ಕಿಚ್ಚ ಹುಚ್ಚ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಕಿಚ್ಚ ಹುಚ್ಚ 2010 ರ ಕನ್ನಡ ಭಾಷೆಯ ಆಕ್ಷನ್ ಮತ್ತು ರೊಮ್ಯಾಂಟಿಕ್ ಕಥೆಯ ಚಲನಚಿತ್ರವಾಗಿದ್ದು, ಸುದೀಪ್, ರಮ್ಯಾ ಮತ್ತು ಶ್ರೀನಾಥ್ ನಟಿಸಿದ್ದಾರೆ. ಇದನ್ನು ಗುರುದತ್ ಮತ್ತು ಕೆ ಮಂಜು ನಿರ್ಮಿಸಿದ್ದಾರೆ. ಚಲನಚಿತ್ರವು 15 ಅಕ್ಟೋಬರ್ 2010 ರಂದು ಬಿಡುಗಡೆಯಾಯಿತು. [೧] ಈ ಚಲನಚಿತ್ರವು ನಂತರ 2012 [೨] ತೆಲುಗಿನಲ್ಲಿ ಕಿಚ್ಚ ಎಂಬ ಹೆಸರಿನಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ತಮಿಳಿನ ಯಶಸ್ವಿ ಚಿತ್ರ ಚಿಥಿರಂ ಪೆಸುತಡಿಯ ರೀಮೇಕ್ ಆಗಿದ್ದು, ಇದನ್ನು ತೆಲುಗಿನಲ್ಲಿ ರಾಜು ಭಾಯ್ ಮತ್ತು ಒಡಿಯಾದಲ್ಲಿ ಅಭಿಮನ್ಯು ಎಂದು ರೀಮೇಕ್ ಮಾಡಲಾಗಿದೆ. ಈ ಚಲನಚಿತ್ರವನ್ನು ನಂತರ 2012 ರಲ್ಲಿ ಏಕ್ ಔರ್ ಲಡಾಕು ಎಂದು ಹಿಂದಿಗೆ ಡಬ್ ಮಾಡಲಾಯಿತು.
ಕಿಚ್ಚ ಹುಚ್ಚ | |
---|---|
Directed by | ಗುರುದತ್ |
Written by | Mysskin |
Produced by | ಕೆ. ಮಂಜು |
Starring | ಸುದೀಪ್, ರಮ್ಯಾ |
Music by | ವಿ.ಹರಿಕೃಷ್ಣ |
Release date | 2010 ರ ಅಕ್ಟೋಬರ್ 15 |
Country | ಭಾರತ |
Language | ಕನ್ನಡ |
ಪಾತ್ರವರ್ಗ
ಬದಲಾಯಿಸಿ- ಕಿಚ್ಚನ ಪಾತ್ರದಲ್ಲಿ ಸುದೀಪ್
- ಐಶ್ವರ್ಯ ಪಾತ್ರದಲ್ಲಿ ರಮ್ಯಾ
- ರಂಗಾಯಣ ರಘು
- ಶ್ರೀನಾಥ್
- ನಾರಾಯಣ ಸ್ವಾಮಿ
- ಗಿರೀಶ್ ಶಿವಣ್ಣ
- ಬಿಯಾಂಕಾ ದೇಸಾಯಿ
ಧ್ವನಿಮುದ್ರಿಕೆ
ಬದಲಾಯಿಸಿಯೋಗರಾಜ್ ಭಟ್ ಸಾಹಿತ್ಯ ಬರೆದಿರುವ ಈ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ.
ಟ್ರ್ಯಾಕ್# | ಹಾಡು | ಗಾಯಕ(ರು) |
---|---|---|
1 | "ಬಂದು ಬಾಜಾ" | ಪ್ರಿಯಾ ಹಿಮೇಶ್ |
2 | "ಹೇ ಪ್ರೀತಿ" | ರಾಹುಲ್ ನಂಬಿಯಾರ್ |
3 | "ನುಡಿಸಾಲೆ" | ಸೋನು ನಿಗಮ್, ಅನುರಾಧ ಶ್ರೀರಾಮ್ |
4 | "ಕಮಲಿ ಕಮಲಿ" | ಕೈಲಾಶ್ ಖೇರ್, ಪ್ರಿಯದರ್ಶಿನಿ |
5 | "ಮೊದಲ ಬಾರಿ" | ಎಸ್ಪಿ ಬಾಲಸುಬ್ರಮಣ್ಯಂ |
ಬಾಹ್ಯ ಕೊಂಡಿಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "Kiccha Huccha". Oneindia.in. Archived from the original on 19 January 2012.
- ↑ "Kicha (2012) | Kicha Movie | Kicha Telugu Movie Cast & Crew, Release Date, Review, Photos, Videos". Archived from the original on 2014-08-11. Retrieved 2022-04-10.