ಕೃನಾಲ್ ಪಾಂಡ್ಯ

ಭಾರತೀಯ ಕ್ರಿಕೆಟ್ ಆಟಗಾರ
Krunal Pandya and Hardik Pandya (cropped) 1.jpg

ಕೃನಾಲ್ ಹಿಮಾಂಶು ಪಾಂಡ್ಯ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಎಡಗೈ ಬ್ಯಾಟ್ಸ್ಮನ್ ಹಾಗು ಎಡಗೈ ಲೆಗ್ ಸ್ಪಿನ್ ಬೌಲರ್.ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಡುತ್ತಾರೆ.[೧]

ಆರಂಭಿಕ ಜೀವನಸಂಪಾದಿಸಿ

ಇವರು ೨೪ನೇ ಮಾರ್ಚ್ ೧೯೯೧ ರಂದು ಅಹ್ಮದಾಬಾದ್, ಗುಜರಾತ್ನಲ್ಲಿ ಜನಿಸಿದರು. ಆರ್ಥಿಕವಾಗಿ ದುರ್ಬಲವಾಗಿದ್ದ ಕೃನಾಲ‍್ ಪಾಂಡ್ಯ ಕುಟುಂಬವು ಗೋರ್ವಾದಲ್ಲಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿತ್ತು. ೨೦೧೬ರಲ್ಲಿ ಇವರು ಪ್ರಥಮ ದರ್ಜೆ ಕ್ರಿಕೆಟ್ ಆಡದೇ ಇದ್ದರು, ಮುಂಬೈ ಇಂಡಿಯನ್ಸ್ ತಂಡ ಇವರ ಪ್ರತಿಭೆಯನ್ನು ಗುರುತಿಸಿ ತಂಡಕ್ಕೆ ಸೇರಿಸಿಕೊಂಡರು. ಅದರ ನಂತರ ಇವರು ಬರೋಡ ತಂಡದ ಪರವಾಗಿ ೨೦೧೬-೧೭ರ ರಣಜಿ ಟ್ರೋಫೀಯಲ್ಲಿ ಆಡುವ ಮೂಲಕ ಕೃನಾಲ‍್ ಪ್ರಥಮ ದರ್ಜೆ ಕ್ರಿಕೆಟ‍್‌ನಲ್ಲಿ ಪಾದಾರ್ಪಣೆ ಮಾಡಿದರು. ಅದೇ ವರ್ಷ ಇವರು ವಿಜಯ್ ಹಜಾರೆ ಟ್ರೋಫಿಯಲ್ಲಿ ಬರೋಡ ತಂಡದ ಪರವಾಗಿ ಅತೀ ಹೆಚ್ಚು ವಿಕೇಟ್ ಹಾಗು ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು.[೨][೩]

ವೃತ್ತಿ ಜೀವನಸಂಪಾದಿಸಿ

ಐಪಿಎಲ್ ಕ್ರಿಕೆಟ್ಸಂಪಾದಿಸಿ

ಏಪ್ರಿಲ್ ೧೬, ೨೦೧೬ರಂದು ವಾಂಖೆಡೆ ಕ್ರೀಡಾಂಗಣ, ಮುಂಬೈಯಲ್ಲಿ ಗುಜರಾತ್ ಲೈಯನ್ನ್ ವಿರುದ್ಧ ನಡೆದ ೦೯ನೇ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದರು. ತಮ್ಮ ಪಾದಾರ್ಪಣೆ ಪಂದ್ಯದಿಂದ ಇಲ್ಲಿಯವರೆಗೂ ಇವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಆಡುತ್ತ ಬಂದಿದ್ದಾರೆ. ಇವರ ಸಹೋದರ ಹಾರ್ದಿಕ್ ಪಾಂಡ್ಯ ಸಹ ಇವರ ಜೊತೆಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಡುತ್ತಾರೆ.[೪]


ಅಂತರರಾಷ್ಟ್ರೀಯ ಕ್ರಿಕೆಟ್ಸಂಪಾದಿಸಿ

ನವಂಬರ್ ೦೪, ೨೦೧೮ರಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ವಿರುಧ್ಧ ನಡೆದ ಮೊದಲ ಟಿ-೨೦ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪದಾರ್ಪನೆ ಮಾಡಿದರು. ಇವರ ಪಾದಾರ್ಪಣೆ ಪಂದ್ಯದಲ್ಲಿ ಕೃನಾಲ್ ಪಾಂಡ್ಯರವರು ಒಂದು ವಿಕೇಟ ಸಹಿತ ಕೇವಲ ಒಂಬತ್ತು ಎಸೆತಗಳಲ್ಲಿ ಮೂರು ಬೌಂಡರಿ ಸಹಿತ ೨೧ ರನ್ ಕಲೆ ಹಾಕಿ ಅಜೇಯರಾಗಿ ಉಳಿದರು.[೫]

ಪಂದ್ಯಗಳುಸಂಪಾದಿಸಿ

 • ಟಿ-೨೦ ಕ್ರಿಕೆಟ್ : ೦೩ ಪಂದ್ಯಗಳು.[೬]
 • ಐಪಿಎಲ್ ಕ್ರಿಕೆಟ್ : ೩೯ ಪಂದ್ಯಗಳು

ವಿಕೇಟ್‍ಗಳುಸಂಪಾದಿಸಿ

 • ಟಿ-೨೦ ಪಂದ್ಯಗಳಲ್ಲಿ  : ೦೧
 • ಐಪಿಎಲ್ ಪಂದ್ಯಗಳಲ್ಲಿ  : ೨೮

ಅರ್ಧ ಶತಕಗಳುಸಂಪಾದಿಸಿ

 • ಐಪಿಎಲ್ ಪಂದ್ಯಗಳಲ್ಲಿ  : ೦೧


ಉಲ್ಲೇಖಗಳುಸಂಪಾದಿಸಿ

 1. https://www.news18.com/cricketnext/profile/krunal-pandya/63788.html
 2. https://www.cricbuzz.com/profiles/11311/krunal-pandya
 3. http://stats.espncricinfo.com/ci/engine/records/averages/batting_bowling_by_team.html?id=11523;team=1610;type=tournament
 4. https://www.cricbuzz.com/live-cricket-scorecard/16397/mumbai-indians-vs-gujarat-lions-9th-match-indian-premier-league-2016
 5. https://www.cricbuzz.com/live-cricket-scorecard/21253/india-vs-windies-1st-t20i-windies-tour-of-india-2018
 6. http://www.espncricinfo.com/india/content/player/471342.html