ಕರ್ನಾಟಕ ಸಂಗೀತ
ಪರಿಕಲ್ಪನೆಗಳು

ಶ್ರುತಿಸ್ವರರಾಗತಾಳ ಮೇಳಕರ್ತಅಸಂಪೂರ್ಣ ಮೇಳಕರ್ತ

ಸಂಗೀತ ರಚನೆಗಳು

ವರ್ಣಮ್ಕೃತಿಗೀತಂಸ್ವರಜತಿರಾಗಂ ತಾನಂ ಪಲ್ಲವಿತಿಲ್ಲಾನ

ಸಂಗೀತೋಪಕರಣಗಳು

ಮಾಧುರ್ಯ: ಸರಸ್ವತಿ ವೀಣೆವೇಣು ಪಿಟೀಲುಚಿತ್ರ ವೀಣನಾದಸ್ವರಮ್ಯಾಂಡೊಲಿನ್

ತಾಳ: ಮೃದಂಗಘಟಂಮೋರ್ಸಿಂಗ್ಕಂಜೀರತವಿಲ್

ಝೇಂಕಾರ: ತಂಬೂರಶ್ರುತಿ ಪಟ್ಟಿಗೆ

ಸಂಗೀತಕಾರರು

ಟೆಂಪ್ಲೇಟು:ಕರ್ನಾಟಕ ಸಂಗೀತ - ಪ್ರಸಿದ್ಧ ಸಂಗೀತಗಾರರು

ಚಕ್ರವಾಕ (ರಾಗ) ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ಹದಿನಾರನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ತೋಜವೇಗವಾಹಿನಿ ಎಂದು ಹೆಸರಿಸಿದ್ದಾರೆ.[][] ಇದು ಹಿಂದೂಸ್ತಾನಿ ಸಂಗೀತ ಪದ್ಧತಿಯ ಅಹಿರ್ ಭೈರವ್ ರಾಗಕ್ಕೆ ಸಮೀಪವಾಗಿದೆ.ಈ ರಾಗ ಕೇಳುಗರಲ್ಲಿ ಭಕ್ತಿ ಮತ್ತು ಸಹಾನುಭೂತಿ ಮೂಡಿಸುತ್ತದೆ.

ರಾಗ ಲಕ್ಷಣ ಮತ್ತು ಸ್ವರೂಪ

ಬದಲಾಯಿಸಿ
 
Chakravakam scale with Shadjam at C

ಇದು ತೃತೀಯ "ಅಗ್ನಿ" ಚಕ್ರದ ನಾಲ್ಕನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ.
ಆರೋಹಣ ಸ ರಿ೧ ಗ೩ ಮ೦ ಪ ದ೨ ನಿ೨ ಸ'
ಅವರೋಹಣ ಸ' ನಿ೨ ದ೨ ಪ ಮ೧ ಗ೩ ರಿ೧ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.

ಜನ್ಯ ರಾಗಗಳು

ಬದಲಾಯಿಸಿ

ಈ ರಾಗಕ್ಕೆ ಕೆಲವು ಜನ್ಯ ರಾಗಗಳಿದ್ದು ಹೆಚ್ಚು ಪ್ರಚಲಿತದಲ್ಲಿರುವ ರಾಗಗಳು ಬಿಂದುಮಾಲಿನಿ, ಕಲಾವತಿ (ರಾಗ), ಮಲಯಮಾರುತ,ವಾಲಜಿ ಮುಂತಾದವುಗಳು. ಇದರಲ್ಲಿ ಮಲಯಮಾರುತ,ವಾಲಜಿ ಹೆಚ್ಚು ಜನಪ್ರಿಯವಾಗಿದೆ.

ಜನಪ್ರಿಯ ರಚನೆಗಳು

ಬದಲಾಯಿಸಿ

ಈ ರಾಗದಲ್ಲಿ ಜನಪ್ರಿಯ ರಚನೆಗಳು

ವಿಧ ಕೃತಿ ವಾಗ್ಗೇಯಕಾರ ತಾಳ
ಕೃತಿ ಕಾನಕ್ಕನ್‍ಕೋಟಿ ವೆಂಡಮ್ ಕೋಟೀಶ್ವರ್ ಅಯ್ಯರ್
ಕೃತಿ ಫಿಬರೇ ರಾಮರಸಂ ಸದಾಶಿವ ಬ್ರಹ್ಮೇಂದ್ರ {ಅಹಿರ್ ಭೈರವ್] ಹಿಂದೂಸ್ತಾನಿ ಪದ್ಧತಿ
ಕೃತಿ ಸುಗುಣಮೂಲೇ ತ್ಯಾಗರಾಜರು

ಉಲ್ಲೇಖಗಳು

ಬದಲಾಯಿಸಿ
  1. Ragas in Carnatic music by Dr. S. Bhagyalekshmy, Pub. 1990, CBH Publications
  2. Raganidhi by P. Subba Rao, Pub. 1964, The Music Academy of Madras

ಬಾಹ್ಯ ಸಂಪರ್ಕಗಳು

ಬದಲಾಯಿಸಿ