ಮತ್ತೇಭವಿಕ್ರೀಡಿತ ವೃತ್ತ

ಮತ್ತೇಭ ವಿಕ್ರೀಡಿತ ವೃತ್ತದಲ್ಲಿ ಪ್ರತಿಸಾಲಿನಲ್ಲೂ ೨೦ ಅಕ್ಷರಗಳಿರುತ್ತವೆ. ವಿನ್ಯಾಸದಲ್ಲಿ "ಸಭರನಮಯ ಲಗು" ಗಣಗಳಿರುತ್ತವೆ. (ಲ-ಲಘು,ಗು-ಗುರು)

ಸೂತ್ರ ಪದ್ಯ ಬದಲಾಯಿಸಿ

ಇದರ ಸೂತ್ರ ಪದ್ಯ ಹೀಗಿದೆ.

ಸಭರಂನಂ ಮಯಲಾಗಮುಂ ಬಗೆಗೊಳಲ್ ಮತ್ತೇಭವಿಕ್ರೀಡಿತಂ

ಇದರ ಪ್ರಸ್ತಾರ ವಿನ್ಯಾಸ ಹೀಗಿದೆ;

ಮತ್ತೇಭವಿಕ್ರೀಡಿತ ವೃತ್ತ ಅಕ್ಷರ ವಿನ್ಯಾಸ ಬದಲಾಯಿಸಿ

ಲಘು, ಗುರು
U U _ _ U U _U_ U U U _ _ _ U__ U _
ಸ ಭ ರಂ ನಂ ಮ ಯ ಲಾ ಗ ಮುಂ ಬ ಗೆ ಗೊ ಳಲ್ ಮತ್ತೇ ಭ ವಿಕ್ರೀ ಡಿತಂ

ಮತ್ತೇಭವಿಕ್ರೀಡಿತ ವೃತ್ತದ ಬಗೆಗೆ ಚರ್ಚೆ ಬದಲಾಯಿಸಿ

ಸಂಸ್ಕೃತ ವಾಙ್ಮಯದಲ್ಲಿ ಇದು ಹೆಚ್ಚೇನೂ ಬಳಕೆಯಲ್ಲಿಲ್ಲ. ಕನ್ನಡದಲ್ಲಿ ಮತ್ತೇಭ ವಿಕ್ರೀಡಿತದ ಪದ್ಯಗಳು ವಿಫುಲವಾಗಿ ಸಿಗುತ್ತವೆ.
ಇದು ಶಾರ್ದೂಲವಿಕ್ರೀಡಿತ ಪದ್ಯದ ಮೊದಲ ಗುರುವನ್ನು ಲಘುಗಳೆರಡರಿಂದ ಬದಲಾಯಿಸಿದಾಗ ಬರುತ್ತದೆ.
ಉದಾಹರಣೆ
ಜಗದೊಳ್ ಸನ್ನಿದಮಾದ ನಾಳ್ನುಡಿಗಳಿಂ ಛಂದಕ್ಕೆ ಬರ್ಪಂತು ನೆ-
ಟ್ಟಗೆ ಮಾತಾಡುವ ಬಲ್ಮೆ ಚಿತ್ತದೊಳೊರಲ್ದಿರ್ದರ್ಥಮಂ ಕೂಡೆ ನಾ-
ಲಗೆಯಿಂ ರಂಜಿಸುವೊಂದು ಬಿನ್ನಣಮದಿನ್ನಾಂಗೆ ಪುಣ್ಯೈಕಭಾ-
ಗಿಗೆ ಸೈಪಿಂ ದೊರೆಕೊಳ್ವುಮಾತನೆ ವಲಂ ಶೃಂಗಾರರತ್ನಾಕರಂ||
ಎಸಕಂಬೆತ್ತ ಮತಿಪ್ರಕಾಶ ಮದನಿನ್ನೇನೆಂದಪೆಂ ಚೇಟಿ ನಾಲ್-
ದೆಸೆಯೊಳ್ ನಾಲ್ವರ ಕಂಟದೊಳ್ ಬರೆಯೆ ಕಬ್ಬಂ ಬೇಳ್ವನೊಲ್ದತ್ತಲಾ-
ಡಿಸುವಂ ನೆತ್ತಮನಿತ್ತಲೋಲಿದೊಡೆ ತಪ್ಪಂ ಪೇಳ್ದುದಂ ತಿರ್ದಿಯಾ-
ಲಿಸುವಂ ಗೀತಮನೆನ್ನುವಂ ನಗಿಸುವಂ ಶೃಂಗಾರರತ್ನಾಕರಂ||
(ಕವಿಕಾಮನ ಶೃಂಗಾರರತ್ನಾಕರ ೧-೬,೭)

ಉಲ್ಲೇಖ ಬದಲಾಯಿಸಿ