ಗೋಮೇದಕ ಆದರ್ಶೀಕೃತ ರಾಸಾಯನಿಕ ಸೂತ್ರ ZrSiO_4 (ಜಿರ್ಕೋನಿಯಮ್ ಸಿಲಿಕೇಟ್) ಇರುವ ಒಂದು ಖನಿಜ (ಜಿರ್ಕೋನ್). ನವರತ್ನಗಳಲ್ಲಿ ಒಂದು. ಜಿರ್ಕೋನಿಯಮ್ ಧಾತುವಿನ ಬಲುಮುಖ್ಯ ಆಕರ. ಇದರ ರಾಸಾಯನಿಕ ಸಂಯೋಜನೆಯಲ್ಲಿ ಅಲ್ಪ ಮೊತ್ತದಲ್ಲಿ ಯುರೇನಿಯಮ್ ಪ್ರವೇಶಿಸಿದರೆ ಅದಕ್ಕೆ ಸಿರ್ಟೊಲೈಟ್ ಎಂದು ಹೆಸರಾಗುತ್ತದೆ.

ಗೋಮೇದಕ
Zircon crystal from Tocantins, ಬ್ರೆಜಿಲ್ (2×2 cm)
General
ವರ್ಗNesosilicates
ರಾಸಾಯನಿಕ ಸೂತ್ರzirconium silicate ZrSiO4
ಸ್ಟ್ರೋಂಝ್ ವರ್ಗೀಕರಣ09.AD.30
ಸ್ಫಟಿಕ ಸಮರೂಪತೆTetragonal ditetragonal dipyramidal
H-M symbol: (4/m 2/m 2/m)
Space group: I 41/amd
ಏಕಕೋಶa = 6.607(1) Å, c = 5.982(1) Å; Z=4
Identification
ಬಣ್ಣReddish brown, yellow, green, blue, gray, colorless; in thin section, colorless to pale brown
ಸ್ಫಟಿಕ ಗುಣಲಕ್ಷಣtabular to prismatic crystals, irregular grains, massive
ಸ್ಫಟಿಕ ಪದ್ಧತಿTetragonal
ಅವಳಿ ಸಂಯೋಜನೆOn {101}
ಸೀಳುindistinct, on {110} and {111}
ಬಿರಿತConchoidal to uneven
ಜಿಗುಟುತನBrittle
ಮೋಸ್ ಮಾಪಕ ಗಡಸುತನ7.5
ಹೊಳಪುVitreous to adamantine; greasy when metamict.
ಪುಡಿಗೆರೆWhite
ಪಾರದರ್ಶಕತೆTransparent to opaque
ವಿಶಿಷ್ಟ ಗುರುತ್ವ4.6–4.7
ದ್ಯುತಿ ಗುಣಗಳುUniaxial (+)
ವಕ್ರೀಕರಣ ಸೂಚಿnω = 1.925–1.961
nε = 1.980–2.015, 1.75 when metamict
ದ್ವಿವಕ್ರೀಭವನδ = 0.047–0.055
ಬಹುವರ್ಣಕತೆWeak
ಕರಗು ಗುಣclose to 2,550 °C depend on Hf,Th,U,H,etc... concentrations.
ಕರಗುವಿಕೆInsoluble
ಇತರ ಗುಣಲಕ್ಷಣಗಳುFluorescent and radioactive, may form pleochroic halos
ಉಲ್ಲೇಖಗಳು[][][][]

ಲಕ್ಷಣಗಳು

ಬದಲಾಯಿಸಿ

ಗೋಮೇದಕ ಚತುಷ್ಕೋಣೀಯ (ಟೆಟ್ರಾಗೊನಲ್) ವರ್ಗದ ಹರಳುಗಳಾಗಿ ಚತುರ್ಮುಖ ಅಥವಾ ಅಷ್ಟಮುಖಗಳ ಪ್ರಿಸಮ್ಗಳಂತೆ ರೂಪುಗೊಳ್ಳುತ್ತದೆ. ಪ್ರಿಸಮ್‍ಗಳ ತುದಿಗಳು ಪಿರಮಿಡ್ಡುಗಳಂತೆ ಮೊನಚಾಗಿ ಮಾರ್ಪಡುತ್ತವೆ. ಅವಳಿಗಳಾಗಿ ಬೆಳೆಯುವ ಕೆಲವು ಹರಳುಗಳು ಬಗ್ಗಿದ ಮೊಣಕಾಲಿನ ರೂಪವನ್ನು ಪಡೆಯುತ್ತವೆ. ಸರ್ವ ಸಾಮಾನ್ಯವಾಗಿ ದೊರೆಯುವ ಗೋಮೇದಕ ಸ್ವಚ್ಛವಾಗಿರುವುದಿಲ್ಲ. ಅಚ್ಚ ಹೊಳಪನ್ನುಳ್ಳ ಅಚ್ಚಗೆಂಪು, ಕಿತ್ತಳೆ ಕೆಂಪು ಇಲ್ಲವೆ ಹಳದಿ ಬಣ್ಣಗಳಿಂದ ಕೂಡಿ ಪಾರದರ್ಶಕತೆಯುಳ್ಳ ಹೈಯಾಸಿಂತ್ ಎಂಬ ಅಪರೂಪದ ಗೋಮೇದಕಗಳು ಬೆಲೆಬಾಳುವ ರತ್ನಗಳು. ಕಾಯಿಸುವುದರಿಂದ ಗೋಮೇದಕದ ಬಣ್ಣ ಮಾಯವಾಗುತ್ತದೆ. ನಿರ್ಮಲವಾದ ಗೋಮೇದಕ ವಜ್ರಕ್ಕೆ ಸಮವಾದ ಹೊಳಪನ್ನು ಬೀರಿದರೆ ಅದಕ್ಕೆ ಮಟುರಾ ವಜ್ರವೆನ್ನುತ್ತಾರೆ. ಇದನ್ನು ಒಡೆದಾಗ ಶಂಖಾಕೃತಿಯ ಸೀಳುಗಳನ್ನು ಕಾಣಬಹುದು. ಇದರ ಕಠಿಣತೆ 7.5, ಸಾಪೇಕ್ಷ ಸಾಂದ್ರತೆ 4.7.

ದೊರೆಯುವಿಕೆ

ಬದಲಾಯಿಸಿ

ರತ್ನ ಜಾತಿಗೆ ಸೇರಿದ ಗೋಮೇದಕಗಳು ಶ್ರೀಲಂಕ, ಇಂಡೊಚೀನ, ಆಸ್ಟ್ರೇಲಿಯ, ರಷ್ಯ, ಆಗ್ನೇಯ ಏಷ್ಯ, ಇಟಲಿ ಮೊದಲಾದ ದೇಶಗಳಲ್ಲಿ ದೊರೆಯುತ್ತವೆ. ಗೋಮೇದಕದ ಗಣಿಗಾರಿಕೆಯಲ್ಲಿ ಆಸ್ಟ್ರೇಲಿಯ ಮುಂಚೂಣಿಯಲ್ಲಿದೆ (37%). ಭಾರತದಲ್ಲಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಒರಿಸ್ಸ ರಾಜ್ಯಗಳಲ್ಲಿನ ಸಮುದ್ರತೀರದಲ್ಲಿರುವ ಮರಳಿನಲ್ಲೂ ಇವು ಹೇರಳ. ಗೋಮೇದಕ ಸಾಮಾನ್ಯವಾಗಿ ಅಗ್ನಿಶಿಲೆಗಳಾದ ಗ್ರಾನೈಟ್, ಸೈನೈಟ್ ಮತ್ತು ಪೆಗ್ಮೆಟೈಟ್ ಶಿಲೆಗಳಲ್ಲಿ ಉಪಖನಿಜವಾಗಿ ಭೂಮಿಯ ನಾನಾ ಭಾಗಗಳಲ್ಲಿ ಉತ್ಪತ್ತಿಯಾಗಿರುತ್ತದೆ. ಆಂಧ್ರಪ್ರದೇಶದ ಖಮ್ಮಮ್ ಜಿಲ್ಲೆಯ ಸೈನೈಟ್ ಶಿಲೆಗಳಲ್ಲಿ ಅಸ್ಪಷ್ಟವಾದ ಹರಳುಗಳು ಸಾಕಷ್ಟು ಮೊತ್ತದಲ್ಲಿ ದೊರೆಯುತ್ತವೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Anthony, John W.; Bideaux, Richard A.; Bladh, Kenneth W. and Nichols, Monte C. (ed.). "Zircon". Handbook of Mineralogy (PDF). Vol. II (Silica, Silicates). Chantilly, VA, US: Mineralogical Society of America. ISBN 0962209716.{{cite book}}: CS1 maint: multiple names: editors list (link)
  2. Zircon. Mindat
  3. Zircon. Webmineral
  4. Hurlbut, Cornelius S.; Klein, Cornelis, 1985, Manual of Mineralogy, 20th ed., ISBN 0-471-80580-7


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗೋಮೇದಕ&oldid=1250423" ಇಂದ ಪಡೆಯಲ್ಪಟ್ಟಿದೆ