ಚಿರತಗುಂಡು

ಕರ್ನಾಟಕ ರಾಜ್ಯದ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಒಂದು ಗ್ರಾಮ ಚಿರತಗುಂಡು

ಚಿರತಗುಂಡು - ಕರ್ನಾಟಕ ರಾಜ್ಯದ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಒಂದು ಗ್ರಾಮ ಚಿರತಗುಂಡು. ಇದರ ಮೊದಲಿನ ಹೆಸರು "ಚಿರತೆಗುಂಡು" ಅದು ಕಾಲ ಕ್ರಮೇಣ ಚಿರತಗುಂಡು ಆಯಿತು. ಇಲ್ಲಿಯ 'ಶ್ರೀ ಮಾರಿಕಾಂಬ ದೇವಸ್ಥಾನ'ವು ಪ್ರಸಿದ್ದವಾಗಿದೆ. 2020 ರ ಅಂಕಿಅಂಶಗಳ ಪ್ರಕಾರ 3,635 ಒಟ್ಟು ಜನಸಂಖ್ಯೆಯನ್ನು ಹೊಂದಿದ್ದು. ಪುರುಷ ಮತ್ತು ಸ್ತ್ರೀಯರ ಜನಸಂಖ್ಯೆ ಕ್ರಮವಾಗಿ 1845 ಮತ್ತು 1790.

ಚಿರತಗುಂಡು
Chirathagundu
Village
ದೇಶ ಭಾರತ
ರಾಜ್ಯ ಕರ್ನಾಟಕ
ಜಿಲ್ಲೆವಿಜಯನಗರ ಜಿಲ್ಲೆ
ತಾಲೂಕುಕೂಡ್ಲಿಗಿ
ಸರ್ಕಾರ
 • MLAಎನ್.ಯಲ್ಲಪ್ಪ ಗೋಪಾಲಕೃಷ್ಣ
Area
 • Total೧೨.೫ km (೪.೮ sq mi)
Population
 (2020)
 • Total೩,೬೩೫
 • ಸಾಂದ್ರತೆ೨೯೦/km (೭೫೦/sq mi)
ಭಾಷೆ
 • ಅಧಿಕೃತಕನ್ನಡ
ಸಮಯ ವಲಯಯುಟಿಸಿ+5:30 (IST)
ಪಿನ್ ಕೋಡ್
583126
ವಾಹನ ನೋಂದಣಿKA 35
ಮಾತನಾಡುವ ಭಾಷೆಗಳುಕನ್ನಡ, ತೆಲುಗು

ಇಲ್ಲಿ ಶೇಂಗಾ, ಹತ್ತಿ, ಮೆಕ್ಕೆಜೋಳ, ಸೂರ್ಯಕಾಂತಿ, ಜೋಳ, ಮತ್ತು ಇತರ ಪ್ರಮುಖ ಬೆಳೆಗಳನ್ನು ಬೆಳೆಯುತ್ತಾರೆ.

ಚಿರತಗುಂಡು ಗ್ರಾಮವು ಉಪ-ಜಿಲ್ಲಾ ಕೇಂದ್ರ ಕಚೇರಿ ಕೂಡ್ಲಿಗಿಯಿಂದ 42 ಕಿ.ಮೀ ಮತ್ತು ಜಿಲ್ಲಾ ಕೇಂದ್ರ ಕಚೇರಿ ಹೊಸಪೇಟೆಯಿಂದ 86.9 ಕಿ.ಮೀ ದೂರದಲ್ಲಿದೆ. 2020 ರ ಅಂಕಿಅಂಶಗಳ ಪ್ರಕಾರ, ಗ್ರಾಮದ ಒಟ್ಟು ಭೌಗೋಳಿಕ ವಿಸ್ತೀರ್ಣ 12.5 ಚದರ ಕಿಲೋಮೀಟರ್. 14°43 ರೇಖಾಂಶ ಮತ್ತು 76°36’ ಅಕ್ಷಾಂಶದಲ್ಲಿದ್ದು ಸಮುದ್ರ ಮಟ್ಟದಿಂದ 533 ಮೀ ಎತ್ತರದಲ್ಲಿದೆ. ಚಿರತಗುಂಡುವಿಗೆ ಸುಮಾರು 15 ಕಿ.ಮೀ ದೂರದಲ್ಲಿರುವ ಮೊಳಕಾಲ್ಮೂರು ಹತ್ತಿರದ ಪಟ್ಟಣವಾಗಿದೆ.

 
ಶ್ರೀ ಮಾರಿಕಾಂಬ ದೇವಸ್ಥಾನ
ಚಿರತಗುಂಡು ಗ್ರಾಮಪಂಚಾಯಿತಿಯ ಇತರೆ ಗ್ರಾಮಗಳು
  • ಜಿ ಬಿ ಹಟ್ಟಿ
  • ಕೊಂಬಿಹಳ್ಳಿ

ಈ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿವೆ.

ಹತ್ತಿರದಲ್ಲಿ -

  • ಸರ್ಕಾರಿ ಕಲಾ ಮತ್ತು ವಿಜ್ಞಾನ ಪದವಿ ಕಾಲೇಜು ಮತ್ತು ಖಾಸಗಿ ಐಟಿಎ ಕಾಲೇಜು ಮೊಳಕಲ್ಮೂರಿನಲ್ಲಿವೆ.
  • ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜು ಬಳ್ಳಾರಿಯಲ್ಲಿವೆ.
  • ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸಂಡೂರುನಲ್ಲಿದೆ.

ಆಹಾರ ವೈಶಿಷ್ಟ್ಯ

ಬದಲಾಯಿಸಿ

ರಾಗಿ ಮುದ್ದೆ, ಜೋಳದ ಮುದ್ದೆ ಮತ್ತು ಅನ್ನ ಇಲ್ಲಿನ ಆಹಾರ ಪದಾರ್ಥಗಳಾಗಿವೆ. ಜೋಳದ ರೊಟ್ಟಿ, ಶೇಂಗಾ ಚಟ್ನಿ ಪುಡಿ, ಹೊಂದಿರುವ ಆಹಾರ ತಿನಿಸುಗಳನ್ನು ಬಳಸಲಾಗುತ್ತದೆ.

ಈ ಗ್ರಾಮದಲ್ಲಿ ಕುಡಿಯುವ-ನೀರು ವರ್ಷಪೂರ್ತಿ ಮತ್ತು ಬೇಸಿಗೆಯಲ್ಲಿ ಲಭ್ಯವಿದೆ. ಈ ಗ್ರಾಮದಲ್ಲಿ ತೆರೆದ ಒಳಚರಂಡಿ ವ್ಯವಸ್ಥೆ ಲಭ್ಯವಿದೆ. ಬೀದಿಯಲ್ಲಿ ಕಸ ಸಂಗ್ರಹಿಸಲು ವ್ಯವಸ್ಥೆ ಇಲ್ಲ. 10 ಕಿ.ಮೀ ಗಿಂತ ಕಡಿಮೆ ರಾಜ್ಯ ಹೆದ್ದಾರಿ ಇಲ್ಲ. 10 ಕಿ.ಮೀ ಗಿಂತ ಕಡಿಮೆ ಇರುವ ಜಿಲ್ಲಾ ರಸ್ತೆ ಇಲ್ಲ. ಈ ಗ್ರಾಮದಲ್ಲಿ ಕಮರ್ಷಿಯಲ್ ಬ್ಯಾಂಕ್ ಇದೆ. ಅಂಗನವಾಡಿ ಕೇಂದ್ರ, ಆಶಾ, ಜನನ ಮತ್ತು ಮರಣ ನೋಂದಣಿ ಕಚೇರಿ, ಸಾರ್ವಜನಿಕ ಗ್ರಂಥಾಲಯ ಮತ್ತು ಮತದಾನದ ಕೇಂದ್ರವಿದೆ.

ಉಲ್ಲೇಖಗಳು

ಬದಲಾಯಿಸಿ

[] [] [] [] [] [] []

  1. "Chiratagundu Village". OneFiveNine. Retrieved 2024-10-27.
  2. "Chitrathagundu Village Information". VillageInfo.in. Retrieved 2024-10-27.
  3. "Chiratagundu Pincode". India TV News. Retrieved 2024-10-27.
  4. "Chiratagundu Pincode Information". Pincode.net.in. Retrieved 2024-10-27.
  5. "Chiratagundu Pincode Details". ABP Live. Retrieved 2024-10-27.
  6. "Gram Panchayat Chiratagundu Data". Local Body Data. Retrieved 2024-10-27.
  7. "Chiratagundu Pincode Map". Maps of India. Retrieved 2024-10-27.