ಸ್ರಗ್ಧರಾ ವೃತ್ತ
ಈ ಲೇಖನ ಯಾವುದೇ ವಿಕಿಪೀಡಿಯ ಲೇಖನಕ್ಕೆ ಕೊಂಡಿಗಳನ್ನು (Interwiki links) ಹೊಂದಿಲ್ಲ. (ಡಿಸೆಂಬರ್ ೨೦೧೫) |
ಸ್ರಗ್ಧರಾ ವೃತ್ತದ ಪ್ರತಿಪಾದದಲ್ಲಿಯೂ ೨೧ ಅಕ್ಷರಗಳಿವೆ. ಇದರ ಗಣವಿನ್ಯಾಸದಲ್ಲಿ ಬರುವ ಗಣಗಳು "ಮರಭನಯಯಯ"
ಇದರ ಸೂತ್ರಪದ್ಯ ಹೀಗಿದೆ
"ತೋರಲ್ ಮಂ ರಂಭನಂ ಮೂಯಗಣಮುಮದೆತಾಂ ಸ್ರಗ್ಧರಾ ವೃತ್ತಮಕ್ಕುಂ"
ಮ | ರ | ಭ | ನ | ಯ | ಯ | ಯ |
_ _ _ | _ U _ | _ U U | U U U | U __ | U _ _ | U __ |
ತೋರಲ್ ಮಂ | ರಂಭನಂ | ಮೂಯಗ | ಣಮುಮ | ದೆತಾಂ ಸ್ರ | ಗ್ಧರಾ ವೃ | ತ್ತಮಕ್ಕುಂ |
ಉದಾಹರಣೆ
ಆ ರುದ್ರಾಕ್ಷ್ಯಗ್ನಿ ಸಂತಪ್ತನನೆನೆ ಜನರಾ ತಾಪಮಂ ಪೆರ್ಚಿಸುತ್ತುಂ
ವಾರಸ್ತ್ರೀರಕ್ತವರ್ಣಾಧರದೊಳುರೆ ನಿಲಲ್ ಜಾರುತುಂ ಪೋದನಂ ಕಾ-
ಮಾರಿಪ್ರಾಸಪ್ರತೀಕ್ಷಾನಿರತನತಿಭಯಭ್ರಾಂತನಂ ಪೋಲ್ವವೋಲೇ
ಸೇರುತ್ತುಂ ನೀರನಾಗಳ್ ನಿರುಕಿಪರಿಗೆ ತಾಂ ಕಂಡನಾ ನೀರಜಾಪ್ತಂ||
(ಸೂರ್ಯಾಸ್ತ ವರ್ಣನೆಯ ಮುಕ್ತಕ)
ಸಂಸ್ಕೃತಕನ್ನಡಗಳೆರಡರಲ್ಲಿಯೂ ಈ ಛಂದಸ್ಸಿನ ಪದ್ಯಗಳು ವಿಪುಲವಾಗಿ ಸಿಗುತ್ತವೆ.