ಗೊಂಡರು ಭಾರತದ ಬುಡಕಟ್ಟು ಜನರಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದಾರೆ. ಇವರು ದ್ರಾವಿಡ ಗುಂಪಿಗೆ ಸೇರುವ ಜನ, ಇವರ ಒಟ್ಟು ಜನಸಂಖ್ಯೆ ೧೯೮೧ ರ ಜನಗಣತಿಯ ಪ್ರಕಾರ ೭೪.೪೮ ಲಕ್ಷ ಜನರಿದ್ದು. ಇತ್ತೀಚಿನ ೧೯೯೧ರ ಜನಗಣತಿಯ ಪ್ರಕಾರ ಭಾರತದಲ್ಲಿ ಗೊಂಡರು_೯,೩೧೯,೦೦೦ ಜನಸಂಖ್ಯೆಯನ್ನು ಹೊಂದಿದ್ದಾರೆ.

ಗೊಂಡರು
Regions with significant populations
ಭಾರತ=           ಮಧ್ಯ ಪ್ರದೇಶ
Languages
ಗೊಂಡಿ ಭಾಷೆ, ಹಿಂದಿ, ಪಾರ್ಸಿ
Religion
ಗೊಂಡಿ ಧರ್ಮ ( Koya Punem ),ಹಿಂದೂ[]
Related ethnic groups
ದ್ರಾವಿಡಜನಾಂಗ · ಕೊಂಡಸ್ ·
ಗೊಂಡ ಜನಾಂಗದ ಮಹಿಳೆ
ಗೊಂಡ ಪುರುಷ

ಹಂಚಿಕೆ

ಬದಲಾಯಿಸಿ

ಛತ್ತೀಸ್‌ಘಡ್ ರಾಜ್ಯದಲ್ಲಿ ಗೊಂಡರ ಜನಸಂಖ್ಯೆ ಯು_೩,೬೫೯,೩೮೪. ಛತ್ತೀಸ್‌ಘಡ್ ರಾಜ್ಯದ ಒಟ್ಟು ಬುಡಕಟ್ಟು ಜನಾಂಗದ ೫೫.೩% ರಷ್ಟು ಜನಸಂಖ್ಯೆಯನ್ನು ಹೊಂದಿದ್ದು.[] ಮಧ್ಯ ಪ್ರದೇಶದ ಗೊಂಡರು ಜನಸಂಖ್ಯೆ _೪,೩೫೭,೯೧೮. ಮಧ್ಯ ಪ್ರದೇಶ ರಾಜ್ಯದ ಒಟ್ಟು ಬುಡಕಟ್ಟು ಜನಾಂಗದ ೩೫.೬% []. ಓರಿಸ್ಸಾ ರಾಜ್ಯದಲ್ಲಿ ಗೊಂಡರು _೭,೮೨,೧೦೪ ಜನಸಂಖ್ಯೆಯನ್ನು ಹೊಂದಿದ್ದು , ಓರಿಸ್ಸಾದ ಬುಡಕಟ್ಟು ಜನಾಂಗದ ೯.೯% ರಷ್ಟು ಜನಸಂಖ್ಯೆಯನ್ನು ಹೊಂದಿದ್ದರೆ.[] ಮಹಾರಾಷ್ಟ್ರದಲ್ಲಿ ೧,೫೫೪,೮೯೪ ಜನಸಂಖ್ಯೆಯನ್ನು ಹೊಂದಿದ್ದು , ಮಹಾರಾಷ್ಟ್ರದ ಬುಡಕಟ್ಟು ಜನಾಂಗದ ೮೧.೧% ರಷ್ಟು ಜನಸಂಖ್ಯೆಯನ್ನು ಹೊಂದಿದ್ದರೆ.[] ಗುಜರಾತ್ನಲ್ಲಿ ಅತಿ ಕಡಿಮೆ ೨,೫೦೦ ಜನಸಂಖ್ಯೆಯನ್ನು ಹೊಂದಿದಾರೆ[]ಉತ್ತರ ಆಂಧ್ರ ಪ್ರದೇಶದಲ್ಲಿ ೧೯೯೧ರ ಜನಗಣತಿಯ ಪ್ರಕಾರ ೨,೧೨,೦೫೮[]ಬಿಹಾರದಲ್ಲಿ ೨,೫೭೨[] ಇನ್ನೂ ಪಶ್ಚಿಮ ಬಂಗಾಳ ಮತ್ತು ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ಹಂಚಿಕೆಯಾಗಿ ದಾರೆ.

ಗೊಂಡ ಪದದ ಅರ್ಥ

ಬದಲಾಯಿಸಿ
  • ಗೊಂಡರು ಎಂಬ ಹೆಸರಿನಿಂದಲೇ "ಗೊಂಡ್ವಾನ" ಎಂಬ ಭೂರಾಶಿಯ ಪದವು ರೂಢಿಯಲ್ಲಿ ಬಂದಿರಬಹುದು. ಸಾತ್ಪುರ ಪ್ರಸ್ಥಭೂಮಿ, ನರ್ಮದ ನದಿಯ ಹಾಜುಬಾಜುಗಳಲ್ಲಿ ಮತ್ತು ನಾಗಪುರ ಮೈದಾನ ಪ್ರದೇಶಗಳಲ್ಲಿ, ಕಾಣಿಸಿಕೊಳ್ಳುತ್ತಾರೆ. ಛತ್ತೀಸ್‌ಘಡ್ನ ಬಸ್ತಾರ, ಸರ್ ಗೂಜ, ಚಿಂದ್ವಾರ, ಮಾಂಡ್ಲ ಪ್ರದೇಶಗಳಲ್ಲಿ ಹಾಗೂ ಮಹಾರಾಷ್ಟ್ರದ ಚಂಡ, ಇಯೋಟ್ ಮಲ್ ಜಿಲ್ಲೆಗಳಲ್ಲಿಯೂ ಕೇಂದ್ರೀಕೃತವಾಗಿರುವರು.
  • ಐತಿಹಾಸಿಕವಾಗಿ ಗೊಂಡ್ವಾನ ಪ್ರದೇಶವು ಗೊಂಡರು ವಾಸಿಸುತ್ತಿದ್ದ ಜಾಗವೆಂದು, ಹಿಂದಿನ ಕಾಲದಲ್ಲಿ ಈ ಗೊಂಡ್ವಾನ ಪ್ರದೇಶವನ್ನು ಆಳುತ್ತಿದ್ದರೆಂದು ಹೇಳಲಾಗುತ್ತದೆ. ಬೇರೆ ಉಲ್ಲೇಖದ ಪ್ರಕಾರ ಗೊಂಡರು ಆಂಧ್ರದಲ್ಲಿನ ಈಗ ವಾಸಿಸುವ ಸ್ಥಳಕ್ಕೆ ಬಂದು ನೆಲೆಸಿದರೆಂದು, ಗೊಂಡ ಎಂಬ ಪದವು ತೆಲುಗು ಭಾಷೆಯ "ಕೊಂಡ" ಎಂಬ ಪದದಿಂದ ಬಂದಿರಬೇಕು. ತೆಲುಗಿನಲ್ಲಿ "ಕೊಂಡ" ಎಂದರೆ ಬೆಟ್ಟ-ಗುಡ್ಡ ಎಂದರ್ಥ.
  • ಅದ್ದರಿಂದ ಇವರನ್ನು ಬೆಟ್ಟದ ಜನರೆಂದು ತಿಳಿಯ ಬರುತ್ತದೆ. ಸಂಸ್ಕೃತ ಭಾಷೆಯಲ್ಲಿ "ಗೊಂಡ ಎಂದರೆ "ದಟ್ಟ" ಎಂಬ ಅರ್ಥವನ್ನು ಸೂಚಿಸುತ್ತದೆ. ಗೊಂಡಾರಣ್ಯ ಎಂಬ ಶಬ್ಧವನ್ನು ಗಣನೆಗೆ ತೆಗೆದುಕೊಂಡು ದಟ್ಟಕಾಡಿನ ನಿವಾಸಿಗಳೆಂದು ಹೇಳಬಹುದು, ಈಗಲೂ ಗೊಂಡರ ಮೂಲದ ಬಗ್ಗೆ ಭಿನ್ನಾಭಿಪ್ರಾಯಗಳಿಗೆ[]. ಗೊಂಡರು ದ್ರಾವಿಡ ಭಾಷಾ ಗುಂಪಿಗೆ ಸೇರಿದ "ಗೊಂಡಿ" (Gondi) ಭಾಷೆಯನ್ನು ಬಳಸುತ್ತಾರೆ. ಈ ಭಾಷೆಯು ತೆಲುಗು ತಮಿಳು ಭಾಷೆಗೆ ತುಂಬ ಹೊಂದುವ ಭಾಷೆಯಾಗಿದೆ [೧೦].

ದೈಹಿಕ ಲಕ್ಷಣಗಳು

ಬದಲಾಯಿಸಿ

ಗೊಂಡರು ದೈಹಿಕವಾಗಿ ಎತ್ತರವಾಗಿದ್ದು, ಗಟ್ಟಿ-ಮುಟ್ಟದ ಜನರು. ಕಪ್ಪು ಮೈ ಬಣ್ಣವಿದ್ದು ಹೊಳಪಾದ ಹಲ್ಲುಗಳಿದ್ದು, ಮಂದವಾದ ಕಪ್ಪುತಲೆಯ ಗೂದಲು, ದುಂಡನೆಯ ದಪ್ಪನಾದ ತುಟಿಗಳು ಮತ್ತು ಅಗಲವಾದ ಮೂಗು, ನೋಡಲು ಅವರ ಕಣ್ಣುಗಳು ಆಕರ್ಷಣಿಯವಾಗಿರುತ್ತವೆ.

ಈ ಗೊಂಡ ಬುಡಕಟ್ಟು ಜನರು ಸಸ್ಯಹಾರಿಗಳು ಜೊತೆಗೆ ಮಾಂಸಹಾರಿಗಳು ಹೌದು. ಸಜ್ಜೆ, ಅಕ್ಕಿ, ಜೋಳ, ಗೆಡ್ಡೆ-ಗೆಣಸು ಮತ್ತು ಹಣ್ಣು-ಕಾಯಿಗಳನ್ನು ತಿನ್ನುವರು[೧೧]. ಮತ್ತು ಮೀನುಗಳನ್ನು ಸಹ ತಿನ್ನುತ್ತಾರೆ. ವಿಶೇಷವಾಗಿ ಸಜ್ಜೆಯಿಂದ ತಯಾರಿಸಿದ ಮದ್ಯಪಾನವನ್ನು ಸಹ ಸೇವಿಸುತ್ತಾರೆ. ಈ ಮದ್ಯಕ್ಕೆ "ಕೋಹ್" (Koh) ಎಂದು ಹೆಸರು.

ಗೊಂಡರು ತುಂಬ ಕಡಿಮೆ ಬಟ್ಟೆಯನ್ನು ತೊಡುವರು. ಗಂಡಸರು ನಡುವಿಗೆ ತುಂಡು ಬಟ್ಟೆ (loin)ಯನ್ನು ಉಡುತ್ತಾರೆ. ಹೆಂಗಸರು ಸೀರೆಯನ್ನು ಉಡುತ್ತಾರೆ ಕೊರಳಿಗೆ ಮಣಿಗಳ ಸರ , ಕೈಗಳಿಗೆ ಗಾಜಿನ ಬಳೆ, ಕಡಗ ತಲೆ ಕೂದಲನ್ನು ಕತ್ತಿನ ಹಿಂದೆ ಬಿಟ್ಟಿರುತ್ತಾರೆ. ಮತ್ತು ಕೊರಳಿಗೆ ಕವಡೆಗಳ ಸರವನ್ನು ಹಾಕಿಕೊಂಡಿರುತ್ತಾರೆ [೧೨].

  • ಗೊಂಡರು ಬೆಟ್ಟ-ಗುಡ್ಡಗಳ ಪ್ರದೇಶಗಳಲ್ಲಿ ವಾಸಿಸುವರು, ಸಾಮಾನ್ಯವಾಗಿ ಗುಡಿಸಲುಗಳನ್ನು ಮರ, ಬಿದಿರಿ , ಹುಲ್ಲು , ಮಣ್ಣಿನಿಂದ ನಿರ್ಮಿಸಿಕೊಳ್ಳುತ್ತಾರೆ[೧೩], ಆ ಪ್ರದೇಶದಲ್ಲಿನ ಮಣ್ಣಿನ ಫಲವತ್ತತೆ ಮತ್ತು ನೀರಿನ ಸೌಕರ್ಯಗಳನ್ನು ಗಮನಿಸಿ ಮನೆಗಳನ್ನು ನಿರ್ಮಿಸಿಕೊಳ್ಳುತ್ತಾರೆ.
  • ಅವರ ದಿನನಿತ್ಯದ ಜೀವನಕ್ಕೆ ಬೇಕಾದ, ದನ-ಕರುಗಳಿಗೆ ಕುಡಿಯಲು ಹೆಚ್ಚಾಗಿ ಬೇಕಾಗಿರುವ ನೀರು ಸೀಗುವ ನದಿ, ಕೊಳ-ತೊರೆಗಳ ಅಂಚುಗಳಲ್ಲಿ ತಮ್ಮ ಗುಡಿಸಲುಗಳನ್ನು ಕಟ್ಟಿಕೊಳ್ಳುವುದು ಸರ್ವೆಸಾಮಾನ್ಯವಾಗಿದೆ. ಗೊಂಡರ ಗುಡಿಸಲುಗಳು ಆಯತಾಕಾರವಾಗಿದ್ದು. ಮನೆಯ ನಿರ್ಮಾಣವನ್ನು ಮರದ ತುಂಡುಗಳಿಂದ ಕಟ್ಟಿಕೊಳ್ಳುತ್ತಾರೆ.
  • ಮನೆಯ ಒಳಭಾಗದಲ್ಲಿ ಅಡಿಗೆ ಮನೆ, ಉಗ್ರಾಣ, ಮಲಗುವುದಕ್ಕೆ ಮೂರು ಕೊಠಡಿಗಳಿರುತ್ತವೆ. ಗೊಂಡರ ಎಲ್ಲಾ ಹಳ್ಳಿಗಳಲ್ಲಿಯೂ ಹದಿನೈದರಿಂದ ಇಪ್ಪತ್ತು ಗುಡಿಸಲುಗಳಿದ್ದು, ಹಳ್ಳಿಯ ಪಶ್ಚಿಮದಲ್ಲಿ "ಗೋಟುಲ್" ಮತ್ತು ಪೂರ್ವ ದಿಕ್ಕಿನಲ್ಲಿ ಸ್ಮಶಾನವನ್ನು ಮಾಡಿಕೊಂಡಿರುತ್ತಾರೆ.

ಆರ್ಥಿಕ ಜೀವನ

ಬದಲಾಯಿಸಿ
  • ಮೊದಲಿನಿಂದಲ್ಲೂ ಸಹ ಗೊಂಡರು ಕೃಷಿ ಮತ್ತು ಬೇಟೆಗಾರಿಕೆಯನ್ನು ತೊಡಗಿಕೊಂಡಿದ್ದರು[೧೪]. ಇವರು ನದಿಗಳು ಇರುವ ಪ್ರದೇಶಗಳಲ್ಲಿ ಮೀನುಗಾರಿಕೆಯನ್ನು ರೂಢಿಮಾಡಿಕೊಂಡಿದ್ದರೆ. ಈ ಗೊಂಡರು ಸ್ಥಳಾಂತರ ಕೃಷಿಯನ್ನು ಆಗಿನಿಂದಲ್ಲೂ ಅನುಸರಿಸುತ್ತಾ ಬಂದಿದ್ದಾರೆ.
  • ಬೆಟ್ಟ-ಗುಡ್ಡಗಳಲ್ಲಿ ಇಳಿಜಾರು ಕೃಷಿಗೆ ಯೋಗ್ಯವಲ್ಲದಿದ್ದರೂ ಗುಡ್ಡಗಳನ್ನು ಕಡಿದು ಸಾಗುವಳಿ ಮಾಡಿಕೊಂಡು ಬಂದಿದಾರೆ. ಇವರ ಹೊಲಗಳಲ್ಲಿ ಮಳೆಗಾಲದಲ್ಲಿ ಭತ್ತ, ಗೋಧಿ, ಸಜ್ಜೆ, ಜೋಳ, ಸಾಸಿವೆ, ಕೆಲವು ಕಡೆ ತಂಬಾಕುಗಳನ್ನು ಬೆಳೆಯುತ್ತಾರೆ. [೧೫]. ಸ್ಥಳಾಂತರ ಕೃಷಿ ಪದ್ಧತಿಯನ್ನು ಬಳಸುತ್ತಿದ್ದರು.
  • ಮಣ್ಣಿನ ಫಲವತ್ತತ್ತೆಗೆ ಸಾಕು ಪ್ರಾಣಿಗಳ ಗೊಬ್ಬರವನ್ನು ಬಳಸುತ್ತಾ ಬಂದಿದಾರೆ. "ಪೈಂಡಾ" ಮತ್ತು "ಡಿಪ್ಸಾ" ಎಂಬ ಎರಡು ಕೃಷಿ ಪದ್ಧತಿಗಳಿವೆ. ಮೊದಲನೆಯಾದು ರಂಟೆ ಹೊಡೆಯದೆ ಬಿತ್ತನೆ ಮಾಡುವುದು ಮತ್ತು ಎರಡನೆಯದು ರಂಟೆ ಹೊಡೆದು ಬಿತ್ತನೆ ಮಾಡುವುದು. ಇವರು ಬೇಟೆಯಲ್ಲಿ ಬಿಲ್ಲು ಮತ್ತು ಬಾಣಗಳನ್ನು ಉಪಯೋಗಿಸಿ ಆ ಬಾಣಗಳ ತುದಿಗಳಿಗೆ ಒಂದು ರೀತಿಯ ಗಿಡಮೂಲಿಕೆಯ ವಿಷವನ್ನು ಲೇಪನ ಮಾಡಿ ಆಫ್ರೀಕಾದ ಬುಷ್ ಮ್ಯಾನ್ ಗಳಂತೆ ಪ್ರಾಣಿಗಳ ಬೇಟೆಮಾಡುತ್ತಾರೆ.
  • ಕಾಡಿನಲ್ಲಿ ಸಿಗುವ ಗಡ್ಡೆ-ಗೆಣಸು, ಜೇನು, ಅಂಟುಗಳು, ಹಣ್ಣು-ಹಂಪಲುಗಳು ಮತ್ತು ಬುಟ್ಟಿ ಹಗ್ಗಗಳನ್ನು ಮಾಡಲು ಕಾಡಿನಲ್ಲಿ ಸಿಗುವ ಬಿದಿರು ಮತ್ತು ಹಲ್ಲುಗಳನ್ನು ಸಂಗ್ರಹಿಸುವುದು ಇವರ ಮುಖ್ಯ ಕಸುಬು. ಜೊತೆಗೆ ಇತ್ತೀಚಿಗೆ ಪಶುಸಂಗೋಪನೆಯನ್ನು ಮಾಡುತ್ತಾರೆ. ಮುಖ್ಯವಾಗಿ ಇವರ ಆರ್ಥಿಕ ಜೀವನವು ಅರಣ್ಯವನ್ನು ಹೆಚ್ಚು ಅವಲಂಬಿಸಿದೆ.

ಸಾಮಾಜಿಕ ಜೀವನ

ಬದಲಾಯಿಸಿ
  • ಭಾರತದಲ್ಲಿರುವಂತಹ ಇತರ ಬುಡಕಟ್ಟುಗಳಂತೆ ಇವರು ಕೂಡ ತಮ್ಮದೆ ಆದತಂಹ ವಿವಾಹ ಪದ್ಧತಿಯನ್ನು ಒಳಗೊಂಡಿರುವರು. ಗೊಂಡರಲ್ಲಿ "ಗೋಟುಲ್" (Ghotul)[೧೬] ಎಂಬ ಅವಿವಾಹಿತ ಯುವತಿ-ಯುವಕರಿಗೆ ಪ್ರತ್ಯೇಕ ವಸತಿಗಳಿರುತ್ತವೆ.
  • ಮದುವೆ ವಯಸ್ಸಿಗೆ ಬಂದ ಯುವತಿಯರನ್ನು ಹಳ್ಳಿಯ ಮಧ್ಯ ಭಾಗದಲ್ಲಿಯೂ ಮತ್ತು ಯುವಕರಿಗೆ ಹಳ್ಳಿಯ ಹೊರಗಡೆ ಗೋಟುಲ್ ಮನೆಗಳ ವ್ಯವಸ್ಥೆಯಿರುತದೆ. ಯುವಕ-ಯುವತಿಯರಲ್ಲಿ ಅನುರಾಗ ಉಂಟಾದಾಗ ಅದು ವಿವಾಹದಲ್ಲಿ ಮುಕ್ತಯವಾಗುತ್ತದೆ. ವಿವಾಹಕ್ಕೆ ಸಂಬಂಧಿಸಿದಂತೆ ವರನ ಮನೆಯವರು ಹೆಣನ್ನು ಅನ್ವೇಷಣೆ ಮಾಡಬೇಕು.
  • ಒಪ್ಪಿಗೆಯಾದ ಮೇಲೆ ಮದುವೆ ನಿಶ್ಚಯವನ್ನು ಹಳ್ಳಿಯ ನಾಯಕನ ನಿರ್ಧಾರಕ್ಕೆ ಬಿಟ್ಟಿರುವ ವಿಷಾಯವಾಗಿರುತ್ತದೆ. ಗೊಂಡರಲ್ಲಿ ಸೂರ್ಯನ ಪೂಜೆ, ನಾಗರಪೂಜೆ, ಪಿತೃಪೂಜೆಗಳು ರೂಢಿಯಲಿವೆ. ಹೊಲಗಳ ಕುಯಲು ಸಂಧರ್ಬದಲ್ಲಿ ಸ್ತ್ರೀ ಮತ್ತು ಪುರುಷರು ಒಟ್ಟಿಗೆ ಸಾಮೂಹಿಕವಾಗಿ ಜಾನಪದ ಹಾಡು ಮತ್ತು ಕುಣಿತಗಳು ನಡೆಯುತ್ತವೆ.

ಉಲ್ಲೇಖಗಳು

ಬದಲಾಯಿಸಿ
  1. Socio-Economic and Caste Census (SECC), 2011
  2. http://censusindia.gov.in/Tables_Published/SCST/dh_st_chhattisgarh.pdf |title = ಛತ್ತೀಸ್‌ಘಡ್ ನ ೨೦೦೧ರ ಜನಗಣತಿಯ ಪ್ರಕಾರ ದತ್ತಾಂಶ
  3. http://censusindia.gov.in/Tables_Published/SCST/dh_st_madhya_pradesh.pdf |title = ಮಧ್ಯ ಪ್ರದೇಶದ ೨೦೦೧ ಜನಗಣತಿಯ ಪ್ರಕಾರ ದತ್ತಾಂಶ
  4. http://orissa.gov.in/e-magazine/Orissareview/2010/December/engpdf/207-210.pdf |title = ಓರಿಸ್ಸಾದ ೨೦೦೧ರ ಜನಗಣತಿಯ ಪ್ರಕಾರ ದತ್ತಾಂಶ
  5. http://censusindia.gov.in/Tables_Published/SCST/dh_st_maha.pdf |title =ಮಹಾರಾಷ್ಟ್ರದ ೨೦೦೧ರ ಜನಗಣತಿಯ ಪ್ರಕಾರದ ದತ್ತಾಂಶ
  6. http://peoplegroupsindia.com/profiles/gond Archived 2013-04-17 ವೇಬ್ಯಾಕ್ ಮೆಷಿನ್ ನಲ್ಲಿ. |title = ಗುಜರಾತ್ ಅತ್ಯಂತ ಕಡಿಮೆ ಗೊಂಡಜನಸಂಖ್ಯೆಯನ್ನು ಹೊಂದಿರುವ ಪ್ರದೇಶ | ಪೀಪಲ್ ಗೊಂಡಸ್ ಆಫ್ ಇಂಡಿಯಾ ವೆಬ್ ಸೈಟ್ ನಲ್ಲಿ ಉಖೀಸಲಾಗಿದೆ.
  7. http://www.aptribes.gov.in/html/tcr-studies-eci-gond.htm Archived 2013-06-02 ವೇಬ್ಯಾಕ್ ಮೆಷಿನ್ ನಲ್ಲಿ. |title =೧೯೯೧ರ ಜನಗಣತಿಯ ಪ್ರಕಾರ ಗೊಂಡರ ದತ್ತಾಂಶವನ್ನು ನೀಡಲಾಗಿದೆ.
  8. http://censusindia.gov.in/Tables_Published/SCST/dh_st_bihar.pdf |title =ಬಿಹಾರದಲ್ಲಿ ೨೦೦೧ರ ಜನಗಣತಿಯ ಪ್ರಕಾರ ದತ್ತಾಂಶ
  9. http://www.aptribes.gov.in/html/tcr-studies-eci-gond.htm Archived 2013-06-02 ವೇಬ್ಯಾಕ್ ಮೆಷಿನ್ ನಲ್ಲಿ. |title =ಗೊಂಡ ಪದದ ಅರ್ಥ
  10. http://scriptsource.org/cms/scripts/page.php?item_id=script_detail&key=Qa03 |title =ಗೊಂಡಿ ಭಾಷೆಯ ಬಗ್ಗೆ
  11. http://tribes-of-india.blogspot.in/2008/09/gonds-tribe-of-india.html |title =ಗೊಂಡರ ಆಹಾರ ಪದ್ದತಿ
  12. http://www.ssmrae.com/admin/images/b0504b8c42dc900e1e6bb3a73c3c10f5.pdf |title =ಗೊಂಡರ ಉಡುಗೆ ತೊಡುಗೆಗಳ ಬಗ್ಗೆ
  13. http://publishing.cdlib.org/ucpressebooks/view?docId=ft8r29p2r8& chunk.id= d0e2049 &toc.id=d0e2035&brand=ucpress |title = Gond village in the Adilabad highlands: the houses built of wood and bamboo are thatched with grass; free-standing cylindrical grain bins are made of wattle and covered with a mixture of mud and cow dung
  14. http://bengal.adivasi.in/2013/06/gond-adivasi-tribal-india-lifestyle.html Archived 2013-10-20 ವೇಬ್ಯಾಕ್ ಮೆಷಿನ್ ನಲ್ಲಿ. |title =ಗೊಂಡರ ಆರ್ಥಿಕ ಜೀವನ ಬಗ್ಗೆ
  15. http://publishing.cdlib.org/ucpressebooks/view?docId=ft8r29p2r8&chunk.id=d0e2049&toc.depth=1&toc.id=d0e2035&brand=ucpress
  16. http://books.google.co.in/books?id=X39c2VODLT0C&pg= PA95&lpg= PA 95&dq=Ghotul+of+gond+tribe&source=bl&ots=0Lg5QKga3p&sig=lYXv9bNl9v8tW0BZcw3pXFxI7OU&hl=en&sa=X&ei=CvumUrWrCYGMrAey6YGgCQ&ved=0CG4Q6AEwCw#v=onepage&q=Ghotul%20of%20gond%20tribe&f=false |title =ಗೊಂಡರ ಗೋಟುಲ್ ವಸತಿಗಳ ಮತ್ತು ವಿವಾಹದ ಬಗ್ಗೆ
"https://kn.wikipedia.org/w/index.php?title=ಗೊಂಡರು&oldid=1136039" ಇಂದ ಪಡೆಯಲ್ಪಟ್ಟಿದೆ