ಗ್ರೀನ್‌ವಿಚ್ ಸರಾಸರಿ ಕಾಲಮಾನ

ಗ್ರೀನ್‌ವಿಚ್ ಸರಾಸರಿ ಕಾಲಮಾನ (GMT ) ಎಂಬ ಶಬ್ದವು ಮೂಲತ: ಗ್ರೀನ್‌ವಿಚ್, ಲಂಡನ್ನಲ್ಲಿರುವ ರಾಯಲ್ ವೀಕ್ಷಣಾಲಯದಲ್ಲಿ ಸರಾಸರಿ ಸೌರ ಕಾಲವನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಟೈಮ್ ಜೊನ್(ಕಾಲವಲಯ) ಎಂದು ಪರಿಗಣಿಸಿದಾಗ,ಪರಸ್ಪರ ಹೊಂದಾಣಿಕೆಯ ಸಾರ್ವತ್ರಿಕ ಕಾಲ(UTC)ವನ್ನು ಉಲ್ಲೇಖಿಸುವಾಗ ಬಳಸಿಕೊಳ್ಳಲಾಗುತ್ತದೆ. ವಿಶೇಷವಾಗಿ ಇದನ್ನು ಯುನೈಟೆಡ್ ಕಿಂಗ್ಡಂನೊಂದಿಗೆ ಸಂಪರ್ಕ ಹೊಂದಿರುವ ಘಟಕಗಳಾದ BBC ವರ್ಲ್ಡ್ ಸರ್ವಿಸ್, ದಿ ರಾಯಲ್ ನೇವಿ, ದಿ ಮೆಟ್ ಆಫೀಸ್ ಹಾಗು ಇತರರು ಬಳಸಿಕೊಳ್ಳುತ್ತಾರೆ. ಆದಾಗ್ಯೂ UTC ಕರಾರುವಾಕ್ಕಾಗಿ ಒಂದು ಪರಮಾಣು ಕಾಲಮಾಪಕವಾಗಿದ್ದು ಇದು ಸರಿಸುಮಾರು GMTಗೆ 0.9 ಸೆಕೆಂಡ್‌ಗಳ ಸಹನೀಯ ವ್ಯತ್ಯಾಸದೊಂದಿಗೆ ಬಹುಸಮೀಪವಿದೆ. ಇದನ್ನು ಯುನಿವೆರ್ಸಲ್ ಟೈಮ್ (ಸಾರ್ವತ್ರಿಕ ಕಾಲ)ನ್ನು ಉಲ್ಲೇಖಿಸಲು ಸಹ ಬಳಸಿಕೊಳ್ಳಲಾಗುತ್ತದೆ. ಈ ಪ್ರಮಾಣಬದ್ದ ಖಗೋಳ ಶಾಸ್ತ್ರದ ಕಲ್ಪನೆಯನ್ನು ಹಲವು ತಾಂತ್ರಿಕ ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ. ಜೊತೆಗೆ ಇದು ಜುಲು ಟೈಮ್ ಎಂಬ ನುಡಿಗಟ್ಟಿನಿಂದಲೂ ಉಲ್ಲೇಖಿತವಾಗಿದೆ.UKನಲ್ಲಿ, GMT ಚಳಿಗಾಲದಲ್ಲಿ ಮಾತ್ರ ಅಧಿಕೃತ ಕಾಲಮಾನ. ಬೇಸಿಗೆ ಕಾಲದ ಅವಧಿಯಲ್ಲಿ ಬ್ರಿಟಿಶ್ ಸಮ್ಮರ್ ಟೈಮ್ ಅನ್ನು ಬಳಸಲಾಗುತ್ತದೆ. GMTಯು ಮುಖ್ಯವಾಗಿ ವೆಸ್ಟೆರ್ನ್ ಯುರೋಪಿಯನ್ ಕಾಲಕ್ಕೆ ಸಮಾನವಾಗಿದೆ.[೧]ಭೂಮಿಯು ಅದರ ದೀರ್ಘ ಅಂಡಾಕಾರದ ಕಕ್ಷೆಯಲ್ಲಿ ಅಸಮಾನ ವೇಗದ ಪರಿಭ್ರಮಣ ಹಾಗೂ ಅದರ ಕಕ್ಷೆಯಲ್ಲಿ ಬಾಗುವಿಕೆಯಿಂದ ಮಧ್ಯಾಹ್ನ ಗ್ರೀನ್‌ವಿಚ್ ಸರಾಸರಿ ಕಾಲಮಾನ ಎಂದರೆ ಮಧ್ಯಾಹ್ನದಲ್ಲಿ ಸೂರ್ಯ ಗ್ರೀನ್‌ವಿಚ್ ಮೆರಿಡಿಯನ್(ಗ್ರೀನ್‌ವಿಚ್ ಮಧ್ಯಾಹ್ನ ರೇಖೆ)(ಹಾಗೂ ಗ್ರೀನ್‌ವಿಚ್‌ನಲ್ಲಿ ಆಕಾಶದಲ್ಲಿ ಅದರ ತುತ್ತ ತುದಿಯನ್ನು ಮುಟ್ಟುವುದು) ದಾಟುವ ಕ್ಷಣ ಆಗಿರಬೇಕಾದ ಅವಶ್ಯಕತೆಯಿಲ್ಲ. ಇದು ಮಧ್ಯಾಹ್ನದ GMTಯಿಂದ 16 ನಿಮಿಷಗಳ ಅಂತರದವರೆಗೂ ಸಂಭವಿಸಬಹುದು. (ಈ ವ್ಯತ್ಯಾಸವನ್ನು ಈಕ್ವೆಶನ್ ಆಫ್ ಟೈಮ್(ಒಂದು ಸ್ಪಷ್ಟ ಸೌರಕಾಲ ಹಾಗು ಸರಾಸರಿ ಸೌರಕಾಲದ ನಡುವಿನ ವ್ಯತ್ಯಾಸ)ಎಂದು ಕರೆಯುತ್ತಾರೆ). ಕಾಲ್ಪನಿಕ ಸರಾಸರಿ ಸೂರ್ಯ ಎಂದರೆ ನೈಜ ಸೂರ್ಯನ ಅಸಮಾನ ಚಲನೆಯ ವಾರ್ಷಿಕ ಸರಾಸರಿಯಾಗಿದ್ದು, ಗ್ರೀನ್‌ವಿಚ್ ಸರಾಸರಿ ಕಾಲಮಾನದಲ್ಲಿ ಸರಾಸರಿ ಪದವನ್ನು ಸೇರಿಸುವ ಅವಶ್ಯಕತೆ ಕಂಡುಬಂದಿದೆ.ಐತಿಹಾಸಿಕವಾಗಿ GMT ಎಂಬ ಪದವನ್ನು ಎರಡು ವಿಭಿನ್ನ ರೂಢಿಗಳಲ್ಲಿ ಗಂಟೆಗಳನ್ನು ಲೆಕ್ಕ ಹಾಕುವುದಕ್ಕೆ ಬಳಸಿಕೊಳ್ಳಲಾಗುತ್ತದೆ. ಹಳೆಯ ಖಾಗೋಳಿಕ ಸಂಪ್ರದಾಯದಲ್ಲಿ (ಜನವರಿ 1, 1925ಕ್ಕೆ ಪೂರ್ವದಲ್ಲಿ)ಮಧ್ಯಾಹ್ನವನ್ನು ಶೂನ್ಯ ಸಮಯವೆಂದು ಉಲ್ಲೇಖಿಸಲಾಗಿತ್ತು. ಆದರೆ ಅದೇ ಅವಧಿಯಲ್ಲಿ ನಾಗರಿಕ ಸಂಪ್ರದಾಯವು ನಡುರಾತ್ರಿ ಯನ್ನು ಶೂನ್ಯ ಸಮಯವೆಂದು ಸೂಚಿಸುತ್ತಿತ್ತು. ನಂತರದ ಸಂಪ್ರದಾಯವು ನವೀನ ರೂಢಿಯಾಗಿ(ಜನವರಿ 1, 1925ಕ್ಕೆ ಹಾಗು ನಂತರದಲ್ಲಿ) ಖಗೋಳ ಶಾಸ್ತ್ರದಲ್ಲಿ ಹಾಗು ನಾಗರಿಕ ಉದ್ದೇಶಗಳಿಗೆ ಅಸ್ತಿತ್ವಕ್ಕೆ ಬಂದಿತು. ಅತ್ಯಂತ ಸ್ಪಷ್ಟ ಶಬ್ದಗಳಾದ UT ಹಾಗು UTC ಈ ದ್ವಂದ್ವಾರ್ಥತೆಯನ್ನು ಹೊಂದಿರುವುದಿಲ್ಲ. ಇವುಗಳು ಯಾವಾಗಲು ಮದ್ಯರಾತ್ರಿಗೆ ಶೂನ್ಯ ಸಮಯವೆಂದು ಸೂಚಿಸುತ್ತಿದ್ದವು.

ಯುರೋಪಿನ ಕಾಲಮಾನಗಳು:
ತಿಳಿ ನೀಲಿ ಪಶ್ಚಿಮ ಯುರೋಪಿನ ಕಾಲಮಾನ (UTC+೦)
ನೀಲಿ ಪಶ್ಚಿಮ ಯುರೋಪಿನ ಕಾಲಮಾನ (UTC+೦)
ಪಶ್ಚಿಮ ಯುರೋಪಿನ ಬೇಸಿಗೆ ಕಾಲಮಾನ (UTC+೦೧:೦೦)
ಕಂದು ಕೇಂದ್ರ ಯುರೋಪಿನ ಕಾಲಮಾನ (UTC+೦೧:೦೦)
ಪಶ್ಚಿಮ ಯುರೋಪಿನ ಬೇಸಿಗೆ ಕಾಲಮಾನ (UTC+೦೨:೦೦)
ಹಳದಿ ಪೂರ್ವ ಯುರೋಪಿನ ಕಾಲಮಾನ (UTC+೦೨:೦೦)
ಪೂರ್ವ ಯುರೋಪಿನ ಬೇಸಿಗೆ ಕಾಲಮಾನ (UTC+೦೩:೦೦)
ತಿಳಿ ಹಸಿರು ದೂರದ ಪೂರ್ವ ಯುರೋಪಿನ ಕಾಲಮಾನ/
ಮಾಸ್ಕೋ ಕಾಲಮಾನ (UTC+೦೩:೦೦)
ತಿಳಿ ಬಣ್ಣಗಳು ಬೇಸಿಗೆ ಕಾಲಮಾನವನ್ನು ಅನುಸರಿಸದ ದೇಶಗಳನ್ನು ಸೂಚಿಸುತ್ತದೆ: ಬೆಲಾರಸ್, ಐಸ್‍ಲ್ಯಾಂಡ್, ರಷ್ಯಾ, ಟರ್ಕಿ.
Time zones of Africa:
    UTC−01:00 Cape Verde Time (The islands of Cape Verde are to the west of the African mainland.)
    UTC±00:00 Western European Time · Greenwich Mean Time
    UTC+01:00 Central European Time · West Africa Time · Western European Summer Time.
    UTC+02:00 Central Africa Time · Eastern European Time · South African Standard Time · West Africa Summer Time
    UTC+03:00 East Africa Time
    UTC+04:00 Mauritius Time · Seychelles Time
Striped colours indicate countries observing daylight saving time. Outside Africa the zones may have other names and summer time rules not indicated in this figure.
ನಿಗದಿತ ಮಾಪನಗಳೊಂದಿಗೆ ಗ್ರೀನ್‌ವಿಚ್ ಗಡಿಯಾರ.

ಇತಿಹಾಸ ಬದಲಾಯಿಸಿ

ಯುನೈಟೆಡ್ ಕಿಂಗ್ಡಂ ಒಂದು ಮುಂದುವರಿದ ಕಡಲತಡಿಯ ರಾಷ್ಟ್ರವಾಗಿ ಅಭಿವೃದ್ದಿ ಹೊಂದಿದ ಮೇಲೆ, ಬ್ರಿಟೀಶ್ ನಾವಿಕರು GMTಯ ಮೇಲೆ ಕನಿಷ್ಠ ಒಂದು ಕಾಲಮಾಪಕ ವನ್ನು ಇರಿಸಿದರು. ಇದು ಅವರಿಗೆ ಗ್ರೀನ್ ವಿಚ್ ಮೆರಿಡಿಯನ್ ನಿಂದ ತಮ್ಮ ರೇಖಾಂಶವನ್ನು ಎಣಿಕೆ ಮಾಡಲು ಸಹಾಯಕವಾಗಿತ್ತು. ಇದನ್ನು ಸಾಂಪ್ರದಾಯಿಕವಾಗಿ ಶೂನ್ಯ ಡಿಗ್ರಿಯ ರೇಖಾಂಶವೆಂದು ಪರಿಗಣಿಸಲಾಗುತ್ತಿತ್ತು( ಈ ಸಂಪ್ರದಾಯವನ್ನು 1884ರ ಇಂಟರ್ ನ್ಯಾಷನಲ್ ಮೆರಿಡಿಯನ್ ಸಮಾವೇಶದಲ್ಲಿ ಸಾರ್ವತ್ರಿಕವಾಗಿ ಅನುಮೋದಿಸಲಾಯಿತು). ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕಾಲಮಾಪಕದ ಜೊತೆ GMTಯನ್ನು ಸಮನ್ವಯಗೊಳಿಸಿದ್ದರಿಂದ ಹಡಗಿನ ಸಮಯಕ್ಕೆ ಯಾವುದೇ ಪರಿಣಾಮ ಉಂಟಾಗಲಿಲ್ಲ, ಅದು ಆಗ ಕೂಡ ಸೌರಮಾನ ಕಾಲದಲ್ಲೇ ಇತ್ತು. ಆದರೆ ಈ ಆಚರಣೆ ಹಾಗೂ ಇತರ ದೇಶದ ನಾವಿಕರು ಗ್ರೀನ್‌ವಿಚ್‌ನಲ್ಲಿನ ವೀಕ್ಷಣೆಗಳ ಆಧಾರದ ಮೇಲೆ ಬಳಸಿದ ನೆವಿಲ್ ಮಸ್ಕೆಲೈನ್ಚಂದ್ರನ ದೂರವಿಧಾನವು ಸಂಯೋಜಿತವಾದಾಗ, ಅಂತಿಮವಾಗಿ GMTಯನ್ನು ವಿಶ್ವವ್ಯಾಪಿಯಾಗಿ ಸ್ಥಳದಿಂದ ಪ್ರತ್ಯೇಕವಾದ ವೇಳಾ ಸೂಚಿಯಾಗಿ ಬಳಸಿಕೊಳ್ಳಲಾಯಿತು. ಹೆಚ್ಚಿನ ಟೈಮ್ ಜೊನ್ಸ್(ಕಾಲವಲಯ)ಗಳು ಈ ವೇಳಾ ಸೂಚಿಯ ಮೇಲೆ ಆಧಾರಿತವಾಗಿದೆ. ಇವುಗಳು ಗಂಟೆಗಳು ಹಾಗು ಅರ್ಧ ಗಂಟೆಗಳ ಲೆಕ್ಕದಲ್ಲಿ "GMTಗಿಂತ ಮುಂದಿರುತ್ತವೆ" ಅಥವಾ "GMTಗಿಂತ ಹಿಂದಿರುತ್ತವೆ".

ಗ್ರೀನ್‌ವಿಚ್ ಸರಾಸರಿ ಕಾಲಮಾನವನ್ನು ಗ್ರೇಟ್ ಬ್ರಿಟನ್ ನ ದ್ವೀಪದುದ್ದಕ್ಕೂ 1847ರಲ್ಲಿ ರೈಲ್ವೆ ಕ್ಲೀಯರಿಂಗ್ ಹೌಸ್ ಅಳವಡಿಸಿಕೊಂಡಿತು. ಅದರ ನಂತರ ವರ್ಷದಲ್ಲಿ ಹೆಚ್ಚು ಕಡಿಮೆ ಎಲ್ಲ ರೈಲ್ವೆ ಕಂಪನಿಗಳು ಇದನ್ನು ಅಳವಡಿಸಿಕೊಂಡವು. ಇದರಿಂದಾಗಿಯೇ "ರೈಲ್ವೆ ಟೈಮ್" ಎಂಬ ಪದ ಹುಟ್ಟಿಕೊಂಡಿದೆ. ಇದನ್ನು ಕ್ರಮೇಣವಾಗಿ ಇತರ ಉದ್ದೇಶಗಳಿಗಾಗಿ ಅಳವಡಿಸಿಕೊಳ್ಳಲಾಯಿತು. ಆದರೆ 1858ರಲ್ಲಿ ನಡೆದ ಒಂದು ಕಾನೂನಿನ ವ್ಯಾಜ್ಯವು "ಸ್ಥಳೀಯ ಮಾಧ್ಯಕಾಲ"ವನ್ನು ಅಧಿಕೃತ ಸಮಯವೆಂದು ಘೋಷಿಸಿತು. ಇದು 1880ರಲ್ಲಿ ಬದಲಾವಣೆ ಹೊಂದುವುದರ ಜೊತೆಗೆ GMTಯನ್ನು ಕಾನೂನುಬದ್ದವಾಗಿ ಗ್ರೇಟ್ ಬ್ರಿಟನ್ ದ್ವೀಪದುದ್ದಕ್ಕೂ ಅಳವಡಿಸಿಕೊಳ್ಳಲಾಯಿತು. GMTಯನ್ನು 1883ರಲ್ಲಿ ಐಲ್ ಆಫ್ ಮ್ಯಾನ್ ಗೆ, 1898ರಲ್ಲಿ ಜೆರ್ಸೆಯ್ ಗೆ ಹಾಗು 1913ರಲ್ಲಿ ಗುಎರ್ನ್ಸೇಯ್ ಗೆ ಅಳವಡಿಸಲಾಗಿದೆ. ಐರ್ಲ್ಯಾಂಡ್ ಗ್ರೀನ್ ವಿಚ್ ಮೀನ್ ಟೈಮ್ ಅನ್ನು 1916ರಲ್ಲಿ ಅಳವಡಿಸಿಕೊಂಡಿತು. ಇದು ಡಬ್ಲಿನ್ ಮೀನ್ ಟೈಮ್ ನ ಸ್ಥಾನವನ್ನು ಆಕ್ರಮಿಸಿತು.[೨] ಗಂಟೆಗಳ ವೇಳಾ ಸಂಕೇತಗಳನ್ನು ಗ್ರೀನ್‌ವಿಚ್ ವೀಕ್ಷಣಾಲಯದಿಂದ ಮೊದಲ ಬಾರಿಗೆ 5 ಫೆಬ್ರವರಿ 1924ರಂದು ಬಿತ್ತರಿಸಲಾಯಿತು. ಈ ಪ್ರಕ್ರಿಯೆಯಿಂದ ವೀಕ್ಷಣಾಲಯದಲ್ಲಿದ್ದ ಕಾಲಗುಂಡನ್ನುನಿರುಪಯುಕ್ತವಾಗಿ ಮಾಡಿತು.ಭೂಮಿಯ ನಿತ್ಯದ ಪರಿಭ್ರಮಣವು ಸ್ವಲ್ಪಮಟ್ಟಿಗೆ ಕ್ರಮರಾಹಿತ್ಯವಾಗಿದ್ದು (ನೋಡಿ ΔT)ಜೊತೆಗೆ ಸ್ವಲ್ಪಮಟ್ಟಿಗೆ ನಿಧಾನವಾಗುತ್ತಿದೆ; ಪರಮಾಣು ಗಡಿಯಾರ ವು ಇದಕ್ಕಿಂತ ಹೆಚ್ಚು ಸ್ಥಿರವಾದ ಕಾಲಮಾನದ ಆಧಾರವನ್ನು ಹೊಂದಿದೆ. ಕಳೆದ ಜನವರಿ 1, 1972ರಲ್ಲಿ, GMTಯನ್ನು ಹೊಂದಾಣಿಕೆಯ ಸಾರ್ವತ್ರಿಕ ಕಾಲಮಾನದಿಂದ ಅಂತಾರಾಷ್ಟ್ರೀಯ ಕಾಲಸೂಚಿಯಾಗಿ ಬದಲಾವಣೆ ಮಾಡಲಾಯಿತು. ವಿಶ್ವದಾದ್ಯಂತ ಇರುವ ಸಮಗ್ರ ಪರಮಾಣು ಗಡಿಯಾರಗಳು ಇದನ್ನು ನಿರ್ವಹಿಸುತ್ತವೆ. ಸಾರ್ವತ್ರಿಕ ಸಮಯ (UT) ಎಂಬ ಪದವನ್ನು 1928ರಲ್ಲಿ ಪರಿಚಯಿಸಲಾಯಿತು; ಇದು ಪ್ರಾರಂಭದಲ್ಲಿ ಗ್ರೀನ್ ವಿಚ್‌ ಮೀನ್‌ಟೈಮ್ ಅನ್ನು ನಿರೂಪಿಸಿತು. ಮುಂಚಿತವಾಗಿ ವ್ಯಾಖ್ಯಾನಿಸಿದ ಯುನಿವೆರ್ಸಲ್ ಡೇ ಗೆ ಹೊಂದಿಕೆಯಾಗುವಂತೆ ಸಾಂಪ್ರದಾಯಿಕವಾಗಿ ಇದನ್ನು ಬಳಸಲಾಯಿತು. ನಂತರ 1 ಜನವರಿ 1956ರಲ್ಲಿ (1955ರಲ್ಲಿ ಡಬ್ಲಿನ್‌ನಲ್ಲಿ ನಡೆದ IAUನಲ್ಲಿ ವಿಲ್ಲಿಯಮ್ ಮಾರ್ಕೋವಿಟ್ಜ್ ಅವರು ಮಂಡಿಸಿದ ಉಪಕ್ರಮಗಳ ಆಧಾರದ ಮೇಲೆ ನಿರ್ಧಾರವಾಗಿದೆ) UTಯ ಈ 'ಅಪರಿಷ್ಕೃತ' ರೂಪವನ್ನು UT0 ಎಂದು ಮರು ನಾಮಕರಣ ಮಾಡಲಾಯಿತು. ಜೊತೆಗೆ ಇದನ್ನುUT1 ನವೀಕೃತ ರೂಪಗಳು (UT0 ಪೋಲಾರ್ ವಾನ್ಡರಿಂಗ್(ಧ್ರುವಗಳ ಚಲನೆ) ಪರಿಣಾಮಗಳಿಗೆ ಸಮನಾಗಿಸಲಾಯಿತು) ಜೊತೆಗೆ UT2 (UT1ಯನ್ನು ಇನ್ನಷ್ಟು ಭೂಮಿಯ ಪರಿಭ್ರಮಣದ ವೇಗದಲ್ಲಿ ವಾರ್ಷಿಕ ಋತುಗಳ ಪರಿವರ್ತನೆಗಳಿಗೆ ಸಮನಾಗಿಸಲಾಯಿತು)ಪರಿಣಾಮಕಾರಿಯಾಗಿ ಹಿಂದಿಕ್ಕಿದವು. ಲೀಪ್ ಸೆಕೆಂಡ್ ಗಳನ್ನು ಇತ್ತೀಚಿಗೆ UT1ನ 0.9 ಸೆಕೆಂಡ್‌ಗಳ ಒಳಗೆ ಇಡುವ ಉದ್ದೇಶದಿಂದ UTCಗೆ ಸೇರಿಸಲಾಗಿದೆ ಅಥವಾ ಕಳೆಯಲಾಗಿದೆ.

ವಾಸ್ತವವಾಗಿ, ಗ್ರೀನ್ ವಿಚ್ ಮೆರಿಡಿಯನ್ ಕೂಡ ಇರಬೇಕಾಗಿದ್ದ ಹಾಗೆ ಇಲ್ಲ- 'ಗ್ರೀನ್‌ವಿಚ್ ವೀಕ್ಷಣಾಲಯದ ಚಲಿಸುವ ಸಾಧನದ ಕೇಂದ್ರ' ಎಂದು ಅದು ಉಲ್ಲೇಖಿತವಾಗಿತ್ತು. ಆದಾಗ್ಯೂ ಸಾಧನವು ಕಾರ್ಯನಿರ್ವಹಣಾ ಸ್ಥಿತಿಯಲ್ಲೇ ಉಳಿದಿದ್ದರೂ, ಅದನ್ನು ಬಳಸಿಕೊಳ್ಳಲಾಗುತ್ತಿಲ್ಲ. ಜೊತೆಗೆ ಈಗ ವಿಶ್ವದ ರೇಖಾಂಶದ ಮೂಲ ಮೆರಿಡಿಯನ್ ಹಾಗು ಸಮಯವನ್ನು ಕಟ್ಟುನಿಟ್ಟಾಗಿ ಬೌತಿಕ ರೂಪದಲ್ಲಿ ವ್ಯಾಖ್ಯಾನಿಸಿಲ್ಲ. ಆದರೆ ಅದು ಎಲ್ಲ ಕಾಲ ನಿರ್ಧಾರಿತ ಕೇಂದ್ರಗಳ ವೀಕ್ಷಣೆಗಳ ಫಲದಿಂದ ಸಿಕ್ಕಿದ ಸಂಖ್ಯಾಶಾಸ್ತ್ರೀಯ ಪರಿಹಾರದಿಂದ ವ್ಯಾಖ್ಯಾನಿಸಲಾಗಿದೆ. ಇದನ್ನು BIPMಯು ಜಗತ್ತಿನ ವೇಳಾ ಸಂಕೇತಗಳನ್ನು ಸಂಯೋಜಿಸುವಾಗ ಗಣನೆಗೆ ತೆಗೆದುಕೊಳ್ಳುತ್ತದೆ. ಅದೇನೇ ಇದ್ದರೂ, ಹಳೆಯ ವೀಕ್ಷಣಾಲಯದ ಅಂಗಳದಲ್ಲಿ ಈಗ ಕಂಡು ಬರುವ ರೇಖೆ ಕಲ್ಪನಾ ರೇಖೆಗಿಂತ ಕೆಲವೇ ಕೆಲವು ಮೀಟರ್‌‌ಗಳ ವ್ಯತ್ಯಾಸವನ್ನು ಹೊಂದಿದೆ.ಇದೇ ಈಗ ಜಗತ್ತಿನ ಪ್ರೈಮ್ ಮೆರಿಡಿಯನ್."[೩]

ಕಾನೂನಿನಲ್ಲಿ ಗ್ರೀನ್ ವಿಚ್ ಮೀನ್ ಟೈಮ್ ಬದಲಾಯಿಸಿ

ವಿಶ್ವದಾದ್ಯಂತ ಹಲವು ದೇಶಗಳು ಕಾನೂನುಬದ್ದವಾಗಿ ತಮ್ಮ ಸ್ಥಳೀಯ ಕಾಲಮಾನವನ್ನು ಗ್ರೀನ್‌ವಿಚ್ ಮೀನ್ ಟೈಮ್‌ಗೆ ಸ್ಪಷ್ಟವಾಗಿ ಉಲ್ಲೇಖಿಸಿ ವ್ಯಾಖ್ಯಾನಿಸುತ್ತವೆ.[೪][೫] ಕೆಲವು ಉದಾಹರಣೆಗಳೆಂದರೆ:

  • ಯುನೈಟೆಡ್ ಕಿಂಗ್ಡಂ: 1978ರ ದಿ ಇಂಟರ್‌ಪ್ರಿಟೇಷನ್ ಆಕ್ಟ್ , 9ನೇ ಸೆಕ್ಷನ್ - ಯಾವಾಗಲಾದರೂ ಕಾಯಿದೆಯಲ್ಲಿ ಸಮಯವನ್ನು ನಿರೂಪಿಸಬೇಕಾಗಿ ಬಂದಾಗ, ಸಮಯವನ್ನು ಗ್ರೀನ್ ವಿಚ್ ಮೀನ್ ಟೈಮ್ ಎಂದು ಸೂಚಿಸಬಹುದು ಎಂದು ಹೇಳುತ್ತದೆ (ಸ್ಪಷ್ಟವಾಗಿ ನಮೂದಿಸದ ಹೊರತಾಗಿ). ಉಪವಿಭಾಗ 23(3)ರಲ್ಲಿ, ಇದೆ ರೀತಿಯಾದ ನಿಯಮವು ಕಾನೂನುಬದ್ದ ಪತ್ರಗಳಲ್ಲಿ ಹಾಗು ಅದಕ್ಕೆ ಸಂಬಂಧಿಸಿದ ಇತರ ವಿಧಿಬದ್ದ ಸಾಧನಗಳಿಗೆ ಅನ್ವಯವಾಗುತ್ತದೆ.[೬][೨]
  • ಬೆಲ್ಜಿಯಂ: 1946 ಹಾಗು 1947ರ ಶಾಸನಗಳು ತಮ್ಮ ಕಾನೂನುಬದ್ದ ಸಮಯವನ್ನು GMTಗಿಂತ ಒಂದು ಗಂಟೆ ಮುಂದಕ್ಕೆ ಇರುವಂತೆ ಅಣಿಗೊಳಿಸಿದೆ.[೪]
  • ರಿಪಬ್ಲಿಕ್ ಆಫ್ ಐರ್ಲ್ಯಾಂಡ್: ಸ್ಟ್ಯಾಂಡರ್ಡ್ ಟೈಮ್ (ತಿದ್ದುಪಡಿ) ಕಾಯಿದೆ, 1971, ವಿಭಾಗ 1,[೭] ಹಾಗು ಇಂಟರ್‌ಪ್ರಿಟೇಷನ್ ಆಕ್ಟ್ 2005, ವಿಭಾಗ 18(i).[೮]
  • ಕೆನಡಾ: ಇಂಟರ್ಪ್ರೀಟೆಷನ್ ಆಕ್ಟ್, R.S.C. 1985, c. I-21, ವಿಭಾಗ 35(1).[೯]

ಟೈಮ್ ಜೋನ್(ಕಾಲವಲಯ) ಬದಲಾಯಿಸಿ

ಯುನೈಟೆಡ್ ಕಿಂಗ್ಡಂನಲ್ಲಿ ಸಿವಿಲ್ ಟೈಮ್(ಗಡಿಯಾರಗಳು ಸೂಚಿಸುವ ಸ್ಥಳೀಯ ಕಾಲಮಾನ) ಕಾನೂನುಬದ್ದವಾಗಿ GMTಯ ಮೇಲೆ ಆಧಾರಿತವಾಗಿದೆ, UTCಯನ್ನು ಆಧರಿಸಿಲ್ಲ. ಆದರೆ ಸಾಮಾನ್ಯ ಆಚರಣೆಯಲ್ಲಿ UTCಯನ್ನು ಬಳಸಲಾಗುತ್ತದೆ. ಕೆಲವೊಮ್ಮೆ ಒಂದು ಸೆಕೆಂಡ್‌ಗಿಂತ ಕಡಿಮೆ ವ್ಯತ್ಯಾಸವು ಬಹುತೇಕ ಉದ್ದೇಶಗಳಲ್ಲಿ ನಗಣ್ಯವೆನಿಸಿದೆ. ಜೊತೆಗೆ ಕೆಲವೊಂದು ಬಾರಿ ಗ್ರೀನ್ ವಿಚ್ ಟೈಮ್ ಸಂಕೇತ ಎಂದು ಕರೆಯಲ್ಪಡುವ ಪ್ರಸರಣ ವೇಳಾ ಸಂಕೇತಗಳು, UTC ಆಧಾರಿತವಾಗಿದೆ.[೧೦] ಪ್ರಸರಣ ವೇಳಾ ಸಂಕೇತಗಳ ಕಾಲಮಾಪಕವು ಚಳಿಗಾಲದಲ್ಲಿ UTC ಆಗಿರುತ್ತವೆ. ಆದರೆ ಸಾಮಾನ್ಯವಾಗಿ GMT ಎಂದೇ ಜನಪ್ರಿಯತೆ ಹೊಂದಿದೆ. ಮೇಲಿನ ನಕ್ಷೆಯಲ್ಲಿ ಕಡು ನೀಲಿ ಬಣ್ಣದಲ್ಲಿ ಗುರುತು ಮಾಡಿರುವ ದೇಶಗಳು ವೆಸ್ಟರ್ನ್ ಯುರೋಪಿಯನ್ ಸಮ್ಮರ್ ಟೈಮ್ ಅನ್ನು ಬಳಸುತ್ತವೆ ಜೊತೆಗೆ ಅವರು ತಮ್ಮ ಗಡಿಯಾರವನ್ನು ಬೇಸಿಗೆಯಲ್ಲಿ ಒಂದು ಗಂಟೆ ಕಾಲ ಮುಂದಕ್ಕೆ ಇಟ್ಟುಕೊಂಡಿರುತ್ತವೆ. ಯುನೈಟೆಡ್ ಕಿಂಗ್ಡಂನಲ್ಲಿ, ಇದನ್ನು ಬ್ರಿಟಿಶ್ ಸಮ್ಮರ್ ಟೈಮ್(BST)ಎಂದು ಕರೆಯುತ್ತಾರೆ. ರಿಪಬ್ಲಿಕ್ ಆಫ್ ಐರ್ಲ್ಯಾಂಡ್ ನಲ್ಲಿ ಇದು ಐರಿಶ್ ಸ್ಟ್ಯಾಂಡರ್ಡ್ ಟೈಮ್(IST) ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ[೧೧] - ಚಳಿಗಾಲದಲ್ಲಿ ಇದನ್ನು ಅಧಿಕೃತವಾಗಿ GMTಗೆ ಬದಲಾಯಿಸಲಾಗುತ್ತದೆ. ತೆಳು ನೀಲಿ ಬಣ್ಣದಲ್ಲಿ ಗುರುತು ಮಾಡಿರುವ ದೇಶಗಳು ತಮ್ಮ ಗಡಿಯಾರವನ್ನು ವರ್ಷ ಪೂರ್ತಿ UTC/GMT/WET ಗೆ ಬದಲಾಯಿಸುತ್ತಿರುತ್ತವೆ.== ಕಾನೂನುಬದ್ದ GMT ಹಾಗು ಭೌಗೋಳಿಕ GMT ನಡುವೆ ಇರುವ ವ್ಯತ್ಯಾಸಗಳು == ಕಾನೂನು, ರಾಜಕೀಯ ಹಾಗು ಆರ್ಥಿಕತೆಯ ಜೊತೆಗೆ ಪರಿಶುದ್ದವಾದ ಬೌತಿಕ ಅಥವಾ ಭೌಗೋಳಿಕ ಮಾನದಂಡವನ್ನು ಟೈಮ್ ಜೊನ್(ಕಾಲವಲಯ) ಗುರುತಿಸಲು ಬಳಸಲಾಗುವುದರಿಂದ ವಾಸ್ತವ ಟೈಮ್ ಜೊನ್(ಕಾಲವಲಯ) ಗಳು ಮೆರಿಡಿಯನ್ ರೇಖೆಗಳಿಗೆ ಕರಾರುವಾಕ್ಕಾಗಿ ಅಂಟಿಕೊಳ್ಳುವುದಿಲ್ಲ. ಕೇವಲ ಭೌಗೋಳಿಕ ಆಧಾರದ ಮೇಲೆ ಗುರುತಿಸಲ್ಪಡುವ 'GMT' ಟೈಮ್ ಜೊನ್(ಕಾಲವಲಯ)ಗಳಲ್ಲಿ, ನಿಖರವಾಗಿ ಮೆರಿಡಿಯನ್ ಗಳು 7°30'W ಹಾಗು 7°30'E ನಡುವಿನ ಪ್ರದೇಶವನ್ನು ಹೊಂದಿರುತ್ತವೆ. ಇದರ ಪರಿಣಾಮವಾಗಿ, ಸ್ಥಳೀಯ ಯುರೋಪಿಯನ್ನರು 'ಬೌತಿಕ' UTC ಕಾಲಮಾನದ ಪ್ರದೇಶದಲ್ಲಿ ವಾಸ್ತವ್ಯವಿದ್ದರೂ, ವಾಸ್ತವವಾಗಿ ಮತ್ತೊಂದು ಟೈಮ್ ಜೊನ್(ಕಾಲವಲಯ) ಬಳಸುತ್ತಾರೆ (ಖಚಿತವಾಗಿ ಹೇಳುವುದಾದರೆ UTC+1); ಇದಕ್ಕೆ ವ್ಯತಿರಿಕ್ತವಾಗಿ, ಕೆಲವು ಯುರೋಪಿಯನ್ ಪ್ರದೇಶಗಳು ತಮ್ಮ 'ಬೌತಿಕ' ಟೈಮ್ ಜೊನ್ (ಕಾಲವಲಯ)UTC-1 ಆಗಿದ್ದರೂ ಸಹ(ಉದಾ-ಪೋರ್ಚುಗಲ್ ಬಹುತೇಕ ಭಾಗ) ಅಥವಾ UTC−2 ಆಗಿದ್ದರೂ(ಐಸ್ಲ್ಯಾಂಡ್ ಪಶ್ಚಿಮಭಾಗ) UTCಯನ್ನು ಬಳಸುತ್ತವೆ. ವಾಸ್ತವವಾಗಿ, ಯುರೋಪಿನ UTC ಟೈಮ್ ಜೊನ್(ಕಾಲವಲಯ) ಪಶ್ಚಿಮಕ್ಕೆ 'ಸ್ಥಳಾಂತರಿಸಿದ'ಕಾರಣ, ಯುರೋಪ್‌‌ನ ಅತ್ಯಂತ ಪೂರ್ವ ದಿಕ್ಕಿನಲ್ಲಿರುವ ಸಫೋಕ್ಲೋವೆಸ್ಟೋಫ್ಟ್, ಇಂಗ್ಲೆಂಡ್ ನಲ್ಲಿರುವ ಪೂರ್ವ ಆಂಗ್ಲಿಯ ಪ್ರದೇಶಗಳು ಕೇವಲ 1°45'E ನೊಂದಿಗೆ UTC ಅನ್ವಯಿಸುತ್ತದೆ. ಕೆಳಗೆ ಕಂಡುಬರುವುದು 'ಅಸಮಂಜಸತೆ'ಯ ಒಂದು ಪಟ್ಟಿ:

ದೇಶಗಳು (ಅಥವಾ ಅದರ ಭಾಗಗಳು) 22°30'W ನ ('ಬೌತಿಕ' UTC-2) ಪಶ್ಚಿಮಕ್ಕೆ UTCಯನ್ನು ಬಳಕೆ ಮಾಡುತ್ತವೆ.
  • ಐಸ್ಲ್ಯಾಂಡ್‌ನ ಅತ್ಯಂತ ಪಶ್ಚಿಮ ದಿಕ್ಕಿನಲ್ಲಿರುವ ಭಾಗ ಸೇರಿದಂತೆ ವಾಯುವ್ಯ ಪರ್ಯಾಯ ದ್ವೀಪ ಹಾಗು ಅದರ ಪ್ರಮುಖ ನಗರ Ísafjörður 22°30'W ನ ಪಶ್ಚಿಮ ದಿಕ್ಕಿನಲ್ಲಿದ್ದು UTCಯನ್ನು ಬಳಕೆ ಮಾಡುತ್ತದೆ. ಐಸ್ಲ್ಯಾಂಡ್‌ನ ಅತ್ಯಂತ ಪಶ್ಚಿಮ ದಿಕ್ಕಿನ ತುತ್ತ ತುದಿ Bjargtangar ನಲ್ಲಿ UTC ಅನ್ವಯವಾಗುತ್ತದೆ.
ದೇಶಗಳು(ಅಥವಾ ಅದರ ಭಾಗಗಳು) 7°30'W ನ ('ಬೌತಿಕ' UTC-1) ಪಶ್ಚಿಮಕ್ಕೆ UTC ಯನ್ನು ಬಳಕೆ ಮಾಡುತ್ತವೆ.
7°30'W ಯಿಂದ 7°30'E('ಬೌತಿಕ' UTC) ಮಧ್ಯದಲ್ಲಿ ಮೆರಿಡಿಯನ್ ಅನ್ನು ಹೊಂದಿರುವ ದೇಶಗಳು (ಹೆಚ್ಚಾಗಿ)UTC+1 ಅನ್ನು ಬಳಕೆ ಮಾಡುತ್ತವೆ.
 
ಈ ಕಮಾನು ಸ್ಪೇನ್‌‌ನಲ್ಲಿನ ಗ್ರೀನ್ ವಿಚ್ ಮೀನ್ ಟೈಮ್ ನ ರೇಖೆಯನ್ನು ಸೂಚಿಸುತ್ತದೆ.
  • ಸ್ಪೇನ್(UTC ಬಳಸುವ ಕ್ಯಾನರಿ ದ್ವೀಪಗಳನ್ನು ಹೊರತುಪಡಿಸಿ) ಗಲಿಸಿಯ ದ ಭಾಗಗಳು ವಾಸ್ತವವಾಗಿ 7°30'W ಪಶ್ಚಿಮಕ್ಕೆ ಚಾಚಿದೆ.('ಬೌತಿಕ' UTC-1). ಆದರೆ 7°30'E ನ ಪೂರ್ವಕ್ಕೆ ಯಾವುದೇ ಸ್ಪಾನಿಶ್ ಭೂಪ್ರದೇಶವಿಲ್ಲ ('ಬೌತಿಕ' UTC+1). ಸ್ಪೇನ್ ನ ಸಮಯವು ಫ್ರಾಂಕೋ ನ ಅಧ್ಯಕ್ಷೀಯ ಆದೇಶದ ನೇರ ಪರಿಣಾಮವಾಗಿದೆ (ಇದನ್ನು 8 ಮಾರ್ಚ್ 1940ರಲ್ಲಿ ಬೋಲೆಟಿನ್ ಅಫಿಶಿಯಲ್ ಡೆಲ್ ಎಸ್ಟಡೊನಲ್ಲಿ ಪ್ರಕಟವಾಗಿತ್ತು)[೧೨]. ಇದು ಗ್ರೀನ್ ವಿಚ್ UTC ಸಮಯವನ್ನು ತ್ಯಜಿಸಿ ಅದರ ಬದಲಾಗಿ UTC+1 23:00 16 ಮಾರ್ಚ್ 1940ರಲ್ಲಿ ಜಾರಿಗೆ ಬಂತು. ಇದು ಮೊದಲೇ ಉಲ್ಲೇಖಿಸಲಾದಂತೆ ರಾಜಕೀಯ ಮಾನದಂಡದ ಮೇಲೆ ಟೈಮ್ ಜೊನ್‌ನನ್ನು ನಿರ್ಧರಿಸಿರುವ ಒಂದು ಅದ್ಬುತ ಉದಾಹರಣೆ: ಈ ಸಮಯ ಬದಲಾವಣೆಯನ್ನು "ಇತರ ಯುರೋಪಿಯನ್ ರಾಷ್ಟ್ರಗಳೊಂದಿಗೆ ರಾಷ್ಟ್ರೀಯ ಸಮಯವು ಹೆಜ್ಜೆಹಾಕುವುದರಿಂದ ಉಂಟಾಗುವ ಅನುಕೂಲವನ್ನು ಪರಿಗಣಿಸಿ" ಅಂಗೀಕಾರ ಮಾಡಲಾಯಿತು.[೧೩][೧೪] ಅಧ್ಯಕ್ಷೀಯ ಆದೇಶವನ್ನು, ಬಹುಮಟ್ಟಿಗೆ ನಾಜಿ ಜರ್ಮನಿ ಹಾಗು ಫ್ಯಾಸಿಸ್ಟ್ ಇಟಲಿ ಯ ಮೈತ್ರಿ ಕೂಟದೊಂದಿಗೆ ಏಕಕಾಲೀನವಾಗುವಂತೆ ಕಾನೂನುಬದ್ಧಗೊಳಿಸಿ,ಅದರ ಐದನೇ ವಿಧಿಯಲ್ಲಿ ಭವಿಷ್ಯದಲ್ಲಿ ಹಂತ ಹಂತವಾಗಿ ತೆಗೆಯುವ ನಿಯಮವನ್ನು ಸೇರಿಸಲಾಗಿದ್ದು, ಅದು ಜಾರಿಯಾಗಲೇ ಇಲ್ಲ. ಈ ರಾಜಕೀಯ ನಿರ್ಧಾರದಿಂದ ಸ್ಪೇನ್ ಅದರ ಸ್ಥಳೀಯ ಮೀನ್ ಟೈಮ್ ಗಿಂತ ಬೇಸಿಗೆ ಕಾಲದಲ್ಲಿ (ಚಳಿಗಾಲದಲ್ಲಿ ಒಂದು ಗಂಟೆ ಮುಂದೆ) ಎರಡು ಗಂಟೆಗಳ ಕಾಲ ಮುಂದಿದೆ. ಇದು ಬಹುಶಃ ದೇಶ ಚಿರಪರಿಚಿತವಾದ ವಿಳಂಬ ವೇಳಾಪಟ್ಟಿಗೆ ಕುಖ್ಯಾತಿಯನ್ನು ಪಡೆದಿರುವುದನ್ನು ವಿವರಿಸುತ್ತದೆ.[೧೫]
  • ಬೆಲ್ಜಿಯಂ
  • ನೆದರ್ಲೆಂಡ್ಸ್‌
  • ಫ್ರಾನ್ಸ್ ನ ಹೆಚ್ಚಿನ ಭಾಗಗಳು, ಇದರಲ್ಲಿ ಪ್ಯಾರಿಸ್, ಮರ್ಸಿಲ್ಲೆಸ್ ಹಾಗು ಲಯೊನ್ ನಗರಗಳು ಒಳಗೊಂಡಿವೆ. ಅಲ್ಸೆಸ್, ಲೋರ್ರೈನೆ ಹಾಗು ಪ್ರೋವೆನ್ಸ್ ನ ಕೆಲವು ಸಣ್ಣ ಭಾಗಗಳು 7°30'ಎ ನ ಪೂರ್ವಕ್ಕೆ ('ಬೌತಿಕ' UTC+1)ನಲ್ಲಿವೆ.

ಇವನ್ನೂ ಗಮನಿಸಿ ಬದಲಾಯಿಸಿ

ಟಿಪ್ಪಣಿಗಳು ಬದಲಾಯಿಸಿ

  1. ಕಾನೂನುಬದ್ದವಾಗಿ UKಯಲ್ಲಿ ಈಗಲೂ "ಗ್ರೀನ್ ವಿಚ್ ಮೀನ್ ಟೈಮ್" ಅನ್ನೇ ಬಳಕೆ ಮಾಡಲಾಗುತ್ತದೆ (ದೊಡ್ದಕ್ಷರದಲ್ಲಿ ಬಳಕೆಯಿಲ್ಲದೇ), 1978ರ ಇಂಟರ್‌ಪ್ರಿಟೇಷನ್ ಆಕ್ಟ್ ನ ಪ್ರಕಾರ (ಕೆಲವೊಂದು ಅವಧಿಯನ್ನು ಹೊರತುಪಡಿಸಿ ಅಂದರೆ 1972ರ ಸಮ್ಮರ್ ಟೈಮ್ ಆಕ್ಟ್ ನ ಆದೇಶದಂತೆ ಹಗಲು ಬೆಳಕನ್ನು ಉಳಿಸುವ ಸಲುವಾಗಿ ಒಂದು ಗಂಟೆಯನ್ನು ಸ್ಥಳಾಂತರಿಸಲಾಗಿದೆ), ಈ ಲೇಖನದ ಕಾನೂನು ವಿಭಾಗವನ್ನು ನೋಡಿ. ಗ್ರೀನ್ ವಿಚ್‌ನ ಮೀನ್ ಟೈಮ್ ಯುನಿವರ್ಸಲ್ ಟೈಮ್‌ನ ಪ್ರತಿರೂಪ. ಇದು 19ನೇ ಶತಮಾನದ ಉತ್ತರಾರ್ಧ ಭಾಗದಿಂದ ಬಳಕೆ ಬಂದಿದೆ. ಇಂಟರ್ನ್ಯಾಷನಲ್ ಮೆರಿಡಿಯನ್ ಕಾನ್ಫರೆನ್ಸ್ ನ ನಿಯಮಗಳನ್ನು ನೋಡಿ. ಈ ಪ್ರಕಾರವಾಗಿ UT1, UT ಯ ಒಂದು ರೂಪವಾಗಿ, ಧ್ರುವ ಚಲನೆಗೆ ಸಮಾನವಾಗಿಸಿದ್ದು, ಗ್ರೀನ್ ವಿಚ್ ನ ಮೀನ್ ಟೈಮ್ ಅಳೆಯಲು ಈಗಲೂ ಒಂದು ಸಾಧನವಾಗಿದೆ. ವ್ಯಾಪಕವಾಗಿ ಬಳಸಲಾಗುವ ವೇಳಾ ಸಂಕೇತಗಳು UTCಯ ಮೇಲೆ ಆಧಾರವಾಗಿದೆ. ಅವುಗಳನ್ನು ೦.9 UT1 ಸೆಕೆಂಡ್ ಗಳ ಒಳಗೆ ಇರಿಸಲಾಗುತ್ತದೆ. ಈ ಲೇಖನದ 'ಇತಿಹಾಸ' ವಿಭಾಗವನ್ನು ನೋಡಿ). (ಟೈಮ್ ಸಿಗ್ನಲ್ಸ್(ವೇಳಾ ಸಂಕೇತಗಳು)ಗಳನ್ನು 'GMT' ಎಂದು ಸೂಚಿಸುವ ಅಭ್ಯಾಸವು 0.9 ಸೆಕೆಂಡ್‌ಗೆ ಪರಿಮಾಣಾತ್ಮಕವಾಗಿ ಸರಿಯಾಗಿದೆ. ಜೊತೆಗೆ ಇದು ಅನೌಪಚಾರಿಕ ಹಾಗು ಅನಧಿಕೃತ. ಈ ಲೇಖನದ 'ಟೈಮ್ ಜೊನ್'(ಕಾಲವಲಯ)ವಿಭಾಗವನ್ನು ನೋಡಿ.) ಈ ಲೇಖನದಲ್ಲಿ ಬೇರೆಡೆ ವಿವರಿಸಿದಂತಹ UTC+೦ ಯು( ನಕ್ಷೆಯ ಶೀರ್ಷಿಕೆಯಿಂದ ಆಯ್ದುಕೊಂಡ ಕೊಂಡಿ) ವೆಸ್ಟರ್ನ್ ಯುರೋಪಿಯನ್ ಟೈಮ್ (WET)ಗೆ ಸಮನಾಗಿದೆ. ಈ ರೀತಿಯಾಗಿ ವೆಟ್ (ವೆಸ್ಟರ್ನ್ ಯುರೊಪಿಯನ್ ಟೈಮ್ )ಅನ್ನು ಗ್ರೀನ್ ವಿಚ್ ಮೀನ್ ಟೈಮ್ ನ್ 0.9 ಸೆಕೆಂಡ್ ಗಳ ಅಂತರದಲ್ಲಿ ಇರಿಸಲಾಗುತ್ತದೆ, ಜೊತೆಗೆ (ಪರಿಗಣಿತ ವ್ಯತ್ಯಾಸದ ಒಳಗೆ) ಇದನ್ನು ನಿರ್ದಿಷ್ಟವಾಗಿ 'ಬಹುಮಟ್ಟಿಗೆ ಸಮಾನಾಂತರ' ಎಂದು ವಿವರಿಸಬಹುದು.
  2. ೨.೦ ೨.೧ ಮ್ಯೇರ್ಸ್(2007).
  3. ಹೌಸ್ 1997, ಪುಟ. 178
  4. ೪.೦ ೪.೧ ಡುಮೋರ್ಟಿಎರ್, ಹನ್ನೆಲೋರೆ, & ಲೋನ್ಕ್ಕೆ (n.d.)
  5. Seago & Seidelmann (c. 2001)
  6. ಇಂಟರ್‌ಪ್ರಿಟೇಷನ್ ಆಕ್ಟ್ 1978
  7. ಸ್ಟ್ಯಾಂಡರ್ಡ್ ಟೈಮ್(ಅಮೆಂಡ್ಮೆಂಟ್) ಆಕ್ಟ್, 1971(ಐರ್ಲ್ಯಾಂಡ್)
  8. ಇಂಟರ್‌ಪ್ರಿಟೇಷನ್ ಆಕ್ಟ್ 2005, ಭಾಗ iv ಸೆಕ್ಷನ್ 18 18
  9. ಇಂಟರ್‌ಪ್ರಿಟೇಷನ್ ಆಕ್ಟ್, R.S.C. 1985, c. I-21 -- ಇದು ಹಲವು ಪ್ರಾಂತ್ಯಗಳ 'ಸ್ಟ್ಯಾಂಡರ್ಡ್ ಟೈಮ್' ಅನ್ನು ಸೂಚಿಸುತ್ತವೆ. ಪ್ರತಿಯೊಂದಕ್ಕೂ 'ಗ್ರೀನ್ ವಿಚ್ ಟೈಮ್' ಜೊತೆಗಿನ ಸಂಬಂಧವನ್ನು ವಿವರಿಸುತ್ತದೆ, ಆದರೆ 'ಗ್ರೀನ್ ವಿಚ್ ಮೀನ್ ಟೈಮ್' ಎಂದು ಅಭಿವ್ಯಕ್ತಿಯನ್ನು ಬಳಸುವುದಿಲ್ಲ.
  10. "'ಕಡಿಮೆ ಪ್ರಚಲಿತದಲ್ಲಿರುವ ಒಂದು ಆಸಕ್ತಿಕರ ವಾಸ್ತವಾಂಶವೆಂದರೆ ಗ್ರೀನ್ ವಿಚ್ ಟೈಮ್ ಸಂಕೇತವು ಇನ್ನು ಮುಂದೆ ಗ್ರೀನ್ ವಿಚ್ ಮೀನ್ ಟೈಮ್ ಅನ್ನು ತೋರುವುದಿಲ್ಲ,' ಎಂದು NPLನ ಜಾನ್ ಚೇಂಬರ್ಸ್ ಹೇಳುತ್ತಾರೆ. ಕಳೆದ 1972ರಿಂದ ಇತ್ತೀಚಿಗೆ, ಜಗತ್ತಿನ ಎಲ್ಲ ಸಮಯದ ಸಂಕೇತವು ಪರಮಾಣು ಸಮಯದ ಮೇಲೆ ಆಧಾರಿತವಾಗಿದೆ.'" ಸಿಕ್ಸ್ ಪಿಪ್ ಸಲ್ಯೂಟ್ . | 1999
  11. ಸ್ಟ್ಯಾಂಡರ್ಡ್ ಟೈಮ್ ಆಕ್ಟ್, 1968.
  12. "BOE Orden sobre adelanto de la hora legal en 60 minutos". Retrieved 2 December 2008.
  13. "B.O.E. #68 03/08/1940 p.1675". Retrieved 2 December 2008.
  14. "B.O.E. #68 03/08/1940 p.1676". Retrieved 2 December 2008.
  15. "Hábitos y horarios españoles". Archived from the original on 25 ಜನವರಿ 2009. Retrieved 27 November 2008.

ಆಕರಗಳು ಬದಲಾಯಿಸಿ

ಗ್ರೀನ್ ವಿಚ್ ಟೈಮ್ ಅಂಡ್ ದಿ ಲೊಂಗಿಟ್ಯೂಡ್ . ಲಂಡನ್: ಫಿಲಿಪ್ ವಿಲ್ಸನ್ 
ಜುಲೈ 9 2009ರಂದು ಮರುಸಂಪಾದಿಸಲಾಗಿದೆ. 

ಹೊರಗಿನ ಕೊಂಡಿಗಳು ಬದಲಾಯಿಸಿ

ದಿ ವರ್ಲ್ಡ್ ಕ್ಲಾಕ್ - ಲೋಕಲ್ ಟೈಮ್ಸ್ ಎರೌಂಡ್‌ ದಿ ವರ್ಲ್ಡ್ ಬೈ ಸಿಟಿ]

NIST - ವರ್ಲ್ಡ್ ಟೈಮ್ ಸ್ಕೇಲ್ಸ್] Archived 1997-07-29 ವೇಬ್ಯಾಕ್ ಮೆಷಿನ್ ನಲ್ಲಿ.