ಚಂಪಕ ಮಾಲಾ ವೃತ್ತ
ಇದು ಸಂಸ್ಕೃತದ ೨೧ ಅಕ್ಷರಗಳ 'ಪ್ರಕೃತಿ' ಎಂಬ ಛಂದಸ್ಸಿನ ಒಳ ಪ್ರಬೇಧ.೬ ವೃತ್ತಗಳಲ್ಲಿ ಹೆಚ್ಚು ಖ್ಯಾತಿ ಪಡೆದಿರುವ ವೃತ್ತ ಎಂದರೆ ಅದು 'ಚಂಪಕ ಮಾಲಾವೃತ್ತ'. ಸಂಸ್ಕೃತದಲ್ಲಿ ಇದಕ್ಕೆ ಸರಸಿ, ಶಶಿವದನ,ಪಂಚಕಾವಲಿ ಎಂಬ ಹೆಸರುಗಳು ಇವೆ. ಚಂಪಕಮಾಲೆಯು ಸಂಸ್ಕೃತದ 'ಸರಸಿ' ವೃತ್ತವನ್ನು ಹೋಲುತ್ತದೆ.ನಾಗವರ್ಮನು ತನ್ನ ಛಂದೋಂಬುದಿ ಯಲ್ಲಿ ಚಂಪಕಮಾಲಾ ವೃತ್ತವನ್ನು ಕುರಿತು ಈ ರೀತಿ ಹೇಳುತ್ತಾನೆ.
ಲಕ್ಷಣ ಪದ್ಯ:-
"ನಜಭಜಜಂಜರಂ ಬಗೆಗೊಳುತ್ತಿರೆ ಚಂಪಕಮಾಲೆ ಎಂದಪರ್"
ಚಂಪಕಮಾಲಾವೃತ್ತದ ಲಕ್ಷಣಗಳು :-
೧) ಚಂಪಕಮಾಲಾ ವೃತ್ತವು ಅಕ್ಷರ ಗಣದಿಂದ ಕಟ್ಟಿದ ಪದ್ಯ.
೨) ಈ ವೃತ್ತದಲ್ಲಿ ನಾಲ್ಕು ಸಮ ಪಾದಗಳಿರುತ್ತವೆ.
೩) ಈ ಪದ್ಯದ ಪ್ರತಿ ಸಾಲು ೨೧ ಅಕ್ಷರಗಳಿಂದ ಕೂಡಿರುತ್ತದೆ.
೪) ಈ ವೃತ್ತದಲ್ಲಿ ಕ್ರಮವಾಗಿ ನ ಜ ಭ ಜ ಜ ಜ ರ ಗಣಗಳು ಇರುತ್ತವೆ.
೫) ಇಲ್ಲಿ ೧೩ನೇ ಅಕ್ಷರಕ್ಕೆ ಯತಿ ಬರುತ್ತದೆ.
೬) ಪ್ರತಿ ಪಾದದ ಹಾದಿಯಲ್ಲಿ ೪ ಲಘು(UUUU) ಬರುತ್ತದೆ.
ಸಂಸ್ಕೃತದಲ್ಲಿ ಚಂಪಕಮಾಲೆ ಎಂದರೆ 'ಸಂಪಿಗೆ ಹಾರ' ಎಂಬ ಅರ್ಥ ಇದೆ. ಇದು ನಯವಾಗಿ,ಮೃದುವಾಗಿ ಮತ್ತು ಲಲಿತವಾಗಿ ನಡೆಯುವ ನಡೆಯಾಗಿದೆ.ಲಕ್ಷಣ ಪದ್ಯವನ್ನು ಉದಾಹರಣಾ ಪದ್ಯವಾಗಿಯೂ ಬಳಸಬಹುದು.
ಉದಾಹರಣೆ ಪದ್ಯ:-
೧) ನ ಜ ಭ ಜ U U U U - U - U U U - U ನ ಜ ಭ ಜ ಜಂ ಜ ರಂ ಬ ಗೆ ಗೊ ಳು ತ್ತಿ ಜ ಜ ರ U - U U - U - U - ರೆ ಚಂ ಪ ಕ ಮಾ ಲೆ ಎಂ ದ ಪರ್
೨) ನ ಜ ಭ ಜ U U U U - U - U U U - U ಗು ರು ವಿ ನ ನೆ ತ್ತ ರಂ ಕು ಡಿ ವೆ ನ ಪ್ಪೊ ಜ ಜ ರ U - U U - U - U - ಡೆ ವಂ ದ್ವಿ ಜ ವಂ ಶ ಜಂ ನಿ ಜಾ
೩)ನೆನೆಯದಿರಣ್ಣ ಭಾರತದೊಳಿಂ ಪೆರನಾರುಮನೊಂದೆಚಿತ್ತದಿಂ ನೆನವೊಡೆ ಕರ್ಣನಂನೆನೆಯಕರ್ಣನೊಳಾರ್ ದೊರೆಕರ್ಣನೇರಿಕ ರ್ಣನಕಡು ನನ್ನಿ ಕರ್ಣನಳವಂಕದ ಕರ್ಣನ ಚಾಗ ಮೆಂದುಕ ರ್ಣನಪಡೆಮಾತಿನೊಳ್ ಪುದಿದುಕರ್ಣರಸಾಯನಮಲ್ತೆಭಾರತಂ.
ಚಂಪಕ ಮಾಲಾ ವೃತ್ತಕ್ಕೆ ಕನ್ನಡದಲ್ಲಿ ಹೆಚ್ಚು ಮಹತ್ವವಿದೆ ಮತ್ತು ಇದರ ನಡುಗೆ ಮಾತ್ರಗಣದ ರೀತಿಯಲ್ಲಿದೆ ನಯವಾದ ನಡುಗೆ,ಕುದುರೆ ಓಟದಲ್ಲಿ ನಡೆಯಿದೆ ಶೃಂಗಾರ, ಭಕ್ತಿ,ಸ್ನೇಹ ಕರುಣೆ ಅಭಿಮಾನ ಈ ಭಾವಗಳನ್ನು ಅಭಿವ್ಯಕ್ತಿಗೊಳಿಸಲು ಈ ವೃತ್ತ ಹೆಚ್ಚು ಸೂಕ್ತವಾಗಿದೆ. ಖ್ಯಾತ ಕರ್ನಾಟಕ ವೃತ್ತಗಳಲ್ಲೇ ಅಗ್ರಸ್ಥಾನ ಪಡೆದುಕೊಂಡಿದೆ.ಆದ್ದರಿಂದ ಈ ವೃತ್ತವನ್ನು ಖ್ಯಾತ ಕರ್ಣಾಟಕಗಳ 'ರಾಜ' ಎಂದು ಕರೆಯಬಹುದು.ಕನ್ನಡ ಕವಿಗಳ ವಿಶೇಷ ಪ್ರೀತಿಗೆ ಪಾತ್ರವಾಗಿರುವುದರಿಂದ ಕನ್ನಡ ಕಾವ್ಯಗಳಲ್ಲಿ ಅತಿ ಹೆಚ್ಚು ಬಳಕೆಯಾಗಿರುವ ವೃತ್ತವೇ ಚಂಪಕಮಾಲಾವೃತ್ತ.
- ಪಂಪಭಾರತದ ೮೧೪(814) ವೃತ್ತಗಳಲ್ಲಿ ೪೦೯(409) ಅಂದರೆ ನಾಲ್ಕನೇ ಒಂದು (¼) ಭಾಗದ ವೃತ್ತಗಳು ಚಂಪಕಮಾಲೆಯಲ್ಲಿ ರಚಿತವಾಗಿವೆ.
- ಪೊನ್ನನ ಶಾಂತಿಪುರಾಣದಲ್ಲಿ ೪೬೭(467) ವೃತ್ತಗಳಲ್ಲಿ
೧೨೭(127) ವೃತ್ತಗಳು ಚಂಪಕಮಾಲಾ ವೃತ್ತದಲ್ಲಿ ರಚಿತವಾಗಿವೆ.
ಕನ್ನಡದಲ್ಲಿ ಇಷ್ಟೊಂದು ಮಹತ್ವ ಮತ್ತು ಅಗ್ರಸ್ಥಾನವನ್ನು ಪಡೆದುಕೊಂಡಿರುವ ಚಂಪಕಮಾಲಾವೃತ್ತ, ಸಂಸ್ಕೃತದಲ್ಲಿ ಇದರ ಬಳಕೆ ಅಥವಾ ಪ್ರಕಾರವೇ ಇಲ್ಲದಂತಿದೆ. ಸಂಸ್ಕೃತದ ಒಟ್ಟು ವೃತ್ತಗಳ ಬಳಕೆಯಲ್ಲಿ ಚಂಪಕಮಾಲಾ ವೃತ್ತವನ್ನು ಆರರಿಂದ ಎಂಟು ವೃತ್ತಗಳಲ್ಲಿ ಬಳಸಿರುವುದನ್ನು ಕಾಣಬಹುದು. ಚಂಪಕಮಾಲಾವೃತ್ತ ಕನ್ನಡ ಕವಿಗಳಿಗೆ ಒಗ್ಗಲು ಕಾರಣ ಈ ವೃತ್ತದ ಲಯ ಕನ್ನಡದ ಗತಿಗೆ ಚೆನ್ನಾಗಿ ಹೊಂದಿಕೊಂಡು ಸಾಗುತ್ತದೆ ಆದ್ದರಿಂದ ಚಂಪಕಮಾಲಾ ಕನ್ನಡ ಕವಿಗಳ ಪ್ರೀತಿಗೆ ಹೆಚ್ಚು ಪಾತ್ರವಾಗಿದೆ.