ತೆನೆ
ತೆನೆ ಗೋಧಿ ಅಥವಾ ಮೆಕ್ಕೆಜೋಳದಂತಹ ಏಕದಳ ಧಾನ್ಯ ಸಸ್ಯದ ಕಾಂಡದ ಕಾಳುಬಿಡುವ ತುದಿ.[೧] ಇದು ಕೆಲವು ಎಲೆಗಳಲ್ಲಿ ಎದ್ದುಕಾಣುವ ಹಾಲೆಗಳನ್ನೂ ಸೂಚಿಸಬಹುದು.[೨]
ತೆನೆಯು ಕೇಂದ್ರ ಕಾಂಡ ಮತ್ತು ಅದರ ಮೇಲೆ ಒತ್ತೊತ್ತಾಗಿ ಅಡಕುಗೊಂಡು ಬೆಳೆಯುವ ಹೂವುಗಳ ಸಾಲುಗಳನ್ನು ಹೊಂದಿರುವ ಒಂದು ಕದಿರುಗೊಂಚಲು. ಇವು ತಿನ್ನಲರ್ಹ ಬೀಜಗಳನ್ನು ಹೊಂದಿರುವ ಹಣ್ಣುಗಳಾಗಿ ಬೆಳೆಯುತ್ತವೆ. ಮೆಕ್ಕೆಜೋಳದಲ್ಲಿ, ತೆನೆಯು ತೊಗಟೆ ಎಂದು ಕರೆಯಲಾಗುವ ಎಲೆಗಳಿಂದ ರಕ್ಷಿತವಾಗಿರುತ್ತದೆ.[೩]
(ಗೋಧಿ ಸೇರಿದಂತೆ) ಕೆಲವು ಪ್ರಜಾತಿಗಳಲ್ಲಿ, ಅಪಕ್ವ ತೆನೆಗಳು ಸಸ್ಯದ ಕೆಳಭಾಗದಲ್ಲಿರುವ ಎಲೆಗಳ ಜೊತೆಗೆ ದ್ಯುತಿಸಂಶ್ಲೇಷಣೆಗೆ ಗಣನೀಯವಾಗಿ ಕೊಡುಗೆ ನೀಡುತ್ತವೆ.
ಆಂಗ್ವೀನ ಟ್ರಿಟಿಕಿ ಎಂದು ಕರೆಯಲ್ಪಡುವ ಒಂದು ಪರಾವಲಂಬಿ ಜೀವಿಯು ಬೆಳವಣಿಗೆಯ ಅವಧಿಯಲ್ಲಿ ಅಂಗಾಂಶಗಳು ಹಾಗೂ ಕಾಂಡಗಳನ್ನು ನಾಶಮಾಡಿ ನಿರ್ದಿಷ್ಟವಾಗಿ ಗೋಧಿ ಮತ್ತು ರೈನ ತೆನೆಗಳನ್ನು ಬಾಧಿಸುತ್ತದೆ. ಉತ್ತರ ಆಫ಼್ರಿಕಾ ಮತ್ತು ಪಶ್ಚಿಮ ಏಷ್ಯಾ ಬಿಟ್ಟು, ಸರದಿ ಕೃಷಿ ಪದ್ಧತಿ ಬಳಸಿ ಈ ಜೀವಿಯನ್ನು ಎಲ್ಲ ದೇಶಗಳಲ್ಲಿ ನಿರ್ಮೂಲಮಾಡಲಾಗಿದೆ.[೪]
ಉಲ್ಲೇಖಗಳು
ಬದಲಾಯಿಸಿ- ↑ Jackson, Benjamin Daydon (1928). A Glossary of Botanic Terms with their Derivation and Accent (fourth ed.). London: Gerald Duckworth & Co. Ltd. p. 121.
- ↑ Swartz, Delbert (1971). Collegiate Dictionary of Botany. New York: The Ronald Press Company. p. 162.
- ↑ Lerner, Rosie. "Corn - Ears". Senior Study Vegetables. Purdue University. Retrieved 2012-05-24.
- ↑ "Ear Cockle Disease of Wheat". Agrihunt. Retrieved 24 May 2012.