ಕೆಪ್ಲರ್-೬೨ಎಫ್
ಸೂಪರ್ ಅರ್ಥ್ ಎಕ್ಸೊಪ್ಲನೆಟ್ ಎಂದು ಕರೆಯಲಾದ ಕೆಪ್ಲರ್-೬೨ಎಫ್ (KOI-701.04) , ವಾಸಯೋಗ್ಯ ವಲಯದಲ್ಲಿ ಪರಿಭ್ರಮಿಸುತ್ತದೆ. ನಾಸಾದ ಕೆಪ್ಲೆರ್ ಉಪಗ್ರಹದಿಂದ ಕಂಡುಹಿಡಿದ ಐದು ಗ್ರಹಗಳ ಪೈಕಿ ಇದು ಒಂದು. ಈ ಸೌರಾತೀತ ಗ್ರಹ ಹೊರವಲಯದ ಕಕ್ಷೆಯಲ್ಲಿ ಪರಿಭ್ರಮಿಸುತ್ತಿದೆ. ಈ ಗ್ರಹವನ್ನು ಏಪ್ರಿಲ್ ೨೦೧೩ರಲ್ಲಿ ಕಂಡುಹಿಡಿದರು. ಇದು ಲೈರಾ[೧] ಎಂಬ ನಕ್ಷತ್ರಪುಂಜದಲ್ಲಿದೆ ಮತ್ತು ಭೂಮಿಯಿಂದ ೧೨೦೦ ಜ್ಯೋತಿರ್ವರ್ಷಗಳ (ಸುಮಾರು ೧.೧೩೫x೧೦೧೬ ಕಿ.ಮಿ) ದೂರದಲ್ಲಿದೆ. ಈ ಸೌರಾತೀತ ಗ್ರಹ, ಬಂಡೆ ಮತ್ತು ನೀರಿನಿಂದ ತುಂಬಿಕೊಂಡಿದೆ.
ಗುಣಲಕ್ಷಣಗಳು
ಬದಲಾಯಿಸಿದ್ರವ್ಯರಾಶಿ, ತ್ರಿಜ್ಯ ಮತ್ತು ತಾಪಮಾನ
ಬದಲಾಯಿಸಿಭೂಮಿಯ ರೀತಿಯಲ್ಲಿರುವ ಕೆಪ್ಲರ್-೬೨ಎಫ್ ಗ್ರಹದ ತ್ರಿಜ್ಯ ಮತ್ತು ದ್ರವ್ಯರಾಶಿ ಭೂಮಿಗಿಂತ ಹೆಚ್ಚು. ಆದರೆ, ನೆಪ್ಚೂನ್ ಮತ್ತು ಯುರೇನಸ್ ಗ್ರಹಗಳಿಗಿಂತ ಕಡಿಮೆ. ಕೆಪ್ಲರ್-೬೨ಎಫ್ ಗ್ರಹದ ತ್ರಿಜ್ಯ, ಭೂಮಿಯ ತ್ರಿಜ್ಯಕಿಂತ ೧.೪ರಷ್ಟಿದೆ [೨]. ಈ ಸೌರಾತೀತ ಗ್ರಹದ ತ್ರಿಜ್ಯ ನಮ್ಮ ಅಂದಾಜಿನ ತ್ರಿಜ್ಯಕಿಂತ ಕಡಿಮೆಯಿದೆ (≤೧.೬R⊕). ಇಲ್ಲದಿದ್ದಲ್ಲಿ ಈ ಗ್ರಹ, ಬಾಷ್ಪಶೀಲದಿಂದ ತುಂಬಿ ಮಿನಿ-ನೆಪ್ಚೂನ್ ಆಗುತ್ತಿತ್ತು. ಇದರ ತ್ರಿಜ್ಯದ ಕಾರಣದಿಂದಾಗಿ, ಈ ಗ್ರಹ ಬಂಡೆಗಳಿಂದ ಕೂಡಿರುವ ಸಾಧ್ಯತೆಯಿದೆ. ಈ ಗ್ರಹದ ದ್ರವ್ಯರಾಶಿಯ ಬಗ್ಗೆ ಮಾಹಿತಿಯಿಲ್ಲ, ಅಂದಾಜಿನ ಮೇಲೆ ಇದರ ತೂಕ <೩೫M⊕ ಇರಬಹುದು. ಭೂಮಿ ರೀತಿಯ ಸಾಂದ್ರತೆಯಿದ್ದಲ್ಲಿ, ಅದರ ದ್ರವ್ಯರಾಶಿ ೨.೫೭-೨.೮M⊕ ವರೆಗು ಇರಬಹುದು. ಈ ಗ್ರಹದ ಸಮತೋಲನ ತಾಪಮಾನ ೨೦೮ ಕೆ.(-೬೫ ಸೆ., -೮೫ ಫ್ಯಾ.) , ಇದು ಮಂಗಳ ಗ್ರಹದ ತಾಪಮಾನಕ್ಕೆ ಹತ್ತಿರವಾಗಿದೆ[೩].
ನಕ್ಷತ್ರ
ಬದಲಾಯಿಸಿಈ ಗ್ರಹ ಕೆಪ್ಲರ್-೬೨ ಎಂಬ ನಕ್ಷತ್ರದ ಸುತ್ತ ಪರಿಭ್ರಮಿಸುತ್ತದೆ. ಇದು ಕೆಪ್ಲರ್-೬೨ ನಕ್ಷತ್ರದಿಂದ ಸುಮಾರು ೧೦೮ ದಶಲಕ್ಷ ಕಿ.ಮೀ ದೂರದಲ್ಲಿದೆ. ಈ ನಕ್ಷತ್ರದ ಸುತ್ತ ಐದು ಗ್ರಹಗಳು ಸುತ್ತುತ್ತವೆ. ಅದರಲ್ಲಿ ಕೆಪ್ಲರ್-೬೨ಎಫ್ ದೀರ್ಘವಾದ ಪಥದಲ್ಲಿ ಪರಿಭ್ರಮಿಸುತ್ತದೆ. ಕೆಪ್ಲರ್-೬೨ ನಕ್ಷತ್ರ ನಮ್ಮ ಕಣ್ಣಿಗೆ ಪೀಚ್ ಬಣ್ಣದಲ್ಲಿ ಕಾಣುತ್ತದೆ. ಕೆಪ್ಲರ್-೬೨ಎಫ್ ನಿಂದ ನೋಡಿದಾಗ ಈ ನಕ್ಷತ್ರದ ಕೋನೀಯ ಗಾತ್ರ, ಭೂಮಿಯಿಂದ ನೋಡಿದಾಗ ಸೂರ್ಯನ ಗಾತ್ರದ ೯೦ಶೇಕಡದಷ್ಟಿದೆ. ಈ ನಕ್ಷತ್ರದ ದ್ರವ್ಯರಾಶಿ ೦.೬೯M☉ ಮತ್ತು ತ್ರಿಜ್ಯ ೦.೬೪R☉ . ಈ ಎರಡು ಅಂಕಿಅಂಶ ಸೂರ್ಯಗಿಂತ ಕಡಿಮೆಯಾಗಿದೆ. ಈ ನಕ್ಷತ್ರಕ್ಕೆ ೭ ಲಕ್ಷ ಕೋಟಿ ವರ್ಷಗಳು ಮತ್ತು ಇದರ ಮೇಲ್ಮೈ ತಾಪಮಾನ ೪೯೨೫ ಕೆ. ಸೂರ್ಯ ಕೇವಲ ೪.೬ ಲಕ್ಷ ಕೋಟಿ ವರ್ಷಗಳು ಮತ್ತು ಇದರ ಮೇಲ್ಮೈ ತಾಪಮಾನ ೫೭೭೮ಕೆ. ಈ ನಕ್ಷತ್ರ, ಸೂರ್ಯನ ೨೧% ಪ್ರಕಾಶಮಾನತೆಯನ್ನು (L☉) ಹೊಂದಿದೆ. ಭೂಮಿಯ ದೃಷ್ಟಿಯಿಂದ ಈ ನಕ್ಷತ್ರದ ಬೆಳಕು ಕೇವಲ ೧೩.೬೫. ಈ ಬೆಳಕು ನಮ್ಮ ಕಣ್ಣ ದೃಷ್ಟಿಗೆ ಬಹಳ ಕಡಿಮೆ.
ಕಕ್ಷೆಯ ಅಂಕಿಅಂಶಗಳು
ಬದಲಾಯಿಸಿಕೆಪ್ಲರ್-೬೨ಎಫ್ ಗ್ರಹದ ಕಕ್ಷೆಯ ಅವಧಿ ೨೬೭.೨೯ ದಿನಗಳು [೪] ಮತ್ತು ಕಕ್ಷೆಯ ತ್ರಿಜ್ಯ ಭೂಮಿಗಿಂತ ೦.೭೨ರಷ್ಟು ಹೆಚ್ಚಾಗಿದೆ (ಶುಕ್ರ ಗ್ರಹಕ್ಕೆ ಮತ್ತು ಸೂರ್ಯನಿಗಿರುವ ದೂರದಷ್ಟು, ಎಂದರೆ ಸುಮಾರು ೦.೭೧೮ ಎಯು). ಒಂದು ಪರಿಶೀಲನೆ ೨೦೧೬ರಲ್ಲಿ ತೀರ್ಮಾನಕ್ಕೆ ಬಂದಿತ್ತು. ಅದರ ಪ್ರಕಾರ ಕೆಪ್ಲರ್-೬೨ಇ ಮತ್ತು ಕೆಪ್ಲರ್-೬೨ಎಫ್ ೨:೧ ಕಕ್ಷೆಯ ಅನುರಣನ ಹೊಂದಿದೆ. ಆದುದರಿಂದ "ಎಫ್" ಮತ್ತು "ಇ" ಪಥದ ಗ್ರಹಗಳು ಎರಡು ಪರಿಭ್ರಮಣವನ್ನು ಪೂರ್ತಿ ಮಾಡಬೇಕಾಗುತ್ತದೆ.
ವಾಸಕ್ಕೆ ಅನುಕೂಲತೆ
ಬದಲಾಯಿಸಿಕೆಪ್ಲರ್-೬೨ಎಫ್, ಈ ಗ್ರಹದ ವಯಸ್ಸು (೭೪ ಲಕ್ಷ ಕೋಟಿ ವರ್ಷಗಳು), ವಿಕರಣ (೦.೪೧±೦.೦೫ ಭೂಮಿಯಷ್ಟು) ಮತ್ತು ತ್ರಿಜ್ಯ (೧.೪೧±೦.೦೭ ಭೂಮಿಯಷ್ಟು) . ಈ ಗ್ರಹದಲ್ಲಿ ಸಿಲಿಕೇಟ್ ಮತ್ತು ಕಬ್ಬಿಣದ ಅಂಶವಿರುವ ಬಂಡೆಗಳು ಮತ್ತು ನೀರಿನ ಅಂಶವಿರಬಹುದು. ಇದರ ಗುರುತ್ವಾಕರ್ಷಣ ಶಕ್ತಿ, ಭೂಮಿಯಷ್ಟೇ ಅಥವಾ ಅದಕ್ಕಿಂತ ಹೆಚ್ಚು ಇರಬಹುದು.[೫] ಒಂದು ಪರಿಶೀಲನೆಯ ಪ್ರಕಾರ, ಈ ಗಾತ್ರ ಇರುವ ಗ್ರಹಗಳು ಪೂರ್ತಿಯಾಗಿ ಸಮುದ್ರದಿಂದ ತುಂಬಿರುತ್ತದವೆ . ವಾಸಯೋಗ್ಯ ವಲಯದಲ್ಲಿರುವ ಈ ಗ್ರಹದ ಅಲೆಗಳ ಉಬ್ಬರವಿಳಿತವನ್ನು ಪರಿಶೀಲಿಸಿದಾಗ, ಈ ಗ್ರಹದಲ್ಲಿ ಒಂದು ಚಂದ್ರನಿರುವ ಸಂಭವವಿದೆ ಎಂದು ತಿಳಿಯಲಾಗಿದೆ. ವಾಸಯೋಗ್ಯ ವಲಯದಲ್ಲಿರುವ ಗ್ರಹಗಳು ಕೆಪ್ಲರ್-೬೩ ನಕ್ಷತ್ರದ ಕಿರಣಗಳಿಂದ ಬತ್ತಿಸುತ್ತವೆ, ಆದರೆ ಈ ವಲಯದಲ್ಲಿರುವ ಕೆಪ್ಲರ್-೬೨ಎಫ್ ನ ಸ್ಥಾನದಿಂದಾಗಿ, ಈ ಗ್ರಹ ನಕ್ಷತ್ರದ ವಿಕಿರಣಗಳಿಂದ ತಪ್ಪಿಸಿಕೊಳ್ಳುತ್ತದೆ.
ಕೆಪ್ಲರ್-೬೨ಎಫ್ ಗ್ರಹ ಬಂಡೆ ಮತ್ತು ನೀರಿನಿಂದ ತುಂಬಿದ್ದರು, ಈ ಗ್ರಹದಲ್ಲಿ ವಾಯುಮಂಡಲ ಇಲ್ಲವೆಂದು ಹವಣಿಸಲಾಗಿದೆ. ಆದುದರಿಂದ, ಪೂರಕವಾದ ಇಂಗಾಲದ ಡೈಆಕ್ಸೈಡ್ ಈ ಗ್ರಹದಲ್ಲಿ ಇಲ್ಲ. ಇದರಿಂದಾಗಿ ಈ ಗ್ರಹ ಹಿಮದಿಂದ ಕೂಡಿರಬಹುದು. ಕೆಪ್ಲರ್-೬೩ ಎಫ್ ಗ್ರಹದಲ್ಲಿ ಭೂಮಿ ರೀತಿಯ ಹವಾಮಾನ (ತಾಪಮಾನ ಸುಮಾರು ೨೮೪-೨೯೦ಕೆ) ಉಳಿಸಿಕೊಳ್ಳಲು, ಈ ಗ್ರಹದ ವಾಯುಮಂಡಲ ಕನಿಷ್ಠಪಕ್ಷ ೪.೯ಎಟಿಎಂ ಇಂಗಾಲದ ಡೈಆಕ್ಸೈಡ್ ಇರಬೇಕು.
ಈ ಗ್ರಹ, ಹೊರವಲಯದ ಕಕ್ಷೆಯಲ್ಲಿರುವುದರಿಂದ, ಒಳಭಾಗದಲ್ಲಿರುವ ಗ್ರಹಗಳ ವಿಕಾಸನೆಯ ಮತ್ತು ನಕ್ಷತ್ರದ ಪರಿಣಾಮ ಬೀರುವುದಿಲ್ಲ. ಈ ಗ್ರಹದ ಓರೆಯಲ್ಲಿ (ಅಕ್ಸಿಯಲ್ ಟ್ಲಿಟ್ ೧೪°-೩೦° ವರಗೆ ಇರಬಹುದು) ಯಾವುದೇ ಬದಲಾವಣೆಯಿಲ್ಲ. ಈ ಗ್ರಹದ ಮತ್ತು ಭೂಮಿಯ ಪರಿಭ್ರಮಣ ಕಾಲ ಸಮವಾಗಿದೆ. ಈ ಕಾರಣದಿಂದಾಗಿ, ಕೆಪ್ಲರ್-೬೨ಎಫ್ ವಾಸಿಸುವುದಕ್ಕೆ ಸಮರ್ಥವಾಗಿದೆ. ಏಕೆಂದರೆ ಈ ಗ್ರಹ, ನಕ್ಷತ್ರದ ಉಷ್ಣತೆಯನ್ನು ತನ್ನ ಕತ್ತಲೆಯ ಕೋಣೆಗೆ ಸಹ ವರ್ಗಾವಣೆ ಮಾಡಬಹುದು. ಕೆ-ಜಾತಿಗೆ ಸೇರಿದ ನಕ್ಷತ್ರಗಳು (ಉದಾಹರಣೆಗೆ ಕೆಪ್ಲರ್-೬೨ಎಫ್) ಸುಮಾರಾಗಿ ೨೦-೩೦ ಲಕ್ಷಕೋಟಿ ವರ್ಷಗಳ ವರೆಗೆ ಜೀವಿಸುತ್ತವೆ. ಸೂರ್ಯನ ಜೀವಮಾನಕಿಂತ ಎರಡರಿಂದ ಮೂರು ಪಟ್ಟು ಹೆಚ್ಚು.
೨೦೧೫ರಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ ಕೆಪ್ಲರ್-೬೨ಎಫ್ ಸೇರಿದಂತೆ ಸೌರಾತೀತ ಗ್ರಹಗಳಾದ ಕೆಪ್ಲರ್-೧೮೬ಎಫ್ ಮತ್ತು ಕೆಪ್ಲರ್-೪೪೨ಬಿ , ವಾಸಿಸಲು ಶಕ್ಯತೆಯುಳ್ಳ ಗ್ರಹಗಳು.
೨೦೧೬ ಮೇ ೧೩ ರಂದು, ಯುಸಿಎಲ್ಎ (ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯ, ಲಾಸ್ ಎಂಜಲೀಸ್ ) ಸಂಸ್ಥೆಯ ಸಂಶೋಧಕರು ಈ ಗ್ರಹದಲ್ಲಿ ವಾಸಿಸಲು ಸಂಭವನೀಯ ವಾತಾವರಣ ಇರುವುದಾಗಿ ಹೇಳಿದರು [೬]. ಈ ಗ್ರಹದಲ್ಲಿ ನಿಶ್ಚಿತವಾಗಿಯೂ ಜೀವ ಸಂಕುಲವಿದೆ ಮತ್ತು ಅಲ್ಲಿ ಜೀವ ಚಟುವಟಿಕೆಗಳು ಬಹುಕಾಲದಿಂದಲೂ ನಡೆಯುತ್ತಿರ ಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಕೆಪ್ಲರ್-೬೨ಎಫ್ ಆಧರಿಸಿ ಅನೇಕ ವಿಷಯಗಳನ್ನು ಪರೀಕ್ಷಿಸಿದಾಗ, ಈ ಗ್ರಹಕ್ಕೆ ವಾಯುಮಂಡಲ ಇರುವುದಾಗಿ ತಿಳಿಸಿದ್ದಾರೆ. ಈ ವಾಯುಮಂಡಲ ಭೂಮಿಯ ವಾಯುಮಂಡಲಕಿಂತ ೧೨ ಬಾರಿ ದಪ್ಪವಾಗಿದೆ. ಇದರಲ್ಲಿ ವಿವಿಧ ಸಾಂದ್ರತೆಯ ಇಂಗಾಲದ ಡೈಆಕ್ಸೈಡ್ ಇದೆ. ಅದರ ಸಾಂದ್ರತೆ, ಭೂಮಿಯ ವಾಯುಮಂಡಲದ ಸಾಂದ್ರತೆಗಿಂತ ೨೫೦೦ ಬಾರಿ ಹೆಚ್ಚು. ಅದರ ಕಕ್ಷೆಯ ಮಾರ್ಗದಲ್ಲಿ ಹಲವಾರು ವಿಧದ ಸಾಧ್ಯ ಸಂರಚನೆಗಳನ್ನು ಹೊಂದಿದೆ.
ಮುಂಬರುವ ಅಧ್ಯಯನಗಳು ಮತ್ತು ಎಸ್ಇಟಿಐ ಗುರಿ
ಬದಲಾಯಿಸಿ೨೦೧೩ ಮೇ ೯ ರಂದು ಯು.ಎಸ್ ಹೌಸಿನ ಇಬ್ಬರು ಉಪಸಮಿತಿಯ ಪ್ರತಿನಿಧಿಗಳು ಸೌರಾತೀತ ಗ್ರಹಗಳನ್ನು ಉದ್ದೇಶಿಸಿ ಮಾತನಾಡಿದರು. ಸೌರಾತೀತ ಗ್ರಹಗಳಾದ ಕೆಪ್ಲರ್-೬೨ಎಫ್, ಕೆಪ್ಲರ್-೬೨ಇ ಮತ್ತು ಕೆಪ್ಲರ್-೬೯ಸಿ ಆವಿಷ್ಕಾರಕ್ಕೆ ಪ್ರೇರಿತರಾಗಿ ಎಕ್ಸೋಪ್ಲನೆಟ್ ಡಿಸ್ಕಾವರಿಸ್: ಹ್ಯಾವ್ ವಿ ಪೌಂಡ್ ಅದರ್ ಅರ್ಥ? ( ಸೌರಾತೀತ ಗ್ರಹದ ಆವಿಷ್ಕಾರ: ನಾವು ಮತ್ತೊಂದು ಭೂಮಿಯನ್ನು ಕಂಡುಹಿಡಿದಿದ್ದೀವಾ? ) ಎಂದು ಹೇಳಿದರು. ಈ ವಿಷಯಕ್ಕೆ ಸಂಭಂದಿಸಿದ ಸಂಚಿಕೆಯನ್ನು, ಹಿಂದೆ ಪ್ರಕಟವಾದ ವಿಜ್ಞಾನದ ಜರ್ನಲ್ ನಲ್ಲಿ ಚರ್ಚಿಸಿದ್ದಾರೆ.
ಕೆಪ್ಲರ್-೬೨ಎಫ್ ಮತ್ತು ಇತರ ಕೆಪ್ಲರ್-೬೨ ಸೌರಾತೀತ ಗ್ರಹಗಳನ್ನು ಹುಡುಕುವುದು ಎಸ್ಇಟಿಐ ಸರ್ಚ್ ಪ್ರೋಗ್ರಾಮ್ (ಎಸ್ಇಟಿಐ ಹುಡುಕುವ ಕಾರ್ಯಕ್ರಮ) ವಿಶೇಷ ಭಾಗವಾಗಿದೆ. ಅವರು ಮಂಡಲದಲ್ಲಿ ಯಾವುದೇ ರೀತಿಯ ತಾಂತ್ರಿಕ ಜೀವನವನ್ನು ಪ್ರತಿನಿಧಿಸುವ ಸಂಕೇತಗಳನ್ನು ಪಡೆಯಲು ಪ್ರತಿನಿತ್ಯ ಸ್ಕ್ಯಾನ್ ಮಾಡುತ್ತಾರೆ. ಅನೇಕ ವರ್ಷಗಳ ಹಿಂದೆ ಕೆಪ್ಲರ್-೬೨ಎಫ್ ಗ್ರಹದಿಂದ ಸಂಕೇತಗಳು ಬಿಟ್ಟಿರ ಬಹುದು. ಆದರೆ, ನಮಗೆ ತಿಳಿದ ಹಾಗೆ ಈ ಗ್ರಹದ ಅಂತರತಾರ ೧೨೦೦ ಜ್ಯೋತಿರ್ವರ್ಷಗಳು, ೨೦೧೬ ಎಂದರೆ ಇಲ್ಲಿಯವರೆಗೆ ಅಂತಹ ಯಾವುದೇ ಸಂಕೇತಗಳು ಸಿಗಲಿಲ್ಲ.
ಕೆಪ್ಲರ್-೬೨ಎಫ್ ಗ್ರಹ ೧೨೦೦ ಜ್ಯೋತಿರ್ವರ್ಷಗಳ ದೂರದಲ್ಲಿದ್ದು ಮತ್ತು ಅದರ ನಕ್ಷತ್ರದಿಂದ ಬಹಳ ದೂರದಲ್ಲಿರುವುದರಿಂದ, ಈಗ ಪ್ರಸ್ತುತವಿರುವ ದೂರದರ್ಶಕಳಿಂದ ಯಾವುದೇ ಖಚಿತ ಮಾಹಿತಿ ಸಿಗುತ್ತಿಲ್ಲ. ಮುಂದಿನ ಪೀಳಿಗೆಗೆ ಯೋಜಿಸಿರುವ ದೂರದರ್ಶಕದ ಮೂಲಕ, ಈ ಗ್ರಹದ ದ್ರವ್ಯರಾಶಿಯನ್ನು ನಿರ್ಧರಿಸಬಹುದು ಮತ್ತು ಅ ಗ್ರಹಕ್ಕೆ ವಾಯುಮಂಡಲ ಇದೆಯೋ ಇಲ್ಲವೋ ಎಂಬುದು ತಿಳಿಯಬಹುದು. ಈಗ ಪ್ರಸ್ತುತವಿರುವ ಕೆಪ್ಲರ್ ದೂರದರ್ಶಕ ಕೇವಲ ಆಕಾಶದ ಒಂದು ಸಣ್ಣ ಪ್ರದೇಶವನ್ನು ಗಮನಿಸುವುದು. ಆದರೆ ಮುಂದಿನ ಪೀಳಿಗೆಗೆ ಬರುವ ಟಿಇಎಸ್ಎಸ್ ಮತ್ತು ಸಿಎಚ್ಇಓಪಿಎಸ್ ದೂರದರ್ಶಕಗಳು, ಆಕಾಶದಲ್ಲಿ ಸಮೀಪವಿರುವ ಎಲ್ಲಾ ನಕ್ಷತ್ರಗಳನ್ನು ಪರಿಶೀಲಿಸುತ್ತದೆ. ಹತ್ತಿರವಿರುವ ನಕ್ಷತ್ರಗಳನ್ನು ಮುಂಬರುವ ಜೇಮ್ಸ್ ವೇಬ್ ದೂರದರ್ಶಕದ ಮೂಲಕ ಪರಿಶೀಲಿಸಬಹುದು. ದ್ರವ್ಯರಾಶಿ, ವಾಯುಮಂಡಲದ ಅಸ್ಥಿತ್ವ ಮತ್ತು ಸಂಯೋಜನೆಯನ್ನು ವಿಶ್ಲೇಷಿಸಲು ದೊಡ್ಡ ಭೂ ಆಧಾರಿತ ದೂರದರ್ಶಕಗಳನ್ನು ಸ್ಥಾಪಿಸಲಿದ್ದಾರೆ. ಇದರ ಜೊತೆಗೆ ಚದರ ಕಿಲೋಮೀಟರ್ ಅರೇಯಿಂದ ಎರೆಸಿಬೊ ವೀಕ್ಷಣಾಲಯ ಮತ್ತು ಗ್ರೀನ್ ಬ್ಯಾಂಕ್ ಟೆಲಿಸ್ಕೋಪ್ ರೆಡಿಯೋ ಅವಲೋಕನೆಯನ್ನು ಸುಧಾರಿಸುತ್ತದೆ.
ಇವನ್ನೂ ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ http://www.space.com/24142-kepler-62f.html
- ↑ http://www.solarsystemquick.com/universe/kepler-62f.htm
- ↑ http://exoplanetarchive.ipac.caltech.edu/cgi-bin/DisplayOverview/nph-DisplayOverview?objname=Kepler-62%20f&type=CONFIRMED_PLANET
- ↑ https://www.nasa.gov/content/kepler-62f-small-habitable-zone-world
- ↑ https://www.youtube.com/watch?v=IMUK52YzNBU
- ↑ http://uccindia.org/ಕೆಪ್ಲರ್-62-ಎಫ್-ಎಂಬ-ಮತ್ತೊಂದು//