ಐಕಾರ್ನಿಯ ನೀರಿನಲ್ಲಿ ಅಥವಾ ಹೆಚ್ಚಿನ ತೇವದಲ್ಲಿ ಬೆಳೆಯುವ, ಮೂಲಿಕೆಯಂಥ ಒಂದು ಏಕದಳ ಸಸ್ಯಜಾತಿ.

ಗಂಟೆಹೂವಿನ ಜೊಂಡು
ಸಾಮಾನ್ಯ ಅಂತರಗಂಗೆ ಸಸ್ಯ (ಪಾಂಟೆಡೇರಿಯಾ ಕ್ರ್ಯಾಸಿಪೆಸ್)
Scientific classification e
ಸಾಮ್ರಾಜ್ಯ: ಸಸ್ಯ
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಏಕದಳ ಸಸ್ಯ
ಏಕಮೂಲ ವರ್ಗ: ಕಾಮೆಲಿನಿಡ್ಸ್
ಗಣ: ಕಾಮಲಿನಾಲೀಸ್
ಕುಟುಂಬ: ಪಾಂಟಿಡೇರಿಯೇಸಿ
ಕುಲ: ಐಕಾರ್ನಿಯಾ
Kunth
ಪ್ರಭೇದಗಳು

ನಾಲ್ಕು ಪ್ರಭೇದಗಳು (ಪೆಲೆಗ್ರಿನಿ ಮತ್ತು ಇತರರಿಂದ, 2018):[]
ಐಕಾರ್ನಿಯಾ ಅಜ಼ೂರಿಯಾ - ಭದ್ರವಾಗಿ ನಿಂತ ಅಂತರಗಂಗೆ ಸಸ್ಯ
ಐಕಾರ್ನಿಯಾ ಡೈವರ್ಸಿಫ಼ೋಲಿಯಾ - ವ್ಯತ್ಯಾಸವಾಗುವ ಎಲೆಯ ಅಂತರಗಂಗೆ ಸಸ್ಯ
ಐಕಾರ್ನಿಯಾ ಹೆಟೆರೊಸ್ಪರ್ಮಾ
ಐಕಾರ್ನಿಯಾ ನೇಟಾನ್ಸ್

ಸಸ್ಯಶಾಸ್ತ್ರೀಯ ವರ್ಗೀಕರಣ

ಬದಲಾಯಿಸಿ

ಪಾಂಟಿಡೇರಿಯೇಸಿ ಕುಟುಂಬಕ್ಕೆ ಸೇರಿದೆ. ಈ ಜಾತಿಯಲ್ಲಿ 5 ಪ್ರಭೇದಗಳಿವೆ. ಅವುಗಳಲ್ಲಿ ಐ. ಕ್ರ್ಯಾಸಿಪೆಸ್ ಎಂಬುದು ಮುಖ್ಯವಾದದ್ದು.

ಸಸ್ಯಲಕ್ಷಣಗಳು

ಬದಲಾಯಿಸಿ

ಐಕಾರ್ನಿಯ ಸಸ್ಯದ ಕಾಂಡ ಸಂಯುಕ್ತ ರೀತಿಯದು. ಪಕ್ಕದ ಕಾಂಡ ಮುಖ್ಯ ಕಾಂಡಕ್ಕೆ ಅಂಟಿಕೊಂಡಿರುತ್ತದೆ. ಗಿಣ್ಣಿನ ಬಳಿ ಬೇರು. ಎಲೆಗಳು ಚಕ್ರ ಅಥವಾ ಹೃದಯದ ಆಕಾರವಾಗಿರುತ್ತವೆ.

ಐ. ಕ್ರ್ಯಾಸಿಪೆಸ್

ಬದಲಾಯಿಸಿ

ಐ. ಕ್ರ್ಯಾಸಿಪೆಸಿನಲ್ಲಿ ಎಲೆಯ ತೊಟ್ಟು ಚೀಲದಂತೆ ಊದಿಕೊಂಡಿರುತ್ತದೆ. ಹೂಗೊಂಚಲು ತೆನೆಯಾಗಿದ್ದು ಉಪಪತ್ರ ಅಥವಾ ಯುಗದಿಂದ ಆವೃತವಾಗಿರುತ್ತದೆ. ಹೂಗಳು ದ್ವಿಲಿಂಗಿಗಳಾಗಿಯೂ ಪಾರ್ಶ್ವಸೌಷ್ಠದವುಳ್ಳವಾಗಿಯೂ ಇವೆ. ಪುಷ್ಪಾಂಗ ಸಂಖ್ಯೆ ಮೂರರ ಅಪವರ್ತ್ಯದಲ್ಲಿದೆ. ಆಲಿಕೆಯಾಕಾರದಲ್ಲಿರುವ ಪುಷ್ಪಾವರಣ ನೀಲನೇರಳೆ ಅಥವಾ ಬಿಳಿ ಬಣ್ಣದ್ದು. ಅದರಲ್ಲಿ 6 ಪುಷ್ಪಪತ್ರಗಳಿರುತ್ತವೆ. ಕೇಸರಗಳು 6. ಕೇಸರದಂಡಗಳಲ್ಲಿ 3 ಉದ್ದವಾಗಿಯೂ 3 ಚಿಕ್ಕವಾಗಿಯೂ ಇವೆ. ಅಂಡಕೋಶದಲ್ಲಿ 3 ಭಾಗಗಳಿವೆ. ಅಂಡಾಶಯ ಉಚ್ಚಸ್ಥಿತಿಯಲ್ಲಿದೆ. ಅಂಡಕಗಳು ಪ್ರತಿ ಕುಹರದಲ್ಲೂ ಅಧಿಕ ಸಂಖ್ಯೆಯಲ್ಲಿವೆ.

ಹರಡುವಿಕೆ

ಬದಲಾಯಿಸಿ

ಐ. ಕ್ರ್ಯಾಸಿಪೆಸ್ ಎಂಬ ಪ್ರಭೇದ ಅಮೆರಿಕ, ಆಸ್ಟ್ರೇಲಿಯಾ, ಜಾವ, ಭಾರತ, ಪಾಕಿಸ್ತಾನ ಮುಂತಾದ ದೇಶಗಳಲ್ಲಿ ಹೆಚ್ಚಾಗಿದ್ದು ನೀರಿನಲ್ಲಿ ಬೃಹತ್ ಕಳೆಯಾಗಿ ವ್ಯಾಪಿಸಿ ತೊಂದರೆಯನ್ನುಂಟುಮಾಡುತ್ತಿದೆ.[][][] ಕೆಲವು ಕಡೆಗಳಲ್ಲಿ ಹಡಗಿನ ಸಂಚಾರಕ್ಕೂ ಅಡ್ಡಿಯನ್ನುಂಟುಮಾಡಿದೆ. ಕೆರೆ, ಕಾಲುವೆ, ಕುಂಟೆಗಳಲ್ಲಿ ಒತ್ತಾಗಿ ಬೆಳೆದು ಸೊಳ್ಳೆಗಳ ಉದ್ಭವಸ್ಥಾನವಾಗಿದೆ. ಈ ಸಸ್ಯವನ್ನು ನಿರ್ಮೂಲ ಮಾಡುವುದು ಒಳ್ಳೆಯದಾದರೂ ಈ ಜಾತಿಯ ಕೆಲವು ಪ್ರಭೇದಗಳನ್ನಾದರೂ ಅವುಗಳ ಚೆಲುವಾದ ಹೂಗಳಿಗಾಗಿ ಉಳಿಸಿಕೊಳ್ಳಬೇಕಾಗುತ್ತದೆ.

ಛಾಯಾಂಕಣ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Pellegrini, M. O. O.; Horn, C. N. & Alemida, R. F. (2018). "Total evidence phylogeny of Pontederiaceae (Commelinales) sheds light on the necessity of its recircumscription and synopsis of Pontederia L." PhytoKeys (108): 25–83. doi:10.3897/phytokeys.108.27652. PMC 6160854. PMID 30275733.
  2. Pontederia crassipes. Kew Royal Botanic Gardens Plants of the World Online. Accessed April 19, 2022.
  3. Eichhornia crassipes. Kew Royal Botanic Gardens Plants of the World Online. Accessed April 19, 2022.
  4. Kochuripana, Water hyacinth, Eichhornia crassipes . June 15, 2016. Flora of Bangladesh. Accessed April 19, 2022.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: