ಖ್ಯಾತ ಕರ್ನಾಟಕ ವೃತ್ತ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಪ್ರಾಚೀನ ಕನ್ನಡ ಕವಿಗಳು ಉಭಾಯಭಾಷಾ ವಿಶಾರದರೂ, ಸಂಸ್ಕ್ರತ ಪಕ್ಷಾಪಾತಿಗಳೂ ಆಗಿದ್ದುದರಿಂದ ಅವರು ತಮ್ಮ ಕನ್ನಡ ಕಾವ್ಯಗಳಲ್ಲಿ ಸಂಸ್ಕ್ರತದ ವಸ್ತು, ಭಾಷಾ ಶೈಲಿಯ ಜೊತೆಗೆ ಸಂಸ್ಕೃತ ಛಂದಸ್ಸನ್ನು ಬಳಸಿದರು. ಚಂಪೂ ಸ್ವರೂಪದ ಇವರ ಕಾವ್ಯಗಳಲ್ಲಿ ಗದ್ಯಕ್ಕಿಂತ ಪದ್ಯದ ಪ್ರಮಾಣ ಅಧಿಕವಾಗಿದ್ದು, ಪದ್ಯದಲ್ಲಿ ಕಂದ ಮತ್ತು ವೃತ್ತಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಸಂಸ್ಕ್ರತದ ಲೌಕಿಕ ಛಂದಸ್ಸಿನಲ್ಲಿ ಒಂದು ಅಕ್ಷರದ ಉಕ್ತೆಯಿಂದ ಇಡಿದು ಇಪ್ಪಾತ್ತಾರು ಅಕ್ಷರಗಳ ಉತ್ಪತ್ತಿಯವರೆಗಿನ ಛಂದಸ್ಸಿನದಿಂದ ಹೊರಡುವ ಸಮವೃತ್ತಗಳು ನೂರಾರಿವೆ. ಅವುಗಳಲ್ಲಿ ಕನ್ನಡ ಕವಿಗಳಿಗೆ ಚಂಪಕಮಾಲೆ, ಉತ್ಪಲಮಾಲೆ, ಮತ್ತೇಭ ವಿಕ್ರೀಡಿತ, ಶಾರ್ದೂಲ ವಿಕ್ರೀಡಿತ, ಸ್ರಗ್ದರಾ ಮತ್ತು ಮಹಾಸ್ರಗ್ದರಾಗಳೆಂಬ ಆರು ವೃತ್ತಗಳು ಪ್ರಿಯವಾಗಿ ಕಂಡಿವೆ.ನಾಗವರ್ಮನು ಛಂದೋಂಬುಧಿಯಲ್ಲಿ ಈ ಆರೂ ವೃತ್ತಗಳನ್ನು ಖ್ಯಾತಕರ್ಣಾಟಕ ಎಂದೇ ಕರೆದಿದ್ದಾರೆ.[೧]
ಲಕ್ಷಣ ಪದ್ಯ
ಬದಲಾಯಿಸಿ- ಗುರುವೊಂದಾದಿಯೊಳುತ್ಪಲಂ ಗುರು ಮೊದಲು ಮೂರಗೆ ಶಾರ್ದೂಲಮಾ
- ಗುರು ನಾಲ್ಕಾಗಿರಲಂತು ಸ್ರಗ್ದರೆ ಲಘುದ್ವಂದ್ವ ಗುರು ದ್ವಂದ್ವಮಾ
- ಗಿರೆ ಮತ್ತೇಭ ಲಘುದ್ವಯ ತ್ರಿಗುರುವಿಂದಕ್ಕುಂ ಮಹಾಸ್ರಗ್ದರಂ
- ಹರಿಣಾಕಿ ಲಘುನಾಲ್ಕು ಚಂಪಕಮಿವಾರುಂ ಖ್ಯಾತಕರ್ಣಾಟಕಂ
ಆರು ವೃತ್ತಗಳು
ಬದಲಾಯಿಸಿಈ ಆರುವೃತ್ತಗಳಲ್ಲಿ ಚಂಪಕ ಮತ್ತು ಉತ್ಪಲ ಮಾಲೆಗಳು, ಮತ್ತೇಭ ಮತ್ತು ಶಾರ್ದೂಲ ವಿಕ್ರೀಡಿತಗಳು ಸ್ರಗ್ದರ ಮತ್ತು ಮಹಾಸ್ರಗ್ದರಗಳು ಹೀಗೆ ಮೂರು ಜೋಡಿಗಳು. ಕನ್ನಡ ಕಾವ್ಯಗಳಲ್ಲಿ ಚಂಪಕ ಮತ್ತು ಉತ್ಪಲ ಮಾಲೆಗಳ ಪ್ರಮಾಣ ಅಧಿಕ; ವಿಕ್ರೀಡಿತಗಳ ಪ್ರಮಾಣ ಕಡಿಮೆ; ಸ್ರಗ್ದರೆಗಳ ಪ್ರಮಾಣ ಇನ್ನೂ ಕಡಿಮೆ ಅವುಗಳ ಈ ಪ್ರಮಾಣ ಅವು ಕನ್ನಡದ ಜಾಯಮಾನಕ್ಕೆ ಹೊಂದಿಕೊಂಡು ಹೋಗುವ ಗುಣಗಳನ್ನು ಅವಲಂಬಿಸಿದೆ. ಈ ಆರು ವೃತ್ತಗಳಲ್ಲಿ ಎರಡು ವಿಕ್ರೀಡಿತ ಹಾಗೂ ಎರಡು ಸ್ರಗ್ದರೆಗಳ ಹೆಸರುಗಳು ಸಂಸ್ಕ್ರತದಿಂದ ಕನ್ನಡಕ್ಕೆ ನೇರವಾಗಿ ಬಂದಿದ್ದರೆ ಚಂಪಕ ಮತ್ತು ಉತ್ಪಲ ಮಾಲೆಗಳು ಹೆಸರು ಬದಲಾಯಿಸಿಕೊಂಡು ಬಂದಿವೆ.
ಖ್ಯಾತಕರ್ಣಾಟಕಗಳಲ್ಲಿ ಸರ್ವಕವಿ ಜನಪ್ರಿಯವಾದ ವೃತ್ತವೆಂದರೆ ಚಂಪಕಮಾಲೆ. ಇದು ಸಂಸ್ಕ್ರತದ ೨೧ ಅಕ್ಷರಗಳ ಪ್ರಕೃತಿ ಛಂದಸ್ಸಿಗೆ ಸೇರಿದ ವೃತ್ತ. ಚಂಪಕಮಾಲೆಯ ಲಕ್ಶಣ ಕೈಪಿಡಿಕಾರರು ಹೀಗೆ ಹೇಳಿದ್ದಾರೆ.
- ಸೂತ್ರ:ನಜಭಜ ಜಂಜರಂ ಬಗೆಗೊಳುತ್ತಿರೆ ಚಂಪಕಮಾಲೆಯೆಂದಪರ್
ಚಂಪಕಮಾಲೆಯ ಪ್ರತಿ ಪಾದಗಳಲ್ಲಿ ೨೧ ಅಕ್ಷರಗಳಿದ್ದು, ನಗಣ, ಜಗಣ, ಭಗಣ, ಜಗಣ, ಜಗಣ, ಜಗಣ, ರಗಣಗಳು ಕ್ರಮವಾಗಿ ಬರುತ್ತವೆ. ಚಂಪಕ ಮಾಲೆಯು ಸಂಸ್ಕೃತದ ಸರಸೀವೃತ್ತವನ್ನು ನೇರವಾಗಿ ಹೋಲುತ್ತದೆ. ಎರಡರಲ್ಲಿ ಗಣಗಳು ಒಂದೆ ರೀತಿ, ಎರಡರಲ್ಲಿಯೂ ಯತಿ ೧೩ನೇ ಅಕ್ಷರಕ್ಕೆ ಬರುತ್ತದೆ. ಆದುದರಿಂದ ಚಂಪಕಮಾಲೆಯು ಸಂಸ್ಕೃತದ ಸರಸೀವೃತ್ತದಿಂದ ಬಂದಿರಬೇಕು. ಕನ್ನಡ ಚಂಪೂ ಕಾವ್ಯಗಳಲ್ಲಿ ಕಂದದ ತರುವಾಯ ಚಂಪಕಮಾಲೆಯನ್ನೇ ಕವಿಗಳು ಅಧಿಕವಾಗಿ ಬಳಸಿದ್ದಾರೆ. ಚಂಪಕಮಾಲೆ ಲಯ ಕನ್ನಡದ ಗತಿಗೆ ಹೆಚ್ಚಾಗಿ ಹೊಂದಿಕೊಂಡು ಹೋಗುವುದೇ ಇದಕ್ಕೆ ಕಾರಣವೆನ್ನಬಹುದು. ಉದಾಹರಣೆ: ೧ಕರಮೆಸೆದತ್ತು ಕುಮುದಿಯ ಬಿತ್ತು ಚಕೋರಿಯ ತುತ್ತು ನೀರಜೋ
ಚಂಪಕಮಾಲೆಯ ಭಾವಾಭಿವ್ಯಕ್ತಿ:ನಯವಾದ ನಡಿಗೆಯುಳ್ಳ ಚಂಪಕಮಾಲೆ ಮೃದುವಾಗಿರುವ ಶೃಂಗಾರ, ಕರುಣೆ, ಸ್ನೇಹ, ಭಕ್ತಿ ಮೊದಲಾದ ಭಾವಗಳನ್ನು ಸೊಗಸಾಗಿ ನಿರೂಪಿಸಬಲ್ಲದು. ಒಟ್ಟಿನಲ್ಲಿ ಚಂಪಕಮಾಲೆಯ ಗತಿಯು ಸುಂದರವಾಗಿರುವಂತೆ ಬಂದುರವೂ ಉದಾ:ನೆನೆಯದಿರಣ್ಣ ಭಾರತದೊಳಿಂ ಪೆರರಾರುಮನೊಂದೆ ಚಿತ್ತದಿಂ.
ಚಂಪಕಮಾಲೆಯ ಲಕ್ಶಣವನ್ನು ಹೀಗೆ ಹೇಳಬಹುದು.
- ನಾಲ್ಕು ಪಾದಗಳ ಸಮಚತುಷ್ಪದಿ
- ಪ್ರತಿ ಪಾದಗಳಲ್ಲಿ ೨೧ ಅಕ್ಷರಗಳಿರುತ್ತವೆ.
- ನಜಭಜಜಜರ ಗಣಗಳು ಬರುತ್ತವೆ.
- ೧೩ನೆ ಅಕ್ಷರಕ್ಕೆ ಯತಿ
- ನಯವಾದ ಭಾವಾಭಿವ್ಯಕ್ತಿಗೆ ಸೂಕ್ತ.
- ಆದಿಪ್ರಾಸ ಇದೆ.
ಉತ್ಪಲಮಾಲೆಯು ಸಂಸ್ಕೃತದ ೨೦ನೇಯಾ ಕೃತಿ ಛಂದಸ್ಸಿಗೆ ಸೇರಿದ ವೃತ. ಚಂಪಕಮಾಲೆಯ ಸೂತ್ರವನ್ನು ಕೈಪಿಡಿಕಾರರು ಹೀಗೆ ಹೇಳಿದ್ದಾರೆ.
- ಸೂತ್ರ:ಉತ್ಪಲಮಾಲೆಯಪ್ಪುದು ಭರಂ ನಭಭಂ ರಲಗಂ ನೆಗಳ್ದಿರಲ್.
ಉತ್ಪಲಮಾಲೆಯ ಪ್ರತಿ ಪಾದಗಳಲ್ಲಿ ೨೦ ಅಕ್ಷರಗಳಿದ್ದು, ಕ್ರಮವಾಗಿ ಭಗಣ, ರಗಣ, ನಗಣ, ಭಗಣ, ಭಗಣ, ರಗಣಗಳುಬ್ಂದು ಕೊನೆಯಲ್ಲಿ ಒಂದು ಲಘು ಮತ್ತು ಒಂದು ಗುರು ಬರುತ್ತದೆ. ಉದಾಹರಣೆ:
- ತೆಂಕಣ ಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇ.
- ಪಾಡುವ ತುಂಬಿ ತೀಡುವೆಲರಾಡುವ ಸೋಗೆ ಕೊಳಂಗಳೊಳ್ ತುಳುಂ.
ಉತ್ಪಲಮಾಲೆಯ ಭಾವಾಭಿವ್ಯಕ್ತಿ: ಲಯ ಮತ್ತು ಭಾವಾಭಿವ್ಯಕ್ತಿಯ ದೃಶ್ಟಿಯಿಂದ ಉತ್ಪಲಮಾಲೆಯು ಚಂಪಕಮಾಲೆಗೆ ಸಮನಾದಗಿದೆ. ಎರಡರ ನಾದ ಲಯ ಒಂದೇ ಗುರುವಿನಿಂದ ಆರಂಭವಾಗುವ ಚರಣಗಳುಳ್ಳ ಉತ್ಪಲಮಾಲೆಯು ಚಂಪಕಮಾಲೆಗಿಂತ ಆವೇಶಾಭಿವ್ಯಕ್ತಿಗೆ ವೀರಾವೇಶಾಭಿವ್ಯಕ್ತಿಗೆ ಹೆಚ್ಚು ಸೂಕ್ತವಾಗಿದೆ. ಉದಾಹರಣೆ: ಒತ್ತಿ ತರುಂಬಿನಿಂದ ರಿಪು ಭೂಜ ಸಮಾಜದ ಬೇರ್ಗಳಂ ನಭ
ಉತ್ಪಲಮಾಲೆಯ ಲಕ್ಶಣವನ್ನು ಹೀಗೆ ಹೇಳಬಹುದು