ಕ್ಯಾಸ್ಪಿಯನ್ ಸಮುದ್ರ
ಕ್ಯಾಸ್ಪಿಯನ್ ಸಮುದ್ರ ವು (Azerbaijani: [Xəzər dənizi] Error: {{Lang}}: text has italic markup (help), Russian: Каспийское море, Kazakh: Каспий теңізі, Turkmen: [Hazar deňzi] Error: {{Lang}}: text has italic markup (help), ಪರ್ಷಿಯನ್: دریای خزر or دریای گیلان ) ಪ್ರದೇಶಾನುಸಾರವಾಗಿ ಭೂಮಿಯ ಮೇಲೆ ಆವರಿಸಿರುವ ಅತ್ಯಂತ ದೊಡ್ಡ ಜಲರಾಶಿಯಾಗಿದೆ, ಇದನ್ನು ವಿಶ್ವದ ಅತ್ಯಂತ ದೊಡ್ಡ ಸರೋವರ ಅಥವಾ ಪೂರ್ಣಮಟ್ಟದ ಸಮುದ್ರವೆಂದು ವಿಧವಿಧವಾಗಿ ವರ್ಗೀಕರಿಸಲಾಗಿದೆ.[೨][೩] ಸಮುದ್ರ 371,000 km2 (143,200 sq mi)ರಷ್ಟು ಮೇಲ್ಮೈ ಪ್ರದೇಶವನ್ನು ಹೊಂದಿದೆ (ಇದರಲ್ಲಿ ಗರಬೋಗಜ್ಕೊಲ್ ಅಯ್ಲಗಿ ಸೇರ್ಪಡೆಯಾಗಿಲ್ಲ) ಹಾಗು 78,200 km3 (18,800 cu mi)ರಷ್ಟು ಗಾತ್ರವನ್ನು ಹೊಂದಿದೆ.[೪] ಇದು ಒಂದು ಎಂಡೋರ್ಹೆಯಿಕ್ ಬೇಸಿನ್(ಇದಕ್ಕೆ ಹೊರಹರಿವಿನ ಮಾರ್ಗಗಳಿರುವುದಿಲ್ಲ) ಆಗಿರುವುದರ ಜೊತೆಗೆ, ಉತ್ತರದಲ್ಲಿ ಇರಾನ್ ನಿಂದ, ದಕ್ಷಿಣದಲ್ಲಿ ರಷ್ಯಾದಿಂದ, ಪಶ್ಚಿಮದಲ್ಲಿ ಕಜಾಕ್ ಸ್ತಾನ್ ಹಾಗು ತುರ್ಕಮೆನಿಸ್ತಾನ್ ನಿಂದ, ಹಾಗು ಪೂರ್ವದಲ್ಲಿ ಅಜೆರ್ಬೈಜಾನ್ ನಿಂದ ಸುತ್ತುವರೆದಿದೆ.
ಕ್ಯಾಸ್ಪಿಯನ್ ಸಮುದ್ರ | |
---|---|
ನಿರ್ದೇಶಾಂಕಗಳು | 40°N 51°E / 40°N 51°E |
Endorheic, Saline, Permanent, Natural | |
ಒಳಹರಿವು | Volga River, Kura River, Terek River |
ಹೊರಹರಿವು | Evaporation |
ಕ್ಯಾಚ್ಮೆಂಟ್ ಪ್ರದೇಶ | 3,626,000 km2 (1,400,000 sq mi)[೧] |
Basin countries | Azerbaijan, Iran, Kazakhstan, Russia, Turkmenistan |
ಗರಿಷ್ಠ ಉದ್ದ | 1,030 km (640 mi) |
ಗರಿಷ್ಠ ಅಗಲ | 435 km (270 mi) |
371,000 km2 (143,200 sq mi) | |
ಸರಾಸರಿ ಆಳ | 187 m (610 ft) |
ಗರಿಷ್ಠ ಆಳ | 1,025 m (3,360 ft) |
ನೀರಿನ ಪ್ರಮಾಣ | 69,400 km3 (16,600 cu mi) |
Residence time | 250 years |
ತೀರದ ಉದ್ದ1 | 7,000 km (4,300 mi) |
ಮೇಲ್ಮೈ ಎತ್ತರ | −28 m (−92 ft) |
Islands | 26+ (see Island below) |
ವಸಾಹತುಗಳು | Baku (Azerbaijan), Rasht (Iran), Aktau (Kazakhstan), Makhachkala (Russia), Türkmenbaşy (Turkmenistan) (see article) |
ಉಲ್ಲೇಖಗಳು | [೧] |
1 Shore length is not a well-defined measure. |
ಬಹುಶಃ ಇದರ ಲವಣತ್ವ ಹಾಗು ಸೀಮಾರಾಹಿತ್ಯದಿಂದಾಗಿ ಇದರ ತೀರದಲ್ಲಿ ವಾಸವಿದ್ದ ಪ್ರಾಚೀನ ಜನರು ಕ್ಯಾಸ್ಪಿಯನ್ ಸಮುದ್ರವನ್ನು ಒಂದು ಸಾಗರವೆಂದು ಗ್ರಹಿಸಿದ್ದರು. ಇದು ಸರಿಸುಮಾರು 1.2%ರಷ್ಟು ಲವಣತ್ವದ ಅಂಶವನ್ನು ಹೊಂದಿದೆ. ಹೆಚ್ಚಿನ ಸಮುದ್ರ ಜಲದಲ್ಲಿರುವ ಸುಮಾರು ಮೂರನೇ ಒಂದು ಭಾಗದಷ್ಟು ಲವಣತ್ವ ಇದಾಗಿದೆ. ಪ್ರಾಚೀನ ನಕ್ಷೆಗಳಲ್ಲಿ ಕ್ಯಾಸ್ಪಿಯನ್ ಸಮುದ್ರವನ್ನು ಗಿಲಾನ್ ಎಂದು ಕರೆಯಲಾಗುತ್ತಿತ್ತು (جیلان ಅಥವಾ بحر جیلان ) ಇರಾನ್ ನಲ್ಲಿ, ಇದನ್ನು ಕೆಲವೊಂದು ಬಾರಿ ದರ್ಯಾ-ಎ ಗಿಲಾನ್ ಎಂದು ಕರೆಯಲಾಗುತ್ತದೆ (دریای گیلان ), ಇದು ಪರ್ಷಿಯನ್ ಭಾಷೆಯಲ್ಲಿ "ಗಿಲಾನ್‌ನ ಸಮುದ್ರ" ಎಂಬ ಅರ್ಥವನ್ನು ನೀಡುತ್ತದೆ.
ಭೂವೈಜ್ಞಾನಿಕ ಇತಿಹಾಸ
ಬದಲಾಯಿಸಿಕಪ್ಪು ಸಮುದ್ರದಂತೆ(ಬ್ಲ್ಯಾಕ್ ಸೀ), ಕ್ಯಾಸ್ಪಿಯನ್ ಸಮುದ್ರವು ಪ್ರಾಚೀನ ಪರತೆತಿಸ್ ಸಮುದ್ರದ ಅವಶೇಷವಾಗಿದೆ. ಭೂತಟ್ಟೆಗಳ ಚಲನೆಯಿಂದ ಮೇಲ್ಮೈ ಉಬ್ಬುವಿಕೆ ಹಾಗು ಸಮುದ್ರದ ಮಟ್ಟದಲ್ಲಿನ ಕುಸಿತದಿಂದಾಗಿ ಸುಮಾರು 5.5 ದಶಲಕ್ಷ ವರ್ಷಗಳ ಹಿಂದೆ ಕ್ಯಾಸ್ಪಿಯನ್ ಸಮುದ್ರವು ನೆಲಾವೃತವಾಯಿತು. ಬೆಚ್ಚನೆಯ ಹಾಗು ಶುಷ್ಕ ಹವಾಮಾನದ ಅವಧಿಯಲ್ಲಿ, ನೆಲಾವೃತವಾದ ಸಮುದ್ರವು ಒಣಗಿ ಹೋಗುತ್ತದೆ, ಇದು ಸೈಂಧವ ಲವಣದಂತಹ ಆವಿಯಾಗುವ ಘನಕಣಗಳನ್ನು ಸಂಚಯಿಸುತ್ತದೆ. ಇವುಗಳು ಗಾಳಿಯ ಬೀಸುವಿಕೆಯಿಂದ ಸಂಚಯವಾದ ನಿಕ್ಷೇಪಗಳಿಂದ ಮುಚ್ಚಿರುತ್ತದೆ ಹಾಗೂ ನೀರು ಆವಿಯಾದ ನಂತರ ಘನಕಣಗಳಾಗಿ ಉಳಿಯುತ್ತದೆ.[೫] ತಂಪಾದ ವಾತಾವರಣವಿದ್ದಾಗ, ಆರ್ದ್ರ ವಾತಾವರಣವು ಜಲಾನಯನ ಪ್ರದೇಶವನ್ನು ನೀರಿನಿಂದ ಮತ್ತೆ ಭರ್ತಿ ಮಾಡುತ್ತದೆ.[೬] ತಾಜಾ ನೀರಿನ ವೇಗದ ಒಳಹರಿವಿನಿಂದಾಗಿ, ಕ್ಯಾಸ್ಪಿಯನ್ ಸಮುದ್ರವು ತನ್ನ ಉತ್ತರ ಭಾಗಗಳಲ್ಲಿ ತಾಜಾ-ನೀರಿನ ಸರೋವರವೆನಿಸಿದೆ. ಇದು ಇರಾನಿನ ತೀರದಲ್ಲಿ ಹೆಚ್ಚಿನ ಲವಣತ್ವವನ್ನು ಹೊಂದಿದೆ, ಇಲ್ಲಿನ ಜಲಾನಯನ ಪ್ರದೇಶವು ಕಡಿಮೆ ನೀರಿನ ಹರಿವನ್ನು ಹೊಂದಿರುತ್ತವೆ. ಪ್ರಸಕ್ತದಲ್ಲಿ, ಕಡಿಮೆ ಲವಣತ್ವವನ್ನು ಹೊಂದಿರುವ ಕ್ಯಾಸ್ಪಿಯನ್ ಸಮುದ್ರವು ಭೂಮಿಯ ಸಾಗರಗಳ ಲವಣತ್ವದಲ್ಲಿ ಮೂರನೇ ಒಂದರಷ್ಟು ಭಾಗವನ್ನು ಹೊಂದಿದೆ. 1980ರ ದಶಕದಲ್ಲಿ ಕ್ಯಾಸ್ಪಿಯನ್‌ನ ಮುಖ್ಯ ನೀರಿನ ಹರಿವಿಗೆ ತಡೆ ಉಂಟಾದಾಗ ಗರಬೋಗಜ್ಕೊಲ್ ಕೊಲ್ಲಿಯು ನೀರಿನ ಹರಿವಿಲ್ಲದ ಬತ್ತಿ ಹೋಯಿತು, ಆದರೆ ಆಗಿನಿಂದ ಮರುಸ್ಥಾಪನೆಯಾಗಿದ್ದು, ಸಾಗರದ ಲವಣತ್ವಕ್ಕಿಂತ ಹತ್ತು ಪಟ್ಟು ಹೆಚ್ಚಾಗಿದೆ.[೭]
ಬೌಗೋಳಿಕತೆ
ಬದಲಾಯಿಸಿಕ್ಯಾಸ್ಪಿಯನ್ ಸಮುದ್ರವು ವಿಶ್ವದಲ್ಲಿ ಅತ್ಯಂತ ದೊಡ್ಡ ಒಳನಾಡ ಜಲರಾಶಿಯಾಗಿದೆ ಜೊತೆಗೆ ಇದು ವಿಶ್ವದ ಒಟ್ಟಾರೆ ಸಾರಸ ನೀರಿನಲ್ಲಿ ಶೇಖಡಾ 40ರಿಂದ 44ರಷ್ಟು ಪ್ರಮಾಣವನ್ನು ಹೊಂದಿದೆ.[೮] ಕ್ಯಾಸ್ಪಿಯನ್ ನ ಸಮುದ್ರತೀರವನ್ನು ಅಜೆರ್ಬೈಜಾನ್, ಇರಾನ್ , ಕಜಾಕ್ ಸ್ತಾನ್, ರಷ್ಯಾ , ಹಾಗು ತುರ್ಕಮೆನಿಸ್ತಾನ್ ರಾಷ್ಟ್ರಗಳು ಹಂಚಿಕೊಳ್ಳುತ್ತವೆ. ಕ್ಯಾಸ್ಪಿಯನ್ ನನ್ನು ಮೂರು ವಿಶಿಷ್ಟ ಬೌಗೋಳಿಕ ಪ್ರದೇಶಗಳನ್ನಾಗಿ ವಿಂಗಡಿಸಲಾಗಿದೆ: ಉತ್ತರ, ಮಧ್ಯ, ಹಾಗು ದಕ್ಷಿಣ ಕ್ಯಾಸ್ಪಿಯನ್.[೯] ಉತ್ತರ-ಮಧ್ಯದ ಸೀಮೆಯು ಮಂಗಿಶ್ಲಕ್‌ನ ಆರಂಭವಾಗಿದೆ, ಇದು ಚೆಚೆನ್ ದ್ವೀಪ ಹಾಗು ಕೇಪ್ ಟಿಯುಬ್-ಕರಗಾನ್ ಮೂಲಕ ಹಾದು ಹೋಗುತ್ತದೆ. ಮಧ್ಯ-ದಕ್ಷಿಣ ಸೀಮೆಯು ಅಪ್ಷೆರೋನ್‌ನ ಆರಂಭವಾಗಿದೆ, ಭೂಮಿಯ ರಾಚನಿಕ ಹುಟ್ಟಿನ ಜಲಜಶಿಲೆಯಾಗಿರುವ ಇದು[೧೦] ಜ್ಹಿಲೋಯಿ ದ್ವೀಪ ಹಾಗು ಕೇಪ್ ಕುಉಲಿ ಮೂಲಕ ಹಾದು ಹೋಗುತ್ತದೆ.[೧೧] ಗರಬೋಗಜ್ಕೊಲ್ ಕೊಲ್ಲಿಯು ಕ್ಯಾಸ್ಪಿಯನ್‌ನ ಲವಣಾಂಶವಿರುವ ಪೂರ್ವದ ಒಳಹರಿವಿನ ಭಾಗವಾಗಿದೆ, ಇದು ತುರ್ಕಮೆನಿಸ್ತಾನ್ ದ ಒಂದು ಭಾಗವಾಗಿದೆ ಜೊತೆಗೆ ಭೂಸಂಧಿಯ ಕಾರಣದಿಂದಾಗಿ ಕ್ಯಾಸ್ಪಿಯನ್‌ನಿಂದ ಕವಲನ್ನು ಒಡೆದು ಕೆಲವೊಂದು ಬಾರಿ ತನ್ನದೇ ಆದ ಸರೋವರವನ್ನು ಸೃಷ್ಟಿಸಿಕೊಳ್ಳುತ್ತದೆ.
ಮೂರು ಪ್ರದೇಶಗಳ ನಡುವಿನ ವಿಭಾಗಗಳು ಗಮನ ಸೆಳೆಯುತ್ತವೆ. ಉತ್ತರ ಕ್ಯಾಸ್ಪಿಯನ್ ಮಾತ್ರ ಕ್ಯಾಸ್ಪಿಯನ್ ಮರಳದಂಡೆಗಳನ್ನು ಒಳಗೊಂಡಿರುತ್ತವೆ,[೧೨] ಜೊತೆಗೆ ಇದು ಬಹಳ ಕಡಿಮೆ ಆಳದ ಲಕ್ಷಣದಿಂದ ಕೂಡಿದೆ; ಇದು ಕೇವಲ ಸರಾಸರಿ 5–6 metres (16–20 ft)ರಷ್ಟು ಆಳದೊಂದಿಗೆ ಒಟ್ಟಾರೆ ನೀರಿನ ಪ್ರಮಾಣದಲ್ಲಿ ಶೇಕಡಾ ಒಂದಕ್ಕಿಂದ ಕಡಿಮೆ ನೀರಿನ ಪ್ರಮಾಣವನ್ನು ಹೊಂದಿದೆ. ಸಮುದ್ರವು ಗಮನಾರ್ಹವಾಗಿ ಮಧ್ಯ ಕ್ಯಾಸ್ಪಿಯನ್ ಎಡೆಗೆ ಹರಿದು ಹೋಗುತ್ತದೆ. ಇಲ್ಲಿನ ಸರಾಸರಿ ಆಳ 190 metres (620 ft)ರಷ್ಟಿದೆ.[೧೧] ದಕ್ಷಿಣ ಕ್ಯಾಸ್ಪಿಯನ್ ಅತ್ಯಂತ ಆಳವಾಗಿದ್ದು ಇದು 1,000 metres (3,300 ft)ಕ್ಕಿಂತ ಆಳವನ್ನು ಮೀರುತ್ತದೆ. ಮಧ್ಯ ಹಾಗು ದಕ್ಷಿಣ ಕ್ಯಾಸ್ಪಿಯನ್ ಒಟ್ಟಾರೆ ನೀರಿನ ಪ್ರಮಾಣದಲ್ಲಿ ಕ್ರಮವಾಗಿ ಶೇಕಡ 33 ಹಾಗು 66ರಷ್ಟು ಪ್ರಮಾಣವನ್ನು ಹೊಂದಿವೆ.[೯] ಕ್ಯಾಸ್ಪಿಯನ್ ಸಮುದ್ರದ ಉತ್ತರ ಭಾಗವು ಸಾಮಾನ್ಯವಾಗಿ ಚಳಿಗಾಲದಲ್ಲಿ ಹೆಪ್ಪುಗಟ್ಟುತ್ತವೆ, ಜೊತೆಗೆ ಅತ್ಯಂತ ಶೀತಲ ಚಳಿಗಾಲದಲ್ಲಿ ದಕ್ಷಿಣದಲ್ಲಿ ಹಿಮ ರಚನೆಯಾಗುತ್ತದೆ.
ಸುಮಾರು 130ಕ್ಕೂ ಅಧಿಕ ನದಿಗಳು ಕ್ಯಾಸ್ಪಿಯನ್ ಗೆ ಒಳಹರಿವನ್ನು ಒದಗಿಸುತ್ತದೆ, ಇದರಲ್ಲಿ ಅತ್ಯಂತ ದೊಡ್ಡದೆಂದರೆ ವೋಲ್ಗ ನದಿ. ಎರಡನೇ ತುಂಬಿ ಹರಿಯುವ ನದಿಯೆಂದರೆ ಉರಾಲ್ ನದಿ, ಇದು ಉತ್ತರ ಭಾಗದಿಂದ ಹರಿಯುತ್ತದೆ, ಜೊತೆಗೆ ಸಮುದ್ರಕ್ಕೆ ಕುರ ನದಿಯು ಪಶ್ಚಿಮದಿಂದ ಹರಿದುಬರುತ್ತದೆ. ಹಿಂದೆ, ಪೂರ್ವದ ಮಧ್ಯ ಏಷಿಯಾದ ಅಮು ದರ್ಯಾ (ಆಕ್ಸಸ್) ಹರಿವಿನ ದಿಕ್ಕನ್ನು ಬದಲಾಯಿಸಿ,ಈಗ ಬತ್ತಿಹೋಗಿರುವ ನದಿತಳವಾದ ಉಜ್ಬೋಯ್ ನದಿ ಮೂಲಕ ಕ್ಯಾಸ್ಪಿಯನ್ ಗೆ ಸಾಮಾನ್ಯವಾಗಿ ಹರಿಯುತ್ತಿತ್ತು. ಇದೆ ರೀತಿ ದೂರದ ಉತ್ತರದ ಸಿರ್ ದರ್ಯಾ ಕೂಡ. ಕ್ಯಾಸ್ಪಿಯನ್ ಹಲವಾರು ಸಣ್ಣ ದ್ವೀಪಗಳನ್ನೂ ಸಹ ಹೊಂದಿದೆ; ಇವುಗಳು ಪ್ರಾಥಮಿಕವಾಗಿ ಉತ್ತರ ಭಾಗದಲ್ಲಿ ನೆಲೆಯಾಗಿವೆ ಜೊತೆಗೆ ಸರಿಸುಮಾರು2,000 km2 (770 sq mi)ಒಟ್ಟು ಭೂಪ್ರದೇಶವನ್ನು ಹೊಂದಿವೆ. ಉತ್ತರ ಕ್ಯಾಸ್ಪಿಯನ್ ಗೆ ಮಗ್ಗುಲಲ್ಲಿರುವುದು ಕ್ಯಾಸ್ಪಿಯನ್ ಡಿಪ್ರೆಷನ್ ಇದು ಸಮುದ್ರ ಮಟ್ಟಕ್ಕಿಂತ ಕೆಳಗಿರುವ ಭೂಪ್ರದೇಶ27 metres (89 ft). ಮಧ್ಯ ಏಷಿಯದ ಹುಲ್ಲುಗಾವಲು ಪ್ರದೇಶವು ಈಶಾನ್ಯ ಕರಾವಳಿಯುದ್ದಕ್ಕೂ ಚಾಚಿಕೊಂಡಿವೆ. ಕಾಕೇಸಸ್ ಪರ್ವತಗಳು ದಕ್ಷಿಣ ಕರಾವಳಿಯನ್ನು ಆವರಿಸಿಕೊಂಡಿವೆ. ಉತ್ತರ ಹಾಗು ಪೂರ್ವ ಎರಡರ ಬಯೋಮ್(ಪರಿಸರವ್ಯವಸ್ಥೆ) ಗಳು ತಂಪಾದ, ಭೂಖಂಡದ ಮರುಭೂಮಿಗಳಿಂದ ವಿಶಿಷ್ಟವಾಗಿದೆ. ಇದಕ್ಕೆ ಪ್ರತಿಯಾಗಿ, ನೈಋತ್ಯ ಹಾಗು ದಕ್ಷಿಣದ ಹವಾಮಾನವು ಸಾಧಾರಣವಾಗಿ ಸುಖೋಷ್ಣವಾಗಿರುವುದರ ಜೊತೆಗೆ ಎತ್ತರದ ಪ್ರದೇಶಗಳು ಹಾಗು ಪರ್ವತ ಶ್ರೇಣಿಗಳು ಎರಡೂ ಇರುವ ಕಾರಣದಿಂದಾಗಿ ಅಸಮವಾಗಿ ಎತ್ತರದಲ್ಲಿರುತ್ತದೆ. ಕ್ಯಾಸ್ಪಿಯನ್ ನೊಂದಿಗೆ ಹವಾಮಾನದಲ್ಲಿನ ತೀವ್ರ ಬದಲಾವಣೆಗಳು ಆ ಪ್ರದೇಶದಲ್ಲಿ ಅಧಿಕ ಜೈವಿಕ ವೈವಿಧ್ಯತೆಗೆ ದಾರಿ ಮಾಡಿಕೊಟ್ಟಿದೆ.[೭]
ಪ್ರಾಣಿ ಸಂಕುಲ
ಬದಲಾಯಿಸಿಕ್ಯಾಸ್ಪಿಯನ್ ಸಮುದ್ರವು ಅಧಿಕ ಸಂಖ್ಯೆಯಲ್ಲಿ ಸ್ಟರ್ಜನ್(ಮೀನು)ಗಳನ್ನು ಹೊಂದಿದೆ, ಇದರ ಮೊಟ್ಟೆಗಳನ್ನು ಕಾವಿಯರ್ ತಿನಿಸಾಗಿ ಸಂಸ್ಕರಿಸಲಾಗುತ್ತದೆ. ಅಧಿಕ ಮೀನುಗಾರಿಕೆಯು ಐತಿಹಾಸಿಕ ಮೀನುಗಾರಿಕೆಯ ಕೇಂದ್ರಗಳ ಪ್ರಮಾಣವನ್ನು ಕಡಿಮೆ ಮಾಡಿದೆ, ಇದರಲ್ಲಿ ಟೂನ ಮೀನುಗಾರಿಕೆ ಕೇಂದ್ರದ ಆರ್ಥಿಕ ಹಿಂಜರಿತವೂ ಸೇರಿದೆ.[೧೩] ಕಾವಿಯರ್‌ನ ಶೇಖರಣೆಯು ಮೀನುಸಂತತಿಯ ಮತ್ತಷ್ಟು ಅಳಿವಿಗೆ ಕಾರಣವಾಗಿದೆ, ಏಕೆಂದರೆ ಇದು ಸಂತಾನೋತ್ಪತ್ತಿ ಮಾಡುವ ಹೆಣ್ಣುಮೀನುಗಳ ಮೀನುಗಾರಿಕೆ ಗುರಿಯನ್ನು ಹೊಂದಿದೆ.
ಕ್ಯಾಸ್ಪಿಯನ್ ಸೀಲ್ (ಫೋಕಾ ಕ್ಯಾಸ್ಪಿಕ , ಕೆಲವೊಂದು ಮೂಲಗಳಲ್ಲಿ ಪೂಸಾ ಕ್ಯಾಸ್ಪಿಕ ) ಕ್ಯಾಸ್ಪಿಯನ್ ಸಮುದ್ರಕ್ಕೆ ಸ್ಥಳೀಯವಾಗಿದೆ. ಒಳನಾಡಿನ ನೀರಿನಲ್ಲಿ ವಾಸಿಸುವ ಕೆಲವೇ ಕೆಲವು ನೀರುನಾಯಿ ಜಾತಿಗಳಲ್ಲಿ ಇದೂ ಸಹ ಒಂದೆನಿಸಿದೆ (ಬೈಕಲ್ ಸೀಲ್, ಸೈಮಾ ರಿಂಗ್ಡ್ ಸೀಲ್ ನ್ನೂ ಸಹ ನೋಡಿ). ಪ್ರದೇಶವು ಹಲವಾರು ಜಾತಿಯ ಪಕ್ಷಿಗಳಿಗೂ ತನ್ನ ಹೆಸರನ್ನು ನೀಡಿದೆ, ಇದರಲ್ಲಿ ಕ್ಯಾಸ್ಪಿಯನ್ ಗುಲ್ ಹಾಗು ಕ್ಯಾಸ್ಪಿಯನ್ ಟರ್ನ್ ಸಹ ಸೇರಿವೆ. ಕ್ಯಾಸ್ಪಿಯನ್ ಸಮುದ್ರಕ್ಕೆ ಮೀನಿನ ಹಲವಾರು ಜಾತಿ ಹಾಗು ಉಪಜಾತಿಗಳು ಸ್ಥಳಿಕವೆನಿಸಿವೆ, ಇದರಲ್ಲಿ ಕುಟುಂ (ಕ್ಯಾಸ್ಪಿಯನ್ ಬಿಳಿ ಮೀನು ಎಂದೂ ಸಹ ಪರಿಚಿತ), ಕ್ಯಾಸ್ಪಿಯನ್ ರೊಚ್, ಕ್ಯಾಸ್ಪಿಯನ್ ಬ್ರೀಮ್ (ಅರಾಲ್ ಸಮುದ್ರದಲ್ಲಿರುವ ಬ್ರೀಮ್ ಗಳೂ ಸಹ ಇದರದೇ ಉಪಜಾತಿಗಳೆಂದು ಕೆಲವು ದಾಖಲೆಗಳು ವರದಿ ಮಾಡುತ್ತವೆ), ಹಾಗು ಒಂದು ಕ್ಯಾಸ್ಪಿಯನ್ "ಸಾಲ್ಮನ್" (ಸಾಲ್ಮೋ ಟ್ರುಟ್ಟ ಕ್ಯಾಪಿಯೇನ್ಸಿಸ್ ಎಂಬ ಟ್ರೌಟ್ ಮೀನುಗಳ ಉಪಜಾತಿ). "ಕ್ಯಾಪಿಯನ್ ಸಾಲ್ಮನ್" ತೀವ್ರತರವಾಗಿ ಅಳಿವಿನ ಅಂಚಿನಲ್ಲಿದೆ.[೧೪]
ಪರಿಸರ ಸಮಸ್ಯೆಗಳು
ಬದಲಾಯಿಸಿವೋಲ್ಗ ನದಿ, ಯುರೋಪ್ ನಲ್ಲೆ ಅತ್ಯಂತ ದೊಡ್ಡ ನದಿಯೆನಿಸಿದೆ, ಇದು ಯುರೋಪಿಯನ್ ಭೂಮಿಯ 20% ಪ್ರದೇಶದಲ್ಲಿ ನೀರಿನ ಹರಿವನ್ನು ಹೊಂದಿರುವುದರ ಜೊತೆಗೆ 80%ನಷ್ಟು ಕ್ಯಾಸ್ಪಿಯನ್ ತಾಜಾನೀರಿನ ಒಳಹರಿವಿಗೆ ಮೂಲವಾಗಿದೆ. ಇದರ ತಳಭಾಗಕ್ಕೆ ಹಲವಾರು ರಾಸಾಯನಿಕ ಹಾಗು ಜೈವಿಕ ಮಲಿನಕಾರಿ ಪದಾರ್ಥಗಳು ಅನಿಯಂತ್ರಿತವಾಗಿ ಬಿಡುಗಡೆಯಾಗುತ್ತವೆ. ಆದಾಗ್ಯೂ ಅಸ್ತಿತ್ವದಲ್ಲಿರುವ ದತ್ತಾಂಶವು ವಿರಳವಾಗಿದ್ದು ಪ್ರಶ್ನಾರ್ಹವಾದ ಗುಣಮಟ್ಟವನ್ನು ಹೊಂದಿದೆ. ಕ್ಯಾಸ್ಪಿಯನ್ ಸಮುದ್ರಕ್ಕೆ ಸೀಮೆಯನ್ನು ಮೀರಿ ಮಲಿನಕಾರಿ ವಸ್ತುಗಳನ್ನು ಬಿಡುಗಡೆ ಮಾಡುವ ಪ್ರಮುಖ ಮೂಲಗಳಲ್ಲಿ ವೋಲ್ಗಾ ನದಿಯು ಒಂದೆಂದು ವಿಪುಲ ಸಾಕ್ಷ್ಯಾಧಾರಗಳು ಸೂಚಿಸುತ್ತದೆ. ತೈಲ ಹಾಗು ಅನಿಲ ಸಾರದ ಪ್ರಮಾಣ ಹಾಗು ಸಾಗಣೆ ಚಟುವಟಿಕೆಗಳು ನೀರಿನ ಗುಣಮಟ್ಟಕ್ಕೆ ಅಪಾಯವನ್ನು ಒಡ್ಡುತ್ತವೆ. ಸಮುದ್ರದ ತಳದಲ್ಲಿ ತೈಲ ಹಾಗು ಅನಿಲದ ಕೊಳವೆ ಮಾರ್ಗಗಳನ್ನು ನಿರ್ಮಿಸಲಾಗಿದೆ ಅಥವಾ ನಿರ್ಮಾಣಕ್ಕೆ ಪ್ರಸ್ತಾಪವನ್ನು ಮಾಡಲಾಗಿದೆ, ಇದು ಪರಿಸರಕ್ಕಿರುವ ಸಂಭಾವ್ಯ ಅಪಾಯವನ್ನು ಅಧಿಕಗೊಳಿಸುತ್ತವೆ.[೧೫]
ಜಲಶಾಸ್ತ್ರದ ವೈಶಿಷ್ಟ್ಯಗಳು
ಬದಲಾಯಿಸಿಸಮುದ್ರಗಳು ಹಾಗು ಸರೋವರಗಳು ಎರಡಕ್ಕೂ ಸಮಾನವಾದ ವೈಶಿಷ್ಟ್ಯತೆಗಳನ್ನು ಕ್ಯಾಸ್ಪಿಯನ್ ಹೊಂದಿದೆ. ಇದು ತಾಜಾನೀರಿನ ಸರೋವರವಲ್ಲದಿದ್ದರೂ ಇದನ್ನು ಸಾಮಾನ್ಯವಾಗಿ ವಿಶ್ವದ ಅತ್ಯಂತ ದೊಡ್ಡ ಸರೋವರವೆಂದು ಪಟ್ಟಿ ಮಾಡಲಾಗಿದೆ. ಭೂತಟ್ಟೆಗಳ ಚಲನೆಯಿಂದ ಉಬ್ಬುವಿಕೆಯ ಕಾರಣದಿಂದಾಗಿ ಕ್ಯಾಸ್ಪಿಯನ್ ಸುಮಾರು 5.5 ದಶಲಕ್ಷಗಳ ಹಿಂದೆ ನೆಲಾವೃತವಾಯಿತು.[೮] ವೋಲ್ಗ ನದಿ(ಸುಮಾರು 80% ನಷ್ಟು ಒಳಹರಿವು) ಹಾಗು ಉರಾಲ್ ನದಿಯು ಕ್ಯಾಸ್ಪಿಯನ್ ಸಮುದ್ರಕ್ಕೆ ಹರಿದುಬರುತ್ತದೆ, ಆದರೆ ಆವಿಗಟ್ಟುವುದು ಹೊರತುಪಡಿಸಿ ಇದಕ್ಕೆ ಯಾವುದೇ ನೈಸರ್ಗಿಕ ಹೊರಹರಿವಿರುವುದಿಲ್ಲ. ಈ ರೀತಿಯಾಗಿ ಕ್ಯಾಸ್ಪಿಯನ್ ಪರಿಸರ ವ್ಯವಸ್ಥೆಯು ಮುಚ್ಚಿದ ಜಲಾನಯನ ಪ್ರದೇಶವಾಗಿದೆ, ಜೊತೆಗೆ ಅದರ ಸ್ವತಃ ಸಮುದ್ರ ಮಟ್ಟದ ಇತಿಹಾಸವು, ವಿಶ್ವದ ಸಾಗರಗಳಸರಾಸರಿ ಮಟ್ಟ ದಿಂದ ಪ್ರತ್ಯೇಕವಾಗಿದೆ. ಕ್ಯಾಸ್ಪಿಯನ್ ನ ಮಟ್ಟವು ಶತಮಾನಗಳ ಕಾಲದಿಂದಲೂ ಶೀಘ್ರದಲ್ಲಿ ಏರಿಳಿಕೆಯಾಗುತ್ತಿದೆ. ಕೆಲವು ರಷ್ಯನ್ ಇತಿಹಾಸಜ್ಞರು, ಮಧ್ಯಯುಗದಲ್ಲಿ ಕ್ಯಾಸ್ಪಿಯನ್ ಏರಿಕೆಯು, ಅಮು ದರ್ಯಾ ತನ್ನ ಒಳಹರಿವಿನಲ್ಲಿ ಬದಲಾವಣೆಯನ್ನು ಮಾಡಿಕೊಂಡು 13ನೇ ಶತಮಾನದಿಂದ 16ನೇ ಶತಮಾನದವರೆಗೂ ಕ್ಯಾಸ್ಪಿಯನ್ ಗೆ ಹರಿದದ್ದೇ ಬಹುಶಃ ಕಾರಣವಿರಬಹುದು, ಇದು ಖಜರಿಯದ ಕರಾವಳಿ ನಗರಗಳಾದ ಅತಿಲ್ ನಲ್ಲಿ ಪ್ರವಾಹವನ್ನು ಉಂಟುಮಾಡಿತು. 2004ರಲ್ಲಿ, ನೀರಿನ ಮಟ್ಟವು ಸಮುದ್ರ ಮಟ್ಟಕ್ಕಿಂತ -28 ಮೀಟರ್ ಅಥವಾ 28 ಮೀಟರ್ ಗಿಂತ (92 ಅಡಿ) ಕಡಿಮೆ ಇತ್ತು.
ಶತಮಾನಗಳಿಂದೀಚೆಗೆ, ಕ್ಯಾಸ್ಪಿಯನ್ ಸಮುದ್ರ ಮಟ್ಟಗಳು ಏಕಕಾಲಿಕವಾಗಿ ವೋಲ್ಗ ದ ಹರಿವಿನೊಂದಿಗೆ ಬದಲಾಗುತ್ತಲೇ ಬಂದಿದೆ. ಇದಕ್ಕೆ ಪ್ರತಿಯಾಗಿ ತನ್ನ ವಿಶಾಲವಾದ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣವನ್ನು ಅವಲಂಬಿಸಿವೆ. ಮಳೆಯ ಪಾತಗಳು ಒಳನಾಡನ್ನು ತಲುಪುವ ಉತ್ತರ ಅಟ್ಲಾಂಟಿಕ್ ವಾಯುಭಾರ ಕುಸಿತಗಳ ಪ್ರಮಾಣವನ್ನು ಅವಲಂಬಿಸಿದೆ. ಪ್ರತಿಯಾಗಿ ಅವುಗಳು ನಾರ್ತ್ ಅಟ್ಲಾಂಟಿಕ್ ಆಸಿಲೇಶನ್ ಆವರ್ತಗಳಿಂದ ಪರಿಣಾಮವನ್ನು ಹೊಂದುತ್ತವೆ. ಈ ರೀತಿಯಾಗಿ ಕ್ಯಾಸ್ಪಿಯನ್ ಸಮುದ್ರದ ಮಟ್ಟಗಳು, ಉತ್ತರ ಹಾಗು ಪಶ್ಚಿಮದಲ್ಲಿ ಸಾವಿರಾರು ಮೈಲಿ ದೂರದ ಉತ್ತರ ಅಟ್ಲಾಂಟಿಕ್ ವಾಯುಮಂಡಲದ ಪರಿಸ್ಥಿತಿಯೊಂದಿಗೆ ಸಂಬಂಧವನ್ನು ಹೊಂದಿರುತ್ತವೆ. ಈ ಅಂಶಗಳಿಂದಾಗಿ, ಕ್ಯಾಸ್ಪಿಯನ್ ಸಮುದ್ರವು ಜಾಗತಿಕ ಹವಾಮಾನ ಬದಲಾವಣೆಯ ಕಾರಣಗಳು ಹಾಗು ಪರಿಣಾಮಗಳ ಅಧ್ಯಯನಕ್ಕೆ ಒಂದು ಅಮೂಲ್ಯವಾದ ಸ್ಥಳವೆನಿಸಿದೆ. [ಸೂಕ್ತ ಉಲ್ಲೇಖನ ಬೇಕು]
ಕಳೆದ ಅಲ್ಪಕಾಲಿಕ ಸಮುದ್ರ ಮಟ್ಟದ ಆವರ್ತವು, 1929ರಿಂದ 1977ರವರೆಗೂ ಸಂಭವಿಸಿದ 3 m (9.84 ft)ನಷ್ಟು ಸಮುದ್ರ ಮಟ್ಟದ ಕುಸಿತದೊಂದಿಗೆ ಆರಂಭವಾಯಿತು, ಇದರ ನಂತರ ಅಂದರೆ 1977ರಿಂದ 1995ರವರೆಗೂ ಸಮುದ್ರ ಮಟ್ಟದಲ್ಲಿ 3 m (9.84 ft)ರಷ್ಟು ಏರಿಕೆಯಿಂದ ಆರಂಭವಾಯಿತು. ಅಲ್ಲಿಂದೀಚೆಗೆ ಸಣ್ಣ ಪ್ರಮಾಣದ ಏರಿಳಿತಗಳು ಸಂಭವಿಸಿವೆ.[೧೬]
ಮಾನವ ಇತಿಹಾಸ
ಬದಲಾಯಿಸಿಇರಾನ್ ನಲ್ಲಿರುವ ಕ್ಯಾಸ್ಪಿಯನ್ ಸಮುದ್ರದ ದಕ್ಷಿಣಕ್ಕಿರುವ ಮಜನ್ಡಾರನ್ ನ ಬೆಶಾಹರ್ ಪಟ್ಟಣದ ಸಮೀಪವಿರುವ ಹುಟೋ ಗುಹೆಯಲ್ಲಿ ಪತ್ತೆಯಾದ ಶೋಧನೆಗಳು, ಪ್ರದೇಶದಲ್ಲಿ 75,000 ವರ್ಷಕ್ಕೂ ಹಿಂದೆ ಇದ್ದ ಮಾನವ ನೆಲೆಯ ಬಗ್ಗೆ ಕುರುಹು ನೀಡುತ್ತವೆ.[೧೭]
ವ್ಯುತ್ಪತ್ತಿ
ಬದಲಾಯಿಸಿಗ್ರೀಕರು ಹಾಗು ಪರ್ಶಿಯನ್ನರ ಪ್ರಾಚೀನ ಯುಗದಲ್ಲಿ ಇದನ್ನು ಹೈರ್ಕಾನಿಯನ್ ಸಾಗರ ವೆಂದು ಕರೆಯಲಾಗಿತ್ತು. ಪ್ರಾಚೀನ ಪರ್ಷಿಯನ್ ಹಾಗು ಆಧುನಿಕ ಇರಾನ್ ಎರಡರಲ್ಲೂ ಇದು ಗಿಲಾನ್ ಸಮುದ್ರ ವೆಂದು ಪರಿಚಿತವಾಗಿದೆ (ಪರ್ಷಿಯನ್ گیلان). ಭಾರತೀಯರಲ್ಲಿ ಇದು ಕಶ್ಯಪ ಸಾಗರ ವೆಂದು ಪರಿಚಿತವಾಗಿತ್ತು. ತುರ್ಕಿ ಭಾಷೆ ಮಾತನಾಡುವ ರಾಷ್ಟ್ರಗಳಲ್ಲಿ ಇದನ್ನು ಖಜರ್ ಸಮುದ್ರ ವೆಂದು ಕರೆಯಲಾಗುತ್ತಿತ್ತು. ಪುರಾತನ ರಷ್ಯನ್ ಮೂಲಗಳು, ಖ್ವರೆಜ್ಮಿಯದ ನಿವಾಸಿಗಳಾದ ಖ್ವಲಿಸ್‌ರ ನೆಲೆಯಾದ ನಂತರ ಇದನ್ನು ಖ್ವಾಲಿನ್ (ಖ್ವಾಲಿನಿಯನ್) ಸಮುದ್ರ ವೆಂದು ಕರೆಯುತ್ತವೆ (Хвалынское море /Хвалисское море). ಪುರಾತನ ಅರೇಬಿಕ್ ಮೂಲಗಳು جیلانಬಹ್ರ್ ಗಿಲಾನ್/0} -ಕ್ಯಾಸ್ಪಿಯನ್/ಗಿಲಾನ್ ಸಮುದ್ರ ವೆಂದು ಸೂಚಿಸುತ್ತವೆ. ಕ್ಯಾಸ್ಪಿಯನ್ ಎಂಬ ಪದವು ಕ್ಯಾಸ್ಪಿ ಪದದಿಂದ ವ್ಯುತ್ಪತ್ತಿಯನ್ನು ಹೊಂದಿದೆ(ಪರ್ಷಿಯನ್ کاسپی), ಸಮುದ್ರದ ನೈಋತ್ಯ ದಿಕ್ಕಿನ ಟ್ರ್ಯಾನ್ಸ್ಕೌಕಾಸಿಯ ದಲ್ಲಿ ವಾಸವಿದ್ದ ಪುರಾತನ ಜನರು.[೧೮] ಸ್ಟ್ರಾಬೋ "ಅಲ್ಬನಿಯನ್ ಜನರು ವಾಸವಿರುವ ದೇಶಕ್ಕೆ ಕ್ಯಾಸ್ಪಿಯಾನೆ ಎಂಬ ಭೂಪ್ರದೇಶವೂ ಸಹ ಸೇರ್ಪಡೆಯಾಗುತ್ತದೆ. ಇದಕ್ಕೆ ಹೆಸರನ್ನು ಕ್ಯಾಸ್ಪಿಯನ್ ಬುಡಕಟ್ಟಿನ ಮೇಲೆ ಇರಿಸಲಾಗಿದೆ, ಇದೆ ರೀತಿಯಾಗಿ ಸಮುದ್ರಕ್ಕೆ ಹೆಸರನ್ನೂ ಸಹ ಇರಿಸಲಾಗಿದೆ; ಆದರೆ ಬುಡಕಟ್ಟು ಇದೀಗ ಕಣ್ಮರೆಯಾಗಿದೆ" ಎಂದು ಬರೆಯುತ್ತಾರೆ.[೧೯] ಇದಕ್ಕಿಂತ ಹೆಚ್ಚಾಗಿ, ಕ್ಯಾಸ್ಪಿಯನ್ ಗೇಟ್ಸ್ ಎಂಬ ಇರಾನ್ ರ ಟೆಹ್ರಾನ್ ಪ್ರಾಂತ್ಯದ ಒಂದು ಪ್ರದೇಶ ಹೆಸರು, ಇದೂ ಸಹ ಸಮುದ್ರದ ದಕ್ಷಿಣ ಭಾಗಕ್ಕೆ ವಲಸೆ ಬಂದರೆಂಬುದಕ್ಕೆ ಇರುವ ಮತ್ತೊಂದು ಸಂಭಾವ್ಯ ಸಾಕ್ಷಿಯಾಗಿದೆ. ಅಲ್ಲದೆ ಗ್ರೀಕ್ ಇತಿಹಾಸಜ್ಞ ಸ್ಟ್ರಾಬೋ ಪ್ರಕಾರ, ಕ್ಯಾಸ್ಪಿಯನ್ ಎಂಬ ಹೆಸರು ಸಂಸ್ಕೃತ ಪದ 'ಕಶ್ಯಪ' ದಿಂದ(ಪುರಾತನ ಭಾರತೀಯ ಋಷಿಯ ಹೆಸರು) ವ್ಯುತ್ಪತ್ತಿಯನ್ನು ಹೊಂದಿರಬಹುದು ಎಂದು ಭಾರತದ ಹಿಂದೂಗಳು ನಂಬಿದ್ದಾರೆ.[೨೦][೨೧][೨೨][೨೩]
ತುರ್ಕಿ ಭಾಷೆಗಳು ಸ್ಥಿರವಾದ ನಾಮಸೂಚಿಯನ್ನು ಬಳಸುತ್ತವೆ, ಇದು ಮೇಲೆ ಹೇಳಲಾಗಿರುವ ಇಂಡೋ-ಯುರೋಪಿಯನ್ ಭಾಷೆಗಳಿಗಿಂತ ಭಿನ್ನವಾಗಿದೆ. ಉದಾಹರಣೆಗೆ, ಟರ್ಕ್ಮೆನ್ ನಲ್ಲಿ, ಇದರ ಹೆಸರು ಹಜರ್ ಡೆನ್ಜಿ ಎಂದಿದ್ದರೆ, ಅಜೆರಿ ಭಾಷೆಯಲ್ಲಿ ಇದನ್ನು Xəzər dənizi ಎಂದು ಕರೆಯಲಾಗುತ್ತದೆ, ಹಾಗು ಆಧುನಿಕ ಟರ್ಕಿಷ್ ಭಾಷೆಯಲ್ಲಿ, ಇದನ್ನು ಹಜರ್ ಡೆನಿಜಿ ಎಂದು ಕರೆಯಲಾಗುತ್ತದೆ. ಈ ಎಲ್ಲ ಉದಾಹರಣೆಗಳಲ್ಲಿ, ಎರಡನೇ ಪದವು "ಸಮುದ್ರ" ಎಂಬ ಅರ್ಥವನ್ನು ನೀಡುತ್ತದೆ, ಹಾಗು ಮೊದಲ ಪದವು ಐತಿಹಾಸಿಕ ಖಜರ್ ಟರ್ಕ್ಸ್ ಗೆ ಸೂಚಿತವಾಗಿದೆ. ಈತ 7ರಿಂದ 10ನೇ ಶತಮಾನಗಳ ನಡುವೆ ಕ್ಯಾಸ್ಪಿಯನ್ ಸಮುದ್ರದ ಉತ್ತರ ಭಾಗಕ್ಕೆ ವಿಸ್ತಾರವಾದ ಸಾಮ್ರಾಜ್ಯವನ್ನು ಹೊಂದಿದ್ದ.
ಕ್ಯಾಸ್ಪಿಯನ್ ಸಮುದ್ರದ ಸಮೀಪವಿರುವ ನಗರಗಳು
ಬದಲಾಯಿಸಿಸಮುದ್ರಕ್ಕೆ ಸಮೀಪವಿರುವ ಐತಿಹಾಸಿಕ ನಗರಗಳಲ್ಲಿ
- ಹೈರ್ಕಾನಿಯ, ಇರಾನ್ ನ ಉತ್ತರಕ್ಕಿರುವ ಪುರಾತನ ರಾಜ್ಯ
- ಟಾಮಿಶೆಹ್, ಇರಾನ್ ನ ಮಜನ್ಡಾರನ್ ಪ್ರಾಂತ್ಯ
- ಅನ್ಜಲಿ, ಇರಾನ್ ನ ಗಿಲಾನ್ ಪ್ರಾಂತ್ಯ
- ಅಸ್ತರ, ಇರಾನ್ ನ ಗಿಲಾನ್ ಪ್ರಾಂತ್ಯ
- ಅತಿಲ್, ಖಜರಿಯ
- ಖಜರನ್
- ಬಾಕು, ಅಜೆರ್ಬೈಜಾನ್
- ದರ್ಬೆಂಟ್, ದಗೆಸ್ತಾನ್, ರಷ್ಯಾ
ಆಧುನಿಕ ನಗರಗಳು
ಕ್ಯಾಸ್ಪಿಯನ್ ಸಮುದ್ರದ ಸಮೀಪವಿರುವ ಪ್ರಮುಖ ನಗರಗಳು:
- ಅಜರ್ಬೈಜಾನ್
- ಅಸ್ತರ
- ಅವ್ರೋರ
- ಬಾಕು
- ಬಂಕೆ
- ಗೋಬುಸ್ತಾನ್
- ಕಾಲ
- ಖುದತ್
- ಖಚ್ಮಜ್
- ಲಂಕರನ್
- ನಬ್ರನ್
- ತೈಲ ಬಂಡೆಗಳು
- ಸುಮ್ಕಾಯಿತ್
- ಇರಾನ್
- ಅಲಿ ಅಬಾದ್
- ಅಮೋಲ್
- ಅಸ್ತನೆಹ್-ಎ ಅಶ್ರಫಿಯೇಹ್
- ಇರಾನ್|ಅಸ್ತರ
- ಬಬೋಲ್
- ಬಬೋಲ್ಸರ್
- ಬಂದಾರ್ ಅನ್ಜಲಿ
- ಬಂದಾರ್-ಎ-ಗಾಜ್
- ಬಂದಾರ್ ತೋರ್ಕಮನ್
- ಬೆಹ್ಶಹರ್
- ಚಾಲೂಸ್
- ಫೆಂಡೆರೆಸ್ಕ್
- ಘಯೇಮ್ ಶಹ್ರ್
- ಗೊಂಬಾದ್-ಎ ಕವುಸ್
- ಗೊರ್ಗನ್
- ಜೂಯ್ಬರ್
- ಕೊರ್ಡ್ಕುಯ್
- ಲಹಿಜನ್
- ಲಂಗೃಡ್
- ಮಹಮೂದ್ ಅಬಾದ್
- ನೇಕಾ
- ನೌಶಹ್ರ್
- ನೂರ್
- ರಾಮ್ಸರ್
- ರಾಷ್ಟ್
- ರುದ್ಬಾರ್
- ರುಡ್ಸಾರ್
- ಸಾರಿ
- ತೊನೇಕಬೋನ್
- ಕಜಾಕ್ ಸ್ತಾನ್
- ಅತಿರು (ಹಿಂದಿನ ಗುರಿಯೇವ್)
- ಅಕ್ಟು (ಹಿಂದಿನ ಶೆವ್ಚೆಂಕೋ)
- ರಷ್ಯಾ
- ಅಸ್ತ್ರಖಾನ್
- ದರ್ಬೇಂಟ್
- ಮಖಚ್ಕಳ
- ತುರ್ಕಮೆನಿಸ್ತಾನ್
- ತುರ್ಕ್ಮೆನ್ಬಾಸಿ (ಹಿಂದಿನ ಕ್ರಾಸ್ನೋವೋಡ್ಸ್ಕ್)
- ಹಜರ್ (ಹಿಂದಿನ ಸೆಲೆಕೆನ್)
- ಎಸೆನ್ಗುಲಿ
- ಗರಬೋಗಜ್ (ಹಿಂದಿನ ಬೇಕ್ದಾಸ್)
ದ್ವೀಪಗಳು
ಬದಲಾಯಿಸಿಕ್ಯಾಸ್ಪಿಯನ್ ಸಮುದ್ರದುದ್ದಕ್ಕೂ ಹಲವಾರು ದ್ವೀಪಗಳು ಕಂಡುಬರುತ್ತದೆ. ಒಗುರ್ಜ ಅದಾ ಇಲ್ಲಿನ ಅತ್ಯಂತ ದೊಡ್ಡ ದ್ವೀಪ. ದ್ವೀಪವು 47 ಕಿಲೋಮೀಟರ್ ನಷ್ಟು ಉದ್ದವಿದ್ದು, ಗಸೆಲ್(ಒಂದು ಜಾತಿಯ ಜಿಂಕೆ)ಗಳು ಇಲ್ಲಿ ಮುಕ್ತವಾಗಿ ಓಡಾಡಿಕೊಂಡಿರುತ್ತವೆ.
ಉತ್ತರ ಕ್ಯಾಸ್ಪಿಯನ್ ನಲ್ಲಿ, ಬಹುತೇಕ ದ್ವೀಪಗಳು ಸಣ್ಣದಾಗಿರುವುದರ ಜೊತೆಗೆ ವಾಸರಹಿತವಾಗಿತ್ತು, ಉದಾಹರಣೆಗೆ ತ್ಯುಲೆನಿಯ್ ದ್ವೀಪಸಮೂಹ, ಇದು ಇಂಪಾರ್ಟೆಂಟ್ ಬರ್ಡ್ ಏರಿಯ(IBA)ವನ್ನು ಹೊಂದಿದೆ, ಇದರಲ್ಲಿ ಕೆಲವು ದ್ವೀಪಗಳಲ್ಲಿ ಮಾನವ ನೆಲೆಯು ಕಂಡುಬರುತ್ತದೆ.
ಅಜೆರ್ಬೈಜಾನ್ ಕರಾವಳಿಗೆ ಸಮೀಪವಿರುವ ಹಲವು ದ್ವೀಪಗಳು ತಮ್ಮಲ್ಲಿರುವ ತೈಲ ನಿಕ್ಷೇಪದ ಕಾರಣದಿಂದಾಗಿ ಭೂರಾಜಕೀಯ ಮಹತ್ವ ಹಾಗು ಆರ್ಥಿಕ ಪ್ರಾಮುಖ್ಯತೆಯನ್ನು ಪಡೆದಿದೆ. ಬುಲ್ಲ ದ್ವೀಪ ಅಜೆರ್ಬೈಜಾನ್ ಕರಾವಳಿಯ ಅನತಿದೂರದಲ್ಲಿದೆ, ಜೊತೆಗೆ ಇದು ಮಹತ್ತರವಾದ ತೈಲ ನಿಕ್ಷೇಪಗಳನ್ನು ಹೊಂದಿದೆ. ಪಿರಲ್ಲಾಹಿ ದ್ವೀಪವು ಸಹ ಅಜೆರ್ಬೈಜಾನ್ ಕರಾವಳಿಗೆ ಹತ್ತಿರದಲ್ಲಿದೆ, ಇದೂ ಸಹ ತೈಲ ನಿಕ್ಷೇಪವನ್ನು ಹೊಂದಿದೆ, ಅಜೆರ್ಬೈಜಾನ್ ನ ಈ ಪ್ರದೇಶದಲ್ಲಿ ಮೊದಲ ಬಾರಿಗೆ ತೈಲವು ಪತ್ತೆಯಾಯಿತು ಜೊತೆಗೆ ಕ್ಯಾಸ್ಪಿಯನ್ ಸಮುದ್ರದ ಈ ಭಾಗದಲ್ಲಿ ಮೊದಲ ಬಾರಿಗೆ ಸೆಕ್ಷನಲ್ ಡ್ರಿಲ್ಲಿಂಗ್(ರಂಧ್ರ ಕೊರೆಯುವುದು)ಮಾಡಲಾಯಿತು. ನಾರ್ಗಿನ್ ಸೋವಿಯತ್ ನ ಹಿಂದಿನ ನೆಲೆಯಾಗಿತ್ತು ಹಾಗು ಬಾಕು ಕೊಲ್ಲಿಯ ಅತ್ಯಂತ ದೊಡ್ಡ ದ್ವೀಪವಾಗಿದೆ. ಅಶುರದೆಹ್, ಇರಾನಿಯನ್ ಕರಾವಳಿಯ ಗೊರ್ಗನ್ ಕೊಲ್ಲಿಯ ಈಶಾನ್ಯ ದಿಕ್ಕಿನಲ್ಲಿರುವ ಮಿಂಕಲೆಖ್ ಪರ್ಯಾಯ ದ್ವೀಪದ ಅತ್ಯಂತ ಪೂರ್ವದಿಕ್ಕಿನಲ್ಲಿ ನೆಲೆಯಾಗಿದೆ. ದ್ವೀಪದ ನಿವಾಸಿಗಳು ಕಾಲುವೆಯನ್ನು ನಿರ್ಮಿಸಿದ ನಂತರ ಇದು ಪರ್ಯಾಯ ದ್ವೀಪದಿಂದ ಪ್ರತ್ಯೇಕಗೊಂಡಿದೆ.
ಹಲವಾರು ದ್ವೀಪಗಳು, ಅದರಲ್ಲೂ ವಿಶೇಷವಾಗಿ ಅಜೆರ್ಬೈಜಾನ್ ನ ಸುತ್ತಮುತ್ತಲಿರುವ ದ್ವೀಪಗಳು, ತೈಲ ಉತ್ಪಾದನೆಯ ಕಾರಣದಿಂದಾಗಿ ವ್ಯಾಪಕವಾದ ಪರಿಸರ ನಾಶಕ್ಕೆ ಗುರಿಯಾಗಿದೆ. ಉದಾಹರಣೆಗೆ ವುಲ್ಫ್, ತನ್ನ ಅಕ್ಕಪಕ್ಕದ ದ್ವೀಪಗಳಲ್ಲಿ ನಡೆಯುವ ತೈಲ ಉತ್ಪಾದನೆಯ ಕಾರಣದಿಂದಾಗಿ ತೀವ್ರತರವಾದ ಪರಿಸರ ಹಾನಿಗೆ ಒಳಪಟ್ಟಿದೆ, ಆದಾಗ್ಯೂ ಕ್ಯಾಸ್ಪಿಯನ್ ನೀರುನಾಯಿಗಳು ಹಾಗು ಹಲವಾರು ಜಾತಿಯ ಸಮುದ್ರ ಪಕ್ಷಿಗಳು ಇಂದಿಗೂ ಕಂಡುಬರುತ್ತದೆ.
ಹೈಡ್ರೋಕಾರ್ಬನ್ ಸಂಪನ್ಮೂಲಗಳು
ಬದಲಾಯಿಸಿಐತಿಹಾಸಿಕ ಬೆಳವಣಿಗೆ
ಬದಲಾಯಿಸಿಕ್ಯಾಸ್ಪಿಯನ್ ಪ್ರದೇಶವು ಇಂಧನ ಸಂಪನ್ಮೂಲಗಳಿಂದ ಸಮೃದ್ಧವಾಗಿದೆ. 10ನೇ ಶತಮಾನದಷ್ಟು ಹಿಂದಿನಿಂದಲೂ ಪ್ರದೇಶದಲ್ಲಿ ಬಾವಿಗಳನ್ನು ಅಗೆಯಲಾಗುತ್ತಿದೆ.[೨೪] 16ನೇ ಶತಮಾನದ ಸುಮಾರಿಗೆ, ಯುರೋಪಿಯನ್ನರಿಗೆ ಪ್ರದೇಶದ ಸುತ್ತಮುತ್ತಲಿರುವ ಹೇರಳವಾದ ತೈಲ ಹಾಗು ಅನಿಲ ನಿಕ್ಷೇಪಗಳ ಬಗ್ಗೆ ತಿಳಿದಿತ್ತು. ಇಂಗ್ಲಿಷ್ ವ್ಯಾಪಾರಸ್ಥರಾದ ಥಾಮಸ್ ಬನ್ನಿಸ್ಟರ್ ಹಾಗು ಜೆಫ್ಫ್ರಿ ಡಕೆಟ್ಟ್, ಬಾಕು ಸುತ್ತಮುತ್ತಲಿನ ಪ್ರದೇಶವನ್ನು ಬಣ್ಣಿಸುತ್ತಾ "ಗಮನ ಸೆಳೆಯುವ ಅಚ್ಚರಿಯ ಸಂಗತಿಯೆಂದರೆ, ಇಲ್ಲಿನ ಸಮುದ್ರದಡಿಯಲ್ಲಿ ಅಸಾಧಾರಣ ಪ್ರಮಾಣದ ತೈಲವು ಹುದುಗಿದೆ, ಇದರಿಂದಾಗಿ ಪ್ರಪಂಚದ ಎಲ್ಲ ದೇಶದವರೂ ತಮ್ಮ ಮನೆಗಳಲ್ಲಿ ಒಲೆಯನ್ನು ಉರಿಸಬಹುದು. ತೈಲದ ಬಣ್ಣವು ಕಪ್ಪಾಗಿದ್ದು ಇದನ್ನು ನೆಫ್ಟೆ ಎಂದು ಕರೆಯಲಾಗುತ್ತದೆ. ಬಕು ನಗರದ ಸಮೀಪವೂ ಸಹ ಮತ್ತೊಂದು ತೈಲ ನಿಕ್ಷೇಪವಿದೆ. ಇಲ್ಲಿನ ತೈಲವು ಬಿಳಿಯದಾಗಿದ್ದು ಬಹಳ ಅಮೂಲ್ಯವಾಗಿದೆ (ಅದೆಂದರೆ, ಪೆಟ್ರೋಲಿಯಂ)" ಎಂದು ಹೇಳುತ್ತಾರೆ.[೨೫]
ಪ್ರಪಂಚದ ಮೊದಲ ಕಡಲಾಚೆಗಿನ ಬಾವಿಗಳು ಹಾಗು ಯಂತ್ರದ ಮೂಲಕ ಕೊರೆಯಲಾದ ಬಾವಿಗಳು ಅಜೆರ್ಬೈಜಾನ್ ನ ಬಾಕು ಸಮೀಪದ ಬಿಬಿ-ಹೆಯ್ಬತ್ ಕೊಲ್ಲಿಯಲ್ಲಿ ಕಂಡುಬರುತ್ತದೆ. 1873ರಲ್ಲಿ ತೈಲದ ಪರಿಶೋಧನೆ ಹಾಗು ಅದರ ಅಭಿವೃದ್ಧಿಯು ಅಬ್ಷೆರೋನ್ ಪರ್ಯಾಯದ್ವೀಪದ ಸಮೀಪವಿರುವ ಹಳ್ಳಿಗಳಾದ ಬಲಖನ್ಲಿ, ಸಬುಂಚಿ, ರಾಮಾನ ಹಾಗು ಬಿಬಿ ಹೆಯ್ಬತ್ ನಲ್ಲಿ ಅಂದಿನ ಕಾಲಕ್ಕೆ ವಿಶ್ವದಲ್ಲೇ ಅತ್ಯಂತ ದೊಡ್ದದೆನಿಸಿದ್ದ ಪ್ರದೇಶಗಳಲ್ಲಿ ಆರಂಭಿಸಲಾಯಿತು. ಒಟ್ಟಾರೆಯಾಗಿ ಪತ್ತೆಮಾಡಬಹುದಾದ ನಿಕ್ಷೇಪಗಳು 500 ದಶಲಕ್ಷ ಟನ್‌ಗಳಿಗೂ ಅಧಿಕವಾಗಿತ್ತು. ಸುಮಾರು 1900ರ ಹೊತ್ತಿಗೆ, ಬಾಕು 3,000ಕ್ಕೂ ಅಧಿಕ ತೈಲ ಬಾವಿಗಳನ್ನು ಹೊಂದಿತ್ತು, ಇದರಲ್ಲಿ 2,000 ತೈಲ ಬಾವಿಗಳು ಕೈಗಾರಿಕಾ ಮಟ್ಟದಲ್ಲಿ ಉತ್ಪಾದನೆಯನ್ನು ಮಾಡುತ್ತಿದ್ದವು. 19ನೇ ಶತಮಾನದ ಕೊನೆಯಲ್ಲಿ, ಬಾಕುವನ್ನು "ಕಪ್ಪು ಚಿನ್ನದ ರಾಜಧಾನಿ" ಎಂದು ಕರೆಯಲಾಯಿತು, ಜೊತೆಗೆ ಹಲವು ನುರಿತ ಕೆಲಸಗಾರರು ಹಾಗು ವಿಶೇಷಜ್ಞರು ನಗರಕ್ಕೆ ಹಿಂಡುಹಿಂಡಾಗಿ ಬಂದರು.
20ನೇ ಶತಮಾನದ ತಿರುವಿನಲ್ಲಿ, ಬಾಕು ಅಂತಾರಾಷ್ಟ್ರೀಯ ತೈಲ ಕೈಗಾರಿಕೆಯ ಕೇಂದ್ರವಾಗಿತ್ತು. 1920ರಲ್ಲಿ, ಬೋಲ್ಶೇವಿಕ್ಸ್ ಅಜೆರ್ಬೈಜಾನ್ ಅನ್ನು ವಶಪಡಿಸಿಕೊಂಡಾಗ, ತೈಲ ಬಾವಿಗಳು ಹಾಗು ಕಾರ್ಖಾನೆಗಳನ್ನು ಒಳಗೊಂಡಂತೆ ಎಲ್ಲ ಖಾಸಗಿ ಸ್ವತ್ತನ್ನು ಜಫ್ತಿ ಮಾಡಿದರು. ಇದರ ನಂತರ, ಗಣರಾಜ್ಯದ ಸಂಪೂರ್ಣ ತೈಲ ಕೈಗಾರಿಕೆಯು ಸೋವಿಯತ್ ಒಕ್ಕೂಟದ ನಿಯಂತ್ರಣಕ್ಕೆ ಒಳಪಟ್ಟಿತು. 1941ರ ಸುಮಾರಿಗೆ, ಅಜೆರ್ಬೈಜಾನ್ 23.5 ದಶಲಕ್ಷ ಟನ್ ಗಳಷ್ಟು ತೈಲವನ್ನು ಉತ್ಪಾದಿಸಿ ದಾಖಲೆಯನ್ನು ಮಾಡಿತು, ಜೊತೆಗೆ ಬಾಕು ಪ್ರದೇಶವು, ಸಂಪೂರ್ಣ USSRನಲ್ಲಿ ಸಂಸ್ಕರಿಸಲಾದ ಎಲ್ಲ ತೈಲದಲ್ಲಿ ಸುಮಾರು 72%ನಷ್ಟು ಸರಬರಾಜು ಮಾಡಿತು.[೨೪]
1994ರಲ್ಲಿ, "ಶತಮಾನದ ಒಪ್ಪಂದಕ್ಕೆ" ಸಹಿ ಹಾಕಲಾಯಿತು. ಇದರಂತೆ ಬಾಕು ತೈಲ ಪ್ರದೇಶಗಳಲ್ಲಿ ಪ್ರಮುಖ ಅಂತಾರಾಷ್ಟ್ರೀಯ ಅಭಿವೃದ್ಧಿಯು ಆರಂಭಗೊಂಡಿತು. ಅಜೆರ್ಬೈಜಾನ್ ನ ತೈಲವು ನೇರವಾಗಿ ಟರ್ಕಿಷ್ ಮೆಡಿಟರೇನಿಯನ್ ನ ಸೆಯ್ಹನ್ ಬಂದರಿಗೆ ಹರಿಯಲು ಅವಕಾಶ ಮಾಡಿಕೊಡುವ ಪ್ರಮುಖ ಕೊಳವೆಮಾರ್ಗವಾದ ಬಾಕು-ಟಬಿಲಿಸಿ-ಸೆಯ್ಹನ್ ಕೊಳವೆಮಾರ್ಗವನ್ನು 2006ರಲ್ಲಿ ತೆರೆಯಲಾಯಿತು.
ಪ್ರಸಕ್ತ ಕಾಳಜಿಗಳು
ಬದಲಾಯಿಸಿಕ್ಯಾಸ್ಪಿಯನ್ ಜಲಾನಯನ ಪ್ರದೇಶದಲ್ಲಿರುವ ತೈಲವು US $12 ಟ್ರಿಲ್ಯನ್(ಒಂದು ಲಕ್ಷ ಕೋಟಿ)ಗೂ ಅಧಿಕ ಮೌಲ್ಯವನ್ನು ಹೊಂದಿದೆಯೆಂದು ಅಂದಾಜಿಸಲಾಗಿದೆ. USSRನ ಆಕಸ್ಮಿಕ ಪತನ ಹಾಗು ನಂತರದಲ್ಲಿ ಪ್ರದೇಶಕ್ಕೆ ದೊರೆತ ಪ್ರವೇಶದಿಂದಾಗಿ, ಅಂತಾರಾಷ್ಟ್ರೀಯ ತೈಲ ಕಂಪನಿಗಳು ತೀವ್ರತರವಾದ ಬಂಡವಾಳ ಹೂಡಿಕೆ ಹಾಗು ಅಭಿವೃದ್ಧಿಯನ್ನು ಶೀಘ್ರದಲ್ಲೇ ಕೈಗೊಂಡವು. 1998ರಲ್ಲಿ ಡಿಕ್ ಚೆನೆಯ್ "ನನಗೆ, ನಮ್ಮ ಕ್ಯಾಸ್ಪಿಯನ್ ಪ್ರದೇಶವು ಆಯಕಟ್ಟಿನ ಮಹತ್ವದ ಪ್ರದೇಶವಾಗುತ್ತದೆಂದು ತಾವು ಎಂದೂ ಊಹಿಸಿರಲಿಲ್ಲ."ಎಂದು ಉದ್ಗರಿಸಿದ್ದಾರೆ.[೨೬]
ಪ್ರದೇಶದ ಮತ್ತಷ್ಟು ಅಭಿವೃದ್ಧಿಗೆ ಎದುರಾಗುವ ಒಂದು ಪ್ರಮುಖ ಸಮಸ್ಯೆಯೆಂದರೆ ಕ್ಯಾಸ್ಪಿಯನ್ ಸಮುದ್ರದ ಸ್ಥಿತಿಗತಿ ಹಾಗು ಐದು ಕಡಲತಡಿಯ ರಾಜ್ಯಗಳ ತೀರ ಪ್ರದೇಶದಲ್ಲಿ ಜಲಸೀಮೆಗಳ ನಿರ್ಮಾಣ (ಕೆಳಗಿನ ವಿಭಾಗವನ್ನು ನೋಡಿ). ತುರ್ಕಮೆನಿಸ್ತಾನ್ ಹಾಗು ಇರಾನ್ ಜೊತೆಗಿನ ಅಜೆರ್ಬೈಜಾನ್ ನ ಜಲಪ್ರದೇಶ ಗಡಿಗಳ ಬಗ್ಗೆ ಉಂಟಾಗಿರುವ ಪ್ರಸಕ್ತ ವಿವಾದಗಳು ಭವಿಷ್ಯದ ಅಭಿವೃದ್ಧಿ ಯೋಜನೆಗಳಿಗೆ ಪರಿಣಾಮವನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಪ್ರಸ್ತಾಪದಲ್ಲಿರುವ ಟ್ರ್ಯಾನ್ಸ್-ಕ್ಯಾಸ್ಪಿಯನ್ ತೈಲ ಹಾಗು ಅನಿಲ ಕೊಳವೆಮಾರ್ಗಗಳ ಬಗ್ಗೆ ಪ್ರಸಕ್ತದಲ್ಲಿ ಹೆಚ್ಚಿನ ವಿವಾದಗಳು ಹುಟ್ಟಿಕೊಂಡಿವೆ. ಈ ಯೋಜನೆಗಳು, ಪಾಶ್ಚಿಮಾತ್ಯ ಮಾರುಕಟ್ಟೆಗಳಲ್ಲಿ ಖಜಕ್ ತೈಲದ ಸುಲಭ ಲಭ್ಯತೆಗೆ ಅವಕಾಶ ಮಾಡಿಕೊಡುತ್ತದೆ. ಜೊತೆಗೆ ಉಜ್ಬೆಕ್ ಹಾಗು ಟರ್ಕ್ಮೆನ್ ಅನಿಲದ ಲಭ್ಯತೆಗೆ ಅವಕಾಶ ಮಾಡಿಕೊಡುತ್ತದೆ. ಕೊಳವೆಮಾರ್ಗಗಳಿಗೆ ಅಮೆರಿಕ ಸಂಯುಕ್ತ ಸಂಸ್ಥಾನವು ತನ್ನ ಬೆಂಬಲವನ್ನು ನೀಡಿದೆ. ಪರಿಸರ ಹಾನಿಯ ಕಾರಣಗಳ ಮೇಲೆ ರಷ್ಯಾ ಅಧಿಕೃತವಾಗಿ ಯೋಜನೆಯನ್ನು ವಿರೋಧಿಸುತ್ತಿದೆ. ಕೊಳವೆಮಾರ್ಗಗಳು ರಷ್ಯಾವನ್ನು ಸಂಪೂರ್ಣವಾಗಿ ಹಾದುಹೋಗುತ್ತದೆಂದು ವಿಶ್ಲೇಷಕರು ಗಮನಿಸಿದ್ದಾರೆ. ಆ ಮೂಲಕ ರಾಷ್ಟ್ರದ ಅಮೂಲ್ಯ ಮಾರ್ಗಶುಲ್ಕವನ್ನು ನಿರಾಕರಿಸಲಾಗಿದೆ. ಅಲ್ಲದೆ ಆ ಪ್ರದೇಶದಿಂದ ಪಶ್ಚಿಮದ ಕಡೆಯ ಹೈಡ್ರೋಕಾರ್ಬನ್ ರಫ್ತಿನ ಮೇಲೆ ಅದರ ಪ್ರಸಕ್ತ ಏಕಸ್ವಾಮ್ಯತೆಯನ್ನು ನಾಶಮಾಡುತ್ತದೆಂದು ಅವರು ಹೇಳುತ್ತಾರೆ.[೨೭] ಇತ್ತೀಚಿಗೆ ಕಜಕ್‌ಸ್ತಾನ್ ಹಾಗು ತುರ್ಕಮೆನಿಸ್ತಾನ್ ಎರಡೂ, ಟ್ರ್ಯಾನ್ಸ್-ಕ್ಯಾಸ್ಪಿಯನ್ ಕೊಳವೆಮಾರ್ಗಕ್ಕೆ ತಮ್ಮ ಬೆಂಬಲವನ್ನು ಸೂಚಿಸಿವೆ.[೨೮]
ಅಸ್ತಿತ್ವದಲ್ಲಿರುವ ಹಾಗು ಪ್ರಸ್ತಾಪದಲ್ಲಿರುವ ಕಾಲುವೆಗಳು
ಬದಲಾಯಿಸಿಕ್ಯಾಸ್ಪಿಯನ್ ಸಮುದ್ರವು ಎಂಡೋರ್ಹೆಯಿಕ್(ಹೊರಹರಿವಿನ ಮಾರ್ಗವಿಲ್ಲದ) ಆಗಿದ್ದರೂ ಸಹ, ಅದರ ಪ್ರಮುಖ ಉಪನದಿ ವೋಲ್ಗ, ಪ್ರಮುಖ ಹಡಗು ರವಾನೆ ಕಾಲುವೆಗಳ ಮೂಲಕ ಡಾನ್ ನದಿಯೊಂದಿಗೆ (ಜೊತೆಗೆ ಕಪ್ಪು ಸಮುದ್ರದ ಜೊತೆಗೂ) ಹಾಗು ಬಾಲ್ಟಿಕ್ ಸಮುದ್ರದೊಂದಿಗೆ, ಕವಲು ಕಾಲುವೆಗಳಿಂದ ಉತ್ತರ ಡ್ವಿನಕ್ಕೆ ಹಾಗು ವೈಟ್ ಸೀಯೊಂದಿಗೆ ಸಂಪರ್ಕವನ್ನು ಹೊಂದಿದೆ.ಮತ್ತೊಂದು ಕ್ಯಾಸ್ಪಿಯನ್ ಉಪನದಿ, ಕುಮ ನದಿಯೂ ಸಹ ಡಾನ್ ಜಲಾನಯನ ಪ್ರದೇಶದ ಜೊತೆಗೆ ಒಂದು ನಿರಾವರಿ ಕಾಲುವೆಯೊಂದಿಗೆ ಸಂಪರ್ಕವನ್ನು ಹೊಂದಿದೆ.
ಹಿಂದೆ ಪ್ರಸ್ತಾಪಿಸಲಾದ ಕಾಲುವೆಗಳು
ಬದಲಾಯಿಸಿ1950ರಲ್ಲಿ ಆರಂಭಗೊಂಡ ಪ್ರಮುಖ ಟರ್ಕ್ಮೆನ್ ಕಾಲುವೆಯು, ಅಮು-ದರ್ಯಾದ ನುಕುಸ್ ನಿಂದ ಹಿಡಿದು ಕ್ಯಾಸ್ಪಿಯನ್ ಸಮುದ್ರದ ಕ್ರಸ್ನೋವೊಡ್ಸ್ಕ್ ವರೆಗೂ ಹಾದುಹೋಗಿತ್ತು. ಇದನ್ನು ಕೇವಲ ನೀರಾವರಿಗಾಗಿ ಅಲ್ಲದೆ, ಹಡಗು ರವಾನೆಗೂ ಸಹ ಬಳಸಲಾಗುತ್ತಿತ್ತು, ಇದು ಅಮು-ದರ್ಯಾ ಹಾಗು ಅರಾಲ್ ಸಮುದ್ರಕ್ಕೆ ಕ್ಯಾಸ್ಪಿಯನ್ ನೊಂದಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಈ ಯೋಜನೆಯನ್ನು ಜೋಸೆಫ್ ಸ್ಟ್ಯಾಲಿನ್ ರ ನಿಧನದ ನಂತರ ಕೈಬಿಡಲಾಯಿತು, ಅದಕ್ಕೆ ಬದಲಾಗಿ ಕ್ವಾರಕಂ ಕಾಲುವೆಗೆ ಆದ್ಯತೆ ನೀಡಲಾಯಿತು. ಇದು ಹೆಚ್ಚಾಗಿ ದಕ್ಷಿಣ ಮಾರ್ಗದಲ್ಲಿ ಹರಿಯುತ್ತದೆ ಹಾಗು ಕ್ಯಾಸ್ಪಿಯನ್‌ನನ್ನು ಸೇರುವುದಿಲ್ಲ.[೨೯]
1930ರಿಂದ 1980ರವರೆಗೂ ಪೆಚೋರ-ಕಾಮ ಕಾಲುವೆ ಯೋಜನೆಯ ಬಗ್ಗೆ ವ್ಯಾಪಕವಾಗಿ ಚರ್ಚಿಸಲಾಯಿತು, ಜೊತೆಗೆ 1971ರಲ್ಲಿ ಅಣ್ವಸ್ತ್ರ ಸ್ಫೋಟಗಳನ್ನು ಬಳಸಿಕೊಂಡು ಕೆಲವು ನಿರ್ಮಾಣ ಪ್ರಯೋಗಗಳನ್ನು ನಡೆಸಲಾಯಿತು. ಈ ಯೋಜನೆಗಾಗಿ, ಹಡಗು ಸಂಚಾರವನ್ನು ಎರಡನೆಯದಾಗಿ ಪರಿಗಣಿಸಲಾಯಿತು. ಇದರ ಪ್ರಮುಖ ಉದ್ದೇಶವೆಂದರೆ ಪೆಚೋರ ನದಿಯ ಸ್ವಲ್ಪಮಟ್ಟಿಗಿನ ನೀರನ್ನು (ಇದು ಆರ್ಕ್ಟಿಕ್ ಸಮುದ್ರಕ್ಕೆ ಸೇರುತ್ತದೆ) ಕಾಮ ನದಿಯ ಮೂಲಕ ವೋಲ್ಗಕ್ಕೆ ಪುನರ್ನಿರ್ದೆಶಿಸುವುದು. ಇದರ ಪ್ರಮುಖ ಉದ್ದೇಶವೆಂದರೆ ನೀರಾವರಿ ಹಾಗು ಕ್ಯಾಸ್ಪಿಯನ್ ನಲ್ಲಿನ ನೀರಿನ ಮಟ್ಟ ಸ್ಥಿರಗೊಳಿಸುವುದಾಗಿತ್ತು. ಆ ದಿನಗಳಲ್ಲಿ ನೀರಿನಮಟ್ಟ ಅಪಾಯಕಾರಿ ವೇಗದಲ್ಲಿ ಕುಸಿತಕ್ಕೊಳಗಾಗುತ್ತಿದೆ ಎಂದು ಪರಿಗಣಿಸಲಾಗಿತ್ತು.
ಯುರೇಶಿಯಾ ಕಾಲುವೆ
ಬದಲಾಯಿಸಿಜೂನ್ 2007ರಲ್ಲಿ, ತಮ್ಮ ರಾಷ್ಟ್ರದ ತೈಲ-ಸಮೃದ್ಧತೆಯು ಮಾರುಕಟ್ಟೆಗಳಿಗೆ ಲಭ್ಯವಾಗುವಂತೆ ಮಾಡಲು ಕಜಕಸ್ತಾನದ ಅಧ್ಯಕ್ಷ ನೂರ್ಸುಲ್ತಾನ್ ನಜರ್ಬಯೇವ್, ಕ್ಯಾಸ್ಪಿಯನ್ ಹಾಗು ಕಪ್ಪು ಸಮುದ್ರಗಳ ನಡುವೆ 700 ಕಿಮೀ ಉದ್ದದ ಜೋಡಣೆಗೆ ಪ್ರಸ್ತಾಪವನ್ನು ಮಾಡಿದರು. "ಯುರೇಶಿಯಾ ಕಾಲುವೆ"ಯು(ಮನಿಚ್ ಹಡಗು ಕಾಲುವೆ)ನೆಲಾವೃತವಾದ ಕಜಾಕ್ ಸ್ತಾನ್ ಹಾಗು ಇತರ ಮಧ್ಯ ಏಷಿಯದ ರಾಷ್ಟ್ರಗಳನ್ನು ಸಮುದ್ರತೀರದ ರಾಷ್ಟ್ರಗಳನ್ನಾಗಿ ಮಾರ್ಪಡಿಸಿ, ವ್ಯಾಪಾರದ ಗಾತ್ರವನ್ನು ಗಣನೀಯವಾಗಿ ಹೆಚ್ಚಿಸುತ್ತೆಂಬ ಆಶಯ ಹೊಂದಲಾಗಿತ್ತು. ಕಾಲುವೆಯು ರಷ್ಯಾದ ಭೂಪ್ರದೇಶವನ್ನು ಹಾದುಹೋಗುವುದರಿಂದ ಅದು ಕ್ಯಾಸ್ಪಿಯನ್ ಸಮುದ್ರದ ಬಂದರುಗಳ ಮೂಲಕ ಕಜಕಸ್ತಾನಕ್ಕೆ ಪ್ರಯೋಜನವಾಗಲಿದೆ. ಕಜಾಕ್ ಸ್ತಾನ್ ದ ಕೃಷಿ ಇಲಾಖೆಯ ನೀರಾವರಿ ಸಂಪನ್ಮೂಲ ಸಮಿತಿಯ ಅಧಿಕಾರಿಗಳ ಪ್ರಕಾರ ಕಾಲುವೆಗೆ ಇರುವ ಸಂಭವನೀಯ ಮಾರ್ಗವೆಂದರೆ ಕುಮ-ಮನಿಚ್ ಡಿಪ್ರೆಶನ್, ಇಲ್ಲಿ ಈಗಾಗಲೇ ನೀರಾವರಿ ಕಾಲುವೆಯೊಂದರ ಮೂಲಕ ನದಿಗಳು ಹಾಗು ಸರೋವರಗಳ ಸರಪಳಿಯು ಸಂಪರ್ಕವನ್ನು ಕಲ್ಪಿಸಿಕೊಂಡಿವೆ(ಕುಮ-ಮನಿಚ್ ಕಾಲುವೆ). ವೋಲ್ಗ-ಡಾನ್ ಕಾಲುವೆಯನ್ನು ಮೇಲ್ದರ್ಜೆಗೇರಿಸುವುದು ಸಹ ಮತ್ತೊಂದು ಆಯ್ಕೆಯಾಗಬಹುದು.[೩೦]
ಅಂತಾರಾಷ್ಟ್ರೀಯ ವಿವಾದಗಳು
ಬದಲಾಯಿಸಿಈ ವಿಭಾಗದಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (July 2008) |
Expression error: Unexpected < operator.
ಕ್ಯಾಸ್ಪಿಯನ್ ಸಮುದ್ರದ ಗಡಿ ಗುರುತಿಸುವಿಕೆಗೆ ಸಂಬಂಧಿಸಿದಂತೆ ಸಮಾಲೋಚನೆಗಳು ಸುಮಾರು ಒಂದು ದಶಕಗಳಿಂದಲೂ ಕ್ಯಾಸ್ಪಿಯನ್ - ಅಜೆರ್ಬೈಜಾನ್ , ರಷ್ಯಾ , ಕಜಾಕ್ ಸ್ತಾನ್, ತುರ್ಕಮೆನಿಸ್ತಾನ್ ಹಾಗು ಇರಾನ್ ನ ಗಡಿಯ ರಾಜ್ಯಗಳಲ್ಲಿ ನಡೆಯುತ್ತಿವೆ.
ಕ್ಯಾಸ್ಪಿಯನ್ ಸಮುದ್ರದ ಸ್ಥಿತಿಗತಿಯು [೩೧] ಒಂದು ಪ್ರಮುಖ ಸಮಸ್ಯೆಯಾಗಿದೆ. ಕ್ಯಾಸ್ಪಿಯನ್ ಸಮುದ್ರದ ಸ್ಥಿತಿಗತಿಗೆ ಪರಿಣಾಮವನ್ನು ಬೀರುವ ಮೂರು ಪ್ರಮುಖ ಅಂಶಗಳಿವೆ: ಖನಿಜ ಸಂಪನ್ಮೂಲಗಳ ಲಭ್ಯತೆ (ತೈಲ ಹಾಗು ನೈಸರ್ಗಿಕ ಅನಿಲ), ಮೀನುಗಾರಿಕೆ ಮಾಡುವ ಅವಕಾಶ ಹಾಗು ಅಂತಾರಾಷ್ಟ್ರೀಯ ಜಲಮಾರ್ಗದ ಲಭ್ಯತೆ(ರಷ್ಯಾದ ವೋಲ್ಗ ನದಿ ಹಾಗು ಕಪ್ಪು ಸಮುದ್ರ ಹಾಗು ಬಾಲ್ಟಿಕ್ ಸಮುದ್ರಕ್ಕೆ ಸಂಪರ್ಕ ಕಲ್ಪಿಸುವ ಕಾಲುವೆಗಳ ಮೂಲಕ). ವೋಲ್ಗ ನದಿಗೆ ಪ್ರವೇಶವು ವಿಶೇಷವಾಗಿ ಅಜೆರ್ಬೈಜಾನ್ , ಕಜಾಕ್ ಸ್ತಾನ್ ಹಾಗು ತುರ್ಕಮೆನಿಸ್ತಾನ್ ನ ನೆಲಾವೃತವಾದ ರಾಜ್ಯಗಳಿಗೆ ಪ್ರಮುಖವಾಗಿದೆ. ಈ ಸಂಗತಿಯು ರಷ್ಯಾಕ್ಕೆ ಸಂವೇದನಶೀಲವಾಗಿದೆ. ಏಕೆಂದರೆ ಈ ಸಂಭಾವ್ಯ ಸಂಚಾರ ಇದರ ಪ್ರದೇಶದ ಮೂಲಕ ಹಾದು ಹೋಗುತ್ತದೆ (ಆದಾಗ್ಯೂ ಒಳನಾಡಿನ ಜಲಮಾರ್ಗಗಳ ಮೂಲಕ ಹಾದು ಹೋಗುತ್ತದೆ). ಯಾವುದೇ ಒಂದು ಜಲರಾಶಿಯನ್ನು ಸಮುದ್ರ ಎಂದು ಕರೆದರೆ, ವಿದೇಶಿ ಹಡಗುಗಳಿಗೆ ಅನುಮತಿ ನೀಡಲು ಬದ್ಧವಾದ ಕೆಲವು ಪೂರ್ವನಿದರ್ಶನಗಳು ಹಾಗು ಅಂತಾರಾಷ್ಟ್ರೀಯ ಒಪ್ಪಂದಗಳಿರುತ್ತವೆ. ಅದೇ ಜಲರಾಶಿಯು ಕೇವಲ ಸರೋವರವೆಂದು ವರ್ಗೀಕರಿಸಿದರೆ, ಅಂತಹುದಕ್ಕೆ ಯಾವುದೇ ಕಟ್ಟುಪಾಡುಗಳಿರುವುದಿಲ್ಲ. ಪರಿಸರ ವಿಷಯಗಳೂ ಸಹ ಸ್ಥಿತಿಗತಿ ಹಾಗು ಗಡಿ ವಿಷಯಗಳ ಜೊತೆಗೆ ಒಂದು ರೀತಿಯಲ್ಲಿ ಸಂಬಂಧಿಸಿರುತ್ತದೆ.
ರಷ್ಯಾ ಹಿಂದಿನ ಸೋವಿಯತ್ ಕ್ಯಾಸ್ಪಿಯನ್ ಮಿಲಿಟರಿ ಯುದ್ಧನೌಕೆಗಳ ಬಹುಪಾಲನ್ನು ಪಡೆಯಿತು ಎಂದು ಇಲ್ಲಿ ಉಲ್ಲೇಖಿಸಬಹುದು (ಜೊತೆಗೆ ಕ್ಯಾಸ್ಪಿಯನ್ ಸಮುದ್ರದಲ್ಲಿ ಪ್ರಸಕ್ತ ಅತ್ಯಂತ ಬಲವಾದ ಮಿಲಿಟರಿ ಉಪಸ್ಥಿತಿಯನ್ನು ಹೊಂದಿದೆ . ಕೆಲವು ಆಸ್ತಿಗಳನ್ನು ಅಜೆರ್ಬೈಜಾನ್ ಗೆ ಹಸ್ತಾಂತರಿಸಲಾಯಿತು. ಕಜಾಕ್ ಸ್ತಾನ್ ಹಾಗು ವಿಶೇಷವಾಗಿ ತುರ್ಕಮೆನಿಸ್ತಾನ್ ಗಳು ಇದರಲ್ಲಿ ಕಡಿಮೆ ಪಾಲನ್ನು ಪಡೆದವು ಏಕೆಂದರೆ ಇವುಗಳು ಪ್ರಮುಖ ಬಂದರು ನಗರಗಳನ್ನು ಹೊಂದಿರಲಿಲ್ಲ.
ಇರಾನ್ (ಪರ್ಶಿಯ) ಹಾಗು ಸೋವಿಯತ್ ಒಕ್ಕೂಟದ ನಡುವೆ ಸಹಿ ಹಾಕಲಾದ ಒಂದು ಒಪ್ಪಂದದ ಪ್ರಕಾರ, ಕ್ಯಾಸ್ಪಿಯನ್ ಸಮುದ್ರವು ತಾಂತ್ರಿಕವಾಗಿ ಒಂದು ಸರೋವರವೆನಿಸಿದೆ ಹಾಗು ಇದನ್ನು ಎರಡು ಭಾಗಗಳಾಗಿ ವಿಂಗಡಣೆ ಮಾಡಬಹುದು (ಪರ್ಷಿಯನ್ ಹಾಗು ರಷ್ಯನ್), ಆದರೆ ಸಂಪನ್ಮೂಲಗಳನ್ನು ಸಮಾನವಾಗಿ ಹಂಚಿಕೆ ಮಾಡಬೇಕು (ಅಂದಿನ ಪ್ರಮುಖ ಸಂಪನ್ಮೂಲ ಮೀನು). ಎರಡು ವಲಯಗಳ ನಡುವಿನ ರೇಖೆಯನ್ನು ಒಂದು ಸಾಮಾನ್ಯ ಸರೋವರವಾದ ಲೇಕ್ ಅಲ್ಬರ್ಟ್‌ನಲ್ಲಿ ಒಂದು ಅಂತಾರಾಷ್ಟ್ರೀಯ ಗಡಿಯೆಂದು ಪರಿಗಣಿಸಲಾಯಿತು. ಅಲ್ಲದೆ ರಷ್ಯನ್ ವಲಯವನ್ನು ನಾಲ್ಕು ತೀರಪ್ರದೇಶದ ಗಣರಾಜ್ಯಗಳ ಆಡಳಿತಾತ್ಮಕ ವಲಯಗಳೆಂದು ಉಪ-ವಿಭಾಗ ಮಾಡಲಾಗಿತ್ತು.ಸೋವಿಯತ್ ಒಕ್ಕೂಟದ ವಿಭಜನೆಯ ನಂತರ ಹೊಸದಾಗಿ ರೂಪುಗೊಂಡ ಸ್ವತಂತ್ರ ದೇಶಗಳಲ್ಲಿ ಎಲ್ಲವೂ ಹಳೆಯ ಒಪ್ಪಂದಕ್ಕೆ ಬದ್ಧತೆಯನ್ನು ತೋರಲಿಲ್ಲ. ಮೊದಲಿಗೆ ರಷ್ಯಾ ಹಾಗು ಇರಾನ್ ಹಳೆಯ ಒಪ್ಪಂದಕ್ಕೆ ಬದ್ಧರಾಗಿರುತ್ತೇವೆಂದು ಪ್ರಕಟಿಸಿದವು.
ಹಳೆಯ ಸೋವಿಯತ್ ಒಕ್ಕೂಟವು ಕ್ಯಾಸ್ಪಿಯನ್ ಸಮುದ್ರದ ನೆರೆಯ ರಾಷ್ಟ್ರಗಳಾದ ಅಜರ್‌ಬೈಜಾನ್, ಕಜಕಸ್ತಾನ,ತುರ್ಕ್‌ಮೆನಿಸ್ತಾನ ಸೇರಿದಂತೆ ಹದಿನೈದು ರಾಷ್ಟ್ರಗಳಾಗಿ ವಿಭಜನೆಯಾದ ನಂತರ, {1}ಇರಾನ್{/1} ({2}ಪರ್ಶಿಯ{/2}) ಕ್ಯಾಸ್ಪಿಯನ್ ಸಮುದ್ರವನ್ನು ಐದು ರಾಷ್ಟ್ರಗಳ ನಡುವೆ ಸಮಾನ ಹಂಚಿಕೆ ಮಾಡಬೇಕೆಂದು ಕರೆ ನೀಡಿತು: ಇರಾನ್, ಅಜೆರ್ಬೈಜಾನ್, ತುರ್ಕಮೆನಿಸ್ತಾನ್, ಕಜಕಸ್ತಾನ್, ಹಾಗು ರಷ್ಯಾ . ಈ ವಿಭಜನೆಯು ಕಾರ್ಯರೂಪಕ್ಕೆ ಬರದಿದ್ದರೆ, ಇರಾನ್ ತನ್ನ ಹಳೆಯ ಒಪ್ಪಂದಕ್ಕೆ ಮಾತ್ರ ಮಾನ್ಯತೆ ನೀಡಲು ಇಚ್ಛಿಸಿತ್ತು(ಇರಾನ್ ಹಾಗು ರಷ್ಯಾ ನಡುವಿನ ಒಪ್ಪಂದ) ಜೊತೆಗೆ ತನ್ನ 50% ಪಾಲನ್ನು ಮೂರು ಸಮುದ್ರ ತೀರದ ರಾಜ್ಯಗಳಾದ ಅಜೆರ್ಬೈಜಾನ್, ತುರ್ಕಮೆನಿಸ್ತಾನ್ ಹಾಗು ಕಜಕ್ ಸ್ತಾನ್ ಜತೆಗೆ ಹಂಚಿಕೆ ಮಾಡುವಂತೆ ರಷ್ಯಾಕ್ಕೆ ಸವಾಲನ್ನು ಒಡ್ಡಿತು .ಅಲ್ಲದೇ ಟೆಹ್ರಾನ್‌ನಲ್ಲಿ U.S.ಆರ್ಥಿಕ ಸಂಬಂಧದ ವಿಭಾಗವನ್ನು ತೆರೆಯುವ ಮೂಲಕ ಪಶ್ಚಿಮ ಹಾಗು U.S. ಕಡೆಗೆ ಒಂದು ಸ್ನೇಹಪರ ನಿಲುವನ್ನು ತಾಳಿತು.[ಸೂಕ್ತ ಉಲ್ಲೇಖನ ಬೇಕು]
ಕಜಾಕ್ ಸ್ತಾನ್, ಅಜೆರ್ಬೈಜಾನ್ ಹಾಗು ತುರ್ಕಮೆನಿಸ್ತಾನ್ ಗಳು ಈ ಒಪ್ಪಂದಕ್ಕೆ ತಾವು ಸಹಭಾಗಿಗಳೆಂದು ಸ್ವತಃ ಪರಿಗಣಿಸುವುದಿಲ್ಲವೆಂದು ಘೋಷಿಸಿದವು.
ನಂತರದಲ್ಲಿ[clarification needed] ಸಮುದ್ರದ ಸ್ಥಿತಿಗತಿಯ ಬಗ್ಗೆ ಎಲ್ಲ ಸಮುದ್ರದ ತೀರದ ರಾಜ್ಯಗಳ ನಡುವೆ ಸಮಾನವಾದ ಒಪ್ಪಂದಕ್ಕೆ ಕೆಲವು ಪ್ರಸ್ತಾಪಗಳನ್ನು ಅನುಸರಿಸಿದವು:
- ಅಜೆರ್ಬೈಜಾನ್, ಕಜಾಕ್ ಸ್ತಾನ್ ಹಾಗು ತುರ್ಕಮೆನಿಸ್ತಾನ್ ಗಳು, ವಿಭಾಗಗಳು ಮಧ್ಯರೇಖೆಯ ಮೇಲೆ ಆಧಾರವಾಗಿದ್ದರೆ, ಪ್ರತಿ ರಾಜ್ಯಕ್ಕೆ ಕ್ಯಾಸ್ಪಿಯನ್ ಕರಾವಳಿಯ ಉದ್ದಕ್ಕೆ ಪ್ರಮಾಣಾನುಗುಣವಾದ ಪಾಲು ದೊರಕುತ್ತದೆಂದು ಪ್ರತಿಪಾದಿಸಿದವು. ಅಲ್ಲದೆ ಈ ವಿಭಾಗಗಳು ನಿರ್ದಿಷ್ಟ ದೇಶದ ಸಾರ್ವಬೌಮ ಪ್ರದೇಶದ ಭಾಗವಾಗುತ್ತದೆ. (ಈ ರೀತಿಯಾಗಿ ಇವುಗಳು ಅಂತಾರಾಷ್ಟ್ರೀಯ ಗಡಿಗಳ ರಚನೆಯಾಗಿ, ಪ್ರತಿಯೊಂದು ದೇಶವು ತನ್ನ ಪರಿಮಿತಿಯೋಳಗಿರುವ ಎಲ್ಲ ಸಂಪನ್ಮೂಲಗಳನ್ನು ತನ್ನ ಇಚ್ಚೆಯಂತೆ ಏಕಪಕ್ಷೀಯವಾಗಿ ಬಳಕೆ ಮಾಡಿಕೊಳ್ಳಲು ಅವಕಾಶ ನೀಡುತ್ತದೆ).
- ಇರಾನ್,ಒಟ್ಟಾರೆ ಕ್ಯಾಸ್ಪಿಯನ್ ಸಮುದ್ರದ ಐದನೇ ಒಂದು ಭಾಗ ಪ್ರತಿ ದೇಶಕ್ಕೆ ಸಿಗುವಂತೆ ವಿಭಾಗಗಳಿರಬೇಕೆಂದು ಒತ್ತಾಯ ಮಾಡಿತು. ಇದು ಇರಾನ್ ಗೆ ಬಹಳ ಲಾಭದಾಯಕವಾಗಿತ್ತು, ಏಕೆಂದರೆ ಇದು ಪ್ರಮಾಣಾನುಗುನವಾಗಿ ಸಣ್ಣ ಕರಾವಳಿಯನ್ನು ಹೊಂದಿತ್ತು.
- ರಷ್ಯಾ ಸಮನ್ವಯವಾದ ಪರಿಹಾರವನ್ನು ಪ್ರಸ್ತಾಪಿಸಿತು: ಸಮುದ್ರತಳವನ್ನು (ಹಾಗು ಖನಿಜ ಸಂಪನ್ಮೂಲಗಳೂ ಸಹ) ವಿಭಾಗದ ರೇಖೆಗಳುದ್ದಕ್ಕೂ ವಿಭಜಿಸಬೇಕು(ಮೇಲೆ ವಿವರಿಸಲಾದಂತಹ ಬದಲಾವಣೆಗಳ ಜೊತೆಯಲ್ಲಿ), ಮೇಲ್ಮೈಯನ್ನು(ಹಾಗು ಮೀನುಗಾರಿಕೆಯ ಹಕ್ಕುಗಳು) ಎಲ್ಲ ದೇಶಗಳ ನಡುವೆ ಹಂಚಿಕೆ ಮಾಡಬೇಕು(ಹೇಳಲಾಗಿರುವ ಬದಲಾವಣೆಯೊಂದಿಗೆ: ಸಂಪೂರ್ಣ ಮೇಲ್ಮೈಯನ್ನು ಸಮಾನವಾಗಿ ಹಂಚಿಕೆ ಮಾಡಬೇಕು, ಪ್ರತಿ ರಾಜ್ಯವು ತನ್ನದೇ ಆದ ವಿಶೇಷ ವಲಯ ಗಳಿಸುವಂತಿರಬೇಕು ಹಾಗು ಮಧ್ಯಭಾಗದಲ್ಲಿರುವ ಒಂದು ಸಮಾನ ವಲಯವನ್ನು ಹಂಚಿಕೆ ಮಾಡಬೇಕು. ಎರಡನೇ ಬದಲಾವಣೆಯನ್ನು ಅವಾಸ್ತವಿಕವೆಂದು ಪರಿಗಣಿಸಲಾಯಿತು, ಏಕೆಂದರೆ ಒಟ್ಟಾರೆ ಸಮುದ್ರದ ಗಾತ್ರವು ಸಣ್ಣದಾಗಿತ್ತು).[ಸೂಕ್ತ ಉಲ್ಲೇಖನ ಬೇಕು]
ಪ್ರಸಕ್ತದ ಪರಿಸ್ಥಿತಿ
ಬದಲಾಯಿಸಿರಷ್ಯಾ, ಕಜಾಕ್ ಸ್ತಾನ್ ಹಾಗು ಅಜೆರ್ಬೈಜಾನ್ ತಮ್ಮ ವಿಭಾಗಗಳ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಮ್ಮತಿ ಸೂಚಿಸಿದವು. ಕಜಾಕ್ ಸ್ತಾನ್ ಹಾಗು ತುರ್ಕಮೆನಿಸ್ತಾನ್ ಗಳ ನಡುವೆ ಯಾವುದೇ ಸಮಸ್ಯೆಗಳಿಲ್ಲ, ಆದರೆ ತುರ್ಕಮೆನಿಸ್ತಾನ್ ಇದರಲ್ಲಿ ಸಕ್ರಿಯವಾಗಿ ಭಾಗಿಯಾಗದ ಕಾರಣ, ಈ ಎರಡೂ ದೇಶಗಳ ನಡುವೆ ಯಾವುದೇ ಒಪ್ಪಂದಗಳಿಲ್ಲ. ಅಜೆರ್ಬೈಜಾನ್, ಇರಾನ್ ನೊಂದಿಗೆ ಕೆಲವು ತೈಲ ನಿಕ್ಷೇಪಗಳಿಗೆ ಸಂಬಂಧಿಸಿದಂತೆ ವಿವಾದ ಉಂಟಾಗಿದೆ. ಈ ಎರಡೂ ದೇಶಗಳು ಕೆಲವು ತೈಲ ನಿಕ್ಷೇಪಗಳು ತಮ್ಮದೆಂದು ವಾದಿಸುತ್ತಿವೆ. ವಿವಾದಿತ ಪ್ರದೇಶದಲ್ಲಿ ಪರಿಶೋಧನೆಗಾಗಿ ಬಂದಂತಹ ಅಜೆರ್ಬೈಜಾನ್ ನ ನೌಕೆಗಳ ಮೇಲೆ ಇರಾನ್ ಗಸ್ತು ದಳದ ದೋಣಿಗಳು ಕೆಲವೊಂದು ಸಂದರ್ಭಗಳಲ್ಲಿ ಗುಂಡನ್ನು ಹಾರಿಸಿವೆ. ಅಜೆರ್ಬೈಜಾನ್ ಹಾಗು ತುರ್ಕಮೆನಿಸ್ತಾನ್ ಗಳ ನಡುವೆಯೂ ಇದೆ ರೀತಿಯಾದ ಉದ್ವೇಗಗಳು ಉದ್ಭವಿಸಿವೆ (ತುರ್ಕಮೆನಿಸ್ತಾನ್, ಒಪ್ಪಂದಕ್ಕಿಂತ ಅಧಿಕ ತೈಲವನ್ನು ತೈಲಕ್ಷೇತ್ರದಿಂದ ಪಂಪ್ ಮಾಡುತ್ತಿದೆಯೆಂದು ಹೇಳುತ್ತಿದೆ. ಈ ತೈಲಕ್ಷೇತ್ರವನ್ನು ಎರಡೂ ಕಡೆಯವರು ಹಂಚಿಕೊಳ್ಳಬೇಕೆಂದು ಗುರುತಿಸಲಾಗಿತ್ತು. ). ತುರ್ಕಮೆನಿಸ್ತಾನ್ ಹಾಗು ಇರಾನ್ ನ ನಡುವೆ ಅತ್ಯಂತ ಸೂಕ್ಷ್ಮವೆನ್ನಬಹುದಾದಂತಹ ಯಾವುದೇ ಸಮಸ್ಯೆಗಳಿಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ, ಸಮುದ್ರದ ದಕ್ಷಿಣ ಭಾಗವು ವಿವಾದಿತವಾಗಿ ಉಳಿದಿದೆ.
- ರಷ್ಯಾ ಹಾಗು ಕಜಾಕ್ ಸ್ತಾನ್ ಒಪ್ಪಂದಕ್ಕೆ ಸಹಿ ಹಾಕಿದವು, ಇದರಂತೆ, ಕ್ಯಾಸ್ಪಿಯನ್ ಸಮುದ್ರದ ಉತ್ತರ ಭಾಗವನ್ನು ಮಧ್ಯರೇಖೆಯಲ್ಲಿ ಎರಡು ಭಾಗಗಳಾಗಿ ಈ ಎರಡೂ ದೇಶಗಳು ವಿಂಗಡಿಸಿಕೊಳ್ಳುತ್ತವೆ. ಪ್ರತಿ ವಿಭಾಗವು ತನ್ನ ರಾಜ್ಯದ ಏಕೈಕ ವಲಯವಾಗಿದೆ. ಈ ರೀತಿಯಾಗಿ ಎಲ್ಲ ಸಂಪನ್ಮೂಲಗಳು, ಸಮುದ್ರತಳ ಹಾಗು ಮೇಲ್ಮೈ ನಿರ್ದಿಷ್ಟ ರಾಜ್ಯಕ್ಕೆ ಪ್ರತ್ಯೇಕವಾಗಿರುತ್ತದೆ.
- ರಷ್ಯಾ ಹಾಗು ಅಜೆರ್ಬೈಜಾನ್ ತಮ್ಮ ಸಮಾನಾಂತರವಾದ ಗಡಿಗೆ ಸಂಬಂಧಿಸಿದಂತೆ ಇದೆ ರೀತಿಯಾದ ಒಪ್ಪಂದಕ್ಕೆ ಸಹಿ ಹಾಕಿದವು.
- ಕಜಾಕ್ ಸ್ತಾನ್ ಹಾಗು ಅಜೆರ್ಬೈಜಾನ್ ಸಹ ತಮ್ಮ ಸಮಾನಾಂತರವಾದ ಗಡಿಗೆ ಸಂಬಂಧಿಸಿದಂತೆ ಇದೆ ರೀತಿಯಾದ ಒಪ್ಪಂದಕ್ಕೆ ಸಹಿ ಹಾಕಿದವು.
- ಇರಾನ್ ಇತರ ಸಮುದ್ರ ತೀರದ ರಾಜ್ಯಗಳ ನಡುವೆ ಯಾವುದೇ ದ್ವಿಪಕ್ಷೀಯ ಒಪ್ಪಂದಕ್ಕೆ ಮಾನ್ಯತೆ ನೀಡುವುದಿಲ್ಲ. ಇರಾನ್ ಸಮುದ್ರ ತೀರದ ಎಲ್ಲ ಐದು ರಾಜ್ಯಗಳ ನಡುವೆ ಒಂದೇ ರೀತಿಯಾದ ಬಹುಪಕ್ಷೀಯ ಒಪ್ಪಂದವನ್ನು ಮಾಡಿಕೊಳ್ಳಬೇಕೆಂದು ಒತ್ತಾಯಿಸುತ್ತಿದೆ ( 1/5 ಪಾಲಿನ ಹಂಚಿಕೆ ಸಾಧನೆಗೆ ಇದಕ್ಕಿರುವ ಏಕೈಕ ಮಾರ್ಗ).
- ತುರ್ಕಮೆನಿಸ್ತಾನ್ ನ ಸ್ಥಿತಿಯು ಅಸ್ಪಷ್ಟವಾಗಿದೆ.
ರಷ್ಯಾ ಮಧ್ಯರೇಖೆಯ ವಿಭಾಗದ ವಿಂಗಡನೆಯನ್ನು ಅಳವಡಿಸಿಕೊಂಡಾಗ ಹಾಗು ಕೆಲವು ಸಮುದ್ರ ತೀರದ ರಾಜ್ಯಗಳ ನಡುವೆ ಆ ಅವಧಿಯಲ್ಲಿ ಮೂರು ಒಪ್ಪಂದಗಳು ನಡೆದಾಗ, ಕ್ಯಾಸ್ಪಿಯನ್ ಗಡಿ ರೇಖೆಗಳನ್ನು ನಿಯಂತ್ರಿಸಲು ಇದು ವಾಸ್ತವಿಕ ವಿಧಾನವಾಗಿ ಕಂಡುಬಂತು. ರಷ್ಯಾದ ವಿಭಾಗವು ಸಂಪೂರ್ಣವಾಗಿ ನಿರೂಪಿಸಲ್ಪಟ್ಟಿದೆ. ಕಜಾಕ್ ಸ್ತಾನ್ ನ ವಿಭಾಗವು ಸಂಪೂರ್ಣವಾಗಿ ನಿರೂಪಿಸಲಾಗಿಲ್ಲವಾದರೂ, ವಿವಾದಿತವಾಗಿರಲಿಲ್ಲ. ಅಜೆರ್ಬೈಜಾನ್, ತುರ್ಕಮೆನಿಸ್ತಾನ್ ಹಾಗು ಇರಾನ್ ನ ವಿಭಾಗಗಳೂ ಸಹ ಸಂಪೂರ್ಣವಾಗಿ ನಿರೂಪಿತವಾಗಿರಲಿಲ್ಲ. ಅಜೆರ್ಬೈಜಾನ್ ಹಾಗು ಕಜಾಕ್ ಸ್ತಾನ್ ನಿಂದ ಬರುವ ಹಡಗುಗಳಿಗೆ ವೋಲ್ಗ ನದಿಯಲ್ಲಿ ಸಂಚಾರ ಮಾಡಲು ರಷ್ಯಾದೊಂದಿಗೆ ಮಾಡಿಕೊಂಡ ಒಪ್ಪಂದಗಳಲ್ಲಿ ಸೇರಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಜೊತೆಗೆ ಇದೆ ರೀತಿಯಾಗಿ ತುರ್ಕಮೆನಿಸ್ತಾನ್ ಹಾಗು ಇರಾನ್ ನ ಹಡಗುಗಳಿಗೆ ವೋಲ್ಗ ನದಿಯಲ್ಲಿ ಸಂಚಾರ ಮಾಡಲು ಷರತ್ತುಗಳೇನು ಎಂಬುದೂ ಸಹ ತಿಳಿದುಬಂದಿಲ್ಲ. [ಸೂಕ್ತ ಉಲ್ಲೇಖನ ಬೇಕು]
2007ರಲ್ಲಿ ನಡೆದ ಕ್ಯಾಸ್ಪಿಯನ್ ಸಮುದ್ರತೀರದ ದೇಶಗಳ ಸಭೆಯಲ್ಲಿ, ಕ್ಯಾಸ್ಪಿಯನ್ ಸಮುದ್ರದಲ್ಲಿ ಸಂಚಾರ ಮಾಡುವ ಸಮುದ್ರ ತೀರದ ಯಾವುದೇ ರಾಜ್ಯದ ಹಡಗುಗಳು ತಮ್ಮ ರಾಷ್ಟ್ರೀಯ ಧ್ವಜವನ್ನು ಹಾರಿಸದಿದ್ದರೆ ಅಂತಹ ಹಡಗುಗಳಿಗೆ ಸಂಚಾರಕ್ಕೆ ಅವಕಾಶ ಕೊಡುವುದಿಲ್ಲವೆಂದು ಒಪ್ಪಂದಕ್ಕೆ ಸಹಿ ಹಾಕಲಾಯಿತು.[೩೨]
ಸಾರಿಗೆ
ಬದಲಾಯಿಸಿನಿಗದಿಯಾದ ಹಲವಾರು ಹಡಗು ಸೇವೆಗಳು (ಇದರಲ್ಲಿ ರೈಲು ಹಡಗುಗಳು ಸಹ ಸೇರಿವೆ) ಕ್ಯಾಸ್ಪಿಯನ್ ಸಮುದ್ರದಲ್ಲಿ ಸಂಚರಿಸುತ್ತವೆ, ಇದರಲ್ಲಿ:
ಇದನ್ನೂ ಗಮನಿಸಿ
ಬದಲಾಯಿಸಿ- ಅರಾಲ್ ಸಮುದ್ರ
- ಬಾಕು ತೈಲ ನಿಕ್ಷೇಪಗಳು
- ಕ್ಯಾಸ್ಪಿಯನ್ ನ ಜನರು
- ಎಕ್ರನೋಪ್ಲಾನ್, ಈ ವಿಮಾನವನ್ನು "ಕ್ಯಾಸ್ಪಿಯನ್ ಸಮುದ್ರದ ರಾಕ್ಷಸ"ನೆಂದು ಕರೆಯಲಾಗುತ್ತದೆ
- ಮನಿಚ್ ಹಡಗು ಕಾಲುವೆ
- ಷಾ ದೆನಿಜ್ ಅನಿಲ ನಿಕ್ಷೇಪ
- ತೆಂಗಿಜ್ ನಿಕ್ಷೇಪ
- ಟ್ರ್ಯಾನ್ಸ್-ಕ್ಯಾಸ್ಪಿಯನ್ ಅನಿಲ ಕೊಳವೆ ಮಾರ್ಗ
- ಟ್ರ್ಯಾನ್ಸ್-ಕ್ಯಾಸ್ಪಿಯನ್ ತೈಲ ಕೊಳವೆ ಮಾರ್ಗ
ಟಿಪ್ಪಣಿಗಳು
ಬದಲಾಯಿಸಿ- ↑ ೧.೦ ೧.೧ van der Leeden, Troise, and Todd, eds., The Water Encyclopedia. Second Edition. Chelsea, MI: Lewis Publishers, 1990, page 196.
- ↑ "Caspian Sea » General background". CaspianEnvironment.org. Retrieved 2007-05-25.
{{cite web}}
: Cite has empty unknown parameter:|coauthors=
(help) - ↑ "ESA: Observing the Earth - Earth from Space: The southern Caspian Sea". ESA.int. Retrieved 2007-05-25.
{{cite web}}
: Cite has empty unknown parameter:|coauthors=
(help) - ↑ ಲೇಕ್ ಪ್ರೊಫೈಲ್: ಕ್ಯಾಸ್ಪಿಯನ್ ಸೀ. LakeNet.
- ↑ ವ್ಯವಸ್ಥೆಯ ಚಲನಶಾಸ್ತ್ರದಲ್ಲಿ, ಮುಳುಗುವಿಕೆ ಎಂಬುದು ಒಂದು ಸ್ಥಾನ, ಇದರಲ್ಲಿ ಪದಾರ್ಥಗಳ ಚಲನೆಯು ತಮ್ಮ ಹರಿವನ್ನು ಕೊನೆಗೊಳಿಸುತ್ತವೆ, ವ್ಯವಸ್ಥೆಯಿಂದ ತೆಗೆದುಹಾಕಲಾಗುತ್ತದೆ.
- ↑ ನೀರು ಆವಿಯಾದ ನಂತರ ಮೆಡಿಟರೇನಿಯನ್ ತಳದಲ್ಲಿ ಉಳಿದ ತುಲನಾತ್ಮಕ ಘನವಸ್ತು ಕಣಗಳು.
- ↑ ೭.೦ ೭.೧ "ಜನರಲ್ ಬ್ಯಾಗ್ರೌಂಡ್ ಆಫ್ ದಿ ಕ್ಯಾಸ್ಪಿಯನ್ ಸೀ". ಕ್ಯಾಸ್ಪಿಯನ್ ಎನ್ವಿರಾನ್ಮೆಂಟ್ ಪ್ರೋಗ್ರಾಮ್. 29-01-2008ರಲ್ಲಿ ಮರುಸಂಪಾದಿಸಲಾಗಿದೆ.
- ↑ ೮.೦ ೮.೧ "Caspian Sea". Iran Gazette. Archived from the original on 2009-01-22. Retrieved 2010-05-17.
- ↑ ೯.೦ ೯.೧ ಅಮೀರ್ಅಹ್ಮದಿ, ಹೂಶಂಗ್. ದಿ ಕ್ಯಾಸ್ಪಿಯನ್ ರೀಜನ್ ಅಟ್ ಏ ಕ್ರಾಸ್ ರೋಡ್: ಚ್ಯಾಲೆಂಜಸ್ ಆಫ್ ಏ ನ್ಯೂ ಫ್ರಾಂಟಿಯರ್ ಆಫ್ ಎನರ್ಜಿ ಅಂಡ್ ಡೆವಲಪ್ಮೆಂಟ್ (ಹಾರ್ಡ್ಕವರ್). ಪುಟ 112. ಸೇಂಟ್ ಮಾರ್ಟಿನ್ಸ್ ಪ್ರೆಸ್. 28-01-2008ರಲ್ಲಿ ಮರುಸಂಪಾದಿಸಲಾಗಿದೆ.
- ↑ ಖೈನ್ V. E. ಗಡ್ಜಿಯೇವ್ A. N. ಕೆಂಗೆರ್ಲಿ T. N, "ಟೆಕ್ಟಾನಿಕ್ ಆರಿಜಿನ್ ಆಫ್ ದಿ ಅಪ್ಷೆರೋನ್ ತ್ರೆಸ್ಹೋಲ್ಡ್ ಇನ್ ದಿ ಕ್ಯಾಸ್ಪಿಯನ್ ಸೀ" ಡೋಕ್ಲಾಡಿ ಅರ್ಥ್ ಸೈನ್ಸಸ್ 414 .4 (ಜೂನ್ 2007:552-556).
- ↑ ೧೧.೦ ೧೧.೧ ಡುಮೊಂಟ್, ಹೆನ್ರಿ J. ಮತ್ತಿತರರು. ಅಕ್ವ್ಯಾಟಿಕ್ ಇನ್ವೇಶನ್ಸ್ ಇನ್ ದಿ ಬ್ಲ್ಯಾಕ್, ಕ್ಯಾಸ್ಪಿಯನ್, ಅಂಡ್ ಮೆಡಿಟರೇನಿಯನ್ ಸೀಸ್ (ನ್ಯಾಟೋ ಸೈನ್ಸ್ ಸೀರಿಸ್). ಕ್ಲುವೆರ್ ಅಕ್ಯಾಡೆಮಿಕ್ ಪಬ್ಲಿಷರ್ಸ್. 28-01-2008ರಲ್ಲಿ ಮರುಸಂಪಾದಿಸಲಾಗಿದೆ.
- ↑ ಕೊಸ್ಟಿಯನೋಯ್, ಆಂಡ್ರೆ ಹಾಗು ಅಲೆಕ್ಸೆಯ್ N. ಕೊಸರೆವ್. ದಿ ಕ್ಯಾಸ್ಪಿಯನ್ ಸೀ ಎನ್ವಿರೋನ್ಮೆಂಟ್ (ಹಾರ್ಡ್ಕವರ್). ಸ್ಪ್ರಿಂಗರ್. 28-01-2008ರಲ್ಲಿ ಮರುಸಂಪಾದಿಸಲಾಗಿದೆ.
- ↑ C.ಮೈಕಲ್ ಹೋಗನ್ ಓವರ್ಫಿಶಿಂಗ್ . ಎನ್ಸೈಕ್ಲೋಪೀಡಿಯ ಆಫ್ ಅರ್ಥ್. ಸಂಪಾದನೆಗಳು. ಸಿಡ್ನಿ ಡ್ರಾಗ್ಗನ್ ಹಾಗು ಕಟ್ಲಾರ್ ಕ್ಲೆವ್ಲಂಡ್. ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ದಿ ಎನ್ವಿರೋನ್ಮೆಂಟ್, ವಾಶಿಂಗ್ಟನ್ DC
- ↑ ಉಲ್ಲೇಖ ದೋಷ: Invalid
<ref>
tag; no text was provided for refs namedautogenerated1
- ↑ ಕ್ಯಾಸ್ಪಿಯನ್ ಎನ್ವಿರಾನ್ಮೆಂಟ್ ಪ್ರೋಗ್ರಾಮ್ http://www.caspianenvironment.org/newsite/Caspian-EnvironmentalIssues.htm
- ↑ "Welcome to the Caspian Sea Level Project Site". Caspage.citg.tudelft.nl. Archived from the original on 2011-07-24. Retrieved 2010-05-17.
- ↑ "ಆರ್ಕೈವ್ ನಕಲು". Archived from the original on 2007-07-10. Retrieved 2007-07-10.
- ↑ ಕ್ಯಾಸ್ಪಿಯನ್ ಸೀ. (2006). ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾದಲ್ಲಿ ದೊರೆತದ್ದು. ಆಗಸ್ಟ್ 13, 2006ರಲ್ಲಿ ಮರುಸಂಪಾದಿಸಲಾಗಿದೆ, ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ ಪ್ರಿಮಿಯಂ ಸರ್ವಿಸ್ ನಲ್ಲಿ ದೊರೆತದ್ದು:http://www.britannica.com/eb/article-9110540
- ↑ "Strabo. Geography. 11.3.1". Perseus.tufts.edu. Retrieved 2010-05-17.
- ↑ "Caspian Sea-The largest lake in the world". Buzzle.com. Archived from the original on 2009-12-12. Retrieved 2010-05-17.
- ↑ "Indian History". Indiafirstfoundation.org. Archived from the original on 2010-03-15. Retrieved 2010-05-17.
- ↑ "India-The mother of western civilisation". Organiser.org. Archived from the original on 2011-01-02. Retrieved 2010-05-17.
- ↑ "Article on Hinduism". Trsiyengar.com. Archived from the original on 2010-08-04. Retrieved 2010-05-17.
- ↑ ೨೪.೦ ೨೪.೧ ದಿ ಡೆವಲಪ್ಮೆಂಟ್ ಆಫ್ ದಿ ಆಯಿಲ್ ಅಂಡ್ ಗ್ಯಾಸ್ ಇಂಡಸ್ಟ್ರಿ ಇನ್ ಅಜೆರ್ಬೈಜಾನ್
- ↑ ಬ್ಯಾಕ್ ಟು ದಿ ಫ್ಯೂಚರ್: ಬ್ರಿಟನ್, ಬಾಕು ಆಯಿಲ್ ಅಂಡ್ ದಿ ಸೈಕಲ್ ಆಫ್ ಹಿಸ್ಟರಿ SOCAR
- ↑ ದಿ ಗ್ರೇಟ್ ಗ್ಯಾಸ್ ಗೇಂ ಕ್ರಿಶ್ಚಿಯನ್ ಸೈನ್ಸ್ ಮಾನಿಟರ್ (ಅಕ್ಟೋಬರ್ 25, 2001)
- ↑ ರಷ್ಯಾ ಟ್ರೈಸ್ ಟು ಸ್ಕುಟಲ್ ಪ್ರಪೋಸ್ಡ್ ಟ್ರ್ಯಾನ್ಸ್-ಕ್ಯಾಸ್ಪಿಯನ್ ಪೈಪ್ ಲೈನ್ Archived 2007-06-10 ವೇಬ್ಯಾಕ್ ಮೆಷಿನ್ ನಲ್ಲಿ. ಯುರೇಶಿಯಾನೆಟ್
- ↑ ರಷ್ಯಾ ಸೀಕಿಂಗ್ ಟು ಕೀಪ್ ಕಜಾಕ್ ಸ್ತಾನ್ ಹ್ಯಾಪಿ Archived 2008-05-12 ವೇಬ್ಯಾಕ್ ಮೆಷಿನ್ ನಲ್ಲಿ. ಯುರೇಶಿಯಾನೆಟ್
- ↑ ನಿಕೊಲೈ ಗಾವ್ರಿಲೋವಿಚ್ ಖರಿನ್, "ವೆಜಿಟೆಶನ್ ಡಿಗ್ರೆಡೆಶನ್ ಇನ್ ಸೆಂಟ್ರಲ್ ಏಶಿಯ ಅಂಡರ್ ದಿ ಇಂಪ್ಯಾಕ್ಟ್ ಆಫ್ ಹ್ಯೂಮನ್ ಆಕ್ಟಿವಿಟೀಸ್". ಪುಟಗಳು. 56-58. ಸ್ಪ್ರಿಂಗರ್, 2002. ISBN 1-4020-0397-8 ಗೂಗಲ್ ಬುಕ್ಸ್ ನಲ್ಲಿ
- ↑ ಕ್ಯಾಸ್ಪಿಯನ್ ಕೆನಾಲ್ ಕುಡ್ ಬೂಸ್ಟ್ ಕಜಖ್ ಟ್ರೇಡ್ ಬಿಸ್ನೇಸ್ಸ್ ವೀಕ್, ಜುಲೈ 9, 2007.
- ↑ "8.3 The Status of the Caspian Sea - Dividing Natural Resources Between Five Countries - Khoshbakht B.Yusifzade". Azer.com. Retrieved 2010-05-17.
- ↑ "ರಷ್ಯಾ ಗೇಟ್ಸ್ ವೇ ಇನ್ ಕ್ಯಾಸ್ಪಿಯನ್ ಮೀಟ್". Archived from the original on 2008-01-20. Retrieved 2010-09-24.
ಉಲ್ಲೇಖಗಳು
ಬದಲಾಯಿಸಿ- ಗುರ್ಬನೋವ್, ಟುರಬ್. Le pétrole de la Caspienne et la politique extérieure de l'Azerbaïdjan: tome 1- Questions économiques et juridiques , l’Harmattan, 2007, 304 ಪುಟಗಳು.
- ಗುರ್ಬನೋವ್, ಟುರಬ್. Le pétrole de la Caspienne et la politique extérieure de l'Azerbaïdjan: tome 2- Questions géopolitiques , l’Harmattan, 2007, 297 ಪುಟಗಳು.
- ಲೇಖಕ=ಶಿರ್ಯಯೇವ್, ಬೋರಿಸ್
|Title=Großmaechte auf dem Weg zur neuen Konfrontation?. Das „Great Game“ am Kaspischen Meer: eine Untersuchung der neuen Konfliktlage am Beispiel Kasachstan|ಪ್ರಕಾಶಕ=ವೆರ್ಲಾಗ್ Dr. ಕೊವಾಕ್|ಸ್ಥಳ=ಹ್ಯಾಂಬರ್ಗ್|ವರ್ಷ=2008
ಬಾಹ್ಯ ಕೊಂಡಿಗಳು
ಬದಲಾಯಿಸಿ- ಕಚ್ಚಾತೈಲದ ಜವಾಬ್ದಾರಿ
- ಕ್ಯಾಸ್ಪಿಯನ್ ಸಮುದ್ರ ಪ್ರದೇಶ
- ಕ್ಯಾಸ್ಪಿಯನ್ ಪರಿಸರ ಯೋಜನೆಗಳು
- ಟಾರ್ಗೆಟ್: ಕ್ಯಾಸ್ಪಿಯನ್ ಸೀ ಆಯಿಲ್ Archived 2009-08-28 ವೇಬ್ಯಾಕ್ ಮೆಷಿನ್ ನಲ್ಲಿ. ಜಾನ್ ರಾಬ್, 2004
- ಡೇಟಿಂಗ್ ಕ್ಯಾಸ್ಪಿಯನ್ ಸೀ ಲೆವೆಲ್ ಚೇಂಜಸ್ Archived 2011-07-24 ವೇಬ್ಯಾಕ್ ಮೆಷಿನ್ ನಲ್ಲಿ.