ಜಂಗಮ ಅಥವಾ ಜಂಗಮರು ಧಾರ್ಮಿಕ ಅಲೆದಾಡುವ ಸಂನ್ಯಾಸಿಯಾಗಿದ್ದಾರೆ. ಅವರು ಹಿಂದೂ ಶೈವದ ಪುರೋಹಿತರು ಅಥವಾ ಗುರುಗಳು. ಜಂಗಮರನ್ನು 'ಲಿಂಗಾಯತ' ಎಂದು ಕರೆಯುವುದರ ಬಗ್ಗೆ ಪುರಾತನ ಚರ್ಚೆ ಮತ್ತು ಪುರಾಣವಿದೆ, ಆದರೆ ಇದು ಸರಿಯಾಗಿಲ್ಲ.ಜಂಗಮರು ಶಿವನ ಅನುಯಾಯಿಗಳು. ಹನ್ನೆರಡು ಜ್ಯೋತಿರ್ಲಿಂಗ ದೇವಾಲಯಗಳಲ್ಲಿ ಅವರು ಪುರೋಹಿತರಾಗಿದ್ದಾರೆ.[೧][೨]

The Jangam , Shaiva order religious monks of India

ಜಂಗಮ ಪದದ ಆರ್ಥಸಂಪಾದಿಸಿ

ಜಂಗಮ ಪದಗಳು ನಾನಾ ಅರ್ಥಗಳನ್ನು ಕೊಡುತ್ತ ಶರಣರ ಚಳವಳಿಯ ವಿರಾಟ್ ದರ್ಶನವನ್ನು ಮಾಡಿಸುತ್ತವೆ. ಜಂಗಮ ಎಂದರೆ ಅನಂತವಾದ ಮತ್ತು ನಿರಂತರವಾದ ಚೈತನ್ಯ. ಜಂಗಮ ಎಂದರೆ ಚೈತನ್ಯರೂಪಿ ದೇವರು, ಜಂಗಮ ಎಂದರೆ ಚೈತನ್ಯರೂಪಿ ಅರಿವು, ಜಂಗಮ ಎಂದರೆ ಚೈತನ್ಯವನ್ನು ಒಳಗೊಂಡ ಇಡೀ ವಿಶ್ವ. ಜಂಗಮ ಎಂದರೆ ಜೀವಜಗತ್ತು, ಜಂಗಮ ಎಂದರೆ ಮಾನವ ಸಮಾಜ. ಜಂಗಮ ಎಂದರೆ, ಮಾನವಕುಲ ಬದುಕಲು ಯೋಗ್ಯವಾಗುವಂಥ ಸಮಾಜ ನಿರ್ಮಾಣಕ್ಕಾಗಿ ಶರಣಸಂಕುಲ ಕಂಡುಕೊಂಡ ಈ ಸತ್ಯವನ್ನು ಸಮರ್ಪಣಾಭಾವದಿಂದ ಸಾರುತ್ತ ಸಾಗುವ ಶರಣ.[೩]

ಜಂಗಮರ ಸಂಖ್ಯೆಸಂಪಾದಿಸಿ

ಕರ್ನಾಟಕ ರಾಜ್ಯದಲ್ಲಿ ಶೇ.2 ರಷ್ಟು ಜಂಗಮರಿದ್ದರು ಕೂಡ ಆರ್ಥಿಕ, ಶೈಕ್ಷಣಿಕ ಸಾಮಾಜಿಕ, ರಾಜಕೀಯ ಸೇರಿದಂತೆ ಎಲ್ಲ ರಂಗದಲ್ಲಿ ಹಿಂದುಳಿದಿದ್ದಾರೆ. ಇಂದಿನವರೆಗೂ ಸಾರ್ವಜನಿಕ ಎಲ್ಲ ಕ್ಷೇತ್ರಗಳಲ್ಲಿಯೂ ಮುಂದೆ ಬರಬೇಕು ಎಂದು ಅವರು ಕರೆ ನೀಡಿದರು.

ಜಂಗಮ ಸಮಾವೇಶಗಳುಸಂಪಾದಿಸಿ

ಅಕ್ಟೋಬರ ೨೫, ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಮಟ್ಟದ ಜಂಗಮ ಸಮಾಜದ ಬೃಹತ್ ಸಮಾವೇಶವನ್ನು ನಿಯೋಜಿಸಿತ್ತು.

ಜಂಗಮರುಸಂಪಾದಿಸಿ

ಜಂಗಮ ಲಿಂಗ, ವಿಭೂತಿ, ಜೋಳಿಗೆ, ಬೆತ್ತ , ಜೋಳದ ಹಿಟ್ಟು ಭಿಕ್ಷೆ ಅಥವಾ ಕಂತೆ ಭಿಕ್ಷೆ ಮಾಡುವುದನ್ನು ಕರ್ನಾಟಕದಲ್ಲಿ ಕಾಣಬಹುದು. ಕೇವಲ ಭಿಕ್ಷೆ ಬೇಡುವದಷ್ಟೆ ಅಲ್ಲ. ಸಮಾಜದಲ್ಲಿ ಬೆರೆತು ಹುಟ್ಟಿನಿಂದ ಅಂತ್ಯದವರೆಗೂ ಎಲ್ಲಾ ಕಾರ್ಯವನ್ನು ಮಾಡುವ ಪುರೋಹಿತನಾಗಿ, ಅವರು ನೀಡುವ ದಕ್ಷಿಣೆಯನ್ನು ಪಡೆದು, ಅವರಿಗೆ ಶುಭವನ್ನೇ ಆಶೀರ್ವದಿಸುವ ಗುರುವಾಗಿ, ಗ್ರಾಮದ ಸ್ವಾಮಿಯಾಗಿ ಶಿವನ ಪ್ರತಿರೂಪವೇ ಜಂಗಮ. ಅವನು ಸನ್ಯಾಸಿಯಲ್ಲ: ಸಂಸಾರಿಕನು ಈ ಜಂಗಮ. ಸಂಸಾರದ ಜಂಜಡ ಬಿಟ್ಟವನು ಸನ್ಯಾಸಿಯು ಜಂಗಮನಲ್ಲ. ಅವನು ಎಲ್ಲವನ್ನು ಬಿಟ್ಟವನು ಜಂಗಮ ಹೇಗೆ ಆದಾನು?. ಅವು ಸ್ವಾಮಿಯಾಗುವನೇ ಹೊರತು ಜಂಗಮನಲ್ಲ.

ಮೂಲ ಕಾಯಕಸಂಪಾದಿಸಿ

ಜಂಗಮರು ಜೋಳದ ಹಿಟ್ಟು ಭಿಕ್ಷೆ, ಕೋರಣ್ಯ ಭಕ್ಷೆ ಕಂತೆ ಭಿಕ್ಷೆ ಮತ್ತು ವೈದಿಕ ಕಾರ್ಯಕ್ರಮಗಳನ್ನು ನೆಡೆಸಿಕೊಂಡು ಬಂದವರು.ಸ್ವಗ್ರಾಮದಲ್ಲಿದ್ದರೆ ಹಿಟ್ಟನ್ನು , ಬೇರೆ ಊರಿಗೆ ಹೋದರೆ ಕಾಳು ಅಥವಾ ಕಂತಿ ಬಿಕ್ಷೆಯನ್ನು ಮಾಡುವ ಕಾಯಕ.

ಕಾಲಜ್ಞಾನ ಹೇಳುತ್ತಾ ಊರೂರು ತಿರುಗುತ್ತ ಇರುವ "ಸಾರುವ ಜಂಗಮ ಅಥವಾ ಸಾರುವ ಅಯ್ಯನವರು". ಲಿಂಗಕ್ಕೆ ಕಂತಿ ಮಾಡುವ "ಕಂತಿ ಜಂಗಮ" ಊರಿನಲ್ಲಿ ಪೌರೋಹಿತ್ಯ ಮಾಡುವ ಹಿರೇಮಠದಯ್ಯ. ಇವರಿಗೆ ಸಹಾಯಕನಾಗಿರುವ ಜಂಗಮನೇ "ಮಠಪತ್ತಿ" ಪತ್ರಿ ಹಂಚುವವರು "ಪತ್ರಿ ಮಠದವರು"

ಹೀಗೆ ಹಲವಾರು ಹೆಸರುಗಳಿಂದ ಜಂಗಮನು ಸಮಾಜದ ಕಾರ್ಯವನ್ನು ಸದಾ ಮಾಡುತ್ತ ಬಂದ ಪ್ರಯುಕ್ತ ಜಂಗಮ ಜಗದೋದ್ಧಾರಕ ಎಂದು ಎನಿಸಿಕೊಂಡಿರುತ್ತಾನೆ. ಪಂಚಾಚಾರ್ಯರು ಊರಿನ ಜಂಗಮನಿಲ್ಲದೇ ಮುಂದೆ ಹೋಗುವದಿಲ್ಲ. ಅವರಿಗೆ ಸಾಮೀಪ್ಯ ಜಂಗಮನು.

ಜಂಗಮ ದೀಕ್ಷೆಸಂಪಾದಿಸಿ

ವಟುಗಳಿಗೆ ವಿಭೂತಿ ಧಾರಣೆ, ಲಿಂಗ ಧಾರಣೆ, ಮಂತ್ರ ದೀಕ್ಷೆ ಜೊತೆಗೆ ಜೋಳಿಗೆ, ಬೆತ್ತ ಧಾರಣೆ ಮಾಡಲಾಗುತ್ತದೆ. ವೀರಶೈವರಲ್ಲಿ ಜಂಗಮ ದೀಕ್ಷೆ ಪಡೆದ ಸಂದರ್ಭ ನೀಡುವ ಜೋಳಿಗೆಯಲ್ಲಿ "ಕೋರು ಧಾನ್ಯ" ಬೇಡುವ ಪದ್ದತಿ. ವಟುಗಳು ಜೋಳಿಗೆ ಹೆಗಲಿಗೇರಿಸಿ "ಶಿವ ಶಿವ ಗುರು ಧರ್ಮ ಕೋರುಧಾನ್ಯ ಭಿಕ್ಷೆ " ನೀಡಿ ಎಂದು ವೀರಶೈವರ ಮನೆ ಮನೆಗೆ ತೆರಳಿ ಅವ್ರು ನೀಡುವ ಧಾನ್ಯ ಸ್ವೀಕರಿಸಿ, ಭಿಕ್ಷೆ ನೀಡಿದ ಕುಟುಂಬಕ್ಕೆ ಆಯುಸ್ಸು, ಅಶ್ವರ್ಯ ನೀಡಲೆಯಂದು ಶಿವ ಕರುಣಿಸಲಿಯಂದು ಆಶೀರ್ವದಿಸುವರು. ಸ್ವೀಕರಿಸಿದ ಭಿಕ್ಷೆಯನ್ನು ಮಠಕ್ಕೆ ಬರುವ ಭಕ್ತರಿಗೆ ದಾಸೋಹ ನೀಡಲಾಗುತ್ತದೆ.

ಜನಗಣತಿ ಗೊಂದಲಸಂಪಾದಿಸಿ

ಇದುವರೆಗಿನ ಜನಗಣತಿಯಲ್ಲಿ ವೀರಶೈವ, ಲಿಂಗಾಯತ ಅಥವಾ ವೀರಶೈವ ಜಂಗಮ ಅಥವಾ ಹಿಂದೂ ಲಿಂಗಾಯತ ಅಥವಾ ಹಿಂದೂ ಜಂಗಮ ಎಂದು ಬರೆದುಕೊಂಡು ಬಂದಿದ್ದಾರೆ. ೧೯೫೦ ಹಾಗೂ ಅದಕ್ಕೂ ಮೊದಲು ಜಂಗಮರ ಕಾಯಕ ಕೇವಲ ಧಾರ್ಮಿಕ ಭಿಕ್ಷೆ ಬೇಡುವುದು, ಭವಿಷ್ಯ ಹೇಳುವುದು ಮಾತ್ರ. ಕೆಲವರು ಜೋಳದ ಹಿಟ್ಟು ಭಿಕ್ಷೆ ಮಾಡಿದರೆ ಇನ್ನೂ ಕೆಲವರು ಕಂತೆ ಭಿಕ್ಷೆ ಮಾಡುತ್ತಿದ್ದರು. ಇನ್ನೂ ಕೆಲವು ಕಡೆ ಕಂತೆ ಭಿಕ್ಷೆ ಮಾಡುವವರಿದ್ದಾರೆ. ನಿಜಾಮರ ಕಾಲದಲ್ಲೂ ಇಂಥ ಜಂಗಮರನ್ನು ಬೇಡ ಜಂಗಮರೆಂದು ಗುರುತಿಸಲಾಗಿತ್ತು ಎಂದು ಹೇಳಿದರು.

ಉಲ್ಲೇಖಸಂಪಾದಿಸಿ

ಜಂಗಮ ಅಂದರೆ ಚಲಿಸುವುದು. ಚಲಿಸುವುದು ಅಂದರೆ ನಡೆದಾಡುವ ವ್ಯಕ್ತಿಯೂ ಅಲ್ಲ. ಶರಣರ ಹಲವಾರು ವಚನಗಳಲ್ಲಿ ಬಳಕೆಯಾಗಿರುವ ಜಂಗಮ ನಂಪುಸಕಾರ್ಥದಲ್ಲಿ ಪ್ರಯೋಗವಾಗಿರುವುದೆ ಈ ಮಾತಿಗೆ ಸಾಕ್ಷಿ. ಸಮಾಜವನ್ನು ಅವರು ಜಂಗಮವೆಂದು ಕರೆದಿರುವರೆ ಹೊರತು, ಒಂದು ಜಾತಿಯನ್ನು ಜಂಗಮವೆಂದು ಕರೆದಿಲ್ಲ. ಯಾವ ಆದರ್ಶಗಳನ್ನು ಹೇಳುತ್ತಾನೋ ಅದರಂತೆ ನಡೆಯುವವನೆ ಜಂಗಮ.[೪]

ಇವನ್ನೂ ನೋಡಿಸಂಪಾದಿಸಿ

ಉಲ್ಲೇಖಸಂಪಾದಿಸಿ

  1. Russell, R. V.; Lal, Hira (1995). The tribes and castes of the central provinces of India, Volume 1. Asian Educational Services. p. 222. ISBN 81-206-0833-X.
  2. Reddy, S. S. (2004). "Jangam". In Singh, Kumar Suresh; Bhanu, B. V.; Anthropological Survey of India (eds.). People of India: Maharashtra. Popular Prakashan. pp. 830–838. ISBN 81-7991-101-2.
  3. http://www.vicharamantapa.net/content/node?page=17[permanent dead link]
  4. http://thatskannada.oneindia.in/news/2010/04/21/celibacy-not-mandatory-for-seers-and-swamijees.html
"https://kn.wikipedia.org/w/index.php?title=ಜಂಗಮ&oldid=1098623" ಇಂದ ಪಡೆಯಲ್ಪಟ್ಟಿದೆ