ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ೨೦೧೧ರ ದಶಂಬರ ೧೫ರಂದು ಸ್ಥಾಪನೆಯಾಯಿತು. ಇದು ಅರೆಭಾಷೆ ಸಂಸ್ಕೃತಿ, ಸಾಹಿತ್ಯ ಹಾಗೂ ಆ ಭಾಗದ ನಾಡು-ನುಡಿಯ ಸಂರಕ್ಷಣೆ ಮತ್ತು ಅರೆಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ. ಅರೆಭಾಷೆ ಮಾತಾಡುವ ಜನರು ಕರ್ನಾಟಕ ರಾಜ್ಯದ ಕೊಡಗು ಮತ್ತು ದಕ್ಷಿಣ ಕನ್ನಡಜಿಲ್ಲೆಯ ಕೆಲವು ತಾಲೂಕುಗಳು ಹಾಗೂ ಕೇರಳ ರಾಜ್ಯದ ಕಾಸರಗೋಡಿನ ಕೆಲವು ಗ್ರಾಮಗಳಲ್ಲಿ ಅರೆಭಾಷಿಗರು ಇದ್ದಾರೆ. ಇವರ ಅರೆಭಾಷೆ ಸಂಸ್ಕೃತಿ, ಆಚಾರ ವಿಚಾರ, ಆಹಾರ ಪದ್ದತಿಗಳು, ಆರಾಧನೆಗಳು ವಿಭಿನ್ನತೆಯಿಂದ ಕೂಡಿದೆ. ಇಂತಹ ವೈವಿಧ್ಯಮಯ ವೈಶಿಷ್ಟ್ಯತೆಗಳನ್ನು ಉಳಿಸಿಕೊಳ್ಳುವ ಸಲುವಾಗಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಕಾರ್ಯನಿರ್ವಹಿಸುತ್ತಿದೆ.
ಸಂಕ್ಷಿಪ್ತ ಹೆಸರು | ಕ.ಅ.ಸಾ.ಅ |
---|---|
ಸ್ಥಾಪನೆ | ೨೦೧೧ |
ಪ್ರಧಾನ ಕಚೇರಿ | ಮಡಿಕೇರಿ, ಕೊಡಗು |
ಪ್ರದೇಶ served | ಕೊಡಗು, ಸುಳ್ಯ |
ಅಧಿಕೃತ ಭಾಷೆ | ಅರೆಭಾಷೆ |
ಅಧ್ಯಕ್ಷರು | ಸದಾನಂದ ಮಾವಜಿ |
ಪತ್ರಿಕೆಗಳು | ಹಿಂಗಾರ (ತ್ರೈಮಾಸಿಕ) |
ಪೋಷಕ ಸಂಸ್ಥೆಗಳು | ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ |
ಅಧಿಕೃತ ಜಾಲತಾಣ | arebhasheacademy |
ಅರೆಭಾಷೆ ಜನಾಂಗದವರು ಹೆಚ್ಚಾಗಿ ವಾಸಿಸುವ ದಕ್ಷಿಣ ಕನ್ನಡ ಜಿಲ್ಲೆಯವರಿಗೂ ಕೊಡಗಿನವರ ಸಂಸ್ಕೃತಿ ಆಚರಣೆಯಲ್ಲಿ ವಿಭಿನ್ನತೆ ಇದೆ. ದಕ್ಷಿಣ ಕನ್ನಡದಲ್ಲಿ ಭೂತಾರಾಧನೆ, ಸುಗ್ಗಿ ಹಬ್ಬ ಆಚರಿಸಿಕೊಂಡು ಬಂದಿದ್ದಾರೆ. ಕೊಡಗಿನಲ್ಲಿ ಹುತ್ತರಿ, ಕೈಲುಮುಹೂರ್ತ ಮತ್ತು ಆಟಿ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದಾರೆ. ಕೊಡಗಿನ ಅರೆಭಾಷೆ ಜನಾಂಗದವರ ಸಂಸ್ಕೃತಿ, ಸಂಗೀತ, ಕುಣಿತ, ವೇಷ ಭೂಷಣ ಭಿನ್ನವಾಗಿದೆ.
ಅರೆಭಾಷೆ ದಿನಾಚರಣೆ
ಬದಲಾಯಿಸಿ೨೦೨೦ರ ಸಾಲಿನಿಂದ ಡಿಸೆಂಬರ್ ೧೫ನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಅರೆಭಾಷೆ ದಿನಾಚರಣೆ ಅಂತ ನಿರ್ಧರಿಸಿ ಆಚರಣೆ ಮಾಡಲಾಗುತ್ತಿದೆ.
ಕಾರ್ಯ ಯೋಜನೆಗಳು
ಬದಲಾಯಿಸಿಕರ್ನಾಟಕ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿ ಪುಸ್ತಕ, ಪದಕೋಶ, ಭಾಷಾಂತರ ಮತ್ತು ದಾಖಲೆಗಳನ್ನು ಸಂಗ್ರಹಿಸುವ ಕೆಲಸಗಳನ್ನು ಕೈಗೆತ್ತಿಕೊಂಡಿದೆ. ಇವುಗಳೊಂದಿಗೆ ಯುವಕರ ಸಬಲೀಕರಣಕ್ಕಾಗಿ ಯುವ ಸಾಹಿತಿಗಳಿಗೆ ವಿಚಾರ ಸಂಕಿರ್ಣ, ಸಾಹಿತ್ಯ ಶಿಬಿರ, ಕವಿಗೋಷ್ಠಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಭಾಷೆ ಸಂಸ್ಕೃತಿ ನಶಿಸಿದಂತೆ ದಾಖಲೆ ರೂಪದಲ್ಲಿ ಸಂಗ್ರಹ ಮಾಡುವ ಕೆಲಸವನ್ನೂ ಅಕಾಡೆಮಿ ಮಾಡುತ್ತಿದೆ. ನಾಟಕ ಶಿಬಿರ, ಅರೆಬಾಸೆಯ ಗಣ್ಯವ್ಯಕ್ತಿಗಳ ವ್ಯಕ್ತಿ ಚಿತ್ರಣಕ್ಕೆ ಪ್ರೋತ್ಸಾಹ ನೀಡುತ್ತಿದೆ.
ಅಧೀನತೆ
ಬದಲಾಯಿಸಿ- ಕನ್ನಡ ಮತ್ತು ಸಂಸ್ಕತಿ ನಿರ್ದೇಶನಾಲಯ
- ಕರ್ನಾಟಕ ಸರ್ಕಾರ
ಕಾರ್ಯವ್ಯಾಪ್ತಿ
ಬದಲಾಯಿಸಿಅರೆಭಾಷೆ ಜನಾಂಗದ ಕೊಡಗು ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆಯಲ್ಲು ವಿಸ್ಥರಿಸಿದೆ. ಮಂಗಳೂರು, ವಿಟ್ಲ, ಪುತ್ತೂರು, ಸುಳ್ಯ, ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ, ಕೇರಳದ ಕಾಸರಗೋಡು ಜಿಲ್ಲೆಯ ಬಂದಡ್ಕ ಹಾಗೂ ದೇಲಂಪಾಡಿ ಪ್ರದೇಶಗಳಿಗೂ ಹರಡಿದೆ.
ಪ್ರಕಟಣೆಗಳು
ಬದಲಾಯಿಸಿ- ಅಕಾಡೆಮಿ ತ್ರೈಮಾಸಿಕ ಸಂಚಿಕೆ "ಹಿಂಗಾರ".
- ಇತರ ಪುಸ್ತಕಗಳು.
ಕಾರ್ಯಕ್ರಮಗಳು
ಬದಲಾಯಿಸಿಉಲ್ಲೇಖ
ಬದಲಾಯಿಸಿ- ↑ "ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಗೌರವ ಪ್ರಶಸ್ತಿ ಪ್ರದಾನ – ಮೈಸೂರು ಟುಡೆ". Retrieved 31 August 2020.[ಶಾಶ್ವತವಾಗಿ ಮಡಿದ ಕೊಂಡಿ]
- ↑ "ಅರೆಭಾಷೆ ಅಕಾಡೆಮಿಯಿಂದ ಪ್ರಶಸ್ತಿಗೆ ಅರ್ಜಿ". Vijaya Karnataka. Retrieved 31 August 2020.
- ↑ "ಅರೆಭಾಷೆ ಸಂಸ್ಕೃತಿ– ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ". Prajavani (in ಇಂಗ್ಲಿಷ್). 28 July 2017. Retrieved 31 August 2020.