ಮೊದಲ ತರಬೇತುದಾರರು, ಇವರು ITBPಯ ಒಬ್ಬ ಅಧಿಕಾರಿ. ನಂತರದಲ್ಲಿ ಸಮಗ್ರವಾಗಿ ಟಿಬೋರ್ ಗನಜೋಲ್ ತರಬೇತಿ ನೀಡಿದರು.
ರಾಣಾ ತಮ್ಮ ೧೨ನೇ ವಯಸ್ಸಿನಲ್ಲಿ, ಅಹ್ಮದಾಬಾದ್ ನಲ್ಲಿ ನಡೆದ ೩೧ನೇ ರಾಷ್ಟ್ರೀಯ ಶೂಟಿಂಗ್ ಚ್ಯಾಂಪಿಯನ್ಶಿಪ್ ನಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಪ್ರದರ್ಶನ ನೀಡಿ ರಜತ ಪದಕವನ್ನು ತಮ್ಮದಾಗಿಸಿಕೊಂಡರು. ಅವರು ೪೬ನೇ ವಿಶ್ವ ಶೂಟಿಂಗ್ ಚ್ಯಾಂಪಿಯನ್ಶಿಪ್ ನಲ್ಲಿ ಚಿನ್ನದ ಪದಕ ಗೆಲ್ಲುವುದರ ಮೂಲಕ ಸ್ಟ್ಯಾಂಡರ್ಡ್ ಪಿಸ್ತೂಲ್ ಶೂಟಿಂಗ್ ನಲ್ಲಿ ಖ್ಯಾತಿಯನ್ನು ಗಳಿಸಿದರು.(ಜೂನಿಯರ್ ವಿಭಾಗ) ಜೊತೆಗೆ ೧೯೯೪ರಲ್ಲಿ ಇಟಲಿಯ ಮಿಲಾನ್ ನಲ್ಲಿ ವಿಶ್ವ ದಾಖಲೆ ಸ್ಥಾಪಿಸಿದರು.
ಅಂತರರಾಷ್ಟ್ರೀಯ ಪಂದ್ಯಗಳು
ಬದಲಾಯಿಸಿರಾಣಾ ತಮ್ಮ ಹೆಚ್ಚಿನ ಪದಕಗಳನ್ನು ಸೆಂಟರ್ ಫೈರ್ ಪಿಸ್ತೋಲ್ ವಿಭಾಗದಲ್ಲಿ ಗಳಿಸಿದ್ದಾರೆ, ಆದರೆ ಏರ್ ಪಿಸ್ತೋಲ್, ಸ್ಟ್ಯಾಂಡರ್ಡ್ ಪಿಸ್ತೋಲ್, ಫ್ರೀ ಪಿಸ್ತೋಲ್ ಹಾಗು ರಾಪಿಡ್ ಫೈರ್ ಪಿಸ್ತೋಲ್ ವಿಭಾಗಗಳಲ್ಲೂ ಪದಕಗಳನ್ನು ಗಳಿಸಿದ್ದಾರೆ. ಅವರು ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಮಟ್ಟದಲ್ಲಿ ೬೦೦ಕ್ಕೂ ಹೆಚ್ಚಿನ ಪದಕಗಳನ್ನು ಗಳಿಸಿದ್ದಾರೆ.
ದೋಹಾದಲ್ಲಿ ನಡೆದ ೨೦೦೬ ಏಶಿಯನ್ ಕ್ರೀಡೆಗಳಲ್ಲಿ, ೨೫ ಮೀ ಸೆಂಟರ್ ಫೈರ್ ಪಿಸ್ತೋಲ್ ನಲ್ಲಿ ೫೯೦ ಅಂಕಗಳನ್ನು ಗಳಿಸುವುದರೊಂದಿಗೆ ವಿಶ್ವ ದಾಖಲೆಯನ್ನು ಸಮನಾಗಿಸಿದರು.(ಇವರು ಈ ಕ್ರಮಾಂಕವನ್ನು ಈ ಹಿಂದೆ ಎರಡು ಬಾರಿ ಗಳಿಸಿದ್ದರು; ೧೯೯೫ರಲ್ಲಿ ಕೊಯಂಬತ್ತೂರ ಹಾಗು ೧೯೯೭ರಲ್ಲಿ ಬೆಂಗಳೂರುನಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಈ ಅಂಕಗಳನ್ನು ಪಡೆದಿದ್ದರು). ಭಾರತೀಯ ಒಲಂಪಿಕ್ ಅಸೋಸಿಯೇಶನ್, ಏಶಿಯನ್ ಕ್ರೀಡೆಗಳಲ್ಲಿ ಉತ್ತಮ ಸಾಧನೆ ತೋರಿದ ರಾಣಾರಿಗೆ 'ಅತ್ಯುತ್ತಮ ಕ್ರೀಡಾಪಟು' ಪ್ರಶಸ್ತಿಯನ್ನು ಘೋಷಿಸಿ ವಿವಾದಕ್ಕೆ ನಾಂದಿ ಹಾಡಿತು; ಆದರೆ ಪ್ರಶಸ್ತಿಯನ್ನು ಕೊರಿಯದ ತೆಹ್ವಾನ್ ಪಾರ್ಕ್ ಗೆ ನೀಡಲಾಯಿತು. ನಡೆದ ಪ್ರಮಾದದ ಬಗ್ಗೆ ರಾಣಾ ಹೆಚ್ಚಿನ ಪ್ರತಿಕ್ರಿಯೆ ತೋರಲಿಲ್ಲ.
ಪ್ರಮುಖ ಸಾಧನೆಗಳು
ಬದಲಾಯಿಸಿಹಿರೋಷಿಮದಲ್ಲಿ ನಡೆದ ೧೯೯೪ರ ಏಶಿಯನ್ ಕ್ರೀಡೆಗಳಲ್ಲಿ ಚಿನ್ನದ ಪದಕ
ಸಮರೇಶ್ ಜಂಗ್ ರ ಜತೆಗೂಡಿ ೨೦೦೬ರ ಕಾಮನ್ವೆಲ್ತ್ ಕ್ರೀಡೆಗಳಲ್ಲಿ ಪುರುಷರ ೨೫ಮೀ ಸೆಂಟರ್ ಫೈರ್ ಪಿಸ್ತೋಲ್(ಪ್ಯಾರಿಸ್)ನಲ್ಲಿ ಚಿನ್ನದ ಪದಕ
- ೭-೮ನೇ ಡಿಸೆಂಬರ್ ೨೦೦೬ರಲ್ಲಿ ನಡೆದ ೨೦೦೬ರ ಏಶಿಯನ್ ಕ್ರೀಡೆಗಳಲ್ಲಿ ೨೫ಮೀ ಸ್ಟ್ಯಾಂಡರ್ಡ್ ಪಿಸ್ತೋಲ್ ಹಾಗು ೨೫ಮೀ ಸೆಂಟರ್ ಫೈರ್ ಪಿಸ್ತೋಲ್ ನಲ್ಲಿ ಚಿನ್ನದ ಪದಕಗಳು[೧]
- ೨೫ಮೀ ಸೆಂಟರ್ ಫೈರ್ ಪಿಸ್ತೋಲ್ ವಿಭಾಗವನ್ನು ಗೆಲ್ಲುವುದರೊಂದಿಗೆ, ರಾಣಾ ೫೯೦ ಅಂಕಗಳನ್ನು ಕಲೆ ಹಾಕುವ ಮೂಲಕ ವಿಶ್ವ ದಾಖಲೆಯನ್ನು ಸಮನಾಗಿಸಿದರು.*
ಪ್ರಶಸ್ತಿಗಳು ಮತ್ತು ಮಾನ್ಯತೆ
ಬದಲಾಯಿಸಿ೧೯೯೪ರಲ್ಲಿ, ಕ್ರೀಡೆಯಲ್ಲಿನ ಉತ್ತಮ ಸಾಧನೆಗಾಗಿ ನೀಡುವ ಎರಡನೇ ಅತ್ಯುಚ್ಚ ಪ್ರಶಸ್ತಿ ಅರ್ಜುನ ಪ್ರಶಸ್ತಿಯನ್ನು ಭಾರತ ಸರ್ಕಾರವು ಹದಿನೆಂಟು ವರ್ಷದ ರಾಣಾರಿಗೆ ನೀಡಿ ಗೌರವಿಸಿತು, ಇಪ್ಪತ್ತೊಂದನೆ ವರ್ಷದ ಹೊತ್ತಿಗೆ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದರು ಹಾಗು ಈ ನಡುವೆ ಮದರ್ ತೆರೇಸಾರಿಂದ ರಾಷ್ಟ್ರೀಯ ನಾಗರಿಕ ಪುರಸ್ಕಾರ ಪಡೆದರು, ರಾಷ್ಟ್ರಮಟ್ಟದ ಇತರ ಪ್ರಶಸ್ತಿಗಳು ಅನಿರೀಕ್ಷಿತವಾಗಿ ಅವರೆಡೆಗೆ ಹರಿದುಬಂದವು.
ರಾಜಕೀಯ ಜೀವನ
ಬದಲಾಯಿಸಿರಾಣಾ ಭಾರತೀಯ ಜನತಾ ಪಕ್ಷದ ಒಬ್ಬ ಸದಸ್ಯರಾಗಿದ್ದಾರೆ. ಏಶಿಯನ್ ಕ್ರೀಡೆಗಳು ಮುಗಿದ ಸ್ವಲ್ಪ ದಿನಗಳ ನಂತರ, ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗು ಪಕ್ಷದ ಪರ ಪ್ರಚಾರ ಮಾಡುವ ತಮ್ಮ ಆಸಕ್ತಿಯ ಬಗ್ಗೆ ಸೂಚನೆ ನೀಡಿದರು. ಇತ್ತೀಚೆಗೆ BJP ರಾಷ್ಟ್ರೀಯ ಪಕ್ಷವು, ರಾಣಾ ಅವರು ಟೆಹ್ರಿ ಕ್ಷೇತ್ರದಿಂದ ಲೋಕ ಸಭೆಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಂದು ಪ್ರಕಟಿಸಿತು, ಈ ಕ್ಷೇತ್ರ ವ್ಯಾಪ್ತಿಯಲ್ಲಿ ಡೆಹ್ರಡೂನ್ ಪಟ್ಟಣ, ಉತ್ತರಕಾಶಿ ಹಾಗು ಉತ್ತರಾಖಂಡದ ಟೆಹ್ರಿ ಜಿಲ್ಲೆಯೂ ಸೇರಿದೆ.
ವೈಯಕ್ತಿಕ ಜೀವನ
ಬದಲಾಯಿಸಿಅವರು, ವಸ್ತ್ರ ವಿನ್ಯಾಸಕಿ ಹಾಗು ರಾಷ್ಟ್ರ ಮಟ್ಟದ ಗುರಿಕಾರ್ತಿ ರೀನಾ ರಾಣಾರನ್ನು ವರಿಸಿದ್ದಾರೆ, ಹಾಗು ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ, ಮಗಳು ದೇವಾನ್ಷಿ, ಹಾಗು ಮಗ ಯುವರಾಜ್.
ಬಾಹ್ಯ ಕೊಂಡಿಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ ರಾಣಾ ಏಷಿಯಾಡ್ ನಲ್ಲಿ ವಿಶ್ವ ದಾಖಲೆಯನ್ನು ಸಮನಾಗಿಸಿ, ಚಿನ್ನವನ್ನು ಗೆದ್ದರು