ಐಲ್ ಆಫ್ ಮ್ಯಾನ್
ಐಲ್ ಆಫ್ ಮ್ಯಾನ್: ಐರಿಷ್ ಸಮುದ್ರ ಮಧ್ಯ ಭಾಗದಲ್ಲಿ ಇರುವ ಒಂದು ಸಣ್ಣ ದ್ವೀಪ. ೫೪.೧೫ ಡಿಗ್ರಿ ಉ.ಅ. ೪.೪೮ ಡಿಗ್ರಿ ಪ.ರೇ.ಗಳಲ್ಲಿದೆ ಇದನ್ನು ಎಲ್ಲನ್ ವಾನಿನ್ ಎಂತಲೂ ಕರೆಯಲಾಗುತ್ತದೆ. ಸ್ವಯಂ ಆಡಳಿತದ ಬ್ರಿಟಿಷ್ ಸಾಮ್ರಾಜ್ಯದ ಅಧೀನದಲ್ಲಿದೆ. ಈ ದ್ವೀಪವು ಬ್ರಿಟಿಷ್ ದ್ವೀಪಗಳ ಭೌಗೋಳಿಕ ಕೇಂದ್ರಸ್ಥಾನವನ್ನು ಹೊಂದಿದೆ. ಭೌಗೋಳಿಕ ಕ್ಷೇತ್ರ ೫೭೪ ಚ.ಕಿಮೀ ಜನಸಂಖ್ಯೆ ೮೪೦೬೯ (೨೦೨೧). ಜನಸಾಂದ್ರತೆ ಪ್ರತಿ ಚ.ಕಿಮೀ ಗೆ ೧೪೮. ಇಲ್ಲಿನ ಹಣ ಪೌಂಡ್ ಸ್ಟರ್ಲಿಂಗ್. ರಾಷ್ಟ್ರೀಯ ಆದಾಯ ೭.೪೩ ಬಿ.ಡಾಲರ್. ತಲಾ ಆದಾಯ ೮೪,೬೦೦ಡಾಲರ್. ಸರ್ಕಾರ ಇಂಗ್ಲೆಂಡಿನ ರಾಜಮನೆತನದ ಅಧೀನಕ್ಕೊಳಪಟ್ಟಿದೆ.
ಐಲ್ ಆಫ್ ಮ್ಯಾನ್ ದ್ವೀಪಸ್ತೋಮ ಕಾಫ್ ಮ್ಯಾನ್, ಚಿಕನ್‍ರಾಕ್ ಮತ್ತು ಸೆಂಟ್ ಪ್ಯಾಟ್ರಿಕ್ಸ್ ಐಲ್ ಮತ್ತು ಸೈಂಟ್ ಮೈಕೆಲ್ಸ್ ಐಲ್ ದ್ವೀಪಗಳನ್ನು ಒಳಗೊಂಡಿದೆ. ಈ ದ್ವೀಪಗಳು ಅಟ್ಲಾಂಟಿಕ್ ಸಾಗರದಲ್ಲಿನ ದಕ್ಷಿಣ ಭಾಗದ ಸೆಂಟ್ ಜಾರ್ಜ್ ಕಾಲುವೆ ಮತ್ತು ಐರ್ಲೆಂಡ್, ಪೀಲ್ಸ್ ಮತ್ತು ಕಾರ್ನ್ವಾಲ್ಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಉತ್ತರದಲ್ಲಿನ ಕಾಲುವೆ ಉತ್ತರ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ಗಳನ್ನು ಸಂಪರ್ಕಿಸುತ್ತದೆ.
ಐಲ್ ಆಫ್ ಮ್ಯಾನ್ ಬ್ರಿಟಿಷ್ ದ್ವೀಪ ಸಮೂಹದ ಆಗ್ನೇಯ ತೀರಭಾಗವಾಗಿದೆ. ಇದು ೪೮ ಕಿಮೀ ಉದ್ದ ಮತ್ತು ೧೩ ರಿಂದ ೨೪ ಕಿಮೀ ಅಗಲವಾಗಿದೆ. ಸು. ೫೭೪ ಚ.ಕಿಮೀ ಭೂ ಪ್ರದೇಶವನ್ನು ಹೊಂದಿದೆ. ಉತ್ತರ ಮತ್ತು ದಕ್ಷಿಣ ಭಾಗದ ಬೆಟ್ಟಗಳನ್ನು ಮಧ್ಯಭಾಗದ ಕಣಿವೆ ವಿಭಜಿಸಿದೆ, ಮೇರು ಉತ್ತರಭಾಗ ಸಮತಟ್ಟಾಗಿದೆ. ಇಲ್ಲಿ ಭೂ ಇತಿಹಾಸಕಾಲದಲ್ಲಿ ಹಿಮನದಿ ಕಾರ್ಯಾಚರಣೆಯಿಂದ ಭೂಮಟ್ಟಸವಾಗಿದೆಯೆಂದು ಕಂಡುಬಂದಿದೆ. ಈ ಭಾಗದಲ್ಲಿ ಅತ್ಯಂತ ಎತ್ತರವಾದ ಪರ್ವತ ಸ್ಮೆಫಿಲ್ ೬೨೧ ಮೀ. ಶಿಖರದ ಮೇಲಿಂದ ೬ ರಾಜ್ಯಗಳನ್ನು ಮ್ಯಾನ್, ಸ್ಕಾಟ್ಲೆಂಡ್, ಇಂಗ್ಲೆಂಡ್, ಐರ್ಲೆಂಡ್, ವೇಲ್ಸ್ ಮತ್ತು ಹೆವೆನ್ಗಳನ್ನು ಕಾಣಬಹುದು. ಸ್ಥಳೀಯ ಮಾತಿನಂತೆ 7 ನೆಯ ರಾಜ್ಯ ನೆಪ್ಚೋನ್ ಅಥವಾ ಸಮುದ್ರವನ್ನು ಕಾಣಬಹುದು ಎಂಬುದಾಗಿದೆ. ರಾಜಧಾನಿ ಡಾಗ್ಲಾಸ್ (ಡೋಲಿಷ್). ಜನಸಂಖ್ಯೆ 26,218. ಜನಸಂಖ್ಯೆಯ ಶೇ. 93.9 ರಷ್ಟು ಬ್ರಿಟಿಷ್ ದ್ವೀಪವಾಸಿಗಳು.